Tag: ಮಾವಿನ ಹಣ್ಣು

  • ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    – 2.5 ಲಕ್ಷ ಟನ್ ಮಾವು ಖರೀದಿಗೆ ಬೆಂಬಲ ಬೆಲೆ ಘೋಷಣೆ
    – ಮಾವು ಬೆಳೆಗಾರರ ನರೆವಿಗೆ ಬರುವಂತೆ ಪತ್ರ ಬರೆದಿದ್ದ ಹೆಚ್‌ಡಿಕೆ

    ನವದೆಹಲಿ: ಮಾವು ಬೆಳೆಗಾರರ ನೆರವಿಗೆ ಬರುವಂತೆ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪತ್ರ ಬರೆದು ಮನವಿ ಮಾಡಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ಬೆಂಬಲ ಬೆಲೆ ಘೋಷಿಸಿ, ಖರೀದಿಗೆ ಬೆಲೆ ನಿಗದಿ ಮಾಡಿದೆ.

    ಈ ಮೂಲಕ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ ಮಾಡಿದ್ದು, 2.5 ಲಕ್ಷ ಟನ್ ಮಾವು ಖರೀದಿಸಲು ನಿರ್ಧರಿಸಿದೆ. ತಮ್ಮ ಪತ್ರವನ್ನು ಆಧರಿಸಿ ತಕ್ಷಣವೇ ಸ್ಪಂದಿಸಿದಕ್ಕಾಗಿ ಕೇಂದ್ರಕ್ಕೆ ಹೆಚ್‌ಡಿಕೆ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರಿಗೆ ಹೆಚ್‌ಡಿಕೆ ಪತ್ರ – ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ರೈತಪರ ಬದ್ಧತೆ, ಅಚಲತೆಗೆ ಹೃದಯಪೂರ್ವಕ ಧನ್ಯವಾದಗಳು. ರಾಜ್ಯದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ತಕ್ಷಣ ಬೆಂಬಲ ಬೆಲೆ ಘೋಷಿಸಿದ್ದೀರಿ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

    ಇದಕ್ಕೂ ಮುನ್ನ ಹೆಚ್‌ಡಿಕೆ ಅವರು ಪತ್ರದ ಮೂಲಕ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಪತ್ರದ ಮೂಲಕ, ಕೇಂದ್ರ ಸರ್ಕಾರ ನೆರವಿಗೆ ಬಾರದಿದ್ದರೆ ಬೆಳೆಗಾರರಿಗೆ ಬೇರೆ ನೆರವಿನ ಖಾತರಿ ಇಲ್ಲ. ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ಮಾವು ಖರೀದಿ ಮಾಡಬೇಕು ಹಾಗೂ ತಕ್ಷಣವೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕರ್ನಾಟಕದ ಗ್ರಾಮೀಣ ಭಾಗದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂತಹ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದರು.

    ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10 ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರಾದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನಗಳು ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದರು.ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

  • Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    -ರಸ್ತೆಯಲ್ಲಿ ಮಾವು ಸುರಿದು ರೈತರ ಆಕ್ರೋಶ

    ಕೋಲಾರ: ಹಣ್ಣುಗಳ ರಾಜ ಮಾವಿನ ಹಣ್ಣಿಗೆ (Mango) ಬೆಲೆ ಕುಸಿದ ಹಿನ್ನೆಲೆ ಇಂದು ಕೋಲಾರದ (Kolar) ಶ್ರೀನೀವಾಸಪುರ (Srinivaspur) ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

    ಮಾವು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದು, ಮಾವು ಬೆಳೆಗಾರರರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಸಾಥ್ ಕೊಟ್ಟಿವೆ. ಮಾವು ಬೆಳೆಗೆ ಬೆಲೆ ಕುಸಿತ ಹಿನ್ನೆಲೆ ಕಂಗಾಲಾಗಿರುವ ಮಾವು ಬೆಳೆಗಾರರು, ಆಂದ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಬಂದ್‌ಗೆ ಕರೆ ಕೊಡಲಾಗಿದೆ. ಮಾವು ಬೆಳೆಗಾರರ ಬಂದ್‌ಗೆ ಬಿಜೆಪಿ, ಜೆಡಿಎಸ್ ಸೇರಿ ಹಲವು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಒಂದು ಟನ್ ಮಾವು 3 ರಿಂದ 4 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ತಾಂತ್ರಿಕ ದೋಷ – ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ

    ಇನ್ನು ಶ್ರೀನಿವಾಸಪುರದಲ್ಲಿ ಮಾವು ರಸ್ತೆಯಲ್ಲಿ ಸುರಿದು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರದ ಬಸ್ ನಿಲ್ದಾಣದಲ್ಲಿ ಮಾವು ರಸ್ತೆಯಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

  • ಅಬ್ಬಬ್ಬಾ ಈ ಮಾವಿನ ಹಣ್ಣಿನ ಕೆಜಿ ಬೆಲೆ ಬರೋಬ್ಬರಿ 2.7 ಲಕ್ಷ!

    ಅಬ್ಬಬ್ಬಾ ಈ ಮಾವಿನ ಹಣ್ಣಿನ ಕೆಜಿ ಬೆಲೆ ಬರೋಬ್ಬರಿ 2.7 ಲಕ್ಷ!

    ಧಾರವಾಡ: ಏಪ್ರಿಲ್, ಮೇ ತಿಂಗಳು ಬಂತೆಂದರೆ ಸಾಕು ಹಣ್ಣುಗಳ ರಾಜನ ದರ್ಬಾರ್ ಶುರುವಾಗೇ ಬಿಡುತ್ತೆ. ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನ ಹಣ್ಣಿಗೆ 300, 350 ಅಥವಾ 400 ರೂ. ಇರುತ್ತದೆ. ಆದರೆ ಇಲ್ಲೊಂದು ಮಾವಿನ ಹಣ್ಣಿನ ಕೆಜಿಗೆ ಬರೋಬ್ಬರಿ 2.7 ಲಕ್ಷ ರೂ. ಆಗಿದ್ದು, 1 ಮಾವಿನ ಹಣ್ಣಿಗೆ 10 ಸಾವಿರ ರೂ. ಬೆಲೆಯಿದೆ.

    ಹೌದು, ಈ ಮಾವಿನ ಹಣ್ಣಿನ ಹೆಸರು ಮಿಯಾ ಜಾಕಿ(Miyazaki), ಇದು ಜಪಾನ್ ದೇಶದ ಮಾವಿನ ಹಣ್ಣಿನ(Mango) ತಳಿಯಾಗಿದೆ. ಈ ಹಣ್ಣನ್ನು ಧಾರವಾಡದ(Dharwad) ರೈತ ಪ್ರಮೋದ ಗಾಂವಕರ ಕಲಕೇರಿಯ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಪ್ರತಿವರ್ಷ ಏಳೆಂಟು ಹಣ್ಣು ಬಿಡುತ್ತಿದ್ದ ಮಿಯಾ ಜಾಕಿ ಮರಗಳು, ಈ ವರ್ಷ 25-26 ಹಣ್ಣುಗಳನ್ನು ಬಿಟ್ಟಿವೆ. ಧಾರವಾಡದಲ್ಲಿ ನಡೆದ ಮಾವಿನ ಮೇಳದಲ್ಲೂ ಈ ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ತಡವಾಗಿ ಆಮೀರ್ ಖಾನ್ ಪ್ರಶಂಸೆ- ಈಗ ಎಚ್ಚರವಾದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

    ಮಿಯಾ ಜಾಕಿ ಎಂಬುದು ಜಪಾನ್ ದೇಶದ ಓರ್ವ ರೈತನ ಹೆಸರು. ಮಿಯಾ ಜಾಕಿ ಎಂಬ ರೈತ ಅಲ್ಲಿ ಈ ಮಾವಿನ ಹಣ್ಣು ಬೆಳೆದಿದ್ದ. ಹೀಗಾಗಿ ಆ ಹಣ್ಣಿಗೆ ಮಿಯಾಜಾಕಿ ಎಂಬ ರೈತನ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

    ಪ್ರಮೋದ್ ಅವರು ಜಪಾನ್‌ಗೆ ತೆರಳಿದ್ದ ವೇಳೆ ಅಲ್ಲಿಂದ ಈ ಹಣ್ಣಿನ ಎರಡು ಸಸಿಗಳನ್ನು ತಂದು, ತಮ್ಮ ತೋಟದಲ್ಲಿ ನೆಟ್ಟಿದ್ದರು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಎರಡೂ ಸಸಿಗಳು ಬೆಳೆದು ಇದೀಗ ಫಲ ಕೊಡಲಾರಂಭಿಸಿವೆ. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 15 ಮಂದಿಗೆ ಗಾಯ

    ಮಾವಿನ ಮೇಳದಲ್ಲಿ ಮಿಯಾ ಜಾಕಿ ಕಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಈ ಮಿಯಾ ಜಾಕಿ ಹಣ್ಣನ್ನು ಯಾವ ರೈತರೂ ಬೆಳೆಯುತ್ತಿಲ್ಲ. ಆ ಹಣ್ಣಿನ ಉತ್ಪಾದನೆ ಹೆಚ್ಚಾದರೆ ಅದರ ದರವೂ ಕಡಿಮೆಯಾಗುತ್ತದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಿಯಾ ಜಾಕಿ ಹಣ್ಣಿನ ತಳಿಯ ಸಸಿಗಳನ್ನು ತರಿಸಿ, ಇತರ ರೈತರೂ ಅದನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಒಂದು ಹಣ್ಣಿಗೆ 10 ಸಾವಿರ ಎಂದರೆ ಅದು ದುಬಾರಿಯಾಗುತ್ತದೆ. ಆದ್ದರಿಂದ ಆ ಹಣ್ಣಿನ ಉತ್ಪಾದನೆ ಹೆಚ್ಚಳ ಮಾಡಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ಲೋಕಾ ರೇಡ್ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

    ಪ್ರವೋದ್ ಗಾಂವಕರ ಅವರು ತಮ್ಮ ತೋಟದಲ್ಲಿ ಇಸ್ರೇಲ್, ಅಮೆರಿಕ, ಜಪಾನ್, ಇಟಲಿ, ಥೈಲ್ಯಾಂಡ್ ಸೇರಿ ವಿವಿಧ ದೇಶಗಳ ಸುಮಾರು 25 ಜಾತಿಯ ಮಾವಿನ ಹಣ್ಣಿನ ಸಸಿಗಳನ್ನು ಬೆಳೆದಿದ್ದಾರೆ. ಸದ್ಯ ಮಾವಿನ ಮೇಳದಲ್ಲಿ(Mango Fest) ಪ್ರಮೋದ್ ಗಾಂವಕರ ಅವರು ಬೆಳೆದ ಮಿಯಾಜಾಕಿ ಎಲ್ಲರ ಗಮನ ಸೆಳೆದಿದೆ.

  • ರಾಹುಲ್‌ ಸೇರಿದಂತೆ 7 ಸಂಸದರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಪಾಕ್‌ ಹೈಕಮಿಷನ್‌

    ರಾಹುಲ್‌ ಸೇರಿದಂತೆ 7 ಸಂಸದರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಪಾಕ್‌ ಹೈಕಮಿಷನ್‌

    ನವದೆಹಲಿ: ಪಾಕಿಸ್ತಾನದ ಹೈಕಮಿಷನ್ (Pakistan High commission) ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಸೇರಿದಂತೆ 7 ಭಾರತೀಯ ಸಂಸದರಿಗೆ ಮಾವಿನಹಣ್ಣುಗಳನ್ನು (Mangoes) ಕಳುಹಿಸಿಕೊಟ್ಟಿದೆ.

    ಕಾಂಗ್ರೆಸ್‌ ಸಂಸದರಾದ ರಾಹುಲ್ ಗಾಂಧಿ, ಶಶಿ ತರೂರ್, ಸಮಾಜವಾದಿ ಪಕ್ಷದ ಸಂಸದರಾದ ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್ ಬಾರ್ಕ್, ಅಫ್ಜಲ್ ಅನ್ಸಾರಿ, ಇಕ್ರಾ ಚೌಧರಿ ಮತ್ತು ಕಪಿಲ್ ಸಿಬಲ್ ಸೇರಿದಂತೆ ಸಂಸತ್ತಿನ ಬಹು ಭಾರತೀಯ ಸದಸ್ಯರಿಗೆ ಪಾಕಿಸ್ತಾನದ ಹೈಕಮಿಷನ್ ಬುಟ್ಟಿಗಳಲ್ಲಿ ಮಾವಿನ ಹಣ್ಣುಗಳನ್ನು ಕಳುಹಿಸಿದೆ ಎಂಬ ವರದಿಗಳು ತಿಳಿಸಿವೆ.

    1981 ರಲ್ಲಿ, ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ “ಅನ್ವರ್ ರತೌಲ್” ಮಾವಿನ ಹಣ್ಣನ್ನು ಬುಟ್ಟಿಯಲ್ಲಿ ಕಳುಹಿಸಿದ್ದರು.

    2015ರ ಈದ್‌ ಹಬ್ಬದ ಸಮಯದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ನಾಯಕರಿಗೆ 10 ಕೆಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು.

  • ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಾವಿನ ಹಣ್ಣಿಗೆ ಬಳಸ್ತಾರೆ ವಿಷಕಾರಿ ರಾಸಾಯನಿಕ!

    ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಾವಿನ ಹಣ್ಣಿಗೆ ಬಳಸ್ತಾರೆ ವಿಷಕಾರಿ ರಾಸಾಯನಿಕ!

    ದ್ಯ ಎಲ್ಲೆಡೆ ಮಾವಿನ ಹಣ್ಣಿನ ಸೀಜನ್. ಅಲ್ಲಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿರುತ್ತಾರೆ. ಹೀಗಾಗಿ ಎಲ್ಲಿ ನೋಡಿದರೂ ಹಳದಿ ಹಳದಿಯಾಗಿರುವ ಮಾವಿನ ಹಣ್ಣುಗಳು ಕಣ್ಮನ ಸೆಳೆಯುತ್ತಿರುತ್ತದೆ. ಹಲವು ಕಡೆಗಳಲ್ಲಿ ಮಾವಿನ ಹಣ್ಣುಗಳ ಮೇಳಗಳು ನಡೆಯುತ್ತಿವೆ. ಒಟ್ಟಿನಲ್ಲಿ ಮಾವು ಪ್ರಿಯರಿಗೆ ಇದು ಸುಗ್ಗಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣುಗಳನ್ನು ಖರೀದಿ ಮಾಡುವಾಗ ಹುಷಾರಾಗಿರಬೇಕು. ಅರೇ. ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುವುದೇ ಕೆಲ ಸಮಯ. ಅದರಲ್ಲೂ ಈ ರೀತಿ ಎಲ್ಲ ಹೇಳಿ ಹೆದರಿಸ್ತೀರಾ ಅಂತಾ ಯೋಚನೆ ಮಾಡ್ತಿದ್ದೀರಾ. ಹಾಗಿದ್ರೆ ಈ ಕಂಪ್ಲೀಟ್ ಸ್ಟೋರಿ ಓದಿ.

    ಹೌದು. ಸಿಹಿ ಮಾವಿನ ಹಣ್ಣಿಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಮಾವಿನಹಣ್ಣು ಕೂಡ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಆದರೆ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕಾದ ಅನಿವಾರ್ತೆಯೂ ನಮ್ಮ ಮುಂದಿದೆ. ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ಮಾವಿನ ಹಣ್ಣನ್ನು ವಿಷಕಾರಿ ರಾಸಾಯನಿಕ ಬೆರೆಸುವ ಮೂಲಕ ಹಣ್ಣು ಮಾಡಲಾಗುತ್ತದೆ. ಈ ರಾಸಾಯನಿಕ ವಿಷವಾಗಿದ್ದು, ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಹಣ್ಣುಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸುವುದರಿಂದ ನೀವು ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ನಿಮ್ಮ ಆರೋಗ್ಯಕ್ಕೆ ಹಣ್ಣುಗಳಲ್ಲಿ ಇದರ ಬಳಕೆ ಎಷ್ಟು ಅಪಾಯಕಾರಿ ಎಂಬುದರ ವಿವರಣೆ ಮುಂದೆ ಓದಿ.

    ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಮಾವು ಮತ್ತು ಇತರ ಹಣ್ಣುಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವ ಹಣ್ಣಿನ ವ್ಯಾಪಾರಿಗಳು ಮತ್ತು ಆಹಾರ ವ್ಯಾಪಾರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ. ಕ್ಯಾಲ್ಸಿಯಂ ಕಾರ್ಬೈಡ್ (calcium carbide) ಎಂಬ ವಿಷಕಾರಿ ರಾಸಾಯನಿಕದಿಂದ ಹಣ್ಣುಗಳನ್ನು ಮಾಗಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‍ಎಸ್‍ಎಸ್‍ಎಐ ತಿಳಿಸಿದೆ. ಈ ರಾಸಾಯನಿಕವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿದ ಹಣ್ಣುಗಳನ್ನು ತಿನ್ನುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಹೆಚ್ಚುವರಿಯಾಗಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಈ ಬಗ್ಗೆ ಕೃಷಿ ತಜ್ಞರೊಬ್ಬರು ಕ್ಯಾಲ್ಸಿಯಂ ಕಾರ್ಬೈಡ್ ಎಂದರೇನು ಮತ್ತು ನಿಮ್ಮ ಆರೋಗ್ಯಕ್ಕೆ ಹಣ್ಣುಗಳಲ್ಲಿ ಅದರ ಬಳಕೆ ಎಷ್ಟು ಅಪಾಯಕಾರಿ? ಎಂಬುದರ ಬಗ್ಗೆ ವಿವರಿಸಿದ್ದಾರೆ.

    ಕ್ಯಾಲ್ಸಿಯಂ ಕಾರ್ಬೈಡ್ ಎಂದರೇನು?: ಕ್ಯಾಲ್ಸಿಯಂ ಕಾರ್ಬೈಡ್ ಒಂದು ರಾಸಾಯನಿಕ ವಸ್ತುವಾಗಿದೆ. ಇದು ಮೇಲ್ನೋಟಕ್ಕೆ ಹರಳೆಣ್ಣೆಯಂತೆ ಕಾಣುತ್ತದೆ. ಇದು ಈಥೈಲ್ ಅನಿಲವನ್ನು ರೂಪಿಸಲು ಹಣ್ಣಿನಲ್ಲಿರುವ ನೀರು ಮತ್ತು ತೇವಾಂಶದೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ಈಥೈಲ್ ಅನಿಲದಿಂದ ಹಣ್ಣುಗಳ ಒಳಗೆ ಕೃತಕ ಶಾಖ ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಸಮಯಕ್ಕೆ ಮುಂಚಿತವಾಗಿ ಹಣ್ಣಾಗುತ್ತವೆ. ಅಕಾಲಿಕವಾಗಿ ಮಾಗಿದ ಹಣ್ಣುಗಳಲ್ಲಿ ಯಾವುದೇ ಪೋಷಕಾಂಶಗಳು ಕಂಡುಬರುವುದಿಲ್ಲ. ಪೌಷ್ಟಿಕಾಂಶದ ಕೊರತೆಯಿಂದಾಗಿ ಈ ಹಣ್ಣುಗಳನ್ನು ತಿನ್ನುವುದರಿಂದ ಪ್ರಯೋಜನಗಳ ಬದಲಿಗೆ ಹಾನಿಯಾಗುತ್ತದೆ.

    ಈ ರಾಸಾಯನಿಕ ಎಷ್ಟು ಹಾನಿಕಾರಕ?: ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರ ಬಳಕೆಯಿಂದ ಜನರು ಅನೇಕ ಗಂಭೀರ ಕಾಯಿಲೆಗಳಿಗೆ ಒಳಗಾಗಬಹುದು. ಆದ್ದರಿಂದ ಸರ್ಕಾರವು ಈ ರಾಸಾಯನಿಕವನ್ನು ನಿಷೇಧಿಸಿದೆ. ಆದರೆ ಇಂದಿಗೂ ಅನೇಕ ಹಣ್ಣಿನ ವ್ಯಾಪಾರಿಗಳು ತಮ್ಮ ಗೋದಾಮುಗಳಲ್ಲಿ ಈ ರಾಸಾಯನಿಕವನ್ನು ಬಹಿರಂಗವಾಗಿ ಬಳಸುತ್ತಾರೆ. ಇದನ್ನೂ ಓದಿ: ಪಾರ್ಕಿನ್ಸನ್ ರೋಗಕ್ಕೂ ನಿದ್ದೆಗೂ ಇದೆ ನಂಟು; ಏನಿದು ಕಾಯಿಲೆ? 

    ಯಾವೆಲ್ಲಾ ರೋಗಗಳು ಬರುತ್ತವೆ?: ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಬೇಯಿಸಿದ ಹಣ್ಣುಗಳ ನಿರಂತರ ಸೇವನೆಯು ಮೂತ್ರಪಿಂಡ ಮತ್ತು ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಹೊಟ್ಟೆ ಹುಣ್ಣು ಸಮಸ್ಯೆ ಬರಬಹುದು. ಇದಲ್ಲದೆ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚು. ಈ ರಾಸಾಯನಿಕವನ್ನು ಹಣ್ಣುಗಳಲ್ಲಿ ಬಳಸುವುದರಿಂದ ಅವುಗಳು ಸರಿಯಾಗಿ ಹಣ್ಣಾಗುವುದಿಲ್ಲ. ಅಂತಹ ಹಣ್ಣುಗಳು ಹೊರಭಾಗದಲ್ಲಿ ಮಾಗಿದಂತಿದ್ದರೂ ಒಳಗಿನಿಂದ ಅರ್ಧ ಮಾಗಿದಂತಿರುತ್ತವೆ. ಇಂತಹ ಹಣ್ಣುಗಳ ಸೇವನೆಯು ಮಕ್ಕಳ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ಹೀಗಾಗಿ ಹಣ್ಣುಗಳನ್ನು ಖರೀದಿ ಮಾಡುವಾಗ ಎಚ್ಚರದಿಂದಿರಿ.

    ಹಣ್ಣುಗಳನ್ನು ಹೇಗೆ ಗುರುತಿಸುವುದು?: ಕ್ಯಾಲ್ಸಿಯಂ ಕಾರ್ಬೈಡ್ ಹೊಂದಿರುವ ಹಣ್ಣುಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ಕ್ಯಾಲ್ಸಿಯಂ ಕಾರ್ಬೈಡ್ ಹೊಂದಿರುವ ಹಣ್ಣುಗಳಲ್ಲಿ ಕಲೆಗಳು ಹೆಚ್ಚು ಗೋಚರಿಸುತ್ತವೆ. ಅಲ್ಲದೆ ಅವು ಇತರ ನೈಸರ್ಗಿಕ ಹಣ್ಣುಗಳಿಗಿಂತ ಹೆಚ್ಚು ಹೊಳಪನ್ನು ಹೊಂದಿರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿದ ಹಣ್ಣುಗಳು 2 ರಿಂದ 3 ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಶೀಘ್ರದಲ್ಲೇ ಕೊಳೆಯಲು ಪ್ರಾರಂಭಿಸುತ್ತವೆ. ಈ ರಾಸಾಯನಿಕದಿಂದ ಮಾಗಿದ ಹಣ್ಣುಗಳು ಹೆಚ್ಚು ಸಿಹಿಯಾಗಿರುವುದಿಲ್ಲ. ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಹಣ್ಣುಗಳಲ್ಲಿ ಬಳಸಿದಾಗ ಅವು ಕಡಿಮೆ ಬಲಿಯುತ್ತವೆ.

    ನೈಸರ್ಗಿಕವಾಗಿರೋದನ್ನು ಗುರುತಿಸುವುದು ಹೇಗೆ?: ನೈಸರ್ಗಿಕ ಹಣ್ಣುಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ಸಾಧ್ಯವಾದಷ್ಟು ಕಲೆಗಳಿಲ್ಲದ ಹಣ್ಣುಗಳನ್ನು ಖರೀದಿಸಿ. ಯಾವಾಗಲೂ ನೀವು ನಂಬುವ ಮಾರಾಟಗಾರರಿಂದ ಮಾತ್ರ ಹಣ್ಣುಗಳನ್ನು ಖರೀದಿಸಿ. ಹಣ್ಣುಗಳನ್ನು ತಿನ್ನುವ ಮೊದಲು ಮಾಡಬೇಕಾದ ಕೆಲಸವೆಂದರೆ ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

    ನೈಸರ್ಗಿಕವಾಗಿ ಹಣ್ಣು ಮಾಡುವುದು ಹೇಗೆ?: ಮರಗಳ ಮೇಲಿನ ಹಣ್ಣುಗಳು 60 ರಿಂದ 70% ಸಿದ್ಧವಾದಾಗ, ಅವುಗಳನ್ನು ಕಿತ್ತು ಒಣಹುಲ್ಲಿನ ಅಥವಾ ಆಲದ ಎಲೆಗಳ ಒಳಗೆ ಒತ್ತಲಾಗುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗುತ್ತವೆ ಮತ್ತು ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.

    ಹಣ್ಣು ಮಾಡಲು ಈ ರಾಸಾಯನಿಕ ಬಳಸಬಹುದು: ನೈಸರ್ಗಿಕವಾಗಿ ಮಾಗಿದ ಹಣ್ಣುಗಳ ಹೊರತಾಗಿ, ಭಾರತ ಸರ್ಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಸಾಯನಿಕವಾಗಿ ಹಣ್ಣುಗಳನ್ನು ಮಾಗಿಸಲು ಎಥಿಲೀನ್ ಬಳಸಲು ಅನುಮತಿ ನೀಡಿದೆ. ಇದರ ಬಳಕೆಯಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದನ್ನು ಬಳಸಿದರೆ ಅವು ನೈಸರ್ಗಿಕವಾಗಿ ಹಣ್ಣಾಗುತ್ತವೆ.

    ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಫಳ ಪಳ ಹೊಳೆಯುವಂತಹ ಹಣ್ಣುಗಳನ್ನು ಖರೀದಿಸುವ ಮುನ್ನ ತುಂಬಾ ಸೂಕ್ಷ್ಮವಾಗಿ ಆಯ್ದುಕೊಳ್ಳಿ.

  • ದೀದಿಗೆ 600 KG ಮಾವಿನ ಹಣ್ಣು ಗಿಫ್ಟ್‌ ಕಳುಹಿಸಿದ ಬಾಂಗ್ಲಾದೇಶದ ಪ್ರಧಾನಿ

    ದೀದಿಗೆ 600 KG ಮಾವಿನ ಹಣ್ಣು ಗಿಫ್ಟ್‌ ಕಳುಹಿಸಿದ ಬಾಂಗ್ಲಾದೇಶದ ಪ್ರಧಾನಿ

    ಕೋಲ್ಕತ್ತಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Sheikh Hasina) ಅವರಿಗೆ 600 ಕೆಜಿ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

    ʻಹಿಂಸಾಗರ್ʼ ಹಾಗೂ ʻಲಂಗ್ರಾʼ ತಳಿಯ ಮಾವಿನ ಹಣ್ಣುಗಳನ್ನು (Mangoes) ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಕಳೆದ ವರ್ಷ ಸಹ ಮಾವಿನ ಹಣ್ಣುಗಳನ್ನು ಕಳುಹಿಸಿಕೊಡಲಾಗಿತ್ತು ಎಂದು ಬಾಂಗ್ಲಾದೇಶದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಸೀನಾ ಅವರು ಈಶಾನ್ಯದ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಕಳೆದ ವರ್ಷ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂ ಮುಖ್ಯಮಂತ್ರಿಗಳಿಗೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದ್ದರು. ಇದನ್ನೂ ಓದಿ: ಟ್ವಿಟ್ಟರ್ ಕಂಪನಿ ಮುಚ್ಚುತ್ತೇವೆ, ಉದ್ಯೋಗಿಗಳ ಮೇಲೆ ದಾಳಿ: ಭಾರತದಿಂದ ಬೆದರಿಕೆ ಬಂದಿತ್ತು ಎಂದ ಡಾರ್ಸಿ

    ರಾಜತಾಂತ್ರಿಕ ಪ್ರಯತ್ನಗಳ ಭಾಗವಾಗಿ ಬಾಂಗ್ಲಾದೇಶದ ಪ್ರಧಾನಿ ಮಮತಾ ಬ್ಯಾನರ್ಜಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: Cyclone Biparjoy – ಬೀಸಲಿದೆ 150 ಕಿ.ಮೀ ವೇಗದಲ್ಲಿ ಬಿರುಗಾಳಿ, ಈಗಾಗಲೇ 7,500 ಮಂದಿ ಸ್ಥಳಾಂತರ

  • ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಿ

    ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಿ

    ಮಾವಿನ ಹಣ್ಣು (Mango) ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ (Health) ಉತ್ತಮವಾಗಿದೆ. ಬೇಸಿಗೆಯಲ್ಲಿ ಸಿಗುವ ಮಾವಿನ ಹಣ್ಣು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ವಿಟಮಿನ್ ಎ, ಸಿ, ಫೈಬರ್, ಕಬ್ಬಿಣ, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‍ಗಳ ಉತ್ತಮ ಮೂಲವಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಷ್ಟಲ್ಲ ಉಪಯೋಗವಿರುವ ಮಾವಿನ ಹಣ್ಣನ್ನು ತಿನ್ನುವುದಕ್ಕೂ ಮೊದಲು ಕೆಲ ಸಮಯಗಳವರೆಗೆ ನೀರಿನಲ್ಲಿ (Water) ನೆನೆಸಿಡುವುದು ಅವಶ್ಯಕವಾಗಿದೆ.

    ರೋಗಗಳನ್ನು ತಡೆಯುತ್ತದೆ: ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಕೀಟನಾಶಕಗಳು ಹಾಗೂ ರಾಸಾಯನಿಕಗಳು ದೂರವಾಗುತ್ತವೆ. ಜೊತೆಗೆ ಹಣ್ಣಿನ ಮೇಲಿನ ಧೂಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಮಾವಿನಹಣ್ಣು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲದೇ ಕಣ್ಣು, ಕೂದಲು ಮತ್ತು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ.

    ರಾಸಾಯನಿಕ ಅಂಶಕ್ಕೆ ಕಡಿವಾಣ: ಮಾವಿನ ಹಣ್ಣುಗಳನ್ನು ರಕ್ಷಿಸಲು ಅನೇಕ ರೀತಿಯ ಕೀಟನಾಶಕಗಳನ್ನು ಬಳಸಲಾಗುತ್ತದೆ. ಆದರೆ ಅವೇ ನಮಗೆ ಮಾರಕವಾಗುತ್ತವೆ. ಮಾವಿನ ಹಣ್ಣನ್ನು ಹಾಗೇ ತಿನ್ನುವುದರಿಂದ ರಾಸಾಯನಿಕಗಳು ನಮ್ಮ ದೇಹಕ್ಕೆ ಸೇರಿಕೊಳ್ಳುತ್ತವೆ. ಇದರಿಂದಾಗಿ ಚರ್ಮ ರೋಗ, ತಲೆ ನೋವು, ವಾಕರಿಕೆ ಸೇರಿದಂತೆ ಅನೇಕ ರೊಗಗಳು ಬರುವ ಸಾಧ್ಯತೆಯಿರುತ್ತದೆ. ಆದರೆ 15 ನಿಮಿಷಗಳ ಮಾವಿನ ಹಣ್ಣನ್ನು ನೆನೆಸುವುದರಿಂದ ರಾಸಾಯನಿಕ ಅಂಶಗಳು ಕಡಿಮೆಗೊಳ್ಳುತ್ತವೆ. ಇದನ್ನೂ ಓದಿ: ಥೈರಾಯ್ಡ್ ರೋಗಿಗಳು ಮಲಗುವ ಮುನ್ನ ಈ ಆಹಾರ ಸೇವಿಸಿ

    ಚರ್ಮದ ಸಮಸ್ಯೆ ನಿವಾರಣೆ: ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದರಿಂದ ತ್ವಚೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸದೇ ಮೊಡವೆಗಳು ಹಾಗೂ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ, ಮಲಬದ್ಧತೆ, ತಲೆನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ ಮಾವಿನ ಹಣ್ಣನ್ನು ನೀರಿನಲ್ಲಿ ಇರಿಸುವುದರಿಂದ ಇವೆಲ್ಲ ಸಮಸ್ಯೆಯಿಂದ ಪಾರಾಗಬಹುದು.

    ದೇಹದ ಉಷ್ಣತೆ ನಿರ್ವಹಣೆ: ಸಾಮಾನ್ಯವಾಗಿ ಮಾವಿನಹಣ್ಣು ತಿಂದ ನಂತರ ದೇಹದ ಉಷ್ಣತೆ ತುಂಬಾ ಹೆಚ್ಚಾಗುತ್ತದೆ. ಅದೇ ರೀತಿ ಮಾವಿನ ಹಣ್ಣನ್ನು ನೀರಿನಲ್ಲಿ ನೆನಸುವುದರಿಂದ ದೇಹದಲ್ಲಿರುವ ಉಷ್ಣತೆಯನ್ನು ನಿರ್ವಹಣೆ ಮಾಡಬಹುದಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಅದ್ಭುತ ಪ್ರಯೋಜನ

  • ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಲಂಡನ್: ಮಾವಿನ ಉಪ್ಪಿನಕಾಯಿಯನ್ನು (Mango Pickle) ಸೇವಿಸಿದ ನಂತರ ಗೊರಟೆ ಗಂಟಲಿಗೆ ಸಿಕ್ಕಿಕೊಂಡು 57 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಣ್ಣು ತಿಂದ ಬಳಿಕ ನುಂಗಲು ತೊಂದರೆಯಾಗುತ್ತಿದೆ ಎಂದ ಮಹಿಳೆಯನ್ನು ಸ್ಥಳೀಯ ಎಪ್ಸಮ್ ಆಸ್ಪತ್ರೆಯ (Epsom Hospital) ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಮಾವಿನಹಣ್ಣಿನಂತಹ ಮೃದುವಾದ ಹಣ್ಣು ಇಂತಹ ಹಾನಿಯನ್ನುಂಟುಮಾಡುತ್ತದೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಬೆರಗಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

    ವೈದ್ಯಕೀಯ ಪರೀಕ್ಷೆ ವೇಳೆ ಮಹಿಳೆ ಜೊಲ್ಲು ಸುರಿಸುತ್ತಿದ್ದಳು ಮತ್ತು ನುಂಗಲು ಸಮರ್ಥಳಾಗಿದ್ದಳು. ವೈದ್ಯರು ಕೂಡ ಪರೀಕ್ಷೆಯಲ್ಲಿ ದೇಹದ ಒಳಗಡೆ ಯಾವುದೇ ಪದಾರ್ಥ ಕಂಡು ಬಂದಿಲ್ಲ. ಜಠರದ ಉರಿತದಿಂದ ಸಮಸ್ಯೆ ಉಂಟಾಗಿರಬಹುದು ಎಂದು ಮಹಿಳೆಗೆ ತಿಳಿಸಲಾಗಿದೆ. ಒಂದು ವೇಳೆ ಆರೋಗ್ಯ ಹೆಚ್ಚು ಹದಗೆಟ್ಟರೆ ಮತ್ತೆ ಹಿಂತಿರುಗುವಂತೆ ತಿಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ನಾಲ್ಕು ದಿನಗಳ ನಂತರ ಸೆಪ್ಸಿಸ್‍ನ ಲಕ್ಷಣಗಳಿದ್ದರಿಂದ ಮತ್ತೆ ಆಸ್ಪತ್ರೆಗೆ ಮಹಿಳೆ ಹಿಂದಿರುಗಿ, ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಸಿಟಿ ಸ್ಕ್ಯಾನ್ ನಡೆಸಿದಾಗ ಅನ್ನನಾಳದಲ್ಲಿ ಹುಣ್ಣಾಗಿ ಎದೆ ಉರಿ ಉಂಟಾಗಿರುವುದು ತಿಳಿದುಬಂದಿದೆ. ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊರಟೆಯನ್ನು ತೆಗೆಸಿಕೊಳ್ಳಲು ಮಹಿಳೆ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಒಂದು ವಾರ ಆಸ್ಪತ್ರೆಯಲ್ಲಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮದೇ ತೋಟದಲ್ಲಿ 1,600 ತಳಿಯ ಮಾವು ಬೆಳೆದ ಭಾರತದ ಮ್ಯಾಂಗೋ ಮ್ಯಾನ್

    ತಮ್ಮದೇ ತೋಟದಲ್ಲಿ 1,600 ತಳಿಯ ಮಾವು ಬೆಳೆದ ಭಾರತದ ಮ್ಯಾಂಗೋ ಮ್ಯಾನ್

    ಲಕ್ನೋ: ಭಾರತದ ಮ್ಯಾಂಗೋ ಮ್ಯಾನ್ ಎಂದೇ ಫೇಮಸ್ ಆಗಿರುವ 82 ವಯಸ್ಸಿನ ಹಾಜಿ ಕಲೀಮುಲ್ಲಾ ಖಾನ್ ಅವರು ಬಾಲ್ಯದಿಂದ ಮಾವಿನ ಹಣ್ಣನ್ನು ಬೆಳೆಸಲು ಪ್ರಾರಂಭಿಸಿ ಇದೀಗ ಉತ್ತರ ಪ್ರದೇಶದಲ್ಲಿರುವ ತಮ್ಮ ತೋಟದಲ್ಲಿ 1,600 ತಳಿಯ ಮಾವಿನ ಹಣ್ಣಿನ ಮರವನ್ನು ಬೆಳೆಸುತ್ತಿದ್ದಾರೆ.

    ಲಕ್ನೋ ಮೂಲದ ಹಾಜಿ ಕಲೀಮುಲ್ಲಾ ಖಾನ್ ಅವರು ಚಿಕ್ಕವರಿದ್ದಾಗ ತಮ್ಮ ಪೂರ್ವಜರು ಬೆಳೆಸಿದ ಮಾವಿನ ಮರಗಳ ಸುತ್ತಾಮುತ್ತಾ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತಿದ್ದರು. ಈ ವೇಳೆ ಸಿಹಿಯಾದ ಮಾವಿನ ಹಣ್ಣನ್ನು ಸವಿಯುತ್ತಿದ್ದರು. ಇದೀಗ ಪ್ರೀತಿಯಿಂದ ತಮ್ಮ ಎಂಟು ಎಕರೆ ಭೂಮಿಯಲ್ಲಿ 1,600 ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣಿನ ಮರವನ್ನು ನೆಟ್ಟಿದ್ದಾರೆ.  ಇದನ್ನೂ ಓದಿ: ಮೇಘಸ್ಫೋಟಕ್ಕೆ ಸುಳ್ಯದ 4 ಗ್ರಾಮಗಳು ತತ್ತರ- ರಾತ್ರಿ ಇದ್ದ ಅಂಗಡಿ ಬೆಳಗ್ಗೆ ಮಾಯ!

    ಹಾಜಿ ಕಲೀಮುಲ್ಲಾ ಖಾನ್ ಅವರು 7ನೇ ತರಗತಿಯಲ್ಲಿದ್ದಾಗ ಮೊದಲು ಮಾವಿನ ಮರವನ್ನು ನೆಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ಒಂದೇ ಮರದಿಂದ ಏಳು ವಿಧದ ಹಣ್ಣುಗಳನ್ನು ಬೆಳೆಸುವ ಕಸಿ ವಿಧಾನವನ್ನು ಕಲಿತುಕೊಂಡರು. ಇಂದು ಅವರ ಜಮೀನಿನಲ್ಲಿ 120 ವರ್ಷ ಹಳೆಯ ಮಾವಿನ ಮರವಿದ್ದು, ವಿವಿಧ ರುಚಿ, ಬಣ್ಣ, ವಿನ್ಯಾಸ ಮತ್ತು ವಾಸನೆಯ 30 ಬಗೆಯ ಮಾವಿನ ಹಣ್ಣುಗಳಿವೆ.

    ವಿಶೇಷವೆಂದರೆ, ಇವರು ಬೆಳೆಸಿರುವ ಮಾವಿನ ಹಣ್ಣುಗಳಿಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯ ವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಇದನ್ನೂ ಓದಿ: CM ಆಗೋದು ತಪ್ಪಿಸೋಕೆ ಯಾರಿಂದ್ಲೂ ಸಾಧ್ಯವಿಲ್ಲ- ಸೋನಿಯಾ ತಾಯಿ ಪ್ರೀತಿ ಮೇಲೆ ನಂಬಿಕೆಯಿದೆ: ಡಿಕೆಶಿ

    ತೋಟಗಾರಿಕೆ ಕ್ಷೇತ್ರಕ್ಕೆ ಹಾಜಿ ಕಲೀಮುಲ್ಲಾ ಖಾನ್ ಅವರು ನೀಡಿದ ಕೊಡುಗೆಗಳು, ಮಾವಿನ ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಲು ಅವರು ಪಟ್ಟ ಶ್ರಮಕ್ಕಾಗಿ 2008ರಲ್ಲಿ ಹಾಜಿ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

    ಮಾವಿನ ಹಣ್ಣಿನಂತಹ ಪ್ರಿಯವಾದ ಹಣ್ಣನ್ನು ಬೆಳೆಯುವ ಕೆಲಸ ಅತ್ಯಂತ ಪವಿತ್ರವಾದುದು. ಒಬ್ಬ ವ್ಯಕ್ತಿಯು ಮಾಗಿದ ಮತ್ತು ಸಿಹಿಯಾದ ಮಾವಿನ ಹಣ್ಣನ್ನು ತಿನ್ನುವುದನ್ನು ನೋಡುವುದರಲ್ಲಿ ನನಗೆ ಸಿಗುವ ಖುಷಿ ಮತ್ತೊಂದಿಲ್ಲ. ಜಗತ್ತಿಗೆ ಸ್ವಲ್ಪ ಸಂತೋಷ ಮತ್ತು ಮಾಧುರ್ಯವನ್ನು ಹಂಚುವುದೇ ನನ್ನ ಗುರಿಯಾಗಿದೆ. ಅದನ್ನು ಮಾಡಲು ಮಾವಿನಹಣ್ಣಿನ್ನು ಬೆಳೆಸುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದು ಎಂದರು.

    Live Tv
    [brid partner=56869869 player=32851 video=960834 autoplay=true]

  • ಮಾವಿನಹಣ್ಣಿಗಾಗಿ ಹಠ ಮಾಡಿದ 5 ವರ್ಷದ ಬಾಲಕಿಯನ್ನು ಕೊಲೆಗೈದ ಸೋದರ ಮಾವ

    ಮಾವಿನಹಣ್ಣಿಗಾಗಿ ಹಠ ಮಾಡಿದ 5 ವರ್ಷದ ಬಾಲಕಿಯನ್ನು ಕೊಲೆಗೈದ ಸೋದರ ಮಾವ

    ಲಕ್ನೋ: 5 ವರ್ಷದ ಬಾಲಕಿ ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ್ದಕ್ಕೆ ಸೋದರ ಮಾವನೇ ಕಂದಮ್ಮನನ್ನು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಾ ಖೇಡಾ ಕುರ್ತಾನ್ ಗ್ರಾಮದಲ್ಲಿ ನಡೆದಿದೆ.

    ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ ಬಾಲಕಿಯಿಂದ ಕೋಪಗೊಂಡ ಮಾವ ಉಮರ್ದೀನ್ ಆಕೆಯ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿದ್ದಾನೆ. ತೀವ್ರ ರಕ್ತ ಸಾವ್ರದಿಂದ ಬಾಲಕಿ ಸಾವನ್ನಪ್ಪಿದ್ದು, ಬಳಿಕ ಆಕೆಯ ದೇಹವನ್ನು ಗೋಣಿಚೀಲದಲ್ಲಿ ತುಂಬಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ

    crime

    ಮೃತ ಬಾಲಕಿ ಕೂಲಿ ಕಾರ್ಮಿಕನ ಮಗಳು ನಿಶಾ ಎಂದು ಗುರುತಿಸಲಾಗಿದೆ. ಕೃತ್ಯ ನಡೆದ ಬಳಿಕ ಬಾಲಕಿ ನಾಪತ್ತೆಯಾಗಿರುವುದು ತಿಳಿದು ಗ್ರಾಮಸ್ಥರೆಲ್ಲರೂ ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಯೂ ತನಗೇನೂ ಗೊತ್ತಿಲ್ಲದಂತೆ ಗ್ರಾಮಸ್ಥರೊಂದಿಗೆ ಹುಡುಕಾಟದಲ್ಲಿ ತೊಡಗಿದ್ದ. ಆದರೆ ಪೊಲೀಸರು ಸ್ಥಳಕ್ಕೆ ಬಂದಾಗ ಬಾಲಕಿಯ ಸೋದರ ಮಾವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನ ವ್ಯಕ್ತವಾಗುತ್ತಿದ್ದಂತೆ ಆತ ಅಲ್ಲಿಂದ ಓಟಕ್ಕಿತ್ತಿದ್ದಾನೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    KILLING CRIME

    ತನಿಖೆ ವೇಳೆ ಬಾಲಕಿಯ ಶವ ಆರೋಪಿಯ ಮನೆಯಲ್ಲಿಯೇ ಪತ್ತೆಯಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದು, ಶುಕ್ರವಾರ ಜೈಲಿಗೆ ಕಳುಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]