Tag: ಮಾಲ್

  • ಸೂಟು ಬೂಟು ಧರಿಸಿ ಬರೋಬ್ಬರಿ 79 ಸಾವಿರದ ರಾಡೋ ವಾಚ್‍ ಕದ್ದ ಕಳ್ಳರು

    ಸೂಟು ಬೂಟು ಧರಿಸಿ ಬರೋಬ್ಬರಿ 79 ಸಾವಿರದ ರಾಡೋ ವಾಚ್‍ ಕದ್ದ ಕಳ್ಳರು

    ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಹೈಟೆಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸೂಟು ಬೂಟು ಧರಿಸಿಕೊಂಡು ಬಂದು ದುಬಾರಿ ಬೆಲೆಯ ವಾಚ್‍ಗಳನ್ನ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಬಂದು ರಾಡೋ ವಾಚುಗಳನ್ನ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಹುಬ್ಬಳ್ಳಿಯ ವೇಮರೆಡ್ಡಿ ಪಾಟೀಲ್ ಅವರ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಬರೋಬ್ಬರಿ 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್ ಅನ್ನು ಖದೀಮರು ಎಗರಿಸಿದ್ದಾರೆ.

    ಜನವರಿ 7 ರಂದು ರಾತ್ರಿ ಅಂಗಡಿಗೆ ಬಂದಿದ್ದ ಮಹಿಳೆ ಹಾಗೂ ಮೂವರು ಪುರುಷರ ಪೈಕಿ ಒಬ್ಬ ವ್ಯಕ್ತಿ `ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, `ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೊಬ್ಬ ಟೈಮೆಕ್ಸ್ ಕೌಂಟರ್ ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಏನೇನೊ ವಿಚಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ವಾಚ್ ಪ್ಯಾಕ್ ಚೆಕ್ ಮಾಡಿದಾಗ ಕಳವಾದ ವಿಷಯ ಗೊತ್ತಾಗಿದೆ.

    ಸಿಸಿಟಿವಿಯಲ್ಲಿ ಸೆರೆ:
    ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್‍ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಕಳ್ಳರ ಗ್ಯಾಂಗ್ ಮಾಲ್‍ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆಯಲ್ಲಿ ಓಡಾಡಿ ಮಾಲ್‍ನಿಂದ ಹೊರಹೋಗಿರುವ ದೃಶ್ಯಗಳೂ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಉದ್ಯಮಿಗಳ ವೇಷದಲ್ಲಿ ಮಾಲ್‍ಗೆ ಬಂದು ಕಳ್ಳತನ ಮಾಡಿರುವುದು ಅಂಗಡಿಗಳ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಅಂಗಡಿಯವರು ಪ್ರಾಮಾಣಿಕ ಗ್ರಾಹಕರನ್ನೂ ಅನುಮಾನದಿಂದ ನೋಡುವಂತಾಗಿದೆ. ಘಟನೆಯ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೈ ಪ್ರೊಫೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

  • ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದ ಯುವಕನಿಗೆ ಥಳಿಸಿದ ಗುಂಪು

    ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದ ಯುವಕನಿಗೆ ಥಳಿಸಿದ ಗುಂಪು

    ಮಂಗಳೂರು: ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದು ತಿಳುವಳಿಕೆ ಹೇಳಿದ ಯುವಕನನ್ನು ಗುಂಪೊಂದು ಅಟ್ಟಾಡಿಸಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಫೋರಂ ಫಿಜಾ ಮಾಲ್‍ನಲ್ಲಿ ಘಟನೆ ನಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ನಗರದ ಫೋರಂ ಫಿಜಾ ಮಾಲ್‍ಗೆ ಬಂದಿದ್ದ ಕಾಲೇಜಿನ ವಿದ್ಯಾರ್ಥಿಗಳು ಹುಡುಗಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ನೋಡಿ ಯುವಕ, ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಏಕಾಏಕಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯುವಕನನ್ನು ಸುತ್ತುವರಿದು, ಈಗ ಹೇಳು ನೋಡೋಣ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ವಿದ್ಯಾರ್ಥಿಗಳು ಸುತ್ತುವರಿದು ಭಯ ಮೂಡಿಸುತ್ತಿದ್ದಂತೆ ಯುವಕ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಇದಕ್ಕೆ ಅವಕಾಶ ಕೊಡದ ಗುಂಪು ಹಿಡಿದು ಮತ್ತೆ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಯುವಕನೊಬ್ಬ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ಕನ್ನಡ ಹಾಡು ಹಾಡಲಿಲ್ಲ ಎಂದು ಯುವಕನಿಗೆ ಥಳಿತ

    ಕನ್ನಡ ಹಾಡು ಹಾಡಲಿಲ್ಲ ಎಂದು ಯುವಕನಿಗೆ ಥಳಿತ

    ಬೆಂಗಳೂರು: ಕನ್ನಡ ಹಾಡು ಹಾಕಲಿಲ್ಲ ಎಂದು ಯುವಕನಿಗೆ ಥಳಿಸಿದ ಘಟನೆ ಬೆಂಗಳೂರಿನ ಪಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ನಡೆದಿದೆ.

    ವೈಟ್ ಫೀಲ್ಡ್ ಬಳಿಯಿರುವ ಮಾಲ್‍ನಲ್ಲಿ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ಮುಗಿಯುವ ವೇಳೆಗೆ ನಾಲ್ವರು ಕುಡುಕರ ಗುಂಪು ಅಲ್ಲಿಗೆ ಬಂದಿದೆ. ಅಲ್ಲಿಗೆ ಬಂದ ತಕ್ಷಣ ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ಮ್ಯೂಸಿಕ್ ಉಪಕರಣಗಳನ್ನು ಡಿಸ್ಕನೇಕ್ಟ್ ಮಾಡಲಾಗಿದೆ ಎಂದು ಯುವಕರು ಆ ಗುಂಪಿಗೆ ಹೇಳಿದ್ದಾರೆ. ಇಷ್ಟಕ್ಕೆ ಮ್ಯೂಸಿಷೀಯನ್ಸ್ ಮೇಲೆ ಕುಡುಕರ ಗುಂಪು ಹಲ್ಲೆ ಮಾಡಿದೆ. ಹಲ್ಲೆ ವೇಳೆ ಗೀಟಾರ್ ವಾದಕ ಅನುಭವ್ ಎಂಬವರ ಕಣ್ಣಿಗೆ ಗಾಯವಾಗಿದೆ.

    ಈ ಬಗ್ಗೆ ಮಹದೇಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಜಸ್ಟ್ 10 ರೂ.ಗೆ ಒಂದು ಸೀರೆ- ಖರೀದಿಸಲು ಹೋಗಿ ಸಾವಿರಾರೂ ರೂ. ಕಳೆದುಕೊಂಡ್ರು

    ಜಸ್ಟ್ 10 ರೂ.ಗೆ ಒಂದು ಸೀರೆ- ಖರೀದಿಸಲು ಹೋಗಿ ಸಾವಿರಾರೂ ರೂ. ಕಳೆದುಕೊಂಡ್ರು

    ಹೈದರಾಬಾದ್: ಮಹಿಳೆಯರು ಸೀರೆ ಪ್ರಿಯರು, ಆಫರ್ ಇದ್ದರೆ ಸಾಕು ಮಳಿಗೆಗೆ ಮುಗಿಬಿದ್ದು ಖರೀದಿಸುತ್ತಾರೆ. ಇಂತದ್ದೇ ಪ್ರಸಂಗವೊಂದು ತೆಲಂಗಾಣದ ಹೈದರಾಬಾದ್ ಮಾಲ್‍ನಲ್ಲಿ ನಡೆದಿದ್ದು, ನೂಕುನುಗ್ಗಲಿಗೆ ಸುಮಾರು 15 ಜನ ಗಾಯಗೊಂಡಿದ್ದಾರೆ.

