Tag: ಮಾಸ್ಟರ್ ಕಾರ್ಡ್

  • ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡ ಮಾಸ್ಟರ್ ಕಾರ್ಡ್

    ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡ ಮಾಸ್ಟರ್ ಕಾರ್ಡ್

    ಮುಂಬೈ: ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್ ಕಾರ್ಡ್ ಟೀಂ ಇಂಡಿಯಾದ ಶೀರ್ಷಿಕೆ ಪ್ರಾಯೋಜಕತ್ವ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.

    ಶೀರ್ಷಿಕೆ ಪ್ರಯೋಜಕವಾಗಿದ್ದ ಪೇಟಿಎಂನ 7 ವರ್ಷಗಳ ಒಪ್ಪಂದ ಕೊನೆಗೊಂಡಿದೆ. ಇದೀಗ ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‍ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಬಿಸಿಸಿಐ ಆಯೋಜಿಸುವ ಮಹಿಳಾ ಮತ್ತು ಪುರುಷ ತಂಡಗಳ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ರಣಜಿ ಟ್ರೋಫಿಯಂತಹ ದೇಸಿಯ ಕ್ರಿಕೆಟ್ ಪಂದ್ಯಗಳು ಮತ್ತು ಭಾರತದಲ್ಲಿ ನಡೆಯುವ ಎಲ್ಲಾ ಜೂನಿಯರ್ ಕ್ರಿಕೆಟ್ (19 ವರ್ಷದೊಳಗಿನ ಮತ್ತು 23 ವರ್ಷದೊಳಗಿನ) ಪಂದ್ಯಗಳಿಗೂ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕ ಮಾಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಅರ್ಶ್‌ದೀಪ್‌ ಪೇಜ್‌ ಎಡಿಟ್‌ – ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಕೇಂದ್ರ

    7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. 2023ರ ವರೆಗೆ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಇರಲಿದೆ. 2019ರ ಆಗಸ್ಟ್‍ನಲ್ಲಿ ಬಿಸಿಸಿಐ ಜೊತೆಗೆ ಪೇಟಿಎಂ ಶೀರ್ಷಿಕೆ ಪ್ರಯೋಜಕತ್ವದ ಹಕ್ಕನ್ನು ಮುಂದಿನ 4 ವರ್ಷಕ್ಕೆ ನವೀಕರಣಗೊಳಿಸಿತ್ತು. ಮುಂದಿನ ನಾಲ್ಕು ವರ್ಷದ ಪ್ರಯೋಜಕತ್ವದ ಹಕ್ಕನ್ನು 3.80 ಕೋಟಿ ರೂ.ಗೆ ಪೇಟಿಎಂ ತನ್ನದಾಗಿಸಿಕೊಂಡಿತ್ತು. ಪೇಟಿಎಂ 2015 ರಿಂದ 2019ರ ವರಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐನಿಂದ 2.4 ಕೋಟಿ ರೂ. ನೀಡಿ ಖರೀದಿತ್ತು. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಮಾಸ್ಟರ್ ಕಾರ್ಡ್ ಪ್ರಯೋಜಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಇದನ್ನೂ ಓದಿ: ನೋವಿನಲ್ಲೂ ಆಡಿ ಪಾಕ್ ಗೆಲ್ಲಿಸಿದ ರಿಜ್ವಾನ್ – ಪಂದ್ಯದ ಬಳಿಕ MRI ಸ್ಕ್ಯಾನ್

    ನಾಲ್ಕು ವರ್ಷಗಳಿಂದ ಮಾಸ್ಟರ್ ಕಾರ್ಡ್‌ನ ರಾಯಭಾರಿಯಾಗಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

    Live Tv
    [brid partner=56869869 player=32851 video=960834 autoplay=true]

  • ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

    ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

    ಮುಂಬೈ: ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್ ಕಾರ್ಡ್ ಟೀಂ ಇಂಡಿಯಾದ ಶೀರ್ಷಿಕೆ ಪ್ರಾಯೋಜಕ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ.

    ಶೀರ್ಷಿಕೆ ಪ್ರಯೋಜಕವಾಗಿದ್ದ ಪೇಟಿಎಂನ 7 ವರ್ಷಗಳ ಒಪ್ಪಂದ ಕೊನೆಗೊಂಡಿದೆ. ಇದೀಗ ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‍ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ. ಇದನ್ನೂ ಓದಿ: ಇಂದು ಮೂರನೇ ಏಕದಿನ ಪಂದ್ಯ – ಭಾರತದ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ

    7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. 2023ರ ವರೆಗೆ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕತ್ವ ಮಾಡಲಿದೆ ಎಂದು ಮೂಲಗಳು ವರದಿಯಾಗಿದೆ. ಪ್ರಯೋಜಕತ್ವದ ಹಕ್ಕನ್ನು ಮುಂದಿನ 10 ದಿನಗಳಲ್ಲಿ ಪೇಟಿಎಂ, ಮಾಸ್ಟರ್ ಕಾರ್ಡ್‍ಗೆ ವರ್ಗಾಹಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    2019ರ ಆಗಸ್ಟ್‌ನಲ್ಲಿ ಬಿಸಿಸಿಐ ಜೊತೆಗೆ ಪೇಟಿಎಂ ಶೀರ್ಷಿಕೆ ಪ್ರಯೋಜಕತ್ವದ ಹಕ್ಕನ್ನು ಮುಂದಿನ 4 ವರ್ಷಕ್ಕೆ ನವೀಕರಣಗೊಳಿಸಿತ್ತು. ಮುಂದಿನ ನಾಲ್ಕು ವರ್ಷದ ಪ್ರಯೋಜಕತ್ವದ ಹಕ್ಕನ್ನು 3.80 ಕೋಟಿ ರೂ.ಗೆ ಪೇಟಿಎಂ ತನ್ನದಾಗಿಸಿಕೊಂಡಿತ್ತು. ಪೇಟಿಎಂ 2015 ರಿಂದ 2019ರ ವರಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐನಿಂದ 2.4 ಕೋಟಿ ರೂ. ನೀಡಿ ಖರೀದಿತ್ತು. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಭಾರತ ತಂಡ ಹೊಸ ಪ್ರಯೋಜಕತ್ವದೊಂದಿಗೆ ಆಡುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ಮಾಸ್ಕೋ: ಯುಎಸ್‌ ಪಾವತಿ ಕಾರ್ಡ್‌ ಸಂಸ್ಥೆಗಳಾದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ತಮ್ಮ ನೆಟ್‌ವರ್ಕ್‌ನಿಂದ ರಷ್ಯಾದ ಹಣಕಾಸು ಸಂಸ್ಥೆಗಳನ್ನು ನಿರ್ಬಂಧಿಸಿವೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸುತ್ತಿದೆ.

    ಸೋಮವಾರದಿಂದಲೇ ಈ ನಿರ್ಬಂಧ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮಾನವೀಯ ಸಹಾಯಕ್ಕಾಗಿ 15.14 ಕೋಟಿ (2 ಮಿಲಿಯನ್‌ ಡಾಲರ್)‌ ದೇಣಿಗೆ ನೀಡುವುದಾಗಿ ವೀಸಾ ಸ್ಪಷ್ಟಪಡಿಸಿದೆ. ಮಾಸ್ಟರ್‌ ಕಾರ್ಡ್‌ ಕೂಡ 15.14 ಕೋಟಿ ರೂ. ಕೊಡುಗೆ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಸರ್ಕಾರದ ನಿರ್ಬಂಧಗಳ ಪ್ರಕಾರ ವಿಶೇಷವಾಗಿ ಗೊತ್ತುಪಡಿಸಿದ ರಾಷ್ಟ್ರದ್ದು ಎಂದು ಪಟ್ಟಿ ಮಾಡಲಾದ ಘಟಗಳಿಗೆ ವೀಸಾ ತನ್ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಅಮಾನತುಗೊಳಿಸಿದೆ. ರಷ್ಯಾದ ಕೇಂದ್ರ ಬ್ಯಾಂಕ್‌ ಮತ್ತು ಎರಡನೇ ಅತಿ ದೊಡ್ಡ ಸಾಲದಾತ ವಿಟಿಬಿ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಯುಎಸ್‌, ಬ್ರಿಟನ್‌, ಯೂರೋಪ್‌ ಮತ್ತು ಕೆನಡಾ ದೇಶಗಳು ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಶನಿವಾರವೂ ಘೋಷಿಸಿವೆ.

    ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ ಕಾರ್ಡ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು, ಬ್ಯಾಂಕ್‌ಗಳು ನಗದು ಹಿಂಪಡೆಯುವಿಕೆಯನ್ನು ಮಿತಿಗೊಳಿಸಬಹುದು ಎಂದು ಆತಂಕದಲ್ಲಿ ರಷ್ಯನ್ನರು ಎಟಿಎಂಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಎಟಿಎಂಗಳ ಮುಂದೆ ರಷ್ಯನ್ನರ ಉದ್ದದ ಕ್ಯೂ ಇದ್ದ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ರಷ್ಯಾ ಕಳೆದ ವಾರ ಉಕ್ರೇನ್‌ ಮೇಲೆ ಯುದ್ಧವನ್ನು ಸಾರಿತು. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅನೇಕ ಪಾಶ್ಚಿಮಾತ್ಯ ಬ್ಯಾಂಕ್‌ಗಳು, ವಿಮಾನಯಾನ ಸಂಸ್ಥೆಗಳು ರಷ್ಯಾದೊಂದಿಗೆ ಸಂಬಂಧವನ್ನು ಕಡಿತಗೊಳಿಸಿವೆ. ರಷ್ಯಾದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ವಿರೋಧಿಸಿವೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

  • ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾದ ಮೂಲಕ ರುಪೇ ಕಾರ್ಡನ್ನು ಭಾರತದಾದ್ಯಂತ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗುತ್ತಿದೆ ಎಂದು ಮಾಸ್ಟರ್ ಕಾರ್ಡ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ.

    ಗ್ರಾಹಕರು, ಹಣಕಾಸು ಸಂಸ್ಥೆಗಳು ವ್ಯಾಪಾರಿಗಳ ಜೊತೆ ಸೇತುವೆಯಂತೆ ಕೆಲಸ ಮಾಡುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ನೀಡಿದ ದೂರಿನಲ್ಲಿ ಭಾರತದ ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ನಮ್ಮ ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಉಲ್ಲೇಖಿಸಿದೆ.

    ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉತ್ತೇಜಿಸುತ್ತಿರುವುದು ಸ್ವಾಗತಾರ್ಹ. ಆದರೆ ಅವರು ರಾಷ್ಟ್ರೀಯತೆ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಭಾರತದ ರುಪೇ ಕಾರ್ಡ್ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಭಾರತದಲ್ಲಿ ಹೆಚ್ಚು ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದಿದೆ.

    ಹೊಡೆತ ಹೇಗೆ?
    ಉದಾಹರಣೆಗೆ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಗ್ರಾಹಕ ತನ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸುತ್ತಾನೆ. ಗ್ರಾಹಕನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಅದರಲ್ಲಿ ಹಣ ಇದ್ದರೆ ಮಾತ್ರ ಆತನ ಬ್ಯಾಂಕಿನಿಂದ ಆನ್ ಲೈನ್ ಶಾಪಿಂಗ್ ತಾಣದ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಮಾಸ್ಟರ್ ಕಾರ್ಡ್ ನಂತಹ ಸಂಸ್ಥೆಗಳು ನಿರ್ವಹಿಸುತ್ತವೆ. ಇವುಗಳ ನಿರ್ವಹಣೆಗೆ ಬ್ಯಾಂಕ್ ಗಳಿಂದ ಶುಲ್ಕವನ್ನು ವಸೂಲಿ ಮಾಡುತ್ತವೆ. ರುಪೇ ಕಾರ್ಡ್ ಜಾರಿಗೆ ಬರುವುದಕ್ಕಿಂತ ಮೊದಲು ಬ್ಯಾಂಕ್ ಗಳ ಈ ಆನ್‍ಲೈನ್ ವ್ಯವಹಾರಕ್ಕೆ ಶುಲ್ಕ ಪಡೆಯುವ ಮೂಲಕ ವೀಸಾ ಹಾಗೂ ಮಾಸ್ಟರ್‌ಕಾರ್ಡ್ ಕಂಪೆನಿಗಳು ಲಾಭ ಪಡೆದುಕೊಳ್ಳುತ್ತಿದ್ದವು. ಈಗ ದೇಶದ ಹಲವು ಬ್ಯಾಂಕ್ ಗಳು ರುಪೇ ಕಾರ್ಡ್ ಗಳನ್ನು ನೀಡುತ್ತಿರುವ ಕಾರಣ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ಕಂಪೆನಿಗೆ ಭಾರೀ ಹೊಡೆತ ಬಿದ್ದಿದೆ.

    ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‍ಪಿಸಿಐ) ಸಂಸ್ಥೆ ರುಪೇ ಕಾರ್ಡನ್ನು ನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ನೀಡಬೇಕಾದ ಶುಲ್ಕ ಕಡಿಮೆ ಇದೆ. 2014ರಲ್ಲಿ ಭಾರತದಲ್ಲಿ ಜಾರಿಗೆ ಬಂದ ರುಪೇ ಕಾರ್ಡ್ ಈಗ ದೈತ್ಯ ವೀಸಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಮಾಹಿತಿಗಳ ಪ್ರಕಾರ ಭಾರತದ ಸುಮಾರು 50 ಕೋಟಿ ಗ್ರಾಹಕರು ರುಪೇ ಕಾರ್ಡ್ ಬಳಸುತ್ತಿದ್ದಾರೆ. ದೇಶದ ಕಾರ್ಡ್ ನೆಟ್‍ವರ್ಕ್ ಗಳ ಪೈಕಿ ರುಪೇ ಶೇ.56 ಪಾಲನ್ನು ಹೊಂದಿದೆ. ಜನಧನ್ ಖಾತೆಯನ್ನು ಹೊಂದಿದವರಿಗೆ ರುಪೇ ಕಾರ್ಡ್ ಗಳನ್ನು ನೀಡಲಾಗುತ್ತಿದೆ.

    ಮೋದಿ ಕರೆ ನೀಡಿದ್ದು ಏನು?
    ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡುತ್ತಲೇ ಇದ್ದಾರೆ. ಅಲ್ಲದೇ ಆನ್‍ಲೈನ್ ವಹಿವಾಟಿಗೆ ಸಂಬಂಧಪಟ್ಟಂತೆ ದೇಶೀಯ ರುಪೇ ಕಾರ್ಡ್ ಬಳುಸುವಂತೆ ಭಾರತೀಯರಲ್ಲಿ ಮನವಿಮಾಡಿಕೊಂಡಿದ್ದರು. ರುಪೇ ಕಾರ್ಡ್ ಬಳಸುವುದರಿಂದ ವಹಿವಾಟಿನ ಶುಲ್ಕಗಳು ಭಾರತದಲ್ಲೇ ಉಳಿಯಲಿದೆ. ಇದರಿಂದಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv