Tag: ಮಿಂಟೋ ಆಸ್ಪತ್ರೆ

  • ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    – ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಳ
    – ಶನಿವಾರ ಒಂದೇ ದಿನ 20 ಪ್ರಕರಣ ದಾಖಲು

    ಬೆಂಗಳೂರು: ದೀಪಾವಳಿ (Deepavali) ಹಬ್ಬ ಹಿನ್ನೆಲೆ ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಾಗಿದ್ದು, ಆಪರೇಷನ್ ಸಂಖ್ಯೆಯೂ ಹೆಚ್ಚಾಗಿದೆ.

    ಮಿಂಟೋ ಆಸ್ಪತ್ರೆಯಲ್ಲಿ (Minto Hospital) 5 ದಿನಗಳಲ್ಲಿ 49 ಪಟಾಕಿ ಸಿಡಿತ ಪ್ರಕರಣ ದಾಖಲಾಗಿದೆ. ಪಟಾಕಿ ಅವಘಡದಿಂದ 35 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೇ 14 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಏಟು ಮಾಡಿಕೊಂಡಿದ್ದಾರೆ. 17 ಮಂದಿ ವಯಸ್ಕರೂ ಸಹ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. 23 ಮಂದಿಗೆ ಪಟಾಕಿಯಿಂದ ಗಂಭೀರ ಸಮಸ್ಯೆಯಾಗಿದೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್‌

    26 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, 4 ಮಂದಿಗೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಇನ್ನೂ 10 ಮಂದಿಗೆ ಸರ್ಜರಿಯ ಅವಶ್ಯಕತೆಯಿದೆ. 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಈ ಪೈಕಿ 15 ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲೂ (Narayana Nethralaya) 64ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ

    ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ

    ಬೆಂಗಳೂರು: ಎಲ್ಲೆಡೆ ದೀಪಾವಳಿ ಆಚರಣೆ (Deepawali Celebration) ಜೋರಾಗಿದ್ದು, ಅದರ ಜೊತೆಗೆ ಪಟಾಕಿ ಸಿಡಿತದಿಂದ ಅವಘಡಗಳು ಹೆಚ್ಚಾಗುತ್ತಿವೆ. ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಹೆಚ್ಚಾಗುತ್ತಿದ್ದು, ಮಿಂಟೋ ಆಸ್ಪತ್ರೆಯಲ್ಲಿ (Minto Hospital) 29 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಟಾಕಿ ಹಚ್ಚುವವರಿಗಿಂತ ಅಕ್ಕಪಕ್ಕ ಇದ್ದವರಿಗೆ ಹೆಚ್ಚು ಗಾಯಗಳಾಗುತ್ತಿದೆ. ಮಿಂಟೋ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 15 ಪ್ರಕರಣ ದಾಖಲಾಗಿದ್ದು, ಒಟ್ಟು 29 ಜನ ಚಿಕಿತ್ಸೆ ಪಡೆದಿದ್ದಾರೆ. ಈಗಾಗಲೇ 8 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇನ್ನುಳಿದ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಕರು 9 ಜನ ಸೇರಿದಂತೆ 9 ಮಕ್ಕಳು, ಅಕ್ಕಪಕ್ಕ ಇದ್ದ 8 ಜನ, ಪಟಾಕಿ ಹಚ್ಚಿದ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೆ ಸರ್ಜರಿ ಮಾಡಲಾಗಿದೆ.ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಇಲ್ಲಿಯವರೆಗೂ ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 14 ಜನರಿಗೆ ಗಂಭೀರ ಗಾಯ, 15 ಮಂದಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದರು. ಕಣ್ಣಿಗೆ ಗಂಭೀರ ಗಾಯಗೊಂಡಿದ್ದ ನಾಲ್ವರಿಗೆ ಆಪರೇಷನ್ ಮಾಡಲಾಗಿದೆ.

    ಯಾವ್ಯಾವ ಪಟಾಕಿ ಸಿಡಿತದಿಂದ ಎಷ್ಟು ಮಂದಿಗೆ ಗಾಯ?
    ಬಿಜ್ಲಿ ಪಟಾಕಿ- 8
    ಫ್ಲವರ್ ಪಾಟ್ – 4
    ಲಕ್ಷ್ಮಿ ಪಟಾಕಿ- 2
    ಸ್ಕೈ ಶಾಟ್ ರಾಕೆಟ್-1
    ಇನ್ಸೆನ್ಸ್ ಸ್ಟಿಲ್-1
    ಬೆಳ್ಳುಳ್ಳಿ ಪಟಾಕಿ-1
    ಆಟೋಂಬಾಂಬ್-1
    ಡಬಲ್ ಶಾಟ್-1
    ಭೂ ಚಕ್ರ-1
    ರಾಕೆಟ್-1

    ಇನ್ನೂ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿಯ ವೇಳೆ ಅನಧಿಕೃತವಾಗಿ ಅಂಗಡಿ ತೆರೆದು ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆಯವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ಒಟ್ಟು 56 ಪ್ರಕರಣಗಳನ್ನು ದಾಖಲಿಸಿದ್ದಾರೆ.

    ಯಾವ ವಿಭಾಗದಲ್ಲಿ ಎಷ್ಟು ಪ್ರಕರಣಗಳು?
    ಉತ್ತರ -9
    ದಕ್ಷಿಣ-4
    ಪೂರ್ವ-6
    ಈಶಾನ್ಯ-19
    ಆಗ್ನೇಯ, ವೈಟ್‌ಫೀಲ್ಡ್ -9 ಇದನ್ನೂ ಓದಿ: ಸ್ನೇಹಿತ ಅಂತ ನಂಬಿ ಮೊಬೈಲ್‌ ಕೊಟ್ಟ ಮಹಿಳೆ – ಆಕೆಯ ಬೆತ್ತಲೆ ವೀಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌

     

  • ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    – ಊಟದ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ

    ಬೆಂಗಳೂರು: ಇಲ್ಲಿನ ಮಿಂಟೋ ಆಸ್ಪತ್ರೆ (Minto Hospital) ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಈಗ ಊಟದ ಸಮಯ ಎಂದು ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಅಮಾನವೀಯ ವರ್ತನೆ ತೋರಿದ್ದಾರೆ. ಇದರಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂಭಾಗ ರೋಗಿಗಳು ನರಳಾಡುತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇರುವ ಅತಿದೊಡ್ಡ ಕಣ್ಣಿನ ಆಸ್ಪತ್ರೆ (Eye Hospital) ಎಂದರೆ ಅದು ಮಿಂಟೋ ಆಸ್ಪತ್ರೆ. ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ದೂರದ ಊರುಗಳಿಂದ ಜನ ಬರುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ ಆದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡುವುದು ಆಸ್ಪತ್ರೆಗಳ ಕರ್ತವ್ಯ. ಆದರೆ ಕೆ.ಆರ್ ಮಾರ್ಕೆಟ್ ಬಳಿಯ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನು ಮರೆತು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ವೈದ್ಯರು ಊಟ ಮಾಡುವ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ

    ಮಿಂಟೋ ಆಸ್ಪತ್ರೆಗೆ ಬೀಗ ಹಾಕಿದ ಸಮಯದಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಕೇಸ್ ಬಂದರೂ ಸಹ ಆಸ್ಪತ್ರೆಯ ಬೀಗ ತೆಗೆದು ಚಿಕಿತ್ಸೆ ಕೊಟ್ಟಿಲ್ಲ. ಬದಲಾಗಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿಯೇ ಅಂಬುಲೆನ್ಸ್ ಒಳಗಡೆಯೇ ಚಿಕಿತ್ಸೆ ಕೊಟ್ಟಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿದ ಕಾರಣ ನೂರಾರು ರೋಗಿಗಳು ಆಸ್ಪತ್ರೆ ಮುಂಭಾಗ ಗೇಟ್ ಬಳಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ವೈದ್ಯರ ಬೇಜವಾಬ್ದಾರಿ ನಿರ್ಲಕ್ಷ್ಯಕ್ಕೆ ರೋಗಿಗಳು ನಲುಗಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ: RSS ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕೆ?

    ಆಸ್ಪತ್ರೆಗೆ ಬೀಗ ಹಾಕಿರುವ ಕಾರಣ ನೂರಾರು ರೋಗಿಗಳು ಚಿಕಿತ್ಸೆಗಾಗಿ ಹಂಬಲಿಸುತ್ತಾ ಇದ್ದ ಹಿನ್ನೆಲೆಯಲ್ಲಿ ‘ಪಬ್ಲಿಕ್ ಟಿವಿ’ ವೈದ್ಯರ ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ ಬಳಿಕ ಗೇಟ್ ಓಪನ್ ಮಾಡಿ ರೋಗಿಗಳನ್ನು ಒಳಗಡೆ ಬಿಟ್ಟಿದ್ದಾರೆ. ಇನ್ನು ಈ ಕುರಿತು ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ರೋಗಿಗಳಿಗಿಂತ ಇವರಿಗೆ ಊಟನೇ ಹೆಚ್ಚಾಗಿದೆ. ಊಟದ ಸಮಯ ಎಂದು ಒಂದೂವರೆ ಗಂಟೆ ಆಸ್ಪತ್ರೆಗೆ ಬೀಗ ಹಾಕಿಕೊಂಡರೆ ಎಮರ್ಜೆನ್ಸಿ ಇರುವ ರೋಗಿಗಳ ಪರಿಸ್ಥಿತಿ ಏನಾಗಬೇಡ? ರಸ್ತೆಯಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ಐಸಿಯು, ಬೆಡ್ ಬೇಡವೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

    ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿಜಕ್ಕೂ ಈ ಆಸ್ಪತ್ರೆ ಮೇಲೆ ನಿಗಾ ವಹಿಸಬೇಕಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ ಇದ್ದರೂ ಈ ರೀತಿ ನಿರ್ಲಕ್ಷ್ಯ ಮಾಡಿ ಬೀಗ ಹಾಕಿ ರಸ್ತೆಯಲ್ಲೆ ಚಿಕಿತ್ಸೆ ಕೊಡೋದು ಎಷ್ಟು ಸರಿ? ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೆ?

  • ಹೂವಿನ ಕುಂಡ ಸಿಡಿದು ರಸ್ತೆ ಬದಿ ನಿಂತಿದ್ದ ಬಾಲಕನ ಕಣ್ಣಿಗೆ ಗಾಯ

    ಹೂವಿನ ಕುಂಡ ಸಿಡಿದು ರಸ್ತೆ ಬದಿ ನಿಂತಿದ್ದ ಬಾಲಕನ ಕಣ್ಣಿಗೆ ಗಾಯ

    ಬೆಂಗಳೂರು: ರಸ್ತೆ ಬದಿ ನಿಂತಿದ್ದ ಹುಡುಗನ ಮೇಲೆ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಸ್ತೆ ಬದಿ ಹೂವಿನ ಕುಂಡವನ್ನ ಹಚ್ಚಲಾಗಿತ್ತು. ಈ ವೇಳೆ ಕಾಮಾಕ್ಷಿ ಪಾಳ್ಯದ ನಿವಾಸಿಯಾಗಿರುವ 12 ವರ್ಷದ ಬಾಲಕ ನಡೆದುಕೊಂಡು ಬಂದು ರಸ್ತೆ ಬದಿ ನಿಂತಿದ್ದನು. ಇದೇ ವೇಳೆ ಹೂವಿನ ಕುಂಡ ಸಿಡಿದು ಆತನ ಕಣ್ಣಿಗೆ ಹಾನಿಯಾಗಿದೆ. ಕೂಡಲೇ ಬಾಲಕನನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಭಾನುವಾರ ರಾತ್ರಿ ಪಟಾಕಿ ಹಚ್ಚಲು ಹೋಗಿ ಮೂರು ಮಕ್ಕಳ ಕಣ್ಣಿಗೆ ಗಾಯಗಳಾಗಿತ್ತು. ಬೆಂಗಳೂರಿನ ಬೇರೆ ಬೇರೆ ನಿವಾಸಿಗಳಾದ ಮೂವರು ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂರು ಜನರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.

    ಸುಂಕದ ಕಟ್ಟೆ ಮೂಲದ 11 ವರ್ಷ ವಯಸ್ಸಿನ ಹುಡುಗ ಹೂವಿನ ಕುಂಡ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಪಟಾಕಿ ಅವಾಂತರ – ಬೆಂಗಳೂರಲ್ಲಿ 7 ಮಂದಿಯ ಕಣ್ಣಿಗೆ ಹಾನಿ

    ಪಟಾಕಿ ಅವಾಂತರ – ಬೆಂಗಳೂರಲ್ಲಿ 7 ಮಂದಿಯ ಕಣ್ಣಿಗೆ ಹಾನಿ

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಿಷೇಧವಿದ್ದರೂ ಪಟಾಕಿ ಹಚ್ಚಲು ಹೋಗಿ ಮಕ್ಕಳ ಕಣ್ಣಿಗೆ ಹಾನಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪಟಾಕಿ ಹಚ್ಚಲು ಹೋಗಿ ಮೂರು ಮಕ್ಕಳ ಕಣ್ಣಿಗೆ ಗಾಯಗಳಾಗಿದ್ದು, ರಾತ್ರೋ ರಾತ್ರಿ ಬೆಂಗಳೂರಿನ ಬೇರೆ ಬೇರೆ ನಿವಾಸಿಗಳಾದ ಮೂವರು ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂರು ಜನರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.

    ಸುಂಕದ ಕಟ್ಟೆ ಮೂಲದ 11 ವರ್ಷ ವಯಸ್ಸಿನ ಹುಡುಗ ಹೂವಿನ ಕೆಂಡ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಪಟಾಕಿಗೆ ಬೆಂಕಿ ಹಚ್ಚಲು ಹೋಗಿ ಬಾಲಕನ ಮುಖಕ್ಕೆ ಗಾಯ

    ಪಟಾಕಿಗೆ ಬೆಂಕಿ ಹಚ್ಚಲು ಹೋಗಿ ಬಾಲಕನ ಮುಖಕ್ಕೆ ಗಾಯ

    ಬೆಂಗಳೂರು: ಪಟಾಕಿಯಿಂದ ಬಾಲಕನೊಬ್ಬ ಹಾನಿಗೊಳಗಾದ ಮೊದಲ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

    ಮಾಸ್ಟರ್ ಎಸ್(12) ಗಾಯಗೊಂಡ ಬಾಲಕ. ಬೆಂಗಳೂರಿನ ವಿಜಯಾನಂದ ನಗರದ ನಿವಾಸಿಯಾಗಿರುವ ಈತನ ಮುಖಕ್ಕೆ ಗಾಯಗಳಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹೂವಿನ ಕುಂಡ ಹಚ್ಚುವಾಗ ಮುಖಕ್ಕೆ ಗಾಯ ಆಗಿದೆ. ಮೂಗು ಮತ್ತು ಕಣ್ಣಿನ ಮೇಲ್ಭಾಗದ ಚರ್ಮ ಸುಟ್ಟು ಹೋಗಿದೆ. ಕಣ್ಣಿಗೆ ಹಾನಿಯಾಗಿರುವ ಸಾಧ್ಯತೆ ಇದ್ದು, ಸದ್ಯಕ್ಕೆ ಯಾವುದೇ ಅಪಾಯ ಇಲ್ಲ. ಮಿಂಟೋ ಆಸ್ಪತ್ರೆಯ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

  • ಬಂಧನಕ್ಕೆ ಒಳಗಾಗಿದ್ದ ಕರವೇ ಕಾರ್ಯಕರ್ತರಿಗೆ ಜಾಮೀನು ಮಂಜೂರು

    ಬಂಧನಕ್ಕೆ ಒಳಗಾಗಿದ್ದ ಕರವೇ ಕಾರ್ಯಕರ್ತರಿಗೆ ಜಾಮೀನು ಮಂಜೂರು

    ಬೆಂಗಳೂರು: ಮಿಂಟೋ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಕರವೇ ಕಾರ್ಯಕರ್ತರಿಗೆ ಜಾಮೀನು ಮಂಜೂರು ಆಗಿದೆ.

    24ನೇ ಎಸಿಎಂಎಂ ಕೋರ್ಟ್ ನ್ಯಾ. ಬಾಲಗೋಪಾಲಕೃಷ್ಣ ತಲಾ 50 ಸಾವಿರ ಬಾಂಡ್, 3 ಸಾವಿರ ನಗದು ಪತ್ರ ಪಡೆದು ಜಾಮೀನು ಮಂಜೂರು ಮಾಡಿದರು. ಇದನ್ನೂ ಓದಿ:ಪೊಲೀಸರಿಗೆ ಶರಣಾದ ನಟಿ – ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಯಾರು?

    ಏನಿದು ಪ್ರಕರಣ?
    ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು ವೈದ್ಯರ ವಾಗ್ವಾದ ಇಂಗ್ಲಿಷ್, ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಕರವೇ ಕಾರ್ಯಕರ್ತರು ಶರಣಾಗಿದ್ದು ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು.

    ಈ ವಿಚಾರವಾಗಿ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಯ ಒಪಿಡಿಗಳನ್ನು ಬಂದ್ ಮಾಡಿ ವೈದ್ಯರು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ತಡರಾತ್ರಿ ಸಭೆ ನಡೆಸಿ ಅಶ್ವಿನಿ ಗೌಡ ಸೇರಿದಂತೆ 12 ಜನ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗುವ ಬಗ್ಗೆ ತೀರ್ಮಾನ ಮಾಡಿದ್ದರು.

    ಅದರಂತೆ ಇಂದು ಬೆಳಗ್ಗೆ ವಿವಿಪುರಂ ಪೊಲೀಸ್ ಠಾಣೆಗೆ ಬಂದ ಅಶ್ವಿನಿ ಗೌಡ ಮಧುಸೂದನ್ ಯಾದವ್, ಮನು, ಗಾಯಿತ್ರಿ, ಸಂಗೀತಾ ಶೆಟ್ಟಿ ಸೇರಿದಂತೆ 12 ಕಾರ್ಯಕರ್ತರು ಶರಣಾಗಿದ್ದಾರೆ. ಈ ಬಗ್ಗೆ ಬೆಳಗ್ಗೆ ಮಾತನಾಡಿದ್ದ ನಾರಾಯಣಗೌಡ ಹಾಗೂ ಹಲ್ಲೆ ಆರೋಪಿ ಅಶ್ವಿನಿಗೌಡ, ವೈದ್ಯರಿಗೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಜನರಿಗೆ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

  • ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

    ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

    – ಮಿಂಟೋ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ
    – ಡ್ರಗ್ ಓವರ್ ರಿಯಾಕ್ಷನಿಂದ ಮೃತಪಟ್ಟಿರಬಹುದು
    – ಈ ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ- ವೈದ್ಯರಿಂದ ಸ್ಪಷ್ಟನೆ

    ಬೆಂಗಳೂರು: ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿದೆ.

    ಕಳೆದ ಮಂಗಳವಾರ 25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

    ಡ್ರಗ್ಸ್ ರಿಯಾಕ್ಷನ್‍ನಿಂದ ಈ ದುರ್ಘಟನೆ ಸಂಭವಿಸಿದೆ. ನಮಗೂ ಇದಕ್ಕೂ ಸಂಬಂಧವಿಲ್ಲ, ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಇತ್ತ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಗೋಗರೆಯುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ರೋಗಿಗಳು ಪ್ರತಿಭಟಿಸುತ್ತಾರೆ ಎಂಬುದನ್ನು ಮನಗಂಡು ರೋಗಿಗಳನ್ನು ಮನೆಗೆ ಹೊರಡಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟು 25 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎಲ್ಲರ ಬಳಿಯೂ ವೈದ್ಯರು 8 ಸಾವಿರ ರೂ. ಹಣ ಪಡೆದಿದ್ದರು. ಗೋಳಾಡುತ್ತಿರುವ ರೋಗಿಗಳಿಗೆ ಡ್ರಗ್ ರಿಯಾಕ್ಷನ್ ಆಗಿದೆ ಎಂಬುದನ್ನು ಹೊರತು ಪಡಿಸಿದರೆ, ಕಣ್ಣು ಸರಿ ಹೋಗುವ ಕುರಿತು ವೈದ್ಯರು ಭರವಸೆ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆಗೆ ನೀವು ಸಹಿ ಹಾಕಿದ್ದೀರ, ಇದಕ್ಕೆ ನಾವು ಕಾರಣರಲ್ಲ ಎಂದು ವೈದ್ಯರು ದೂರುತ್ತಿದ್ದಾರೆ.

    ರೋಗಿಗಳಿಗೆ ನೀಡಲಾದ ಡ್ರಗ್ಸ್ ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಲಾಗಿದೆ. ಅಲ್ಲದೆ, ಮೇಲಾಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

    ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಮಗೆ ಆಪರೇಷನ್ ಮಾಡಲು ಡ್ರಗ್ ಸರ್ಕಾರದಿಂದ ಬರುತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದು, ಡ್ರಗ್‍ನ್ನು ವಶಕ್ಕೆ ಪಡೆಯಲಾಗಿದೆ. ಮೆಡಿಸಿನ್‍ಗಳನ್ನೂ ಲ್ಯಾಬ್‍ಗೆ ಕಳುಹಿಸಿದ್ದು, ಇನ್ನು ವರದಿ ಬಂದಿಲ್ಲ. ವರದಿ ಬಂದ ನಂತರ ಮುಂದಿನ ಚಿಕಿತ್ಸೆ ನೀಡುತ್ತೇವೆ. ಒಂದು ವೇಳೆ ಕಣ್ಣು ಬಂದಿಲ್ಲ ಎಂದರೆ ನಾವು ಜವಾಬ್ದಾರರಲ್ಲ. ಇದರಲ್ಲಿ ವೈದ್ಯರ ತಪ್ಪಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.