Tag: ಮಾಲ್

  • ಅಮೆರಿಕದ ಮಾಲ್‌ನಲ್ಲಿ ಶೂಟೌಟ್ ಪ್ರಕರಣ – ಭಾರತ ಮೂಲದ ಎಂಜಿನಿಯರ್ ಸೇರಿ 9 ಮಂದಿ ಸಾವು

    ಅಮೆರಿಕದ ಮಾಲ್‌ನಲ್ಲಿ ಶೂಟೌಟ್ ಪ್ರಕರಣ – ಭಾರತ ಮೂಲದ ಎಂಜಿನಿಯರ್ ಸೇರಿ 9 ಮಂದಿ ಸಾವು

    ವಾಷಿಂಗ್ಟನ್: ಶನಿವಾರ ಅಮೆರಿಕದ (America) ಡಲ್ಲಾಸ್‌ನಲ್ಲಿ (Dallas) ಶಾಪಿಂಗ್ ಮಾಲ್ (Mall) ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಎಂಜಿನಿಯರ್  ಸೇರಿ 9 ಜನ ಸಾವನ್ನಪ್ಪಿದ್ದಾರೆ.

    ಡಲ್ಲಾಸ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಯುವತಿ ಐಶ್ವರ್ಯ ತಾಟಿಕೊಂಡ (Aishwarya Thatikonda) ಮಾಲ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅವರು ಹೈದರಾಬಾದ್‌ನ ಸರೂರ್‌ನಗರದ ನಿವಾಸಿಯಾಗಿದ್ದರು. ತಾಟಿಕೊಂಡ ತಮ್ಮ ಸ್ನೇಹಿತರೊಂದಿಗೆ ಶಾಪಿಂಗ್‌ಗಾಗಿ ಮಾಲ್‌ಗೆ ತೆರಳಿದ್ದಾಗ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದಾನೆ. ಆತನನ್ನು ಬಳಿಕ ಪೊಲೀಸರು ಗುಂಡಿಕ್ಕಿ ಕೊಂಡಿದ್ದಾರೆ.

    ವರದಿಗಳ ಪ್ರಕಾರ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಮಾರಿಸಿಯೋ ಗಾರ್ಸಿಯಾ ಎಂದು ಗುರುತಿಸಲಾಗಿದೆ. ಆತ ದಾಳಿ ನಡೆಸಿದ್ದ ವೇಳೆ ಮಾಲ್‌ನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿನ ಸದ್ದು ಕೇಳಿ ಅಲ್ಲಿಗೆ ಧಾವಿಸಿದ್ದರು. ಬಳಿಕ ಹಂತಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದನ್ನೂ ಓದಿ: ಕೊಡಗು-ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್

    ಗುಂಡಿನ ದಾಳಿಯಲ್ಲಿ ಐಶ್ವರ್ಯ ತಾಟಿಕೊಂಡ ಸೇರಿದಂತೆ 9 ಜನ ಸಾವನ್ನಪ್ಪಿದ್ದಾರೆ. ಆಕೆಯ ಸ್ನೇಹಿತರಿಗೆ ತೀವ್ರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಟಿಕೊಂಡ ಮೃತದೇಹವನ್ನು ಭಾರತಕ್ಕೆ ತರಿಸಲು ಆಕೆಯ ಕುಟುಂಬಸ್ಥರು ಯೋಜನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ – ಇದಕ್ಕಿದೆ ಭಾರತದ 80% ಬೇಡಿಕೆ ಪೂರೈಸುವ ಸಾಮರ್ಥ್ಯ

  • ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಲಕ್ನೋ: ಕೆಲಸಕ್ಕಾಗಿ ಸಂದರ್ಶನ (Interview) ಮಾಡುವ ನೆಪದಲ್ಲಿ ಕರೆಸಿ, ಮಾದಕ ದ್ರವ್ಯ ನೀಡಿ ಎಂಜಿನಿಯರಿಂಗ್ ಪದವೀಧರೆಯ ಮೇಲೆ ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

    ಗುರುಗ್ರಾಮ್‌ನ ಮಾಲ್‌ವೊಂದರ (Sahara Ganj Mall) ನೆಲಮಾಳಿಗೆಯಲ್ಲಿ ಕಾರಿನಲ್ಲಿ 27 ವರ್ಷದ ಎಂಜಿನಿಯರಿಂಗ್ ಪದವೀಧರ ಯುವತಿಯ ಮೇಲೆ ಕಾಮುಕ ತುಷಾರ್ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಔಷಧಿ ಬೆರಸಿ, ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು (UP Police) ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾ ವಾಯುನೆಲೆಯಲ್ಲಿ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ US ಫೈಟರ್ ಜೆಟ್

    ಗುರುಗ್ರಾಮ್‌ನ (Gurugram) ಸೆಕ್ಟರ್-51ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ತುಷಾರ್ ಶರ್ಮಾ ಎಂಬ ವ್ಯಕ್ತಿ ತನ್ನೊಂದಿಗೆ ಸಂಪರ್ಕ ಹೊಂದಿದ್ದನು. ಕೆಲಸ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಏನಿದು ಘಟನೆ?
    ಆರೋಪಿ ತುಷಾರ್ ಶರ್ಮಾ ಉದ್ಯೋಗಕ್ಕಾಗಿ ಸಂದರ್ಶನ ಇರುವುದಾಗಿ ಪದವೀಧರೆಯನ್ನ ಮಾಲ್‌ಗೆ ಕರೆಸಿದ್ದಾನೆ. ಆಕೆ ತನ್ನ ಎಲ್ಲ ದಾಖಲೆಗಳೊಂದಿಗೆ ಮಾಲ್‌ಗೆ ಬಂದಿದ್ದಾಳೆ. ನಂತರ ಆರೋಪಿ ಆಕೆಯನ್ನ ನೆಲಮಾಳಿಗೆ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಬರುವ ಔಷಧಿ ಬೆರೆಸಿಕೊಟ್ಟಿದ್ದಾನೆ. ಆಕೆ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಆಕೆಯನ್ನು ಕಾರಿನೊಳಕ್ಕೆ ತಳ್ಳಿ ಆರೋಪಿ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಬಳಿಕ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ, ಆಕೆಯನ್ನು ಮಾಲ್ ಪಾರ್ಕಿಂಗ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯಿಂದ ದೂರು ಸ್ವೀಕರಿಸಿದ ಬಳಿಕ ಆಕೆಯನ್ನ ವೈದ್ಯಕೀಯ ಪರೀಕ್ಷೆಗಾಗಿ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 328, 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಪೊಲೀಸರು ಮಾಲ್‌ನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್

    ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್

    ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentine’s Day) ಬಂತು ಅಂದ್ರೆ ಸಾಕು, ಟೀನೇಜ್ ಹುಡುಗ-ಹುಡುಗಿಯರಿಗೆ ಹಬ್ಬ. ಆದ್ರೆ ಇದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಅದನ್ನೇ ಪಾಲನೆ ಮಾಡೋದು ಸರಿಯಲ್ಲ ಅಂತಾ ಹಿಂದೂ ಸಂಘಟನೆಗಳು (Hindu Organizations) ಪ್ರತಿ ವರ್ಷದಂತೆ ಈ ವರ್ಷವೂ ಸಮರ ಸಾರಿವೆ. ಅದಕ್ಕೆ ಪೊಲೀಸರು (Police) ಕೂಡ ತಯಾರಿ ಮಾಡಿಕೊಂಡಿದ್ದಾರೆ.

    ಈಗಾಗಲೇ ಪ್ರೇಮಿಗಳ ದಿನಾಚರಣೆ ಮಾಡಬಾರದು. ಇದನ್ನ ತಂದೆ-ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು ಅಂತಾ ಕರೆ ಕೊಡಲಾಗಿದೆ. ಅದಕ್ಕೂ ಮೀರಿ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದು ಅಂತಾ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿವೆ. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್‌

    ಪ್ರತಿ ವರ್ಷದಂತೆ ಈ ವರ್ಷವೂ ಈ ರೀತಿ ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ (Police Department) ಎಚ್ಚೆತ್ತುಕೊಂಡಿದೆ. ನೈತಿಕ ಪೊಲೀಸ್‌ಗಿರಿ ನಡೆಯೋ ಭಯದಲ್ಲಿ ಇರೋ ಪೊಲೀಸರು ಪಾರ್ಕ್‌ಗಳಲ್ಲಿ, ಮಾಲ್‌ಗಳಲ್ಲಿ ಎಚ್ಚರಿಕೆ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಪಾರ್ಕ್ಗಳಲ್ಲಿ ಪ್ರೇಮಿಗಳೇ ಎಚ್ಚರಿಕೆ ವಹಿಸಬೇಕಿದೆ. ಮಾಲ್‌ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮಾಲ್‌ನ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಒದ್ದಾಡುತ್ತಿರುವ ನೆರೆಯ ಪಾಕಿಸ್ತಾನ (Pakistan) ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಒದ್ದಾಡುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಸರ್ಕಾರ ಇಂಧನ (Energy) ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ.

    ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಮಾರುಕಟ್ಟೆ ಹಾಗೂ ಮಾಲ್‌ಗಳನ್ನು ಈಗ ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.

    ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕ್ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಕಾಶಮಾನವಾದ ಬಲ್ಬ್ ಉತ್ಪಾದನೆಯನ್ನು ಫೆಬ್ರವರಿ 1 ರಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಜುಲೈ ತಿಂಗಳಿನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎನ್ನಲಾಗಿದೆ. ಈ ಕ್ರಮದಿಂದ 22 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

    ಪಾಕ್ ಸರ್ಕಾರ 1 ವರ್ಷದೊಳಗೆ ಕಡಿಮೆ ವಿದ್ಯುತ್ ಬಳಸುವ ಗೀಸರ್‌ಗಳನ್ನು ಬಳಸಲು ಹಾಗೂ ಹಳೆಯದನ್ನು ಅಥವಾ ಹೆಚ್ಚು ವಿದ್ಯುತ್ ಉಪಯೋಗಿಸುವ ಗೀಸರ್‌ಗಳನ್ನು ಬದಲಿಲು ಜನರಿಗೆ ಕಡ್ಡಾಯವಾದ ಸೂಚನೆ ನೀಡಿದೆ. ಇದರಿಂದ 92 ಶತಕೋಟಿ ರೂ. ಉಳಿತಾಯವಾಗುತ್ತದೆ. ಬೀದಿ ದೀಪಗಳ ಬದಲು ಪರ್ಯಾಯ ದೀಪ ಬಳಕೆಯಿಂದ 4 ಶತಕೋಟಿ ರೂ. ಉಳಿಸಬಹುದು ಎಂದಿದೆ. ಇದನ್ನೂ ಓದಿ: ಹತ್ಯೆ ಕೇಸ್- ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ

    ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲಾಗುತ್ತಿದ್ದು, ಆದಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಮಂಗಳವಾರ ನಡೆದ ಸಂಪುಟ ಸಭೆಯಲ್ಲೂ ಯಾವುದೇ ವಿದ್ಯುತ್ ದೀಪಗಳು ಉರಿಯದೇ ಇದ್ದುದು ವಿಶೇಷವಾಗಿತ್ತು. ಕೇವಲ ಸೂರ್ಯನ ಬೆಳಕಿನಿಂದಲೇ ಸಭೆಯನ್ನು ನಡೆಸಲಾಗಿತ್ತು. ಇದು ಇಡೀ ದೇಶ ಅನುಸರಿಸಲು ಒಂದು ಅತ್ಯುತ್ತಮ ಉದಾಹರಣೆ ಎಂದು ಆಸಿಫ್ ಹೇಳಿದ್ದಾರೆ. ಇದನ್ನೂ ಓದಿ: ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಕಂಪಾಲಾ: ಹೊಸ ವರ್ಷ (New Year) ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವನ್ನಪ್ಪಿದ ಘಟನೆ ಉಗಾಂಡಾದ ಶಾಪಿಂಗ್ ಮಾಲ್‍ನಲ್ಲಿ (Shopping Mall) ನಡೆದಿದೆ.

    ಉಗಾಂಡಾದ (Uganda) ಕಂಪಾಲಾದ ಫ್ರೀಡಂ ಸಿಟಿ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಆಚರಣೆಗಾಗಿ ಈ ಮಾಲ್‍ಗೆ ಜನರು ಸೇರಿದ್ದರು. ಈ ವೇಳೆ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.

    ಇದರಿಂದಾಗಿ ಮಾಲ್‌ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಪರಿಣಾಮವಾಗಿ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಜನರಿಗೆ ಗಾಯಗಳಾಗಿದೆ. ಈ ಬಗ್ಗೆ ಉಗಾಂಡಾ ಪೊಲೀಸ್ ಫೋರ್ಸ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಟ್ವೀಟ್‍ನಲ್ಲಿ ಏನಿದೆ?: ಫ್ರೀಡಂ ಸಿಟಿ ಮಾಲ್ ನಮಸುಬಾದಲ್ಲಿ ಹೊಸ ವರ್ಷದಂದು ಸಂಭವಿಸಿದ ಘಟನೆಯಲ್ಲಿ ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    Live Tv
    [brid partner=56869869 player=32851 video=960834 autoplay=true]

  • ಮಾಲ್‍ನಲ್ಲಿ ನಮಾಜ್- ಭಜರಂಗದಳದಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

    ಮಾಲ್‍ನಲ್ಲಿ ನಮಾಜ್- ಭಜರಂಗದಳದಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

    ಭೋಪಾಲ್: ಮಾಲ್‍ವೊಂದರಲ್ಲಿ ಕೆಲವು ಸಿಬ್ಬಂದಿ ನಮಾಜ್ ಮಾಡುವುದನ್ನು ವಿರೋಧಿಸಿ ಭಜರಂಗದಳದ ಗುಂಪೊಂದು ಹನುಮಾನ್ ಚಾಲೀಸಾವನ್ನು ಪಠಿಸಿ ಪ್ರತಿಭಟನೆ ನಡೆಸಿದ ಘಟನೆ ಭೋಪಾಲ್‍ನಲ್ಲಿ ನಡೆದಿದೆ.

    ಭೋಪಾಲ್‍ನ ಡಿಬಿ ಮಾಲ್‌ನಲ್ಲಿ ಈ ಘಟನೆ ನಡೆಸಿದ್ದು, ಹನುಮಾನ್‌ ಚಾಲೀಸಾ ಪಠಣ ಹಾಗೂ ನಮಾಜ್‌ ಮಾಡುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ವೀಡಿಯೋದಲ್ಲಿ ಭಜರಂಗದಳದ ಕಾರ್ಯಕರ್ತರು ಮೊದಲು ಮುಸ್ಲಿಂ ಸಿಬ್ಬಂದಿ ಪ್ರಾರ್ಥನೆ ಸಲ್ಲಿಸುತ್ತಿರುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಈ ಮಾಲ್‍ನಲ್ಲಿ ನಮಾಜ್‍ನ್ನು ಗುಪ್ತವಾಗಿ ಮಾಡುತ್ತಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಆರೋಪಿಸಿದರು. ಇದನ್ನೂ ಓದಿ: Hijab Row: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ

    ಇದಾದ ಬಳಿಕ ಭಜರಂಗದಳ ಕಾರ್ಯಕರ್ತರು ಎಸ್ಕಲೇಟರ್ ಬಳಿ ನೆಲದ ಮೇಲೆ ಕುಳಿತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾಲ್‌ನ ಆಡಳಿತ ಮಂಡಳಿ ಹಾಗೂ ಭಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮಾಲ್‍ಗೆ ತೆರಳಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿದರು. ಜೊತೆಗೆ ಈ ಘಟನೆ ಸಂಬಂಧಿಸಿ ಯಾವುದೇ ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡದಿರಲು ಮಾಲ್ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

    Live Tv
    [brid partner=56869869 player=32851 video=960834 autoplay=true]

  • ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

    ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

    ವಾಷಿಂಗ್ಟನ್: ಇಂಡಿಯಾನಾದ ಮಾಲ್‍ನ ಫುಡ್ ಕೋರ್ಟ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

    ಗ್ರೀನ್‍ವುಡ್ ಪಾರ್ಕ್ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಬಂದೂಕುಧಾರಿಯನ್ನು ನಾಗರಿಕರು ಹತ್ಯೆ ಮಾಡಿದ್ದಾರೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಗ್ರೀನ್‍ವುಡ್ ಪೊಲೀಸರು ತಿಳಿಸಿದರು.

    ಗುಂಡಿನ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ನೋಡಿದ ಇಬ್ಬರು ನಾಗರಿಕರು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆದರೆ ಈ ಗುಂಡಿನ ದಾಳಿಯ ಹಿಂದಿರುವ ಉದ್ದೇಶ ಇನ್ನೂ ಪತ್ತೆ ಆಗಿಲ್ಲ. ಇದನ್ನೂ ಓದಿ: 6 ತಿಂಗಳಲ್ಲಿ 309 ಸಾಮೂಹಿಕ ಗುಂಡಿನ ದಾಳಿ – ಅಮೆರಿಕದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    ಬಂದೂಕುಧಾರಿಯ ಬಳಿ ಲಾಂಗ್ ರೈಫಲ್ ಮತ್ತು ಮದ್ದುಗುಂಡುಗಳು ಇದ್ದವು. ಘಟನೆ ಸಂಬಂಧಿಸಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಪ್ರತಿವರ್ಷ ಅಮೆರಿಕಾದಲ್ಲಿ 40 ಸಾವಿರ ಮಂದಿ ತುಪಾಕಿಗೆ ಬಲಿ ಆಗ್ತಿದ್ದಾರೆ ಎಂದು ಹೇಳಲಾಗಿದೆ. ಪ್ರಸಕ್ತ 2022ರಲ್ಲಿ 6 ತಿಂಗಳಲ್ಲೇ 309ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚಿಕಾಗೋನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯು ಅಮೆರಿಕ ಜನತೆಯನ್ನೇ ಬೆಚ್ಚಿ ಬೀಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಲಕ್ನೋ: ಕೆಲವು ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಮಾಲ್ ಒಳಗಡೆಯೇ ನಾಮಾಜ್ ಮಾಡಿರುವುದಕ್ಕೆ ಹಿಂದೂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.

    ಮಾಲ್‌ನಲ್ಲಿ ನಮಾಜ್ ಮಾಡಿದ ಹಿನ್ನೆಲೆ ಭಾರತ ಹಿಂದೂ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿ, ಹಿಂದೂಗಳು ಮಾಲ್‌ಗಳನ್ನು ಬಹಿಷ್ಕರಿಸುವಂತೆ ಕೇಳಿಕೊಂಡಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಇದೀಗ ಲುಲು ಮಾಲ್‌ನಲ್ಲಿ ಜನರು ನೆಲದಲ್ಲಿ ಕುಳಿತುಕೊಂಡು ನಮಾಜ್ ಮಾಡಿದ್ದಾರೆ. ಇದು ಸರ್ಕಾರದ ಆದೇಶದ ಉಲ್ಲಂಘನೆ ಎಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿ ತೋರುತ್ತಿದೆ ಎಂದು ಹಿಂದೂ ಮಹಾಸಭೆಯ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವತಿಯ ಅಪಹರಣ, ಬಲವಂತದಿಂದ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ

    ಇಂತಹ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಚತುರ್ವೇದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿನಂತಿಸಿದ್ದಾರೆ. ವೈರಲ್ ವೀಡಿಯೋ ಕುರಿತು ಲುಲು ಮಾಲ್ ವಿರುದ್ಧ ಹಿಂದೂ ಸಂಘಟನೆ ಲಕ್ನೋ ಪೊಲೀಸರಿಗೆ ದೂರು ಸಲ್ಲಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    11 ಅಂತಸ್ತಿನ ಪಾಕಿಂಗ್ ಸ್ಥಳ, 2.2 ಮಿಲಿಯನ್ ಚದರ ಅಡಿಗಳಲ್ಲಿ ಸುಮಾರು 300 ಅಂಗಡಿಗಳನ್ನು ಹೊಂದಿರುವ ಲಕ್ನೋವಿನ ಲುಲು ಮಾಲ್ ಅನ್ನು ಜುಲೈ 10 ರಂದು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಕ್ಕಿಲ್ಲ: ಕೇರಳ ಹೈಕೋರ್ಟ್

    ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಕ್ಕಿಲ್ಲ: ಕೇರಳ ಹೈಕೋರ್ಟ್

    ಕೊಚ್ಚಿ: ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಯಾವುದೇ ಹಕ್ಕು ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

    ಎರ್ನಾಕುಲಂನಲ್ಲಿರುವ ಲಾಲು ಮಾಲ್‍ಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಪರವಾನಿಗೆ ನೀಡಲಾಗಿದೆಯೇ ಎಂದು ಕಲಾಮಸ್ಸೇರಿ ನಗರಸಭೆಗೆ ಹೈಕೋರ್ಟ್ ಪ್ರಶ್ನಿಸಿದೆ. ನಟ ಪೌಲಿ ವಡಕ್ಷಣ್ ಅವರು ಡಿ.2ರಂದು ಮಾಲ್‍ಗೆ ಭೇಟಿ ನೀಡಿದ್ದಾಗ ಪಾರ್ಕಿಂಗ್ ಶುಲ್ಕ ವಿಧಿಸಿದ್ದರು. ಈ ಹಣವನ್ನು ಪಾವತಿಸದಿದ್ದರೆ ಹೊರಹೋಗಲು ಬಿಡುವುದಿಲ್ಲ ಎಂದು ಮಾಲ್‍ನ ಸಿಬ್ಬಂದಿ ಹೇಳಿದ್ದರು. ಈ ವಿಚಾರವನ್ನು ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.

    ಕಟ್ಟಡ ಕಟ್ಟುವಾಗ ಇರುವ ನಿಯಮಗಳಂತೆ ಪಾರ್ಕಿಂಗ್ ಜಾಗವನ್ನು ನಿಗದಿ ಮಾಡಬೇಕು. ಪಾರ್ಕಿಂಗ್ ಸ್ಥಳವಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಆದರೆ ಕಟ್ಟಡ ನಿರ್ಮಾಣ ಮಾಡಿದ ನಂತರ ಪಾರ್ಕಿಂಗ್‍ಗೆ ಮಾಲೀಕರು ಶುಲ್ಕ ವಿಧಿಸಬಹುದೇ ಎಂಬುದು ಈಗಿರುವ ಪ್ರಶ್ನೆ. ಮೇಲ್ನೋಟಕ್ಕೆ ನೋಡಿದರೆ ಮಾಲ್‍ಗಳಿಗೆ ಶುಲ್ಕ ಸಂಗ್ರಹಿಸುವ ಯಾವುದೇ ಅಧಿಕಾರವಿಲ್ಲ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ

    ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ನೀಡಿರುವ ಪರವಾನಗಿಯ ಕುರಿತಾದ ಸಂಪೂರ್ಣ ಮಾಹಿತಿ ಒದಗಿಸುವಂತೆ ನಗರ ಸಭೆಗೆ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜ.28ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

  • ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

    ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

    ಬೆಂಗಳೂರು: ಶಾಪಿಂಗ್ ಮಾಲ್‍ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಗೃಹ ಬಳಕೆ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ಅರಕೆರೆ ಗೇಟ್ ಬಳಿಯ ಸೌಥ್ ಇಂಡಿಯನ್ ಮಾಲ್‍ನ ನೆಲ ಮಹಡಿಯಲ್ಲಿ ಈ ಘಟನೆ ನಡೆದಿದೆ. ಮಾಲ್‍ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮಾಲ್‍ನಲ್ಲಿ ಯಾವ ಸಿಬ್ಬಂದಿ ಇರಲಿಲ್ಲ. ಇದರಿಂದಾಗಿ ಬೆಂಕಿ ಕಾಣಿಸಿಕೊಂಡರೂ ತಕ್ಷಣ ಯಾರಿಗೂ ತಿಳಿದಿರಲಿಲ್ಲ.

    ನಂತರ ನೈಟ್ ಬೀಟ್‍ನಲ್ಲಿದ್ದ ಪೊಲೀಸರಿಗೆ ಮಾಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಚಾರ ತಿಳಿದಿದೆ. ಆದರೆ ವಿಷಯ ತಿಳಿಯುವ ವೇಳೆಗೆ ಮಾಲ್‍ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು, ಗೃಹಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

    ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುತ್ತಿರುವುದರಲ್ಲಿ ನಿರತವಾಗಿದೆ. ಏಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇದನ್ನೂ ಓದಿ: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ – ಮಗನಿಂದಲೇ ತಾಯಿಯ ಮೇಲೆ ರೇಪ್‌