Tag: ಮಾಲೀಕ

  • ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ಗಾಂಧೀನಗರ: ನಾನ್ ವೆಜ್ ಊಟ ಮಾಡಲು ಹೋಟೆಲ್ ಬಂದ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪದಡಿ ಹೋಟೆಲ್ ಮಾಲೀಕನನ್ನು (Hotel owner) ಪೊಲೀಸರು ಬಂಧಿಸಿದ್ದಾರೆ.

    ರೆಸ್ಟೋರೆಂಟ್ ಮಾಲೀಕನ ಈ ಕೃತ್ಯದ ಬಗ್ಗೆ ತಿಳಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್ (Restaurant) ಮೇಲೆ ದಾಳಿ ನಡೆಸಿದ ಪೊಲೀಸರು ಫ್ರಿಡ್ಜ್‌ನಲ್ಲಿದ್ದ (Fridge) 60 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸೂರತ್‍ನ(Surat) ಲಾಲ್‍ಗೇಟ್ ಪೊಲೀಸ್ ಠಾಣೆಯಲ್ಲಿ (Police Station) ರೆಸ್ಟೋರೆಂಟ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

    ಹೊಡಿಬಂಗ್ಲಾ (Hodibangla) ಪ್ರದೇಶದಲ್ಲಿರುವ ಈ ನಾನ್‍ವೆಜ್ ರೆಸ್ಟೋರೆಂಟ್‍ನಲ್ಲಿ ಮಾಂಸಾಹಾರ (Non-veg) ಹೆಸರಿನಲ್ಲಿ ದನದ ಮಾಂಸ ಬಡಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯ (Hindu Organisations) ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ತನಿಖೆ ಆರಂಭಿಸಿ ದೃಢಪಡಿಸಿಕೊಂಡು, ಈ ವಿಚಾರವನ್ನು ಲಾಲ್‍ಗೇಟ್(Lalgate) ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಹೆಂಡತಿ ಮಕ್ಕಳು ಮಲಗಿದ್ದಾಗಲೇ ವ್ಯಕ್ತಿಯ ಬರ್ಬರ ಹತ್ಯೆ

    ಸೆಪ್ಟೆಂಬರ್ 11 ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಫ್ರಿಡ್ಜ್‌ನಲ್ಲಿ 6 ಚೀಲಗಳಲ್ಲಿ ಇರಿಸಲಾಗಿದ್ದ 60 ಕಿಲೋಗ್ರಾಂಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡರು. ನಂತರ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ತಮ್ಮ ಸಮ್ಮುಖದಲ್ಲಿಯೇ ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡು ವಿಧಿ ವೈಜ್ಞಾನಿಕ ಪ್ರಯೋಗಾಲಯಕ್ಕೆ (Forensic Scientific Laboratory) ಪೊಲೀಸರು ಕಳುಹಿಸಿದ್ದಾರೆ.

    ಸೆಪ್ಟೆಂಬರ್ 14 ರಂದು ಎಫ್‍ಎಸ್‍ಎಲ್ ವರದಿಯನ್ನು ಸ್ವೀಕರಿಸಿದ ನಂತರ, ಅದು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಬಳಿಕ ಲಾಲ್‍ಗೇಟ್ ಠಾಣೆ ಪೊಲೀಸರು (Lalgate police station) ಪ್ರಕರಣ ದಾಖಲಿಸಿ ರೆಸ್ಟೋರೆಂಟ್ ಮಾಲೀಕ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್ ನನ್ನು ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಇದೀಗ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್‍ಗೆ ದನದ ಮಾಂಸ ಪೂರೈಸುತ್ತಿದ್ದ ಮತ್ತೋರ್ವ ಆರೋಪಿ ಅನ್ಸಾರ್ ತಲೆ ಮರೆಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ: ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಫ್ಯಾಕ್ಟರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಸಹ ಮಾಲೀಕ ಪತ್ತೆಯಾಗಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಅನಧಿಕೃತವಾಗಿ ಫ್ಯಾಕ್ಟರಿ ಆರಂಭಿಸಿ 3 ಜೀವಗಳನ್ನು ಬಲಿಪಡೆದು, ಇದೀಗ ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದೆ. ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್

    ಮೃತ ವಿಜಯಲಕ್ಷ್ಮಿ ಪತಿ ವೀರಭದ್ರ ದೂರಿನ ಆಧಾರದ ಮೇಲೆ ಐಪಿಸಿ 286, 337, 338, 304, ಎಕ್ಸ್‌ಪ್ಲೋಸಿವ್ ಆ್ಯಕ್ಟ್ 1908 ಅಡಿ ಕೇಸ್ ದಾಖಲಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ್‌ನನ್ನು ಈಗಾಗಲೇ ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ

    ಘಟನೆ ನಡೆದು 4 ದಿನಗಳಾದರೂ ಪ್ರಕರಣದ ಪ್ರಮುಖ ಆರೋಪಿ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್ ಇನ್ನೂ ಬಂಧನವಾಗಿಲ್ಲ. ಹೀಗಾಗಿ ಮೃತರ ಕುಟುಂಬಸ್ಥರು, ಗಾಯಾಳುಗಳ ಕುಟುಂಬಸ್ಥರು ಸೇರಿ ಫ್ಯಾಕ್ಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಗದಗ: ಊಟದ ಬಿಲ್ ಕೇಳಿದಕ್ಕೆ ಕುಡಿದ ಮತ್ತಿನಲ್ಲಿ 6 ಜನ ಪುಂಡರು ಡಾಬಾ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ನಡೆದಿದೆ.

    ಶ್ರೀಶೈಲ ಕಳ್ಳಿಮಠ ಎಂಬವರಿಗೆ ಸೇರಿದ ಲಕ್ಕಿ ಡಾಬಾ ಪೀಸ್, ಪೀಸ್ ಆಗಿದೆ. ಮುಶಿಗೇರಿ ಗ್ರಾಮದ ಅರವಿಂದ್ ಅಂಗಡಿ ಹಾಗೂ ಸ್ನೇಹಿತರು ಸೇರಿ ದಾಂಧಲೆ ಮಾಡಿದ್ದಾರೆ. ಅರವಿಂದ್ ಅಂಗಡಿ ಬಾಗಲಕೋಟೆ ನವನಗರ ಠಾಣೆ ಪ್ರೋಫೆಷನಲ್ ಪಿಎಸ್ ಆಗಿ ಕೆಲಸ ಮಾಡುತ್ತಿದ್ದು, ಇವರ ಜೊತೆ ಆರ್ಮಿ ಯುವಕರು ಸಹ ಇದ್ದರು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ರಜೆಗೆಂದು ಊರಿಗೆ ಬಂದಿದ್ದ ಅರವಿಂದ್ ಅಂಗಡಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಆರ್ಮಿ ಯುವಕ ಹಾಗೂ ಇತರೆ 6 ಜನ ಸ್ನೇಹಿತರೊಂದಿಗೆ ಊಟಕ್ಕಾಗಿ ಡಾಬಾಗೆ ಬಂದಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದಕ್ಕೆ ನಾವು ಯಾರು ಅಂತ ತಿಳಿದಿದೆಯಾ? ನಮ್ಮನ್ನೇ ಬಿಲ್ ಕೇಳ್ತಿಯಾ ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ ಖ್ಯಾತೆ ತೆಗೆದಿದ್ದಾರೆ.

    ನೂರಾರು ರೂಪಾಯಿ ಕಡಿಮೆ ಕೊಡಿ. ಆದರೆ ಬಿಲ್ ಕೊಡಿ ಅಂದಿದಕ್ಕೆ ಬಾಟಲ್‍ನಿಂದ ಮಾಲೀಕ ಶ್ರೀಶೈಲನ ತಲೆಗೆ ಹೊಡೆದಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗುತ್ತಿ ಮಾಲೀಕನನ್ನು ಅಲ್ಲಿಯೇ ಇದ್ದ ಕೆಲಸಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಡಾಬಾದಲ್ಲಿರುವ ಫ್ರಿಜ್, ಕೌಂಟರ್, ಕಬಾಡ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಅನೇಕ ಪೀಠೋಪಕರಣಗಳನ್ನು ಒಡೆದುಹಾಕಿ ವಿಕೃತಿ ಮೆರೆದಿದ್ದಾರೆ. ಇವರ ಅಟ್ಟಹಾಸಕ್ಕೆ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ನಲುಗಿಹೋಗಿದ್ದಾರೆ. ಈ ಎಲ್ಲಾ ವೀಡಿಯೋ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Live Tv
    [brid partner=56869869 player=32851 video=960834 autoplay=true]

  • ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ನವದೆಹಲಿ: ನೆರೆಹೊರೆಯವರ ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ನಾಯಿ ಹಾಗೂ ಮೂವರಿಗೆ ಕಬ್ಬಿಣದ ರಾಡ್‍ನಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಘಟನೆಯಲ್ಲಿ ನಾಯಿ ಹಾಗೂ ಮೂವರು ವ್ಯಕ್ತಿ ಗಾಯಗೊಂಡಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಸೋಮವಾರ ಮುಂಜಾನೆ ಧರ್ಮವೀರ್ ದಹಿಯಾ ಓಡಾಡುತ್ತಿರುವ ವೇಳೆ ನೆರೆಮನೆಯ ರಕ್ಷಿತ್ ಅವರು ಸಾಕಿದ್ದ ನಾಯಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳುತ್ತಿರುವುದರಿಂದ ಕೋಪಗೊಂಡ ಧರ್ಮವೀರ್ ದಹಿಯಾ ನಾಯಿಯ ಮೇಲೆ ರಾಡ್‍ನಿಂದ ಹೊಡೆದಿದ್ದಾನೆ.

    ಈ ವೇಳೆ ನಾಯಿಯನ್ನು ರಕ್ಷಿಸಲು ಬಂದ ನಾಯಿಯ ಮಾಲೀಕನ ಮೇಲೂ ರಾಡ್‍ನಿಂದ ಹಲ್ಲೆ ನಡೆಸಿದ್ದಾನೆ. ನಂತರ ಆತನನ್ನು ತಡೆಯಲು ಬಂದ ಮತ್ತೋರ್ವ ವ್ಯಕ್ತಿ ಕೈಯನ್ನು ಕಚ್ಚಿ, ತಲೆಗೆ ಹೊಡೆದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ಸದ್ಯ ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ನಾಯಿಯ ಮಾಲೀಕ ರಕ್ಷಿತ್ ಹೇಳಿಕೆಯ ಮೇರೆಗೆ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ

    ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ

    ಹಾಸನ: ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಿರುವ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಇದು ಜನರಿಗೆ ತಿಳಿದಿಲ್ಲ.

    ಇದೀಗ ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಕಳೆದ ವರ್ಷ ಹಳೇಬೀಡು ವ್ಯಾಪ್ತಿಯಲ್ಲಿ ಈ ಪ್ರಕರಣ 2021ರಲ್ಲಿ ದಾಖಲಾಗಿತ್ತು. ಈ ಹಿನ್ನೆಲೆ 2022ರ ಮೇ 26 ರಂದು ನ್ಯಾಯಾಲಯದಲ್ಲಿ ಸಿವಿಲ್ ಜೆಎಂಎಫ್‍ಸಿ ನ್ಯಾಯಾಧೀಶ ರಾದ ಸಿ.ಪ್ರಸನ್ನ ಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಾಧೀಶರು, ಅಪ್ರಾಪ್ತ ಬಾಲಕ ನಿಯಮ ಉಲ್ಲಂಘಿಸಿದ ಹಿನ್ನೆಲೆ 20 ಸಾವಿರ ರೂ. ದಂಡ ವಿಧಿಸುವ ಮೂಲಕ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್ 

    ಬೇಲೂರಿನಲ್ಲಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್ ಬಿದ್ದಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಬಾರಿ ದಂಡ ಬಿದ್ದ ಮೇಲೆ ತಂದೆ-ತಾಯಿಗಳು ಮಕ್ಕಳ ಕೈಗೆ ಸದ್ಯಕ್ಕೆ ವಾಹನಗಳನ್ನು ನೀಡುತ್ತಿಲ್ಲ.

    court order law

    ಈ ಕೇಸ್‍ಗೆ ಸಂಬಂಧಿಸಿದಂತೆ ಕಲಂ.184 ಅಡಿಯಲ್ಲಿ ಕೇಸ್ ದಾಖಲಿಸಿ ಚಾಲನೆ ಮಾಡುತ್ತಿದ್ದ ಬಾಲಕ ಅಜಾಗರೂಕತೆ, ಹೆಲ್ಮೆಟ್ ಇಲ್ಲದೆ ಚಾಲನೆ, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ್ದರಿಂದ ತಲಾ ಒಂದೊಂದು ಸಾವಿರದಂತೆ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲೀಕನಿಗೆ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯಲ್ಲಿ ವಿದ್ಯುಕ್ತ ಚಾಲನೆ 

  • ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ನ್ಯೂಯಾರ್ಕ್: ಸಾಮಾನ್ಯವಾಗಿ ನಾಯಿಗಳು ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ. ಆದರೆ ಅಮೇರಿಕಾದ ಸೌತ್ ಕೆರೊಲಿನಾದ ನಾಯಿಯೊಂದು ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಇನ್ನೂ ಜೀವಂತವಾಗಿದ್ದು, ಗಿನ್ನೆಸ್ ದಾಖಲೆ ಬರೆದಿದೆ.

     

    View this post on Instagram

     

    A post shared by Pebbles (@pebbles_since_2000)

    ಈ ಕುರಿತು ಶ್ವಾನದ ಮಾಲೀಕರು ನಾಯಿಯ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಾರ್ಚ್ 28, 2000 ರಂದು ಜನಿಸಿದ ಪೂಚ್ ಎಂಬ ಹೆಸರಿನ ನಾಯಿಯ ವಯಸ್ಸು 22 ವರ್ಷ. ಈ ಮುದ್ದಾದ ಟೋಬಿಕೀತ್ ಎಂಬ ಜಾತಿಯ ನಾಯಿಯು ಹಗಲಿನಲ್ಲಿ ಮಲಗಲು ಇಷ್ಟಪಡುತ್ತದೆ ಹಾಗೂ ರಾತ್ರಿಯಿಡೀ ಎಚ್ಚರವಾಗಿರುತ್ತದೆ ಎಂದು ಅದರ ಮಾಲೀಕ ಜೂಲಿ ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

     

    View this post on Instagram

     

    A post shared by Pebbles (@pebbles_since_2000)

    ಪೂಚ್ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಮ್ಮೊಂದಿಗಿದ್ದು, ಅವಳು ಯಾವಾಗಲೂ ನಮ್ಮ ಕುಟುಂಬದ ದಾರಿದೀಪವಾಗಿದ್ದಾಳೆ. ನಮ್ಮ ಜೀವನದಲ್ಲಿಯೇ ನಾವು ಅವಳನ್ನು ಮರೆಯೊದಕ್ಕೆ ಸಾಧ್ಯವಿಲ್ಲ ಎಂದು ಫೋಟೋಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಅಮೇರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಮನುಷ್ಯನ ಜೀವನದ 15 ವರ್ಷ ನಾಯಿ ಜೀವನದ 1 ವರ್ಷಕ್ಕೆ ಸಮನಾಗಿರುತ್ತದೆ. ನಾಯಿಗೆ ಎರಡು ವರ್ಷವು ಮನುಷ್ಯನಿಗೆ ಸುಮಾರು ಒಂಬತ್ತು ವರ್ಷಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.

     

  • ಮನೆಯಲ್ಲಿ ಮೋದಿ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಮಾಲೀಕ ಬೆದರಿಕೆ

    ಮನೆಯಲ್ಲಿ ಮೋದಿ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಮಾಲೀಕ ಬೆದರಿಕೆ

    ಭೋಪಾಲ್: ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬ ಮನೆಯಲ್ಲಿ ಮೋದಿ ಫೋಟೋ ಹಾಕಿದ್ದಕ್ಕೆ ಮಾಲೀಕ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ವ್ಯಕ್ತಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಇವರು ಪೀರ್ ಗಲಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮಾಲೀಕ ಬೆದರಿಕೆ ಹಾಕುತ್ತಿದ್ದಂತೆಯೇ ವ್ಯಕ್ತಿ ಜಾನ್‍ಸುನ್‍ವಾಯಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಹೀಗಾಗಿ ಮನೆಯಲ್ಲಿ ಅವರ ಫೋಟೋ ಇಟ್ಟಿದ್ದೆ. ಇದನ್ನು ಗಮನಸಿರುವ ಮಾಲೀಕ ನನಗೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ.

    ಶರೀಫ್, ಯಾಕೂಬ್ ಹಾಗೂ ಸುತಾನ್ ಎಂಬ ಮೂವರು ಕೆಲ ದಿನಗಳಿಂದ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೆ ಮನೆಯಲ್ಲಿರುವ ಮೋದಿ ಫೋಟೋ ತೆಗೆಯುವಂತೆ ಒತ್ತಡ ಹಾಕುತ್ತಿದ್ದಾರೆ. ರಂಜಾನ್ ಒಳಗಡೆ ಫೋಟೋ ತೆಗೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ನಾನು ಮೋದಿ ಫೋಟೋ ತೆಗೆಯಲು ಒಪ್ಪಿಗೆ ನಿಡಲಿಲ್ಲ. ಈ ವೇಳೆ ಅವರು, ನೀನು ಫೋಟೋ ತೆಗೆಯದಿದ್ದರೆ ಮನೆಯಿಂದ ಆಚೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಅವರು ಕ್ಯಾರೇ ಎಂದಿಲ್ಲ ಎಂದು ಯೂಸುಫ್ ಆರೋಪ ಮಾಡಿದ್ದಾರೆ.  ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯೂಸುಫ್, ನಾನು ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಮೋದಿ ಹಾಗೂ ಸಂಘ ಪರಿವಾರದ ಪುಸ್ತಕಗಳನ್ನು ಓದಿದ್ದೇನೆ. ಹೀಗಾಗಿ ನಾನು ಮೋದಿಯವರ ಫೋಟೋವನ್ನು ಮನೆಯಲ್ಲಿ ಇಟ್ಟಿದ್ದೇನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇನೆ. ಈ ಸಂಬಂಧ ತನಿಖೆ ನಡೆಸುತ್ತಾರೆ ಎಂದು ನಂಬಿರುವುದಾಗಿ ಆತ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ- 7 ಮಂದಿ ಅಮಾನತು

  • ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

    ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

    ನವದೆಹಲಿ: ನಾಯಿ ಬೊಗಳಿದ್ದಕ್ಕೆ ಹುಡುಗನೊಬ್ಬ 85 ವರ್ಷದ ವೃದ್ಧನ ಹತ್ಯೆಗೈದಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

    ಮಾರ್ಚ್ 18ರಂದು ನಜಾಫ್‍ಗಢದಲ್ಲಿ ನಡೆದ ಹೋಳಿ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, 17 ವರ್ಷದ ಹುಡುಗ ತನ್ನ ನೆರೆಮನೆಗೆ ಬಲವಂತವಾಗಿ ನುಗ್ಗಿದಾಗ ವೃದ್ಧ ದಂಪತಿ ಸಾಕಿದ್ದ ನಾಯಿ ಆತನನ್ನು ಕಂಡ ಬೊಗಳಿದೆ. ಇದರಿಂದ ಕೋಪಗೊಂಡ ಹುಡುಗ ನಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ನಾಯಿಯ ಮಾಲೀಕ ಅಶೋಕ್ ಕುಮಾರ್ ಅವರಿಗೆ ಲೋಹದ ರಾಡ್‍ನಿಂದ ಹುಡುಗ ಥಳಿಸಿದ್ದಾನೆ. ಇದರಿಂದ ತೀವ್ರವಾಗಿ ಅಶೋಕ್ ಅವರು ಗಾಯಗೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    crim

    ನಂತರ ಅಶೋಕ್ ಅವರ ಪತ್ನಿ ಮೀನಾ ನಡೆದ ಎಲ್ಲ ಘಟನೆಯನ್ನು ನಜಾಫ್‍ಗಢ ಪೊಲೀಸ್ ಠಾಣೆಯ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅಶೋಕ್ ಕುಮಾರ್ ಅವರನ್ನು ರಾವ್ ತುಲಾ ರಾಮ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

    ಆರಂಭದಲ್ಲಿ ಹುಡುಗನನ್ನು ಬಂಧಿಸಿದ್ದ ಪೊಲೀಸರು ಬಾಲಕ ಎಂಬ ಕಾರಣಕ್ಕೆ ಬಾಲನ್ಯಾಯ ಮಂಡಳಿಯಿಂದ ಬಿಡುಗಡೆಗೊಳಸಲಾಗಿತ್ತು. ಆದರೆ ಮಾರ್ಚ್ 20 ರಂದು ಗಾಯಗೊಂಡ ಅಶೋಕ್ ಅವರು ಮೃತಪಟ್ಟಿದ್ದು, ಹೀಗಾಗಿ ಮಾರ್ಚ್ 23 ರಂದು ಮತ್ತೊಮ್ಮೆ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಸದ್ಯ ಪೊಲೀಸರು ಮೃತ ವ್ಯಕ್ತಿಯ ಪತ್ನಿ ನೀಡಿದ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

  • ಮಗುವಿಗೆ ಕಚ್ಚಿದ ನಾಯಿ- ಮಾಲೀಕರ ಬಂಧನ

    ಮಗುವಿಗೆ ಕಚ್ಚಿದ ನಾಯಿ- ಮಾಲೀಕರ ಬಂಧನ

    ನವದೆಹಲಿ: 10 ವರ್ಷದ ಬಾಲಕನಿಗೆ ಸಾಕು ನಾಯಿ ಕಚ್ಚಿದ ಪ್ರಕರಣದಲ್ಲಿ ಇಬ್ಬರು ನಾಯಿ ಮಾಲೀಕರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

    ಬಾಲಕನಿಗೆ ನಾಯಿ ಕಚ್ಚಿದೆ. ಬಾಲಕನ ಕುಟುಂಬದವರು ಈ ಕುರಿತಾಗಿ ಕೇಳಿದಾಗ ನಾಯಿ ಮಾಲೀಕರು ಅವರ ಮೇಲೆ ನಡೆಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಸದೋಪುರ ಗ್ರಾಮದಲ್ಲಿ ಬಾಲಕನಿಗೆ ನಾಯಿ ಕಚ್ಚಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಯಿ ಮಾಲೀಕರ ವಿರುದ್ಧ ದೂರು ದಾಖಲಾಗಿದದೆ ಎಂದು ಬಾದಲ್‍ಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ರಾಟ್ ವೀಲರ್ (Rottweiler) ತಳಿಯ ನಾಯಿ ಸಾಕಿದ್ದರು. ಮನೆಯ ಕಾಂಪೌಂಡ್‍ನಲ್ಲಿ ಸರಪಳಿಯಲ್ಲಿ ಕಟ್ಟಿ ಹಾಕಿದ್ದಾರೆ. ನಾಯಿ ದಾಳಿ ಮಾಡುತ್ತಿರುವುದನ್ನು ಮಾಲೀಕರು ಮೇಲ್ಛಾವಣಿಯ ಮೇಲೆ ನಿಂತು ನೋಡುತ್ತಿದ್ದರು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಸೋಮವಾರ ಬೆಳಿಗ್ಗೆ, ನಾಯಿಯು ಬಾಲಕನ ಮೇಲೆ ದಾಳಿ ಮಾಡಿದೆ. ಆಗ ಅಲ್ಲೇ ಇದ್ದ ನೆರೆಮನೆಯವರು ನಾಯಿಯನ್ನು ಓಡಿದ್ದಾರೆ. ಐಪಿಸಿ ಸೆಕ್ಷನ್ 452 (ಅತಿಕ್ರಮಣ), 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 323 (ನೋಯಿಸುವ ಶಿಕ್ಷೆ) ಮತ್ತು 504 ಉದ್ದೇಶಪೂರ್ವಕವಾಗಿ ನೋವುಂಟುಮಾಡುವ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ

  • ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ದೋಚಿದ ಖತರ್ನಾಕ್‌ – ಮಾಲೀಕನಿಗೆ ಪಂಗನಾಮ

    ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ದೋಚಿದ ಖತರ್ನಾಕ್‌ – ಮಾಲೀಕನಿಗೆ ಪಂಗನಾಮ

    ಬೆಂಗಳೂರು: ಕೆಲಸಕ್ಕೆ ಇದ್ದ ಅಂಗಡಿಯಲ್ಲೇ 30 ಲಕ್ಷ ರೂಪಾಯಿ ದೋಚಿ ಕೆಲಸಗಾರ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಗಣೇಶ್ ಹಣದೊಂದಿಗೆ ಪರಾರಿಯಾದ ವ್ಯಕ್ತಿಯಾಗಿದ್ದಾನೆ. ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೊರರಾಜ್ಯದ ಈತ, ಮಾಲೀಕ ಇಲ್ಲದ ಸಮಯದಲ್ಲಿ ಅಂಗಡಿಯಲ್ಲಿದ್ದ 30 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾನೆ.

    MONEY

    ಅಂಗಡಿ ಮಾಲೀಕ ಜಯಚಂದ್ರ ಅವರು ಹೇಳುವ ಪ್ರಕಾರ, ಬಿವಿಕೆ ಐಯ್ಯಂಗಾರ್ ರಸ್ತೆಯ ಮುರುದಾರ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಆರೋಪಿ ಗಣೇಶ್ ಕಳೆದ ಆರೇಳು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳಿಂದ ಗಣೇಶ್ ಕಾಣಿಸುತ್ತಿರಲಿಲ್ಲ.  ನಾನು ಆತ ವಾಪಸ್ ಬರಬಹುದು ಎಂದು ನೋಡಿದೆ. ಆದರೆ ಒಂದು ವಾರದಿಂದ ಆತ ಪತ್ತೆಯಾಗಿಲ್ಲ, ಸಂಪರ್ಕಕ್ಕೂ ಸಿಗಲಿಲ್ಲ. ಆಗ ಅನುಮಾನಗೊಂಡು ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ನೋಡಿದೆ, ಹಣ ಕಾಣಿಸಲಿಲ್ಲ. ನಾನು ಅಂಗಡಿಯಲ್ಲಿ ಇಟ್ಟಿದ್ದ 30 ಲಕ್ಷ ರೂಪಾಯಿ ನಗದನ್ನು ಡಿ.21ರಂದು ನಾನು ಇಲ್ಲದ ಸಮಯವನ್ನು ನೋಡಿ ಕದ್ದು ಪರಾರಿಯಾಗಿದ್ದಾನೆ ಎಂದು ದೂರಿದ್ದಾರೆ.

    ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜಯಚಂದ್ರ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಒಂದು ತಂಡ ಆರೋಪಿಯ ಜಾಡು ಹಿಡಿದು ರಾಜಸ್ಥಾನಕ್ಕೆ ಹೋಗಿದೆ. ಆರೋಪಿಯ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.