Tag: ಮಾಳವಿಕಾ ಅವಿನಾಶ್

  • ಏಕಾಂಗಿಯಾಗಿ ಬದುಕನ್ನು ಅಂತ್ಯ ಮಾಡಿಕೊಂಡಿರೋದು ಬೇಜಾರಿನ ಸಂಗತಿ: ಮಾಳವಿಕಾ

    ಏಕಾಂಗಿಯಾಗಿ ಬದುಕನ್ನು ಅಂತ್ಯ ಮಾಡಿಕೊಂಡಿರೋದು ಬೇಜಾರಿನ ಸಂಗತಿ: ಮಾಳವಿಕಾ

    ‘ಮಠ’ (Mata) ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಯಹತ್ಯೆಯ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಇದೀಗ 20 ವರ್ಷಗಳ ಹಿಂದೆ ‘ಮನ್ವಂತರ’ ಧಾರಾವಾಹಿಯಲ್ಲಿ ಗುರುಪ್ರಸಾದ್ ಜೊತೆ ಕೆಲಸ ಮಾಡಿದ್ದರ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಹಿರಿಯ ನಟಿ ಮಾಳವಿಕಾ (Malavika) ಹಂಚಿಕೊಂಡಿದ್ದಾರೆ. ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಬೇಜಾರಿನ ಸಂಗತಿ ಎಂದಿದ್ದಾರೆ. ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಂಡ ಪತಿ ಗುರುಪ್ರಸಾದ್‌ ನೋಡಲು ಕಣ್ಣೀರಿಡುತ್ತಲೇ ಧಾವಿಸಿದ 2ನೇ ಪತ್ನಿ

    ಹೀಗೆಲ್ಲಾ ಆಗಿದ್ರೂ ಅವರ ಕುಟುಂಬಸ್ಥರು ಎಲ್ಲಿ ಅಂತ ಅಚ್ಚರಿ ಆಗುತ್ತಿದೆ. ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಭಾರೀ ಬೇಜಾರಿನ ಸಂಗತಿ. ಎಷ್ಟೋ ಜನರಿಗೆ ಅದೆಷ್ಟೋ ಕಷ್ಟಗಳು ಇರುತ್ತವೆ. ಕಲಾವಿದರು ಕೂಡ ಮನುಷ್ಯರೇ ತಾನೇ. ಎಲ್ಲರಿಗೂ ಬುದ್ಧಿವಾದ ಹೇಳುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ತುಂಬಾ ಓದಿಕೊಂಡಿದ್ದರು. ಬಹಳ ಪ್ರತಿಭಾನ್ವಿತರಾಗಿದ್ದರು. ಹಾಗಿದ್ರೂ ಕೂಡ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದಿತ್ತು.

    ‘ಮನ್ವಂತರ’ ಸೀರಿಯಲ್‌ಗೆ ಸಹಾಯಕ ನಿರ್ದೇಶಕರಾಗಿ ಗುರುಪ್ರಸಾದ್‌ ಕೆಲಸ ಶುರು ಮಾಡಿದರು. ಅವರು ಸೆಟ್‌ನಲ್ಲಿ ವಿಪರೀತ ಮಾತನಾಡೋರು. ಸದಾ ಉತ್ಸಾಹದಿಂದ ಓಡಾಡಿಕೊಂಡಿದ್ದರು. 20 ವರ್ಷಗಳ ಹಿಂದೆಯೇ ಅವರ ಬರವಣಿಗೆ ಚೆನ್ನಾಗಿತ್ತು. ಅಷ್ಟೆಲ್ಲಾ ತಿಳಿದುಕೊಂಡವರು ಹೀಗೆ ಮಾಡಿಕೊಂಡಿರೋದು ಸರಿಯಲ್ಲ. ಅವರ ಆತ್ಮಹತ್ಯೆಯ ನಿರ್ಧಾರವನ್ನು ಯಾಕೆ ಯಾರ ಕೈಯಿಂದಲೂ ತಪ್ಪಿಸೋಕೆ ಆಗಿಲ್ಲ ಅದೇ ಬೇಜಾರು. ಅವರಿಗೆ 52 ವರ್ಷ, ಸಾಯೋ ಅಂತಹ ವಯಸ್ಸೇ ಅಲ್ಲ. ಅದೆಷ್ಟು ಜನ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅವತ್ತು ಯಾರಾದರೂ ಅವರ ಮನೆಗೆ ಹೋಗಿ ಬಿಟ್ಟಿದ್ರೆ, ಕರೆ ಮಾಡಿದಿದ್ರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಮಾಳವಿಕಾ ಭಾವುಕರಾಗಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳೋದ್ದಕ್ಕೆ ಸಾಲದ ಹೊರೆ ಕೂಡ ಕಾರಣವಾಗಿರಬಹುದು. ಆದರೆ ಬದುಕಿಗಿಂತ ಯಾವ ಕಾರಣನೂ ದೊಡ್ಡದಲ್ಲ. ಸೋಲನ್ನು ಯಾರು ಅನುಭವಿಸಲ್ಲ? ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದೆ. ಸೋತವರು ಮತ್ತೆ ಬಂದು ಗೆದ್ದಿದ್ದು ಇದೆ. ಯಾಕೆ ಹೀಗೆ ಮಾಡಿಕೊಂಡರು ಇದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ ನಟಿ.

  • ನಟಿ ಮಾಳವಿಕಾ ಅವಿನಾಶ್‌ಗೆ ಪಿತೃವಿಯೋಗ

    ನಟಿ ಮಾಳವಿಕಾ ಅವಿನಾಶ್‌ಗೆ ಪಿತೃವಿಯೋಗ

    ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ (Malavika Avinash) ಅವರ ತಂದೆ ನಟೇಶನ್ ಗಣೇಶನ್ (Nateshan Ganesan) ಅವರು ನಿಧನರಾಗಿದ್ದಾರೆ. ತಂದೆಯ ನಿಧನದ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಳವಿಕಾ ತಂದೆಯ ನಿಧನಕ್ಕೆ ಕುಟುಂಬಸ್ಥರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಶಿವಕಾರ್ತಿಕೇಯನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

     

    View this post on Instagram

     

    A post shared by Malavika Avinash (@malavikaavinash)

    ತಂದೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಇದನ್ನು ನಾನು 4 ದಿನಗಳ ಹಿಂದೆ ಕ್ಲಿಕ್ಕಿಸಿದ ಫೋಟೋ ಎಂದು ಬರೆದುಕೊಂಡಿದ್ದಾರೆ. ಅವರು ಬ್ಯಾಂಕರ್, ವಕೀಲ, ಬರಹಗಾರ, ನಾಟಕಕಾರ, ಸಾಹಿತ್ಯ ಮತ್ತು ವೇದಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸರಾಗಿದ್ದರು. ಅವರು ನನ್ನ ತಂದೆ ಮಾತ್ರವಲ್ಲ ಗುರು ಕೂಡ ಆಗಿದ್ದರು. ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಿಂಹಿಣಿಯಂತೆ ಬೆಳೆಸಿದ್ದರು ಎಂದು ನಟಿ ಭಾವುಕರಾಗಿದ್ದಾರೆ. ನಟೇಶನ್ ಗಣೇಶನ್ ಸದಾ ನಮ್ಮ ಹೃದಯದಲ್ಲಿರುತ್ತಾರೆ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಅಂತ್ಯಸಂಸ್ಕಾರ ಕಾರ್ಯವು ಇಂದು (ಮೇ 19) ಸಂಜೆ 5 ಗಂಟೆಗೆ ಕೆಂಗೇರಿ, ಬಂಡೇಮಠದ ಹತ್ತಿರ ಇರುವ ಬಿ.ಬಿ.ಎಂ.ಪಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ನೇಹಾ ಪೋಷಕರಿಗೆ ಮಾಳವಿಕಾ ಅವಿನಾಶ್ ಸಾಂತ್ವನ- ಸರ್ಕಾರದ ವಿರುದ್ಧ ನಟಿ ವಾಗ್ದಾಳಿ

    ನೇಹಾ ಪೋಷಕರಿಗೆ ಮಾಳವಿಕಾ ಅವಿನಾಶ್ ಸಾಂತ್ವನ- ಸರ್ಕಾರದ ವಿರುದ್ಧ ನಟಿ ವಾಗ್ದಾಳಿ

    ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನೇಹಾ ಮನೆಗೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಪ್ರಥಮ್, ಹರ್ಷಿಕಾ ಪೂಣಚ್ಚ ದಂಪತಿ ಭೇಟಿ ನೀಡಿದ ಬೆನ್ನಲ್ಲೇ ನಟಿ ಮಾಳವಿಕಾ ಅವಿನಾಶ್ (Malavika Avinash) ಕೂಡ ನೇಹಾ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

    ನೇಹಾ ಪೋಷಕರಾದ ನಿರಂಜನ್ ಹಿರೇಮಠ (Niranjan Hiremath)  ದಂಪತಿಯನ್ನು ಭೇಟಿಯಾಗಿ ಪುತ್ರಿ ನೇಹಾ ಹತ್ಯೆಯ ಕುರಿತು ಬೇಸರ ಹೊರಹಾಕಿದ್ದಾರೆ. ನೇಹಾ ಪೋಷಕರ ಬಳಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಕ್ರೂರ ರೀತಿಯಲ್ಲಿ ನೇಹಾ ಹಿರೇಮಠ ಕೊಲೆ ಆಗಿದೆ. ಅದು ಕೂಡ ಕಾಲೇಜು ಆವರಣದಲ್ಲಿಯೇ ನಡೆದಿದೆ ಎಂಬುದು ಆತಂಕವನ್ನು ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸಲು ಇನ್ಮುಂದೆ ಪೋಷಕರು ಹೇಗೆ ಧೈರ್ಯ ಮಾಡುತ್ತಾರೆ ಎಂದು ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

    ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ ಧೋರಣೆ ಏನು ಎಂಬುದನ್ನು ನೋವು ಈಗಾಗಲೇ ನೋಡಿದ್ದೇವೆ. ಮೊದಲು ಏನೂ ನಡೆದೇ ಇಲ್ಲವೇನೋ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆಮೇಲೆ ಅವರವರ ವೈಯಕ್ತಿಕ ಸಮಸ್ಯೆ ಎಂದು ವಿಚಾರವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಓಲೈಕೆಗಾಗಿ ಮಾಡುವುದು ಎಷ್ಟು ಸರಿ ಎಂದಿದ್ದಾರೆ. ಅವರು ಮಾಡುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದಿದ್ದಾರೆ ಮಾಳವಿಕಾ ಖಡಕ್‌ ಆಗಿ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಾಳವಿಕಾಗೆ ಆಧಾರ್ ದೋಖಾ: ಕೆಜಿಎಫ್ ನಟಿ ಕಂಡು ಪೊಲೀಸರೇ ಶಾಕ್

    ಮಾಳವಿಕಾಗೆ ಆಧಾರ್ ದೋಖಾ: ಕೆಜಿಎಫ್ ನಟಿ ಕಂಡು ಪೊಲೀಸರೇ ಶಾಕ್

    ಶ್ ನಟನೆಯ ಕೆಜಿಎಫ್ (KGF) ಸಿನಿಮಾದಲ್ಲಿ ಪತ್ರಕರ್ತೆ ದೀಪಾ ಹೆಗಡೆ ಪಾತ್ರ ಮಾಡಿದ್ದ ಮಾಳವಿಕಾ ಅವಿನಾಶ್ (Malavika Avinash) ಅವರಿಗೆ ಆಧಾರ್ ಕಾರ್ಡ್ (Aadhaar Card) ಹೆಸರಿನಲ್ಲಿ  ದೋಖಾ ಆಗಿರುವ ವಿಷಯ ಬಹಿರಂಗವಾಗಿದೆ. ಈ ಮಾಹಿತಿಯನ್ನು ಸ್ವತಃ ಮಾಳವಿಕಾ ಅವರೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಅವರ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ.

    ಮಾಳವಿಕಾ ಅವಿನಾಶ್ ಹೆಸರಿನಲ್ಲಿ ಮುಂಬೈನ (Mumbai) ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಹಾಗಾಗಿ ಮಾಳವಿಕಾ ಅವರಿಗೆ ಮುಂಬೈ ಪೊಲೀಸರು ಕರೆ ಮಾಡಿ, ವಿಚಾರಿಸಿದ್ದರು. ಮುಂಬೈ ಪೊಲೀಸರು ತಿಳಿಸಿರುವ ಮಾಹಿತಿ ಮಾಳವಿಕಾರ ಅಚ್ಚರಿಗೆ ಕಾರಣವಾಗಿತ್ತು. ಸೈಬರ್ ವಂಚಕರು ಮಾಳವಿಕಾ ಆಧಾರ ಕಾರ್ಡ್ ಬಳಸಿ ಸಿಮ್ ಖರೀದಿ ಮಾಡಿದ್ದಾರೆ. ಆ ನಂಬರ್ ನಲ್ಲಿ ಅನೇಕರಿಗೆ ಬೆದರಿಸೋದು, ಅಶ್ಲೀಲ ಮಸೇಜ್ ಕಳುಹಿಸಿದ್ದಾರೆ. ಕಿರುಕುಳಕ್ಕೆ ಒಳಗಾದವರು ದೂರು ಸಲ್ಲಿಸಿದ್ದಾರೆ.

    ಮುಂಬೈನಿಂದ ಕರೆ ಮಾಡಿದ್ದ ಪೊಲೀಸ್ (Police) ಅಧಿಕಾರಿಗಳು ಮಾಳವಿಕಾ ಅವಿನಾಶ್ ಅವರ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಸ್ವತಃ ಮಾಳವಿಕಾ ಅವರೇ ಪೊಲೀಸರಿಗೆ ಕರೆ ಮಾಡಿ, ತಮ್ಮ ಆಧಾರ್ ಕಾರ್ಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

     

    ಮುಂಬೈ ಪೊಲೀಸರಿಗೆ ಮಾಳವಿಕಾ ವಿಡಿಯೋ ಕಾಲ್ ಮಾಡಿದಾಗ, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ನೀವು ಕೆಜಿಎಫ್ ನಟಿ ಅಲ್ಲವಾ ಮೇಡಂ ಎಂದು ಗುರುತು ಹಿಡಿದಿದ್ದಾರೆ. ನಂತರ ಈ ಬಗ್ಗೆ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರಂತೆ. ಈ ಎಲ್ಲ ಮಾಹಿತಿಯನ್ನೂ ಸೋಷಿಯಲ್ ಮೀಡಿಯಾ ಮೂಲಕ ಮಾಳವಿಕಾ ಹಂಚಿಕೊಂಡಿದ್ದಾರೆ. ಆಧಾರ್ ಕಾರ್ಡ್ ಹೇಗೆ ದುರುಪಯೋಗ ಆಯಿತು ಎಂದು ತಲೆ ಕೆಡಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ಕಿರುತೆರೆ ಜನಪ್ರಿಯ Weekend With Ramesh-5 ಕಾರ್ಯಕ್ರಮಕ್ಕೆ ಖ್ಯಾತ ನಟ ಅವಿನಾಶ್ (Actor Avinash) ಅತಿಥಿಯಾಗಿ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರ ಅವಿನಾಶ್ ಅವರ ಬಾಲ್ಯ, ಕೆರಿಯರ್, ನಟಿ ಮಾಳವಿಕಾ ಜೊತೆಗಿನ ಮದುವೆ, ಪುತ್ರ ಗಾಲವ್ ಬಗ್ಗೆ ಅವಿನಾಶ್ ಮನಬಿಚ್ಚಿ ಮಾತನಾಡಿದ್ದಾರೆ.

    ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಅವಿನಾಶ್- ಮಾಳವಿಕಾ (Actress Malavika) ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲು ಭೇಟಿಯಾಗಿದ್ದು, ಮದುವೆ ಪ್ರಸ್ತಾಪ ಬಂದಿದ್ದು ಯಾರಿಂದ ಎಂಬ ಮಾಹಿತಿಯನ್ನ ನಟ ರಮೇಶ್ ಅರವಿಂದ್ (Ramesh Aravind) ಜೊತೆ ಅವಿನಾಶ್ ದಂಪತಿ ಹಂಚಿಕೊಂಡಿದ್ದಾರೆ. ಹಾಗೆಯೇ ದೇವರ ಮಗು ಗಾಲವ್ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು ಅವಿನಾಶ್. ಮಾಳವಿಕಾ ಹಾಗೂ ಅವಿನಾಶ್ ಮಧ್ಯೆ ವಯಸ್ಸಿನ ಅಂತರ ಎಷ್ಟಿದೆ ಅಂದ್ರೆ. ಮಾಳವಿಕಾ 9 ವರ್ಷ ವಯಸ್ಸಿನಲ್ಲಿದ್ದಾಗ ಅವಿನಾಶ್ ಆಗಲೇ ಲೆಕ್ಚರರ್ ಆಗಿದ್ದರು. ಇವರಿಬ್ಬರು ಭೇಟಿಯಾಗಿದ್ದು ‘ಮಾಯಾಮೃಗ’ ಧಾರಾವಾಹಿಯ ಸೆಟ್‌ನಲ್ಲಿ.

    ಮಾಯಾಮೃಗ ಶುರು ಆದ್ಮೇಲೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಾಗ ಅವಿನಾಶ್ ಶಾಕ್ ಆಗ್ಬಿಟ್ಟರು. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದರು. ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದರು. ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.

    ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು. ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು. ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು ಎಂದು ನಟಿ ಮಾಳವಿಕಾ ಮಾತನಾಡಿದ್ದಾರೆ.

    ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ ಎಂದು ಮಾತನಾಡಿದ್ದಾರೆ.

  • ಆರೋಗ್ಯ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ನಟಿ ಮಾಳವಿಕಾ ಅವಿನಾಶ್

    ಆರೋಗ್ಯ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ನಟಿ ಮಾಳವಿಕಾ ಅವಿನಾಶ್

    ಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ (Malavika Avinash) ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ (Hospital) ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು ತಮಗಾದ ಆರೋಗ್ಯ ಸಮಸ್ಯೆಯನ್ನೂ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ರೀತಿ ಸಮಸ್ಯೆಯಾದಾಗ ನೆಗ್ಲೆಟ್ ಮಾಡಬೇಡಿ ಎಂದು ಸಲಹೆಯನ್ನೂ ಅವರು ನೀಡಿದ್ದಾರೆ.

    ಮಾಳವಿಕಾ ಮೈಗ್ರೇನ್ (Migraine) ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಇದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಅವರು ಹೇಳಿದ್ದಾರೆ. ಕೇವಲ ತಲೆನೋವು ಅಂದುಕೊಂಡು ತಾತ್ಸಾರ ಮಾಡಿದರೆ, ನನ್ನ ರೀತಿಯಲ್ಲೇ ನೀವು ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ ಎಂದು ಸಣ್ಣ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

    ಮೈಗ್ರೇನ್ ಸಮಸ್ಯೆಯನ್ನು ಹೇಳಿಕೊಂಡು ಆಸ್ಪತ್ರೆಯ ಬೆಡ್ ನಿಂದ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಳವಿಕಾ, ಚೇತರಿಸಿಕೊಳ್ಳುತ್ತಿರುವ ಕುರಿತು ಹಂಚಿಕೊಂಡಿದ್ದಾರೆ. ಮಾಳವಿಕಾ ಹಾಕಿರುವ ಫೋಟೋ ಅವರದ್ದಾ ಅನ್ನುವ ಅನುಮಾನ ಮೂಡಿಸುವಷ್ಟು ಮುಖ ಬದಲಾಗಿದೆ. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ಮಾಳವಿಕಾ ಬೇಗ ಚೇತರಿಸಿಕೊಂಡು ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಧಾರಾವಾಹಿ ಸಿನಿಮಾ ಮಾಡಿರುವ ಇವರು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.

  • ಬುದ್ದಿಮಾಂದ್ಯ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್

    ಬುದ್ದಿಮಾಂದ್ಯ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್

    ಮಾಳವಿಕಾ ಅವಿನಾಶ್ ಬಹುಭಾಷೆಗಳಲ್ಲಿ ಮಿಂಚುತ್ತಿರುವ ಪ್ರತಿಭಾವಂತ ನಟಿ, ಸಿನಿಮಾ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದ ನಟಿ ಈಗ ತಮ್ಮ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬುದ್ದಿಮಾಂದ್ಯ ಮಗನ ನೆನೆದು ನಟಿ ಮಾಳವಿಕಾ ಕಣ್ಣೀರಿಟ್ಟಿದ್ದಾರೆ.

    ಕಲಾವಿದರು ಪರದೆಯ ಮೇಲೆ ನಗಿಸುತ್ತಾರೆ. ಖುಷಿ ಖುಷಿಯಾಗಿ ನಟಿಸುತ್ತಾರೆ. ಆದರೆ ತೆರೆ ಹಿಂದಿನ ವೈಯಕ್ತಿಕ ಬದುಕಿನಲ್ಲಿ ನಡೆಯುವ ಕಲಾವಿದರ ಕಷ್ಟ ಹೇಗಿರುತ್ತೆ ಎಂಬುದು ನೋಡುಗರಿಗೆ ತಿಳಿದಿರುವುದಿಲ್ಲ. ಇದೀಗ ನಟಿ ಮಾಳವಿಕಾ ಅವಿನಾಶ್ ಅವರ ಬದುಕಿನಲ್ಲಿ ನೋವಿನ ಕತೆಯಿದೆ. ಖಾಸಗಿ ವಾಹಿನಿಯೊಂದರ ಶೋನಲ್ಲಿ ಬುದ್ದಿಮಾಂದ್ಯ ಮಗನನ್ನ ನೆನೆದು ಭಾವುಕರಾಗಿದ್ದಾರೆ.

    ಶೋನಲ್ಲಿ ಸಹನಾ ಎಂಬ ಸ್ಪರ್ಧಿಗೆ ಕಿವಿ ಕೇಳುವುದಿಲ್ಲ. ಆದರೆ ತನ್ನಲ್ಲಿರುವ ಕೊರತೆಯನ್ನ ಮೆಟ್ಟಿ ನಿಂತು ಎಲ್ಲರಿಗೂ ಸ್ಪೂರ್ತಿಯಾಗುವಂತೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಾಳವಿಕಾ ಕೂಡ ಸಹನಾ ಪ್ರತಿಭೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ ತಮ್ಮ ಅಂಗವಿಕಲ, ಬುದ್ದಿಮಾಂದ್ಯ ಮಗನನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಎಲ್ಲಾ ಮಕ್ಕಳು ದೇವರು ಮಕ್ಕಳು ಎಂದು ಹೇಳಿ, ಭಾವುಕರಾಗಿದ್ದಾರೆ.

    ನನ್ನ ಮಗನಿಗೆ 8 ತಿಂಗಳು ಇರುವಾಗಲೇ ಸಂಗೀತದ ಅಭಿರುಚಿಯಿದೆ. ಕೆಲಸದ ಒತ್ತಡ ಮಧ್ಯೆ ದಿನದ ಕಡೆಯ ಮಗನೊಂದಿಗೆ ಮಾಡಲು ಇಷ್ಟಪಡುತ್ತೇನೆ. ಮಗನಿಗೆ ಊಟ ಮಾಡಿಸುವ ಬೇರೆ ಮಾರ್ಗ ನಮಗೆ ಗೊತ್ತಿಲ್ಲ. ಟಾಮ್ ಆ್ಯಂಡ್ ಜೆರಿ, ಛೋಟಾ ಭೀಮ ಅವನಿಗೆ ಗೊತ್ತಿಲ್ಲ. ಸಂಗೀತ ಒಂದೇ ಮಗನಿಗೆ ಅರ್ಥವಾಗುವ ಭಾಷೆ ಎಂದು ಮಗನ ಬಗ್ಗೆ ಮಾಳವಿಕಾ ಭಾವುಕರಾಗಿದ್ದಾರೆ. ಡಿಕೆಡಿ ಮತ್ತು ಜೋಡಿ ನಂಬರ್ ಒನ್ ಮಹಾಸಂಗಮ ಶೋನಲ್ಲಿ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

     

    View this post on Instagram

     

    A post shared by Malavika Avinash (@malavikaavinash)

    ಅಪ್ಪಾಜಿ ನಟನೆಯ ಹಾಡುಗಳು, ಅರ್ಜುನ್ ಜನ್ಯ ಅವರ ಸಾಂಗ್ಸ್, ಶಿವಣ್ಣ ನಟನೆಯ `ಓಂ’ ಚಿತ್ರದ ಹಾಡಗಳನ್ನ ಮಗ ಕೇಳುತ್ತಾನೆ. ಸಂಗೀತದ ಮೇಲಿರುವ ಒಲವಿರುವ ಬುದ್ದಿಮಾಂದ್ಯ ಮಗನ ಬಗ್ಗೆ ಮಾಳವಿಕಾ ಎಮೋಷನಲ್ ಆಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಕಾಳಿ ದೇವಿಯನ್ನು ನಿರಂತರವಾಗಿ ಅಪಮಾನಿಸುತ್ತಿರುವ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಮೇಲೆ ಕ್ರಮಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಕೆ ಯಾವುದೇ ದೇಶದಲ್ಲಿ ಇದ್ದರೂ, ಕನಿಷ್ಠ ಅವಳ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ ಗಳನ್ನು ಡಿಲಿಟ್ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರ ಮೇಲೆ ಕ್ರಮ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಹೀಗೆ ನಿರಂತರವಾಗಿ ಅವರು ಅಪಮಾನದ ಪೋಸ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೊದಲ ಸಲ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಆನಂತರ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಇದೀಗ ಕಾಳಿಯ ಕುರಿತಾಗಿ ಮತ್ತಷ್ಟು ಬರಹಗಳನ್ನು ಬರೆದಿದ್ದು, ಸಲಿಂಗಿಗಳನ್ನು ಕಾಳಿ ಇಷ್ಟಪಡುತ್ತಾಳೆ ಎಂದೂ, ಮತ್ತು ಹಿಂದುತ್ವವನ್ನು ನಾಶ ಮಾಡಲು ಕಾಳಿ ಬರುತ್ತಾಳೆ ಎಂದು ಟ್ವಿಟರ್ ಖಾತೆಯಲ್ಲಿ ಲೀನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿದ್ದರೂ, ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದ್ದರೂ, ಇವರಿಗೂ ಯಾವುದೇ ಕ್ರಮ ತಗೆದುಕೊಳ್ಳದೇ ಇರುವುದಕ್ಕೆ ಹಲವರು ಹಲವು ಅನುಮಾನಗಳನ್ನು ಹೊರಹಾಕಿದ್ದಾರೆ. ಆ ಲೀನಾ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಬೇಕು ಹಾಗೂ ಕೂಡಲೇ ಸೋಷಿಯಲ್ ಮೀಡಿಯಾದಿಂದ ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಹಿಂದೂ ದೇವರನ್ನು ಸತತವಾಗಿ ಅವಮಾನಿಸುತ್ತಿರುವ ಲೀನಾ ಮಣಿಮೇಕಲೈ ವಿರುದ್ಧ ದೇಶಾದ್ಯಂತ ದೂರುಗಳು ದಾಖಲಾಗುತ್ತಿವೆ. ಲೀನಾ ಅವರು ಮೊದಲ ಪೋಸ್ಟರ್ ನಲ್ಲಿ ಕೇವಲ ಕಾಳಿ ಕೈಗೆ ಸಿಗರೇಟು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ ಮಾಡಿದ್ದ ಅವರು ಶಿವ ಮತ್ತು ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟಿದ್ದರು. ಈ ಕುರಿತು ಕನ್ನಡದ ನಟ ನಟಿಯರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ. ನಟಿ ಮಾಳವಿಕಾ ಅವಿನಾಶ್ ಈ ನಡೆಯನ್ನು ವಿರೋಧಿಸಿದ್ದರೆ, ನಟ ಕಿಶೋರ್ ಮತ್ತೊಂದು ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ.

    ಶಿವನಿಗೆ ಬೇಡರ ಕಣ್ಣಪ್ಪ ಮಾಂಸವನ್ನು ಅರ್ಪಿಸಿದಾಗ ಅವನಿಗೆ ಹಿಂದೂ ದ್ವೇಷದ ದುರಹಂಕಾರ ಇರಲಿಲ್ಲ. ಹಾಗಾಗಿ ಶಿವನಿಗೆ ಆತನ ಭಕ್ತಿ ಇಷ್ಟವಾಗಿತ್ತು. ಅಜ್ಞಾನಕ್ಕಿಂತ ಭಕ್ತಿಯೇ ಶ್ರೇಷ್ಠತೆ ಪಡೆಯಿತು. ಇದೀಗ ಉದಾರವಾದಿಗಳ ವಿಕೃತಿ ಹೆಚ್ಚಾಗುತ್ತಿದೆ. ವಿಕೃತಿಗಳಿಗೆ ಮಾರ್ಗವಾಗಿದೆ ಎಂದಿದ್ದಾರೆ. ನಿಮ್ಮ ಅಭ್ಯಾಸ ಮತ್ತು ದುರ್ಗುಣಗಳನ್ನು ಹೇರಲು ಕಾಳಿ ಮಾತೆ ಸಾಕು ಪ್ರಾಣಿಯಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸ್ತ್ರಿವಾದಿ ಮಹುವಾ ಮೊಯಿತ್ರಾಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ಇದೇ ಪ್ರಕರಣಕ್ಕೆ ಹೋಲುವಂತೆ ನಟ ಕಿಶೋರ್ ಕೂಡ ವಿಭಿನ್ನವಾಗಿಯೇ ಪ್ರತಿಕ್ರಿಯೆ ನೀಡಿದ್ದು, ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನಹಕ್ಕು. ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಎಂದು ಬೇಡರ ಕಣ್ಣಪ್ಪ ಸಿನಿಮಾ ಪೋಸ್ಟರ್ ಶೇರ್ ಮಾಡಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕಿಶೋರ್ ಅವರ ಈ ಪೋಸ್ಟ್ ಕೂಡ ಪರ ವಿರೋಧಕ್ಕೆ ಕಾರಣವಾಗಿದೆ

    ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಮೊನ್ನೆಯಷ್ಟೇ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಹೀಗಾಗಿ ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿವೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂದಿರುಗಿ: ಮಾಳವಿಕಾ ಅವಿನಾಶ್

    ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂದಿರುಗಿ: ಮಾಳವಿಕಾ ಅವಿನಾಶ್

    ಬೆಂಗಳೂರು: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಕುರಿತಾಗಿ ನಟಿ ಮಾಳವಿಕಾ ಅವಿನಾಶ್ ಟ್ವೀಟ್‌ ಮಾಡುವ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ವಾಗ್ದಾಳಿ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಖೇಲ್ ಖತಂ, ನಾಟಕ್ ಬಂದ್! ಶಾಲೆಗೆ ಹಿಂದಿರುಗಿ, ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು  ಹೈಕೋರ್ಟ್‌ ಹೇಳಿದೆ. ನಿರ್ಬಂಧವನ್ನು ಸಂವಿಧಾನದಿಂದ ಅನುಮತಿಸಲಾದ ಸಮಂಜಸವಾದ ನಿರ್ಬಂಧಗಳಿಂದ ಆವರಿಸಲ್ಪಟ್ಟಿದೆ. ದೋಷಾರೋಪಣೆಯ ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಎಲ್ಲಾ ರಿಟ್‍ಗಳನ್ನು ವಜಾಗೊಳಿಸಲಾಗಿದೆ.

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು