Tag: ಮಾವು ಬೆಳೆಗಾರರು

  • ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ರಾಮಲಿಂಗಾರೆಡ್ಡಿ

    ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ರಾಮಲಿಂಗಾರೆಡ್ಡಿ

    ಬೆಂಗಳೂರು: ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಬೆಂಬಲ ಬೆಲೆ ಕೊಡುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.ಇದನ್ನೂ ಓದಿ: ಮುನೀರ್‌ಗೆ ಟ್ರಂಪ್‌ ಡಿನ್ನರ್‌ – ಪಾಕ್‌ ನೆಲದಿಂದ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡುತ್ತಾ?

    ಮಾವು ಬೆಲೆ ಕುಸಿತದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪ್ರಾರಂಭದಲ್ಲಿ ಮಾವು ಮೇಳ ಮಾಡಿದಾಗ ನಾನು ಹೋಗಿದ್ದೆ. ಆಗ ಬೆಲೆ ಜಾಸ್ತಿಯಿತ್ತು. ಈಗ ದಿಢೀರ್ ಅಂತ ಕಡಿಮೆ ಆಗಿದೆ. ಈ ಬಾರಿ ಬೆಳೆ ಜಾಸ್ತಿಯಾಗಿ, ಫಸಲು ಜಾಸ್ತಿ ಬಂದಿದೆ. ಕೋಲಾರದ (Kolar) ಹಣ್ಣು ಆಂಧ್ರಪ್ರದೇಶಕ್ಕೆ (Andhra Pradesh) ಹೋಗುತ್ತಿತ್ತು. ಈಗ ಆಂಧ್ರಪ್ರದೇಶದ ಸಿಎಂ ಕೋಲಾರದ ಹಣ್ಣಿಗೆ ಬ್ಯಾನ್ ಮಾಡಿದ್ದಾರೆ. ಹೀಗಾಗಿ ಬೆಲೆ ಕುಸಿತವಾಗಿದೆ ಎಂದು ತಿಳಿಸಿದರು.

    ಬೆಲೆ ಕುಸಿತದ ಬಗ್ಗೆ ಕಳೆದ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದೆವು. ಇವತ್ತು ಮತ್ತೆ ಚರ್ಚೆ ಮಾಡುತ್ತೇವೆ. ರೈತರು ಬೆಂಬಲ ಬೆಲೆ ಕೇಳುತ್ತಿದ್ದಾರೆ. ಇದರ ಬಗ್ಗೆ ಇವತ್ತು ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಮಲೆ ಮಾದಪ್ಪ ಮತ್ತೆ ಕೋಟಿ ಒಡೆಯ – 34 ದಿನದಲ್ಲಿ 15 ವಿದೇಶಿ ಕರೆನ್ಸಿ ಸೇರಿ 2.6 ಕೋಟಿ ಸಂಗ್ರಹ

  • ಕರ್ಫ್ಯೂನಿಂದ ಮಾವು ಬೆಳೆಗಾರರಿಗೆ ಸಂಕಷ್ಟ- ಜ್ಯೂಸ್ ಕಂಪನಿಗಳಿಂದ ಕಡಿಮೆ ಬೆಲೆಗೆ ಖರೀದಿ

    ಕರ್ಫ್ಯೂನಿಂದ ಮಾವು ಬೆಳೆಗಾರರಿಗೆ ಸಂಕಷ್ಟ- ಜ್ಯೂಸ್ ಕಂಪನಿಗಳಿಂದ ಕಡಿಮೆ ಬೆಲೆಗೆ ಖರೀದಿ

    ಧಾರವಾಡ: ಕೊರೊನಾ ಕರ್ಫ್ಯೂನಿಂದ ರೈತರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ, ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಇದೀಗ ಮಾವು ಬೆಳೆಗಾರರಿಗೆ ನಷ್ಟವಾಗುತ್ತಿದ್ದು, ಜ್ಯೂಸ್ ಕಂಪನಿಗಳು ಕಡಿಮೆ ಬೆಲೆಗೆ ಮಾವು ಖರೀದಿಸುತ್ತಿವೆ.

    ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದಾಗಿನಿಂದ ಮಾವು ಬೆಳಗಾರರಿಗೆ ಸಂಕಷ್ಟ ಎದುರಾಗಿದ್ದು, ಜಿಲ್ಲೆಯಿಂದ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಅತೀ ಹೆಚ್ಚು ಮಾವು ಹೋಗುತ್ತೆ. ಆದರೆ ಕೊರೊನಾ ಕರ್ಫ್ಯೂ ಜಾರಿಯಾದಾಗಿನಿಂದ ಮಾವಿನ ಬೆಲೆ ಏಕಾಏಕಿ ಕುಸಿದಿದೆ.

    ಕರ್ಫ್ಯೂಗಿಂತ ಮೊದಲು ಇದೇ ಮಾವು ಪ್ರತಿ ಕೆ.ಜಿಗೆ 35 ರೂಪಾಯಿಗೆ ಮಾರಾಟವಾಗುತಿತ್ತು. ಆದರೆ ಕರ್ಫ್ಯೂ ಜಾರಿಯಾದಾಗಿನಿಂದ ಪ್ರತಿ ಕೆ.ಜಿ.ಗೆ 25 ರೂಪಾಯಿಗೆ ಬೆಲೆ ಕುಸಿದಿದೆ. ಮಾವು ಹೆಚ್ಚು ದಿನಗಳ ಕಾಲ ಇಡಲು ಆಗುವುದಿಲ್ಲ, ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅನಿವಾರ್ಯವಾಗಿ ಮಾವು ಬೆಳೆಗಾರರು ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.

    ಧಾರವಾಡದಿಂದ ಹೋಗುವ ಬಹುತೇಕ ಮಾವು ಜ್ಯೂಸ್ ಕಂಪನಿಗಳಿಗೇ ಹೋಗುತ್ತೆ. ಕರ್ಫ್ಯೂ ಜಾರಿಯಾಗಿದ್ದರಿಂದ ಜ್ಯೂಸ್ ಕಂಪನಿಯವರು ಅವಕಾಶ ಮಾಡಿಕೊಂಡಿದ್ದು, ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಸಹ ಇದೇ ರೀತಿ ಮಾವು ಬೆಳೆಗಾರರು ಲಾಕ್‍ಡೌನದಿಂದ ನಷ್ಟ ಅನುಭವಿಸಿದ್ದರು. ಈ ಬಾರಿ ಅದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ.