Tag: ಮಾಲ್

  • ಕೋವಿಡ್ ಸರ್ಟಿಫಿಕೇಟ್ ಇಲ್ಲದವರಿಗೆ ಮಾಲ್‌ಗೆ ನೋ ಎಂಟ್ರಿ

    ಕೋವಿಡ್ ಸರ್ಟಿಫಿಕೇಟ್ ಇಲ್ಲದವರಿಗೆ ಮಾಲ್‌ಗೆ ನೋ ಎಂಟ್ರಿ

    ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವ ಸಲುವಾಗಿ ಮಾಲ್‌ಗೆ ಎಂಟ್ರಿ ಕೊಡುವವರಿಗೆ ಎರಡು ಡೋಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಈಗಾಗಲೇ ಪರಿಶೀಲನೆ ಪ್ರಾರಂಭವಾಗಿದೆ.

    ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗಷ್ಟೇ ಮಾಲ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ವೀಕೆಂಡ್‌ನಲ್ಲಿ ಮಾಲ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾಲ್‌ಗಳ ಮುಂಭಾಗ ಸಿಬ್ಬಂದಿ ಅಲರ್ಟ್ ಆಗಿದ್ದಾರೆ.

    2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌ಗೆ ಪ್ರವೇಶ ಎಂದು ಮಾಲ್ ಮುಂದೆ ಸಿಬ್ಬಂದಿ ನೋಟಿಸ್ ಬೋರ್ಡ್ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದವರನ್ನು ಸಿಬ್ಬಂದಿ ವಾಪಾಸ್ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಬೇರೆ ಯಾರದ್ದೋ ಲಸಿಕೆಯ ರಿಪೋರ್ಟ್ ತೋರಿಸಿ ಬರುವುದರಿಂದ ಸರ್ಕಾರ ನೀಡಿದ ಯಾವುದಾದರೊಂದು ಗುರುತಿನ ಚೀಟಿಯೂ ಕಡ್ಡಾಯಗೊಳಿಸಿದೆ. ಇದರಿಂದಾಗಿ ಐಡಿ ಕಾರ್ಡ್ ನಲ್ಲಿರುವ ಹೆಸರಿನ ಜೊತೆಗೆ ವ್ಯಾಕ್ಸಿನೇಷನ್ ರಿಪೋರ್ಟ್ ನಲ್ಲಿರುವ ಹೆಸರು ಎರಡನ್ನು ಪರಿಶೀಲಿಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದೇ ಇರುವವರು ಹೊರಗಡೆ ನಿಂತಿದ್ದಾರೆ.

  • ನಾಳೆಯಿಂದ ಮಾಲ್ ಓಪನ್ – ಶುಚಿಗೊಳಿಸುತ್ತಿದ್ದಾರೆ ಸಿಬ್ಬಂದಿ

    ನಾಳೆಯಿಂದ ಮಾಲ್ ಓಪನ್ – ಶುಚಿಗೊಳಿಸುತ್ತಿದ್ದಾರೆ ಸಿಬ್ಬಂದಿ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟದಿಂದ ಕ್ಲೋಸ್ ಆಗಿದ್ದ ಮಾಲ್ ಗಳು ನಾಳೆಯಿಂದ ಓಪನ್ ಆಗಲಿದೆ.

    ಸದ್ಯ ಮಾಲ್ ಸ್ವಚ್ಚಗೊಳಿಸುವುದರಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಮಾಲ್ ನ ಪ್ರತಿಯೊಂದು ಭಾಗವನ್ನು ಸ್ಯಾನಿಟೈಸರ್ ಮಾಡಿ ಶುದ್ಧಗೊಳಿಸುವ ಕಾರ್ಯ ಬರದಿಂದ ನಡೆಯುತ್ತಿದೆ. ಜೊತೆಗೆ ಮಾಲ್ ನಲ್ಲಿರುವ ಶಾಪ್ ಗಳ ಮಾಲೀಕರು ಮತ್ತು ಸಿಬ್ಬಂದಿ ಸಹ ಬಂದು ತಮ್ಮ ತಮ್ಮ ಶಾಪ್ ಗಳನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ.

    ಎರಡು ತಿಂಗಳಿಂದ ಕ್ಲೋಸ್ ಆಗಿದ್ದ ಕಾರಣ ಶಾಪ್ ಮಾಲೀಕರು ಹಾಗೂ ಸಿಬ್ಬಂದಿ, ಇಂದೇ ಆಗಮಿಸಿ ನಾಳೆ ಓಪನ್ ಮಾಡಲು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಾಳೆಯಿಂದ ಓಪನ್ ಆಗುವ ಮಾಲ್ ಗಳಲ್ಲಿ ಜನ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿ ಮಾಡುವಂತೆ ಸೂಚನೆ ಫಲಕವನ್ನು ಸಹ ಹಾಕಿದ್ದಾರೆ. ಇದನ್ನೂ ಓದಿ:ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ – ಬೆಟ್ಟದಲ್ಲಿ ಭಕ್ತರು ವಾಸ್ತವ್ಯ ಹೂಡುವಂತಿಲ್ಲ

  • ಮಾಲ್‍ನಲ್ಲಿ ಭೀಕರ ಬೆಂಕಿ ಅವಘಡ – ಹಲವು ಮಂದಿ ಒಳಗಿರುವ ಶಂಕೆ

    ಮಾಲ್‍ನಲ್ಲಿ ಭೀಕರ ಬೆಂಕಿ ಅವಘಡ – ಹಲವು ಮಂದಿ ಒಳಗಿರುವ ಶಂಕೆ

    ನವದೆಹಲಿ: ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದ ಜೈಪುರಿಯಾ ಶಾಂಪಿಂಗ್ ಮಾಲ್‍ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ.

    ಘಟನೆ ಕುರಿತಂತೆ ಮಾಹಿತಿ ದೊರೆತ ಮೇರೆಗೆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿನಾಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುವುದ ಕುರಿತಂತೆ ಸದ್ಯ ಯವುದೇ ಮಾಹಿತಿ ದೊರೆತಿಲ್ಲ.

     

    ಶಾಪಿಂಗ್ ಮಾಲ್ ಹೆಚ್ಚು ಭಾಗ ಬೆಂಕಿಗಾಹುತಿಯಾಗಿದ್ದು, ಮಾಲ್ ಒಳಗೆ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಮೊದಲಿಗೆ ಮಾಲ್‍ನಲ್ಲಿ ನಡೆಯುತ್ತದ್ದ ಔತಣಕೂಟದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಮಾಲ್ ಸುತ್ತ ಆವರಿಸಿದೆ ಎಂದು ಹೇಳಲಾಗುತ್ತಿದೆ.

    ಘಟನೆ ಕುರಿತ ವೀಡಿಯೋವನ್ನು ಮಾಲ್ ಸುತ್ತಮುತ್ತಲಿದ್ದ ಅನೇಕ ಮಂದಿ ಸೆರೆಹಿಡಿದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೋವಿಡ್ ಟೆಸ್ಟ್: ಬಿಬಿಎಂಪಿ

    ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೋವಿಡ್ ಟೆಸ್ಟ್: ಬಿಬಿಎಂಪಿ

    ಬೆಂಗಳೂರು: ಕೊರೊನಾ ವಿರುದ್ಧ ಪಾಲಿಕೆ ಹೊಸ ಪ್ಲ್ಯಾನ್ ಮಾಡಿದ್ದು, ಇನ್ನೂ ಮುಂದೆ ಜನಸಂದಣಿ ಜಾಸ್ತಿ ಇರುವ ಕಡೆ ಕೊರೊನಾ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ.

    ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೊರೊನಾ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್ ಗೇಟ್ ಬಳಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ, ದ್ವಿತೀಯ ಸಂಪರ್ಕ ಹಾಗೂ ಅನ್ಯ ರೋಗಗಳಿಗೆ ತುತ್ತಾದವರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನೂರಾರು ಸಂಖ್ಯೆಯ ಜನ ಓಡಾಡುವ ಕಡೆಯೂ ಟೆಸ್ಟ್ ಮಾಡಲಾಗುತ್ತದೆ ಎಂದರು.

    ಮಾಲ್‍ಗಳಲ್ಲಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಸೂಪರ್ ಮಾರ್ಕೆಟ್, ಮಾಲ್‍ನಲ್ಲಿ ನಿಯಮ ಉಲ್ಲಂಘನೆಯಾದರೆ ಮಾಲೀಕರೇ ಹೊಣೆಯಾಗುತ್ತಾರೆ. ಹೀಗಾಗಿ ಮಾಲ್ ಮಾಲೀಕರು, ಶಾಪ್‍ನ ಮಾಲೀಕರು ಕೊರೊನಾ ರೂಲ್ಸ್ ಪಾಲಿಸುವಂತೆ ಕಾಯಬೇಕು.

    ಒಂದು ವೇಳೆ ಪದೇ ಪದೇ ನಿಯಮ ಉಲ್ಲಂಘಿಸಿದರೆ ಮಾಲ್ ಹಾಗೂ ಶಾಪನ್ನು ಕ್ಲೋಸ್ ಮಾಡಲು ಆದೇಶ ನೀಡಲಾಗುತ್ತದೆ. ಹೀಗಾಗಿ ಮಾಲ್‍ನಲ್ಲಿ ಸಾಮಾಜಿಕ ಅಂತರ ಕಾಯಲೇಬೇಕು. ಇಲ್ಲವಾದರೇ ದಂಡ ಹಾಕಲಾಗುತ್ತದೆ. 60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು ಮನೆಯಿಂದ ಹೊರಗೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು.

    ಇನ್ನೂ ದುರ್ಗಾ ಪೂಜೆ ವೇಳೆ ಪ್ರತಿಮೆಯಿಡುವ ವೇಳೆಯೂ ಕ್ರಮ ವಹಿಸಲಾಗುತ್ತದೆ. ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ನಿಯಮ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಓಪನ್ ಜಾಗದಲ್ಲಿ ಕಾರ್ಯಕ್ರಮ ಮಾಡುವುದಾದರೆ ಪಾಲಿಕೆ ನಿರ್ಧಾರ ಮಾಡಲಿದೆ. ಆರೋಗ್ಯ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಲಿದೆ ಎಂದು ನವರಾತ್ರಿ ವೇಳೆ ಜನಸಂದಣಿ ವಿಚಾರವಾಗಿ ಪ್ರತಿಕ್ರಿಯಿಸಿದರು.

    ಟೆಸ್ಟಿಂಗ್ ಕೇಸ್‍ಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ನಿತ್ಯ 50 ಸಾವಿರ ಟೆಸ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಸದ್ಯಕ್ಕೆ ನಿತ್ಯ 38 ಸಾವಿರ ಕೇಸ್ ಟೆಸ್ಟ್ ಆಗುತ್ತಿದೆ. ಅರದಲ್ಲಿ ಈಗ 5 ಸಾವಿರ ಕೇಸ್ ಬರುತ್ತಿದೆ. ಇನ್ನೂ ಶೇ.1.23 ಸಾವು ಆಗುತ್ತಿದೆ. ನಾವು ಸಾವಿನ ಪ್ರಮಾಣವನ್ನು ಶೇ.1 ರಷ್ಟು ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಉಸಿರಾಟದ ತೊಂದರೆಯಾದಾಗ ಆಸ್ಪತ್ರೆಗೆ ಬಂದರೆ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

  • ನೀವು ಫ್ರೆಶ್ ಅಂತ ತಿನ್ನೋ ಆಪಲ್ ಎಷ್ಟು ಹಳತಾಗಿರಬಹುದು ಗೊತ್ತೇ?

    ನೀವು ಫ್ರೆಶ್ ಅಂತ ತಿನ್ನೋ ಆಪಲ್ ಎಷ್ಟು ಹಳತಾಗಿರಬಹುದು ಗೊತ್ತೇ?

    ಗ ಎಲ್ಲೆಲ್ಲಿಯೂ ಮಾಲ್ ಸಂಸ್ಕೃತಿ ಹಬ್ಬಿಕೊಂಡಿದೆ. ಆಗ ತಾನೇ ಕೊಯ್ದ ಹಣ್ಣು ತರಕಾರಿ ಬೀದಿ ಬದಿಯಲ್ಲಿದ್ರೆ ಜನ ಅದ್ರತ್ತ ತಿರುಗಿಯೂ ನೋಡೋದಿಲ್ಲ. ದೊಡ್ಡ ದೊಡ್ಡ ಮಾಲ್‍ಗಳಲ್ಲಿ ಹಣ್ಣು ತರಕಾರಿ ಕೊಂಡರೇನೋ ಅಂಥವ್ರಿಗೆಲ್ಲ ಸಮಾಧಾನ. ಕಲಾತ್ಮಕವಾಗಿ ಜೋಡಿಸಿರುವ, ನಾನಾ ವ್ಯಾಪಾರೀ ಹಕೀಕತ್ತುಗಳಿಗೇ ಜನರ ಮನಸು ಸೋಲುತ್ತೆ. ಅಂಥಾ ಹೈಫೈ ಮಳಿಗೆಗಳಿಂದ ತಂದರೇನೇ ಹಣ್ಣು ಸೇರಿದಂತೆ ಎಲ್ಲವೂ ಫ್ರೆಶ್ ಆಗಿರುತ್ತೆಂಬ ನಂಬಿಕೆ ಹಲವರಲ್ಲಿದೆ.

    ಆದ್ರೆ ಈಗ ಹೊರ ಬಿದ್ದಿರೋ ಒಂದು ಸುದ್ದಿ ಅಂಥಾ ನಂಬಿಕೆಗಳನ್ನೆಲ್ಲ ಶುದ್ಧ ಭ್ರಮೆಯನ್ನಾಗಿಸಿದೆ. ಆರೋಗ್ಯ ಕಾಳಜಿ ಹೊಂದಿರುವವ ಪಾಲಿನ ಮೆಚ್ಚಿನ ಹಣ್ಣು ಆಪಲ್. ದಿನಾ ಒಂದು ಸೇಬು ತಿಂದರೆ ಅನಾರೋಗ್ಯದಿಂದ ದೂರ ಇರಬಹುದೆಂಬ ನಾಣ್ನುಡಿಯೇ ಇದೆ. ಅದರಲ್ಲಿ ಸತ್ಯವಿರೋದೂ ಹೌದು. ಪ್ರತಿಯೊಂದನ್ನೂ ಲಾಭಕ್ಕೆ ಬಳಸಿಕೊಳ್ಳೋ ವ್ಯಾಪಾರಿ ಬುದ್ಧಿ ಸೇಬನ್ನು ಬಿಡೋದುಂಟೇ? ಆದ್ದರಿಂದಲೇ ಆಪಲ್ ವ್ಯಾಪಾರಿಗಳು ತಾಜಾತನದ ವಿಚಾರದಲ್ಲಿ ಗ್ರಾಹಕರನ್ನು ಸಲೀಸಾಗಿ ಯಾಮಾರಿಸುತ್ತಿದ್ದಾರಂತೆ.

    ಸೇಬು ಸರ್ವ ಋತುಗಳಲ್ಲಿಯೂ ದುಬಾರಿ ಬೆಲೆ ಕಾಯ್ದಿಟ್ಟುಕೊಂಡಿರೋ ಹಣ್ಣು. ಅದೆಷ್ಟೇ ತಾಜಾ ಹಣ್ಣನ್ನ ತಂದ್ರೂ ದಿನ ಕಳೆಯೋದರೊಳಗದು ಮುರುಟಿಕೊಳ್ಳುತ್ತೆ. ಫ್ರಿಡ್ಜಲ್ಲಿಟ್ಟು ತಿನ್ನೋದೂ ಕೂಡಾ ಅಪಾಯಕಾರಿಯೇ ಅನ್ನೋ ನಂಬಿಕೆ ಹಲವರಲ್ಲಿದೆ. ಆದ್ರೆ ಮಾಲ್‍ಗಳಿಂದ ನೀವು ಕೊಂಡು ತರೋ ಸೇಬು ಒಂದು ವರ್ಷದಷ್ಟು ಹಳತಾಗಿರುತ್ತೆಂಬ ಸತ್ಯವನ್ನ ವರದಿಯೊಂದು ಬಯಲು ಮಾಡಿಬಿಟ್ಟಿದೆ.

    ವರ್ಷದ ಕೊನೆಯ ಹೊತ್ತಿಗೆ ಕುಯಿಲು ಮಾಡಿದ ಆಪಲ್‍ಗಳನ್ನ ವ್ಯಾಪಾರಿಗಳು ಖರೀದಿಸ್ತಾರೆ. ನಂತರ ಅದನ್ನ ಹಲವಾರು ಪ್ರಕ್ರಿಯೆಗಳಿಗೊಳಪಡಿಸಿ ಕೋಲ್ಡ್ ಸ್ಟೋರೇಜಿನಲ್ಲಿಡ್ತಾರೆ. ಆ ನಂತರದಲ್ಲಿ ಹೆಚ್ಚು ಕಾಸು ಬರೋ ಕಾಲ ನೋಡಿಕೊಂಡು ಮಾರುಕಟ್ಟೆಗೆ ಬಿಡ್ತಾರೆ. ನೀವು ಒಂದಲ್ಲ ಒಂದು ಸೀಜನ್ನಿನಲ್ಲಿ ಸಾಕಷ್ಟು ಹಳೇ ಆಪಲ್ ಅನ್ನು ತಿನ್ನದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಮಾಲ್‍ಗಳಲ್ಲಿ ಹೊಳೆಯುತ್ತಾ ಕಣ್ಸೆಳೆಯೋ ಆಪಲ್‍ಗಳಲ್ಲಿ ಬಹುತೇಕವುಗಳು ಇಂಥಾ ಕೋಲ್ಡ್ ಸ್ಟೋರೇಜಿನ ಕೂಸುಗಳೇ. ಅವುಗಳನ್ನು ಕಿತ್ತು ಕಡಿಮೆಯೆಂದರೂ ಒಂದು ವರ್ಷ ಕಳೆದಿರುತ್ತೆ!

     

  • ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ಉಲ್ಬಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಟ್ವೀಟ್ ಮಾಡಿರುವ ಅವರು, ಅಂಗಡಿ, ಮಾಲ್, ಬ್ಯಾಂಕ್, ಹೋಟೆಲ್, ಕಚೇರಿ ಹಾಗೂ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ನೀವು ಮಾಸ್ಕ್ ಧರಿಸುವುದನ್ನು ಕಾರ್ಯಗತಗೊಳಿಸದಿದ್ದರೆ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದು ಈಗಾಗಲೇ ಕಾರ್ಯಗತಕ್ಕೆ ಬಂದಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ತಿಳಿಸಿದ್ದಾರೆ.

    ನಗರದ ಅಂಗಡಿ, ಮಾಲ್, ಬ್ಯಾಂಕ್, ಹೋಟಲ್ ಸೇರಿದಂತೆ ವಿವಿಧ ಕಡೆಯ ಸಿಬ್ಬಂದಿ ಹಾಗೂ ಗ್ರಾಹಕರು ಮಾಸ್ಕ್ ಧರಿಸುತ್ತಿಲ್ಲ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಿಲ್ಲ. ಸಾಕಷ್ಟು ಕಡೆ ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸ್ವಲ್ಪ ನಿಯಂತ್ರಣಕ್ಕೆ ಸಿಕ್ಕಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

  • ಜೂನ್ 8ರಿಂದ ಮಾಲ್ ಓಪನ್ – ಸಿನಿಮಾ ಇರಲ್ಲ

    ಜೂನ್ 8ರಿಂದ ಮಾಲ್ ಓಪನ್ – ಸಿನಿಮಾ ಇರಲ್ಲ

    ಬೆಂಗಳೂರು: ಮಾರ್ಚ್ ತಿಂಗಳನಿಂದ ಬಂದ್ ಆಗಿದ್ದ ಶಾಪಿಂಗ್ ಮಾಲ್‍ಗಳು ಜೂನ್ 8 ರಿಂದ ತೆರೆಯಲಿದೆ. ಮಾಲ್ ತೆರೆದರೂ ಸಿನಿಮಾ ಪ್ರದರ್ಶನ ನಡೆಯುವುದಿಲ್ಲ.

    2 ಹಂತಗಳಲ್ಲಿ ಮಾಲ್ ಓಪನ್‍ಗೆ ಸಮ್ಮತಿ ಸಿಗಲಿದ್ದು, ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಜೂನ್ 8 ರಿಂದ ದೇವಾಲಯ, ಮಸೀದಿ, ಚರ್ಚ್ ಓಪನ್ – ಷರತ್ತುಗಳು ಅನ್ವಯ

    ಷರತ್ತು ಏನಿರಬಹುದು?
    – ಒಂದು ಪಾಳಿಯಲ್ಲಿ ಶೇ.50ರಷ್ಟು ಸಿಬ್ಬಂದಿಗಷ್ಟೇ ಕೆಲಸಕ್ಕೆ ಅವಕಾಶ
    – ಶಾಪಿಂಗ್ ಮಾಲ್‍ಗಳಲ್ಲಿರುವ ಸೂಪರ್ ಮಾರ್ಕೆಟ್, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ
    – ಉಡುಪುಗಳು, ಫೂಟ್‍ವೇರ್, ಜ್ಯುವೆಲ್ಲರಿ, ಕನ್ನಡಕ ಮಾರಾಟಕ್ಕೆ ಅವಕಾಶ
    – ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
    – ಮಾಲ್‍ನಲ್ಲಿ ಜಿಮ್, ಬಾರ್, ಥಿಯೇಟರ್ ಓಪನ್ ಇಲ್ಲ

  • ಷರತ್ತು ವಿಧಿಸಿ ಜೂನ್ 1 ರಿಂದ ಮಾಲ್, ಹೋಟೆಲ್‍ಗಳಿಗೆ ಅನುಮತಿ ಸಾಧ್ಯತೆ

    ಷರತ್ತು ವಿಧಿಸಿ ಜೂನ್ 1 ರಿಂದ ಮಾಲ್, ಹೋಟೆಲ್‍ಗಳಿಗೆ ಅನುಮತಿ ಸಾಧ್ಯತೆ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್, ಹೋಟೆಲ್‍ಗಳು ಜೂನ್ ಒಂದರಿಂದ ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಮಾಲ್ ಮತ್ತು ಹೋಟೆಲ್ ಗಳು ಎಂದಿನಂತೆ ವ್ಯಾಪಾರ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

    ಮಾಲ್ `ಫ್ರೀ’ ಆಗಲು ಷರತ್ತು ಅನ್ವಯ:
    ಜೂನ್ ಒಂದರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ ಸಿಕ್ಕಿದರೂ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮಾತ್ರ ಮಾಲ್ ಓಪನ್ ಇರುವ ಸಾಧ್ಯತೆ ಹೆಚ್ಚಿದೆ. 2 ಹಂತಗಳಲ್ಲಿ ಮಾಲ್ ಓಪನ್‍ಗೆ ಸಮ್ಮತಿ ಸಿಗಲಿದ್ದು, ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಮಕ್ಕಳ ಉಡುಪು, ಕನ್ನಡಕ ಮಾರಾಟ, ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಬೇಕಿರುವ ಎಲೆಕ್ಟ್ರಾನಿಕ್ ವಸ್ತುಗಳು, ಕ್ರೀಡಾಪರಿಕರ, ಚಪ್ಪಲಿ, ಶೂಗಳ ಮಾರಾಟಕ್ಕೆ ಮೊದಲ ಹಂತದಲ್ಲಿ ಅನುಮತಿ ಸಿಗಲಿದೆ.

    2ನೇ ಹಂತದಲ್ಲಿ ಮಾಲ್‍ಗಳಲ್ಲಿ ಫುಡ್ ಕೋರ್ಟ್‍ಗೆ ಅನುಮತಿ ಸಾಧ್ಯತೆಯಿದೆ. ಇದರ ಜೊತೆಗೆ ಮಲ್ಟಿಪ್ಲೆಕ್ಸ್ ಗಳಿಗೆ, ಮನರಂಜನಾ ಕೇಂದ್ರಗಳಿಗೆ ಗ್ರೀನ್ ಸಿಗ್ನಲ್ ಸಾಧ್ಯತೆಯಿದೆ.

    ಪ್ರವೇಶ ದ್ವಾರ, ಕ್ಯಾಶ್ ಕೌಂಟರ್, ಪಾರ್ಕಿಂಗ್ ಏರಿಯಾಗಳಲ್ಲಿ ಸ್ಯಾನಿಟೈಸರ್ ಕಡ್ಡಾಯ. ಮಾಲ್ ಸಿಬ್ಬಂದಿ ಮತ್ತು ಗ್ರಾಹಕರು ಮಾಸ್ಕ್ ಧರಿಸಬೇಕು. ಮಾಲ್ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಗ್ರಾಹಕರು ಸಾಮಾಜಿಕ ಅಂತರ ಪಾಲಿಸಬೇಕಾಗುತ್ತದೆ.

    ಮಾಲ್‍ನಲ್ಲಿ ಸ್ಪಾ, ಸಲೂನ್‍ನಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಕೆ ಅನಮತಿ ಸಿಗಲಿದ್ದು, ಟೋಕನ್ ಪಡೆದ ಗ್ರಾಹಕರಿಗೆ ಮಾತ್ರ ಸ್ಪಾ, ಸಲೂನಿಗೆ ಅನುಮತಿ ಸಿಗುವ ಸಾಧ್ಯತೆಯಿದೆ.

    ಹೋಟೆಲ್ ಓಪನ್?
    ಸರ್ಕಾರ ಈಗ ಪಾರ್ಸೆಲ್ ನೀಡಲು ಮಾತ್ರ ಹೋಟೆಲ್ ಗಳಿಗೆ ಅನುಮತಿ ನೀಡಿದೆ. ಆದರೆ ಜೂನ್ 1 ರಿಂದ ಹೋಟೆಲಿನಲ್ಲಿ ಕುಳಿತು ತಿನ್ನುವುದಕ್ಕೂ ಅನುಮತಿ ನೀಡುವ ಸಾಧ್ಯತೆಯಿದೆ. ಹೋಟೆಲ್ ಸಿಬ್ಬಂದಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿ ಆಗಮಿಸಿದ ಗ್ರಾಹಕರಿಗೆ ಮಾತ್ರ ಆಹಾರ ನೀಡಬೇಕು. ಸಾಮಾಜಿಕ ಅಂತರ ಕಡ್ಡಾಯ ಈ ಷರತ್ತುಗಳನ್ನು ಸರ್ಕಾರ ವಿಧಿಸಲಿದೆ.

  • ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ- ಬಾಗಿಲು ತೆರೆದ ಮಾಲ್‍ಗಳು

    ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ- ಬಾಗಿಲು ತೆರೆದ ಮಾಲ್‍ಗಳು

    ಉಡುಪಿ: ರಾಜ್ಯ ಸರ್ಕಾರದ ಆದೇಶಕ್ಕೆ ಉಡುಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಒಂದು ವಾರ ಕರ್ನಾಟಕವನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಬಿಗ್ ಬಜಾರ್ ಮಾತ್ರ ಬಂದ್ ಆಗಿಲ್ಲ.

    ಸಾವಿರಾರು ಮಂದಿ ವ್ಯಾಪಾರ ಮಾಡುವ ಮಾಲ್ ಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಉಡುಪಿಯ ಬಿಗ್ ಬಜಾರ್ ಇದಾವುದಕ್ಕೂ ಕ್ಯಾರೇ ಎನ್ನದೆ ಬಾಗಿಲು ತೆರೆದಿದೆ. ಜನಹಿತ ಕಾಪಾಡುವ ಬದಲು ಶನಿವಾರದ ಭರ್ಜರಿ ವ್ಯಾಪಾರ ಬೇಟೆಯಲ್ಲಿ ತೊಡಗಿದೆ. ಈ ಕುರಿತು ಪ್ರಶ್ನಿಸಿದರೆ, ಜಿಲ್ಲಾಧಿಕಾರಿಗಳಿಂದ ಅಥವಾ ತಹಶೀಲ್ದಾರರಿಂದ ಯಾವುದೇ ಲಿಖಿತ ಆದೇಶ ಬರದೆ ಇರುವುದರಿಂದ ವ್ಯಾಪಾರ ಮಾಡುತ್ತಿದ್ದೇವೆ ಎಂದು ಬಿಗ್ ಬಜಾರ್ ನ ಸಿಬ್ಬಂದಿ ತಿಳಿಸಿದ್ದಾರೆ.

    ಬಿಗ್ ಬಜಾರ್ ವಾರಾಂತ್ಯದ ಭರ್ಜರಿ ವ್ಯಾಪಾರ ಮಾಡುವ ಆಲೋಚನೆ ಮಾಡಿದೆ, ಇದಕ್ಕೆ ತಕ್ಕಂತೆ ಸಾರ್ವಜನಿಕರು ಸಹ ಸರಕು ಕೊಳ್ಳಲು ಬಿಗ್ ಬಜಾರ್‍ಗೆ ತೆರಳಿದ್ದಾರೆ. ಈ ಮೂಲಕ ಸಾರ್ವಜನಿಕರು ಸಹ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿದ್ದಾರೆ. ಜನಸಂದಣಿ ಉಂಟಾಗುವ ದೊಡ್ಡ ಮಾಲ್ ಗಳಿಗೆ ಸಾರ್ವಜನಿಕರು ಹೋಗಬೇಡಿ ಎಂದು ಸರ್ಕಾರ ಹೇಳಿತ್ತು. ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಜನರಲ್ಲಿ ವಿನಂತಿ ಮಾಡಿಕೊಂಡಿದ್ದರು. ಆದರೆ ಇದಾವುದನ್ನೂ ಲೆಕ್ಕಿಸದ ಜನ, ನೂರಾರು ಸಂಖ್ಯೆಯಲ್ಲಿ ಬಿಗ್ ಬಜಾರ್ ಮುಂದೆ ಬೆಳಗ್ಗಿನಿಂದಲೇ ಜಮಾಯಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಜನ ಕಡಿಮೆ ಇರುವ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಹೋಗುವ ಬದಲು, ಬಿಗ್ ಬಜಾರಿಗೆ ಮುಗಿಬಿದ್ದಿದ್ದಾರೆ.

  • ಮಾಲ್, ಥಿಯೇಟರ್‌ಗಳಿಗೂ ತಟ್ಟಿದ ಕೊರೊನಾ ವೈರಸ್‍ ಬಿಸಿ

    ಮಾಲ್, ಥಿಯೇಟರ್‌ಗಳಿಗೂ ತಟ್ಟಿದ ಕೊರೊನಾ ವೈರಸ್‍ ಬಿಸಿ

    ಬೆಂಗಳೂರು: ಕೊರೊನಾ ವೈರಸ್‍ನ ಎಫೆಕ್ಟ್ ಮಾಲ್ ಹಾಗೂ ಚಿತ್ರಮಂದಿರಗಳಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದ ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿವೆ.

    ಸಾಮಾನ್ಯವಾಗಿ ವೀಕೆಂಡ್ ಸಮಯದಲ್ಲಿ ಸಾಕಷ್ಟು ಜನರು ಮಾಲ್ ಹಾಗೂ ಚಿತ್ರಮಂದಿರಗಳಿಗೆ ಬರುತ್ತಿದ್ದರು. ಆದರೆ ಇಂದು ಗಣನೀಯವಾಗಿ ಜನರ ಸಂಖ್ಯೆ ಕಡಿಮೆಯಿತ್ತು. ಶೀತ, ಕೆಮ್ಮು ಇರುವವರು ಬೇರೆ ಬೇರೆ ಭಾಗಗಳಿಂದ ಬರುತ್ತಾರೆ. ಈ ವೇಳೆ ಅವರಿಂದ ಶೀತ, ಕೆಮ್ಮು ಅಟ್ಯಾಕ್ ಆಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಜನ ಮಾಲ್ ಹಾಗೂ ಚಿತ್ರಮಂದಿರಗಳಿಗೆ ಬರಲು ಭಯಪಡುತ್ತಿದ್ದಾರೆ. ಹೀಗಾಗಿ ಮಾಲ್‍ಗಳಲ್ಲಿ ವ್ಯಾಪಾರ ವಹಿವಾಟಿಲ್ಲ ಹಾಗೂ ಥಿಯೇಟರ್‌ಗಳಲ್ಲಿ ಕಲೆಕ್ಷನ್ ಇಲ್ಲ.

    ಗಾಂಧಿನಗರದ ಥಿಯೇಟರ್‌ಗಳಲ್ಲಂತೂ ಜನರೇ ಇರಲಿಲ್ಲ. ಸಾಮಾನ್ಯ ದಿನಗಳಿಗಿಂತ ಜನ ಕಡಿಮೆ ಇದ್ದರು. ಮಧ್ಯಾಹ್ನದ ಶೋಗೆ ಗಾಂಧಿನಗರದ ಚಿತ್ರಮಂದಿರವೊಂದರಲ್ಲಿ ಕೇವಲ 100-120 ಟಿಕೆಟ್‍ಗಳು ಮಾತ್ರ ಸೇಲಾದವು. ಮಹಾಮಾರಿ ವೈರಸ್‍ಗೆ ಹೆದರಿ ಜನ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇದರಿಂದಾಗಿ ಮಾಲ್ ಹಾಗೂ ಚಿತ್ರಮಂಗರ ಕ್ಷೇತ್ರಕ್ಕೂ ಕೂಡ ನಷ್ಟ ಉಂಟಾಗುತ್ತಿದೆ.