Tag: ಮಾಳವಿಕ ಅವಿನಾಶ್

  • ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ – ಜಮೀರ್ ವಿರುದ್ಧ ಮಾಳವಿಕ ಅವಿನಾಶ್ ಕಿಡಿ

    ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ – ಜಮೀರ್ ವಿರುದ್ಧ ಮಾಳವಿಕ ಅವಿನಾಶ್ ಕಿಡಿ

    ಬೆಂಗಳೂರು: ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ ಹೆಣ್ಣುಮಕ್ಕಳ ಬಗ್ಗೆ ಮಾತಾಡುವಾಗ ಸರಿಯಾಗಿ ಮಾತಾಡಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಮುಖಂಡೆ ಮಾಳವಿಕ ಅವಿನಾಶ್ ಕಿಡಿಕಾರಿದ್ದಾರೆ.

    ಜಮೀರ್ ಅವರು ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿತ್ತು. ಹೀಗಾಗಿ ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಜಮೀರ್ ಅಹ್ಮದ್ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್

    ಇದೀಗ ಈ ಕುರಿತಂತೆ ಮಾಳವಿಕಾ ಅವಿನಾಶ್ ಅವರು, ಜಮೀರ್ ಅವರು ಕ್ಷಮೆ ಕೇಳುವುದರಿಂದ ಅವರ ಮಾನಸಿಕತೆ ಬದಲಾಗಲ್ಲ. ಮೊದಲು ಜಮೀರ್ ತಮ್ಮ ಮಾನಸಿಕತೆ ಬದಲಾಯಿಸಿಕೊಳ್ಳಲಿ. ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ. ಹೆಣ್ಣುಮಕ್ಕಳ ಬಗ್ಗೆ ಮಾತಾಡುವಾಗ ಸರಿಯಾಗಿ ಮಾತಾಡಬೇಕು. ಕಾಂಗ್ರೆಸ್ ಶಾಬಾನು ಪ್ರಕರಣದ ಮಾನಸಿಕತೆಯಿಂದ ಮೊದಲು ಅವರು ಆಚೆ ಬರಲಿ. ಜಮೀರ್ ತಮ್ಮ ಮನಸಿಗೆ ಹಿಜಬ್ ಹಾಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಖನೀಜ್ ಫಾತಿಮಾ ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಹಿಜಬ್ ಧರಿಸದಂತೆ ಅವರನ್ನು ಯಾರೂ ತಡೆದಿಲ್ಲ. ಶಾಸಕಿ ಖನೀಜ್ ಫಾತಿಮಾ ಅವರು ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಹಿಜಬ್‍ಗೆ ನಿಷೇಧ ಇಲ್ಲ. ಜನರಿಗೆ ತಪ್ಪು ಮಾಹಿತಿ ಕೊಡಬಾರದು. ಪ್ರಶ್ನೆ ಇರುವುದು ಶಾಲೆಗಳಲ್ಲಿ ಯೂನಿಫಾರ್ಮ್ ಇರಬೇಕು ಎನ್ನುವುದು. ಒಂದೇ ಯೂನಿಫಾರ್ಮ್ ಇರಲಿ ಅನ್ನುವುದಷ್ಟೇ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

  • ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

    ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

    ಬೆಂಗಳೂರು: ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕವಾಗಿದೆ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ ಎಂದು ಖ್ಯಾತನಟಿ ಮಾಳವಿಕಾ ಅವಿನಾಶ್ ಜನರಿಗೆ ಕರೆ ಕೊಟ್ಟಿದ್ದಾರೆ.

    ರಾಜಾಜಿನಗರ ರಾಮಮಂದಿರ ಆಟದ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಮ್ಮ ಮನೆಯ ಗಣೇಶ ನಾವೇ ತಯಾರಿಸೋಣ ಪರಿಸರ ಸ್ನೇಹಿ ಮಣ್ಣಿನ ತಯಾರಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಗೆ ಮಾಳವಿಕಾ ಅವಿನಾಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕವಾಗಿದೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಬೇಕು. ನಾವು ಗಣೇಶನಿಗೆ 101 ಹೆಸರಿನಲ್ಲಿ ನಾಮಸ್ಮರಣೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಸಂಘಟನೆ ಮಾಡಿ ಹೋರಾಟ ಮಾಡಲು ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್ ಸಾಮೂಹಿಕ ಗಣೇಶ ಹಬ್ಬ ಅಚರಣೆಗೆ ರೂವಾರಿಯಾಗಿದ್ದರು. ರಾಸಾಯನಿಕ ಬಣ್ಣದ ಗಣೇಶ ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಿಗೂ ಪ್ರಾಣಪಾಯವಿದೆ. ನಿಸರ್ಗದಲ್ಲಿ ಮಣ್ಣಿನ ಗಣೇಶ ಪ್ರತಿಷ್ಠಾಪನೆಯಿಂದ ಪರಿಸರ ಉಳಿಯುತ್ತೆ ಎಂದು ತಿಳಿಸಿದ್ದಾರೆ.

    ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು, ದೀಪಾ ನಾಗೇಶ್, ರಾಜಾಜಿನಗರ ಮಂಡಲ ಅಧ್ಯಕ್ಷರಾದ ರಾಘವೇಂದ್ರ ರಾವ್, ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್ ಮತ್ತು ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಮತ್ತು ಕೇಂದ್ರ ಜಿಲ್ಲಾ ಬಿಜೆಪಿ ಯುವ ಮುಖಂಡರಾದ ಅಭಿಲಾಶ್ ರೆಡ್ಡಿ, ಮಹೇಂದ್ರ ಮೋದಿ, ಅಜಿತ್ ಹೆಗಡೆ, ಶ್ರೀನಿವಾಸ್ ರಾಘವನ್, ಸುನೀಲ್ ಶಿವಾನಂದ್ ಮತ್ತು ಗೋಪಿ ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಈ ಪರಿಸರ ಸ್ನೇಹಿ ಮಣ್ಣಿನ ತಯಾರಿಕೆ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಮಣ್ಣಿನ ಗಣೇಶ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು.

  • ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್

    ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಮಾಳವಿಕ ಅವಿನಾಶ್ ಚಿತ್ರಕ್ಕೆ ವಾಯ್ಸ್ ಡಬ್ಬಿಂಗ್ ನೀಡುವ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಾಕಿ ಇತ್ತು. ಇದೀಗ 50 ದಿನಗಳು ಕಳೆದ ಬಳಿಕ ಕೆಜಿಎಫ್ ಸಿನಿಮಾದಲ್ಲಿ ಸುದ್ದಿ ಮಾಧ್ಯಮವೊಂದರ ಮುಖ್ಯ ಸಂಪಾದಕಿ ದೀಪಾ ಹೆಗ್ಡೆ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಮಾಳವಿಕ ಅವಿನಾಶ್ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ನೀಡುತ್ತಿರುವ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೊಗಳು ವೈರಲ್ ಆಗುತ್ತಿದೆ.

    ಬೆಂಗಳೂರಿನ ಡಬ್ಬಿಂಗ್ ಸ್ಟುಡಿಯೋನಲ್ಲಿ ಮಾಳವಿಕರವರು ವಾಯ್ಸ್ ಡಬ್ಬಿಂಗ್ ನೀಡುತ್ತಿರುವ ಕೆಲವು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಜೀವನವು ಸಾಮಾನ್ಯ ಸ್ಥಿತಿಗೆ ಬರದೇ ಇರಬಹುದು. ಆದರೆ ಅದರ ಕೆಲವು ಹೋಲಿಕೆ, 50 ದಿನಗಳ ನಂತರ ಕೆಲಸ.. ಎಂದು ಮಾಳವಿಕ ಅವಿನಾಶ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟ ಸಂಜಯ್ ದತ್, ಶ್ರೀನಿಧಿ, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕ ಅವಿನಾಶ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

     

    View this post on Instagram

     

    A post shared by Malavika Avinash (@malavikaavinash)

  • ಸ್ಯಾನಿಟರಿ ನ್ಯಾಪ್‍ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್

    ಸ್ಯಾನಿಟರಿ ನ್ಯಾಪ್‍ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್

    ಬೆಂಗಳೂರು: ಜಿಎಸ್‍ಟಿ ಜಾರಿಯಿಂದ ಸಾನಿಟರಿ ನ್ಯಾಪ್‍ಕಿನ್‍ಗಳು ದುಬಾರಿಯಾಗಿದೆ ಅಂತಾ ಪ್ರಧಾನಿ ಮೋದಿ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ರೆ. ಇತ್ತ ಬಿಜೆಪಿಯ ವಕ್ತಾರೆ ಆಗಿರುವ ಮಾಳವಿಕಾ ಅವಿನಾಶ್ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    `ಸ್ಯಾನಿಟರಿ ನ್ಯಾಪ್‍ಕಿನ್ ಬೇಡವೇ ಬೇಡ. ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿದ್ದಕ್ಕೆ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‍ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‍ಗಳಿಗೆ ತಮ್ಮ ಪ್ಯಾಡ್ಸ್ ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ’ ಅಂತಾ ಹೇಳಿದ್ದಾರೆ.

    ಮಾಳವಿಕಾ ಅಭಿಪ್ರಾಯ ಯೋಗ ಗುರು ಬಾಬಾ ರಾಮ್‍ದೇವ್‍ಗೂ ಉದ್ರೇಕ ಮಾಡಬಹುದು, ಅವರು ಪತಂಜಲಿ ಕಾಂಡೋಮ್ ತರಬಹುದು ಅಂತ ಸದ್ಯ ಸಾಮಾಜಿಕ ಜಾಲತಾಣ ಫೇಸ್‍ಬುಕ್ ತುಂಬಾ ಕಾಣ್ತಿರೋದು ಇದು ಎರಡೇ ವಿಷ್ಯ, ಒಂದು ಮೊಟ್ಟೆಯ ಕಥೆ, ಇನ್ನೊಂದು ಮಾಳವಿಕಾ ಬಟ್ಟೆಯ ವ್ಯಥೆ ಅಂತಾ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದಾರೆ.