Tag: ಮಾಳವಿಕಾ ನಾಯರ್

  • ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ತ್ರಿಶೂಲ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಾಯಕರಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡು ಹಾಡುಗಳು ಪ್ರೇಕ್ಷಕರ ಮನಗೆದ್ದಿದೆ. ಇದೀಗ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರವಿದು ಎಂದು ನಟ ಗಣೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ‘ದಂಡುಪಾಳ್ಯ’ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್‌ನ ಚಿತ್ರ ಅನಿಸಿತು. ‘ಕೃಷ್ಣಂ ಪ್ರಣಯ ಸಖಿ’ ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು, ನನಗೆ ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ನನ್ನ ಈವರೆಗಿನ ವೃತ್ತಿ ಜೀವನದ ಬಿಗ್ ಬಜೆಟ್‌ನ ಚಿತ್ರ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿದ್ದಾರೆ.

    ಇದು ಗಣೇಶ್‌ಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ‘ಚಿನ್ನಮ್ಮ’ ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಸಿನಿಮಾ ನೋಡಿ ಹಾರೈಸಿ ಎಂದು ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿದ್ದಾರೆ.


    ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ನಿರ್ಮಾಪಕರ ಪುತ್ರಿ ಪ್ರೇರಣಾ ಪ್ರಶಾಂತ್ ಧನ್ಯವಾದ ತಿಳಿಸಿದರು. ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ (Sharanya Shetty) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ನಟಿಸಿದ್ದಾರೆ.

  • ಸಖಿ ಜೊತೆ ವಿಯೆಟ್ನಾಂಗೆ ಹಾರಲಿದ್ದಾರೆ ನಟ ಗಣೇಶ್

    ಸಖಿ ಜೊತೆ ವಿಯೆಟ್ನಾಂಗೆ ಹಾರಲಿದ್ದಾರೆ ನಟ ಗಣೇಶ್

    ಗೋಲ್ಡನ್ ಸ್ಟಾರ್ ಗಣೇಶ್  (Ganesh) ಸದ್ಯದಲ್ಲೇ ವಿಯೆಟ್ನಾಂನ (Vietnam) ವಿಮಾನ ಏರಲಿದ್ದಾರೆ. ಅವರ ನಟನೆಯ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಚಿತ್ರದ ಕೊನೆಯ ಹಂತದ ಚಿತ್ರೀಕರಣ ವಿಯೆಟ್ನಾಂನಲ್ಲಿ ನಡೆಯಲಿದ್ದು, ಇಡೀ ತಂಡ ಅಲ್ಲಿಗೆ ಪ್ರಯಾಣ ಬೆಳೆಸಲಿದೆ. ಶ್ರೀನಿವಾಸರಾಜು (Srinivasaraju) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ.

    ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ  ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ.

    ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ  ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.

     

    ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ (Malavika Nair) ನಟಿಸಿದ್ದಾರೆ. ಶರಣ್ಯ ಶೆಟ್ಟಿ,   ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಮಾಳವಿಕಾ ನಾಯರ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ಗಿಫ್ಟ್

    ಮಾಳವಿಕಾ ನಾಯರ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ಗಿಫ್ಟ್

    ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಚಿತ್ರದ ನಾಯಕಿ ಮಾಳವಿಕ ನಾಯರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ನಾಯಕಿ ಮಾಳವಿಕ ನಾಯರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

    ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ  ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.

    ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ,  ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ಜ್ಯೂನಿಯರ್‌ ಎನ್‌ಟಿಆರ್‌ ಸಹೋದರ ಕಲ್ಯಾಣ್‌ ರಾಮ್‌ ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವೇ ಡೆವಿಲ್. ಫಸ್ಟ್ ಗ್ಲಿಂಪ್ಸ್ (First Glimpse) ಮೂಲಕ ಭಾರೀ ಸದ್ದು ಮಾಡಿದ್ದ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ (Nandamuri Kalyan Ram) ಗೂಢಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಡೆವಿಲ್ (Devil) ಚಿತ್ರತಂಡ ಪವರ್ ಫುಲ್ ಪೊಲಿಟಿಕಲ್ ಲೇಡಿಯನ್ನು ಪರಿಚಯಿಸಿದೆ.

    ಡೆವಿಲ್ ಸಿನಿಮಾ ಅಂಗಳಕ್ಕೆ ಮಾಳವಿಕಾ ನಾಯರ್ (Malavika Nair) ಎಂಟ್ರಿ ಕೊಟ್ಟಿದ್ದಾರೆ. ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ರಾಜಕಾರಣಿಯಂತೆ ಬಿಳಿ ಬಣ್ಣದ ಕಾಟನ್ ಸೀರೆ ತೊಟ್ಟು ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಫಸ್ಟ್ ಲುಕ್ ನಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವೂ ಇದೆ.

    ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

    ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ, ಸೌಂದರ್ಯ ರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದ್ದು,‌ ನವೆಂಬರ್ 24ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಲ್ಡನ್ ಹೀರೋಗೆ ಜೋಡಿಯಾದ ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ

    ಗೋಲ್ಡನ್ ಹೀರೋಗೆ ಜೋಡಿಯಾದ ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ

    ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ‘ಕೃಷ್ಣಂ ಪ್ರಣಯ ಸಖಿ’ಯಾಗಿ ಎಂಟ್ರಿ ಕೊಡುತ್ತಾ ಇರೋದು ಗೊತ್ತೆ ಇದೆ. ಲವರ್ ಬಾಯ್ ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಮಾತ್ರವಲ್ಲ ಇದೀಗ ಮತ್ತೋರ್ವ ಯುವ ನಟಿಯ ಎಂಟ್ರಿಯಾಗಿದೆ. ಗೋಲ್ಡನ್ ಹೀರೋ ಗಣಿಗೆ ನಾಯಕಿಯಾಗಿ ಕಿರುತೆರೆಯ ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಕಾಣಿಸಿಕೊಳ್ತಿದ್ದಾರೆ.

