Tag: ಮಾಹಾರಾಷ್ಟ್ರ

  • ಮಧ್ಯಪ್ರದೇಶದ ವೈರಸ್‍ಗೆ ಮಹಾರಾಷ್ಟ್ರಕ್ಕೆ ಪ್ರವೇಶವಿಲ್ಲ: ಶಿವಸೇನೆ

    ಮಧ್ಯಪ್ರದೇಶದ ವೈರಸ್‍ಗೆ ಮಹಾರಾಷ್ಟ್ರಕ್ಕೆ ಪ್ರವೇಶವಿಲ್ಲ: ಶಿವಸೇನೆ

    -ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಎಂದ ರಾವತ್

    ಮುಂಬೈ: ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

    ಶಿವಸೇನೆಯ ಮುಖ್ಯಸ್ಥ, ಸಿಎಂ ಉದ್ಧವ್ ಠಾಕ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಂದಲೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಕೆಲವರು ನಮ್ಮ ಮೈತ್ರಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ)ಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ನಾವು ತಡೆಯಲ್ಲ ಎಂದು ಪರೋಕ್ಷವಾಗಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.

    ಮಧ್ಯಪ್ರದೇಶದ ಸಿಎಂ ಕಮಲನಾಥ್ ವಿಶ್ವಾಸಮತ ಸಾಬೀತು ಪಡಿಸಬಹುದು. ವಿಶ್ವಾಸಮತ ಯಾಚನೆಗೂ ಮುನ್ನ ಸರ್ಕಾರ ಇರುತ್ತಾ ಅಥವಾ ಇಲ್ವಾ ಎಂಬುದರ ಬಗ್ಗೆ ಹೇಳಲಾರೆ. ಮೊದಲು ವಿಶ್ವಾಸಮತ ಸಾಬೀತು ಆಗಲಿ ಎಂದರು.

    ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಅದು ಕಾಂಗ್ರೆಸ್ ಆಂತರಿಕ ವಿಷಯ. ಸಿಂಧಿಯಾ ರಾಜೀನಾಮೆಯನ್ನು ಬಿಜೆಪಿ ಸಾಧನೆ ಎಂದು ತೆಗೆದುಕೊಳ್ಳಬಾರದು. ಸಿಂಧಿಯಾ ರಾಜೀನಾಮೆ ಹಿಂಪಡೆದುಕೊಳ್ಳುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇನ್ನು ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ. 100 ದಿನಗಳ ಹಿಂದೆ ಬಿಜೆಪಿ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮಾಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಯಾವುದೇ ಬೈಪಾಸ್ ಸರ್ಜರಿಯೂ ನಡೆಯಲ್ಲ. ಮಹಾರಾಷ್ಟ್ರದ ಜನತೆ ನಮ್ಮ ಸರ್ಕಾರವನ್ನು ರಕ್ಷಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಹಾ ಮೈತ್ರಿಯಲ್ಲೂ ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ಸಾಧ್ಯತೆ

    ಮಹಾ ಮೈತ್ರಿಯಲ್ಲೂ ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ಸಾಧ್ಯತೆ

    – ಸಹೋದರನನ್ನು ಅಪ್ಪಿ ಸ್ವಾಗತಿಸಿದ ಸುಪ್ರಿಯಾ ಸುಳೆ

    ಮುಂಬೈ: ಮಹಾರಾಷ್ಟ್ರ ರಾಜಕೀಯ ಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎನ್‍ಸಿಪಿ ನಾಯಕ ಅಜಿತ್ ಪವಾರ್ ಡಿಸಿಎಂ ಹುದ್ದೆಗೆ ರಾಜಿನಾಮೆ ನೀಡಿ ಹೊರ ಬಂದ ಬೆನ್ನಲ್ಲೇ ಇದೀಗ ಮಹಾ ಮೈತ್ರಿ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿ ಗದ್ದುಗೆಯನ್ನೇ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾಜಕೀಯ ಹೈ ಡ್ರಾಮಾ ನಂತರ ಶಿವ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸಿದ್ದಾರೆ.

    ಬಿಜೆಪಿ ಜೊತೆ ಕೈ ಜೋಡಿಸಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬ ಹಾಗೂ ಪಕ್ಷ ಒಡೆದು ಹೋಗಿದೆ ಎಂದು ಪೋಸ್ಟ್ ಮಾಡಿದ್ದ ಅಜಿತ್ ಪವಾರ್ ಸಹೋದರಿ ಸುಪ್ರಿಯಾ ಸುಳೆ ಸಹ ಅಜಿತ್ ಅವರನ್ನು ಅಪ್ಪಿಕೊಂಡಿದ್ದಾರೆ. ಶರದ್ ಪವಾರ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದೆ ಎಂದು ತೋರಿಸಲು ಅಜಿತ್ ಪವಾರ್ ಮರಳಿ ಎನ್‍ಸಿಪಿ ಗೂಡಿಗೆ ಬರುತ್ತಿದ್ದಂತೆ ಅವರನ್ನು ತಬ್ಬಿಕೊಂಡು ಸ್ವಾಗತಿಸಿದ್ದಾರೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮಹಾ ಮೈತ್ರಿಯಲ್ಲಿಯೂ ಸಹ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮಂಗಳವಾರವಷ್ಟೇ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ನಾಯಕರು ‘ಮಹಾ ವಿಕಾಸ್ ಅಘಾಡಿ’ ಹೆಸರಿನಲ್ಲಿ ಮೈತ್ರಿ ಸರ್ಕಾರ ರಚಿಸಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿಯಾ ಬಳಿ ಅವಕಾಶ ಕೇಳಿದ್ದರು. ರಾಜ್ಯಪಾಲರು ಅವಕಾಶ ನೀಡಿದ ನಂತರ ಇದೀಗ ಸರ್ಕಾರ ರಚಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ.

    ಮಂಗಳವಾರವಾಷ್ಟೇ ಸುಪ್ರೀಂ ಕೋರ್ಟ್ ಬಿಜೆಪಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಎನ್‍ಸಿಪಿಯ ಸಜಿತ್ ಪವಾರ್ ಮೈತ್ರಿಗೆ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತ್ತು. ಆದೇಶದ ಬೆನ್ನಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವಿಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದರು.

    ಇಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದ್ದು, ಹಂಗಾಮಿ ಸ್ಪೀಕರ್ ಕಾಳಿದಾಸ್ ಕೋಲಂಬ್ಕರ್ ಅವರು ಶಾಸಕರಿಗೆ ಪ್ರಮಾಣ ಬೋಧಿಸಲಿದ್ದಾರೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

  • ರಾಹುಲ್ ನೀಡಿದ ಪರೀಕ್ಷೆಯಲ್ಲಿ ಪಾಸ್ ಆಗ್ತೀನಿ: ಮಲ್ಲಿಕಾರ್ಜುನ ಖರ್ಗೆ

    ರಾಹುಲ್ ನೀಡಿದ ಪರೀಕ್ಷೆಯಲ್ಲಿ ಪಾಸ್ ಆಗ್ತೀನಿ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಮಹಾರಾಷ್ಟ್ರ ಉಸ್ತುವಾರಿಯಾಗಿ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ. ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಅಂದ್ರು. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೆನೆ. ಅವರು ನೀಡಿರುವ ಪರೀಕ್ಷೆಯಲ್ಲಿ ಪಾಸ್ ಆಗುವ ಭರವಸೆ ಇದೆ ಎಂದರು.

    ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸಿ ಚುನಾವಣಾ ದೃಷ್ಟಿಯಿಂದ ಸಂಘಟನೆಯತ್ತೆ ಗಮನ ಹರಿಸಲಾಗುವುದು. ಹೈಕಮಾಂಡ್ ಕೆಲವು ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಪಾಲಿಸ್ತಿನಿ. ಈ ಹಿಂದೆ ನಾಲ್ಕು ಬಾರಿ ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸಿದ್ದೀನಿ. ಎಲ್ಲ ನಾಯಕರನ್ನು ಒಗ್ಗೂಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಲಾಗುವುದು ಅಂತ ಹೇಳಿದರು.

    ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದೇನೆ. ಭೇಟಿಯಾಗಿ ಅವರ ಜತೆ ಮಾತಕತೆ ನಡೆಸುತ್ತೇನೆ. ವಿಡಿಯೋ ಬಗ್ಗೆ ವಿಶೇಷ ಮಾಹಿತಿ ಇಲ್ಲ. ನಾನೂ ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ವಿಡಿಯೋವನ್ನು ತಿರುಚಿರುವ ಸಾಧ್ಯತೆ ಇದೆ. ನಿಜವಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೋ ಅವರನ್ನೇ ಕೇಳಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಗಮನಿಸುತ್ತಿದೆ ಅಂತ ಅವರು ತಿಳಿಸಿದ್ರು.