Tag: ಮಾಲ್ಡಾ

  • ಟಿಎಂಸಿ ಕಾರ್ಯಕರ್ತರ 2 ಗುಂಪಿನ ನಡುವೆ ಗಲಾಟೆ, ಗುಂಡಿನ ದಾಳಿ – ಹಲವರಿಗೆ ಗಾಯ

    ಟಿಎಂಸಿ ಕಾರ್ಯಕರ್ತರ 2 ಗುಂಪಿನ ನಡುವೆ ಗಲಾಟೆ, ಗುಂಡಿನ ದಾಳಿ – ಹಲವರಿಗೆ ಗಾಯ

    ಕೋಲ್ಕತ್ತಾ: ಭಾನುವಾರ ಪಶ್ಚಿಮ ಬಂಗಾಳದ (West Bengal) ಮಾಲ್ಡಾದಲ್ಲಿ (Malda) ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಕಾರ್ಯಕರ್ತರ 2 ಗುಂಪುಗಳ ನಡುಗೆ ಘರ್ಷಣೆ (Clash) ಏರ್ಪಟ್ಟಿದ್ದು, ಗುಂಡಿನ ದಾಳಿ ಹಾಗೂ ಸ್ಫೋಟಗಳು ನಡೆದು ಹಲವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.

    ಮಾಲ್ಡಾ ಜಿಲ್ಲೆಯ ರಟುವಾದಲ್ಲಿ ಮದರಸಾ ಆಡಳಿತ ಸಮಿತಿಯ ಚುನಾವಣೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಚುನಾವಣೆಗೆ ಟಿಎಂಸಿ ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷಗಳ ನಾಮನಿರ್ದೇಶನ ಮಾಡಿಲ್ಲ ಎನ್ನಲಾಗಿದೆ.

    ಟಿಎಂಸಿ ಕಾಂಗ್ರೆಸ್‌ನ 2 ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ದಾಳಿಗಳು ನಡೆದಿವೆ. ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅದರಲ್ಲಿ ಒಬ್ಬರಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನ್ಯಾವ ಲೆಕ್ಕ: ಲಕ್ಷ್ಮೀ ಹೆಬ್ಬಾಳ್ಕರ್

    ಗಲಾಟೆ ನಡೆಸಿದ ಎರಡೂ ಕಡೆಯವರು ಕಬ್ಬಿಣದ ರಾಡ್ ಹಾಗೂ ಬಿದಿರಿನ ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ವಾಹನಗಳು ಸೇರಿದಂತೆ ಹಲವು ಆಸ್ತಿಗಳು ಧ್ವಂಸವಾಗಿದೆ. ಪ್ರದೇಶದಲ್ಲಿ ಇದೀಗ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಳೆ ದೋಸ್ತಿಗಳ ಹೊಸ ಕುಸ್ತಿ – ಮಾತೃ ಪಕ್ಷವನ್ನು ಟಾರ್ಗೆಟ್ ಮಾಡಿದ ಗುರು, ಶಿಷ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಜೆ ನಿಲ್ಲಿಸಿದ್ದಕ್ಕೆ ಜಗಳ – ಟಿಎಂಸಿ ನಾಯಕನನ್ನೇ ಹೊಡೆದು ಕೊಂದ್ರು

    ಡಿಜೆ ನಿಲ್ಲಿಸಿದ್ದಕ್ಕೆ ಜಗಳ – ಟಿಎಂಸಿ ನಾಯಕನನ್ನೇ ಹೊಡೆದು ಕೊಂದ್ರು

    ಕೋಲ್ಕತ್ತಾ: ಡಿಜೆ (DJ) ನಿಲ್ಲಿಸಿದ್ದಕ್ಕಾಗಿ ಜಗಳ ನಡೆದು, ಟಿಎಂಸಿ ನಾಯಕನನ್ನು (TMC leader) ಹೊಡೆದು ಬರ್ಬರವಾಗಿ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಮಾಲ್ಡಾದಲ್ಲಿ (Malda) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 14 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ತೃಣಮೂಲ ನಾಯಕ ಅಫ್ಜಲ್ ಮೊಮಿನ್ (Afzal Momin) ಕೊಲೆಯಾದ ವ್ಯಕ್ತಿ. ಇವರು ಕೈಲಾಶ್‌ಜಿ ಬ್ಲಾಕ್‌ನ ರಥ ಬರಿ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥರಾಗಿದ್ದರು. ಗ್ರಾಮದಲ್ಲಿ ಕೆಲ ಯುವಕರು ಜೋರಾಗಿ ಡಿಜೆ ಹಾಕಿ, ಡ್ಯಾನ್ಸ್ ಮಾಡುತ್ತಾ ಗಲಾಟೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗೆ ಯುವಕರು ಡಿಜೆ ಬಾರಿಸುತ್ತಿದ್ದರು. ಇದನ್ನು ನಿಲ್ಲಿಸುವಂತೆ ಗ್ರಾಮಸ್ಥರು ಕೇಳಿಕೊಂಡಾಗ ಯುವಕರು ಒಪ್ಪಿದ್ದರು. ಆದರೆ ಯುವಕರು ರಾತ್ರಿ ವೇಳೆಯೂ ಜೋರಾಗಿ ಡಿಜೆ ಹಾಕಿದ್ದಕ್ಕೆ ಗ್ರಾಮಸ್ಥರು ಯುವಕರೊಂದಿಗೆ ಜಗಳ ನಡೆಸಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದ 6 ಭಕ್ತರು ಸಾವು

    ಈ ವೇಳೆ ಡಿಜೆ ನಿಲ್ಲಿಸಿದ್ದಕ್ಕಾಗಿ ಯುವಕರು ಅಫ್ಜಲ್ ಮೋಮಿನ್ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮೋಮಿನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ- ಭಕ್ತರಿಗೆ ಕೊಡಲ್ಲ ಪೂಜ್ಯರ ಚಿತಾಭಸ್ಮ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

    ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

    ಜೈಪುರ: ಉದಯಪುರದಲ್ಲಿ ಟೈಲರ್‌ನನ್ನು ಬರ್ಬರವಾಗಿ ಹತ್ಯೆಗೈದ ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರನ್ನು ವೀಡಿಯೋ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನದ ರಾಜ್‌ಸಮಂದ್ ಪ್ರದೇಶದಲ್ಲಿ ಬಂಧಿಸಲಾಗಿದೆ.

    CRIME

    ನೂಪರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಟೈಲರ್‌ ಒಬ್ಬರನ್ನು ಬರ್ಬರವಾಗಿ ಶಿರಚ್ಛೇದ ಮಾಡಿದ ವೀಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಧ್ಯಾಹ್ನ 2:30ರ ವೇಳೆಗೆ ಈ ಘಟನೆ ನಡೆದಿತ್ತು. ಸಂಜೆ ವೇಳೆಗೆ ಇಬ್ಬರೂ ಆರೋಪಿಗಳನ್ನು ರಾಜಾಸ್ಥಾನದಲ್ಲಿ ಬಂಧಿಸಲಾಗಿದೆ.

    ಆರೋಪಿಗಳ ವಿರುದ್ಧ ಶೀಘ್ರವೇ ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

    ಇಂಟರ್‌ನೆಟ್‌ ಸೇವೆ ಸ್ಥಗಿತ: ಟೈಲರ್‌ ಶಿರಚ್ಛೇದನ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ದಾಖಲಿಸಿವೆ. ಪರಿಸ್ಥಿತಿ ಕೈ ಮೀರುತ್ತಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಉದಯಪುರದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿದೆ.

    ವೀಡಿಯೋದಲ್ಲಿ ಏನಿದೆ? 
    ನಾನು ರಿಯಾಜ್ ಅಹ್ಮದ್.. ಇವನು ನನ್ನಣ್ಣ ಮೊಹಮ್ಮದ್‌. ಉದಯಪುರದಲ್ಲಿರುವ ಮಾಲ್ಡಾಸ್ ಸ್ಟ್ರೀಟ್‍ನಲ್ಲಿರುವ ಹಿಂದೂ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದೇವೆ. ನಾವು ಬದುಕುತ್ತಿದ್ದೇವೆ ಪ್ರವಾದಿ ಸಲುವಾಗಿ. ಪ್ರವಾದಿಗಾಗಿ ಜೀವ ಬಿಡಲು ಸಿದ್ದ. ಏಯ್ ನರೇಂದ್ರ ಮೋದಿ ಬೆಂಕಿ ಹಬ್ಬಿಸಿದ್ದು ನೀನು. ಅದನ್ನುಆರಿಸುತ್ತೇವೆ ನಾವು. ನಾನು ಜೀವಂತವಿದ್ದರೆ ಈ ನನ್ನ ಕತ್ತಿ ನಿನ್ನ ಕುತ್ತಿಗೆ ತಲುಪಿ, ನಿನ್ನನ್ನು ಸಂಹಾರ ಮಾಡುತ್ತೇನೆ.

    Live Tv

  • ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮುಸ್ಲಿಂ ಯುವಕರಿಂದ ಟೈಲರ್‌ ಶಿರಚ್ಛೇದ

    ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮುಸ್ಲಿಂ ಯುವಕರಿಂದ ಟೈಲರ್‌ ಶಿರಚ್ಛೇದ

    ಜೈಪುರ: ನೂಪರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಟೈಲರ್‌ ಒಬ್ಬರನ್ನು ಬರ್ಬರವಾಗಿ ಶಿರಚ್ಛೇದ  ಮಾಡಿದ ಘಟನೆ ರಾಜಸ್ಥಾನದ ಮಾಲ್ಡಾದಲ್ಲಿ ನಡೆದಿದೆ.

    ಮಧ್ಯಾಹ್ನ 2:30ರ ವೇಳೆಗೆ ಈ ಘಟನೆ ನಡೆದಿದ್ದು ಮಾಲ್ಡಾದಲ್ಲಿ ಈಗ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಆರಂಭವಾಗಿದೆ. ವರ್ತಕರು ಅಂಗಡಿಗಳನ್ನು ಮುಚ್ಚಿದ್ದು ಪ್ರತಿಭಟನಾಕಾರರು ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ನಡೆದಿದ್ದು ಏನು?
    ಇಬ್ಬರು ಯುವಕರು ಟೈಲರ್‌ ಕನ್ನಯ್ಯಲಾಲ್‌ ಅಂಗಡಿಗೆ ಬಂದಿದ್ದಾರೆ. ಕನ್ನಯ್ಯ ಲಾಲ್‌ ಅಳತೆ ತೆಗೆಯುವ ಸಂದರ್ಭದಲ್ಲಿ ಇವರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

    ಈ ಇಬ್ಬರು ದಾಳಿ ಮಾಡುತ್ತಿರುವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತ ಪಡಿಸಿ ನಾವು ಈ ಕೆಲಸ ಮಾಡಿದ್ದೇವೆ. ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ ಎಂದು ಚಾಕು ಹಿಡಿದು ವೀಡಿಯೋದಲ್ಲಿ ಬೆದರಿಕೆ ಒಡ್ಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ನಾನು ರಿಯಾಜ್ ಅಹ್ಮದ್.. ಇವನು ನನ್ನಣ್ಣ ಮೊಹಮ್ಮದ್‌. ಉದಯಪುರದಲ್ಲಿರುವ ಮಾಲ್ಡಾಸ್ ಸ್ಟ್ರೀಟ್‍ನಲ್ಲಿರುವ ಹಿಂದೂ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದೇವೆ. ನಾವು ಬದುಕುತ್ತಿದ್ದೇವೆ ಪ್ರವಾದಿ ಸಲುವಾಗಿ. ಪ್ರವಾದಿಗಾಗಿ ಜೀವ ಬಿಡಲು ಸಿದ್ದ. ಏಯ್ ನರೇಂದ್ರ ಮೋದಿ ಬೆಂಕಿ ಹಬ್ಬಿಸಿದ್ದು ನೀನು. ಅದನ್ನುಆರಿಸುತ್ತೇವೆ ನಾವು. ನಾನು ಜೀವಂತವಿದ್ದರೆ ಈ ನನ್ನ ಕತ್ತಿ ನಿನ್ನ ಕುತ್ತಿಗೆ ತಲುಪಿ, ನಿನ್ನನ್ನು ಸಂಹಾರ ಮಾಡುತ್ತೇನೆ.

    ಆರೋಪಿಗಳು ಉದಯ್‌ಪುರ ಮೂಲದವರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಮಹಾನಂದಾ ನದಿಯಲ್ಲಿ ದೋಣಿ ದುರಂತ- 7 ಮಂದಿ ಸಾವು, 28 ಮಂದಿ ರಕ್ಷಣೆ

    ಮಹಾನಂದಾ ನದಿಯಲ್ಲಿ ದೋಣಿ ದುರಂತ- 7 ಮಂದಿ ಸಾವು, 28 ಮಂದಿ ರಕ್ಷಣೆ

    ಕೋಲ್ಕತ್ತಾ (ಮಾಲ್ಡಾ): ಪಶ್ಚಿಮ ಬಂಗಾಳದಿಂದ ಬಿಹಾರಕ್ಕೆ ಪಯಣ ಬೆಳೆಸಿದ್ದ ದೋಣಿ ಕತಿಹಾರ್ ಪ್ರದೇಶದಲ್ಲಿರುವ ಮಹಾನಂದಾ ನದಿಯಲ್ಲಿ ಮುಳುಗಿದ್ದು, 7 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ದೋಣಿಯಲ್ಲಿದ್ದ ಪ್ರಯಾಣಿಕರು ಪಶ್ಚಿಮ ಬಂಗಾಳದ ಮಾಲ್ಡಾನಿಂದ ಬಿಹಾರದ ಕತಿಹಾರ್ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ಪಂಚಮಿ ಪ್ರಯುಕ್ತ ಮುಕುಂದಪುರ ಘಾಟ್ ಬಳಿ ಹರಿಯುವ ಮಹಾನಂದಾ ನದಿಯಲ್ಲಿ ದೋಣಿ ಸ್ಪರ್ಧೆ ಪ್ರತಿ ವರ್ಷ ನಡೆಸಲಾಗುತ್ತದೆ. ಆದ್ದರಿಂದ ಈ ಸ್ಪರ್ಧೆ ಮುಗಿಸಿ ಜನರು ಮನೆಗೆ ದೋಣಿಯಲ್ಲಿ ಹಿಂದಿರುತ್ತಿದ್ದಾಗ ಈ ದುರಂತ ನಡೆದಿದೆ. ಈ ದೋಣಿಯಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಸಂಜೆ ಸುಮಾರು 6.30ಕ್ಕೆ ಈ ಅವಘಡ ನಡೆದಿದೆ. ಇಲ್ಲಿಯವರೆಗೂ 28 ಜನರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ:ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಸಾವನ್ನಪ್ಪಿದ 7 ಮಂದಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೋಣಿ ದುರಂತಕ್ಕೆ ನಿಖರ ಕಾರಣ ಹಾಗೂ ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ ದೋಣಿಯಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣಕ್ಕೆ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

    ಕಳೆದ ತಿಂಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಕೂಡ ಭೀಕರ ದೋಣಿ ದುರಂತ ಸಂಭವಿಸಿತ್ತು. ಆ ದುರಂತದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದರು. ಅಲ್ಲದೆ ಅನೇಕರು ನಾಪತ್ತೆಯಾಗಿದ್ದರು. ಗಂಡಿ ಪೋಚಮ್ಮ ದೇವಾಲಯದ ದರ್ಶನ ಮುಗಿಸಿ ಪಾಪಿಕೊಂಡಲು ಪ್ರವಾಸಿ ತಾಣದತ್ತ ಪ್ರವಾಸಿಗರು ಬರುತ್ತಿದ್ದ ವೇಳೆ ಮಾರ್ಗ ಮಧ್ಯ ದೋಣಿ ಮುಗಿಚಿ ಪ್ರಯಾಣಿಕರನ್ನು ಬಲಿ ಪಡೆದಿತ್ತು.