Tag: ಮಾವಿನ ಹಣ್ಣು

  • ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ನವದೆಹಲಿ: ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ತೋತಪುರಿ, ರಸಪುರಿ, ಸೇಂದೂರ, ಬದಾಮಿ, ಇತರೆ ತಳಿಯ ಮಾವಿನ ಹಣ್ಣುಗಳನ್ನು ನೀವು ಕೇಳಿರಬಹುದು. ಆದರೆ ಇದೀಗ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು ಜಪಾನ್‍ನಲ್ಲಿ ಮಿಯಾಜಾಕಿ ಎಂಬ ಮಾವಿನ ತಳಿಯನ್ನು ಬೆಳೆಸಲಾಗುತ್ತದೆ. ಭಾರತದಲ್ಲಿ ಈ ಮಾವಿನ ಹಣ್ಣನ್ನು ಬೆಳೆಯುವುದು ಬಹಳ ಅಪರೂಪವಾಗಿದೆ. ಹಾಗಾಗಿ ಈ ಮಾವಿನ ಹಣ್ಣಿನ ಬೆಳೆಯನ್ನು ಹೆಚ್ಚಿಸಬೇಕು ಎಂದು ಹರ್ಷ್ ಗೋಯೆಂಕಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ಟಿಲಿನಿಂದ ಎಡವಿ ಬಿದ್ದ ಲಾಲೂ ಪ್ರಸಾದ್ ಯಾದವ್ – ಭುಜದ ಮೂಳೆ ಮುರಿತ

    ರುಬಿ ಬಣ್ಣದ ಜಪಾನ್ ಮಿಯಾಜಾಕಿ ತಳಿಯ ಈ ಮಾವು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೇಳಲಾಗುತ್ತದೆ. ಈ ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ 2.70 ಲಕ್ಷ ರೂ. ಆಗಿದೆ. ಮಧ್ಯಪ್ರದೇಶದ ಜಬಲ್‍ಪುರದ ರೈತ ಪರಿಹಾರ್ ಅವರು ಮಿಯಾಜಾಕಿ ತಳಿಯ ಎರಡು ಮಾವಿನ ಮರಗಳನ್ನು ಬೆಳೆಸಿದ್ದು, ಈ ಮಾವನ್ನು ರಕ್ಷಿಸಲು ಮೂರು ಭದ್ರತಾ ಸಿಬ್ಬಂದಿ ಮತ್ತು 6 ನಾಯಿಗಳನ್ನು ಸಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ

    ಇದು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಕಳೆದ ವರ್ಷವೂ ಈ ಹಣ್ಣಿನ ಬೆಲೆ ಕಿಲೋಗ್ರಾಂಗೆ 2.70 ಲಕ್ಷಕ್ಕೆ ಮಾರಾಟವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವು ಎಂದರೆ ಭಾರತೀಯರಿಗಂತೂ ಇಷ್ಟವಾದ ಹಣ್ಣು. ಇದು ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದಿದೆ. ತಿನ್ನಲು ರುಚಿಕರವಷ್ಟೇ ಅಲ್ಲದೇ ಸುಗಂಧವನ್ನು ಹೊಂದಿದೆ. ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳದ್ದೇ ಕಮಾಲು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮಾವಿನ ಹಣ್ಣು ಎಂದರೆ ತುಂಬಾ ಇಷ್ಟ. ಈ ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳಿವೆ.

    ಜೀರ್ಣಕ್ರಿಯೆಗೆ ಸಹಕಾರಿ: ಮಾವಿನ ಹಣ್ಣು ಹಲವಾರು ಗುಣಗಳನ್ನು ಹೊಂದಿದ್ದು, ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಲ್ಲಿ ಅಮೈಲೇಸ್ ಜೀರ್ಣಕಾರಿ ಕಿಣ್ವಗಳಿರುತ್ತವೆ. ಇದರ ಜೊತೆಗೆ ಮಾವಿನಲ್ಲಿ ನೀರು ಮತ್ತು ಆಹಾರದ ನಾರಿನಾಂಶ ಜಾಸ್ತಿಯಾಗಿರುವುದರಿಂದ ಮಲಬದ್ಧತೆ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ರೋಗ ನಿರೋಧಕ ಶಕ್ತಿ ಹೆಚ್ಚಳ: ಇದರಲ್ಲಿ ವಿಟಮಿನ್ ಪೋಷಕಾಂಶವು ಹೇರಳವಾಗಿರುತ್ತದೆ. ವಿಟಮಿನ್ ಎ, ಬಿ, ಸಿ ಮತ್ತು ಇ ಖನಿಜಗಳು ಹೇರಳವಾಗಿದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ಚರ್ಮದ ಕಾಂತಿ: ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಎ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ. ಮಾವಿನ ಹಣ್ಣುಗಳನ್ನು ಮಿತವಾಗಿ ಸೇವಿಸಿದಾಗ ತ್ವಚೆಯ ಕಾಂತಿ ಹೆಚ್ಚುತ್ತದೆ. ಜೊತೆಗೆ ಇದು ಚರ್ಮದಲ್ಲಿ ಎಣ್ಣೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ.

    ಹೃದಯದ ಆರೋಗ್ಯ: ಹೃದಯದ ಆರೋಗ್ಯವನ್ನು ವೃದ್ಧಿಸುವ ಪೋಷಕಾಂಶಗಳು ಮಾವಿನ ಹಣ್ಣಿನಲ್ಲಿ ಅಧಿಕವಾಗಿವೆ. ಮಾವಿನ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್‍ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ತೂಕ ಕಡಿಮೆ: ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದು. ಮಾವಿನಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಫೈಟೊಕೆಮಿಕಲ್‍ಗಳಿರುತ್ತವೆ. ಇದರ ಜೊತೆಗೆ ನಾರುಗಳು ಹೇರಳವಾಗಿವೆ. ನೀವು ನಾರಿನ ಹಣ್ಣು ಮತ್ತು ತರಕಾರಿಯನ್ನು ಸೇವಿಸಿದಾಗ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಆಗುತ್ತಿದೆ. ಇದರಿಂದ ತೂಕವು ಕಡಿಮೆ ಆಗುತ್ತದೆ. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

  • ಮುಸ್ಲಿಮರ ಬಳಿ ಮಾವಿನ ಹಣ್ಣು ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ರಾಷ್ಟ್ರ ದ್ರೋಹ ಬೇರಿಲ್ಲ: ಎಚ್‍ಡಿಕೆ

    ಮುಸ್ಲಿಮರ ಬಳಿ ಮಾವಿನ ಹಣ್ಣು ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ರಾಷ್ಟ್ರ ದ್ರೋಹ ಬೇರಿಲ್ಲ: ಎಚ್‍ಡಿಕೆ

    ಬೆಂಗಳೂರು: ಮುಸ್ಲಿಮರಿಂದ, ಹಿಂದೂಗಳು ಮಾವು ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಸೃಷ್ಟಿಸಿರುವ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಸಲ್ಮಾನರ ಬಳಿ ಮಾವಿನ ಹಣ್ಣು ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ರಾಷ್ಟ್ರ ದ್ರೋಹ ಬೇರಿಲ್ಲ. ಹೀಗೆ ಮುಂದುವರೆದರೆ ಜನರು ಶೀಘ್ರ ಬಿಜೆಪಿ ವಿರುದ್ದ ತಿರುಗಿಬೀಳುತ್ತಾರೆ ಎಂದರು. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

     

    ಇದೆಲ್ಲ ಹೇಗಿದೆ ಎಂದರೆ, ಕಳ್ಳಕಾಕರು ಬರುತ್ತಿದ್ದಾರೆ, ಅವರನ್ನು ಓಡಿಸ್ತಾ ಇರಿ ಎಂದು ಹೇಳಿದ ಹಾಗೆ ಆಯಿತು. ಇದಕ್ಕೆಲ್ಲ ಒಂದು ಅಂತ್ಯ ಇದ್ದೇ ಇರುತ್ತದೆ. ಹಿಂದುಗಳೇ ಜನರೇ ತಿರುಗಿಬೀಳುತ್ತಾರೆ, ನೋಡುತ್ತೀರಿ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ಹಿಂದೂಗಳನ್ನು ಗುತ್ತಿಗೆ ಪಡೆಯಲು ಬಿಜೆಪಿಗೆ ಸಾಧ್ಯವಿಲ್ಲ: ಕೆ.ಎಂ.ಗಣೇಶ್

    ಮುಸ್ಲಿಮರು ಮಾವಿನ ಹಣ್ಣಿನ ಮೇಲೆ ಕೆಮಿಕಲ್ ಹಾಕಿ ಮಾರುತ್ತಾರೆ ಎಂಬ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ನೂರಾರು ವರ್ಷದಿಂದ ಅವರೇ ಮರಿದ ಹಣ್ಣುಗಳನ್ನು, ಇತರೆ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಬಂದಿದ್ದೇವೆ. ಇಂತಹ ವಿಚಾರವೆಲ್ಲ ಚುನಾವಣೆ ವೇಳೆಯಲ್ಲಿ ಯಾಕೆ ಬಂತು ಕೇವಲ ಮತ ಗಳಿಕೆಗಾಗಿ ಇವೆಲ್ಲ ನಡೆಯುತ್ತಿವೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

    ಮುಸ್ಲಿಮರಿಂದ ಮಾವಿನ ಖರೀದಿ ಮಾಡಬೇಡಿ, ಅವರಿಗೆ ರೈತರು ಹಣ್ಣು ಮಾರಬಾರದು ಎನ್ನುವುದು ಬಿಜೆಪಿಗೆ ತಿರುಗು ಬಾಣ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

  • ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಹಾಸನ: ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್-ಜಟ್ಕಾ ಕಟ್ ವಿವಾದ ಬಳಿಕ, ಇದೀಗ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕೆಂದು ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.

    ಕೆಲ ದಿನಗಳ ಹಿಂದೆ ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಯುಗಾದಿ ಹಬ್ಬದ ಹೊಸತೊಡುಕು ವೇಳೆ ಹಿಂದೂಗಳು ಮುಸಲ್ಮಾನರು ಮಾರುವ ಹಲಾಲ್ ಕಟ್ ಮಾಂಸವನ್ನು ಖರೀದಿಸಬಾರದು. ಬದಲಾಗಿ ಹಿಂದೂಗಳು ಮಾರುವ ಜಟ್ಕಾಕಟ್ ಮಾಂಸವನ್ನು ಕೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದವು. ಅದರಂತೆ ಜಟ್ಕಾಕಟ್ ಅಭಿಯಾನ ಯಶಸ್ವಿಯಾಗಿತ್ತು. ಇದನ್ನೂ ಓದಿ: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಸೋಮವಾರ ಮಸೀದಿಯಲ್ಲಿ ಸೌಂಡ್ ಬ್ಯಾನ್ ಅಭಿಯಾನ ಆರಂಭಿಸಿರುವ ಹಿಂದೂಪರ ಸಂಘಟನೆಗಳು ಇದೀಗ ಹಾಸದಲ್ಲಿ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂಬ ಪೋಸ್ಟರ್‍ಗಳನ್ನು ವಾಟ್ಸಪ್‍ನಲ್ಲಿ ಶೇರ್ ಮಾಡುವ ಮೂಲಕ ಹಿಂದೂ ಯುವಕರೇ ಮುಂದೆ ಬನ್ನಿ ಎಂಬ ಕರೆ ನೀಡಿ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಸದ್ಯ ಈ ಪೋಸ್ಟರ್‍ಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ 

  • ಮಾವು ಬೆಳೆಗಾರರಿಗೆ ಸಿಹಿ ಸುದ್ದಿ – ಶೀಘ್ರವೇ ಭಾರತದ ಮಾವು ಅಮೆರಿಕಾಗೆ ರಫ್ತು

    ಮಾವು ಬೆಳೆಗಾರರಿಗೆ ಸಿಹಿ ಸುದ್ದಿ – ಶೀಘ್ರವೇ ಭಾರತದ ಮಾವು ಅಮೆರಿಕಾಗೆ ರಫ್ತು

    ನವದೆಹಲಿ: ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾವು ಮತ್ತು ಉಪ ಉತ್ಪನ್ನಗಳನ್ನು ರಫ್ತು ಮಾಡುವ ಕಾರ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದೆ. ಮಾವು ರಫ್ತುಗೆ ಸಂಬಂಧಿಸಿದಂತೆ ಭಾರತ ಮತ್ತು ಯುಎಸ್ ನಿಯಮಗಳನ್ನು ಸರಳಗೊಳಿಸಲು ಒಪ್ಪಿಕೊಂಡಿವೆ ಎಂದು ಆಹಾರ ಉತ್ಪನ್ನಗಳ ರಫ್ತು ಉತ್ಪನ್ನಗಳ ರಫ್ತಿನ ಜವಾಬ್ದಾರಿ ಹೊತ್ತಿರುವ ಸಂಸ್ಥೆ `ಅಪೆಡಾ’ ತಿಳಿಸಿದೆ.

    ಇನ್ನು ನಾಲ್ಕು ತಿಂಗಳಲ್ಲಿ ಮಾವಿನ ಋತು ಆರಂಭವಾಗಲಿದೆ. ಈ ಹೊತ್ತಿನಲ್ಲೇ ಭಾರತವು ಯುಎಸ್‍ಗೆ ಮಾವು ರಫ್ತು ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ದಾಳಿಂಬೆ ರಫ್ತು ಕೂಡ ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ಅಪೆಡಾ ಅಧ್ಯಕ್ಷ ಎಂ. ಅಂಗಮುತ್ತು ತಿಳಿಸಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಆತ್ಮಕಥೆ – 2 ಕೋಟಿ ರೂ.ಗೆ ಜಾಗತಿಕ ಹಕ್ಕು ಖರೀದಿ

    ಭಾರತದ ಮಾವು ಮತ್ತು ದಾಳಿಂಬೆ ರಫ್ತಿಗೆ ಪ್ರತಿಯಾಗಿ ಅಮೆರಿಕವು ಅಮೆರಿಕನ್ ಚೆರ್ರಿ ಹಣ್ಣನ್ನು ನೀಡಿಲಿದೆ. ಈ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

    ಎರಡು ವರ್ಷಗಳ ಹಿಂದೆ ಸುಮಾರು 100 ಕೋಟಿ ರೂ. ಮೌಲ್ಯದ ಮಾವಿನ ಹಣ್ಣು ಹಾಗೂ ಉಪ ಉತ್ಪನ್ನಗಳನ್ನು ಅಮೆರಿಕಾಗೆ ರಫ್ತು ಮಾಡಲಾಗಿತ್ತು. ಮಾವು ಜೊತೆಗೆ ಕೇಸರಿಯನ್ನು ಸಹ ರಫ್ತು ಮಾಡಲಾಗಿತ್ತು. ಅದಾದ ನಂತರ ಹಣ್ಣನ್ನು ಬೆಳೆಯಲು ಹೆಚ್ಚು ರಾಸಾಯನಿಕ ಬಳಸಲಾಗುತ್ತಿದೆ ಎಂದು ಅಮೆರಿಕವು ಭಾರತದ ಮಾವಿನ ಹಣ್ಣನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಇದನ್ನೂ ಓದಿ: ಉದ್ದನೆಯ ಮೀಸೆ ಬಿಟ್ಟ ಕಾನ್ಸ್​​ಟೇಬಲ್ ಅಮಾನತು

    ಈಗ ಎರಡು ವರ್ಷಗಳ ನಂತರ ಮತ್ತೆ ಮಾವಿನ ಹಣ್ಣು ರಫ್ತು ವಿಚಾರವಾಗಿ ಭಾರತ ಮತ್ತು ಯುಎಸ್ ಒಪ್ಪಂದ ಮಾಡಿಕೊಂಡಿವೆ.

  • ಮೋದಿ, ದೀದಿಗೆ 2,600 ಕೆ.ಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ

    ಮೋದಿ, ದೀದಿಗೆ 2,600 ಕೆ.ಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ

    ಢಾಕಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಮಾವಿನ ಹಣ್ಣು ಕಳುಹಿಸಿದ್ದಾರೆ.

    ಸೋಮವಾರ 2,600 ಕೆ.ಜಿ ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು ಬಾಂಗ್ಲಾ ಪ್ರಧಾನಿ ಕಳುಹಿಸಿಕೊಟ್ಟಿದ್ದಾರೆ. 260 ಪೆಟ್ಟಿಗೆ ಯನು ಹೊತ್ತ ಟ್ರಕ್ ಭಾನುವಾರ ಮಧ್ಯಾಹ್ನದ ಬಳಿಕ ಗಡಿ ದಾಟಿದೆ.

