Tag: ಮಾಲೀಕ

  • ಟೀ ಕುಡಿದ ಹಣ ಕೇಳಿದಕ್ಕೆ ಬೇಕರಿ ಮಾಲೀಕನಿಗೆ ಹಲ್ಲೆ

    ಟೀ ಕುಡಿದ ಹಣ ಕೇಳಿದಕ್ಕೆ ಬೇಕರಿ ಮಾಲೀಕನಿಗೆ ಹಲ್ಲೆ

    ಬೆಂಗಳೂರು: ಟೀ ಮತ್ತು ಸಿಗರೇಟ್ ಪಡೆದ ಪುಂಡರಿಗೆ ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ನಾಲ್ಕು ಜನ ಕಿಡಿಗೇಡಿಗಳು ಹಲ್ಲೆ ನಡೆಸಿರುವಂತಹ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರಗೇಟ್ ಪಿಂಪಲ್ಸ್ ಮಾರ್ಟ್ ಬಳಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಜನ ಕಿಡಿಗೇಡಿಗಳು ಬೇಕರಿಗೆ ಬಂದು ಟೀ ಕುಡಿದಿದ್ದಾರೆ. ನಂತರ ಹಣ ಕೇಳಿದ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ಈ ನಾಲ್ಕು ಜನ ಕಿಡಿಗೇಡಿಗಳು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಈ ಕಿಡಿಗೇಡಿಗಳ ದುಂಡಾವರ್ತನೆಯ ದೃಶ್ಯಗಳು ಬೇಕರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಯುವಕರು ಸ್ಥಳೀಯ ನಿವಾಸಿಗಳಾಗಿದ್ದು ಪೊಲೀಸರ ಹಾಗು ಜನಪ್ರತಿನಿಧಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

    ಸದ್ಯ ಹಲ್ಲೆಗೊಳಗಾದ ಬೇಕರಿ ಮಾಲೀಕ ಬದ್ರುದ್ದೀನ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ರಕ್ಷಣೆ ಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಜಮಾನನೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ!

    ಯಜಮಾನನೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ!

    ಮಂಡ್ಯ: ನನ್ನ ಸಾವಿಗೆ ನನ್ನ ಯಜಮಾನರೆ ಕಾರಣ ಎಂದು ಲಾಡ್ಜ್ ಮಾಲೀಕನ ವಿರುದ್ಧ ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ, ಮದ್ದೂರು ಪಟ್ಟಣದ ಸಮೀಪ ಶಿವಪುರದಲ್ಲಿ ನಡೆದಿದೆ.

    40 ವರ್ಷದ ಮನು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿವಪುರದಲ್ಲಿರುವ ನೈದಿಲೆ ಲಾಡ್ಜ್ ಅನ್ನು ಮನು ನಡೆಸುತ್ತಿದ್ದರು. ನೈದಿಲೆ ಲಾಡ್ಜ್ ಮಾಲೀಕರಿಂದ ಸಂಪೂರ್ಣ ಲಾಡ್ಜ್ ಬಾಡಿಗೆ ಪಡೆದಿದ್ದ ಮನು ಅದರ ಉಸ್ತುವಾರಿ ತಾವೇ ನೋಡಿಕೊಳ್ಳುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿದ್ದು, ನನ್ನ ಸಾವಿಗೆ ಲಾಡ್ಜ್ ಮಾಲೀಕರೇ ಕಾರಣ ಎಂದು ಮನು ಡೆತ್ ನೋಟ್ ಬರೆದಿಟ್ಟು, ಲಾಡ್ಜ್‌ನಲ್ಲೇ ನೇಣಿಗೆ ಶರಣಾಗಿದ್ದಾನೆ.

    ಡೆತ್‍ನೋಟ್ ಅಲ್ಲಿ ಏನಿತ್ತು?
    ಅಡ್ವಾನ್ಸ್ ಸೇರಿದಂತೆ ಇನ್ನಿತರ ಹಣ ಲಾಡ್ಜ್ ಮಾಲೀಕನಿಂದ ನನಗೆ ಬರಬೇಕು. ಆದ್ದರಿಂದ ಆ ಹಣ ವಸೂಲಿ ಮಾಡಿ ನನ್ನ ತಾಯಿಗೆ ತಲುಪಿಸಿ. ಅಲ್ಲಿಯವರೆಗೂ ಲಾಡ್ಜ್ ಓಪನ್ ಮಾಡಲು ಬಿಡಬೇಡಿ ಎಂದು ಮನು ತನ್ನ ಸ್ನೇಹಿತರಿಗೆ ಡೆತ್‍ನೋಟ್‍ನಲ್ಲಿ ಮನವಿ ಮಾಡಿದ್ದಾನೆ. ಈ ಘಟನೆ ಸಂಬಂಧ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಲೀಕ ಬ್ಯಾಂಕ್ ಸಾಲ ಕಟ್ಟದ್ದಕ್ಕೆ ಬಾಡಿಗೆದಾರರ ಮನೆಗೂ ಬೀಗ!

    ಮಾಲೀಕ ಬ್ಯಾಂಕ್ ಸಾಲ ಕಟ್ಟದ್ದಕ್ಕೆ ಬಾಡಿಗೆದಾರರ ಮನೆಗೂ ಬೀಗ!

    ಬೆಂಗಳೂರು: ಮನೆ ಮಾಲೀಕ ತೆಗೆದುಕೊಂಡ ಸಾಲ ಕಟ್ಟದ್ದಕ್ಕೆ ಬ್ಯಾಂಕ್‍ನವರು ಬಾಡಿಗೆದಾರರ ಮನೆಗೂ ಬೀಗ ಹಾಕಿರುವ ಅಮಾನವೀಯ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.

    ಮನೆ ಮಾಲೀಕ ಕೇಶವ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಮನೆ ಮಾಲೀಕ ಕೇಶವ್ ಬ್ಯಾಂಕ್ ಸಾಲ ಮಾಡಿದ್ದಕ್ಕೆ ಕೋರ್ಟ್ ಆದೇಶದಂತೆ ಮಲ್ಲೇಶ್ವರಂ ಸೊಸೈಟಿ ಬ್ಯಾಂಕ್ ಮಂಗಳವಾರ ಮಧ್ಯಾಹ್ನ ಎಲ್ಲ 15 ಮನೆಗಳಿಗೂ ಬೀಗ ಹಾಕಿ ಮನೆಯವರನ್ನು ಹೊರಹಾಕಿದ್ದಾರೆ. ಇದರಿಂದಾಗಿ ಬಾಡಿಗೆದಾರರು ಪರದಾಡುವ ಸ್ಥಿತಿ ಎದುರಾಗಿದೆ.

    ಬಾಡಿಗೆದಾರರ ಪೈಕಿ ಎರಡು ದಿನಗಳ ಹಿಂದೆ ಕಂದಮ್ಮ ಐಸಿಯುನಿಂದ ಡಿಸ್ಚಾರ್ಜ್ ಆಗಿತ್ತು, ಈಗ ಬಾಣಂತಿ ಪರದಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಊಟ ತಿಂಡಿಯಿಲ್ಲದೇ 30ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು, ವಯಸ್ಸಾದವರು ನಿನ್ನೆ ರಾತ್ರಿಯಿಂದ ಪರದಾಡುತ್ತಿದ್ದಾರೆ. ಮನೆಗೆ ಬೀಗ ಹಾಕಿರುವುದರಿಂದ ಬಾಡಿಗೆದಾರರ ಬದುಕು ಬೀದಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಮಂಡ್ಯ: ಪತಿ ಮಾಡಿರುವ ಸಾಲಕ್ಕೆ ಜೀತವಿರಲು ಒಪ್ಪದ ಮಹಿಳೆಯೊಬ್ಬರನ್ನು ಬಲವಂತವಾಗಿ ಮಾಲೀಕರು ಕಾರಿನಲ್ಲಿ ಹೊತ್ತೊಯ್ದ ಘಟನೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ತಮಿಳುನಾಡು ಮೂಲದ ಜಾನಕಮ್ಮ (27) ಮಾಲೀಕರ ದೌರ್ಜನ್ಯಕ್ಕೆ ತುತ್ತಾದ ಮಹಿಳೆ. ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕನಾಗಿರುವ ಕುದರಗುಂಡಿ ಗ್ರಾಮದ ನಿವಾಸಿ ನಾಗೇಶ್ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದಿದ್ದಾನೆ.

    ನಡೆದದ್ದು ಏನು?
    ತಮಿಳುನಾಡು ಮೂಲದ ಜಾನಕಮ್ಮ ಹಾಗೂ ಪತಿ ಚಿನ್ನತಂಬಿ ಅವರು ಕೆಲಸಕ್ಕಾಗಿ ಮಂಡ್ಯ ಜಿಲ್ಲೆಗೆ ಬಂದಿದ್ದರು. ಈ ದಂಪತಿ ಹಲವು ವರ್ಷಗಳಿಂದ ಕುದರಗುಂಡಿ ಗ್ರಾಮದ ನಾಗೇಶ್ ಮನೆ ಮತ್ತು ತೋಟದಲ್ಲಿ ಜೀತವಿದ್ದು, ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಗಂಡ ಚಿನ್ನತಂಬಿ ಮೃತಪಟ್ಟಿದ್ದಾರೆ.

    ಇತ್ತ ಚಿನ್ನತಂಬಿ ನಾಗೇಶ್ ಬಳಿ 30 ಸಾವಿರ ರೂ. ಸಾಲ ಪಡೆದಿದ್ದರಂತೆ. ಸಾಲದ ಹಣವನ್ನು ತೀರಿಸಲಾಗದೇ ಜಾನಕಮ್ಮ 9 ತಿಂಗಳ ಹಿಂದೆ ಬೆಕ್ಕಳಲೆಗೆ ಬಂದು ನೆಲೆಸಿದ್ದರು. ಜಾನಮಕ್ಕ ಬೆಕ್ಕಳಲೆಯಲ್ಲಿ ವಾಸವಾಗಿದ್ದಾರೆ ಎಂದು ಅರಿತ ನಾಗೇಶ್ ಆತನ ಸಹಚರರಾದ ಕರಿಯಪ್ಪ ಹಾಗೂ ಪಾಂಡು ಕೆಎ 11, ಎಂ-2598 ಕೆಂಪು ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ನಾನು ಬರುವುದಿಲ್ಲ, ಬಿಟ್ಟು ಬಿಡಿ ಅಂತ ಎಷ್ಟೇ ಹಠ ಮಾಡಿದರೂ, ನಾಗೇಶ್ ಜಾನಕಮ್ಮನನ್ನು  ಕಾರಿನಲ್ಲಿ ಹೊತ್ತೊಯ್ದಿದ್ದಾರೆ.

    ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ನೋಡಿದ್ದ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಮದ್ದೂರು ಘಟಕದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಕುದರಗುಂಡಿ ಗ್ರಾಮಕ್ಕೆ ಬಂದ ಪೊಲೀಸರು ಜಾನಕಮ್ಮ ಅವರನ್ನು ರಕ್ಷಿಸಿ, ನಾಗೇಶ್‍ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯ ಶ್ರೀ ದುರ್ಗಾಂಬಾ ಬಸ್ ಮಾಲೀಕ ತಮಿಳುನಾಡಿನಲ್ಲಿ ಸಾವು

    ಉಡುಪಿಯ ಶ್ರೀ ದುರ್ಗಾಂಬಾ ಬಸ್ ಮಾಲೀಕ ತಮಿಳುನಾಡಿನಲ್ಲಿ ಸಾವು

    ಉಡುಪಿ: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನೀಲ್ ಚಾತ್ರ ಸಾವನ್ನಪ್ಪಿದ್ದಾರೆ. ವ್ಯವಹಾರ ಸಂಬಂಧಿ ಪ್ರವಾಸದಲ್ಲಿದ್ದ ಸುನೀಲ್ ಈ ಅವಘಡ ಸಂಭವಿಸಿದೆ.

    ತಮಿಳುನಾಡಿಗೆ ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಧ್ಯಾಹ್ನ ಸುಮಾರು ಮೂರು ಗಂಟೆ ವೇಳೆ ಈ ಘಟನೆ ನಡೆದಿದೆ. ಚಾಲಕ ಕೂಡ ಗಾಯಗೊಂಡಿದ್ದಾನೆ. ಸುನಿಲ್ ಛಾತ್ರ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಆಡಳಿತ ಪಾಲುದಾರರಾಗಿದ್ದು ತಂದೆಯ ಮಾಲೀಕತ್ವದ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು.

    ಮೃತ ಸುನೀಲ್ ಛಾತ್ರರು ವಿವಾಹಿತರಾಗಿದ್ದು, ಅವರ ಮೃತದೇಹ ಭಾನುವಾರ ಕುಂದಾಪುರ ತಲುಪಲಿದೆ. ಅಂತಾರಾಜ್ಯ ಮಟ್ಟದಲ್ಲಿಯೂ ಬಸ್ ಸಂಪರ್ಕ ಸೇವೆ ಕಲ್ಪಿಸಿದ್ದ ಛಾತ್ರ ಕುಟುಂಬ, ಕುಂದಾಪುರದ ಕುಗ್ರಾಮಗಳಿಗೂ ನಿತ್ಯ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿತ್ತು.

    ಸಾರ್ವಜನಿಕ ಸೇವೆಯ ವಿಷಯದಲ್ಲಿ ಶ್ರೀ ದುರ್ಗಾಂಬಾ ಜನಮನ್ನಣೆಗೆ ಪಾತ್ರವಾಗಿತ್ತು. ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಶ್ರೀ ದುರ್ಗಾಂಬಾ ಬಸ್ಸುಗಳು ಓಡಾಡುತ್ತಿತ್ತು. ಲಾಭಕ್ಕಿಂತ ಹೆಚ್ಚು ಜನಸೇವೆಗೆ ಶ್ರೀ ದುರ್ಗಾಂಬಾ ಒತ್ತುಕೊಡುತ್ತಿತ್ತು ಎಂದು ಪ್ರಯಾಣಿಕ ರಾಘು ಕುಂದಾಪುರ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

    ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

    -ಒಡೆಯನ ನಿರೀಕ್ಷೆಯಲ್ಲಿದೆ ಸಾಕು ನಾಯಿ

    ಮಡಿಕೇರಿ: ಪ್ರವಾಹ ನಿಂತ ಮೇಲೆ ಜಿಲ್ಲೆಯಲ್ಲಿ ದಿನಕ್ಕೊಂದು ಮನಕಲಕುವ ಘಟನೆಗಳು ವರದಿಯಾಗುತ್ತಿದ್ದು, ಹಟ್ಟಿಹೊಳೆ ಗ್ರಾಮದಲ್ಲಿ ಸಾಕುನಾಯಿಯೊಂದು ಕುಸಿದ ಮನೆಯ ಬಳಿಯೇ ಕಳೆದ ನಾಲ್ಕು ದಿನಗಳಿಂದ ಮಾಲೀಕನ ಬರುವಿಕೆಗಾಗಿ ಅನ್ನ-ಆಹಾರವಿಲ್ಲದೆ ಜಾಥಕ ಪಕ್ಷಿಯಂತೆ ಕಾಯುತ್ತಿದೆ.

    ಪ್ರವಾಹದಿಂದ ತಾಲೂಕಿನ ಹಟ್ಟಿಹೊಳೆ ಗ್ರಾಮವು ಸಂಪೂರ್ಣ ನಾಶವಾಗಿ ಹೋಗಿದ್ದು, ಗ್ರಾಮದ ಬಹುತೇಕ ಜನರು ನಿರಾಶ್ರಿತರಾಗಿ ಪರಿಹಾರ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಹಟ್ಟಿಹೊಳೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ಕುಸಿದು ಬಿದ್ದಿರುವ ಮನೆಯ ಬಳಿಯೇ ಸಾಕು ನಾಯಿಯೊಂದು ಗೋಳಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಇದನ್ನೂ ಓದಿ: ಕಣ್ಣಮುಂದೆಯೇ ವ್ಯಕ್ತಿ ಭೂ ಸಮಾಧಿ- ಬಟ್ಟೆ ಒಣಹಾಕುವಾಗ ಭೂಕುಸಿತವಾಗಿ ನಾಪತ್ತೆ

    ಸುಮಾರು 4 ದಿನಗಳಿಂದಲೂ ನಾಯಿಯು ಅನ್ನ-ಆಹಾರವಿಲ್ಲದೆ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದ್ದು, ನನ್ನ ಒಡೆಯ ಈಗ ಬರುತ್ತಾನೆ, ಆಗ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದೆ. ಅನ್ನ-ಆಹಾರ ವಿಲ್ಲದೇ ಬಳಲಿದ್ದರೂ, ತನ್ನ ನಿಯತ್ತನ್ನು ಬಿಡದೇ ಒಡೆಯನ ಕುಸಿದು ಬಿದ್ದಿರುವ ಮನೆಯ ಹತ್ತಿರ ಯಾರನ್ನು ಸುಳಿಯಲು ಬಿಡದೆ ಕಾವಲು ಕಾಯುತ್ತಿದೆ. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಸಂತ್ರಸ್ತರಿಗೆ ಸಂಪೂರ್ಣ ವ್ಯಾಪಾರದ ಹಣ ನೀಡಲು ಕಾಫಿಶಾಪ್ ಮಾಲೀಕ ನಿರ್ಧಾರ!

    ಕೊಡಗು ಸಂತ್ರಸ್ತರಿಗೆ ಸಂಪೂರ್ಣ ವ್ಯಾಪಾರದ ಹಣ ನೀಡಲು ಕಾಫಿಶಾಪ್ ಮಾಲೀಕ ನಿರ್ಧಾರ!

    ಚಿಕ್ಕಬಳ್ಳಾಪುರ: ಮಹಾಮಳೆಗೆ ಯೋಧರ ನಾಡು ಕೊಡಗು ಅಕ್ಷರಶಃ ನಲುಗಿ ಹೋಗಿದ್ದು, ಜನ ಪಡಬಾರದ ಪಡಿಪಾಟಲು ಪಡುತ್ತಿದ್ದರೆ, ಇತ್ತ ರಾಜ್ಯದ ನಾನಾ ಮೂಲೆಗಳಿಂದಲೂ ನಿರೀಕ್ಷೆಗೂ ಮೀರಿ ಜನ ಕೊಡಗಿನ ಸಂತ್ರಸ್ತರ ಸಂಕಷ್ಟಕ್ಕೆ ನಾನಾ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹೀಗೆ ಕಾಫಿಶಾಪ್ ಮಾಲೀಕರೊಬ್ಬರು ತಮ್ಮ ಸಂಪೂರ್ಣ ವ್ಯಾಪಾರದ ಹಣ ನೀಡಲು ನಿರ್ಧರಿಸಿದ್ದಾರೆ.

    ಕೆಲವರು ಬಟ್ಟೆ, ಬರೆ, ಆಹಾರ, ಔಷಧಿಗಳು ಸೇರಿದಂತೆ ಹಣಕಾಸಿನ ನೆರವು ಸಹ ನೀಡಿ ಸಹಾಯ ಹಸ್ತ ಚಾಚುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ವಿ.ಎಂ ಕಾಫಿವಾಲಾ ಶಾಪ್ ನ ಮಾಲೀಕ ಮುರುಳಿ ತಮ್ಮ ಇಡೀ ದಿನದ ವ್ಯಾಪಾರದ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆಯಲ್ಲಿರುವ ವಿ.ಎಂ ಕಾಫಿವಾಲಾ ಶಾಪ್ ನಲ್ಲಿ ಕಾಫಿ, ಪಿಜ್ಜಾ, ಸ್ಯಾಂಡ್ ವಿಚ್, ಬರ್ಗರ್ ಸೇರಿದಂತೆ 30ಕ್ಕೂ ಹೆಚ್ಚು ತರಹೇವಾರಿ ಚೈನೀಸ್ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತೆ. ಹೀಗಾಗಿ ಪ್ರತಿದಿನ 6 ರಿಂದ 8 ಸಾವಿರ ರೂ. ಆಗುತ್ತದೆ.

    ಆದರೆ ಭಾನುವಾರ ಮಾಮೂಲಿಗಿಂತ ಜಾಸ್ತಿ ಅಂದರೆ 10 ಸಾವಿರ ರೂ. ವ್ಯಾಪಾರ ಆಗಿದ್ದು, ಇಡೀ ದಿನದ ವ್ಯಾಪಾರದ ಹಣವನ್ನು ಮಡಿಕೇರಿಯ ಸಂತ್ರಸ್ತರ ನೆರವಿಗೆ ನೀಡಲು ಮಾಲೀಕ ಮುರುಳಿ ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರಾಟಕ್ಕಿದೆ ಸಿಎಂ ಎಚ್‍ಡಿಕೆ ನೆಲೆಸಿದ್ದ ಹುಬ್ಬಳ್ಳಿ ನಿವಾಸ!

    ಮಾರಾಟಕ್ಕಿದೆ ಸಿಎಂ ಎಚ್‍ಡಿಕೆ ನೆಲೆಸಿದ್ದ ಹುಬ್ಬಳ್ಳಿ ನಿವಾಸ!

    ಹುಬ್ಬಳ್ಳಿ: ನಗರದ ಮಾಯ್ಕರ್ ಕಾಲೋನಿ  ಸಿಎಂ ಕುಮಾರಸ್ವಾಮಿ ನೆಲೆಸಿದ್ದ ಮನೆಯನ್ನು  ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ.

    ಹೌದು, ಸಿಎಂ ಕುಮಾರಸ್ವಾಮಿಯವರು 2016ರ ನವೆಂಬರ್ ನಲ್ಲಿ ನಗರದ ಮಾಯ್ಕರ್ ಕಾಲೋನಿಯ ನಿವಾಸವನ್ನು ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದ ಮನೆ ಮತ್ತು ಕಚೇರಿಯನ್ನು ಮಾಲೀಕರು ಇಂದು ಮಾರಾಟಕ್ಕಿಟ್ಟಿದ್ದಾರೆ.

    10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಖಾಸಗಿ ಕಚೇರಿಯ ಮಾಲೀಕರಾದ ಸುರೇಶ್ ರಾಯರೆಡ್ಡಿಯವರು ಮಾರಾಟ ಮಾಡಲು ಮುಂದಾಗಿದ್ದು, ಶೀಘ್ರವೇ ಜಾಹೀರಾತು ನೀಡಲು ಮುಂದಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮನೆಯ ಮಾಲೀಕರು, ನನ್ನ ವೈಯಕ್ತಿಕ ಕಾರಣದಿಂದಾಗಿ ಕುಮಾರಸ್ವಾಮಿಯವರು ಬಳಸುತ್ತಿದ್ದ ಮನೆ ಹಾಗೂ ಕಚೇರಿಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಲು ಈ ಮನೆಯನ್ನು ಆರಿಸಿಕೊಂಡಿದ್ದರು.

    ಒಟ್ಟು ನಾಲ್ಕು ಕೋಟಿ ರೂ.ಗೆ ಈ ನಿವಾಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.

  • ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಕಾಫಿತೋಟದಲ್ಲಿ ಆನೆ ದಾಳಿಯಿಂದ ತೋಟದ ಮಾಲೀಕರೊಬ್ಬರು ಗಾಯಗೊಂಡಿದ್ದಾರೆ.

    ಎಂ.ಡಿ.ಯೋಗೇಶ್ ಆನೆ ದಾಳಿಯಿಂದ ಗಾಯಗೊಂಡ ಕಾಫಿ ತೋಟದ ಮಾಲೀಕ. ಕಾಫಿತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಆನೆಗಳು ಯೋಗೇಶ್ ಮೇಲೆ ದಾಳಿ ಮಾಡಿವೆ. ಆನೆ ದಾಳಿಯಿಂದ ಸಣ್ಣ-ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಫಿತೋಟದಲ್ಲಿಯೇ ಆನೆಗಳು ಬೀಡು ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಂತಕಕ್ಕೊಳಗಾಗಿದ್ದಾರೆ.

    ಅಲ್ಲದೇ ಮಂಗಳವಾರದಂದೂ ಸಹ ಹಳೆಕೆರೆ ಗ್ರಾಮದ ಮಲ್ಲಿಗೆ ಎಸ್ಟೇಟ್ ನಲ್ಲಿ 4 ಮರಿಯಾನೆಗಳು ಸೇರಿದಂತೆ 20 ಕಾಡಾನೆಗಳು ಬೀಡು ಬಿಟ್ಟು, ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು.

  • ಸಿಂಹಗಳ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ!

    ಸಿಂಹಗಳ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ!

    ಅಹಮದಾಬಾದ್: ಸಿಂಹಗಳ ದಾಳಿಗೆ ಒಳಗಾಗಿದ್ದ ಕುರಿಗಾಹಿ ಮಾಲೀಕನನ್ನು ಸಾಕುನಾಯಿ ಕಾಪಾಡಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಅಂಬಾರ್ಡಿ ಗ್ರಾಮದಲ್ಲಿ ನಡೆದಿದೆ.

    ಈ ಮೂಲಕ ನಾಯಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕುರಿಗಾಹಿಯೊಬ್ಬರ ಮೇಲೆ ಸಿಂಹಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆತ ಸಾಕಿದ ನಾಯಿ ಪ್ರಾಣದ ಹಂಗು ತೊರೆದು ಮಾಲೀಕನ ಪ್ರಾಣ ರಕ್ಷಿಸಿದೆ.

    ಭಾವೇಶ್ ಹಮೀರ್ ಭರ್ವಾದ್ (25) ಸಿಂಹಗಳ ದಾಳಿಯಿಂದ ಪಾರಾದ ಕುರಿಗಾಹಿ. ಸಿಂಹಗಳ ದಾಳಿಯಿಂದಾಗಿ ಕುರಿಗಾಹಿ ಭಾವೇಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಗ್ರಾಮಸ್ಥರು ಸಾವರ್ಕುಂಡ್ಲಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಏನಿದು ಘಟನೆ?
    ಭಾವೇಶ್ ಎಂದಿನಂತೆ ಶನಿವಾರ ತನ್ನ ಕುರಿಗಳ ಹಿಂಡು ಹಾಗೂ ಸಾಕುನಾಯಿಯೊಂದಿಗೆ ಅಂಬಾರ್ಡಿ ಗ್ರಾಮದ ಹೊರವಲಯದಲ್ಲಿ ಕುರಿಮೇಯಿಸಲು ತೆರಳಿದ್ದರು. ಈ ವೇಳೆ ಕುರಿಹಿಂಡಿನ ಮೇಲೆ ಏಕಾಏಕಿ ಮೂರು ಸಿಂಹಗಳು ದಾಳಿ ನಡೆಸಿದ್ದು, ಮೂರು ಕುರಿಗಳನ್ನು ಕೊಂದು ಹಾಕಿವೆ. ಇದೇ ವೇಳೆ ಸಿಂಹಗಳ ದಾಳಿಯಿಂದ ತನ್ನ ಕುರಿಗಳನ್ನು ರಕ್ಷಿಸಲು ಹೋದ ಭಾವೇಶ್ ಮೇಲೆಯೂ ಸಿಂಹಗಳು ದಾಳಿ ನಡೆಸಿವೆ.

    ಅಷ್ಟರಲ್ಲೇ ಆತ ಸಾಕಿದ ನಾಯಿ ಜೋರಾಗಿ ಬೋಗಳಲಾರಂಭಿಸಿ ಸಿಂಹಗಳು ಮುಂದೆ ಬರದಂತೆ ತಡೆದಿದೆ. ನಾಯಿ ನಿರಂತರ ಬೊಗಳುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರಿಂದ ಜನರ ಗುಂಪು ನೋಡಿ ಗಾಬರಿಗೊಂಡ ಸಿಂಹಗಳು ಸ್ಥಳದಿಂದ ಓಡಿಹೋಗಿವೆ.