    ನಟ ಗಣೇಶ್ ಅವರ ಹುಟ್ಟುಹಬ್ಬದಂದು ‘ಕೃಷ್ಣಂ ಪ್ರಣಯ ಸಖಿʼ (Krishnam Pranaya Sakhi) ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಮೊದಲ ಪೋಸ್ಟರ್ ಲುಕ್‌ನಿಂದಲೇ ಗಣೇಶ್ ಅಭಿಮಾನಿಗಳ ಗಮನ ಸೆಳೆದಿದ್ದರು. ಗಣೇಶ್ ಅಭಿನಯದ 41ನೇ ಸಿನಿಮಾಗೆ ‘ಕೃಷ್ಣಂ ಪ್ರಣಯ ಸಖಿ’ ಎಂದು ಟೈಟಲ್ ಇಡಲಾಗಿದೆ. ಈ ಪೋಸ್ಟರ್‌ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ ಹೈ ಫೈ ಆಗಿರುವ ಗಣೇಶ್ ಕೈಯಲ್ಲಿ ಬಕೆಟ್, ಪೊರಕೆ, ನೆಲ ಒರೆಸುವ ಸ್ಟಿಕ್ ಹಿಡಿದು ಹೊರಟಿದ್ದಾರೆ. ಟೈಟಲ್ ಕೇಳಿದ್ರೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಸಾಥ್ ನೀಡಿದ್ದಾರೆ. ಗಣೇಶ್- ಮಾಳವಿಕಾ (Malavika) ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಿರುವಾಗ ಮತ್ತೊರ್ವ ನಾಯಕಿಯ ಎಂಟ್ರಿಯಾಗಿದೆ. ಕಿರುತೆರೆಯ ‘ಗಟ್ಟಿಮೇಳ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಮೋಡಿ ಮಾಡಿದ್ದ ಶರಣ್ಯ ಶೆಟ್ಟಿ ಈಗ ಗಣೇಶ್ ಜೊತೆ ನಟಿಸುವ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ.

    ಈಗಾಗಲೇ ಶರಣ್ಯ, 1980, ಪೆಂಟಗನ್, ಹುಟ್ಟುಹಬ್ಬದ ಶುಭಾಶಯಗಳು, ರವಿ ಬೋಪಣ್ಣ, ಸ್ಪೂಕಿ ಕಾಲೇಜ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಶರಣ್ಯ ಜೀವ ತುಂಬಲಿದ್ದಾರೆ. ರೊಮ್ಯಾಂಟಿಕ್-ಕಾಮಿಡಿಯಾಗಿರೋ ಈ ಸಿನಿಮಾ ಜುಲೈ ಅಂತ್ಯದಲ್ಲಿ ಮತ್ತೆ ಶೂಟಿಂಗ್ ಶುರುವಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ಈ ಜೋಡಿಯನ್ನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ್ ಅಡ್ಡಾದಲ್ಲಿ ಉಸ್ತಾದ್ ಹೋಟೆಲ್ ಬೆಡಗಿ ಮಾಳವಿಕಾ ನಾಯರ್

    ಗಣೇಶ್ ಅಡ್ಡಾದಲ್ಲಿ ಉಸ್ತಾದ್ ಹೋಟೆಲ್ ಬೆಡಗಿ ಮಾಳವಿಕಾ ನಾಯರ್

    ದಂಡುಪಾಳ್ಯ (Dandupalya) ಸಿನಿಮಾ ಖ್ಯಾತಿಯ ಶ್ರೀನಿವಾಸ್ ರಾಜು (Srinivas Raju) ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಸದ್ದಿಲ್ಲದೇ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇದೊಂದು ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಮಲಯಾಳಂ ಚಿತ್ರ ಖ್ಯಾತಿಯ ಮಾಳವಿಕಾ ನಾಯರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಉಸ್ತಾದ್ ಹೋಟೆಲ್ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಮಾಳವಿಕಾ ನಾಯರ್. ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತೆಲುಗು ಚಿತ್ರಗಳಲ್ಲೂ ಮಾಳವಿಕಾ ಅಭಿನಯಿಸಿದ್ದಾರೆ. 2012ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಅಲ್ಲಿಂದ ನಿರಂತರವಾಗಿ ಹನ್ನೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀರಾಗಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಬಿಗ್‌ ಬಾಸ್‌’ ಸಾನ್ಯ ಅಯ್ಯರ್

    ಕುಕ್ಕೂ, ಬ್ಲ್ಯಾಕ್ ಬಟರ್ ಫ್ಲೈ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ನಾಯರ್ (Malavika Nair), ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಮಾಳವಿಕ ನಾಯರ್ ನಿರ್ವಹಿಸಿದರೆ ಮತ್ತೊಂದು ಪಾತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದೆಯಂತೆ.

    ಇದೊಂದು ಪಕ್ಕಾ ಎಂಟರ್ ಟೇನ್ಮೆಂಟ್ ಸಿನಿಮಾವಾಗಿದ್ದರಿಂದ ತಾರಾಗಣದಲ್ಲೂ ಅಂತಹ ಕಲಾವಿದರನ್ನೇ ಕಾಣಬಹುದಾಗಿದೆ. ಸಾಧು ಕೋಕಿಲಾ, ಗಿರಿ ಶಿವಣ್ಣ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಮುಂದಿನ ಹಂತದ ಚಿತ್ರೀಕರಣದಲ್ಲಿ ಮಾಳವಿಕಾ ನಾಯರ್ ಭಾಗಿಯಾಗಲಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]