Tag: ಮಾಸಿಕ ಲೆಕ್ಕಚಾರ ವಿಶ್ವ ಚಾಂಪಿಯನ್‍ಶಿಪ್

  • 13 ದೇಶಗಳನ್ನ ಹಿಂದಿಕ್ಕಿ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ ಗೆದ್ದ ಭಾರತೀಯ

    13 ದೇಶಗಳನ್ನ ಹಿಂದಿಕ್ಕಿ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ ಗೆದ್ದ ಭಾರತೀಯ

    ನವದೆಹಲಿ: ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಮಾನಸಿಕ ಲೆಕ್ಕಚಾರ ವಿಶ್ವ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾರತದ ಯುವಕನಿಗೆ ಮೊದಲ ಸ್ಥಾನ ಲಭಿಸಿದ್ದು, ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಗಸ್ಟ್ 15 ರಂದು ಲಂಡನ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೈದರಾಬಾದ್ ಮೂಲದ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲಕಂಠ ಭಾನು ಪ್ರಕಾಶ್‍ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

    ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್, ಯುಎಸ್, ಜರ್ಮನಿ, ಫಾನ್ಸ್, ಗ್ರೀಸ್ ಸೇರಿದಂತೆ ಸುಮಾರು 13 ದೇಶಗಳಿಂದ 30 ಮಂದಿ ಸ್ಪರ್ಧಿಗಳು ಬಂದಿದ್ದರು. ವಯಸ್ಸಿನ ಮಿತಿ ಇಲ್ಲದ ಈ ಕಾರ್ಯಕ್ರಮದಲ್ಲಿ 57 ವರ್ಷ ಗಣಿತ ಪರಿಣಿತರು ಭಾಗಿಯಾಗಿದ್ದರು. ಈ ಕಠಿಣ ಸ್ಪರ್ಧೆಯಲ್ಲಿ 65 ಅಂಕಗಳ ಮುನ್ನಡೆಯೊಂದಿಗೆ ನೀಲಕಂಠ ಭಾನು ಪ್ರಕಾಶ್ ಮೊದಲ ಸ್ಥಾನ ಪಡೆದಿದ್ದಾರೆ.

    ನೀಲಕಂಠ ಭಾನು ಪ್ರಕಾಶ್, ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ ಜೊತೆಗೆ ನಾಲ್ಕು ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ದಾಖಲೆಗಳನ್ನು ಮಾಡಿದ್ದಾರೆ.

    ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಸ್ಪರ್ಧೆಯನ್ನು 100 ಮೀಟರ್ ಸ್ಪ್ರಿಂಟ್‍ಗೆ ಹೋಲಿಸಿದ ಅವರು, ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.8 ಸೆಕೆಂಡಿಗೆ ಓಡಿದಾಗ ನಾವು ಸಂಭ್ರಮಿಸುತ್ತೇವೆ. ಯಾವುದು ಅಸಾಧ್ಯವೋ ಅದನ್ನು ದೇಹ ಮಾಡುತ್ತದೆ ಎಂದಾಗ ನಮಗೆ ಸಂಭ್ರಮವಾಗುತ್ತದೆ. ಅದೇ ರೀತಿ ಈ ಗಣಿತ ಒಲಿಂಪಿಯಾಡ್ ಸ್ಪರ್ಧೆ ಎಂದು ನೀಲಕಂಠ ಭಾನು ಪ್ರಕಾಶ್ ಬಣ್ಣಿಸಿದ್ದಾರೆ.