Tag: ಮಿಕಾ ಸಿಂಗ್

  • ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

    ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

    ಬಾಲಿವುಡ್ (Bollywood)  ನಟಿ ರಾಖಿ ಸಾವಂತ್ (Rakhi Sawant) ತಮ್ಮದಲ್ಲದ ತಪ್ಪಿಗಾಗಿ ಮತ್ತೆ ಸುದ್ದಿಯಾಗಿದ್ದಾರೆ. ಲಿಪ್ ಕಿಸ್ (Lip Kiss) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ಸುದ್ದಿಯಾಗಿದ್ದು, ಈ ಪ್ರಕರಣ ಬರೋಬ್ಬರಿ 17 ವರ್ಷಗಳ ಹಿಂದೆ ನಡೆದದ್ದು ಎಂದು ಹೇಳಲಾಗುತ್ತಿದೆ.

    ಬಾಲಿವುಡ್ ಗಾಯಕ ಮಿಕಾ ಸಿಂಗ್  (Mika Singh) ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಕಿಸ್ ಮಾಡಿದ್ದರು. 2006ರಲ್ಲಿ ನಡೆದ ಘಟನೆಯ ಬಗ್ಗೆ ರಾಖಿ ಕೋರ್ಟ್ ಮೊರೆ ಹೋಗಿದ್ದರು. ಸತತ 17 ವರ್ಷಗಳಿಂದ ಈ ಕೇಸ್ ನಡೆಯುತ್ತಿದೆ. ಹಾಗಾಗಿ ಇದೀಗ ಮಿಕಾ ಸಿಂಗ್ ಆ ಕೇಸ್ ಅನ್ನು ಕ್ಲೋಸ್ ಮಾಡಬೇಕು ಎಂದು ಬಾಂಬೆ ಹೈಕೋರ್ಟಿಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

    ಪ್ರಕರಣದ ನಂತರ ನಾವಿಬ್ಬರೂ ಮನಸ್ತಾಪವನ್ನು ಬಗೆಹರಿಸಿಕೊಂಡಿದ್ದೇವೆ. ರಾಖಿ ಸಾವಂತ್ ಕೂಡ ತಮ್ಮದೇ ಆದ ಉದ್ಯೋಗದಲ್ಲಿ ಬ್ಯುಸಿಯಾಗಿದ್ದಾರೆ. ಎಫ್.ಐ.ಆರ್ ಕ್ಲೋಸ್ ಮಾಡಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ಹಾಗಾಗಿ ಈ ಪ್ರಕರಣವನ್ನು ಅಂತ್ಯಗೊಳಿಸಬೇಕು ಎಂದು ಮಿಕಾ ಮನವಿ ಮಾಡಿದ್ದಾರೆ.

  • ಗಾಯಕ ಮಿಕಾಸಿಂಗ್‌ಗೆ ಮದುವೆ ಫಿಕ್ಸ್: ಸ್ವಯಂವರದಲ್ಲಿ ಆಯ್ಕೆಯಾದ ವಧು ಇವರೇ

    ಗಾಯಕ ಮಿಕಾಸಿಂಗ್‌ಗೆ ಮದುವೆ ಫಿಕ್ಸ್: ಸ್ವಯಂವರದಲ್ಲಿ ಆಯ್ಕೆಯಾದ ವಧು ಇವರೇ

    ಬಾಲಿವುಡ್‌ನ ಗಾಯಕ ಮೀಕಾ ಸಿಂಗ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಖಾಸಗಿ ರಿಯಾಲಿಟಿ ಶೋ ಮೂಲಕ ಸ್ವಯಂವರದಲ್ಲಿ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಸ್ವಯಂವರ’ ಕಾರ್ಯಕ್ರಮದಲ್ಲಿ ಗಾಯಕ ಮಿಕಾಸಿಂಗ್ ಭಾಗಿಯಾಗಿದ್ದರು. ಈ ರಿಯಾಲಿಟಿ ಶೋ ಮೂಲಕ ಆಕಾಂಕ್ಷಾ ಪೂರಿ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಶೋನ ಚಿತ್ರೀಕರಣಗೊಂಡಿದ್ದು, ಸೋಮವಾರ ಪ್ರಸಾರವಾಗಲಿದೆ. ಇದನ್ನೂ ಓದಿ:ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ಇನ್ನು ಆಕಾಂಕ್ಷಾ ಮತ್ತು ಮಿಕಾ ಸಿಂಗ್ ಕಳೆದ 12 ವರ್ಷಗಳಿಂದ ಸ್ನೇಹಿತರು, ಈ ಶೋ ಮೂಲಕ ಹೊಸ ಬಾಳಿಗೆ ನಿಜವಾಗಲೂ ಮುನ್ನುಡಿ ಬರೆಯುತ್ತಾರಾ ಅಥವಾ ಪ್ರಚಾರಕ್ಕಾಗಿ ಸೀಮಿತವಿಟ್ಟು, ತಮ್ಮ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಾರೆ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

    ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

    ಹಿಂದಿ ಫೇಮಸ್ ಸಿಂಗರ್ ಮಿಕಾ ಸಿಂಗ್ ಟಾಪ್ ಸೆಲೆಬ್ರಿಟಿಗಳಿಂದ ಸಾಮಾನ್ಯರ ಮದುವೆ ಇವೆಂಟ್‌ಗಳಿಗೆ ಇವರು ಇದ್ದೆ ಇರುತ್ತಾರೆ. ಆದರೆ ಇವರಿಗೆ ಇನ್ನು ಕಂಕಣಭಾಗ್ಯ ಕೂಡಿಬಂದಿಲ್ಲ. ಸಿಂಗ್ ಅವರಿಗೆ ಇಲ್ಲಿವರೆಗೂ ಮದುವೆಗಾಗಿ 150 ಹುಡುಗಿಯರ ಪ್ರಪೋಸಲ್ ಬಂದಿದ್ದರೂ, ಅವುಗಳಲ್ಲಿ ಯಾವುದನ್ನೂ ಒಪ್ಪಿಕೊಳ್ಳದೇ ರಿಜೆಕ್ಟ್ ಮಾಡಿದ್ದಾರೆ. ಈಗ ಸ್ವಯಂವರ ಶೋ ಮೂಲಕ ವಧು ಹುಡುಕಲು ಸಿದ್ಧವಾಗಿದ್ದಾರೆ.

    ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಸಂಭ್ರಮದಲ್ಲಿ ಹಾಡುವ ನಿಮಗೆ ಮದುವೆ ಆಗಬೇಕು ಎಂಬ ಆಸೆಯಿಲ್ವ ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳ ಮಾತುಗಳಿಗೆ ಸ್ಪಂದಿಸಿದ ಸಿಂಗ್, ನನಗೂ ಹುಡುಗಿಯನ್ನು ಆಯ್ಕೆ ಮಾಡಬೇಕು ಎಂದು ಹಲವರಿಗೆ ಆಸೆ ಇದೆ. ಇದಕ್ಕಾಗಿ ನಾನು ಹಲವು ವರ್ಷ ಹುಡುಕಿದ್ದೇನೆ. ಈಗಲೂ ನನಗೆ ಆಫರ್ ಸಿಗುತ್ತಿರುವುದಕ್ಕೆ ಖುಷಿ ಇದೆ. ನಾನು 20 ವರ್ಷದಲ್ಲಿ ಸುಮಾರು 150 ಮದುವೆ ಪ್ರಪೋಷಲ್ ರಿಜೆಕ್ಟ್ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ನೆಗೆಟಿವ್ ಗಾಸಿಪ್ ಹಬ್ಬಿತ್ತು
    ಆಗ ನನಗೆ ನನ್ನ ಕೆಲಸ ತುಂಬಾನೇ ಮುಖ್ಯವಾಗಿತ್ತು. ನನಗೆ ಪಾರ್ಟಿ ಮಾಡುವುದಕ್ಕೆ ಹುಡುಗಿಯ ಜೊತೆ ಸುತ್ತಾಡುವುದಕ್ಕೆ ಇಷ್ಟ. ಈ ಕಾರಣಕ್ಕೆ ನಾನು ಮದುವೆ ಆಗುತ್ತಿಲ್ಲ ಎಂಬ ಗಾಸಿಪ್ ಎಲ್ಲ ಕಡೆ ಹಬ್ಬಿತ್ತು. ಆದರೆ ಸತ್ಯ ಬೇರೆ ಇದೆ. ಮದುವೆ ಅಗುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಮನೆ ಹಿರಿಯರ ಬಗ್ಗೆ ಒಂದು ಬಗೆಯ ಗೌರವ ಹಾಗೂ ಭಯವಿದೆ. ಆದರೆ ಈಗ ನಾನು ಸ್ವಯಂವರದ ಹಿಂದಿ ಶೋ ಹೋಗಲು ನಮ್ಮ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

