Tag: ಮಾಲೀಕ

  • ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಲ್ಯುಕೇಮಿಯಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಶ್ವಾನವನ್ನು ಅದರ ಮಾಲೀಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶ್ವಾನಪ್ರಿಯರು ಈ ಕಥೆ ಕೇಳಿ ಭಾವುಕರಾಗಬಹುದು. ಅಲ್ಲದೇ ಕಣ್ಣೀರು ಸಹ ತರಿಸಬಹುದು, ಆದರೆ ಈ ಕಥೆಯನ್ನು ನೀವು ಕೇಳಲೇಬೇಕು. 10 ವರ್ಷದ ಲ್ಯಾಬ್ರಡೂಡ್ಲ್ ಎಂಬ ಮಾಂಟಿ ಹೆಸರಿನ ಶ್ವಾನವೊಂದು ಲ್ಯುಕೇಮಿಯಾ ಕಾಯಿಲೆ ವಿರುದ್ಧ ತಿಂಗಳು ಗಟ್ಟಲೇ ಹೋರಾಡಿ ನಿಧನ ಹೊಂದಿದೆ. ಆದರೆ ಈ ಮುನ್ನ ಶ್ವಾನದ ಮಾಲೀಕ ಕಾರ್ಲೋಸ್ ಫ್ರೆಸ್ಕೊ ತನ್ನ ಶ್ವಾನದೊಂದಿಗೆ ಕೊನೆಯಾದಾಗಿ ಟ್ರಿಪ್‍ಗೆ ಹೋಗಿ ಅದರ ಜೊತೆ ಕಾಲ ಕಳೆದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅನಾರೋಗ್ಯದಿಂದಾಗಿ ಮಾಂಟಿಗೆ ನಡೆಯಲು ಸಾಧ್ಯವಾಗದ ಕಾರಣ, ಕಾರ್ಲೋಸ್ ಮಾಂಟಿಯನ್ನು ವೇಲ್ಸ್‍ನ ಬ್ರೆಕಾನ್‍ನಲ್ಲಿರುವ ತಮ್ಮ ನೆಚ್ಚಿನ ಪವರ್ತಕ್ಕೆ ವೀಲ್ ಚೇರ್ ಮುಖಾಂತರ, ಮಾಂಟಿಯನ್ನು ಕರೆದುಕೊಂಡು ಹೋಗಿದ್ದರು. ಈ ಮುನ್ನ ಕಾರ್ಲೋಸ್ ಹಾಗೂ ಮಾಂಟಿ ಜೊತೆಗೆ ಹಲವಾರು ಬಾರಿ ಟ್ರಿಪ್‍ಗೆ ಒಟ್ಟಿಗೆ ಹೋಗಿದ್ದೆವು. ಆದರೆ ಈ ಬಾರಿ ಮಾಂಟಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಿಂದ ನಾನು ಅವನೊಂದಿಗೆ ಹೋಗುತ್ತಿರುವ ಕೊನೆ ಟ್ರಿಪ್ ಎಂದು ನನಗೆ ಮೊದಲೇ ಗೊತ್ತಿರುವುದಾಗಿ ತಿಳಿಸಿದ್ದರು. 18 ತಿಂಗಳ ಹಿಂದೆ ಮಾಂಟಿಗೋ ಕೀಮೋಥೆರಪಿ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದನು. ಆದರೆ ಕೊನೆಗೆ ಚಿಕಿತ್ಸೆ ಫಲಾಕಾರಿಯಾಗಲಿಲ್ಲ.

    ಅಲ್ಲದೇ ನಾನು ಅವನು ಪ್ರವಾಸಕ್ಕೆ ಹೋದಾಗ ಅಲ್ಲಿ ಕೆಲವು ಸ್ಥಳೀಯರು ಮಾಂಟಿ ಕುಳಿತಿದ್ದ ವೀಲ್ ಚೇರ್‍ನನ್ನು ತಳ್ಳುತ್ತಾ ಅವನೊಂದಿಗೆ ಸುಂದರವಾದ ಕಾಲ ಕಳೆದರು. ಈ ವೇಳೆ ಮಾಂಟಿ ದುರ್ಬಲನಾಗಿದ್ದರೂ ಅನೇಕ ಮಂದಿಗೆ ಹತ್ತಿರವಾದ, ಎಲ್ಲರ ಗಮನ ಸೆಳೆಯುವುದರ ಜೊತೆಗೆ ಅನೇಕ ಮಂದಿ ಅವನಿಗೆ ಶುಭ ಹಾರೈಸಿದರು. ಪರ್ವದ ಮೇಲಿದ್ದ ಮಂದಿ ಇವನ ಕಥೆಯನ್ನು ಕೇಳಿ ದುಃಖಿತರಾಗಿದ್ದರು. ಇದನ್ನೂ ಓದಿ:ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

  • ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ಬೆಂಗಳೂರು: ಒಂದು ರೂಪದಲ್ಲಿ ಗಣೇಶನ ಆಕೃತಿ, ಮತ್ತೊಂದು ಕಡೆಯಿಂದ ಗರುಡನ ರೀತಿ, ತಾಯಿ ಮಗುವಿನ ಆಕೃತಿ, ಜಾಂಬವಂತ ಕರಡಿ ಹೀಗೆ ನಾನಾ ರೂಪದಲ್ಲಿ ಕಾಣುವ ಹಲಸಿನ ಅಪರೂಪದ ಹಣ್ಣು ವಿಸ್ಮಯಕಾರಿ ರೀತಿಯಲ್ಲಿ ಬೆಳವಣಿಗೆಯಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ನಿವಾಸಿ ಶಿವಕುಮಾರ್ ಎಂಬವರ ತೋಟದಲ್ಲಿ ಒಂದು ಪುರಾತನವಾದ ಹಲಸಿನ ಮರ ಇದೆ. ಈ ಮರದಲ್ಲಿ ಬಿಟ್ಟ ಹಣ್ಣು ನಾನಾ ಆಕೃತಿಯಲ್ಲಿ ಆ ಹಲಸಿನ ಹಣ್ಣನ್ನ ತಮ್ಮ ಊಹೆಯಂತೆ ಕಾಣತೊಡಗಿದೆ. ಮರದಲ್ಲಿ ಕಂಡ ಈ ಅಪರೂಪದ ಹಣ್ಣನ್ನು ಮಾಲೀಕ ಶಿವಕುಮಾರ್ ಮನೆಗೆ ತಂದು ದೇವರ ಹಣ್ಣು ಎಂದು ಮನೆಯವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ನಮ್ಮ ತೋಟದಲ್ಲಿ ಸಾಕಷ್ಟು ವರ್ಷದ ಹಳೆಯ ಮರ ಇದೆ. ಈ ಹಲಸಿನ ಮರದಲ್ಲಿ ಈ ಹಣ್ಣು ನೋಡಿದಾಗ ನನಗೆ ನಾಲ್ಕೈದು ರೂಪದಲ್ಲಿ ಗೋಚರವಾಗಿದೆ, ಒಂದು ರೀತಿಯಲ್ಲಿ ಈ ಹಣ್ಣು ನೋಡಲು ಖುಷಿಯಾಗಿದೆ ಎಂದಿದ್ದಾರೆ. ಇನ್ನೂ ಈ ಹಣ್ಣು ಅವರವರ ಮನಸ್ಥಿತಿಗೆ ನೋಡುವ ರೀತಿಯಲ್ಲಿ ಗೋಚರವಾಗುವ ದೃಷ್ಟಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಹೊತ್ತು ಹೊರಟ ಕಿಸಾನ್ ರೈಲು

  • ಕಳ್ಳನಿಗೆ ಕೈ ಕೊಟ್ಟ ಬೈಕ್ – ಮರಳಿ ತಂದು ಮಾಲೀಕನ ಮನೆ ಮುಂದೆ ನಿಲ್ಲಿಸಿದ

    ಕಳ್ಳನಿಗೆ ಕೈ ಕೊಟ್ಟ ಬೈಕ್ – ಮರಳಿ ತಂದು ಮಾಲೀಕನ ಮನೆ ಮುಂದೆ ನಿಲ್ಲಿಸಿದ

    ಕಲಬುರಗಿ: ಕಳ್ಳತನ ಮಾಡಿದ ಬೈಕ್ ಸ್ಟಾರ್ಟ್ ಆಗದಿದ್ದಾಗ ಕಳ್ಳನೊಬ್ಬ ಅದನ್ನು ವಾಪಸ್ ತಂದು ನಿಲ್ಲಿಸಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಆಗ್ರೋ ರಸ್ತೆಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಹಾದೇವ ಕಲಕೇರಿ ಎಂಬವರಿಗೆ ಸೇರಿದ ಬೈಕ್ ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕಳ್ಳತನ ಆಗಿತ್ತು. ನಂತರ ಒಂದಿಷ್ಟು ಮುಂದಕ್ಕೆ ತಳ್ಳಿಕೊಂಡು ಹೋದ ಕಳ್ಳನೋರ್ವ ಬೈಕ್ ಚಾಲನೆ ಮಾಡಲು ಪ್ರಯತ್ನಿಸಿದ್ದಾನೆ. ಬೈಕ್ ಸ್ಟಾರ್ಟ್ ಆಗದಿದ್ದಾಗ ವಾಪಸ್ ಅದನ್ನು ಬೈಕ್ ಮಾಲೀಕನ ಮನೆ ಮುಂದೆಯೇ ತಂದು ನಿಲ್ಲಿಸಿ ಹೋಗಿದ್ದಾನೆ.

    ಕಳ್ಳನ ಕರಾಮತ್ತು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಕಳೆದ ಕೆಲ ದಿನಗಳಿಂದ ಅಫಜಲಪುರ ಪಟ್ಟಣದಲ್ಲಿ ಬೈಕ್ ಗಳ ಕಳ್ಳತನಗಳು ಮರುಕಳಿಸುತ್ತಿದ್ದು, ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಡ್ ಕೆಳಗೆ ಸುರಂಗ ಮಾರ್ಗ – ವೀಡಿಯೋ ವೈರಲ್

  • ಸಾಕಿದ ನಾಯಿಯನ್ನು ಕಚ್ಚಿದ್ದಕ್ಕೆ ಬೀದಿ ನಾಯಿಯನ್ನೇ ಕೊಲೆಗೈದ

    ಸಾಕಿದ ನಾಯಿಯನ್ನು ಕಚ್ಚಿದ್ದಕ್ಕೆ ಬೀದಿ ನಾಯಿಯನ್ನೇ ಕೊಲೆಗೈದ

    ಬೆಂಗಳೂರು: ತಾನು ಸಾಕಿದ ನಾಯಿಯನ್ನು ಬೀದಿ ನಾಯಿಯೊಂದು ಕಚ್ಚಿತೆಂದು ವ್ಯಕ್ತಿಯೊಬ್ಬ ನಾಯಿಯನ್ನು ಹೊಡೆದು ದರದರನೆ ಎಳೆದು ತಂದು ಬಿಸಾಕಿ ಅಮಾನವೀಯವಾಗಿ ನಡೆದುಕೊಂಡ ಘಟನೆ ನಗರದ ಹೆಬ್ಬಗೋಡಿ ಬಳಿಯ ಮಡಿವಾಳದಲ್ಲಿ ನಡೆದಿದೆ.

    ಹೆಬ್ಬಗೋಡಿ ಬಳಿಯ ಮಡಿವಾಳದ ಮುಖ್ಯರಸ್ತೆಯಲ್ಲಿ ಮನೆ ನಾಯಿಯನ್ನು ಕಚ್ಚಿದೆ ಎಂದು ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ವ್ಯಕ್ತಿ ಕುಡಿದ ಮತ್ತಿನಲ್ಲಿ ಮನೆ ನಾಯಿಯ ಜೊತೆ ಹೋಗುವಾಗ ಬೀದಿನಾಯಿ ಬೊಗಳಿ ಆತನ ನಾಯಿಗೆ ಕಚ್ಚಿದೆ. ಬಳಿಕ ನಾಯಿಯನ್ನು ಹಿಂಬಾಲಿಸಿಕೊಂಡು ಬೀದಿ ನಾಯಿ ಮನೆ ಬಳಿ ಹೋಗಿದ್ದಕ್ಕೆ ಸಿಟ್ಟಿಗೆದ್ದ ನಾಯಿ ಮಾಲೀಕ ಮನೆ ಬಳಿಯಿದ್ದ ಕಬ್ಬಿಣದ ರಾಡ್ ನಿಂದ ಬೀದಿ ನಾಯಿ ತಲೆಗೆ ಬೀಸಿ, ಬಳಿಕ ರಸ್ತೆಯಲ್ಲಿ ಎಳೆದೊಯ್ದು ಕ್ರೂರವಾಗಿ ನಡೆದುಕೊಂಡಿದ್ದಾನೆ. ಇದನ್ನೂ ಓದಿ: ಕಾಣೆಯಾಗಿದ್ದ ಚಿನ್ನದ ಸರ ನಾಯಿ ಮಲದಲ್ಲಿ ಪತ್ತೆ

    ನಾಯಿಯನ್ನು ಕೊಂದು ರಸ್ತೆಯಲ್ಲಿ ಎಳೆದಾಡುತ್ತಿದ್ದಾಗ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಇದನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿರುವ ಯಲಹಂಕ ಪ್ರಾಣಿ ದಯಾ ಸಂಘದ ಅನಿರುದ್ದ್, ರಸ್ತೆಯ ಬದಿ ಬಿದ್ದಿದ್ದ ನಾಯಿಯನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಘಟನೆ ಬಳಿಕ ಅಮಾನವೀಯವಾಗಿ ನಡೆದುಕೊಂಡ ವ್ಯಕ್ತಿ ತಲೆಮರೆಸಿಕೊಂಡಿದ್ದು ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

  • ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

    ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

    – ವಿಷಪೂರಿತ ಮೇವು ತಿಂದು 2 ಹಸು ಸಾವು

    ಕೋಲಾರ: ಕೋಲಾರ ಜಿಲ್ಲೆಯಲ್ಲಿಂದು ಸಂಜೆ ಮಳೆರಾಯನ ಆರ್ಭಟ ಜೋರಾಗಿತ್ತು. ಅರ್ಧ ಗಂಟೆಗಳ ಕಾಲ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 14 ಕುರಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

    ಜಿಲ್ಲೆಯ ಕೆಜಿಎಫ್ ತಾಲೂಕು ಚೆನ್ನಪಲ್ಲಿ ಗ್ರಾಮದ ಸುರೇಶ್ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕುರಿಗಳು ಸಾವನ್ನಪ್ಪಿವೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ವಿಷಪೂರಿತ ನೀರಿನಿಂದ ಬೆಳೆದ ಮೇವು ತಿಂದು 2 ಹಸು ಸಾವು
    ವಿಷಪೂರಿತ ಮೇವು ತಿಂದು ಹಸುಗಳು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲುಕಿನ ಸೀತನಾಯಕನಹಳ್ಳಿ ಸಮೀಪ ನಡೆದಿದೆ. ಕಾರ್ಖಾನೆಯ ವಿಷಪೂರಿತ ತ್ಯಾಜ್ಯ ಹೊರಕ್ಕೆ ಬಿಟ್ಟ ಪರಿಣಾಮ ವಿಷಪೂರಿತವಾಗಿ ಮೇವು ತಿಂದ ಎರಡು ಹಸುಗಳು ಮೃತಪಟ್ಟಿವೆ. ಇದೀಗ ಹಸುವಿನ ಮಾಲೀಕ ಕಾರ್ಖಾನೆಯ ಬಳಿ ಹಸುವಿನ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರಿನ ಕೈಗಾರಿಕಾ ಪ್ರದೇಶದ ಸೀತನಾಯಕನಹಳ್ಳಿ ಬಳಿ ಇರುವ ಕ್ಲೋರೈಡ್ ಮೆಟಲ್ ಲಿಮಿಟೆಡ್ ಎಂಬ ಕಂಪನಿಯ ಹೊಗೆ ವಿಷಪೂರಿತ ನೀರು ಬಿಡುಗಡೆ ಮಾಡಿದರ ಪರಿಣಾಮ ಈ ಘಟನೆ ನಡೆದಿದೆ. ನರಸಿಂಹ ರೆಡ್ಡಿ ಎಂಬವರಿಗೆ ಸೇರಿದ ಎರಡು ಹಸುಗಳು, ಅಂದಾಜು 1.5 ಲಕ್ಷ ಬೆಲೆಯುಳ್ಳದಾಗಿದೆ. ಹಾಗಾಗಿ ಪರಿಹಾರ ಭರಿಸಿಕೊಡುವಂತೆ ಕಾರ್ಖಾನೆ ಮುಂದೆ ಹಸುವಿನ ಮಾಲೀಕ ಪ್ರತಿಭಟನೆ ನಡೆಸು ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

  • ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್: ಉಪ ಆಯುಕ್ತರಿಂದ ನೋಟಿಸ್

    ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್: ಉಪ ಆಯುಕ್ತರಿಂದ ನೋಟಿಸ್

    – 5 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಜಪ್ತಿ
    – ಲಾಕ್ ಡೌನ್ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೆ ಮದ್ಯ ಹಂಚಿಕೆ

    ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯಲು ಸಾಥ್ ನೀಡುತ್ತಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಗೆ, ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ ನಾಯಕ್ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ.

    ಲಾಕ್ ಡೌನ್ ಹಿನ್ನೆಲೆ ರಾಯಚೂರು‌ ಜಿಲ್ಲೆಯಲ್ಲಿ ವಾರಕ್ಕೆ ಎರಡು ದಿನ ಮಾತ್ರ ಅದೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ವಾರಪೂರ್ತಿ ಅಕ್ರಮ ಮದ್ಯ ಮಾರಾಟ ನಡೆಯಲು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೇ ಸಾಥ್ ನೀಡಿದ್ದಾರೆ. ಅಬಕಾರಿ ಉಪ ಆಯುಕ್ತರ ದಾಳಿ ವೇಳೆ ಅಬಕಾರಿ ಇನ್ಸ್ ಪೆಕ್ಟರ್ ಬಣ್ಣ ಬಯಲಾಗಿದೆ.

    ರಾಯಚೂರಿನ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಿಂದಲೇ ಕಳ್ಳವ್ಯವಹಾರ ನಡೆದಿದ್ದು, ಅಬಕಾರಿ ಇನ್ಸ್ ಪೆಕ್ಟರ್ ಮೋನಪ್ಪ, ಗೋದಾಮಿನ ವ್ಯವಸ್ಥಾಪಕ ಶಿವಪ್ಪರಿಂದ ಅಕ್ರಮ ದಂಧೆ ನಡೆದಿರುವುದು ಬಯಲಾಗಿದೆ. ಲಾಕ್ ಡೌನ್ ಹಿನ್ನೆಲೆ ಅಧಿಕಾರಿಗಳಿಂದಲೇ ಅಕ್ರಮ ಮಾರಾಟಕ್ಕೆ ಮದ್ಯ ಸರಬರಾಜಾಗುತ್ತಿರುವುದು ಬೆಳಕಿಗೆ ಬಂದಿದೆ. ಲಾಕ್ ಡೌನ್ ನಿಯಮ ಮೀರಿ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ಗೋದಾಮಿನ ಮೇಲೆ ದಾಳಿ ಮಾಡಿ ವಾಹನಗಳಿಗೆ ತುಂಬಿದ್ದ ಮದ್ಯವನ್ನ ಅನ್‍ಲೋಡ್ ಮಾಡಿಸಿದ್ದಾರೆ. ಅಬಕಾರಿ ಇನ್ಸ್ ಪೆಕ್ಟರ್ ಮೋನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಜೂನ್ 20ರವರೆಗೆ ಲಾಕ್‍ಡೌನ್ ಮುಂದುವರಿಕೆ

    ಅಕ್ರಮಕ್ಕೆ ಆಸ್ಪದ ನೀಡಿ ಕರ್ತವ್ಯ ಲೋಪ ಎಸಗಿದ್ದಲ್ಲದೆ, ಅಧಿಕಾರಿಗಳಿಗೆ ಮಾಹಿತಿ ನೀಡದೆ ಮನಬಂದತೆ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾಡಿರುವ ಆರೋಪ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ. ಅಕ್ರಮ ಮದ್ಯ ಹೊರಗಡೆಗೆ ಸಾಗಿಸುತ್ತಿದ್ದ ಎರಡು ವಾಹನ, 5 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಮದ್ಯದಂಗಡಿ ಮಾಲೀಕರಿಗೆ ಮದ್ಯ ವಿತರಣೆ ನೆಪದಲ್ಲಿ ಮಧ್ಯರಾತ್ರಿ ಕಳ್ಳ ವ್ಯವಹಾರ ನಡೆದಿರುವುದು ಬಯಲಾಗಿದೆ.

    ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಸ್.ಬಿ.ಸಿಎಲ್ ಡಿಪೋ ಗೋದಾಮಿನಿಂದ ನೇರವಾಗಿ ಗ್ರಾಮೀಣ ಭಾಗಗಳಿಗೆ ಮದ್ಯ ಸರಬರಾಜು ಆಗಿದ್ದು, ಮದ್ಯದ ಅಂಗಡಿಗಳ ಮಾಲೀಕರಿಗೂ ಮನಬಂದಂತೆ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಎಪಿಎಂಸಿ ಬಳಿಯೇ ರಾತ್ರಿ ವೇಳೆ ಸಿಕ್ಕಿಬಿದ್ದ ಬೈಕ್ ಹಾಗೂ ಮಹೀಂದ್ರಾ ವಾಹನದಲ್ಲಿ ಲಕ್ಷಾಂತರ ರೂ. ಮದ್ಯ ಸಾಗಣೆ ಮಾಡಲಾಗುತ್ತಿತ್ತು, ಅಕ್ರಮ ಮದ್ಯ ಸಾಗಣೆ ಹಿನ್ನೆಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದನ್ನು ಓದಿ:ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

    ಕಳ್ಳ ವ್ಯವಹಾರದಲ್ಲಿ ಸಿಕ್ಕಿಬಿದ್ದರೂ ಇನ್ಸ್ ಪೆಕ್ಟರ್ ಮೋನಪ್ಪ ಅಧಿಕಾರದಲ್ಲಿ ಮುಂದುವರಿದಿದ್ದು ಕೂಡಲೇ ಅಮಾನತ್ತುಗೊಳಿಸುವಂತೆ ಅನ್ಯಾಯಕ್ಕೊಳಗಾದ ಮದ್ಯದ ಅಂಗಡಿಗಳ ಮಾಲೀಕರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಲಾಕ್ ಡೌನ್‍ನಲ್ಲೂ ಕರ್ತವ್ಯ ಲೋಪವೆಸಗಿ ಅಮಾನತ್ತಾಗಿದ್ದ ಅಬಕಾರಿ ನಿರೀಕ್ಷಕ ಮೋನಪ್ಪ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪಗಳನ್ನ ಹೊತ್ತಿದ್ದಾರೆ.

  • ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಸೋನಾ ಮಸೂರಿ ಎಂದು ಮಾರಾಟ – ಮಾಲೀಕ ಬಂಧನ

    ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಸೋನಾ ಮಸೂರಿ ಎಂದು ಮಾರಾಟ – ಮಾಲೀಕ ಬಂಧನ

    ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಸಮಯದಲ್ಲಿ ಬಡ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ನೀಡಿದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಸೋನಾ ಮಸೂರಿ ಎಂದು ಮಾರಾಟ ಮಡುತ್ತಿದ್ದ ರೈಸ್ ಮಿಲ್ ಮಾಲೀಕನನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವೇಣುಗೋಪಾಲ ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿ ಬಳಿ ಇರೋ ಕೈಗಾರಿಕಾ ಪ್ರದೇಶದಲ್ಲಿ ಸಪ್ತಗಿರಿ ರೈಸ್ ಮಿಲ್ ನಡೆಸುತ್ತಿರುವ ಈತ ಸರ್ಕಾರದ ಪಡಿತರ ಅಕ್ಕಿಗೆ ಕನ್ನ ಹಾಕಿ ಪಾಲಿಶ್ ಮಾಡಿ ವಿವಿಧ ಬ್ರ್ಯಾಂಡ್ ಗಳ ಹೆಸರಲ್ಲಿ ಸೋನಾ ಮಸೂರಿ ಅಕ್ಕಿ ಎಂದು ಜನರಿಗೆ ವಂಚಿಸುತ್ತಿದ್ದ. ಈ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ದಾಳಿ ಮಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರ ತಂಡ ವೇಣುಗೋಪಾಲನನ್ನು ಬಂಧಿಸಿದ್ದಾರೆ. ಇದನ್ನೂ ಓದಿ:ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

    ವೇಣುಗೋಪಾಲ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಸೋನಾ ಮಸೂರಿ ಅಕ್ಕಿ ಎಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ, ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಕರ್ನೂಲ್ ಸೋನಾ ಮಸೂರಿ, ನಂಬರ್ 1 ಸೇರಿದಂತೆ ಹಲವು ಬ್ರ್ಯಾಂಡ್‍ಗಳ ಹೆಸರಲ್ಲಿ ಜನರಿಗೆ ದುಬಾರಿ ಬೆಲೆಗೆ ಮಾರುತ್ತಿದ್ದ ಮತ್ತು ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿದ್ದ.

    ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ರೈಸ್ ಮಿಲ್ ಚಾಲನೆ ಮಾಡುತ್ತಿದ್ದ. ದಾಳಿ ವೇಳೆ ರೈಸ್ ಮಿಲ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 350 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ಮಾಲೀಕ ಹೇಳಿದ ಕೆಲಸವನ್ನು ಸಾಮಾನ್ಯವಾಗಿ ಗಿಳಿಗಳು ಮಾಡುತ್ತವೆ. ಆದರೆ ಗಿಳಿಯೊಂದು ತನ್ನ ಮಾಲೀಕ ನುಡಿಸುತ್ತಿದ್ದ ಗಿಟಾರ್ ವಾದ್ಯಕ್ಕೆ ಹಾಡನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ‘ಫ್ಲಾಪ್ ಇರಾ ಆರೆಂಜ್ ಕೋಟ್ ಗಾಯ್’ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮಾಲೀಕ ಫ್ರಾಂಕ್ ಗಿಟಾರ್ ನುಡಿಸುವ ಅಭ್ಯಾಸ ಹೊಂದಿದ್ದು, ಅವರು ಗಿಟಾರ್ ನುಡಿಸುವಾಗಲೆಲ್ಲ ಗಿಳಿ ಮೆಲೋಡಿಯಾಗಿ ಹಾಡು ಹೇಳುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್‍ಗೆ ಮಾಡಿದ್ದೇನು ಗೊತ್ತಾ?

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 35 ಲಕ್ಷ ವೀವ್ಸ್ ಆಗಿದ್ದು, 70 ಸಾವಿರ ರೀ ಟ್ವೀಟ್ ಮತ್ತು 262 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಈ ವೀಡಿಯೋ ನೋಡಿ ಅನೇಕ ಮಂದಿ ಇದು ಅದ್ಭುತ ಗಿಳಿ ಇಲ್ಲಿಯವರೆಗೂ ಇಂತಹ ಗಿಳಿಯನ್ನು ನಾನು ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಕೊರೊನಾ ನಿಯಮ ಉಲ್ಲಂಘಿಸಿ ಕೋಚಿಂಗ್ ಸೆಂಟರ್ ಓಪನ್- ಮಾಲೀಕ ಅರೆಸ್ಟ್

    ಕೊರೊನಾ ನಿಯಮ ಉಲ್ಲಂಘಿಸಿ ಕೋಚಿಂಗ್ ಸೆಂಟರ್ ಓಪನ್- ಮಾಲೀಕ ಅರೆಸ್ಟ್

    ಅಹಮದಾಬಾದ್: ಕೊರೊನಾ ನಿಮಯವನ್ನು ಉಲ್ಲಂಘಿಸಿ ಕೋಚಿಂಗ್ ಸೆಂಟರ್ ಓಪನ್ ಮಾಡಿ 555 ವಿದ್ಯಾರ್ಥಿಗಳಿಗೆ ಒಂದು ಕಡೆ ಸೇರಿಸಿ ಕೊಚಿಂಗ್ ನೀಡುತ್ತಿದ್ದ ಕೋಚಿಂಗ್ ಸೆಂಟರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

    ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಗುಜರಾತ್‍ನ ರಾಜ್ ಕೋಟ್ ಜಿಲ್ಲೆಯ ಜಸ್ದಾನ್ ನಗರದ ಕೋಚಿಂಗ್ ಸೆಂಟರ್ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿದ್ದು,  ಮಾಲೀಕ ಜಯ್ ಸುಖ್ ಸಂಖಾಲ್ವಾ(39 )ಎಂದು ಗುರುತಿಸಲಾಗಿದೆ. ಸೋಮವಾರ ಜಯ್ ಸುಖ್‍ನನ್ನು ಬಂಧಿಸಲಾಗಿದೆ. ದಾಳಿ ನಡೆಸಿದ ವೇಳೆ 550ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಿದ್ದರು ಎಂದು ರಾಜ್ ಕೋಟ್ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ತಿಳಿಸಿದ್ದಾರೆ.

    ಕೋವಿಡ್ 19 ಮಾರ್ಗಸೂಚಿ ಹಾಗೂ ಪೊಲೀಸ್ ಅಧಿಸೂಚನೆಯನ್ನು ಉಲ್ಲಂಘಿಸಿ ಸೋಂಕನ್ನು ಹರಡಲು ಕಾರಣಕರ್ತನಾಗಿರುವ ಜಯ್ ಸುಖ್ ನನ್ನು ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಬಂಧಿಸಲಾಗಿದ್ದು, ವಿದ್ಯಾರ್ಥಿಗಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಮೀನಾ ವಿವರಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಜವಾಹರ್ ನವೋದಯ ವಿದ್ಯಾಲಯ ಮತ್ತು ಬಾಲಚಾಡಿ ಸೈನಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಜಯ್ ಸುಖ್ ಪ್ರವೇಶ ಪರೀಕ್ಷೆಯ ಕೋಚಿಂಗ್ ನೀಡುತ್ತಿದ್ದು, ಈತ ಕೋಚಿಂಗ್ ಕಮ್ ಹಾಸ್ಟೆಲ್ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.

  • ಮಾಲೀಕನ ಮನೆಯಲ್ಲೆ ಕೆಲಸಗಾರನಿಂದ ಕಳ್ಳತನ- 24 ಗಂಟೆಯಲ್ಲೆ ಆರೋಪಿ ಅಂದರ್

    ಮಾಲೀಕನ ಮನೆಯಲ್ಲೆ ಕೆಲಸಗಾರನಿಂದ ಕಳ್ಳತನ- 24 ಗಂಟೆಯಲ್ಲೆ ಆರೋಪಿ ಅಂದರ್

    ಹುಬ್ಬಳ್ಳಿ: ಕೆಲಸ ಮಾಡುವ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು 24 ಗಂಟೆಯಲ್ಲೆ ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ದೇಶಪಾಂಡೆ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧರ್ಮರಾಮ್ ಧರ್ಮೆಂದ್ರ ಗೋವರ್ಧನ ರಾಮ್ ಚೌಧರಿ ಎಂಬವನು ಬಂಧಿತ ಆರೋಪಿಯಾಗಿದ್ದಾನೆ.

    ಹುಬ್ಬಳ್ಳಿ ದೇಶಪಾಂಡೆನಗರದ ಗುರು ಅಪಾರ್ಟ್‍ಮೆಂಟ್‍ನ ಮಹೇಶ ಎಂಬವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿ, 4,75,000 ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು 24 ಗಂಟೆಯಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯಿಂದ 4 ಲಕ್ಷ 73 ಸಾವಿರ ನಗದು ವಶಕ್ಕೆ ಪಡೆದಿದ್ದು, ಹಣ ಬಚ್ಚಿಟ್ಟಿದ್ದ ಬಿಳಿ ಬಣ್ಣದ ಬ್ಯಾಗ್ ಸಮೇತ ಪತ್ತೆ ಮಾಡಿದ್ದಾರೆ.