Tag: ಮಾಸ್ಕೊ

  • ಕೊರೊನಾ ಸೋಂಕು, ಸಾವು ಪ್ರಕರಣಗಳಲ್ಲಿ ಹೆಚ್ಚಳ- ರಷ್ಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ಜಾರಿ

    ಕೊರೊನಾ ಸೋಂಕು, ಸಾವು ಪ್ರಕರಣಗಳಲ್ಲಿ ಹೆಚ್ಚಳ- ರಷ್ಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ಜಾರಿ

    ಮಾಸ್ಕೊ: ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಇಂದಿನಿಂದ (ಅ.28) 11 ದಿನಗಳವರೆಗೆ ರಷ್ಯಾ ರಾಜಧಾನಿ (ಮಾಸ್ಕೊ)ಗೆ ಲಾಕ್‌ಡೌನ್‌ ಹೇರಲಾಗಿದೆ.

    LOCKDOWN

    ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿ, ರೆಸ್ಟೋರೆಂಟ್‌ ಹಾಗೂ ಶಾಲೆಗಳನ್ನು ತೆರೆಯದಂತೆ ಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಕೊರೊನಾ ಪಾಸಿಟಿವ್

    ಶಾಲೆಗಳು, ಶಿಶುವಿಹಾರಗಳ ಜೊತೆಗೆ ಚಿಲ್ಲರೆ ಮಾರಾಟ ಮಳಿಗೆಗಳು, ರೆಸ್ಟೋರೆಂಟ್‌ಗಳು, ಕ್ರೀಡಾ ಮತ್ತು ಮನರಂಜನಾ ಸ್ಥಳಗಳು ಸೇರಿದಂತೆ ಅಗತ್ಯವಲ್ಲದ ಸೇವೆಗಳನ್ನು ನವೆಂಬರ್‌ 7 ರವರೆಗೆ ಮುಚ್ಚಲಾಗುತ್ತದೆ.

    COVID

    ಆಹಾರ, ಔಷಧ ಮತ್ತು ಇತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಸಾವು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಈ ಕ್ರಮಕೈಗೊಂಡಿದೆ. ಇದನ್ನೂ ಓದಿ: ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್‌

    ರಷ್ಯಾದಲ್ಲಿ ಈವರೆಗೆ ಕೋವಿಡ್‌ನಿಂದ 2,33,898 ಮೃತಪಟ್ಟಿದ್ದಾರೆ. ಯೂರೋಪ್‌ನಲ್ಲೇ ಅತಿ ಹೆಚ್ಚು ಸಾವು ಪ್ರಕರಣಗಳು ರಷ್ಯಾದಲ್ಲಿ ವರದಿಯಾಗಿದೆ.

  • ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ಬ್ರೆಝಿಲ್ ತಂಡದ ಕನಸು ನೂಚ್ಚುನೂರಾಗಿದೆ. ಕಝಾನ್ ಅರೆನಾದಲ್ಲಿ ನಡೆದ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ 2-1 ಗೋಲುಗಳ ಅಂತರದಲ್ಲಿ ಬ್ರೆಝಿಲ್‍ಗೆ ಆಘಾತವಿಕ್ಕಿದ, ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ಸೆಮಿಫೈನಲ್ ಪ್ರವೇಶಿಸಿದೆ.

    ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ 13ನೇ ನಿಮಿಷದಲ್ಲಿ ಫೆರ್ನಾಂಡಿನೊ ನೀಡಿದ ಸೆಲ್ಫ್ ಗೋಲ್ ಬೆಲ್ಜಿಯಂಗೆ ವರವಾಯಿತು. ಬೆಲ್ಜಿಯಂನ ವಿನ್ಸೆಂಟ್ ಕೊಂಪನಿ ಕಾರ್ನರ್‍ನಿಂದ ಕಳುಹಿಸಿದ ಚೆಂಡನ್ನು ಹೆಡ್ ಮಾಡಲು ಜಂಪ್ ಮಾಡಿದ ಫೆರ್ನಾಂಡಿನೋ ತಮ್ಮ ತಂಡದ ಗೋಲು ಬಲೆಯೊಳಗೆ ಚೆಂಡನ್ನು ತಳ್ಳಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. ನಂತರದಲ್ಲೂ ಅಕ್ರಮಣಕಾರಿ ಆಟದ ತಂತ್ರದ ಮೊರೆ ಹೋದ ಬೆಲ್ಜಿಯಂ 31ನೇ ನಿಮಿಷದಲ್ಲಿ ಸ್ಟಾರ್ ಮಿಡ್‍ಫೀಲ್ಡರ್ ಕೆವಿನ್ ಡಿ ಬ್ರೂಯ್ನ್ ಮೂಲಕ ಮತ್ತೊಂದು ಗೋಲು ದಾಖಲಿಸಿ ಬ್ರೆಝಿಲ್‍ಗೆ ಡಬಲ್ ಶಾಕ್ ನೀಡಿತು. ನಾಯಕ ಹಝಾರ್ಡ್ ನೀಡಿದ ಪಾಸ್‍ಅನ್ನು ಡಿ ಬಾಕ್ಸ್‍ನ ಹೊರಭಾಗದಿಂದಲೇ ರಾಕೆಟ್ ವೇಗದಲ್ಲಿ ಗುರು ಮುಟ್ಟಿಸಿದ ಮ್ಯಾಂಚೆಸ್ಟರ್ ಸಿಟಿ ಆಟಗಾರ, ಬೆಲ್ಜಿಯಂ ಅಭಿಮಾನಿಗಳು ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿದರು. ಆ ಮೂಲಕ ಮೊದಲಾರ್ಧದಲ್ಲಿ ಬೆಲ್ಜಿಯಂ 2-0 ಅಂತರದ ಮುನ್ನಡೆ ದಾಖಲಿಸಿತ್ತು.

    ಪಂದ್ಯದ ದ್ವಿತೀಯಾರ್ಧದಲ್ಲಿ ನೇಮರ್, ಗೆಬ್ರಿಯಲ್ ಜೀಸಸ್, ಹಾಗೂ ವಿಲ್ಲನ್ ಅವರನ್ನು ಒಳಗೊಂಡ ಬ್ರಝಿಲ್ ಮುನ್ಪಡೆ ಆಟಗಾರರು ಬೆಲ್ಜಿಯಂ ರಕ್ಷಣಾ ಕೋಟೆಯನ್ನು ದಾಟಲು ಸತತ ಪ್ರಯತ್ನ ನಡೆಸಿದರು. 76ನೇ ನಿಮಿಷದಲ್ಲಿ ಕೊಟಿನ್ಹೊ ಪಾಸ್‍ನ್ನು ಹೆಡರ್ ಮೂಲಕ ಗುರು ಮುಟ್ಟಿಸಿದ ರೆನಟೊ ಆಗಸ್ಟೊ, ಬ್ರಝಿಲ್ ಪರ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

    ಬ್ರೆಝಿಲ್‍ಗೆ ತಡೆಗೋಡೆಯಾದ ಕಾಟ್ರೋಯ್: ಬ್ರಝಿಲ್ ವಿರುದ್ಧದ ಮಹತ್ವದ ಪಂದ್ಯ ಗೆಲ್ಲಲು ಬೆಲ್ಜಿಯಂಗೆ ನೆರವಾಗಿದ್ದು ಗೋಲ್‍ಕೀಪರ್ ಕಾಟ್ರೋಯ್ಸ್. ದ್ವಿತೀಯಾರ್ಧದಲ್ಲಿ 17 ಬಾರಿ ಗೋಲು ಬಲೆಯನ್ನು ಗುರಿಯಾಗಿಸಿದ ಬಂದ ಚೆಂಡನ್ನು 16 ಬಾರಿಯೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಚೆಲ್ಸಿಯಾ ಗೋಲ್ ಕೀಪರ್ ಬ್ರೆಝಿಲ್‍ನ ಎಲ್ಲಾ ಪ್ರಯತ್ನಗಳಿಗೂ ತಡೆಗೋಡೆಯಾದರು. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಸೆಣೆಸಲಿದೆ.

     

  • ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಮಾಸ್ಕೊ: ಪೆನಾಲ್ಟಿ ಶೂಟೌಟ್ ಕ್ಲೈಮಾಕ್ಸ್ ಕಂಡ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ, ಡ್ಯಾನಿಶ್ ಡೈನಮೈಟ್ ಖ್ಯಾತಿಯ ಡೆನ್ಮಾರ್ಕ್ ಸವಾಲನ್ನು ಮೀರಿ ನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

    ನೊವ್‍ಗರೊಡ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯ (15+15ನಿಮಿಷ)ದಲ್ಲೂ ಚೆಂಡು ಗೋಲು ಬಲೆ ದಾಟಲು ಉಭಯ ತಂಡಗಳ ಗೋಲು ಕೀಪರ್‍ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ 3 ಸ್ಪಾಟ್ ಕಿಕ್‍ಗಳಿಗೆ ತಡೆಗೋಡೆಯಾದ ಕ್ರೊಯೇಶಿಯಾದ ಡೆನಿಜೆಲ್ ಸುಬಾಸಿಕ್, 3-2ರ ಅಂತರದಲ್ಲಿ ಡೆನ್ಮಾರ್ಕ್ ವಿರುದ್ಧ ಗೆಲುವು ತಂದಿತ್ತು, ತಂಡವನ್ನು ಕ್ವಾರ್ಟರ್ ಫೈನಲ್ ಹಂತಕ್ಕೆ ಕೊಂಡೊಯ್ದರು.

    ಪಂದ್ಯ ಆರಂಭವಾಗಿ ಕೇವಲ 57ನೇ ಸೆಕೆಂಡ್‍ನಲ್ಲೇ ಕ್ರೊವೇಶಿಯಾದ ರಕ್ಷಣಾ ಗೋಡೆಯನ್ನು ಭೇದಿಸಿದ ಜಾರ್ಗೆನ್‍ಸನ್ ಡೆನ್ಮಾರ್ಕ್‍ಗೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಮುಂದಿನ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಶಿಯಾದ ಮಾರಿಯೊ ಮಂಡ್ಜುವಿ ಕ್ರೊವೇಶಿಯಾಗೆ ಸಮಬಲ ತಂದುಕೊಟ್ಟರು. ಹೀಗಾಗಿ ಪಂದ್ಯ ಆರಂಭವಾಗಿ ಕೇವಲ ನಾಲ್ಕು ನಿಮಿಷದ ಅಂತರದಲ್ಲಿ ಉಭಯ ತಂಡಗಳು ಗೋಲು ಗಳಿಸಿದ ಅಪರೂಪದ ದಾಖಲೆಯ ಕ್ಷಣಕ್ಕೆ ಪಂದ್ಯ ಸಾಕ್ಷಿಯಾಯಿತು.

    ಬಳಿಕ ಎರಡು ಗಂಟೆಗಳ ಕಾಲ ಉಭಯ ತಂಡಗಳ ಆಟಗಾರರು ನೊವ್‍ಗರೊಡ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸಿದರೂ ಗೋಲು ದಾಖಲಾಗಲಿಲ್ಲ. ಲೂಕಾ ಮಾಡ್ರಿಕ್, ಮಾರಿಯೋ ಮಾಂಡುಜುಕಿಕ್, ಇವಾನ್ ರಾಕೆಟಿಕ್, ಇವಾನ್ ಪೆರಿಸಿಕ್‍ರಂಥ ಸ್ಟಾರ್ ಆಟಗಾರರನ್ನು ಹೊಂದಿದ್ದ ಕ್ರೊವೇಷಿಯಾವನ್ನು, ಕೋಚ್ ಏಜ್ ಹರಾಯ್ಡ್ ಹೆಣೆದ ತಂತ್ರಗಳ ನೆರವಿನಿಂದ ಡೆನ್ಮಾರ್ಕ್ ಕಟ್ಟಿಹಾಕಿತು. ಹೆಚ್ಚುವರಿ ಅವಧಿ ಮುಗಿಯುವ ಐದು ನಿಮಿಷಕ್ಕೂ ಮೊದಲೇ ಕ್ರೊವೇಶಿಯಾ ಗೆಲುವಿನ ಗೋಲು ಬಾರಿಸಬೇಕಿತ್ತು. ಆದರೆ ನಾಯಕ ಲೂಕಾ ಮಾಡ್ರಿಕ್ ಪೆನಾಲ್ಟಿಯನ್ನು ಡೆನ್ಮಾರ್ಕ್ ಗೋಲಿ ಕಾಸ್ಪರ್ ಶೆಮಿಚೆಲ್ ಅದ್ಭುತವಾಗಿ ತಡೆದು, ಪಂದ್ಯವನ್ನು ಪೆನಾಲ್ಟಿ ಶೂಟೌಟ್‍ಗೆ ಒಯ್ದರು.

    ಮೊದಲ ಪೆನಾಲ್ಟಿ ಕಿಕ್‍ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ಬಳಿಕ ಕ್ರೊವೇಷಿಯಾ ಪರ ಆಂದ್ರೆಜ್ ಕ್ರಾಮರಿಕ್, 32 ವರ್ಷ ವಯಸ್ಸಿನ ರಿಯಲ್ ಮ್ಯಾಡ್ರಿಡ್ ಸ್ಟಾರ್ ಲೂಕಾ ಮಾಡ್ರಿಕ್, ಜೋಸೆಫ್ ಪಿವಾರಿಕ್, ಹಾಗೂ ಬಾರ್ಸಿಲೋನಾದ ಇವಾನ್ ರಾಕೆಟಿಕ್ ಗೋಲು ಗಳಿಸಿ ಗೆಲುವಿನ ನಗೆ ಬೀರಿದರು. ಮತ್ತೊಂದೆಡೆ ಡೆನ್ಮಾರ್ಕ್ ಪರ ಎಸ್ ಕಜೇರ್, ಕ್ರೋನ್ ಡೆಹ್ಲಿ ಗೋಲು ಬಾರಿಸಿದರೆ, ಎರಿಕ್ಸನ್, ಸೋಪೋಸ್ ಹಾಗೂ ಜೋರ್ಗನ್‍ಸನ್ ಅಪೂರ್ವ ಅವಕಾಶವನ್ನು ಮಿಸ್ ಮಾಡಿ ನಿರಾಸೆ ಅನುಭವಿಸಿದರು. ಆ ಮೂಲಕ 1998ರಲ್ಲಿ 3ನೇ ಸ್ಥಾನ ಪಡೆದಿದ್ದ ಕ್ರೊವೇಷಿಯಾ, ಈ ಬಾರಿಗೆ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯಿತು. ಶನಿವಾರ ನಡೆಯುವ ಕ್ವಾರ್ಟರ್ ಫೈನಲ್‍ನಲ್ಲಿ ಆತಿಥೇಯ ರಷ್ಯಾವನ್ನು ಕ್ರೊವೇಷಿಯಾ ಎದುರಿಸಲಿದೆ.