    ನಾನು ಮದುವೆ ಆಗಲು ನಿರ್ಧಾರ ಮಾಡಿದಕ್ಕೆ ನನ್ನ ಕುಟುಂಬ ಖುಷಿ ಪಡುತ್ತಿದೆ. ಜನರನ್ನು ಭೇಟಿ ಮಾಡುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ. ನಾನು ಒಳ್ಳೆಯ ಮನಸ್ಸಿರುವ ಕೆಟ್ಟ ಹುಡುಗ. ಹೀಗಾಗಿ ಹೆಚ್ಚಿಗೆ ಫ್ಯಾನ್ಸ್ ಇದ್ದಾರೆ. ಕಲಾವಿದರು ತಮ್ಮ ಕಾರ್ಯಕ್ರಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ನಾನು ಯಾವುದನ್ನು ಪೋಸ್ಟ್ ಮಾಡಿಲ್ಲ. ಆದರೂ ಜನರು ನನ್ನ ಮೇಲೆ ಅಭಿಮಾನ ಇಟ್ಟಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

    ಲವ್ ಮಾಡಿದ್ದೆ
    2001ರಲ್ಲಿ ನನಗೆ ಗರ್ಲ್ ಫ್ರೆಂಡ್ ಇದ್ದಳು. ಅವಳು ದೆಹಲಿ ಹುಡುಗಿಯಾಗಿದ್ದಳು. ನಾನು ಬಾಲಿವುಡ್ನಲ್ಲಿ ಇರುವುದಕ್ಕೆ ಆಕೆಯ ಪೋಷಕರು ನನ್ನನ್ನು ಇಷ್ಟಪಡಲಿಲ್ಲ. ಅದಕ್ಕೆ ರಿಜೆಕ್ಟ್ ಆಯ್ತು. ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಗರ್ಲ್ಫ್ರೆಂಡ್ ಬಾಲಿವುಡ್ ಹಾಗೆ ಹೀಗೆ ಎಂದು ಬಿಟ್ಟಳು. ನನ್ನ 2 ಮಾಜಿ ಗರ್ಲ್ಫ್ರೆಂಡ್‌ಗೆ ಮದುವೆ ಆಗಿದೆ. ನನ್ನ ಕೆಲಸ ಮತ್ತು ನನ್ನ ಪೋಷಕರನ್ನು ದೂರ ಮಾಡುವಂತ ಹುಡುಗಿ ನನಗೆ ಬೇಡ ಎಂದು ಮಾತನಾಡಿದರು. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈಗ ನನಗೆ 44 ವರ್ಷ. ಒಳ್ಳೆ ಹುಡುಗಿ ಸಿಕ್ಕರೆ ಮದುವೆ ಆಗುವೆ ಇಲ್ಲದಿದ್ದರೆ ಒಂಟಿಯಾಗಿರುತ್ತೀನಿ. ನನಗೆ ಸಿಗುವ ಹುಡುಗಿ ಬಗ್ಗೆ ಹೆಚ್ಚಿಗೆ ಕನಸಿಲ್ಲ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತವರಾಗಿರಬೇಕು. ನಾವು ಅರ್ಥ ಮಾಡಿಸುವ ಅಗತ್ಯವಿಲ್ಲ ಹಾಗೆ ಅರ್ಥ ಮಾಡಿಕೊಳ್ಳುವಂತ ಹುಡುಗಿ ಬೇಕು ಎಂದ ಸಿಂಗ್.

  • ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಮುಂಬೈ: ಮಾದಕ ದ್ರವ್ಯ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಮತ್ತು ಗೌರಿ ಖಾನ್ ಬೆಂಬಲಕ್ಕೆ ಸುಸಾನೆ ಖಾನ್ ಮತ್ತು ಮಿಕಾ ಸಿಂಗ್ ನಿಂತಿದ್ದಾರೆ.

    ಶನಿವಾರ ರಾತ್ರಿ(ಅ.2) ನಡೆದ ಕಾರ್ಡೆಲಿಯಾ ಕ್ರೂಸ್ ಎಕ್ಸ್ ಪ್ರೆಸ್  ಹಡಗಿನಲ್ಲಿ ಮಾದಕದ್ರವ್ಯದ ದಂಧೆಯ ನಂತರ ಅಕ್ಟೋಬರ್ 3 ರಂದು ಆರ್ಯನ್ ನನ್ನು ಬಂಧಿಸಲಾಯಿತು. ನಿನ್ನೆ ಆರ್ಯನ್ ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುಸ್ಸಾನೆ ಮತ್ತು ಮಿಕಾ ಅವರು ‘ಸ್ಟಾರ್ ಕಿಡ್’ ನ ಬಂಧನವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಆರ್ಯನ್ ಖಾನ್ ಒಳ್ಳೆಯ ಮಗು!

    ಮುಂಬೈ ಕೋರ್ಟ್ ಸೋಮವಾರ ಆರ್ಯನ್ ಖಾನ್ ನ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಬಾಲಿವುಡ್ ಮಂದಿ ತಮಗೆ ತೋಚಿದಂತೆ ಹೇಳಿಕೊಳ್ಳುತ್ತಿದ್ದಾರೆ. ಆರ್ಯನ್ ಖಾನ್ ಒಳ್ಳೆಯ ಮಗು, ಆದರೆ ದುರದೃಷ್ಟವಶಾತ್ ಅವರು ಕೆಟ್ಟ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿದ್ದರು. ಇದನ್ನು ಬಳಸಿಕೊಂಡು ಅವರನ್ನು ಬಾಲಿವುಡ್‍ನ ಕೆಲವರು ತಮ್ಮದೇ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್ಯನ್ ಒಳ್ಳೆಯ ಮಗುವಾಗಿದ್ದರಿಂದ ಇದು ಅನ್ಯಾಯವಾಗಿದೆ. ನಾನು ಗೌರಿ ಮತ್ತು ಶಾರೂಖ್ ಪರವಾಗಿ ನಿಲ್ಲುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಸುಸಾನೆ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಲೇಖಕಿ ಶೋಭಾ ಡಿ, ಆರ್ಯನ್ ಬಂಧನವು ಅವರ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

    ಆ ಜಾಗಕ್ಕೆ ನಾನು ಹೋಗಬೇಕಿತ್ತು..!

    ಸಿಂಗರ್ ಮಿಕಾ ಸಿಂಗ್ ಕೂಡ ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಆರ್ಯನ್ ಬಿಟ್ಟರೇ ಬೇರೆ ಯಾರೂ ಆ ಹಡಗಿನಲ್ಲಿ ಇರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವಾವ್ ಎಂತಹ ಸುಂದರವಾದ ಕಾರ್ಡೆಲಿಯಾ ಕ್ರೂಸ್. ಅಲ್ಲಿಗೆ ನಾನು ಭೇಟಿ ಕೊಡಬೇಕಿತ್ತು. ಅಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಆರ್ಯನ್ ನನಗೆ ಕಾಣಿಸುತ್ತಿಲ್ಲ. ಆದರೆ ಇವರಿಗೆ ಮಾತ್ರ ಈ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ಕಾಣಿಸುತ್ತಿದ್ದಾನೆ ಎಂದು ವ್ಯಂಗ್ಯವಾಗಿ ಬರೆದು ಶುಭೋದಯ ಅದ್ಭುತ ದಿನ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಸುಚಿತ್ರಾ ಕೃಷ್ಣಮೂರ್ತಿ, ಹಂಸಲ್ ಮೆಹ್ತಾ ಮತ್ತು ಪೂಜಾ ಭಟ್ ಇತರರು ಶಾರುಖ್ ಖಾನ್ ಪರವಾಗಿ ಮಾತನಾಡಿದರು. ಸಲ್ಮಾನ್ ಖಾನ್ ಅವರು ತಮ್ಮ ಬೆಂಬಲವನ್ನು ಸೂಚಿಸಲು ಎಸ್‌ಆರ್‌ಕೆ  ಅವರ ಮನೆ ಮನ್ನತ್‍ಗೆ ಭೇಟಿ ನೀಡಿದರು.

  • ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಅವರ ಮ್ಯಾನೇಜರ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮುಂಬೈನ ಅಂಧೇರಿಯಲ್ಲಿ ಸೌಮ್ಯ ಖಾನ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಸೌಮ್ಯ ಅವರ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಆಕೆ ಯಾವುದೇ ಡೆತ್‍ನೋಟ್ ಕೂಡ ಬರೆದಿಲ್ಲ. ಹಾಗಾಗಿ ನಾವು ತನಿಖೆ ನಡೆಸುತ್ತಿದ್ದೇವೆ. ಸೌಮ್ಯ ಸಾವಿನ ಹಿಂದೆ ಯಾರೊದೊ ಕೈವಾಡ ಇರುವಂತೆ ಕಾಣುತ್ತಿಲ್ಲ. ಸದ್ಯ ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

     

    View this post on Instagram

     

    A post shared by Zoheb Khan (@official_zohebkhan) on

    ವರ್ಸೋವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಠಾಕೂರ್ ಮಾತನಾಡಿ, ಮಿಕಾ ಸಿಂಗ್ ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೊದಲ ಮಹಡಿಯಲ್ಲಿ ಸ್ಟುಡಿಯೋದಲ್ಲಿ ಸೌಮ್ಯ ವಾಸಿಸುತ್ತಿದ್ದಳು. ಅಂತ್ಯ ಸಂಸ್ಕಾರಕ್ಕಾಗಿ ಸೌಮ್ಯಳ ಮೃತದೇಹವನ್ನು ಪಂಜಾಬ್‍ನಲ್ಲಿರುವ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅಲ್ಲಿ ಸೌಮ್ಯಳ ಅಂತ್ಯ ಸಂಸ್ಕಾರ ನಡೆದಿದೆ. ಸೌಮ್ಯಳಿಗೆ ತಂದೆ-ತಾಯಿ ಇಲ್ಲ ಹಾಗೂ ಪಂಜಾಬ್‍ನಲ್ಲಿ ಆಕೆಯ ಅಜ್ಜಿ-ತಾತ ಇದ್ದಾರೆ ಎಂದು ಹೇಳಿದ್ದಾರೆ.

    ಸೌಮ್ಯ ಸಾವಿನಿಂದ ಮನನೊಂದ ಗಾಯಕ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಆಕೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ನಮ್ಮ ಪ್ರೀತಿಯ ಸೌಮ್ಯ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಆಕೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ನೆನಪುಗಳನ್ನು ಬಿಟ್ಟು ಹೋಗಿದ್ದಾಳೆ. ದೇವರು ಆಕೆಯ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಪಾಕ್‍ನಲ್ಲಿ ಕಾರ್ಯಕ್ರಮ ನೀಡೋದನ್ನ ತಡೆಯಲು ಯಾರಪ್ಪನಿಂದ್ಲೂ ಸಾಧ್ಯವಿಲ್ಲ: ಶಿಲ್ಪಾ ಶಿಂಧೆ

    ಪಾಕ್‍ನಲ್ಲಿ ಕಾರ್ಯಕ್ರಮ ನೀಡೋದನ್ನ ತಡೆಯಲು ಯಾರಪ್ಪನಿಂದ್ಲೂ ಸಾಧ್ಯವಿಲ್ಲ: ಶಿಲ್ಪಾ ಶಿಂಧೆ

    ಮುಂಬೈ: ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡಿ ನಿಷೇಧಕ್ಕೊಳಗಾಗಿದ್ದು ಮಿಕಾ ಸಿಂಗ್ ಕ್ಷಮೆ ಕೇಳಿದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ತನ್ನ ನಿರ್ಧಾರ ಹಿಂಪಡೆದಿದೆ. ಇದೀಗ ಬಾಲಿವುಡ್ ನಟಿ ಶಿಲ್ಪಾ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ನನ್ನ ದೇಶ ಅಲ್ಲಿಗೆ ತೆರಳಲು ವೀಸಾ ನೀಡುತ್ತದೆ. ಆ ದೇಶದ ಜನರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧರಿದ್ದಾರೆ. ಹಾಗಾಗಿ ನಾನು ಪಾಕಿಸ್ತಾನಕ್ಕೆ ತೆರಳಿ ಕಾರ್ಯಕ್ರಮ ನೀಡುವುದು ನನ್ನ ಹಕ್ಕು. ನಾನು ಕಲಾವಿದೆಯಾಗಿದ್ದು, ನಮ್ಮ ಮೇಲೆ ಈ ರೀತಿಯ ನಿಷೇಧ ವಿಧಿಸುವುದು ಸರಿಯಲ್ಲ. ಹಣಕ್ಕಾಗಿ ಯಾವುದೇ ಮಾಧ್ಯಮದ ಅವಶ್ಯಕತೆ ನನಗಿಲ್ಲ. ರಸ್ತೆಯಲ್ಲಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನೀಡಿದ್ರೆ ನನ್ನ ಹೊಟ್ಟಿ ತುಂಬುತ್ತದೆ. ಇಂತಹ ಜನರಿಗೆ ಹೆದರಲ್ಲ ಮತ್ತು ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡೋದನ್ನ ಯಾರಪ್ಪನಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ಶಿಲ್ಪಾ ಶಿಂಧೆ ಕಿಡಿಕಾರಿದ್ದಾರೆ.

    ಮಿಕಾ ಸಿಂಗ್ ಅವರಿಗೆ ಕಿರುಕುಳ ನೀಡಿ, ಬಲವಂತವಾಗಿ ಕ್ಷಮೆ ಕೇಳುವಂತೆ ಸನ್ನಿವೇಶ ಸೃಷ್ಟಿಸಲಾಯ್ತು. ನಿಷೇಧ ವಿಧಿಸುವ ಸುಮಾರು 50 ಫೌಂಡೇಶನ್ ಗಳು ಇಂದು ಹುಟ್ಟಿಕೊಂಡಿವೆ. ಇಂತಹ ಎಲ್ಲ ಫೌಂಡೇಶನ್ ಗಳು ಹಣ ತಿನ್ನಲು ಮುಂದಾಗಿವೆ. ಮಿಕಾ ಸಿಂಗ್ ಒಂದರ ನಂತರ ಒಂದು ಶೋಗಳನ್ನು ನೀಡುತ್ತಿದ್ದಾರೆ. ನಿಷೇಧ ವಿಧಿಸಿದ್ದರಿಂದ ಕಾರ್ಯಕ್ರಮ ಆಯೋಜಕರಿಗೂ ಮತ್ತು ಮಿಕಾ ಸಿಂಗ್ ದೊಡ್ಡ ನಷ್ಟ ಉಂಟಾಗಿರುತ್ತದೆ.

    ಪಾಕಿಸ್ತಾನದಲ್ಲಿ ನನಗೆ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ನನ್ನನ್ನು ಬಿಗ್ ಬಾಸ್ ನಲ್ಲಿ ಜಯಶಾಲಿಯಾಗಿ ಮಾಡಿದರು. ನಾನು ಪಾಕಿಸ್ತಾನ ಸೂಟ್ ಧರಿಸುತ್ತೇನೆ. ಪಾಕಿಸ್ತಾನದ ಅಭಿಮಾನಿಗಳಿಂದ ಕೆಲ ಕೊರಿಯರ್ ಬರುತ್ತವೆ, ಪ್ರತಿಯಾಗಿ ನಾನು ಸಹ ಕಳಿಸುತ್ತೇನೆ. ಇದರಲ್ಲಿ ಏನಾದ್ರೂ ತಪ್ಪಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಜರಫ್ ಅವರ ಸಂಬಂಧಿಯ ಮಗಳ ಮದುವೆ ಕಾರ್ಯಕ್ರಮ ಆಗಸ್ಟ್ ಎರಡನೇ ವಾರದಲ್ಲಿ ನಡೆದಿತ್ತು. ಆಗಸ್ಟ್ 8 ರಂದು ಮಿಕಾ ಸಿಂಗ್ ಹಾಗೂ ಅವರ ತಂಡ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ಮಿಕಾ ಸಿಂಗ್ ಅವರನ್ನು ಭಾರತೀಯ ಚಿತ್ರರಂಗದಿಂದ ಬ್ಯಾನ್ ಮಾಡಿ ಕ್ರಮ ತೆಗೆದುಕೊಂಡಿತ್ತು.

  • ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಬ್ಯಾನ್

    ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಬ್ಯಾನ್

    ನವದೆಹಲಿ: ಪಾಕಿಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗಾಯಕ ಮಿಕಾ ಸಿಂಗ್ ಅವರು ಲೈವ್ ಕಾರ್ಯಕ್ರಮ ನೀಡಿದ ವಿಡಿಯೋ ವೈರಲ್ ಆದ ಬಳಿಕ ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆ.

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಜರಫ್ ಅವರ ಸಂಬಂಧಿಯ ಮಗಳ ಮದುವೆ ಕಾರ್ಯಕ್ರಮ ಆಗಸ್ಟ್ ಎರಡನೇ ವಾರದಲ್ಲಿ ನಡೆದಿತ್ತು. ಆಗಸ್ಟ್ 8 ರಂದು ಮಿಕಾ ಸಿಂಗ್ ಹಾಗೂ ಅವರ ತಂಡ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ತಿಳಿಯುತ್ತದ್ದಂತೆ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ಮಿಕಾ ಸಿಂಗ್ ಅವರನ್ನು ಭಾರತೀಯ ಚಿತ್ರರಂಗದಿಂದ ಬ್ಯಾನ್ ಮಾಡಿ ಕ್ರಮ ತೆಗೆದುಕೊಂಡಿದೆ.

    ಈ ಬಗ್ಗೆ ಎಐಸಿಡಬ್ಲೂಎ ಮಂಗಳವಾರ ಪ್ರಕಟಣೆ ಹೊರಡಿಸಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ಸಂಗೀತ ಕಂಪನಿಗಳು ಮತ್ತು ಆನ್‍ಲೈನ್ ಸಂಗೀತ ವಿಷಯ ಪೂರೈಕೆದಾರರೊಂದಿಗೆ ಮಿಕಾ ಸಿಂಗ್ ಅವರ ಒಡನಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶಿಸಿದೆ. ಹಾಗೆಯೇ ಈ ಬಗ್ಗೆ ಎಐಸಿಡಬ್ಲೂಎ ಅಧ್ಯಕ್ಷ ಸುರೇಶ್ ಗುಪ್ತ ಮಾತನಾಡಿ, ಭಾರತದಲ್ಲಿ ಯಾರೂ ಕೂಡ ಮಿಕಾ ಸಿಂಗ್ ಅವರ ಜೊತೆ ಕೆಲಸ ಮಾಡುವುದಿಲ್ಲ. ಒಂದು ವೇಳೆ ಕೆಲಸ ಮಾಡಿದರೆ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕಾರ್ಯಕ್ರಮ ನೀಡಿದ್ದಕ್ಕೆ ಮಿಕಾ ಸಿಂಗ್ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲಿ ಮಿಕಾ ಸಿಂಗ್ ಅವರು ಪಾಕಿಸ್ತಾನದಲ್ಲಿ ಕಾರ್ಯಕ್ರಮ ಕೊಟ್ಟು, ಅವರಿಂದ ಹಣ ಪಡೆದಿದ್ದಾರೆ ಎಂದು ಸುರೇಶ್ ಗುಪ್ತ ಕಿಡಿಕಾರಿದ್ದಾರೆ.

    ಮಿಕಾ ಸಿಂಗ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯರು ಹಾಗೂ ಪಾಕಿಸ್ತಾನಿಯರು ಗಾಯಕನ ವಿರುದ್ಧ ಸಿಡಿದೆದ್ದಿದ್ದಾರೆ. ದೇಶಭಕ್ತಿಕ್ಕಿಂತ ಮಿಕಾ ಸಿಂಗ್‍ಗೆ ಹಣವೇ ಮುಖ್ಯವಾಯ್ತ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಭಾರತೀಯ ಚಿತ್ರಗಳನ್ನು ಹಾಗೂ ಹಾಡುಗಳನ್ನು ಪಾಕಿಸ್ತಾನ ನಿಷೇಧಿಸಿದೆ. ಆದರೂ ಈ ನಡುವೆ ಮಿಕಾ ಸಿಂಗ್ ಹಾಗೂ ಅವರ ತಂಡಕ್ಕೆ ಕರಾಚಿ, ಇಸ್ಲಾಮಾಬಾದ್ ಹಾಗೂ ಲಾಹೋರ್ ಗೆ 30 ದಿನಗಳ ವೀಸಾ ನೀಡಲಾಗಿದೆ.