Tag: ಮಾಲೀಕ

  • ಗಲಾಟೆ ಪ್ರಶ್ನಿಸಿದ್ದಕ್ಕೆ ಲಾಡ್ಜ್ ಮಾಲೀಕನಿಗೆ ಗೂಸಾ ನೀಡಿದ ಪುಂಡರು

    ಗಲಾಟೆ ಪ್ರಶ್ನಿಸಿದ್ದಕ್ಕೆ ಲಾಡ್ಜ್ ಮಾಲೀಕನಿಗೆ ಗೂಸಾ ನೀಡಿದ ಪುಂಡರು

    ಬೆಂಗಳೂರು: ಲಾಡ್ಜ್ ನಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ ಹುಡುಗರನ್ನ ಪ್ರಶ್ನೆ ಮಾಡಿದ್ದ ಮಾಲೀಕನಿಗೆ, ಕುಡಿದ ಅಮಲಿನಲ್ಲಿದ್ದ ಪುಂಡರ ಗ್ಯಾಂಗ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ದೊಡ್ಡ ಬಾಣಸವಾಡಿಯಲ್ಲಿ ನಡೆದಿದೆ.

    ಸಂತೋಷ್, ಹರೀಶ್, ಪ್ರಕಾಶ್, ರಂಜಿತ್ ಕುಮಾರ್ ಮತ್ತು ಸಂಜಯ್ ದೊಡ್ಡ ಬಾಣಸವಾಡಿಯಲ್ಲಿರುವ ಒಲಿವ್ ರೆಸಿಡೆನ್ಸಿ ಬಾರ್ ನಲ್ಲಿ ಒಂದು ರೂಂ ಬಾಡಿಗೆ ಪಡೆದಿರುತ್ತಾರೆ. ಡಿಸೆಂಬರ್ 31 ರ ರಾತ್ರಿಪೂರ್ತಿ ಎಣ್ಣೆ ಹೊಡೆದು ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದಾರೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಗಲಾಟೆ ಮಾಡಿಕೊಂಡು ಲಾಡ್ಜ್ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

    ಯುವಕರ ಪುಂಡಾಟ ನೋಡಿದ ಲಾಡ್ಜ್ ಮಾಲೀಕ ರೂಂ ಮೊದಲು ಖಾಲಿ ಮಾಡುವಂತೆ ತಿಳಿಸಿದ್ದಾನೆ. ಮೊದಲೇ ರಾತ್ರಿ ಎಲ್ಲಾ ಮದ್ಯದ ನಶೆಯಲ್ಲಿದ್ದ ಪುಂಡರು ಮಾಲೀಕ ಆರ್ಷದ್ ಮೇಲೆ ಹಲ್ಲೆ ಮಾಡಿದ್ದಾರೆ. ಮಾಲೀಕ ಆರ್ಷದ್ ತಿರುಗಿ ಬೀಳಲು ಮುಂದಾಗುತ್ತಿದ್ದಂತೆ ಕೈಯಲ್ಲಿದ್ದ ಚಾಕುವಿನಿಂದ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ಆರ್ಷದ್ ಗೆ ತೀವ್ರ ವಾಗಿ ಗಾಯವಾಗುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಆರೋಪಿಗಳು ಲಾಡ್ಜ್ ನಲ್ಲಿ ರೂಂ ಪಡೆಯುವ ಮುನ್ನ ಕೊಟ್ಟಿರುವ ಆಧಾರ್ ಪ್ರತಿ ಹಾಗೂ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯದ ಮೇಲೆ ಆರ್ಷದ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಣಸವಾಡಿ ಪೊಲೀಸರು ಘಟನೆ ನಡೆದ 24 ಗಂಟೆಯ ಒಳಗಡೆ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

  • ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ಬೆಂಗಳೂರು: ದಾಳಿ ಮಾಡುವುದಕ್ಕೆ ಹೋದ ಬೆಂಗಳೂರು ಸಿಸಿಬಿ ಪೊಲೀಸರು ಅದೇ ಮನೆಯಲ್ಲೇ ರಾತ್ರಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ.

    ಅಟಿಕಾ ಗೋಲ್ಡ್ ಕಂಪೆನಿ ಮಾಲೀಕ ಬಾಬು ಅವರ ಬಾಣಸವಾಡಿ ಬಳಿಯ ಕಲ್ಯಾಣ ನಗರದ ಮನೆ ಮೇಲೆ ಕಳೆದ 30ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಾಲೀಕ ಬಾಬು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಬಾಬುಗಾಗಿ ಕಾಯುತ್ತಿದ್ದರು. ಅಲ್ಲದೆ ರಾತ್ರಿ ಆದರೂ ಪರವಾಗಿಲ್ಲ ಕಾಯೋಣ ಎಂದು ಕಾದು ಕುಳಿತ್ತಿದ್ದರು. ಆದರೆ ಬಾಬು ಮನೆಗೆ ಬಂದಿಲ್ಲ.

    ತಡರಾತ್ರಿ ಹಿರಿಯ ಅಧಿಕಾರಿಗಳು ಮನೆಗೆ ಹೋದ ನಂತರ ಅಲ್ಲಿಯೇ ಉಳಿದಿದ್ದ ಐವರು ಸಿಸಿಬಿ ಅಧಿಕಾರಿಗಳು ಅದೇ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೊಲೀಸರು ಪಾರ್ಟಿ ಮಾಡುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದಾರೆ. ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋವನ್ನು ಮಾಲೀಕ ಬಾಬು ಬಿಡುಗಡೆ ಮಾಡುವ ಮೂಲಕ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹಿರಿಯ ಅಧಿಕಾರಿ, ಇದು ನಮ್ಮ ಪೊಲೀಸರು ಎನ್ನುವುದರ ಬಗ್ಗೆ ಅನುಮಾನವಿದೆ. ವಿಡಿಯೋ ಪರಿಶೀಲನೆ ನಡೆಸಿದ ನಂತರ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಬೆಂಗಳೂರು: ಸಿಸಿಬಿ ಪೊಲೀಸ್ ಪೇದೆಯೊಬ್ಬರು ಸ್ಪಾ ಮಾಲೀಕರೊಬ್ಬರಿಂದ ಕಂತೆ ಕಂತೆ ಹಣ ಪಡೆದಿರುವ ವಿಡಿಯೋ ಬಹಿರಂಗವಾಗಿದೆ.

    ರಾಜಾಜಿನಗರದ ಸ್ಪಾ ಬಳಿ ಹೋದ ಇಬ್ಬರು ಪೇದೆಗಳು, ಮಾಲೀಕನಿಗೆ “ನೀವೇನು ಭಯಪಡಬೇಡಿ ಹಿರಿಯ ಅಧಿಕಾರಿಗಳನ್ನು ನಾವು ನೋಡಿಕೊಳ್ಳುತ್ತೇವೆ. ಸಿಸಿಬಿ ಹಿರಿಯ ಅಧಿಕಾರಿಗಳು ರೇಡ್ ಮಾಡುವಾಗ ನಮಗೆ ಮೊದಲೇ ಇಂತಹ ದಿನ ನಿಮ್ಮ ಏರಿಯಾದಲ್ಲಿ ರೇಡ್‍ಗೆ ಬರುತ್ತೇವೆ, ಹುಷಾರಾಗಿ ಎಂದು ನಮಗೆ ವಾಟ್ಸಾಪ್ ಕಾಲ್ ಮಾಡಿ ಹೇಳುತ್ತಾರೆ. ನಾವು ಆಗ ಎಲ್ಲಾ ಅಕ್ರಮ ಚಟುವಟಿಕೆಗಳ ನಡೆಯುವ ಜಾಗದ ಮಾಲೀಕರಿಗೆ ಅಲರ್ಟ್ ಮಾಡಿಬಿಡ್ತೀವಿ. ಸೀನಿಯರ್ ಆಫೀಸರ್ ಗಳ ಬಗ್ಗೆ ನೀವೇನು ಭಯಪಡಬೇಡಿ” ಎಂದು ಹೇಳಿದ್ದಾರೆ.

    ಸದ್ಯ ಇಬ್ಬರು ಪೇದೆ ಸ್ಪಾ ಮಾಲೀಕರ ಬಳಿ ಹಣ ಪಡೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಡಿಸಿಪಿ ಕುಲ್ ದಿಲ್ ಕುಮಾರ್ ಜೈನ್ ಮಾತನಾಡಿ, ವಿಡಿಯೋ ವಿಚಾರ ನಮ್ಮ ಗಮನಕ್ಕೆ ಬಂದಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು,

  • ಕೊನೆಗೂ ಮಾಲೀಕನ ಮನೆ ಸೇರಿದ 8 ಕೋಟಿ ಮೌಲ್ಯದ ಶ್ವಾನ

    ಕೊನೆಗೂ ಮಾಲೀಕನ ಮನೆ ಸೇರಿದ 8 ಕೋಟಿ ಮೌಲ್ಯದ ಶ್ವಾನ

    ಬೆಂಗಳೂರು: ಡಿಸೆಂಬರ್ 12 ರಂದು ಕಳವು ಆಗಿದ್ದ 8 ಕೋಟಿ ಮೌಲ್ಯದ ಶ್ವಾನ ಕೊನೆಗೂ ಮಾಲೀಕ ಮನೆ ಸೇರಿದೆ.

    ಚೀನಾ ದೇಶದ ಅಲಕ್ಕನ್ ಮಾಲಾಮೂಟ್ ತಳಿಯ ಶ್ವಾನ ಡಿಸೆಂಬರ್ 12 ರಂದು ಶ್ರೀನಗರದ ಮನೆಯಲ್ಲಿ ಕಟ್ಟಿ ಹಾಕಿದ್ದಾಗ ಯಾರೋ ಕದ್ದುಕೊಂಡು ಹೋಗಿದ್ದಾರೆ. ಕಳ್ಳನನ್ನು ಹುಡುಕಿ ನಾಯಿಯನ್ನು ವಾಪಸ್ ತಂದು ಕೊಟ್ಟರೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿ ಮಾಲೀಕ ಸತೀಶ್ ಹೇಳಿದ್ದರು. ಇದರ ಜೊತೆಗೆ ಹನುಮಂತ ನಗರ  ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

    ಈಗ ಈ ದುಬಾರಿ ಶ್ವಾನ ಮರಳಿ ಮಾಲೀಕರಿಗೆ ಸಿಕ್ಕಿದ್ದು, ನಾಯಿ ಕದ್ದವರೇ ಭಾನುವಾರ ಸಂಜೆ ಮನೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಾಲೀಕ ಸತೀಶ್ ಅವರು ಹೇಳಿದ್ದಾರೆ. ಯಾರೋ ಪರಿಚಯಸ್ಥರೇ ನಾಯಿಯನ್ನು ಕದ್ದುಕೊಂಡು ಹೋಗಿ ಅದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ವಾಪಸ್ ತಂದು ಬಿಟ್ಟು ಹೋಗಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪರಿಚಿತನಾಗಿದ್ದ ಆಟೋಚಾಲಕನೇ ಕದ್ದೊಯ್ದು ವಾಪಸ್ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ನಾಯಿ ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಜಾತಿಗೆ ಸೇರಿದ್ದಾಗಿದೆ. ಕೆಂಪು ಮತ್ತು ಬಿಳಿ ಬಣ್ಣವನ್ನು ಶ್ವಾನ ಹೊಂದಿದೆ. ಇದರ ವಯಸ್ಸು 3 ವರ್ಷವಾಗಿದ್ದು, ಹಸ್ಕಿ ನಾಯಿಯನ್ನು ಹೋಲುತ್ತದೆ. 8 ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದು, ಈ ನಾಯಿಯನ್ನ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸತೀಶ್ ಘೋಷಿಸಿದ್ದರು.

  • ‘ಪತ್ನಿಯನ್ನು ಲವ್ ಮಾಡು’ ಎಂದ ಮಾಲೀಕ – ‘ನನ್ನನ್ನು ಕೈ ಬಿಡಬೇಡ’ ಎಂದ ಯಜಮಾನಿ- ಯುವಕ ಆತ್ಮಹತ್ಯೆ

    ‘ಪತ್ನಿಯನ್ನು ಲವ್ ಮಾಡು’ ಎಂದ ಮಾಲೀಕ – ‘ನನ್ನನ್ನು ಕೈ ಬಿಡಬೇಡ’ ಎಂದ ಯಜಮಾನಿ- ಯುವಕ ಆತ್ಮಹತ್ಯೆ

    – ಪತ್ನಿಯನ್ನು ಲವ್ ಮಾಡದೇ ಇದ್ರೆ ಸಂಬಳ ಹಾಕಲ್ಲ ಎಂದಿದ್ದ
    – ಸಂಬಂಧವನ್ನು ಮುಂದುವರಿಸುವಂತೆ ಮಾಲೀಕನ ಪತ್ನಿ ದುಂಬಾಲು
    – ಸಂಬಂಧ ಬೆಳೆಸು ಎಂದು ಹೇಳಿ ನಂತರ ಕಡಿತಗೊಳಿಸುವಂತೆ ಒತ್ತಡ

    ಗಾಂಧಿನಗರ: ಮಾಲೀಕನ ಆಶಯದಂತೆ ಯುವಕ ಆತನ ಪತ್ನಿಯನ್ನು ಪ್ರೀತಿಸಿ, ಸಂಬಂಧ ಬೆಳೆಸಿದ್ದಾನೆ. ನಂತರ ಮಾಲೀಕ ಸಂಬಂಧ ಕೊನೆಗೊಳಿಸುವಂತೆ ಹೇಳಿದ್ದಾನೆ. ಆದರೆ ಮಾಲೀಕನ ಪತ್ನಿ ಸಂಬಂಧ ಮುಂದುವರಿಸುವಂತೆ 19ರ ಯುವಕನಿಗೆ ದುಂಬಾಲು ಬಿದ್ದಿದ್ದಾಳೆ. ಈ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತಿನಲ್ಲಿ ನಡೆದಿದೆ.

    ಈ ಘಟನೆ ಅಹ್ಮದಾಬಾದಿನಲ್ಲಿ ನಡೆದಿದ್ದು, ಆತ್ಮಹತ್ಯೆ ನಡೆದು 5 ತಿಂಗಳ ನಂತರ ಪೊಲೀಸ್ ತನಿಖೆಯಲ್ಲಿ ಸಂತ್ಯಾಂಶ ಬೆಳಕಿಗೆ ಬಂದಿದೆ.

    ಸಂತ್ರಸ್ತನ ಮೊಬೈಲ್‍ನಲ್ಲಿನ ಮೆಸೇಜ್‍ಗಳಿಂದ ಪ್ರಕರಣ ಮರುಜೀವ ಪಡೆದಿದೆ. ಉದ್ಯೋಗದಾತ ಹಾಗೂ ಆತನ ಪತ್ನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಹಾಗೂ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತನನ್ನು ನಿಖಿಲ್ ಪರ್ಮಾರ್ ಎಂದು ಗುರುತಿಸಲಾಗಿದೆ.

    ನನ್ನ ಪತ್ನಿಯನ್ನು ನೀನು ಪ್ರೀತಿಸಬೇಕು ಎಂದು ನಿಖಿಲ್ ಬಳಿ ಮಾಲೀಕ ಕೇಳಿಕೊಂಡಿದ್ದಾನೆ. ಪ್ರಾರಂಭದಲ್ಲಿ ನಿಖಿಲ್ ಒಪ್ಪಿಗೆ ನೀಡಿರಲಿಲ್ಲ. ನಂತರ ನೀನು ನನ್ನ ಹೆಂಡತಿಯನ್ನು ಪ್ರೀತಿಸುವ ಕುರಿತು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಮಾಲೀಕ ಯುವಕನಿಗೆ ಮೇಲಿಂದ ಮೇಲೆ ಮಾನಸಿಕ ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸುವ ವರೆಗೆ ಸಂಬಳವನ್ನು ನೀಡುವುದಿಲ್ಲ ಎಂದು ಆತನ ಸಂಬಳವನ್ನು ತಡೆ ಹಿಡಿದು, ನನ್ನ ಪತ್ನಿಯನ್ನು ಪ್ರೀತಿಸಲೇಬೇಕು ಎಂದು ದುಂಬಾಲು ಬಿದ್ದಿದ್ದ. ಇದರಿಂದ ಬೇಸತ್ತ ನಿಖಿಲ್ ಮಾಲೀಕ ಪತ್ನಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ.

    ಮಾಲೀಕ ವಿವಾಹ ಸಮಾರಂಭದ ವೇಳೆ ಬಳಸುವ ಅಲಂಕಾರ ಸಾಮಗ್ರಿಗಳನ್ನು ರಾಜ್ಯಾದ್ಯಂತ ಸರಬರಾಜು ಮಾಡುವ ಬುಸಿನೆಸ್ ಮಾಡುತ್ತಿದ್ದಾನೆ. ನಿಖಲ್ ಕೆಲಸಕ್ಕೆ ಸೇರಿ 10 ತಿಂಗಳ ನಂತರ ಈ ಕುರಿತು ತನ್ನ ತಂದೆ ಅಶೋಕ್ ಪರ್ಮಾರ್‍ಗೆ ವಿವರಿಸಿದ್ದು, ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಾಲೀಕ ಹಾಗೂ ಆತನ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.

    ಆಗ ಅಶೋಕ್ ಕೆಲಸ ಬಿಡುವಂತೆ ತನ್ನ ಮಗನಿಗೆ ಹೇಳಿದ್ದಾರೆ. ಆದರೆ ಜುಲೈ 14, 2019ರಂದು ನಿಖಿಲ್ ಮಾಲೀಕ ಕರೆ ಮಾಡಿ ಸಂಬಳವನ್ನು ಪಡೆಯುವಂತೆ ತಿಳಿಸಿದ್ದಾರೆ. ಮರುದಿನ ನಿಖಿಲ್ ಸಂಬಳ ತೆಗೆದುಕೊಳ್ಳಲು ತೆರಳಿದ್ದಾನೆ. ಆಗ ನಿಖಿಲ್ ತಂದೆಗೆ ಮಾಲೀಕ ಕರೆ ಮಾಡಿ ಮಗನನ್ನು ರಾಜಸ್ಥಾನ ಪ್ರವಾಸಕ್ಕೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. ಆಶ್ಚರ್ಯವೆಂಬಂತೆ ಮಾಲೀಕ ಜುಲೈ 20ರಂದು ನಿಖಿಲ್ ತಂದೆಗೆ ಕರೆ ಮಾಡಿ ಗೋಡೋನ್ ಪ್ರದೇಶದಲ್ಲಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.

    ಘಟನೆ ನಡೆದು ಮೂರು ತಿಂಗಳ ನಂತರ ಕುಟುಂಬಸ್ಥರು ನಿಖಲ್ ಮೊಬೈಲನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮಾಲೀಕ ಹಾಗೂ ನಿಖಿಲ್ ನಡುವೆ ನಡೆದ ಮೆಸೇಜ್ ಸಂಭಾಷಣೆಗಳನ್ನು ನೋಡಿದ್ದಾರೆ. ನನ್ನನ್ನು ಗುಲಾಮನಂತೆ ಪರಿಗಣಿಸಬೇಡಿ, ನನ್ನ ಮೇಲೆ ಕರುಣೆ ತೋರಿಸಿ ಎಂದು ನಿಖಿಲ್ ಮಾಲೀಕನಿಗೆ ಮೆಸೇಜ್‍ನಲ್ಲಿ ಕೇಳಿಕೊಂಡಿದ್ದಾನೆ. ನಿಮ್ಮ ಇಷ್ಟದಂತೆ ನಾನು ನಿಮ್ಮ ಹೆಂಡತಿಯನ್ನು ಪ್ರೀತಿಸಿದ್ದೇನೆ. ಇದೀಗ ಇದ್ದಕ್ಕಿದ್ದಂತೆ ಪ್ರೀತಿಸುವುದನ್ನು ನಿಲ್ಲಿಸು ಎಂದು ಹೇಳುತ್ತಿದ್ದೀರಿ ಎಂದು ನಿಖಿಲ್ ಮಾಲೀಕನಿಗೆ ಸಂದೇಶ ಕಳುಹಿಸಿದ್ದ.

    45 ವರ್ಷದ ನಿಖಿಲ್ ಮಾಲೀಕ ತನ್ನ 25 ವರ್ಷದ ಪತ್ನಿಯನ್ನು ಪ್ರೀತಿಸಿ, ಅವಳೊಂದಿಗೆ ಸಂಬಂಧ ಬೆಳೆಸುವಂತೆ ತಿಳಿಸಿದ್ದ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಅಲ್ಲದೆ ಮಾಲೀಕನ ಪತ್ನಿ ಸಹ ನಿಖಿಲ್‍ನೊಂದಿಗೆ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ. ಇದನ್ನು ಎಂದಿಗೂ ಕೊನೆಗೊಳಿಸಬೇಡ ಎಂದು ಒತ್ತಾಯಿಸಿದ್ದಾಳೆ. ಹೀಗಾಗಿ ಮಾಲೀಕ ಹಾಗೂ ಆತನ ಪತ್ನಿ ಇಬ್ಬರ ಒತ್ತಡವನ್ನು ತಾಳಲಾರದೆ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ತನಿಖೆ ವೇಳೇ ದೃಢಪಟ್ಟಿದೆ.

  • ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಬೆಂಗಳೂರು: ಟೈಡಾಲ್ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರೆ ಮಾರಾಟ ಮಾಡಿದ್ದ ಮೆಡಿಕಲ್ ಅಂಗಡಿ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

    ರಾಜಾಜಿನಗರದ ಮೋದಿ ಆಸ್ಪತ್ರೆ ಸಿಗ್ನಲ್ ಬಳಿಯ ‘ಮನ್‍ದೀಪ್ ಫಾರ್ಮ್ ಮೆಡಿಕಲ್ ಶಾಪ್’ ಮಾಲೀಕ ಮನೀಶ್ ಕುಮಾರ್ ನನ್ನ ಬಂಧಿಸಲಾಗಿದೆ. 17ರಂದು ಮೃತ ಯುವಕ ಗೋಪಿಗೆ ಅನಧಿಕೃತವಾಗಿ ಮೆಡಿಕಲ್‍ನಿಂದ ಮನೀಶ್ ಕುಮಾರ್ ಟೈಡಾಲ್ ಮಾತ್ರೆ ಮಾರಾಟ ಮಾಡಿದ್ದನು. ಅದೇ ಮಾತ್ರೆಗಳನ್ನು ತಂದು ಗೋಪಿ, ಅಭಿಷೇಕ್, ಸುಹಾಸ್ ಮಾತ್ರೆಯನ್ನು ಪುಡಿ ಮಾಡಿ ಡಿಸ್ಟಿಲ್ ನೀರಿನಲ್ಲಿ ಬೆರಿಸಿ ಸಿರಿಂಜ್ ಮೂಲಕ ದೇಹಕ್ಕೆ ಇಂಜಕ್ಟ್ ಮಾಡಿಕೊಂಡಿದ್ದರು. ಪರಿಣಾಮ ಗೋಪಿ, ಅಭಿಷೇಕ್ ಮೃತಪಟ್ಟಿದ್ದು, ಸುಹಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ:ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

    ನವೆಂಬರ್ 19ರ ರಾತ್ರಿ ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿತ್ತು. ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಗೋಪಿ, ಅಭಿಪೇಕ್ ಜೊತೆಗೆ ಇನ್ನೂ 6 ಮಂದಿ ಯುವಕರು ಹೋಗಿದ್ದರು. ತಡರಾತ್ರಿವರೆಗೂ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಯುವಕರು ನಶೆಗಾಗಿ ಟೈಡಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು.ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ 

    ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಷೇಕ್ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಯುವಕರು ಟೈಡಾಲ್ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬುದು ಬಯಲಾಗಿತ್ತು. ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿತ್ತು. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.

  • ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾಲೀಕರು ನೌಕಕರನ್ನು ಉತ್ತೇಜಿಸುವ ಸಲುವಾಗಿ ಬೋನಸ್, ಬಡ್ತಿ ಅಥವಾ ಗಿಫ್ಟ್ ನೀಡುವುದನ್ನು ನೀವು ಕೇಳಿರಬಹುದು. ಆದರೆ ಚೀನಾದ ಕಂಪನಿಯೊಂದರಲ್ಲಿ ಮಾಲೀಕನೇ ಉದ್ಯೋಗಿಗಳ ಪಾದ ತೊಳೆದ ಪ್ರಸಂಗ ನಡೆದಿದೆ.

    ಈ ಘಟನೆ ನವೆಂಬರ್ 2ರಂದು ಚೀನಾದ ಶಂಡೊಂಗ್ ಪ್ರಾಂತ್ಯದಲ್ಲಿರುವ ಜಿನನ್ ನ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಡೆದಿದೆ.

    ಮಾಲೀಕ ತಮ್ಮ ನೌಕರರ ಶ್ರಮವನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪಾದಗಳನ್ನು ತೊಳೆಯುವ ಮೂಲಕ ಮತ್ತಷ್ಟು ಉತ್ತಮ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಅಲ್ಲದೆ ಈ ಮೂಲಕ ಮಾಲೀಕ ಮತ್ತು ಉದ್ಯೋಗಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

    ಇಬ್ಬರು ಹಿರಿಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಅವರನ್ನು ಕುಳಿತುಕೊಳ್ಳಿಸಿ, ಪಾದ ತೊಳೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ಕಾಸ್ಮೆಟಿಕ್ ಕಂಪನಿಯ ಅಧ್ಯಕ್ಷ ಹಾಗೂ ಹಿರಿಯ ಕಾರ್ಯನಿರ್ವಾಹಕರೊಬ್ಬರು ತಮ್ಮ ಎರಡೂ ಕೈಗಳನ್ನು ಜೋಡಿಸಿ ಕಠಿಣ ಶ್ರಮ ವಹಿಸಿ ಕೆಲಸ ಮಾಡಿದ ಉದ್ಯೋಗಿಗಳ ಮುಂದೆ ತಲೆಬಾಗಿದ್ದಾರೆ. ನಂತರ ಉದ್ಯೋಗಿಗಳನ್ನು ವೇದಿಕೆಗೆ ಕರೆದು, ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಅವರ ಶೂ ಹಾಗೂ ಸಾಕ್ಸ್ ಬಿಚ್ಚಿದ್ದಾರೆ. ಆ ನಂತರ 8 ಮಂದಿ ನೌಕರರು ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ಕಚೇರಿ ಸಿಬ್ಬಂದಿ ಅಥವಾ ನೌಕರರ ಪಾದ ತೊಳೆದಿದ್ದಾರೆ. ಇದನ್ನೂ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಒಟ್ಟಿನಲ್ಲಿ ಮಾಲೀಕರು, ತಮ್ಮ ಶ್ರೇಯಸ್ಸಿಗೆ ಕಾರಣರಾದ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಲ್ಲದೇ ಮುಂದೆಯೂ ಉತ್ತಮ ಕೆಲಸ ನಿರ್ವಹಿಸುವಂತೆ ಆಶಿಸಿದ್ದಾರೆ.

    ಸದ್ಯ ವೈರಲಾಗುತ್ತಿರುವ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದೆ. ಕೆಲವರು ಕಂಪನಿ ಮಾಲೀಕನ ಕೆಲಸವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೆಗಳಿದ್ದಾರೆ. ಮತ್ತೆ ಕೆಲವರು ಉತ್ತಮ ಕೆಲಸ ಮಾಡಿದರೆ ನೌಕಕರಿಗೆ ಬೋನಸ್ ನೀಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ.

    ಇದು ಸರ್ವೇ ಸಾಮಾನ್ಯ. ನಮ್ಮಿಂದಾಗಿ ನೀವು ಸಾಕಷ್ಟು ಹಣ ಮಾಡಿದ್ದೀರಿ. ಹೀಗಾಗಿ ನೀವು ನಿಮ್ಮ ಪಾದ ತೊಳೆದರೆ ಏನೂ ಪ್ರಯೋಜವಾಗಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಪಾದ ತೊಳೆಯುವ ಮೂಲಕ ಉದ್ಯೋಗಿಗಳು ಮತ್ತೆ ಬೋನಸ್ ಕೇಳದಂತೆ ಮಾಡುವ ಮಾಲೀಕನ ಕುತಂತ್ರ ಇದಾಗಿದೆ ಎಂದಿದ್ದಾರೆ. ಮಗದೊಬ್ಬರು, ಇದೂ ಒಂದು ಅವರ ಸಾಧನೆಯಾಗಿದೆ. ಮುಂದೆ ಅವರ ರೆಸ್ಯೂಮ್ ನಲ್ಲಿ ಬಳಸಿಕೊಳ್ಳಬಹುದೆಂದು ವ್ಯಂಗ್ಯವಾಡಿದ್ದಾರೆ.

  • ವಿಷಹಾಕಿ ನಾಯಿ ಕೊಂದು, ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ್ರು

    ವಿಷಹಾಕಿ ನಾಯಿ ಕೊಂದು, ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ್ರು

    ವಿಜಯಪುರ: ಮೊದಲು ನಾಯಿಗೆ ವಿಷಹಾಕಿ ಕೊಂದ ಬಳಿಕ ದುಷ್ಕರ್ಮಿಗಳು ಮಾಲೀಕನ ಕೊಲೆಗೆ ಸ್ಕೆಚ್ ಹಾಕಿ, ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

    ತಡರಾತ್ರಿ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸೆಗಿದ್ದಾರೆ. ಆಲಮೇಲ ನಿವಾಸಿ ಬಸವರಾಜ್ ಗುರುಲಿಂಗಪ್ಪ ನನದಿ ಮೃತ ದುರ್ದೈವಿ. ಬಸವರಾಜ್ ಅವರನ್ನು ದುಷ್ಕಮಿಗಳು ತಡರಾತ್ರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಸವರಾಜ್ ಪತ್ನಿಯನ್ನು ಹತ್ಯೆಗೈಯ್ಯಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ವೇಳೆ ಪತ್ನಿ ತೋಟದಲ್ಲಿ ಓಡಿಹೋಗಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ಬಸವರಾಜ್ ಅವರ ಮನೆಯಲ್ಲಿ ಸಾಕಿದ್ದ ನಾಯಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದರು. ಇದೇ ಬೆನ್ನಲ್ಲೇ ಈಗ ನಾಯಿ ಮಾಲೀಕನ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸದ್ಯ ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಶ್ವಾನದಳದಿಂದ ದುಷ್ಕರ್ಮಿಗಳ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.

  • ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ಬೆಂಗಳೂರು: ಬಯಲು ಶೌಚಾಲಯದಿಂದ ಮುಕ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಅದಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ. ಗ್ರಾಮ ಪ್ರದೇಶಗಳನ್ನು ಬಿಡಿ ನಗರಗಳಲ್ಲೂ ಇನ್ನೂ ಬಯಲು ಶೌಚಾಲಯವನ್ನೇ ಜನ ಅವಲಂಬಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಕುಟುಂಬಗಳಿಂದ ಬಯಲು ಶೌಚಾಲಯಕ್ಕೆ ಎಂದು 200 ರೂ. ತಿಂಗಳಿಗೆ ಬಾಡಿಗೆ ನೀಡುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಬಯಲು ಶೌಚಾಲಯಕ್ಕೆ ತಿಂಗಳು ಇನ್ನೂರರಂತೆ ಆ ಜಮೀನಿನ ಮಾಲೀಕನಿಗೆ ನೀಡಬೇಕು. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಕೆಆರ್ ಪುರಂನ ಹೊರಮಾವು ಬಳಿಯ ಬಿಬಿಎಂಪಿಯ ವಾರ್ಡ್ ನಂಬರ್ 26ರ ಚಿಕ್ಕನಂಜುಂಡಪ್ಪ ಲೇಔಟ್ ಬಳಿ ರೇವಣ್ಣ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿವೆ. ದೂರದ ಕರ್ನಾಟಕ ಅಂದರೆ ಗಡಿಭಾಗದ ಈ ಜನ ಕೆಲಸ ಅರಸಿ ಬಂದು ಇಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾಗದ ಮಾಲೀಕ ರೇವಣ್ಣ ಇವರಿಗೆ ತಮ್ಮ ಸ್ವಂತ ಜಾಗದಲ್ಲಿ ಜೋಪಡಿ ಹಾಕಲು ಬಿಟ್ಟಿದ್ದಾರೆ. ಆದರೆ ಶೌಚಾಲಯಕ್ಕೆ ಪಕ್ಕದ ಕೃಷ್ಣ ಮೂರ್ತಿ ಎಂಬವರ ಮಾವಿನ ತೋಪನ್ನು ಬಳಸಲು ಹೇಳಿದ್ದಾರೆ. ಇದನ್ನು ಲಾಭ ಮಾಡಿಕೊಳ್ಳಲು ಮಾವಿನ ತೋಪಿನ ಮಾಲೀಕ ಸುಮಾರು 1 ವರ್ಷದಿಂದ ಒಂದು ಕುಟುಂಬವೊಂದ್ದಕ್ಕೆ ತಿಂಗಳಿಗೆ 200 ರೂ. ವಸೂಲಿ ಮಾಡುತ್ತಿದ್ದಾನೆ.

    ಈ ಬಗ್ಗೆ ಜೋಪಡಿ ನಿವಾಸಿಗಳನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ;
    ಪಬ್ಲಿಕ್ ಟಿವಿ: ಜಮೀನಿನ ಮಾಲೀಕರೇ ದುಡ್ಡು ಕೊಡಿ ಎಂದು ಬಂದು ಕೇಳಿದ್ರಾ?
    ಜೋಪಡಿ ವಾಸಿ: ಇಲ್ಲ ಅವರೇ ಬಂದು ಮಾತಾಡಿದ್ದು, ಒಂದು ಜೋಪಡಿಗೆ 200 ರೂ. ಕೊಡಿ, ಇಲ್ಲ ಖಾಲಿ ಮಾಡ್ಕೊಂಡ್ ಹೋಗಿ. ಖಾಲಿ ಮಾಡ್ಕೊಂಡ್ ಹೋದ್ರೆ ಎಲ್ಲಿ ಸರ್ ಹೋಗೋದು. ಅಷ್ಟೊಂದು ಬಾಡಿಗೆ ಕೊಟ್ಟು. ಅದಕ್ಕೆ 200 ರೂ. ಕೊಟ್ಟು ಸುಮ್ಮನಾಗ್ತೀವಿ.
    ಪಬ್ಲಿಕ್ ಟಿವಿ: ಹೆಣ್ಣು ಮಕ್ಕಳು ಇರ್ತಾರೆ ಹೇಂಗ್ ಬಯಲು ಶೌಚ ಯೂಸ್ ಮಾಡ್ತೀರಿ.
    ಜೋಪಡಿ ವಾಸಿ: ತೋಪಲ್ಲಿ ಒಂದು ಕಡೆ ಅವರು ಹೋಗ್ತಾರೆ, ಮತ್ತೊಂದು ಕಡೆ ನಾವ್ ಹೋಗ್ತಿವಿ. ಏನ್ ಮಾಡೋದು ಸರ್.
    ಪಬ್ಲಿಕ್ ಟಿವಿ: 200 ರೂ. ತಗೊಂಡು ಕ್ಲೀನ್ ಮಾಡ್ತಾರಂತ. ಮಣ್ಣು ಏನಾದ್ರೂ ಹಾಕ್ತಾರ.
    ಜೋಪಡಿ ವಾಸಿ: ಏನೂ ಮಾಡಲ್ಲ ಸರ್. ಸುಮ್ನೆ ಬಾಡಿಗೆ ಅಂತ 200 ರೂ. ತಗೋತಾರೆ.
    ಪಬ್ಲಿಕ್ ಟಿವಿ: ಏನೇನ್ ಕೆಲಸ ಮಾಡ್ತೀರ?
    ಜೋಪಡಿ ವಾಸಿ: ಗಾರೆ ಕೆಲಸ, ಸೆಂಟ್ರಿಂಗ್ ಕೆಲಸ, ಪ್ಲಂಬರ್, ಡ್ರೈವರ್ ಕೆಲಸ ಮಾಡ್ತೀವಿ.
    ಪಬ್ಲಿಕ್ ಟಿವಿ: ಯಾವ ಊರಿನವರು?
    ಜೋಪಡಿ ವಾಸಿ: ಮಂತ್ರಾಲಯ, ಬಳ್ಳಾರಿ ಕಡೆಯವರಿದ್ದೀವಿ.

    ಜಾಗದ ಮಾಲೀಕ ಕೃಷ್ಣ ಮೂರ್ತಿ, ನೀವು ಶೌಚಕ್ಕೆ ನಮ್ಮ ತೋಟವನ್ನು ಬಳಸುತ್ತಿದ್ದೀರಿ ಜೆಸಿಬಿ ಮೂಲಕ ಮಣ್ಣು ಬದಲಿಸಿ ಸ್ವಚ್ಛಗೊಳಿಸಬೇಕಾಗುತ್ತೆ ಎಂದು 200 ರೂ. ಫಿಕ್ಸ್ ಮಾಡಿದ್ದಾರೆ. ಇನ್ನೇನ್ ಮಾತನಾಡುವುದಕ್ಕೆ ಆಗುತ್ತೆ, ಹೇಗೋ ಉಳಿಯಲು ಜಾಗ ಇದ್ಯಲ್ಲ ಎಂದು ಅಲ್ಲಿನ ವಾಸಿಗಳು ದುಡ್ಡು ನೀಡುತ್ತಾ ಬಂದಿದ್ದಾರೆ. ಮಹಿಳೆಯರು ಒಂದು ಭಾಗಕ್ಕೆ, ಪುರುಷರು ಮತ್ತೊಂದು ಭಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಏನೂ ತೊಂದರೆ ಇಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಬಯಲು ಶೌಚಾಲಯ ತಪ್ಪು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ.

  • ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಭುವನೇಶ್ವರ: ಟ್ರಕ್ ಮಾಲೀಕನೊಬ್ಬ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ಕಟ್ಟಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.

    ನಾಗಾಲ್ಯಾಂಡ್ ನೋಂದಾಯಿತ ಟ್ರಕ್ಕೊಂದು ಏಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 6.53 ಲಕ್ಷ ದಂಡವನ್ನು ಮಾಲೀಕ ಕಟ್ಟಿದ್ದಾರೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಲಾರಿಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ (ಒಎಂವಿಟಿ) ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

    ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ನಂತರ ರಸ್ತೆ ತೆರಿಗೆಯನ್ನು ಪಾವತಿಸಿರಲಿಲ್ಲ. ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

    ಮಾಲೀಕನಿಗೆ ನೀಡಿರುವ ಚಲನ್ ಪ್ರತಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.