    ಬಾಂಗ್ಲಾದೇಶದ ರಂಗ್ ಪುರ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆದ ಈ ಮಾವಿನ ಹಣ್ಣುಗಳನ್ನು ಬೆನಾಪೋಲ್ ಚೆಕ್ ಪಾಯಿಂಟ್ ಮೂಲಕ ಕಳುಹಿಸಲಾಗಿದೆ. ಉಭಯ ದೇಶಗಳ ನಡುವಿನ ಬಾಂಧವ್ಯದ ಸಂಕೇತವಾಗಿ ಈ ಮಾವಿನ ಹಣ್ಣುಗಳನ್ನು ಕಳುಹಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಹರಿಬಾಂಗ ಮಾವಿನಹಣ್ಣು ದುಂಡಾಗಿದೆ. ಹೆಚ್ಚು ತಿರುಳಿರುವ, ನಾರಿನಂಶವಿಲ್ಲದ ಮತ್ತು ಸಾಮಾನ್ಯವಾಗಿ 200 ರಿಂದ 400 ಗ್ರಾಂ ತೂಕವಿರುತ್ತದೆ. ಈ ಹಿಂದೆ ಭಾರತಕ್ಕೆ ಪಾಕ್ ಮಾಜಿ ಪ್ರಧಾನಿಗಳಾದ ಜಿಯಾ ಉಲ್ ಹಕ್ ಹಾಗೂ ಪರ್ವೇಜ್ ಮುಷರಫ್ ಸಹ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು. ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

  • ದೊಡ್ಮನೆಯಲ್ಲಿ ಮ್ಯಾಂಗೋ ಜ್ಯೂಸ್ ಜಪ ಮಾಡಿದ ಶುಭಾ ಪೂಂಜಾ!

    ದೊಡ್ಮನೆಯಲ್ಲಿ ಮ್ಯಾಂಗೋ ಜ್ಯೂಸ್ ಜಪ ಮಾಡಿದ ಶುಭಾ ಪೂಂಜಾ!

    ಹೊರಗೆ ಇದ್ದಾಗ ಸ್ಪರ್ಧಿಗಳು ಕಣ್ಣಿಗೆ ಬೇಕಾದ ರುಚಿ-ರುಚಿಯಾದ ತಿಂಡಿಯನ್ನು ತಿಂದು ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದರು. ಆದರೆ ದೊಡ್ಮನೆಯಲ್ಲಿ ಬಂಧಿಯಾದ ಬಳಿಕ ಬಿಗ್‍ಬಾಸ್ ನೀಡುವ ಆಹಾರ ಪದಾರ್ಥಗನ್ನಷ್ಟೇ ತಿಂದು ಸ್ಪರ್ಧಿಗಳು ಖುಷಿಪಡಬೇಕಾಗಿದೆ.

    ತಮಗೆ ಇಷ್ಟವಾದ ಫುಡ್ ತಿನ್ನಲು ಆಗದೇ ಸ್ಪರ್ಧಿಗಳು ಒದ್ದಾಡುತ್ತಿದ್ದಾರೆ. ಪ್ರತಿನಿತ್ಯ ತಾವೇ ಅಡುಗೆ ಮಾಡಿಕೊಂಡು ಸೇವಿಸುತ್ತಿರುವ ಸ್ಪರ್ಧಿಗಳ ನಾಲಿಗೆಗೆ ರುಚಿ ಸಿಗದೇ ಕೆಂಗಟ್ಟು ಹೋಗಿದೆ ಎಂದೇ ಹೇಳಬಹುದು. ಸದ್ಯ ಈ ಎಲ್ಲದರ ಮಧ್ಯೆ ಶುಭಾ ಪೂಂಜಾ ನಿನ್ನೆ ದೊಡ್ಮನೆಯಲ್ಲಿ ಮಾವಿನ ಹಣ್ಣಿನ ಜಪ ಮಾಡಿದ್ದಾರೆ.

    ನಿನ್ನೆ ಟಾಸ್ಕ್‌ವೊಂದರಲ್ಲಿ ಗೆದ್ದ ಬಳಿಕ ಗಾರ್ಡನ್ ಏರಿಯಾದಲ್ಲಿ ಕ್ಯಾಮೆರಾ ಮುಂದೆ ಕುಳಿತು ಶುಭಾ, ಬಿಗ್‍ಬಾಸ್ ನಾವು ಟಾಸ್ಕ್‌ನಲ್ಲಿ ಗೆದ್ವಿ ಅಲ್ವಾ ನಮಗೆ ಮ್ಯಾಂಗೋ ಜ್ಯೂಸ್ ಯಾಕ್ ಕೊಡಬಾರದು ಅಂತ ನಾನು.. ಮ್ಯಾಗೋ ಜ್ಯೂಸ್ ಕಳುಹಿಸಿ ಕೊಡಿ ಬಿಗ್‍ಬಾಸ್ ಪ್ಲೀಸ್ ಎಂದು ಬಾಯಿ ಚಪ್ಪರಿಸುತ್ತಾ ಹೇಳುತ್ತಾರೆ.

    ಇಲ್ಲ ಅಂದ್ರೆ ಆಮ್ ರಸ್ ಆದ್ರೂ ಕೊಡಿ, ಒಟ್ಟಿನಲ್ಲಿ ಮಾವಿನ ಹಣ್ಣಿನದ್ದು ಏನಾದರೂ ಕೊಡಿ ಬಿಗ್‍ಬಾಸ್ ಪ್ಲೀಸ್.. ನಾನು ಮಾವಿನ ಹಣ್ಣು ತಿಂದೇ ಇಲ್ಲ. ಬೇಜಾರು ಆಗುತ್ತಿದೆ ನಾನು ಮಾವಿನ ಹಣ್ಣು ತಿಂದಿಲ್ಲ ಪ್ಲೀಸ್ ಬಿಗ್‍ಬಾಸ್ ಎನ್ನುತ್ತಾ ರಿಕ್ವೆಸ್ಟ್ ಮಾಡಿದ್ದಾರೆ.

    ಈ ವೇಳೆ ಚಕ್ರವರ್ತಿ ಕಾಫಿ ಯಾರಿಗೆ ಬೇಕು ಕೈ ಎತ್ತಿ ಎಂದು ಕೇಳುತ್ತಾರೆ. ಆಗ ಶುಭ ನನಗೆ ಕಾಫಿನೂ ಬೇಕು, ಮಾವಿನ ಹಣ್ಣು ಬೇಕು ಎಂದು ಕೈ ಎತ್ತುತ್ತಾರೆ. ಒಟ್ಟಾರೆ ಶುಭಾ ಪೂಂಜಾ ಬಿಗ್‍ಬಾಸ್ ಬಳಿ ಕ್ಯೂಟ್ ಕ್ಯೂಟ್ ಆಗಿ ಜ್ಯೂಸ್ ಕಳುಹಿಸಿ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

  • 2 ಮಾವಿನ ಹಣ್ಣು ಕಳವು- ದುಬೈ ಕೋರ್ಟ್‌ನಲ್ಲಿ ಭಾರತ ಮೂಲದ ವ್ಯಕ್ತಿಯ ವಿಚಾರಣೆ

    2 ಮಾವಿನ ಹಣ್ಣು ಕಳವು- ದುಬೈ ಕೋರ್ಟ್‌ನಲ್ಲಿ ಭಾರತ ಮೂಲದ ವ್ಯಕ್ತಿಯ ವಿಚಾರಣೆ

    ದುಬೈ: ಎರಡು ಮಾವು ಕದ್ದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ದುಬೈನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

    27 ವರ್ಷದ ಭಾರತದ ಮೂಲದ ಯುವಕ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಕಾರ್ಯನಿರ್ವಹಿಸುತ್ತಿರುವ ವೇಳೆ 2017ರಲ್ಲಿ ಭಾರತಕ್ಕೆ ಸರಕು ಸಾಗಿಸುವ ವೇಳೆ 6 ದಿರ್ಹಾಮ್ಸ್(116 ರೂ.) ಬೆಲೆಯ ಮಾವಿನ ಹಣ್ಣನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    ಆ ಸಮಯದಲ್ಲಿ ನನಗೆ ತುಂಬಾ ಬಾಯಾರಿಕೆಯಾಗಿತ್ತು. ಕುಡಿಯಲು ನೀರು ಹುಡುಕುತ್ತಿದ್ದಾಗ ಈ ಹಣ್ಣುಗಳ ಪೆಟ್ಟಿಗೆ ಕಾಣಿಸಿತು. ಅದರಲ್ಲಿದ್ದ ಎರಡು ಮಾವಿನ ಹಣ್ಣುಗಳನ್ನು ತೆಗೆದುಕೊಂಡೆ ಎಂದು ಅಲ್ಲಿನ ಪತ್ರಿಕೆಗೆ ತಿಳಿಸಿದ್ದಾನೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಈ ಕುರಿತು ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು. ನಂತರ ಆತನನ್ನು ಬಂಧಿಸಿ, ಹಣ್ಣುಗಳನ್ನು ಕದ್ದಿರುವ ಕುರಿತು ಆರೋಪ ಹೊರಿಸಲಾಗಿತ್ತು.

    ಆಗಸ್ಟ್ 2017ರಲ್ಲಿ ಹಣ್ಣುಗಳನ್ನು ಕದ್ದು ತಿಂದಿದ್ದರ ಕುರಿತು ದಾಖಲೆಗಳಿಂದ ದೃಢಪಟ್ಟಿದೆ. ಆದರೆ ತಡವಾಗಿ 2019ರಲ್ಲಿ ನ್ಯಾಯಾಲಯಕ್ಕೆ ಏಕೆ ಹಾಜಪಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಹಣ್ಣುಗಳ ಬಾಕ್ಸ್ ತೆರೆಯುವುದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದ. ನಂತರ ಭಾರತಕ್ಕೆ ಹೊರಟಿದ್ದ ವಿಮಾನದ ಪ್ರಯಾಣಿಕರ ಬ್ಯಾಗ್ ತೆರೆದು ಮಾವಿನ ಹಣ್ಣುಗಳನ್ನು ಕದ್ದಿದ್ದ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ತಿಳಿಸಿದ್ದಾರೆ.

    ಆರೋಪಿಯು ತಪ್ಪಿತಸ್ಥನೆಂದು ಸಾಬೀತಾದರೆ, ಅವನು ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು ಇಲ್ಲವೆ ಕದ್ದ ವಸ್ತುಗಳ ಮೊತ್ತವನ್ನು ಸಮಾನ ದಂಡದೊಂದಿಗೆ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 23ರಂದು ಪ್ರಕರಣದ ತೀರ್ಪು ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

  • ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

    ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಪತ್ನಿ ಜೊತೆ ಸೇರಿಕೊಂಡು ಮಗನೊಬ್ಬ ತನ್ನ ತಾಯಿ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ.

    ಗೌರಮ್ಮನ ಮೇಲೆ ಸೊಸೆ ಯಶೋಧ ಹಾಗೂ ಪುತ್ರ ರಾಜೇಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಮ್ಮ ಮೇಲಿನ ಹಲ್ಲೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಡೆದಿದ್ದೇನು?:
    ಗೌರಮ್ಮ ಅವರ ತೋಟದಲ್ಲಿ ಎರಡು ಮಾವಿನ ಮರಗಳಿವೆ. ಈ ಮರದಿಂದ ಸೊಸೆ ಹಾಗೂ ಮಗ ಮಾವಿನ ಹಣ್ಣುಗಳನ್ನು ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಗೌರಮ್ಮ ಅವರು ತನಗೂ ಸ್ವಲ್ಪ ಉಳಿಸಿ ಎಂದು ಹೇಳಿದ್ದಾರೆ. ಅತ್ತೆಯ ಮಾತಿನಿಂದ ಕೆರಳಿದ ಸೊಸೆ ಯಶೋಧ ಮನ ಬಂದಂತೆ ಥಳಿಸಿದ್ದಾಳೆ. ತಾಯಿ ಮೇಲೆ ಪತ್ನಿ ಹಲ್ಲೆ ಮಾಡುವಾಗ ಮಗ ತಡೆಯದೇ ತಾನೂ ಅಮ್ಮನ ಮೇಲೆ ಹಲ್ಲೆಗೆ ಸಹಕರಿಸಿದ್ದಾನೆ.

    ಅಲ್ಲದೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ತನ್ನ ಪತಿಯೆದುರೇ ಆತನ ತಾಯಿಗೆ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಗೌರಮ್ಮ ಕೆಳಕ್ಕೆ ಬಿದ್ದಿದ್ದಾರೆ. ಆದರೂ ಬಿಡದ ಸೊಸೆ, ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾಳೆ.

    ಹಲ್ಲೆಯಿಂದ ಅಸ್ವಸ್ಥಗೊಂಡ ವೃದ್ಧೆಗೆ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಬೆಂಗಳೂರು: ಮಾವು ಎಂದು ಮಾವಿನ ಹಣ್ಣಿನ ಸೀಸನ್‍ನಲ್ಲಿ ಚಪ್ಪರಿಸಿಕೊಂಡು ತಿನ್ನೋರು ಈ ಸುದ್ದಿ ಓದಿ. ಯಾಕೆಂದರೆ ರಸಭರಿತ ಕಲರ್ ಫುಲ್ ಮಾವಿನ ಬಣ್ಣ ಟೇಸ್ಟ್ ಹಿಂದೆ ಜೀವತೆಗೆಯುವ ವಿಷ ಇದೆ. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ವಿಷದ ಮಾವಿನ ಅಸಲಿ ಮುಖ ಸೆರೆಯಾಗಿದೆ.

    ವಿಷದ ರಾಸಾಯನಿಕವನ್ನು ಬಳಸಿ ಎಳೆಯ ಮಾವು ಬೇಗ ಮಾಗುವಂತೆ ಮಾಡುತ್ತಾರೆ. ಅಲ್ಲದೆ ಇದರಿಂದ ಮಾವು ಕಲರ್ ಕೂಡ ಬರುತ್ತೆ. ಗ್ರಾಹಕರನ್ನು ಮರಳು ಮಾಡಲು ಈ ರೀತಿಯ ವಿಷದ ರಾಸಾಯನಿಕ ಬೆರೆಸುತ್ತಾರೆ. ಅಂದಹಾಗೆ ಬೆಂಗಳೂರಿನ ಜೆಸಿ ರಸ್ತೆಯ ಬೃಹತ್ ಮಾವುಗಳ ಶಾಪ್‍ನಲ್ಲಿ ಈ ರೀತಿ ವಿಷ ಬೆರೆಸಲಾಗುತ್ತಿದ್ದು, ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

    ಹಣದ ಆಸೆಗಾಗಿ ಕಾಯಿ ಇರುವ ಮಾವಿನಹಣ್ಣನ್ನು ಮಾಗುವಂತೆ ಮಾಡುತ್ತಾರೆ. ಮರದಿಂದ ಇಳಿಸಿದ ಮಾವಿನಕಾಯಿಗಳಿಗೆ ಮೋಸ್ಟ್ ಡೇಂಜರಸ್ ಕಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಹಾಗೂ ಇಥ್ರೇಲ್‍ನ್ನು ಹಾಕಿ ಮಾಗುವಂತೆ ಮಾಡ್ತಾರೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    ವಿಷದ ಹಣ್ಣು ತಿಂದ್ರೆ ಏನಾಗಬಹುದು?
    * ಕಾರ್ಬೈಡ್ ರಾಸಾಯನಿಕ ಬೆರೆಸಿದ ಮಾವು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ
    * ಹೊಟ್ಟೆನೋವು, ವಾಂತಿ ಭೇದಿಯಾಗುವ ಸಾಧ್ಯತೆ
    * ಬಾಯಿಹುಣ್ಣು, ಬಾಯಿ ಕ್ಯಾನ್ಸರ್, ಕರುಳುಬೇನೆಯಂತಹ ಮಾರಣಾಂತಿಕ ಕಾಯಿಲೆಯೂ ಬರಬಹುದು

    ಈಗ ರಾಸಾಯನಿಕ ಬಳಸಿಯೇ ಮಾವಿನ ಹಣ್ಣನ್ನು ಮಾಗಿಸೋದು ಕಾಮನ್ ಆಗಿದೆ. ಆದ್ದರಿಂದ ಮಾವಿನ ಹಣ್ಣನ್ನು ತಿನ್ನೋವಾಗ ಜೋಪಾನವಾಗಿರಿ. ಅಲ್ಲದೆ ಸಾಧ್ಯವಾದಷ್ಟು ಹಣ್ಣನ್ನು ತೊಳೆದು ತಿನ್ನೋದನ್ನು ರೂಢಿಸಿಕೊಳ್ಳಿ.