Tag: ಮಾಹಿತಿ ತಂತ್ರಜ್ಞಾನ ಕಾಯ್ದೆ

  • 2021ರ ಹೊಸ ಐಟಿ ನಿಯಮವೇನು? ಭಾರತದಲ್ಲಿ 74 ಲಕ್ಷ ವಾಟ್ಸಪ್ ‌ಖಾತೆಗಳ ನಿಷೇಧವೇಕೆ?

    2021ರ ಹೊಸ ಐಟಿ ನಿಯಮವೇನು? ಭಾರತದಲ್ಲಿ 74 ಲಕ್ಷ ವಾಟ್ಸಪ್ ‌ಖಾತೆಗಳ ನಿಷೇಧವೇಕೆ?

    ಭಾರತ (India) ಸರ್ಕಾರ ಸೋಶಿಯಲ್ ಮೀಡಿಯಾ ಕಂಪನಿಗಳ ಮೇಲೆ ಹೊಸ ನಿಯಮಗಳನ್ನು ಪರಿಷ್ಕರಿಸಿದ ಬಳಿಕ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ (Whatsapp) ಆಗಸ್ಟ್‌ನಲ್ಲಿ ಸುಮಾರು 74.2 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ವಾಟ್ಸಪ್ ಈ ನಿರ್ಧಾರ ಕೈಗೊಂಡಿದೆ.

    ಹೊಸ ಐಟಿ ನಿಯಮದ (IT Act 2021) ಅನ್ವಯ ಪ್ರತಿ ತಿಂಗಳ ವರದಿ ನೀಡುವ ವಾಟ್ಸಪ್ ಇದೀಗ ಆಗಸ್ಟ್ 2023ರ ಮಾಸಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಹಿಂದೆಂದಿಗಿಂತಲೂ ಈ ಬಾರಿಯ ಮಾಸಿಕ ವರದಿಯಲ್ಲಿ ಭಾರತೀಯರ ವಾಟ್ಸಪ್ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿಸಲಾಗಿದೆ. ಹೊಸ ಐಟಿ ನಿಯಮ 2021ರ ನಿಯಮ 4(1)(ಡಿ) ಯ ಅನುಸಾರವಾಗಿ ವಾಟ್ಸಪ್ ಖಾತೆಗಳನ್ನು ಬ್ಲಾಕ್ ಮಾಡಿದೆ. ಹೀಗೆ ಬ್ಲಾಕ್ ಮಾಡಿದ ಖಾತೆಗಳಲ್ಲಿ ಬಳಕೆದಾರರಿಂದ ಸ್ವೀಕರಿಸಿದ ಕುಂದುಕೊರತೆಗಳ ರಿಪೋರ್ಟ್‌ಗಳು ಸೇರಿವೆ. ಬಳಕೆದಾರರಿಂದ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವರದಿ ಮಾಡಿದೆ.

    ಅಹಿತಕರ ಸಂದೇಶ ತಡೆಗಟ್ಟುವಲ್ಲಿ ಮತ್ತು ಎದುರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸುರಕ್ಷತಾ ವೈಶಿಷ್ಟ್ಯತೆಗಳು ಮತ್ತು ನಿಯಂತ್ರಣಗಳ ಜೊತೆಗೆ ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ತಜ್ಞರನ್ನು ನೇಮಿಸಿಕೊಳ್ಳುವುದಾಗಿ ವಾಟ್ಸಪ್ ತಿಳಿಸಿದೆ.

    ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಈ ನಿಯಮಗಳು ಅವಶ್ಯಕವಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಈ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸೋಶಿಯಲ್ ಮೀಡಿಯಾ ಕಂಪನಿಗಳು ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರ ನಡುವೆ ನಿಯಮಗಳಿಗೆ ಹೊಸ ಪರಿಷ್ಕರಣೆಯನ್ನು ಸರ್ಕಾರ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕಿದೆ.

    ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ, ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂತಹ ಸುದ್ದಿಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‍ಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ವಾಟ್ಸಪ್ ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾದರೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಒಳಗಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಲಾಗಿದೆ.  ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿರಲಿಲ್ಲ. ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ ಎಂದು ಹೇಳಿಕೊಂಡಿತ್ತು. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದು ಕಂಪನಿ ಸ್ಪಷ್ಟಪಡಿಸಿತ್ತು.

    ವಾಟ್ಸಪ್ ಬಳಸಿ ಕಳುಹಿಸಲಾಗುವ ಎಲ್ಲಾ ಸಂದೇಶಗಳು ಎಂಡ್ ಟು ಎಂಡ್ ಎನ್‍ಕ್ರಿಪ್ಷನ್‍ಗೆ ಒಳಪಟ್ಟಿವೆ. ಇದರಿಂದ ಸಂದೇಶ ಸೋರಿಕೆಯಾಗುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಹೇಳಿತ್ತು. ಆದರೆ ದೇಶದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಾಟ್ಸಪ್ ಮೂಲಕ ಹರಡಲಾದ ಸಂದೇಶಗಳೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿತ್ತು. ಹೀಗಾಗಿ ಅದನ್ನು ಪತ್ತೆ ಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

    ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಅನೇಕ ತಂತ್ರಜ್ಞಾನ ಮಧ್ಯವರ್ತಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಾರ ಹೇಳಿತ್ತು. ಯಾವುದೇ ನಿರ್ಧಿಷ್ಟ ಕಂಪನಿ ಅಥವಾ ನಿರ್ಧಿಷ್ಟ ವಿಚಾರವನ್ನು ಹೇಳದೇ ಕೇವಲ ಮಾಹಿತಿಯನ್ನು ಉಲ್ಲೇಖಿಸಿತ್ತು. ಈ ವಿಚಾರವಾಗಿ ಟ್ವಿಟ್ಟರ್‌ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರೊಂದಿಗೆ ಫೇಸ್‍ಬುಕ್ ಮತ್ತು ಯೂಟ್ಯೂಬ್ ನಡುವೆಯೂ ಆಗಾಗ ತಿಕ್ಕಾಟ ನಡೆಯುತ್ತಿದೆ. 

    ಈ ಹಿಂದೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಖಾತೆಗಳ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರ ಟ್ವಿಟ್ಟರ್‌ರ್‌ಗೆ ಹೇಳಿತ್ತು. ಆದರೆ ಟ್ವಿಟ್ಟರ್‌ ಸರ್ಕಾರ ಹೇಳಿದ ಆದೇಶಗಳನ್ನು ಸಂಪೂರ್ಣವಾಗಿ ಅನುಸರಿಸಲು ನಿರಾಕರಿಸಿತ್ತು. ಇದರಿಂದ ಟ್ವಿಟ್ಟರ್‌ ಭಾರತದಲ್ಲಿ ಹಿನ್ನಡೆಯನ್ನು ಕೂಡ ಅನುಭವಿಸುತ್ತಿದೆ.

    ಏನಿದು ಮಾಹಿತಿ ತಂತ್ರಜ್ಞಾನ ಕಾಯ್ದೆ – 2021

    ಮಾಹಿತಿ ತಂತ್ರಜ್ಞಾನ ಕಾಯ್ದೆ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆಯಾಗಿದೆ. 2021 ಭಾರತ ಸರ್ಕಾರ ಇದನ್ನು ತಿದ್ದುಪಡಿ ಮಾಡಿತು. 

    ಈ ಹೊಸ ನಿಯಮದ ಪ್ರಕಾರ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಕುಂದುಕೊರತೆ ನಿವಾರಣಾ ಕಚೇರಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಇದರ ಅನ್ವಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅಧಿಕಾರಿ ಮತ್ತು ಸಂಪರ್ಕ ಅಧಿಕಾರಿಯನ್ನು ನೇಮಿಸಬೇಕು. ಅವರು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24/7 ಸಂಪರ್ಕದಲ್ಲಿರಬೇಕು. ದಾಖಲಾದ ದೂರುಗಳನ್ನು ಅವರು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು.

    ಸಾಮಾಜಿಕ ಮಾಧ್ಯಮ ಬಳಕೆದಾರರ ಘನತೆಗೆ ವಿರುದ್ಧವಾಗಿ ದೂರುಗಳಿದ್ದರೆ, ನಿರ್ದಿಷ್ಟವಾಗಿ ಮಹಿಳೆಯರು – ವ್ಯಕ್ತಿಗಳ ಖಾಸಗಿ ಭಾಗಗಳು, ನಗ್ನತೆ ಅಥವಾ ಲೈಂಗಿಕ ಕ್ರಿಯೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ 24 ಗಂಟೆಗಳ ಒಳಗೆ  ಅಂತಹ ವಿಷಯವನ್ನು ತೆಗೆದುಹಾಕಬೇಕು. ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವೀಕರಿಸಿದ ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಮಾಸಿಕ ವರದಿಯನ್ನು ಸಲ್ಲಿಸಬೇಕು.

    ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣವಿರುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಣ ಸಂಸ್ಥೆ, ಇದು ನಿವೃತ್ತ ನ್ಯಾಯಾಧೀಶರು ಅಥವಾ ಅಧಿಕಾರಿಗಳ ನೇತೃತ್ವ ವಹಿಸುತ್ತದೆ. ಇದರ ಜೊತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ ಇರಲಿದೆ. 

    50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು `ಉನ್ನತ ಸಾಮಾಜಿಕ ಮಾಧ್ಯಮಗಳು’ ಎಂದು ಪರಿಗಣಿಸಲಾಗುತ್ತದೆ. ಅವರು ನಿಯಮಗಳನ್ನು ಅನುಸರಿಸದಿದ್ದರೆ ನಿಷೇಧವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.

    ಮಾಹಿತಿ ತಂತ್ರಜ್ಞಾನ ಕಾಯಿದೆ – 2000

    ಇದು ಇ-ಕಾಮರ್ಸ್ ಮತ್ತು ಸೈಬರ್ ಕ್ರೈಮ್‍ಗಳ ಕುರಿತು ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನುಗಳನ್ನು ಹೊಂದಲು ಕಡ್ಡಾಯವಾಯಿತು. ಇದರ ನಂತರ ಭಾರತ ಸರ್ಕಾರ 2000 ರಲ್ಲಿ ಐಟಿ ಕಾಯ್ದೆಯನ್ನು ಅಂಗೀಕರಿಸಿತು. ಭಾರತವು ಸೈಬರ್ ಅಪರಾಧಗಳಿಗೆ ಕಾನೂನನ್ನು ಅಂಗೀಕರಿಸಿದ ವಿಶ್ವದ 12 ನೇ ರಾಷ್ಟ್ರವಾಯಿತು.

    ಈ ಕಾಯಿದೆಯ ಮುಖ್ಯ ಉದ್ದೇಶ:

    ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ಎಲ್ಲಾ ವಹಿವಾಟುಗಳನ್ನು ರಕ್ಷಿಸುವುದು. ಯಾವುದೇ ರೀತಿಯ ಕಾನೂನು ದೃಢೀಕರಣಕ್ಕಾಗಿ ಬಳಸಲಾಗುವ ಡಿಜಿಟಲ್ ಸಹಿಗಳನ್ನು ಗುರುತಿಸುವುದು. ಸೈಬರ್ ವಿಚಾರವಾಗಿ ಮದ್ಯವರ್ತಿಗಳ ನಿಯಂತ್ರಣ ಮತ್ತು ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್

    747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್

    ನವದೆಹಲಿ: ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 747 ವೆಬ್‌ಸೈಟ್‌ಗಳು, 94 ಯೂಟ್ಯೂಬ್ ಚಾನೆಲ್ ಹಾಗೂ 19 ಸಾಮಾಜಿಕ ಮಾಧ್ಯಮದ ಖಾತೆಗಳ ಮೇಲೆ ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ನಿರ್ಬಂಧ ಹೇರಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

    ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಂಬಂಧಿತ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಸತ್ಯ ಶೋಧನಾ ಘಟಕವನ್ನು 2020ರ ಮಾರ್ಚ್ 31 ರಂದು ಸ್ಥಾಪಿಸಲಾಗಿದೆ. ಇದು 875 ಸುಳ್ಳು ಸುದ್ದಿ ಹರಡುವ ಪೋಸ್ಟ್‌ಗಳ ಸತ್ಯಾಂಶ ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

    ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್ 69A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಇನ್ನೂ ಕೇಸ್ ದಾಖಲಿಸುತ್ತಿರುವುದು ಆಘಾತಕಾರಿ – ಸುಪ್ರೀಂಕೋರ್ಟ್

    ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಇನ್ನೂ ಕೇಸ್ ದಾಖಲಿಸುತ್ತಿರುವುದು ಆಘಾತಕಾರಿ – ಸುಪ್ರೀಂಕೋರ್ಟ್

    – ಕೇಂದ್ರಕ್ಕೆ ನೋಟಿಸ್ ನೀಡಿದ ಸುಪ್ರೀಂ

    ನವದೆಹಲಿ: ಅಸಿಂಧುಗೊಳಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಪೊಲೀಸರು ಇನ್ನೂ ಪ್ರಕರಣಗಳನ್ನು ದಾಖಲಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿದೆ.

    2015 ಮಾರ್ಚ್ ನಲ್ಲಿ ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದ ಕಾನೂನು ಅಡಿ ಪೊಲೀಸರು ದಾಖಲಿಸುತ್ತಿದ್ದ ದೂರುಗಳನ್ನು ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಆತಂಕ ವ್ಯಕ್ತಪಡಿಸಿತು.

    ಈ ಕಾನೂನು ರದ್ದುಪಡಿಸುವ ಮುನ್ನ ದೇಶದ್ಯಾಂತ 687 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಈ ಕಾನೂನು ರದ್ದಾದ ಬಳಿಕ ಪೊಲೀಸರು 1,307 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಎನ್‍ಜಿಓ ಪರವಾಗಿ ಸಂಜಯ್ ಪಾರಿಖ್ ವಾದ ಮಂಡಿಸಿದರು.

    ವಿಚಾರಣೆ ವೇಳೆ ಮಾಹಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ದೇಶಾದ್ಯಂತ ಪೊಲೀಸರು ಇನ್ನೂ ಪ್ರಕರಣಗಳನ್ನು ದಾಖಲಿಸುತ್ತಿರುವುದು ಆಘಾತಕಾರಿ, ದುಃಖಕರ ಮತ್ತು ಆಶ್ಚರ್ಯಕರವಾಗಿದೆ ಎಂದು ಹೇಳಿದೆ.

    ಇದೇ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಈ ಕಾನೂನು ಬಳಕೆಯ ಕೆಳಗೆ ಸುಪ್ರೀಂಕೋರ್ಟ್ ಈ ಕಾನೂನು ಅಸಿಂಧುಗೊಳಿಸಿರುವ ಬಗ್ಗೆ ಚಿಕ್ಕದಾದ ಅಡಿ ಟಿಪ್ಪಣಿ ಬರೆದಿರಲಾಗಿರುತ್ತದೆ. ಆದರೆ ಅದನ್ನು ಪೊಲೀಸರು ಗಮನಿಸುವುದಿಲ್ಲ ಎಂದು ಹೇಳಿದ್ದಾರೆ.

    ವಾದ ಆಲಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾವು ಈ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟರೆ ಪರಿಹಾರ ನೀಡಿ – ಸುಪ್ರೀಂ ಮಹತ್ವದ ಆದೇಶ

    ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೊಸ್ಟ್ ಹಾಕುವ ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಕಾನೂನು ಸೂಚಿಸುತ್ತದೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಲು ಅರ್ಹರು: ಸುಪ್ರೀಂ ಕೋರ್ಟ್

  • ಫೇಕ್ ನ್ಯೂಸ್‍ಗಳಿಗೆ ಕಡಿವಾಣ-ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

    ಫೇಕ್ ನ್ಯೂಸ್‍ಗಳಿಗೆ ಕಡಿವಾಣ-ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

    ನವದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಅನಧಿಕೃತ ಪೋಸ್ಟ್ ಗಳ ಹಾವಳಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ.

    ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಶೀಘ್ರ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಈ ಮೂಲಕ ಮಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್, ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿನ ಕಾನೂನು ಬಾಹಿರ ಪೋಸ್ಟ್ ಗಳಿಗೆ ಕಡಿವಾಣ ಹಾಕಲು ಚಿಂತಿಸಿದೆ. ಸುಳ್ಳು ಸುದ್ದಿ, ಪೋಸ್ಟ್‍ಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡುವುದು ಮಾತ್ರವಲ್ಲದೆ, ಪೋಸ್ಟ್ ಮಾಡಿದ ಮೂಲ ವ್ಯಕ್ತಿಯನ್ನು ಪತ್ತೆ ಹಚ್ಚಲು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ.