    ಹೈದರಾಬಾದ್ ನಗರದ ಸಿದ್ದಿಪೇಟೆಯ ಸಿಎಂಆರ್ ಮಾಲ್‍ನಲ್ಲಿ ಕೇವಲ 10 ರೂ. ಒಂದು ಸೀರೆ ಎಂದು ಆಫರ್ ಕೊಡಲಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಮಹಿಳೆಯರು, ಯುವತಿಯರು, ಯುವಕರು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ಮಾಲ್ ಒಳಗೆ ನುಗ್ಗಿದ್ದಾರೆ. ಪರಿಣಾಮ ಕಾಲ್ತುಳಿತಕ್ಕೆ ಸಿಕ್ಕು ಕೆಲವರು ಗಾಯಗೊಂಡಿದ್ದಾರೆ.

    ಸೀರೆ ಖರೀದಿಸಲು ಮಾಲ್‍ಗೆ ಬಂದಿದ್ದ ಮಹಿಳೆಯೊಬ್ಬರು 5 ಚಿನ್ನದ ಸರ, 6 ಸಾವಿರ ನಗದು ಹಾಗೂ ಡೆಬಿಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಹಿಳೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮಾಲ್ ಬಾಗಿಲನ್ನು ಮುರಿದು ಹೊರಬಂದಿದ್ದಾರೆ. ಈ ವೇಳೆ ತಳ್ಳಾಟವಾಗಿದ್ದು, ಕೆಲವರು ಕೆಳಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

    ಮಾಲ್‍ನ ನಿಷ್ಕಾಳಜಿಯಿಂದಾಗಿಯೇ ಘಟನೆ ನಡೆದಿದೆ ಎಂದು ಆರೋಪಿಸಿರುವ ಪೊಲೀಸರು, ಮಾಲ್‍ನ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾಲ್‍ನಲ್ಲಿ ಕುಣಿದು ಕುಪ್ಪಳಿಸಿದ ಪೊಲೀಸರು- ವಿಡಿಯೋ ವೈರಲ್

    ಮಾಲ್‍ನಲ್ಲಿ ಕುಣಿದು ಕುಪ್ಪಳಿಸಿದ ಪೊಲೀಸರು- ವಿಡಿಯೋ ವೈರಲ್

    ವಾಷಿಂಗ್ಟನ್: ಹಬ್ಬ ಹರಿದಿನ ಬಂದ್ರೆ ಸಾಕು ಪೊಲೀರು ಬಂದೋಬಸ್ತ್ ನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಆದರೆ ಈ ಅವಧಿಯಲ್ಲಿ ಇಬ್ಬರು ಪೊಲೀಸರು ಯುವಕರ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.

    ಅಮೆರಿಕದ ಅವೆಂಚುವರ್ ಪೊಲೀಸ್ ಇಲಾಖೆ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಕ್ರಿಸ್ಮಸ್ ಹಬ್ಬದ ವಸ್ತುಗಳನ್ನು ಖರೀದಿಸಲು ಮಾಲ್‍ಗೆ ಬಂದಿದ್ದ ಜನರನ್ನು ನಮ್ಮ ಪೊಲೀಸರು ರಂಜಿಸಿದ್ದಾರೆ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಕ್ರಿಸ್ಮಸ್ ನಿಮಿತ್ತ ಶಾಪಿಂಗ್ ಗೆ ಬಂದಿದ್ದ ಕೆಲವು ಯುವಕರು ಡಾನ್ಸ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಇಬ್ಬರು ಪೊಲೀಸರು ಅಲ್ಲಿಂದ ಯುವಕರನ್ನು ಕಳಿಸಲು ಮುಂದಾಗಿದ್ದಾರೆ. ಇದರಿಂದ ಯುವಕರು ಬೇಸರ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಕೂಡ ಹೆಜ್ಜೆ ಹಾಕಿದ್ದಾರೆ. ಪೊಲೀಸರನ್ನು ಗಮನಿಸಿದ ಯುವಕರು ಅವರೊಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ.

    ಮಾಲ್‍ಗೆ ಬಂದಿದ್ದ ಅನೇಕರು ಪೊಲೀಸರು ಹಾಗೂ ಯುವಕರ ಡಾನ್ಸ್ ನೋಡಿ ಪ್ರೋತ್ಸಾಹ ನೀಡಿ ಚಪ್ಪಾಳೆ ತಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಅಮೆರಿಕದ ಅವೆಂಚುವರ್ ಪೊಲೀಸ್ ಇಲಾಖೆಯು ಡಿಸೆಂಬರ್ 18ರಂದು ಟ್ವೀಟ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್‍ಮಸ್ ಹಬ್ಬ ಬರ್ತಿದ್ದಂತೆ ಕಲರ್‌ಫುಲ್ ಆದ ಸಿಲಿಕಾನ್ ಸಿಟಿ ಮಾಲ್‍ಗಳು

    ಕ್ರಿಸ್‍ಮಸ್ ಹಬ್ಬ ಬರ್ತಿದ್ದಂತೆ ಕಲರ್‌ಫುಲ್ ಆದ ಸಿಲಿಕಾನ್ ಸಿಟಿ ಮಾಲ್‍ಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಎಲ್ಲಿ ನೋಡಿದರೂ ಚಾಕಲೆಟ್ಸ್, ಕೇಕ್ಸ್, ಸಾಂಟಾಕ್ಲಾಸ್ ಗಳು ಕಣ್ಣಿಗೆ ಬೀಳುತ್ತವೆ. ಕ್ರಿಸ್‍ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ ಸಿಟಿ ಫುಲ್ ಕಲರ್ ಫುಲ್ ಆಗತ್ತಿದೆ.

    ಗರುಡಾ ಮಾಲ್‍ನಲ್ಲಿ ಮಿಂಚು ಹುಳದ ಹಾಗೆ ಲೈಟ್ಸ್ ಗಳು ಜಗಮಗಿಸುತ್ತಿದ್ದು, ಬೆಳಕಿನ ಚಿತ್ತಾರದ ನಡುವೆ ಚಿಟ್ಟೆಗಳು ಬ್ರೈಟ್ ಆಗಿ ಕಾಣಿಸುತ್ತಿದೆ. ಕ್ರಿಸ್‍ಮಸ್ ಟ್ರಿ ನೋಡುತ್ತಿದ್ದರೆ, ಎಲ್ಲರಿಗೂ ನೋಡತ್ತಾನೇ ಇರಬೇಕು ಎಂದು ಅನಿಸುತ್ತದೆ.

    ಗರುಡಾ ಮಾಲ್ ನಲ್ಲಿ ಕ್ರಿಸ್‍ಮಸ್ ಹಬ್ಬದ ಖುಷಿ ಎದ್ದು ಕಾಣುತ್ತಿದೆ. ಈ ಫೆಸ್ಟ್ ಗಾಗಿ ಮಾಲ್‍ನ್ನು ವಿಶೇಷವಾಗಿ ಎಲೆಕ್ಟ್ರಿಕ್ ಬೃಹತ್ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ವಿಶೇಷವಾದ ಶಾಪಿಂಗ್ ಫೆಸ್ಟ್ ಆಯೋಜಿಸಲಾಗಿದೆ. ಈ ಲೈಟ್ ಫೆಸ್ಟಿವಲ್‍ಗೆ ನಟಿ ಹರಿಪ್ರಿಯ ಚಾಲನೆ ನೀಡಿದರು.

    ಗರುಡಾಮಾಲನ್ನು ಸುಮಾರು 2 ಲಕ್ಷಕ್ಕೂ ಹೆಚ್ಚು ಎಲ್‍ಇಡಿ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಜೈಪುರ ಅರಮನೆಯ ಪ್ರತಿಕೃತಿ ಪ್ಯಾಲೇಸ್ ಆಫ್ ವಿಂಡ್ಸ್, ಹವಾ ಮಹಲ್ ನಿರ್ಮಿಸಲಾಗಿದೆ. 45 ಅಡಿ ಅಗಲ ಮತ್ತು 38 ಅಡಿ ಎತ್ತರದ ಚಿಟ್ಟೆಗಳ ಕ್ರಿಸ್‍ಮಸ್ ಟ್ರೀ ಮಾಲ್‍ನ ಮುಂಭಾಗದಲ್ಲಿ ಎಲ್ಲರನ್ನು ಬರಮಾಡಿಕೊಳ್ಳುತ್ತದೆ.

    ಕ್ರಿಸ್‍ಮಸ್ ಅಂದರೆ ಹೊಸತನ ಇರಲೇಬೇಕು. ಈ ಹಬ್ಬಕ್ಕೆ ಜನರನ್ನು ಸೆಳೆಯಲು ಮಾಲ್ ಗಳು ಡಿಫರೆಂಟ್ ಆಗಿ ರೆಡಿಯಾಗಿದ್ದು, ಐಟಿ ಸಿಟಿ ಮಂದಿಯನ್ನು ಕೈ ಬೀಸಿ ಕರೆಯುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ಶುಕ್ರವಾರ ನಡೆದಿದೆ.

    ಆರೋಪಿಯನ್ನು ಕುಲ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯನ್ನು ಕೊಲೆಗೈದ ಬಳಿಕ ಈತನೂ ಚೂರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿ ಚಿಂತಾನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಕುಲ್ ದೀಪ್ ನಗರದಲ್ಲಿರೋ ಮಾಲ್ ಗೆ ಬಂದಿದ್ದಾರೆ. ಯವತಿಯೂ ಅದೇ ಮಾಲ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಯುವತಿ ಪ್ರಥಮ ಮಹಡಿಯಲ್ಲಿರೋ ಶೌಚಾಲಯದ ಕಡೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಎಳೆದಾಡಿ ಹಲವು ಬಾರಿ ಆಕೆಗೆ ಚೂರಿಯಿಂದ ಇರಿದಿದ್ದಾನೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಯುವತಿಯನ್ನು ಕೊಲೆಗೈದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರನ್ನು ನೋಡುತ್ತಿದ್ದಂತೆಯೇ ತನಗೆ ತಾನೇ ಚೂರಿಯಿಂದ ಇರಿದುಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಕಸ್ನಾ ಪೊಲೀಸ್ ಠಾಣೆಯ ಶಾಲೆಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

    ಕಳೆದ ಕೆಲ ತಿಂಗಳುಗಳಿಂದ ಆರೋಪಿ ಆಕೆಯನ್ನು ಹಿಂಬಾಲಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಓಡಾಡಲು ಆಟೋ ರಿಕ್ಷಾದ ವ್ಯವಸ್ಥೆ ಮಾಡಿದ್ದರು. ಈಕೆ ತನ್ನ ಕುಟುಂಬದೊಂದಿಗೆ ದಾದ್ರಿ ಎಂಬಲ್ಲಿ ನೆಲೆಸಿದ್ದರು.

    ದಾದ್ರಿಯ ಗೌತಮ್ ಪುರಿ ನಿವಾಸಿಯಾಗಿರೋ ಕುಲ್ ದೀಪ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

  • ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಯು.ಬಿ ಸಿಟಿಯಲ್ಲಿ ಬೃಹದಾಕಾರದ ಬೋರ್ಡ್ ಕುಸಿತವಾದ ಪ್ರಕರಣ ತಡರಾತ್ರಿ ನಡೆದಿದೆ.

    ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಯು.ಬಿ. ಸಿಟಿ ಮೊದಲ ಮಹಡಿಯಲ್ಲಿರುವ ಅಂಗಡಿ ಮೇಲಿನ ಬೋರ್ಡ್ ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಅಂತ ತಿಳಿದುಬಂದಿದೆ.

    ಬೋರ್ಡ್ ಕೆಳಗೆ ಬಿದ್ದಿರೋದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

  • ಮಾಲ್ ನಲ್ಲಿ ಸಾರ್ವಜನಿಕ ಅವಮಾನ- ಬಾಲಕಿ ಆತ್ಮಹತ್ಯೆ

    ಮಾಲ್ ನಲ್ಲಿ ಸಾರ್ವಜನಿಕ ಅವಮಾನ- ಬಾಲಕಿ ಆತ್ಮಹತ್ಯೆ

    ಅಗರ್ತಲಾ: ಶಾಪಿಂಗ್ ಮಾಡಲು ಮಾಲ್‍ಗೆ ಹೋಗಿದ್ದ ವೇಳೆ ಅಲ್ಲಿನ ಸಿಬ್ಬಂದಿ ನೀಡಿದ ಕಿರುಕುಳದಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ತ್ರಿಪುರಾ ಬರ್ಕತಲ್‍ನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಅಕ್ಸಿಲಿಯಮ್ ಮಹಿಳಾ ಪ್ರೌಢ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. ಸಿಬ್ಬಂದಿ ಆಕೆಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದು, ಅವಮಾನ ಮಾಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

    ನನ್ನ ಮಗಳು ಯಾವುತ್ತೂ ಕಳ್ಳತನ ಮಾಡಿದವಳಲ್ಲ. ನನ್ನ ಅನುಮತಿ ಇಲ್ಲದೇ ಯಾವತ್ತೂ ಆಕೆ ನನ್ನ ಪರ್ಸ್ ಮುಟ್ಟುತ್ತಿರಲಿಲ್ಲ, ಅಲ್ಲದೇ ನೆರೆಹೊರೆಯವರಿಂದ ಏನನ್ನು ಪಡೆಯುತ್ತಿರಲಿಲ್ಲ. ಮಾಲ್ ಸಿಬ್ಬಂದಿ ಆಕೆಯ ಮೇಳೆ ಸುಳ್ಳು ಆರೋಪ ಹೊರಿಸಿದ್ದಾರೆ. ಸಾರ್ವಜನಿಕವಾಗಿ ಅಪಮಾನಕ್ಕೆ ಒಳದಾಗ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತಾಯಿ ಒತ್ತಾಯಿಸಿದ್ದಾರೆ.

    ನಡೆದಿದ್ದು ಏನು:
    ಮೇ 24ರಂದು ಬಾಲಕಿ ತನ್ನ ಇಬ್ಬರು ಗೆಳತಿಯರೊಂದಿಗೆ ಶಾಪಿಂಗ್ ಮಾಡಲು ಮಾಲ್‍ಗೆ ಹೋಗಿದ್ದಾಳೆ. ಆಕೆಯನ್ನು ಮಾಲ್ ಸಿಬ್ಬಂದಿಯೊಬ್ಬ ಫೋನ್ ಕಳ್ಳತನದ ಆರೋಪದ ಮೇಲೆ ವಶಕ್ಕೆ ಪಡೆದು 4 ಸಾವಿರ ರೂ. ನೀಡಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದಾನೆ. ವಿಚಾರ ತಿಳಿದು ಆಘಾತಕ್ಕೆ ಒಳಗಾದ ಅವರು ತಕ್ಷಣವೇ ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪೊಲೀಸರು ಅಸ್ವಾಭಾವಿಕ ಸಾವು ಎಂದು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸದ್ಯ ಇಂಡಿಜಿನಸ್ ಪೀಪಲ್ಸ್ ಆಫ್ ತ್ರಿಪುರ (ಐಪಿಎಫ್‍ಟಿ) ಹಾಗೂ ನ್ಯಾಷನಲ್ ಸ್ಟುಡೆಂಟ್ ಯುನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಮೌನ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಪೊಲೀಸರು ಪ್ರತಿಭಟನೆಯನ್ನು ಮಾಡದಂತೆ ಸೂಚಿಸಿದ್ದಾರೆ.

    ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಬಹಿರಂಗ ಪಡಿಸಬೇಕು. ಬಾಲಕಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಐಪಿಎಫ್‍ಟಿ ಸದಸ್ಯರು ಮಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಾಲ್ ಹಾಗೂ ಬಾಲಕಿ ಓದುತ್ತಿದ್ದ ಶಾಲೆಯವರು ಆತ್ಮಹತ್ಯೆ ಮಾಡಿಕೊಂಡ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ವರದಿಯಾಗಿದೆ.

  • ಮಾಲ್ ಎಸ್ಕಲೇಟರ್ ನಿಂದ ಬಿದ್ದು 10ರ ಬಾಲಕ ದುರ್ಮರಣ

    ಮಾಲ್ ಎಸ್ಕಲೇಟರ್ ನಿಂದ ಬಿದ್ದು 10ರ ಬಾಲಕ ದುರ್ಮರಣ

    ಚೆನ್ನೈ: ಮಾಲ್ ಒಂದರಲ್ಲಿ ಎಸ್ಕಲೇಟರ್ ಮೇಲಿಂದ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚೆನ್ನೈನ ರಾಯ್ಪೆಟ್ಟಾದಲ್ಲಿ ನಡೆದಿದೆ.

    ಈ ಘಟನೆ ಏಪ್ರಿಲ್ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೀನ್ ಕುಮಾರ್(10) ಮೃತ ದುರ್ದೈವಿ. ಈತ 5ನೇ ತರಗತಿಯಲ್ಲಿ ಓದುತ್ತಿದ್ದು, ತೊಡಿಯಾರ್ ಪೇಟ್‍ನ ಡ್ರೈವರ್ಸ್  ಕಾಲೋನಿಯಲ್ಲಿ ವಾಸಿಸುತ್ತಿದ್ದನು.

    ಘಟನೆಯ ವಿವರ?
    ಏಪ್ರಿಲ್ 10 ರಂದು ನವೀನ್ ಕುಮಾರ್ ಮತ್ತು ಆತನ ಸಹೋದರಿ ಗೀತಾ ರಾಯ್ಪೆಟ್ಟಾದಲ್ಲಿರುವ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್ ಗೆ ವಿಡಿಯೋ ಗೇಮ್ ಆಡಲು ಹೋಗಿದ್ದರು. ನವೀನ್ ಎರಡನೇ ಮಹಡಿಯಲ್ಲಿ ಎಸ್ಕಲೇಟರ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಬ್ಯಾಗ್ ಎಸ್ಕಲೇಟರ್ ಗೆ ಸಿಕ್ಕಿಹಾಕಿಕೊಂಡಿದೆ. ಆಗ ನವೀನ್ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.

    ನಾವು ಮಾಲ್ ನ ಸಿಸಿಟಿವಿಯನ್ನು ಪರಿಶೀಲಿಸಿದ್ದೇವೆ. ಆದರೆ ನವೀನ್ ಎಸ್ಕಲೇಟರ್ ನಲ್ಲಿ ಚಲಿಸುತ್ತಿದ್ದಾಗ ಬ್ಯಾಗ್ ಸಿಕ್ಕಿಹಾಕಿಕೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ನವೀನ್ ತಂದೆ ಸುನಿಲ್ ಕುಮಾರ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಸ್ಕಲೇಟರ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ನವೀನ್ ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ನವೀನ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಮೃತ ಪಟ್ಟಿದ್ದಾನೆ. ದೇಹದ ಯಾವುದೇ ಭಾಗದಲ್ಲಿ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಫಟನೆ ಕುರಿತಂತೆ ತಂದೆ ಸುನಿಲ್ ಮಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.