Tag: ಮಾಲೀಕ

  • ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಲಕ್ನೋ: ಸಾಮಾನ್ಯವಾಗಿ ಮನುಷ್ಯರು ಪ್ರಾಣಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿರುವುದನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೋರ್ವ ಕಳೆದು ಹೋಗಿರುವ ಗಿಳಿಯನ್ನು ಹುಡುಕಿಕೊಂಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಗಿಳಿಯನ್ನು ಹುಡುಕಿಕೊಟ್ಟವರಿಗೆ 10,000 ರೂ. ಹಣವನ್ನು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ಹೌದ ಸಾಕಿದ್ದ ಗಿಳಿಯೊಂದು ಕಾಣೆಯಾಗಿದ್ದು, ಇದೀಗ ಅಲಿಗಢ ಜಿಲ್ಲೆಯಲ್ಲಿ ಗಿಳಿಯ ವಿಚಾರ ಭಾರೀ ಚರ್ಚೆಯಾಗುತ್ತಿದೆ. ವಿಶೇಷವೆಂದರೆ ಈ ಗಿಳಿ ವಿದೇಶಿ ತಳಿಯದ್ದಾಗಿದೆ. ನಗರದ ಕ್ವಾರ್ಸಿ ಪೊಲೀಸ್ ಠಾಣಾ ಪ್ರದೇಶದಿಂದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದೆ.

    ಗಿಳಿಯ ಮಾಲೀಕ ಎಸ್.ಸಿ.ವಷ್ರ್ನಿ ಎಂದು ಗುರುತಿಸಲಾಗಿದ್ದು, ಇವರು ದೀಂದಯಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗದು ಬಹುಮಾನ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಲ್ಲದೇ, ಗಿಳಿ ಹುಡುಕಲು ಸಹಾಯ ಮಾಡುವಂತೆ ಕರಪತ್ರಗಳನ್ನು ಮುದ್ರಿಸಿ ಸುತ್ತಮುತ್ತಲಿನವರಿಗೆ ಹಂಚಿದ್ದಾರೆ. ಅಲ್ಲದೆ ಗಿಳಿ ಹುಡುಕಲು ಸಹಾಯ ಮಾಡಿದವರಿಗೆ 10,000ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆ

    ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆ

    ಹಾಸನ: ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿ ರವಿ (47) ಎಂದು ಗುರುತಿಸಲಾಗಿದೆ. ಕಡೂರು ಮೂಲದ ರವಿ ಕಾಫಿ ಪ್ಲಾಂಟರ್ ಸುದೀಶ್ ಎಂಬವವರ ತೋಟದಲ್ಲಿ ಕಾಫಿ ಕುಯ್ಲು ಮಾಡಲು ಹೋಗಿದ್ದು, ಈ ವೇಳೆ ಕಾಫಿ ಬೀಜ ಕುಯ್ಲು ಮಾಡಲು ಚಿಕ್ಕಪ್ಪನ ಮಗ ಪ್ರದೀಪ್(29)ನನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನಿನ್ನೆ ಇಬ್ಬರು ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದು ನಾನ್ ವೆಜ್ ಅಡುಗೆ ಮಾಡಿ ಊಟ ಮುಗಿಸಿದ ನಂತರ ರವಿ ಜಗಳ ಆರಂಭಿಸಿದ್ದಾನೆ. ನಾನೇ ಅಡುಗೆ ಪದಾರ್ಥಗಳನ್ನೆಲ್ಲಾ ತಂದಿದ್ದೀನಿ, ನೀನು ರಾಗಿಹಿಟ್ಟನ್ನು ಕೂಡ ತಂದಿಲ್ಲ ಎಂದು ಬಾಯಿಗೆ ಬಂದಂತೆ ಬೈದು ಪ್ರದೀಪ್‍ನನ್ನು ಮನೆಯಿಂದ ಹೊರಹಾಕಿದ್ದಾನೆ. ರವಿ ಪಾತ್ರೆಗಳನ್ನೆಲ್ಲಾ ಸಹೋದರನ ಮೇಲೆ ಎಸೆದು ಹಲ್ಲೆಗೆ ಮುಂದಾಗಿದ್ದಾನೆ.

    ಇದರಿಂದ ಕೋಪಗೊಂಡ ಪ್ರದೀಪ್ ಕೋಣೆಯೊಳಗೆ ಹೋಗಿ ದೊಣ್ಣೆಯಿಂದ ರವಿ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವದ ಪಕ್ಕದಲ್ಲಿಯೇ ಕುಳಿತಿದ್ದಾನೆ. ಇಂದು ಬೆಳಗ್ಗೆ ತೋಟದ ಮಾಲೀಕ ಇಬ್ಬರನ್ನು ಕೆಲಸಕ್ಕೆ ಕರೆಯಲು ಬಂದಾಗ ಕೊಲೆ ನಡೆದಿರುವುದು ವಿಚಾರ ತಿಳಿದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.

  • 50 ರೂ. ಸಂಬಳದಿಂದ ಬೇಸತ್ತು ಮಾಲೀಕನ ಮಗನನ್ನೇ ಅಪಹರಿಸಿ ಕೊಂದ ಅಪ್ರಾಪ್ತರು!

    50 ರೂ. ಸಂಬಳದಿಂದ ಬೇಸತ್ತು ಮಾಲೀಕನ ಮಗನನ್ನೇ ಅಪಹರಿಸಿ ಕೊಂದ ಅಪ್ರಾಪ್ತರು!

    ಲಕ್ನೋ: ಪ್ರತಿ ನಿತ್ಯ ಮಾಡುತ್ತಿದ್ದ ಕೆಲಸಕ್ಕೆ 30-50 ರೂ. ಸಂಬಳ ನೀಡುತ್ತಿದ್ದರಿಂದ ಬೇಸತ್ತ ಅಪ್ರಾಪ್ತರಿಬ್ಬರು ಮಾಲೀಕನ ಮಗನನ್ನೇ ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಆದಿತ್ಯ(5) ಮೃತ ಬಾಲಕ. ಅಲಿಗರ್ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, 16 ವರ್ಷದ ಆರೋಪಿಗಳು ಹಿಂದಿ ಧಾರವಾಹಿಗಳಿಂದ ಪ್ರೇರಿತಗೊಂಡು ಕೃತ್ಯವೆಸಗಿದ್ದಾನೆ ಎಂಬ ಸತ್ಯ ಬಹಿರಂಗಗೊಂಡಿದೆ.

    ಫೆಬ್ರವರಿ 13ರಂದು ಬಾಲಕ ಮನೆಯಿಂದ ಹೊರಗೆ ಆಟವಾಡುತ್ತಿದ್ದ ವೇಳೆ ಅಪಹರಣವಾಗಿದ್ದಾನೆ. ಆದಿತ್ಯನನ್ನು ಹುಡುಕುವಲ್ಲಿ ಅವರ ತಂದೆ ವಿಫಲವಾದಾಗ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಎರಡು ದಿನಗಳ ನಂತರ ಬಾಲಕ ಶವ ಗುಂಡಿಯೊಂದಲ್ಲಿ ಪತ್ತೆಯಾಗಿದೆ.

    ಆರೋಪಿಗಳು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬಾಲಕನ ಮೃತದೇಹವನ್ನು ಪ್ಲಾಸ್ಟಿಕ್ ಚೀಲದೊಳಗೆ ತುಂಬಿ ಅರಣ್ಯ ಪ್ರದೇಶವೊಂದರಲ್ಲಿ ಗುಂಡಿಯೊಂದರಲ್ಲಿ ಹೂತು ಹಾಕಿದ್ದಾರೆ.

    ಫೆಬ್ರವರಿ 14ರಂದು ಬಾಲಕನೊಬ್ಬನ ಶವ ಗುಂಡಿಯೊಂದರಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಈ ವಿಷಯ ತಿಳಿದ ಬಾಲಕನ ಕುಟುಂಬಸ್ಥರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಬಾಲಕನ ಮೃತದೇಹ ಗುಂಡಿಯೊಳಗೆ ಪತ್ತೆಯಾಗಿದೆ. ಈ ವೇಳೆ ಆರೋಪಿಗಳು ಬಾಲಕನ ಬಟ್ಟೆ ಮತ್ತು ಚಪ್ಪಲಿಯನ್ನು ಸುಡುವ ಪ್ರಯತ್ನ ಕೂಡ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ಕೊಲೆ ಕುರಿತ ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಎಸ್ಪಿ(ಗ್ರಾಮೀಣ) ಶುಭಮ್ ಪಟೇಲ್ ಹೇಳಿದ್ದಾರೆ.

  • ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಚಿತ್ರದುರ್ಗ: ವ್ಯಕ್ತಿಯೊಬ್ಬರ ಕಾರಿಗೆ ಆಸಿಡ್ ದಾಳಿ ನಡೆಸಿ ಬೆಂಕಿ ಹಚ್ಚಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿರುವ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಯಾದ ಸುರೇಶ್‍ಗೆ ಮಾರಾಟ ಮಾಡಲು ವೇಣುಗೋಪಾಲ್ ಅವರ ತಂದೆ ಮುಂದಾಗಿದ್ದರು. ಆದರೆ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರು. ಹೀಗೆ ಕೆಲಸದ ಮೇಲೆ ಅನ್ಯ ಕಾರ್ಯನಿಮಿತ್ತ ಚಳ್ಳಕೆರೆಗೆ ವೇಣುಗೋಪಾಲ್ ಬಂದಿದ್ದರು. ಈ ವೇಳೆ ಆಂಧ್ರ ಪ್ರದೇಶದಿಂದ ಹಿಂಬಾಲಿಸಿಕೊಂಡು ಬಂದಿರುವ ಸುರೇಶ್ ಅಂಡ್ ಟೀಂ, ಮೊಳಕಾಲ್ಮೂರಿನ ಸೂಕೆನಹಳ್ಳಿ ಬಳಿ ಏಕಾಏಕಿ ವೇಣುಗೋಪಾಲ್ ಕಾರಿಗೆ ಬೆಂಕಿ ಹಾಕಿ, ಆಸಿಡ್ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಕೃತ್ಯವೆಸಗಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡಿರುವ ದುಷ್ಕರ್ಮಿಗಳು ಮೊಳಕಾಲ್ಮೂರಿನಿಂದ ವಾಪಾಸ್ ಹೊರಟ ವೇಣುಗೋಪಾಲ್ ಕಾರನ್ನು ಅಡ್ಡಗಟ್ಟಿ ಹತ್ಯೆಗೆ ಯತ್ನ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಹಿಂದುಪುರ ಮೂಲದ ಸುರೇಶ ಹಾಗೂ ಆತನ ಸಹಚರರಾದ ಆಂಜನೇಯ, ಚೌಡಪ್ಪ ಸೇರಿದಂತೆ ಐವರು ಈ ಕೃತ್ಯ ನಡೆಸಿದ್ದಾರೆಂಬ ಎಂದು ಹೇಳಲಾಗುತ್ತಿದೆ.

    ದುಷ್ಕøತ್ಯದಿಂದಾಗಿ ವೇಣುಗೋಪಾಲ್ ಕಾರು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡ ವೇಣುಗೋಪಾಲ್‍ರನ್ನು ಬಳ್ಳಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕೃತ್ಯದ ಸ್ಥಳದಿಂದ ಪರಾರಿಯಾಗಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

  • ಕೆಲಸ ಕೊಟ್ಟ ಮಾಲೀಕನ ಲಾರಿಯನ್ನೇ ಕದ್ದ ಖದೀಮ ಅಂದರ್

    ಕೆಲಸ ಕೊಟ್ಟ ಮಾಲೀಕನ ಲಾರಿಯನ್ನೇ ಕದ್ದ ಖದೀಮ ಅಂದರ್

    ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ ಮುಂದಾಗಿದ್ದ ಕಳ್ಳನನ್ನ ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೋನಿಯ ನಿವಾಸಿ ಗೋವಿಂದ ಬಂಧಿತ ಆರೋಪಿ. ಹಣದ ಅವಶ್ಯಕತೆ ಕಾರಣಕ್ಕೆ ತನ್ನ ಮಾಲೀಕನ ಲಾರಿಯನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ.

    ಆಟೋ ನಗರದ ಸೈಯದ್ ಹುಸೇನ್ ಎಂಬವರಿಗೆ ಸೇರಿದ ಲಾರಿಯನ್ನ ಗೋವಿಂದ ಕದ್ದು ಮಾರಾಟಕ್ಕೆ ಮುಂದಾಗಿದ್ದ. ರಾಯಚೂರು ತಾಲೂಕಿನ ಗಂಜಳ್ಳಿ ಬಳಿ ಲಾರಿಯೊಂದಿಗೆ ಆರೋಪಿ ಸೆರೆಸಿಕ್ಕಿದ್ದಾನೆ.

    ಎರಡು ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಗೋವಿಂದ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಲಾರಿಯೊಂದಿಗೆ ಪರಾರಿಯಾಗಿದ್ದ. ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗೋವಿಂದನಿಗೆ ಸೈಯದ್ ಹುಸೇನ್ ಕೆಲಸ ನೀಡಿದ್ದ. ಆದರೆ ಗೋವಿಂದ ಮಾಲೀಕನ 8 ಲಕ್ಷ ರೂಪಾಯಿ ಮೌಲ್ಯದ ಲಾರಿ ಕಳ್ಳತನ ಮಾಡಿದ್ದಾನೆ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸದರ್ ಬಜಾರ್ ಠಾಣೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

  • ಪ್ರೀತಿಯ ʼಗುಂಡʼನನ್ನು ಹುಡುಕಿಕೊಟ್ಟವರಿಗೆ 10 ಸಾವಿರ ನಗದು ಬಹುಮಾನ

    ಪ್ರೀತಿಯ ʼಗುಂಡʼನನ್ನು ಹುಡುಕಿಕೊಟ್ಟವರಿಗೆ 10 ಸಾವಿರ ನಗದು ಬಹುಮಾನ

    ಬೆಂಗಳೂರು: ಕಳೆದ ಎರಡು ದಿನದ ಹಿಂದೆ ಮನೆಯ ಬಳಿ ಆಟವಾಡುತಿದ್ದ ಪ್ರೀತಿಯ ಶ್ವಾನ ನಾಪತ್ತೆಯಾಗಿದ್ದು, ಮುದ್ದಿನ ಶ್ವಾನ ಕಳೆದು ಹೋಗಿದಕ್ಕೆ ಕುಟುಂಬಸ್ಥರು ಬೇಸರಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ಇತ್ತ ಸಹಪಾಠಿ ಗುಂಡನ ನಾಪತ್ತೆಯಿಂದ ಉಳಿದ ಶ್ವಾನಗಳು ಸಹ ಊಟ ಮಾಡದೆ ನೀರು ಕುಡಿಯದೇ ಮಂಕಾಗಿ ಹೋಗಿವೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹರ್ಷ ಕ್ಯಾಂಪಸ್ ನಿಂದ ಶ್ವಾನ ನಾಪತ್ತೆಯಾಗಿದೆ. ಹರ್ಷ ವಿದ್ಯಾಸಂಸ್ಥೆಗಳ ಮಾಲೀಕ ಶಿವಕುಮಾರ್ ಅವರ ಸಾಕು ನಾಯಿ ಗುಂಡ ನಾಪತ್ತೆಯಾಗಿದೆ.

    ಕಳೆದ ಒಂದೂವರೆ ವರ್ಷದಿಂದ ಗುಂಡನನ್ನು ಶಿವಕುಮಾರ್ ಮುದ್ದಾಗಿ ಸಾಕಿದ್ದರು. ಬಿಳಿ, ಕಪ್ಪು ಬಣ್ಣದ ಗುಂಡ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಹುಡುಕಿ ಕೊಟ್ಟವರಿಗೆ 10,000 ಇನಾಮು ನೀಡಲು ತೀರ್ಮಾನ ಮಾಡಿದ್ದಾರೆ. ಶ್ವಾನದ ಮಾಲೀಕ ಯಶಸ್ ಮಾತನಾಡಿ ಪ್ಲೀಸ್ ಯಾರಿಗಾದರೂ ಸಿಕ್ಕಿದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

  • ತಾನು ಪ್ರೀತಿಸ್ತಿದ್ದ ಹುಡುಗಿ ಮೇಲೆ ಕಣ್ಣಾಕಿದ್ದಕ್ಕೆ ಸಹೋದ್ಯೋಗಿಯನ್ನೇ ಮುಗಿಸಿದ!

    ತಾನು ಪ್ರೀತಿಸ್ತಿದ್ದ ಹುಡುಗಿ ಮೇಲೆ ಕಣ್ಣಾಕಿದ್ದಕ್ಕೆ ಸಹೋದ್ಯೋಗಿಯನ್ನೇ ಮುಗಿಸಿದ!

    – ಓರ್ವನ ಕೊಲೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಅಂತ್ಯ

    ಬೆಂಗಳೂರು: ತಾನು ಪ್ರೀತಿಸುತ್ತಿರುವ ಹುಡುಗಿ ಮೇಲೆ ಕಣ್ಣಾಕಿದ ಸಹೋದ್ಯೋಗಿಯನ್ನೇ ಕೊಲೆ ಮಾಡಿದ ಘಟನೆಯೊಂದು ಬೆಂಗಳೂರಿನ ಬನ್ನೇರುಘಟ್ಟದ ಬಳಿ ನಡೆದಿದೆ.

    ರವಿಕುಮಾರ್ ಕೊಲೆಯಾದವ. ಈತನನ್ನು ಹುಡುಗಿಯ ಪ್ರಿಯಕರ ಲೋಕೇಶ್ ಕೊಲೆ ಮಾಡಿದ್ದಾನೆ. ರವಿಕುಮಾರ್ ಬಳಿ ಲೋಕೇಶ್ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಲೋಕೇಶ್ ಗೆ ಹುಡುಗಿಯೊಬ್ಬಳ ಜೊತೆಗೆ ಲವ್ ಆಗಿತ್ತು. ಹುಡುಗಿಯನ್ನು ಕರೆದುಕೊಂಡು ಬಂದು  ರವಿಕುಮಾರ್ ಗೆ ಪರಿಚಯ ಮಾಡಿಸಿದ್ದ.

    ಹೀಗೆ ಆದ ಪರಿಚಯದಿಂದ ಲೋಕೇಶ್ ಗೆ ಗೊತ್ತಾಗದಂತೆ ತನ್ನನ್ನು ಪ್ರೀತಿಸುವಂತೆ ರವಿಕುಮಾರ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ವಿಚಾರ ತಿಳಿದ ಲೋಕೇಶ್,  ರವಿಕುಮಾರ್ ನನ್ನು ಕಿಡ್ನಾಪ್ ಮಾಡಿ ಬನ್ನೇರುಘಟ್ಟದ ಬಳಿ ಕೊಲೆ ಮಾಡಿದ್ದ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಲೋಕೇಶ್ ಸೇರಿ ಮೂವರನ್ನು ಬಂಧಿಸಿದ್ದಾರೆ.

  • ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    – ಸಂಬಂಧಿಕರಿಂದ ಅವನನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ

    ಮೆಕ್ಸಿಕೋ: ಅವನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದು ಮಾಲೀಕನೋರ್ವ ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಪಾರ್ಕಿನ ಬೆಂಚಿಗೆ ಕಟ್ಟಿ ಹೋಗಿರುವ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

    ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಸಂಬಂಧಿಕರು ನಿಂದಿಸುತ್ತಾರೆ ಎಂಬ ಕಾರಣಕ್ಕೆ ಆತ ಇದನ್ನು ಬೇರೆಯವರಿಗೆ ಕೊಡುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಒಂದು ಭಾವನಾತ್ಮಕ ಪತ್ರ ಬರೆದು ಶ್ವಾನವನ್ನು ಪಾರ್ಕಿನಲ್ಲಿರುವ ಬೆಂಚ್‍ಗೆ ಕಟ್ಟಿ, ಯಾರಾದರೂ ಇವನನ್ನು ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.

    ಪತ್ರದಲ್ಲೇನಿದೆ?
    ನಾನು ಈ ಪತ್ರದ ಮೂಲಕ ಶ್ವಾನವನ್ನು ದತ್ತು ಪಡೆಯಲು ಮತ್ತು ಅವವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ನಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಈ ರೀತಿ ಬಿಟ್ಟುಹೋಗಲು ಬಹಳ ಬೇಸರವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಅವನನ್ನು ದಿನ ಬೈಯುತ್ತಾರೆ. ಅವರು ನಿಂದಿಸುವುದನ್ನು ನೋಡಲಾಗದೇ ಈ ತೀರ್ಮಾನ ಮಾಡಿದ್ದೇನೆ. ಈ ಪತ್ರ ಓದಿ ದತ್ತು ಪಡೆಯಬೇಕು ಎಂದರೆ ಕೆರೆದುಕೊಂಡು ಹೋಗಿ. ಇಲ್ಲ ಈ ಪತ್ರವನ್ನು ಬೇರೆಯವರಿಗಾಗಿ ಇಲ್ಲೇ ಬಿಟ್ಟು ಹೋಗಿ ಎಂದು ಬರೆದುಕೊಂಡಿದ್ದಾರೆ.

    ತನ್ನ ಮಾಲೀಕನನ್ನು ಕಳೆದುಕೊಂಡ ಶ್ವಾನ ಬೆಂಚಿನ ಮೇಲೆ ಮಲಗಿಕೊಂಡು, ಬಂದು ಪತ್ರ ಓದುವವರನ್ನು ನೋಡುತ್ತಾ ಕುಳಿತ್ತಿದೆ. ಪತ್ರ ಓದಿದ ಯಾರೂ ಶ್ವಾನವನ್ನು ದತ್ತು ಪಡೆದುಕೊಂಡಿಲ್ಲ. ಕೊನೆಗೆ ಅನಿಮಲ್ ಚಾರಿಟಿಯವರು ಬಂದು ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಶ್ವಾನಕ್ಕೆ ‘ಬೋಸ್ಟನ್’ ಎಂದು ನಾಮಕರಣ ಮಾಡಿದ್ದಾರೆ.

  • ಮಾಲೀಕನ ರಕ್ಷಣೆಗೆ ಧಾವಿಸುವ ಗೋವು- ವೀಡಿಯೋ ವೈರಲ್

    ಮಾಲೀಕನ ರಕ್ಷಣೆಗೆ ಧಾವಿಸುವ ಗೋವು- ವೀಡಿಯೋ ವೈರಲ್

    – ಗೋವಿನ ಪ್ರಾಮಾಣಿಕತೆಗೆ ಜನ ಫಿದಾ

    ಗಾಂಧಿನಗರ: ಕೆಲ ದಿನಗಳ ಹಿಂದೆ ಮಾಲೀಕನನ್ನ ರಕ್ಷಿಸುವ ವೀಡಿಯೋ ವೈರಲ್ ಆಗಿತ್ತು. ಖಾಸಗಿ ಮಾಧ್ಯಮ ವೀಡಿಯೋ ರಿಯಾಲಿಟಿ ಚೆಕ್ ನಡೆಸಿ ವರದಿ ಬಿತ್ತರಿಸಿದೆ.

    ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ನಿವಾಸಿ ಮಾನದ್ ಎಂಬವರ ಹಸು ತನ್ನ ಸ್ನೇಹಿತನಂತೆ ಸಾಕಿಕೊಂಡಿದ್ದಾರೆ. ಮಾಲೀಕನ ಮೇಲೆ ಯಾರಾದ್ರೂ ಹಲ್ಲೆಗೆ ಯತ್ನಿಸಿದ್ರೆ ಹಸು ಪ್ರತ್ಯಕ್ಷವಾಗಿ ಒಡೆಯನ ರಕ್ಷಣೆಗೆ ಮುಂದಾಗುತ್ತದೆ.

    ನಾನು ಹಸುವನ್ನು ಗೆಳೆಯನಂತೆ ನೋಡಿಕೊಂಡಿದ್ದೇನೆ. ನನಗೆ ಅಪಾಯವಾದ್ರೆ ರಕ್ಷಣೆಗೆ ಬರುತ್ತೆ. ನೀವು ಬೇಕಾದ್ರೆ ನನ್ನ ಹಲ್ಲೆ ನಡೆಸಿದಂತೆ ನಟಿಸಿ ದೂರದಲ್ಲಿರುವ ನನ್ನ ಹಸು ಓಡೋಡಿ ಬರುತ್ತೆ ಎಂದು ಮಾನದ್ ಹೇಳುತ್ತಾರೆ. ಸ್ಥಳಕ್ಕೆ ತೆರಳಿದ ಮಾಧ್ಯಮ ಸಿಬ್ಬಂದಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಆತನೊಂದಿಗೆ ಇನ್ನೋರ್ವ ಕೋಲಿನಿಂದ ಹೊಡೆದಾಡುವಂತೆ ನಟಿಸಿದಾಗಲೂ ಮೇಯುತ್ತಿದ್ದ ಹಸು ಬಂದಿದೆ.

    ಮಾನದ್ 12 ವರ್ಷದವಾಗಿರಿಂದಲೇ ಹಸುಗಳನ್ನು ಮೇಯಿಸಿಕೊಂಡು ಬರುತ್ತಿದ್ದಾರೆ. ಮಾನದ್ 20 ಜಾನುವಾರುಗಳಿದ್ದು, ಅದರಲ್ಲಿ ಈ ಹಸು ತುಂಬಾ ವಿಶೇಷ ಗುಣವನ್ನು ಹೊಂದಿದೆ. ಇನ್ನು ಮಾನದ್ ಬಿಡುವಿನ ಸಮಯದಲ್ಲಿ ಆಟೋ ಸಹ ಓಡಿಸುತ್ತಾರೆ.

  • ತೋಟದ ಮನೆಗೆ ನುಗ್ಗಿ ದರೋಡೆಗೆ ಯತ್ನ: ಅರ್ಧ ಗಂಟೆ ಕಾದಾಟ ನಡೆಸಿ ಕಳ್ಳನ ಹಿಡಿದ ಮಾಲೀಕ

    ತೋಟದ ಮನೆಗೆ ನುಗ್ಗಿ ದರೋಡೆಗೆ ಯತ್ನ: ಅರ್ಧ ಗಂಟೆ ಕಾದಾಟ ನಡೆಸಿ ಕಳ್ಳನ ಹಿಡಿದ ಮಾಲೀಕ

    ಚಾಮರಾಜನಗರ: ತೋಟದ ಮನೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯಲ್ಲಿ ಘಟನೆ ನಡೆದಿದ್ದು, ಬಂಧಿತ ದರೋಡೆಕೋರರನ್ನು ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿಯ ಸಿದ್ದ, ಪ್ರದೀಪ ಹಾಗೂ ರವಿ ಎಂದು ಗುರುತಿಸಲಾಗಿದೆ.

    ಹೊಂಗಳ್ಳಿ ಹೊರವಲಯಲದಲ್ಲಿ ಕೇರಳ ಮೂಲದ ಪ್ರದೀಪ್ ಅವರು ತೋಟ ಗುತ್ತಿಗೆ ಪಡೆದು ತೋಟದ ಮನೆಯಲ್ಲೇ ವಾಸವಿದ್ದಾರೆ. ತಡ ರಾತ್ರಿ ತೋಟದ ಮನೆಗೆ ನುಗ್ಗಿದ ಮೂವರು ದರೋಡೆಕೋರರ ತಂಡ ಮಾಲೀಕ ಪ್ರದೀಪ್ ಮೇಲೆ ಖಾರದಪುಡಿ ಎರಚಿ ರಾಡ್ ನಿಂದ ಹಲ್ಲೆ ನಡೆಸಿದೆ. ಈ ವೇಳೆ ಮಾಲೀಕ ಪ್ರದೀಪ್ ಸಹ ಪ್ರತಿ ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಹೊಡೆದಾಟ ನಡೆದಿದೆ. ಇದೇ ಸಂದರ್ಭದಲ್ಲಿ ಮನೆಯ ಒಳಗಿನಿಂದ ಕಬ್ಬಿಣದ ರಾಡ್ ತಂದ ಪ್ರದೀಪ್ ದರೋಡೆಕೋರರ ಮೇಲೆ ಬೀಸಿದ ಪರಿಣಾಮ ಓರ್ವ ದರೋಡೆಕೋರ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.

    ಉಳಿದಿಬ್ಬರು ದರೋಡೆಕೋರರು ಪ್ರದೀಪ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಪತ್ನಿ ಕುತ್ತಿಗೆಯಲ್ಲಿದ್ದ 40 ಗ್ರಾಂ. ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ತಕ್ಷಣ ಪ್ರದೀಪ್ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧಾವಿಸಿದ ಗ್ರಾಮಸ್ಥರು ಕುಸಿದುಬಿದ್ದು, ಗಾಯಗೊಂಡಿದ್ದ ದರೋಡೆಕೋರನ ಕೈಕಾಲು ಕಟ್ಟಿ ಗುಂಡ್ಲುಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಧಾವಿಸಿದ ಗುಂಡ್ಲುಪೇಟೆ ಪೊಲೀಸರು ಕುಸಿದುಬಿದ್ದಿದ್ದ, ಗ್ರಾಮಸ್ಥರು ಹಿಡಿದಿಟ್ಟಿದ್ದ ದರೋಡೆಕೋರನನ್ನು ಬಂಧಿಸಿ ಕರೆದೊಯ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ ನೀಡಿದ ಸುಳಿವಿನ ಮೇರೆಗೆ ಸರ್ಕಲ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ, ಎಸ್‍ಐ ರಾಜೇಂದ್ರ ನೇತೃತ್ವದಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಉಳಿದ ಇಬ್ಬರು ದರೋಡೆಕೋರರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ತೋಟದ ಮಾಲೀಕ ಪ್ರದೀಪ್ ನನ್ನು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.