Tag: ಮಾಲ್

  • ಬೆಂಗಳೂರು | ಜಿಟಿ ಮಾಲ್‌ನ 3ನೇ ಫ್ಲೋರ್‌ನಿಂದ ಬಿದ್ದು ವ್ಯಕ್ತಿ ಸಾವು

    ಬೆಂಗಳೂರು | ಜಿಟಿ ಮಾಲ್‌ನ 3ನೇ ಫ್ಲೋರ್‌ನಿಂದ ಬಿದ್ದು ವ್ಯಕ್ತಿ ಸಾವು

    – 2 ಗಂಟೆಯ ಬಳಿಕ ಮಾಲ್‌ ಓಪನ್‌

    ಬೆಂಗಳೂರು: ನಗರದ ಜಿಟಿ ಮಾಲ್‌ನಲ್ಲಿ (GT Mall) ವ್ಯಕ್ತಿಯೋರ್ವ ಮೂರನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಸಾಗರ್ (34) ಎಂದು ಗುರುತಿಸಲಾಗಿದ್ದು, ಅವಿವಾಹಿತನಾಗಿದ್ದು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ ; GRAP ಹಂತ IIರ ನಿಯಮಗಳು ಜಾರಿ

    ಸದ್ಯ ಮಾಲ್‌ಗೆ ಕೆಪಿ ಅಗ್ರಹಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಲ್‌ನ ಮೂರನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಆದರೆ ಕಾಲುಜಾರಿ ಬಿದ್ದಿದ್ದಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾ? ಜೊತೆಗೆ ಮೃತ ವ್ಯಕ್ತಿ, ಮಾಲ್‌ನ ಸಿಬ್ಬಂದಿನಾ? ಅಥವಾ ಹೊರಗಿನಿಂದ ಬಂದ ಗ್ರಾಹಕನಾ? ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

    ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಹೊರಗಿನಿಂದ ಬಂದು ಬೇಕಂತಲೇ ಮೂರನೇ ಫ್ಲೋರ್‌ನಿಂದ ಬಿದ್ದಿದ್ದಾನೆ. ಮುಖಕ್ಕೆ ಗಾಯ ಆಗಿದೆ. ಆದರೆ ಬಿದ್ದ 10 ನಿಮಿಷ ಬದುಕಿದ್ದ ಅಷ್ಟೇ, ಆಮೇಲೆ ಪ್ರಾಣಬಿಟ್ಟ ಎಂದು ತಿಳಿಸಿದ್ದಾರೆ.

    ಸದ್ಯ ಮೃತದೇಹವನ್ನ ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಲು ತಯಾರಿ ನಡೆಸುತ್ತಿದ್ದು, ಈವರೆಗೂ ಆತನ ಬಳಿ ಮೊಬೈಲ್, ಪರ್ಸ್, ಯಾವುದೇ ದಾಖಲೆಗಳು ಸಿಕ್ಕಿಲ್ಲ. ಘಟನೆ ಹಿನ್ನೆಲೆ ಮಾಲ್‌ನಲ್ಲಿ ಬೆಳಗಿನ ಮೂವಿ ಶೋ ಕೂಡ ರದ್ದು ಮಾಡಲಾಗಿದೆ. ಕೆಪಿ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ

  • ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ

    ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ

    ನವದೆಹಲಿ: ಗುರುಗ್ರಾಮ್‌ನ (Gurugram) ಆಂಬಿಯೆನ್ಸ್ ಮಾಲ್‌ನಲ್ಲಿ ಹುಸಿ ಬಾಂಬ್ ಬೆದರಿಕೆ (Bomb Threat) ಬೆನ್ನಲ್ಲೇ ದಕ್ಷಿಣ ದೆಹಲಿಯ ಮೂರು ಮಾಲ್‌ಗಳು ಮತ್ತು ಒಂದು ಆಸ್ಪತ್ರೆಗೆ ಸೋಮವಾರ ಇ-ಮೇಲ್ (E-mail) ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆ ಬೆನ್ನಲ್ಲೇ ಜನರನ್ನು ಸ್ಥಳಾಂತರಿಸಿ, ಸ್ಥಳ ಪರಿಶೀಲನೆ ನಡೆಸಲಾಯಿತು.

    ಚಾಣಕ್ಯಪುರಿಯ ಚಾಣಕ್ಯ ಮಾಲ್, ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್, ವಸಂತ್ ಕುಂಜ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮತ್ತು ಚಾಣಕ್ಯಪುರಿಯಲ್ಲಿರುವ ಪ್ರೈಮಸ್ ಆಸ್ಪತ್ರೆ ಸೇರಿ ಇತರ ಕೆಲವು ಸ್ಥಳಗಳಲ್ಲಿ ಬಾಂಬ್ ಬೆದರಿಕೆಯ ಕುರಿತು ಮಾಹಿತಿ ಪಡೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಇ-ಮೇಲ್‌ನಲ್ಲಿ ಬರೆಯಲಾದ ಬೆದರಿಕೆಯು ಕೆಲವೇ ಗಂಟೆಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಉಲ್ಲೇಖಿಸಿತ್ತು. ಈ ಹಿನ್ನೆಲೆ ಭದ್ರತಾ ಸಿಬ್ಬಂದಿ ಅಲ್ಲಿರುವ ಜನರನ್ನು ಸ್ಥಳಾಂತರಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಇದನ್ನು ಹುಸಿ ಬಾಂಬ್ ಬೆದರಿಕೆ ಎಂದು ನಿರ್ಧರಿಸಲಾಯಿತು. ಇದನ್ನೂ ಓದಿ: ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ

    ಆ.17 ರಂದು ಗುರುಗ್ರಾಮ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮ್ಯಾನೇಜ್‌ಮೆಂಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಇಮೇಲ್ ಕಳುಹಿಸಿದವರು ಕಟ್ಟಡದಲ್ಲಿರುವ ಪ್ರತಿಯೊಬ್ಬರನ್ನು ಕೊಲ್ಲಲು ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳಿದ್ದರು. ಮಾಲ್‌ನಲ್ಲಿ ಶೋಧ ನಡೆಸಿದ ಬಳಿಕ ಯಾವುದೇ ಸ್ಫೋಟಕ, ಬಾಂಬ್ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ

    ಅದೇ ದಿನ ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದ ಅಧಿಕಾರಿಗಳು ಕಟ್ಟಡದಿಂದ ಜನರನ್ನು ಸ್ಥಳಾಂತರಿಸಿದರು. ಇದು ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಬಳಿಕ ಮಾಲ್‌ನ ಭದ್ರತೆಯನ್ನು ಪರಿಶೀಲಿಸಲು ಅಣಕು ಡ್ರಿಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆ.2ರಂದು ಗ್ರೇಟರ್ ಕೈಲಾಶ್‌ನ ಶಾಲೆಗೆ ಇ-ಮೇಲ್ ಬಾಂಬ್ ಬೆದರಿಕೆ ಬಂದಿತ್ತು. ಅದರಲ್ಲಿ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಬೆದರಿಸಲಾಗಿತ್ತು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಹುಮತ ಬಂದ್ರೆ ಬಿಜೆಪಿ ತಂದಿದ್ದ ಭೂ ಕಂದಾಯ ಕಾಯ್ದೆ ರದ್ದು ಮಾಡ್ತೀನಿ: ಸಿದ್ದರಾಮಯ್ಯ

  • ರಾಜ್ಯದ ಎಲ್ಲಾ ಮಾಲ್‌ಗಳಿಗೂ ಮಾರ್ಗಸೂಚಿ: ಡಿಕೆಶಿ ಘೋಷಣೆ

    ರಾಜ್ಯದ ಎಲ್ಲಾ ಮಾಲ್‌ಗಳಿಗೂ ಮಾರ್ಗಸೂಚಿ: ಡಿಕೆಶಿ ಘೋಷಣೆ

    ನವದೆಹಲಿ: ಪಂಚೆ ಹಾಕಿ ಬಂದ ರೈತನಿಗೆ ಜಿ.ಟಿ.ಮಾಲ್ (GT Mall) ಸಿಬ್ಬಂದಿ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ‌ ಮಾಲ್ ಗಳಿಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.

    ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ಹೇಳಿಕೆ ನೀಡಿದ ಅವರು, ಮಾಲ್‌ಗಳಿಗೆ ನಾವು ಮಾರ್ಗಸೂಚಿ ತರುತ್ತೇವೆ. ಪಂಚೆ (Panche) ನಮ್ಮ ಸಂಸ್ಕೃತಿ. ಇಂತಹ ಘಟನೆಗಳು‌ ಮತ್ತೆ ಆಗಬಾರದು ಎಂದು ಹೇಳಿದರು.

     

    ಜಿ.ಟಿ‌.ಮಾಲ್ ತೆರಿಗೆ ಬಾಕಿ ಇತ್ತು. ಸ್ವಲ್ಪ ಕಟ್ಟಿದ್ದಾರೆ ಇನ್ನೂ ಬಾಕಿ ಇದೆ. ಚೆಕ್ ಕೊಟ್ಟಿದ್ದಾರೆ, ಇನ್ನೂ ತೆರಿಗೆ (Tax) ಬಾಕಿ ಇದೆ‌. ಸದ್ಯ ಜಿ.ಟಿ.ಮಾಲ್ ಮುಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ

    ಈ ವೇಳೆ ಕೆಲ ಕ್ಲಬ್‌ಗಳಿಗೂ ಡ್ರೆಸ್ ಕೋಡ್ ಬಗ್ಗೆಯೂ ಕೂಡ ವಿಷಯ ಪ್ರಸ್ತಾಪಿಸಿದ ಕೆಲ ಶಾಸಕರು, ಕ್ಲಬ್ ಗಳಲ್ಲಿ ಕೂಡ ಪಂಚೆ ಚಪ್ಪಲಿ ಹಾಕಿಕೊಂಡು ಹೋದರೆ ಬಿಡಲ್ಲ ಎಂದು ಅಳಲು ವ್ಯಕ್ತಪಡಿಸಿದರು.

    ಮಾಲ್ ಗಳಿಗೂ ಕ್ಲಬ್‌ಗಳಿಗೂ ಹೋಲಿಕೆ ಬೇಡ ಎಂದು ಹೆಚ್.ಕೆ.ಪಾಟೀಲ್ (HK Patel) ಸಲಹೆ ನೀಡಿದರು. ಈ ವೇಳೆ ಆರ್ ಅಶೋಕ್ (R Ashok) ಮಧ್ಯಪ್ರವೇಶ ಮಾಡಿ, ಕೇವಲ ಮಾರ್ಗಸೂಚಿ ಮಾಡಿದ್ರೆ ಸಾಲದು. ಲೈಸೆನ್ಸ್ ಕೊಡುವಾಗ ಷರತ್ತು ಹಾಕಿ ಕೊಡಿ. ಗ್ರಾಮೀಣ ಪ್ರದೇಶದ ಜನರಿಗೆ ಮುಕ್ತ ಅವಕಾಶ ಎಂದು ಷರತ್ತು ವಿಧಿಸಿ. ಆಗ ಅವರಿಗೆ ನೆನಪಿನಲ್ಲಿ ಉಳಿಯುತ್ತೆ ಎಂದು ಸಲಹೆ ನೀಡಿದರು.

  • ಕೋಲ್ಕತ್ತಾ ಮಾಲ್‌ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ

    ಕೋಲ್ಕತ್ತಾ ಮಾಲ್‌ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ

    ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾದ (Kolkatta) ಮಾಲ್‌ನಲ್ಲಿ ಭಾರೀ ಅಗ್ನಿ ಅವಘಡ (Massive Fire) ಸಂಭವಿಸಿದ್ದು ಹಲವು ಮಂದಿ ಒಳಗಡೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

    ಆಕ್ರೊಪೊಲಿಸ್ ಮಾಲ್‌ನಲ್ಲಿ (Acropolis Mall) ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಲ್ ಒಳಗೆ ಇರುವ ಜನರನ್ನು ಸುರಕ್ಷಿತವಾಗಿ ಖಾಲಿ ಮಾಡಿಸುತ್ತಿದ್ದಾರೆ. ಬೆಂಕಿಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    ಈ ವಾರ ಕೋಲ್ಕತ್ತಾದಲ್ಲಿ ಸಂಭವಿಸುತ್ತಿರುವ ಎರಡನೇ ಘಟನೆ ಇದಾಗಿದೆ. ಮಂಗಳವಾರ ಮುಂಜಾನೆ, ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.

  • ಬೆಂಗಳೂರಿನ ಮಾಲ್‍ಗಳಲ್ಲಿ ರಂಗೋಲಿಯಲ್ಲಿ ಅರಳಿದ ರಾಮಮಂದಿರ

    ಬೆಂಗಳೂರಿನ ಮಾಲ್‍ಗಳಲ್ಲಿ ರಂಗೋಲಿಯಲ್ಲಿ ಅರಳಿದ ರಾಮಮಂದಿರ

    ಬೆಂಗಳೂರು: ರಾಮನೂರಿನ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ದೇಶದೆಲ್ಲೆಡೆ ರಾಮನ ಜಪ ಜೋರಾಗಿದೆ. ಹಾಗೆಯೇ ರಾಜಧಾನಿಯ ಮಾಲ್ ಗಳಲ್ಲಿ (Mall) ರಾಮನ ಸ್ಮರಣೆ ಆರಂಭವಾಗಿದೆ.

    ಹೌದು. ಇದೇ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಹಿಂದುಗಳು ತಮ್ಮದೇ ಆದ ರೀತಿಯಲ್ಲಿ ರಾಮನ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಅದೇ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನ ಜಿಟಿ ಮಾಲ್‍ನಲ್ಲಿ ಅಯೋಧ್ಯೆಯ ರಾಮಮಂದಿರವನ್ನು, ಹಿಂದೆ ರಾಮನೇ ಆಗಸದಲ್ಲಿ ಪ್ರತ್ಯಕ್ಷವಾದ ದೃಶ್ಯವನ್ನು ರಂಗೋಲಿಯಿಂದ (Rangoli) ಸೆರೆಹಿಡಿಯಲಾಗಿದೆ. ಇದು ನೋಡುಗರನ್ನ ಸೆಳೆಯುತ್ತಿದೆ.

    ಈ ರಂಗೋಲಿ 25 ಅಡಿ ಉದ್ದ, 25 ಅಡಿ ಅಗಲದಲ್ಲಿ ರಚನೆಯಾಗಿದೆ. ಚಿತ್ರದ ವಿಶೇಷ ಏನೆಂದರೆ ರಾಮಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ- ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ ಎಂದು ವಿದ್ಯಾರ್ಥಿ ಅಕ್ಷಯ್ ಜಾಲಿಹಾಳ್ ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಗೆಲ್ಲಲು ಕಾಂಗ್ರೆಸ್‍ಗೆ ಮಹಿಳಾ ಅಭ್ಯರ್ಥಿಗಳೇ ಆಸರೆ- 3 ಕ್ಷೇತ್ರದಲ್ಲಿ ಆಯ್ಕೆ ಫೈನಲ್

    ಈ ರಂಗೋಲಿ ಹೈಪರ್ ರಿಯಲಿಸ್ಟಿಕ್ ರಂಗೋಲಿಯಾಗಿದ್ದು, ಹೈ ಎಂಡ್ ತ್ರಿಡಿ ಎಫೆಕ್ಟ್ ನಲ್ಲಿದೆ. ಈ ರಂಗೋಲಿಗೆ 45-50 ಬಣ್ಣಗಳ ಶೇಡ್ ಬಳಸಲಾಗಿದೆ. ಸಾಂಪ್ರದಾಯಿಕ ಕಲೆಯಾದ ರಂಗೋಲಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಬರೆಯಲಾಗಿದೆ. ಹಿಂದುಗಳಿಗೆ ಹೆಮ್ಮೆಯಾದ ರಾಮಮಂದಿರವನ್ನು ಅಯೋಧ್ಯೆಗೆ ಹೋಗಿ ನೋಡಿ ಬರಲು ಆಗಲ್ಲ. ಈ ಮೂಲಕವಾದ್ರೂ ರಾಮನನ್ನು ಕಣ್ತುಂಬಿಕೊಳ್ಳುತ್ತೇವೆ ಎಂದು ಸಿಲಿಕಾನ್ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ರಾಮನ ಜಪ ಬೆಂಗಳೂರಿನೆಲ್ಲೆಡೆ ಮೊಳಗುತ್ತಿದೆ.

  • ಮಾಲ್‍ಗಳ ವಿರುದ್ಧ BBMP ಸಮರ – ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ

    ಮಾಲ್‍ಗಳ ವಿರುದ್ಧ BBMP ಸಮರ – ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ

    ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಅಂತಾ ಮಂತ್ರಿಮಾಲ್‍ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀಗ ಹಾಕಿತ್ತು. ಬರೋಬ್ಬರಿ 50 ಕೋಟಿ ಬಾಕಿ ಇದೆ ಅಂತಾ ಚಟುವಟಿಕೆಗೆ ಬ್ರೇಕ್ ಹಾಕಿತ್ತು. ಈಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಬೇರೆ ಮಾಲ್‍ಗಳ ವಿರುದ್ಧವೂ ಸಮರ ಸಾರಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

    ಖುದ್ದಾಗಿ ಮಾಲ್ ಗಳಿಗೆ ಭೇಟಿ ನೀಡಿ ಆಸ್ತಿ ತೆರಿಗೆ ವಸೂಲಿಗೆ ನೋಟಿಸ್ ನೀಡಲಿದೆಯಂತೆ. ಒಂದು ವೇಳೆ ನೋಟಿಸ್‍ಗೆ ಉತ್ತರ ಕೊಡದಿದ್ದರೆ ಚರಾಸ್ತಿ ವಶಪಡಿಸಿಕೊಳ್ಳುತ್ತೇವೆ. ಇಲ್ಲದೇ ಇದ್ದರೆ ಬೀಗ ಹಾಕುವುದಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಾಲ್ ಅಷ್ಟೇ ಅಲ್ಲ ಯಾರ್ಯಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆಯೋ ಅವರ ತೆರಿಗೆಯನ್ನೂ ವಸೂಲಿ ಮಾಡುತ್ತೇವೆ ಅಂತಿದ್ದಾರೆ. ನೂರಾರೂ ಕೋಟಿ ಮಾಲ್ ಗಳಿಂದ ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ. ಕೆಲ ಮಾಲ್ ಗಳು ಬಿಬಿಎಂಪಿ ಬೀಗ ಹಾಕುತ್ತೆ ಅಂತಾ ಕೋರ್ಟಿಗೆ ಹೋಗಿ ಸ್ಟೇ ತರುತ್ತಾ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ವರ್ಷ ಎರಡೂವರೆ ಸಾವಿರ ಕೋಟಿ ಆಸ್ತಿತೆರಿಗೆ ವಸೂಲಿ ಮಾಡುವ ಗುರಿಯನ್ನ ಬಿಬಿಎಂಪಿ ಹೊಂದಿದೆ. ಅದರ ಭಾಗವಾಗಿ ಬರೋಬ್ಬರಿ 50 ಸಾವಿರ ನೋಟಿಸ್ ಗಳನ್ನ ನೇರವಾಗಿ ಮನೆಗಳಿಗೆ ತೆರಳಿ ಬಿಬಿಎಂಪಿ ನೀಡುತ್ತಿದೆ. ಇದರ ಜೊತೆಗೆ ಎಸ್ ಎಂಎಸ್ ಮೂಲಕ ಬರೋಬ್ಬರಿ 6 ಲಕ್ಷ ಜನರಿಗೆ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆಯಂತೆ. ಯಾರನ್ನು ಬಿಡಲ್ಲ ವಸೂಲಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ- ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮ

  • ಮಾಲ್‍ನಲ್ಲಿ ಮಿಡ್‍ನೈಟ್ ಡ್ರಾಮಾ- ಕಾಲು ಹಿಡಿದ್ರೂ ಬಿಡದೇ ಯುವಕನಿಗೆ ಒದ್ದು ರೌದ್ರರೂಪ ತಾಳಿದ ಮಹಿಳೆ!

    ಮಾಲ್‍ನಲ್ಲಿ ಮಿಡ್‍ನೈಟ್ ಡ್ರಾಮಾ- ಕಾಲು ಹಿಡಿದ್ರೂ ಬಿಡದೇ ಯುವಕನಿಗೆ ಒದ್ದು ರೌದ್ರರೂಪ ತಾಳಿದ ಮಹಿಳೆ!

    ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‍ನಲ್ಲಿ ಮಹಿಳೆ ರೌದ್ರಾವತಾರ ತಾಳಿದ ಪ್ರಸಂಗವೊಂದು ನಡೆದಿದೆ. ಮಹಿಳೆಯ ಆರ್ಭಟ ನೋಡಿ ಶಾಪಿಂಗ್ ಮಾಲ್ (Shopping Mall) ಸಿಬ್ಬಂದಿಯೇ ಗಲಿಬಿಲಿಗೊಂಡಿದ್ದಾರೆ. ಮಹಿಳೆ ಪಂಚ್ ನೋಡಿ ಮಾಲ್ ಸಿಬ್ಬಂದಿ ದಿಕ್ಕು ತೋಚದೆ ನಿಂತಲ್ಲೇ ನಿಂತಿಬಿಟ್ಟಿದ್ರು. ಕಾಲಿಗೆ ಬಿದ್ದರೂ ಬಿಡದ ಮಹಿಳೆ ಯುವಕನನ್ನು ಕಾಲಲ್ಲೇ ಒದ್ದು ಕಾಳಿ ರೂಪ ತಾಳಿದಳು.

    ರಾತ್ರಿ 10:30ರ ಸುಮಾರಿಗೆ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಬಂದಿದ್ದ ಮಹಿಳೆ ತಮ್ಮ ವ್ಯಾಲೆಟ್ (Wallet) ಅನ್ನ ಸೀಟಿನಲ್ಲಿ ಮರೆತು ಹೋಗಿದ್ದರು. ಸ್ವಚ್ಛತಾ ಕಾರ್ಯದ ವೇಳೆ ಗಮನಿಸಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ವ್ಯಾಲೆಟ್ ಅನ್ನ ಸೆಕ್ಯೂರಿಟಿಗೆ ಒಪ್ಪಿಸಿದ್ರು. ರಾತ್ರಿ 3 ಗಂಟೆಯ ಸುಮಾರಿಗೆ ಮಾಲ್ ಬಳಿ ಬಂದಿದ್ದ ಅದೇ ಮಹಿಳೆ ವ್ಯಾಲೆಟ್ ಕುರಿತು ವಿಚಾರಿಸಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ನಿಯಮಾನುಸಾರ ನಿಮ್ಮ ಐಡೆಂಟಿಟಿ ಮಾಹಿತಿ ನೀಡಿ ಎಂದು ಕೇಳಿದ್ದಾರೆ ಅಷ್ಟೇ. ಇಷ್ಟಕ್ಕೆ ಕೋಪಗೊಂಡ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ವ್ಯಾಲೆಟ್ ಕಿತ್ತುಕೊಂಡು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ.

    ಮಹಿಳೆಯ ರಾದ್ಧಾಂತ ಹೆಚ್ಚಾಗುತ್ತಿದ್ದಂತೆ ಮಾಲ್ ಸಿಬ್ಬಂದಿ ಅಶೋಕ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೆÇಲೀಸರು ಘಟನ ಸ್ಥಳಕ್ಕೆ ಬಂದು ಠಾಣೆಗೆ ಕರೆದುಕೊಂಡು ಹೋಗಿ ಪೆÇಲೀಸರು ಘಟನೆ ಬಗ್ಗೆ ವಿಚಾರಿಸಿದಾಗ ತನ್ನ ವ್ಯಾಲೆಟ್‍ನಲ್ಲಿ ಎಂಟು ಸಾವಿರ ಕಳ್ಳತನವಾಗಿದೆ ಎಂದು ದೂರಿದ್ದಾರೆ. ಆದರೆ ವ್ಯಾಲೆಟ್ ದೊರೆತ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾದ ಸಮ್ಮುಖದಲ್ಲಿ ಅದರಲ್ಲಿದ್ದ 21,020 ರೂ. ಹಣ ಮತ್ತಿತರ ವಸ್ತುಗಳನ್ನ ಪರಿಶೀಲಿಸಲಾಗಿದ್ದು, ಯಾವುದೇ ಕಳ್ಳತನವಾಗಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಮದುವೆ ಪ್ರಪೋಸಲ್‌ಗೆ ನಮ್ರತಾ ಗ್ರೀನ್‌ ಸಿಗ್ನಲ್‌- ನಾಚಿ ನೀರಾದ ಸ್ನೇಹಿತ್

    ಘಟನೆಯ ಕುರಿತು ಅಶೋಕ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿಕೊಳ್ಳಲಾಗಿದ್ದು, ಮಹಿಳೆ ಹಾಗೂ ಪಿವಿಆರ್ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಾಲ್ ಸಿಬ್ಬಂದಿ ಹಾಗೂ ಮಹಿಳೆಗೆ ನೋಟಿಸ್ ಕೊಟ್ಟಿದ್ದು ತನಿಖೆ ಮಾಡಲಾಗುತ್ತಿದೆ. ಸಂಪೂರ್ಣ ವಿಚಾರಣೆ ಬಳಿಕ ಘಟನೆಯ ಬಗ್ಗೆ ಸತ್ಯಾ ಸತ್ಯಾಸತ್ಯತೆ ಹೊರಬರಲಿದೆ.

  • ಮಹಿಳಾ ಪ್ರಯಾಣಿಕರ ಸುರಕ್ಷತೆಗೆ BMTC ಒತ್ತು- ಪ್ಯಾನಿಕ್ ಬಟನ್ ಅಳವಡಿಕೆ

    ಮಹಿಳಾ ಪ್ರಯಾಣಿಕರ ಸುರಕ್ಷತೆಗೆ BMTC ಒತ್ತು- ಪ್ಯಾನಿಕ್ ಬಟನ್ ಅಳವಡಿಕೆ

    ಬೆಂಗಳೂರು: ಮಾಲ್, ಮೆಟ್ರೋ (Metro) ಸೇರಿದಂತೆ ಹಲವೆಡೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದೆ. ಇದರಿಂದಾಗಿ ಬೆಂಗಳೂರಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ (BMTC) ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡಲು ಹೊರಟಿದೆ.

    ಇತ್ತಿಚಿನ ದಿನಗಳಲ್ಲಿ ಬೆಂಗಳೂರಲ್ಲಿ (Bengaluru) ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡುತ್ತಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡುವುದಾಗಿ ಬಿಎಂಟಿಸಿ ಎಂಡಿ ಸತ್ಯವತಿ ಹೆಜ್ಜೆ ಇಟ್ಟಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಪ್ರಯಾಣಿಸುವಾಗ ಏನಾದರೂ ತೊಂದರೆಯಾದರೆ, ಬಸ್ ಸೀಟ್ ಪಕ್ಕದಲ್ಲೇ ಇರೋ ಪ್ಯಾನಿಕ್ ಬಟನ್ ಕ್ಲಿಕ್ ಮಾಡಬಹುದು. ಈ ಬಟನ್ ಕ್ಲಿಕ್ ಮಾಡಿದ ತಕ್ಷಣ ಈ ಅಲರ್ಟ್ ಬಿಎಂಟಿಸಿ ಕಂಟ್ರೋಲ್ ರೂಮ್‍ಗೆ ಬರುತ್ತದೆ. ಜೊತೆಗೆ ಸಾರಥಿಗೆ ಲೋಕೇಶನ್ ಹೋಗುತ್ತದೆ. ಆ ಲೋಕೇಷನ್‍ನಲ್ಲೇ ಬಿಎಂಟಿಸಿ ಟೀಮ್ ಬರುತ್ತದೆ.

    ಬಿಎಂಟಿಸಿಗೆ ಹೊಸದಾಗಿ ಬಂದ ಬಿಎಸ್ -3, ಬಿಎಸ್ 4 ಬಸ್‍ಗಳಲ್ಲಿ ಎರಡು ಕಡೆ ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗಿದೆ. ಇದರಿಂದ ಮಹಿಳೆಯರಿಗೆ ಸುರಕ್ಷತೆ ಸಿಗಲಿದೆ. ಜೊತೆಗೆ ಬಿಎಂಟಿಸಿಯಲ್ಲಿರೋ ಒಟ್ಟು 5500 ಬಸ್‍ಗಳಲ್ಲಿ, 5000 ಬಸ್‍ಗೆ ಸಿಸಿಟಿವಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ಬಿಎಂಟಿಸಿ ಈ ಹೆಜ್ಜೆ ನಿಜಕ್ಕೂ ಪ್ರಶಂಸನೀಯವಾಗಿದೆ. ಹೆಣ್ಣು ಮಕ್ಕಳಿಗೂ ಕೂಡ ಇನ್ನಷ್ಟು ಸುರಕ್ಷತೆ ಸಿಕ್ಕಿದಂತಾಗುತ್ತೆ.

  • ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಬೆಂಗಳೂರು: ಪ್ರತಿಷ್ಠಿತ ಮಾಲ್‌ವೊಂದರಲ್ಲಿ (Mall) ವ್ಯಕ್ತಿಯೋರ್ವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ವತ: ಕೋರ್ಟ್ (Court) ಮುಂದೆ ಸರೆಂಡರ್ (Surrender) ಆಗಿದ್ದಾನೆ.

    ಅಶ್ವಥ್ ನಾರಾಯಣ್ (60) ನ್ಯಾಯಾಲಯದ ಮುಂದೆ ಶರಣಾದ ಆರೋಪಿ. ಈತ ಬೆಂಗಳೂರಿನ (Bengaluru) ಮಾಲ್‌ವೊಂದರಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದು, ಯಶವಂತ್ ಎಂಬವರು ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಯ ಗುರುತನ್ನು ಪತ್ತೆಹಚ್ಚಿದ್ದರು. ಐಪಿಸಿ ಸೆಕ್ಷನ್ 354 ಎ, 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಆರೋಪಿ ಅಶ್ವಥ್ ನಾರಾಯಣ್ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಹಿರಿಯ ವಕೀಲ ಕೆಎನ್ ಶಶಿಧರ್ ವಾದ ಮಂಡಿಸಿದರು. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದ ಇಬ್ಬರ ಮೇಲೆ ಹರಿದ ಬೈಕ್- ಸವಾರ, ಪಾದಾಚಾರಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿಯ ಗುರುತು ಪತ್ತೆ

    ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿಯ ಗುರುತು ಪತ್ತೆ

    ಬೆಂಗಳೂರು: ಪ್ರತಿಷ್ಠಿತ ಮಾಲ್‌ವೊಂದರಲ್ಲಿ (Mall) ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದೃಶ್ಯ ಆಧರಿಸಿ ಪೊಲೀಸರು ಆರೋಪಿಯ ಗುರುತನ್ನು (Identity) ಪತ್ತೆಹಚ್ಚಿದ್ದಾರೆ.

    ಬೆಂಗಳೂರಿನ (Bengaluru) ಬಸವೇಶ್ವರನಗರದ (Basaveshwara Nagar) ನಿವಾಸಿ ಅಶ್ವಥ್ ನಾರಾಯಣ್ (60) ಆರೋಪಿ. ಮೂರು ದಿನಗಳ ಹಿಂದೆ ಬೆಂಗಳೂರಿನ ಮಾಲ್‌ವೊಂದರಲ್ಲಿ ಈತ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯಶವಂತ್ ಎಂಬವರು ಇದನ್ನು ವಿಡಿಯೋ ಚಿತ್ರೀಕರಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಲ್ ಮ್ಯಾನೇಜರ್ ಆರೋಪಿ ವಿರುದ್ಧ ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: Operation Leopard: ಬೆಂಗಳೂರಿನಲ್ಲಿ ಚಿರತೆ ಕಾರ್ಯಾಚರಣೆ ಯಶಸ್ವಿ – ಕೊನೆಗೂ ಸೆರೆಹಿಡಿದ ಸಿಬ್ಬಂದಿ

    ಸದ್ಯ ವಿಡಿಯೋ ಆಧರಿಸಿ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದಾರೆ. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಿ ಕಳೆದ ಎಂಟು ತಿಂಗಳ ಹಿಂದೆ ನಿವೃತ್ತನಾಗಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಆರೋಪಿ ಪತ್ತೆಗಾಗಿ ಮಾಗಡಿರೋಡ್ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]