Tag: ಮಾವಿನಹಣ್ಣು

  • ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಬೆಂಗಳೂರು: ಒಂದು ಕಡೆ ಬಗೆಬಗೆಯ ಮಾವು, ಮತ್ತೊಂದು ಕಡೆ ಹಣ್ಣುಗಳ ರಾಜ ಹಲಸಿನ ಹಣ್ಣು, ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್‌ಕಾಮ್ಸ್ ಮತ್ತೆ ಈ ವರ್ಷ ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ ನೀಡಿದೆ.

    MUNIRATHNA (1

    ಹಾಪ್‌ಕಾಮ್ಸ್ ನಲ್ಲಿ ಇಂದಿನಿಂದ ನಡೆಯುವ ಮಾವು ಮತ್ತು ಹಲಸು ಮೇಳಕ್ಕೆ ತೋಟಾಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಿದ್ದು, ಸೀಸನ್ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.30 ರಷ್ಟು ಮಾತ್ರ ಪಸಲು ಬಂದಿದೆ. ಆದರೂ, ಬಗೆಬಗೆಯ 14 ಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    Mango

    ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿವೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗ್ತಿದೆ. ಜೊತೆಗೆ 7 ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿವೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ವಿವಿಧ ಬಗೆಯ ಮಾವಿನ ಹಣ್ಣು ಕೆಜಿಗೆ 32 ರಿಂದ 215 ರೂಪಾಯಿ ವರೆಗೆ, ಹಲಸಿನ ಹಣ್ಣು ಪ್ರತಿ ಕೆಜಿಗೆ 25ರೂ. ನಿಗದಿಯಾಗಿದೆ.

  • ಇಲ್ಲಿ 1 ಮಾವಿನ ಹಣ್ಣಿಗೆ 2 ಸಾವಿರ – ತಿಂಗಳಿಗೆ ಮುಂಚೆಯೇ ಶುರುವಾಗಿದೆ ಬುಕ್ಕಿಂಗ್

    ಇಲ್ಲಿ 1 ಮಾವಿನ ಹಣ್ಣಿಗೆ 2 ಸಾವಿರ – ತಿಂಗಳಿಗೆ ಮುಂಚೆಯೇ ಶುರುವಾಗಿದೆ ಬುಕ್ಕಿಂಗ್

    ಇಂಧೋರ್: ಸಾಮಾನ್ಯವಾಗಿ ರೈತರು ಬೆಳೆಯುವ ಮಾವಿನ ಹಣ್ಣುಗಳು 100 ರಿಂದ 300 ಗ್ರಾಂ ಇರುತ್ತವೆ. ಹೆಚ್ಚೆಂದರೆ 500 ಗ್ರಾಂ ಬರಬಹುದು. ಆದರೆ, ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ಬೆಳೆಯುವ ಮಾವಿನ ಹಣ್ಣು ಬರೋಬ್ಬರಿ 4 ಕೆಜಿ ವರೆಗೂ ಬರಲಿದ್ದು, ತಿಂಗಳಿಗೆ ಮುಂಚೆಯೇ ಬುಕ್ಕಿಂಗ್ ಶುರುವಾಗಿದೆ.

    ಮಧ್ಯಪ್ರದೇಶದ ಕಥ್ಥಿವಾಡ ಪ್ರದೇಶದಲ್ಲಿ ಬೆಳೆಯಲಾಗುವ ಈ ವಿಶೇಷ ತಳಿಯ ಮಾವಿನ ಹಣ್ಣು ಗರಿಷ್ಠ 4 ಕೆಜಿ ವರೆಗೂ ಇರಲಿದೆ. ಅತ್ಯಂತ ಸಿಹಿಯಾಗಿರುವ ಈ ಮಾವಿನ ಹಣ್ಣು ಗಾತ್ರದಷ್ಟೇ ದುಬಾರಿ ದರವೂ ಹೊಂದಿದ್ದು, 1 ರಿಂದ 2 ಸಾವಿರ ರೂ. ವರೆಗೆ ಮಾರಾಟವಾಗುತ್ತದೆ. ಇದನ್ನೂ ಓದಿ: ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವಕ್ಕೆ ಬ್ರೇಕ್ – ನಿರ್ಬಂಧ ಹೇರಿದ್ರೆ ನಾನೇ ಪಲ್ಲಕ್ಕಿ ಹೊರುತ್ತೇನೆಂದ ಅಣ್ಣಾಮಲೈ

    MANGO

    ಹೌದು ಅಫ್ಘಾನಿಸ್ತಾನ ಮೂಲದ ನೂರ್‌ಜಹಾನ್ ಎಂಬ ಮಾವಿನ ತಳಿಯ ಹಣ್ಣು 1 ಅಡಿ ಉದ್ದ ಮತ್ತು 4 ಕೆಜಿ ತೂಕವಿರಲಿದೆ. ಜನವರಿ-ಫೆಬ್ರವರಿ ವೇಳೆ ಈ ಮರಗಳಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತವೆ. ಜೂನ್ ಮೊದಲ ವಾರದ ವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತವೆ. ಆದರೆ, ದುಬಾರಿ ಹವಾಮಾನ ವೈಪರಿತ್ಯದಿಂದಾಗಿ ಮರಗಳಲ್ಲಿ ಈ ಬಾರಿ ಕಾಯಿ ಕಡಿಮೆಯಾಗಿದೆ. ಹಣ್ಣಾಗುವ ಮೊದಲೇ ಹೂವು ಉದುರಿಹೋಗಿದ್ದು, ಮೂರೇ ಮರಗಳಲ್ಲಿನ 250 ಕಾಯಿಗಳು ಉಳಿದಿವೆ. ಇದನ್ನೂ ಓದಿ: ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

    MP Mango 3
    ಸಾಂರ್ಭಿಕ ಚಿತ್ರ

    ಕಳೆದ ವರ್ಷ ಪ್ರತಿ ಹಣ್ಣನ್ನು 500 ರಿಂದ 1,500ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವರ್ಷ 2 ಸಾವಿರ ರೂ. ವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಜೂನ್ ತಿಂಗಳ ವೇಳೆ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇದಕ್ಕೆ ಆಕರ್ಷಿತರಾಗಿರುವ ಮಾವು ಪ್ರಿಯರು ತಿಂಗಳಿಗೆ ಮುಂಚಿತವಾಗಿಗೆ ಬುಕ್ಕಿಂಗ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾದವ್ ಹೇಳಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿವೆ.


  • ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ದು ಹಣ್ಣುಗಳ ರಾಜ ಮಾವಿನಹಣ್ಣಿನ ಕಾಲ. ಕಿರಿಯರಿಂದ ಹಿರಿಯರವರೆಗೂ ಮಾವು ಕಂಡರೆ ಎಲ್ಲರಿಗೂ ಇಷ್ಟ. ಮಾವಿನಿಂದ ಮಾಡುವ ಎಲ್ಲ ತಿಂಡಿ, ಜ್ಯೂಸ್‍ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಅದಕ್ಕೆ ಇಂದು ಸಿಂಪಲ್ ಮತ್ತು ರುಚಿಯಾದ ‘ಮ್ಯಾಂಗೋ ಲಸ್ಸಿ’ ಮಾಡುವ ವಿಧಾನ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಮ್ಯಾಂಗೋ – 4
    * ಮೊಸರು – 2 ಕಪ್
    * ಸಕ್ಕರೆ – 5 ಟೀಸ್ಪೂನ್


    * ಏಲಕ್ಕಿ ಪುಡಿ – 1/4 ಟೀಸ್ಪೂನ್
    * ಪುದೀನ ಎಲೆಗಳು – 3-4

    ಮಾಡುವ ವಿಧಾನ:
    * ಮೊದಲು ಮಾವಿನ ಹಣ್ಣಗಳ ಸಿಪ್ಪೆ ಸುಲಿದು ತಿರುಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
    * ತಿರುಳು ಮತ್ತು ಮೊಸರನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಚೆನ್ನಾಗಿ ಗ್ರೈಡ್ ಮಾಡಿ. ಮೂರು ಅಥವಾ ನಾಲ್ಕು ಬಾರಿ ಗ್ರೈಡ್ ಮಾಡಿ.
    * ನಂತರ ಮಿಕ್ಸಿಯಿಂದ ಲಸ್ಸಿ ತೆಗೆದು ಅದನ್ನು ಸರ್ವಿಂಗ್ ಬೌಲ್‍ಗೆ ಮ್ಯಾಂಗೋ ಲಸ್ಸಿ ಹಾಕಿ ಅದಕ್ಕೆ ಒಂದೆರೆಡು ಐಸ್‍ಕ್ಯೂಬ್ ಹಾಕಿ. ಪುದೀನ ಎಲೆಗಳಿಂದ ಅಲಂಕರಿಸಿ.

  • ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣು

    ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣು

    ನವದೆಹಲಿ: ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಬಿಡುವ ಮೂಲಕವಾಗಿ ಅಚ್ಚರಿಯನ್ನೂ ಮೂಡಿಸುತ್ತಿದೆ.

    ಒಂದು ಮರದಲ್ಲಿ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಬಿಡುವ ಮೂಲಕವಾಗಿ ಮರ ಅಚ್ಚರಿ ಹಾಗೂ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ. ಹದಿನೈದು ವರ್ಷದ ಈ ಮಾವಿನ ಮರದಲ್ಲಿ ತೋಟಗಾರಿಕಾ ಪರಿಣತರು ಕಳೆದ ಐದು ವರ್ಷಗಳಿಂದ ಇಂಥದ್ದೊಂದು ಪ್ರಯೋಗ ನಡೆಸಿದ್ದು, ಇದೀಗ 121 ಬಗೆಯ ಹಣ್ಣುಗಳನ್ನು ಒಂದೇ ಮರದಲ್ಲಿ ಕಾಣಲು ಸಾಧ್ಯವಾಗುವಂತಾಗಿದೆ. ಉತ್ತರಪ್ರದೇಶದ ಸಹರನ್‍ಪುರ ಜಿಲ್ಲೆಯಲ್ಲಿ ಇಂಥದ್ದೋಂದು ಪ್ರಯೋಗ ನಡೆದಿದೆ.

    ತೋಟಗಾರಿಕಾ ಪ್ರಯೋಗ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರಾಜೇಶ್ ಪ್ರಸಾದ್ ಅವರು 121 ಬಗೆಯ ಮಾವಿನ ಗಿಡದ ರೆಂಬೆಗಳನ್ನು ಒಂದೇ ಮರಕ್ಕೆ ಕಸಿ ಮಾಡುವ ಮೂಲಕ ಹೀಗೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಈ ರೀತಿಯ ಕಸಿ ಮಾಡಿ ಆ ಮರದ ಆರೈಕೆಗೆ ವಿಶೇಷ ಗಮನ ನೀಡಲಾಗಿದೆ. ಪರಿಣಾಮವಾಗಿ ನೂರಕ್ಕೂ ಅಧಿಕ ಬಗೆಯ ಮಾವಿನಹಣ್ಣುಗಳು ಒಂದೇ ತಳಿಯ ಮಾವಿನ ಮರದಲ್ಲಿ ಸಿಗುವಂತಾಗಿದೆ.

    ನಾವು ಹೊಸ ಜಾತಿ ಹಣ್ಣುಗಳ ಮರಗಳನ್ನು ಕಂಡು ಹಿಡಿಯುವಲ್ಲಿ ಕೆಲಸ ಮಾಡುತ್ತಿದ್ದೇವೆ ಇದರಿಂದ ಉತ್ತಮ ರೀತಿಯ ಮಾವಿನಹಣ್ಣನ್ನು ಉತ್ಪಾದಿಸಬಹುದು. ಜನರು ಈ ತಂತ್ರವನ್ನು ಸಹ ಬಳಸಬಹುದು ಎಂದು ತೋಟಗಾರಿಕೆ ಮತ್ತು ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಭಾನು ಪ್ರಕಾಶ್ ರಾಮ್ ಹೇಳಿದ್ದಾರೆ.

  • ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂದಿದೆ. ಹೀಗಾಗಿ ನೀವು ಇಂದು ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡಿ ಸಿವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮಾವಿನ ಹಣ್ಣು- 1ಕಪ್
    * ಚಿರೋಟಿ ರವೆ- 1ಕಪ್
    * ಹಾಲು- 1ಕಪ್
    * ತುಪ್ಪ- ಅರ್ಧ ಕಪ್
    * ದ್ರಾಕ್ಷಿ ,ಗೋಡಂಬಿ
    * ಏಲಕ್ಕಿ ಪುಡಿ – ಅರ್ಧ ಟೀ ಸ್ಪೂನ್
    * ಹಳದಿ ಬಣ್ಣದ ಫುಡ್ ಕಲರ್
    * ಕೇಸರಿ ದಳ

    ಮಾಡುವ ವಿಧಾನ:
    * ಮೊದಲು ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿ ಆದ ಮೇಲೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದುಕೊಳ್ಳಿ, ಈಗ ಅದನ್ನು ತೆಗೆದು ಬದಿಯಲ್ಲಿ ಇಟ್ಟಿರಬೇಕು.  ಇದನ್ನೂ ಓದಿ: ಬೆಳಗ್ಗಿನ ಟಿಫಿನ್‌ಗೆ ಮಾಡಿ ಬಿಸಿ ಬೇಳೆ ಬಾತ್

    * ಮಾವಿನ ಹಣ್ಣಿನ ಮಿಶ್ರಣವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು, ಬಳಿಕ ಅದಕ್ಕೆ ಹಾಲು ಹಾಕಿ ತಿರುಗಿಸಿಕೊಳ್ಳಬೇಕು, ನಂತರ ಅದಕ್ಕೆ ನೀರು ಹಾಕಿ 2 ನಿಮಿಷ ಕುದಿಯಲು ಬಿಡಬೇಕು.

    * ಬಳಿಕ ಏಲಕ್ಕಿ ಪುಡಿ, ಕೇಸರಿ ದಳ, ಹಳದಿ ಬಣ್ಣದ ಫುಡ್ ಕಲರ್ ಹಾಕಿ, ಆ ಮೇಲೆ ಹುರಿದ ದ್ರಾಕ್ಷಿ- ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಹುರಿದ ಚಿರೋಟಿ ರವೆ, ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ಬಳಿಕ 2 ರಿಂದ 3 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಾವಿನ ಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧವಾಗುತ್ತದೆ.

  • ಜಸ್ಟ್ 1 ಮಾವಿನ ಹಣ್ಣಿನ ಬೆಲೆ 1 ಸಾವಿರ – ಈಗಲೇ ಮುಂಗಡ ಬುಕ್ಕಿಂಗ್

    ಜಸ್ಟ್ 1 ಮಾವಿನ ಹಣ್ಣಿನ ಬೆಲೆ 1 ಸಾವಿರ – ಈಗಲೇ ಮುಂಗಡ ಬುಕ್ಕಿಂಗ್

    ಭೋಪಾಲ್: ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂತು ಹೀಗಿರುವಾಗ ಮಧ್ಯಪ್ರದೇಶದಲ್ಲಿನ ವಿಶಿಷ್ಟ ತಳಿಯ ಮಾವಿನ ಮರ ಈಗ ಫಸಲು ನೀಡಲು ಆರಂಭಿಸಿದೆ. ಆದರೆ ಒಂದು ಮಾವಿನಹಣ್ಣಿ ಬೆಲೆಯನ್ನು ಕೇಳಿದರೆ ಖಂಡಿತ ಆಶರ್ಯವಾಗಲಿದೆ.

    ಗುಜರಾತ್ ಗಡಿಯಲ್ಲಿರುವ ಅಲಿರಜ್‍ಪುರ ಜಿಲ್ಲೆಯ ಕಥ್ಥಿವಾಡ ಪ್ರದೇಶದಲ್ಲಿ ಮಾತ್ರ ಬೆಳೆಯವ ಈ ಫಸಲು ನೂರ್ ಜಹಾನ್ ಮಾವಿನಕಾಯಿ ಎಂದೇ ಪ್ರಸಿದ್ಧವಾಗಿದೆ. ಒಂದು ಡಜನ್ ಮಾವಿನಹಣ್ಣು ಖರಿದೀಸುವ ಹಣದಲ್ಲಿ ಒಂದೇ ನೂರ್ ಜಹಾನ್ ಹಣ್ಣು ಮಾರಾಟವಾಗುತ್ತಿದೆ. ಒಂದು ಹಣ್ಣಿಗೆ 500 ರಿಂದ 1ಸಾವಿರ ರೂಪಾಯಿಗಳವರೆಗೆ ಹಣ್ಣು ಮಾರಾಟವಾಗುತ್ತದೆ. ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ಹಣ್ಣಿನ ಗಾತ್ರ ಉಳಿದ ಮಾವಿನಹಣ್ಣುಗಳಿಗೆ ಹೊಲಿಸಿದರೆ ತುಂಬಾ ದೊಡ್ಡದ್ದಾಗಿರುತ್ತದೆ. ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯವ ಈ ಮಾವಿನಹಣ್ಣು 2 ರಿಂದ 3.5 ಕೆಜಿಗಳಷ್ಟು ತೂಕ ಹೊಂದಿರುತ್ತದೆ.

    ನನ್ನ ತೋಟದಲ್ಲಿರುವ ಮೂರು ನೂರ್ ಜಹಾನ್ ಮಾವಿನಮರಗಳಲ್ಲಿ 250 ಹಣ್ಣುಗಳು ಬೆಳದಿವೆ. ಸಾಮಾನ್ಯವಾಗಿ ಜನವರಿ-ಫೆಬ್ರುವರಿಯಲ್ಲಿ ಹೂವು ಬಿಡಲು ಆರಂಭಿಸಿ, ಜೂನ್ ತಿಂಗಳು ಶುರುವಾದಂತೆ ಹಣ್ಣು ನೀಡುತ್ತವೆ. ಈ ಹಣ್ಣುಗಳಿಗಾಗಿ ಮುಂಗಡ ಬುಕಿಂಗ್ ಆಗಲೇ ಆರಂಭವಾಗಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ಜನರೇ ಈ ಹಣ್ಣಿಗೆ ಬೇಡಿಕೆ ಇದೆ ಎಂದು ಕತ್ಥಿವಾಡದ ರೈತ ಶುವರಾಜ್ ಸಿಂಗ್ ಜಾಧವ್ ಹೇಳಿದ್ದಾರೆ.

    ಕಳೆದ ಬಾರಿಗಿಂತ ಈ ವರ್ಷ ಫಸಲು ಚೆನ್ನಾಗಿ ಬಂದಿದ್ದರೂ, ಕೊರೊನಾದಿಂದಾಗಿ ವ್ಯಪಾರಕ್ಕೆ ಹೊಡೆತ ಬೀಳಬಹುದು. 2019ರಲ್ಲಿ ನಮ್ಮ ತೋಟದಲ್ಲಿ ಒಂದೊಂದು ನೂರ್ ಜಹಾನ್ ಮಾವಿನಹಣ್ಣು ಸರಿಸುಮಾರು 2.75 ಕೆಜಿ ಬೆಳೆದಿದ್ದವು. ಒಂದು ಮಾವಿನ ಹಣ್ಣಿಗೆ 1,200 ರೂಪಾಯಿಗೆ ಮಾರಾಟ ಮಾಡಿದ್ದೇನೆ ಎಂದು ಮತ್ತೊಬ್ಬ ನೂರ್ ಜಹಾನ್ ಹಣ್ಣಿನ ಬೆಳೆಗಾರರು ಹೇಳಿದ್ದಾರೆ.

  • ಮಾವಿನ ಹಣ್ಣು ಕಿತ್ತಿದ್ದಕ್ಕೆ ಬಾಲಕನಿಗೆ ಗುಂಡಿಕ್ಕಿ ಹತ್ಯೆ!

    ಮಾವಿನ ಹಣ್ಣು ಕಿತ್ತಿದ್ದಕ್ಕೆ ಬಾಲಕನಿಗೆ ಗುಂಡಿಕ್ಕಿ ಹತ್ಯೆ!

    ಪಾಟ್ನಾ: ಮಾವಿನ ಹಣ್ಣನ್ನು ಕಿತ್ತಿದ್ದಕ್ಕೆ ಬಾಲಕನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಪಥ್ರೂ ಗ್ರಾಮದಲ್ಲಿ ನಡೆದಿದೆ.

    ಸತ್ಯಮ್ ಕುಮಾರ್ (10) ಮೃತ ಬಾಲಕನಾಗಿದ್ದಾನೆ. ಬಾಲಕ ಮೂಲತಃ ಶೇರ್ಗರ್ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ತನ್ನ ಸ್ನೇಹಿತರ ಒಟ್ಟಿಗೆ ಆಟವಾಡಲು ಪಾಥ್ರೂ ಗ್ರಾಮದ ಬಳಿಯಿರುವ ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಬಾಲಕರು ಮಾವಿನಹಣ್ಣನ್ನು ಕಿತ್ತಿದ್ದಾರೆ.

    ಮಾವಿನಹಣ್ಣು ಕಿತ್ತಿದ್ದಕ್ಕೆ ತೋಟದ ಕಾವಲುಗಾರ ಮಕ್ಕಳ ಮೇಲೆಯೇ ಗುಂಡು ಹಾರಿಸಿದ್ದಾನೆ. ಪರಿಣಾಮ ಸತ್ಯಮ್ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಲೆ ಕಾವಲುಗಾರ ಸ್ಥಳದಿಂದ ಪರಾರಿಯಾಗಿದ್ದಾನೆ.

    ಬರೋಹ್ ಚೌದರಿ ಎಂಬವರ ತೋಟದ ಕಾವಲುಗಾರ ರಾಮಶೀಶ್ ಯಾದವ್ (43) ಮಗನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಗೋಗ್ರಿ ಠಾಣೆಯಲ್ಲಿ ಬಾಲಕನ ತಂದೆ ದೂರು ನೀಡಿದ್ದಾರೆ.

    ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಗ್ರಿ ಠಾಣಾ ಪೊಲೀಸರು, ಮಾವಿನ ತೋಟದಲ್ಲಿ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಪರಾರಿಯಾದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಸೆರೆಗೆ ಪೊಲೀಸರು ಬಲೆ ಬೀಸಿದ್ದು, ಹೆಚ್ಚಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.