    ಮಾರ್ಗಸೂಚಿ ಸಿದ್ಧ: ಕಾಯ್ದೆ ತಿದ್ದುಪಡಿ ಕುರಿತು ಈಗಾಗಲೇ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಸರ್ಕಾರ ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶ ನೀಡಿತ್ತು. ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಐಟಿ ಕಾಯ್ದೆಯ ಕರಡು ತಿದ್ದುಪಡಿಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅಭಿಪ್ರಾಯ ಸಂಗ್ರಹದ ನಂತರ ಸಂದೇಶ ಕಳುಹಿಸಿದ ಮೂಲ ವ್ಯಕ್ತಿಯನ್ನು ಟ್ರೇಸ್ ಮಾಡುವುದು ಹಾಗೂ ಕಾನೂನು ಬಾಹಿರ ಪೋಸ್ಟ್‍ಗಳನ್ನು 24 ಗಂಟೆಗಳಲ್ಲಿ ಜಾಲತಾಣದಿಂದ ತೆಗೆದು ಹಾಕುವುದರ ಕುರಿತು ಕರಡು ನಿಯಮಗಳನ್ನು ಸಲ್ಲಿಸಲಾಗಿದೆ.

    ತಿದ್ದುಪಡಿಗೆ ವಿರೋಧ: ಕರಡು ನಿಯಮಗಳ ಕುರಿತು ಕೆಲ ತಜ್ಞರು ಪೋಸ್ಟ್, ಸಂದೇಶಗಳ ಮೇಲೆ ‘ನಿಗಾ ವಹಿಸುಸುವ ಹಾಗೂ ಸೆನ್ಸಾರ್‍ಶಿಪ್’ (“Surveillance And Censorship”) ಭಯದ ಕುರಿತು ಟೀಕೆ ವ್ಯಕ್ತವಾಗಿವೆ. ಅಲ್ಲದೆ, ಪೋಸ್ಟ್‍ನ ಮೂಲವನ್ನು ಪತ್ತೆ ಹಚ್ಚುವ ವಿಷಯದಲ್ಲಿ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

    2018ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಕಲಿ ಸುದ್ದಿಗಳಿಂದ ಹಲವಾರು ಸಾವು-ನೋವುಗಳು ಸಂಭವಿಸಿವೆ ಎಂಬುದು ಸರ್ಕಾರದ ವಾದವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಚಟುವಟಿಕೆ, ಅಶ್ಲೀಲ ವಿಷಯಗಳ ಪ್ರಸಾರ, ಸುಳ್ಳು ಸುದ್ದಿಗಳನ್ನು ಹರಡುವುದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸೇರಿದಂತೆ ವಿವಿಧ ರೀತಿಯ ಅಕ್ರಮಗಳನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳು ಸವಾಲಾಗಿ ಪರಿಣಮಿಸಿವೆ ಎಂದು ಸರ್ಕಾರ ವಿವರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಐಟಿ ಕಾಯ್ದೆಯ ಸೆಕ್ಷನ್ 66(ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳೇ ಜೈಲಿಗೆ- ಸುಪ್ರೀಂ

    ಐಟಿ ಕಾಯ್ದೆಯ ಸೆಕ್ಷನ್ 66(ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳೇ ಜೈಲಿಗೆ- ಸುಪ್ರೀಂ

    ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ 66 (ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

    ಪ್ರಕರಣವೊಂದರ ವಿಚಾರಣೆ ವೇಳೆ ಈ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಎ) ತೆಗೆದು ಹಾಕಲಾಗಿದೆ. ಆದರೆ ಅಧಿಕಾರಿಗಳು ಈ ಸೆಕ್ಷನ್ ಅನ್ವಯವೇ ದೂರು ದಾಖಲಿಸುತ್ತಾರೆ. ಇದು ಅಸಂವಿಧಾನಿಕವಾಗಿದ್ದು, 22 ಮಂದಿ ಮೇಲೆ ಈ ಪ್ರಕರಣದ ಅಡಿ ದೂರು ದಾಖಲಿಸಲಾಗಿದೆ ಎಂದು ಹೇ

    ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಜಸ್ಟಿಸ್ ರೋಹಿಂಟನ್ ನಾರಿಮನ್ ಮತ್ತು ವಿನೀತ್ ಸರನ್ ಅವರ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೆಕ್ಷನ್ 66 (ಎ) ಅಡಿ ಬಂಧನ ಆಗುತ್ತಿರುವುದು ಶಾಕಿಂಗ್ ಸಂಗತಿಯಾಗಿದ್ದು, ಈ ನಿಯಮದ ಅಡಿ ಬಂಧನ ಮಾಡಲು ಸೂಚಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಅವರನ್ನು ಜೈಲಿಗೆ ಕೂಡ ಕಳುಹಿಸಲಾಗುವುದು ಎಂದು ನ್ಯಾಯ ಪೀಠ ಹೇಳಿದೆ.

    ಸೆಕ್ಷನ್ 66 (ಎ) ಅಡಿ ಬಂಧನವಾಗುತ್ತಿರುವ ಕುರಿತು ಸಿವಿಲ್ ಲಿಬರ್ಟಿಸ್ ಫರ್ ಪೀಪಲ್ಸ್ ಯೂನಿಯನ್ (ಪಿಯುಸಿಎಲ್) ಎಂಬ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ ಕೇಂದ್ರ ಅಪರಾಧ ದಳ ನೀಡಿರುವ ಮಾಹಿತಿ ಆಧಾರಿಸಿ ಕ್ರಮಕೈಗೊಳ್ಳುವಂತೆ ಕೋರಿತ್ತು.

    ಏನಿದು ಸೆಕ್ಷನ್ 66 (ಎ): ಪರರನ್ನು ನಿಂದಿಸುವುದು, ಸುಳ್ಳು ಸುದ್ದಿ ಹರಡುವುದು, 3ನೇ ವ್ಯಕ್ತಿಯ ವಯಕ್ತಿಕ ಮಾಹಿತಿಗೆ ಧಕ್ಕೆ ಉಂಟು ಮಾಡುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕ್ರಮಕೈಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ಹಿಂದೆ ಮುಂಬೈನಲ್ಲಿ ಬಾಳ ಠಾಕ್ರೆ ನಿಧನರಾದ ಸಮಯದಲ್ಲಿ ಬಂದ್ ಘೋಷಣೆ ಮಾಡಲಾಗಿತ್ತು. ಬಂದ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಇದನ್ನು ಮತ್ತೊಬ್ಬ ಯುವತಿ ಲೈಕ್ ಮಾಡಿ ಬಂದ್ ಮಾಡುವುದನ್ನ ಪ್ರಶ್ನಿಸಿದ್ದರು. ಪರಿಣಾಮ ಇಬ್ಬರ ಮೇಲೂ ದೂರು ದಾಖಲಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಘಟನೆ ನಡೆದ ಬಳಿಕ 66 (ಎ) ನಿಯಮದ ಬಗ್ಗೆ ಭಾರೀ ಮಟ್ಟದಲ್ಲಿ ಚರ್ಚೆ ನಡೆದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ ಬಳಿಕ ಕೇಂದ್ರ ಸರಕಾರ ಈ ಕಾನೂನಿಗೆ ತಿದ್ದುಪಡಿ ತಂದಿತ್ತು. ಆದರೆ ಕಾನೂನು ತಿದ್ದುಪಡಿಯಾದ ಮೇಲೂ ಇದೇ ನಿಯಮದ ಅಡಿ ಹಲವರ ಬಂಧನವಾಗಿತ್ತು.

    ವ್ಯಂಗ್ಯ ಚಿತ್ರಕಾರ ಅಸೀಮ್ ತ್ರಿವೇದಿ ಬಂಧನ ಕೂಡ ಇದೇ ಸೆಕ್ಷನ್ ಅಡಿಯಲ್ಲಿ ಮಾಡಲಾಗಿತ್ತು. ಈ ವೇಳೆ ಅವರ ಬಂಧನ ವಿರೋಧಿಸಿ ದೇಶಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಮಹಾರಾಷ್ಟ್ರ ಸರ್ಕಾರ ಅವರ ಮೇಲಿನ ಪ್ರಕರಣವನ್ನು ಕೈ ಬಿಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv