Tag: ಮಾಲೀಕರು

  • ಅನ್ನ ಹಾಕಿದ ಮನೆಗೆ ದ್ರೋಹ ಬಗೆದ  – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಅನ್ನ ಹಾಕಿದ ಮನೆಗೆ ದ್ರೋಹ ಬಗೆದ – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಬೆಂಗಳೂರು: ಪ್ರೇಯಸಿಯನ್ನು ಪಡೆಯಬೇಕೆಂಬ ವ್ಯಾಮೋಹಕ್ಕೆ ಸ್ನೇಹಿತರ ಮಾತು ಕೇಳಿ ಮಾಲೀಕರ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ವ್ಯಕ್ತಿಯೋರ್ವ ಜೈಲು ಪಾಲಾಗಿದ್ದಾನೆ.

    ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಅಂಕಲ್ ಒಬ್ಬ, ಸ್ನೇಹಿತರಿಬ್ಬರ ಮಾತು ಕೇಳಿ ಆಸರೆಕೊಟ್ಟು ಅನ್ನ ಹಾಕುತ್ತಿದ ಮನೆ ಮಾಲೀಕರಿಗೆ ಉಂಡೆನಾಮ ಹಾಕಲು ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪೆಕ್ಸೆ

    ಹೌದು ಆರೋಪಿ ರಾಜೇಶ್ ಯಾಲಕ್ಕಿ ಕುಮಾರಸ್ವಾಮಿ ಲೇಔಟ್‍ನಲ್ಲಿ ರಾಜೇಶ್ವರಿ ಅವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದನು. ಎಂಟು ವರ್ಷದಿಂದ ಆರೋಪಿ ರಾಜೇಶ್ ಅನ್ನು ಹತ್ತಿರದಿಂದ ನೋಡಿದ್ದ ಮನೆ ಮಾಲೀಕರು ಒಳ್ಳೆಯವನು ಎಂಬ ಕಾರಣಕ್ಕೆ ಮನೆಯಲ್ಲಿಯೇ ಜಾಗಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆರೋಪಿ ರಾಜೇಶ್‍ಗೆ ಈಗಾಗಲೇ ಮದುವೆ ಆಗಿತ್ತು. ಆದರೂ ಅಮೂಲ್ಯ ಎಂಬ ಯುವತಿಯ ಪ್ರೀತಿಯ ಬಲೆಗೆ ಬಿದ್ದಿದ್ದನು.

    ಆರೋಪಿ ರಾಜೇಶ್ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಸ್ನೇಹಿತರಾದ ಪರಮೇಶ್ವರ್ ಹಾಗೂ ಮೇಘನಾ ಬಳಿ ಹೇಳಿಕೊಂಡಿದ್ದ. ಹೀಗಾಗಿ ಆರೋಪಿಯ ವೀಕ್ನೆಸ್ ತಿಳಿದುಕೊಂಡ ಸ್ನೇಹಿತರು ನಿನಗೆ ಅಮೂಲ್ಯ ಜೊತೆಗೆ ಮದುವೆ ಮಾಡಿಸುತ್ತೇವೆ. ಮನೆ ಮಾಲೀಕರ ಮನೆಯಲ್ಲಿರುವ ಒಡವೆಗಳನ್ನು ತಂದುಕೊಡು ಎಂದು ಹೇಳಿದ್ದರು. ಇದನ್ನೂ ಓದಿ: ಕೃಷ್ಣೆಯಿಂದ ಬಸವಸಾಗರ ಡ್ಯಾಮ್‍ಗೆ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಾದಗಿರಿಯಲ್ಲಿ ಮುಳುಗಡೆ ಭೀತಿ

    ಹೀಗಾಗಿ ಪ್ರೇಯಸಿ ಅಮೂಲ್ಯಳನ್ನು ಪಡೆದೆ ತಿರಬೇಕು ಎಂಬ ಗುಂಗಲ್ಲಿ ರಾಜೇಶ್, ಸ್ನೇಹಿತರ ತಾಳಕ್ಕೆ ತಕ್ಕಂತೆ ಕುಣಿದು, ಮಾಲೀಕರ ಮನೆಯಲ್ಲಿರುವ ಚಿನ್ನಾಭರಣವನ್ನು ಒಂದೋದಾಗಿ ಎಗ್ಗರಿಸಿದ್ದಾನೆ. ನಂತರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಚಿನ್ನಭರಣ ಧರಿಸಲು ನೋಡಿದಾಗ ಒಡವೆ ಕಳ್ಳತನ ಆಗಿರುವುದು ಮಾಲೀಕರಿಗೆ ತಿಳಿದುಬಂದಿದೆ. ಕಳ್ಳ ರಾಜೇಶ್ ನನ್ನ ವಿಚಾರಿಸಿದಾಗ ಆರೋಪಿ ರಾಜೇಶ್ ನ ಮತ್ತೊಂದು ಮುಖವಾಡ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಉಡುಪಿ: ರಾಜ್ಯಾದ್ಯಂತ ಅಕ್ಟೋಬರ್ 1ರಿಂದ ಥಿಯೇಟರ್‌ಗಳು ಓಪನ್ ಆಗಿ ಚಿತ್ರಗಳು ಪ್ರದರ್ಶನಕಾಣಲಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇನ್ನೊಂದು ವಾರ ಚಿತ್ರಮಂದಿರ ಓಪನ್ ಆಗಲ್ಲ. ಪಿತೃಪಕ್ಷ ಇರುವುದರಿಂದ ಥಿಯೇಟರ್‌ಗಳನ್ನು ಮತ್ತೆ ಓಪನ್ ಮಾಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಯಾವುದೇ ಚಿತ್ರಮಂದಿರಗಳನ್ನು ಓಪನ್ ಮಾಡದೆ ಇರಲು ತೀರ್ಮಾನಿಸಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಒಂದು ವಾರದ ನಂತರ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಉಡುಪಿಯ ಕಲ್ಪನಾ, ಅಲಂಕಾರ, ಆಶೀರ್ವಾದ್ ಸೇರಿದಂತೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಥಿಯೇಟರ್‌ಗಳು ಅಕ್ಟೋಬರ್ ಎಂಟರ ನಂತರ ತೆರೆದುಕೊಳ್ಳಲಿವೆ. ಇದನ್ನೂ ಓದಿ: ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್

    ಅಕ್ಟೋಬರ್ ಮೊದಲ ವಾರದಲ್ಲಿ ಪಿತೃಪಕ್ಷ ಇರುವುದರಿಂದ ಶುಭ ಕಾರ್ಯಗಳನ್ನು ಪಿತೃಪಕ್ಷದಲ್ಲಿ ಮಾಡೋದಿಲ್ಲ. 8 ನೇ ತಾರೀಖಿನಿಂದ ಥಿಯೇಟರ್‌ಗಳು ಓಪನ್ ಮಾಡಬೇಕು ಅಂದ್ರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಇದೆ. 5 ತಿಂಗಳಿಂದ ಥಿಯೇಟರ್ ಬಂದ್ ಇರುವುದರಿಂದ ಸೀಟುಗಳು ಕಾರ್ಪೆಟ್ ಗಳು, ಹಾಲ್, ಜಗಲಿ ಸ್ಕ್ರೀನ್ ಸೇರಿದಂತೆ ಥಿಯೇಟರ್‌ರೊಳಗೆ ಸಂಪೂರ್ಣ ಶುಚಿತ್ವ ಮಾಡಬೇಕಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭ 11 ತಿಂಗಳು ಥಿಯೇಟರ್ ಓಪನ್ ಆಗಿರಲಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ 40 ಸಾವಿರ ರುಪಾಯಿ ಖರ್ಚಾಗಿತ್ತು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಅಕ್ಟೋಬರ್ 1ಕ್ಕೆ ಯಾವುದು ದೊಡ್ಡ ಬಜೆಟ್‍ನ ಚಿತ್ರಗಳು, ದೊಡ್ಡ ಸ್ಟಾರ್ ಕಾಸ್ಟ ಚಿತ್ರಗಳು ರಿಲೀಸ್ ಇಲ್ಲ. ಪಿತೃಪಕ್ಷ ಈಗ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಒಳ್ಳೆ ದಿನಗಳು ಇರುವುದರಿಂದ ಆನಂತರ ಥಿಯೇಟರ್‌ಗಳನ್ನು ಓಪನ್ ಮಾಡುತ್ತೇವೆ. ಅನಾದಿಕಾಲದಿಂದ ಜನ ನಂಬಿಕೊಂಡು ಬಂದಿರುವುದರಿಂದ ದಿನಗಳು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ಸಮಸ್ಯೆಗಳು ಆಗದಿರಲಿ, ಒಳ್ಳೆ ಬ್ಯುಸಿನೆಸ್ ಆಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿ.ಎಸ್ ಹೊಳ್ಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಬೆಂಗಳೂರು: ನಗರದ ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ಬಿಡಿಎ ಸೈಟಿನ ನಿರ್ವಹಣಾ ಶುಲ್ಕವನ್ನು ಬಿಡಿಎ ಹೆಚ್ಚಳ ಮಾಡಿದ್ದು, ಬಿಡಿಎ ನಿರ್ಧಾರದ ವಿರುದ್ಧ ಕೆಂಪೇಗೌಡ ಬಡಾವಣೆಯ ಸೈಟಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಐದು ವರ್ಷದ ಹಿಂದೆ ಬೆಂಗಳೂರು ನಗಾರಭಿವೃದ್ದಿ ಪ್ರಾಧಿಕಾರ ಆರ್ಹ ಫಲಾನುಭಾವಿಗಳಿಗೆ ಸೈಟುಗಳ ಹಂಚಿಕೆ ಮಾಡಿತ್ತು. ಜೊತೆಗೆ ಸೈಟು ಹಂಚಿಕೆಯಾಗಿ ಐದು ವರ್ಷ ಕಳೆದೆರು ಮೂಲ ಭೂತ ಸೌಕರ್ಯ ಒದಗಿಸಿಲ್ಲ. ಮೂಲ ಭೂತ ಸೌಕರ್ಯ ಒದಗಿಸದೇ ನಿರ್ವಾಹಣೆ ಶುಲ್ಕ ಹೆಚ್ಚಳ ಮಾಡಿರುವುದು ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: 10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ

    ಈ ಬಗ್ಗೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ವಾಹಣ ಶುಲ್ಕ ಹೆಸರಲ್ಲಿ ಹೆಚ್ಚಿನ ಹೊರೆಯನ್ನು ಮಾಲೀಕರ ಮೇಲೆ ಹೇರುತ್ತಿದ್ದಾರೆ. 1200 ರಿಂದ 3600 ರೂ ತನಕ ವಾರ್ಷಿಕವಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ ಟ್ಯಾಕ್ಸ್ ನಮಗೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಅಭಿವೃದ್ಧಿಯನ್ನೆ ಮಾಡದೇ ಟ್ಯಾಕ್ಸ್ ಗಳನ್ನು ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಶುಲ್ಕ ಹೆಚ್ಚಳ ನಮ್ಮ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಜೊತೆಗೆ ಅಭಿವೃದ್ಧಿ ಮಾಡದೇ ಕೇವಲ ಶುಲ್ಕ ಹೆಚ್ಚಳ ಮಾಡುವುದು ಎಷ್ಟರಮಟ್ಟಿಗೆ ಸರಿ. ತಕ್ಷಣ ಬಿಡಿಎ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

  • ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    – ಉತ್ತರ ಪ್ರದೇಶದ ಜಿಲ್ಲಾಡಳಿತದಿಂದ ಆದೇಶ ಜಾರಿ
    – ಲಸಿಕೆ ಟಾರ್ಗೆಟ್ ರೀಚ್ ಆಗಲು ತಂತ್ರಗಾರಿಕೆ

    ಲಕ್ನೋ: ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ.

    ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ಟಾಪ್ 10 ರಾಜ್ಯಗಳು ಯಾವುದು?

    ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ “ಲಸಿಕೆ ಪಡೆದವರು ಮಾತ್ರ ಮದ್ಯ ಖರೀದಿಗೆ ಅರ್ಹರು” ಎಂದು ನೋಟಿಸ್ ಅಂಟಿಸಿದ್ದಾರೆ. ಈ ಆದೇಶದ ಅನ್ವಯ ಗ್ರಾಹಕರು ಆರಂಭದಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಮದ್ಯವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಸರ್ಕಾರ ಈ ಆದೇಶ ಹೊರಡಿಸಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ. ಲಸಿಕೆ ಗುರಿಯನ್ನು ಮುಟ್ಟಲು ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

    ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿಲ್ಲ.

    ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಲಸಿಕೆ ವಿತರಣೆಯಲ್ಲಿ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

  • ಮಾಲೀಕರ ಕಿರುಕುಳ- ಬೀದಿಗೆ ಬಿದ್ದ ಪಿಜಿ ನಿವಾಸಿಗಳು

    ಮಾಲೀಕರ ಕಿರುಕುಳ- ಬೀದಿಗೆ ಬಿದ್ದ ಪಿಜಿ ನಿವಾಸಿಗಳು

    – ಪಿಜಿ ಮಾಲೀಕರ ಘರ್ಜನೆಗೆ ನಡುಗಿದ ಬ್ಯಾಚುಲರ್ಸ್

    ಬೆಂಗಳೂರು: ಕೊರೊನಾ ಹೆಮ್ಮಾರಿಗೆ ಇಡೀ ರಾಜ್ಯವೇ ತತ್ತರಿಸಿದೆ. ರಾಜ್ಯಕ್ಕೆ ರಾಜ್ಯವೇ ಲಾಕ್ ಡೌನ್ ನಿಂದ ಸ್ಥಬ್ಧಗೊಂಡಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಬೆಂಗಳೂರಿನಲ್ಲಿ ಪಿಜಿ ಮಾಲೀಕರು ಘರ್ಜಿಸ್ತಿದ್ದಾರೆ. ಪಿಜಿ ನಿವಾಸಿಗಳಿಗೆ ಹಣ ಪಾವತಿ ಮಾಡುವಂತೆ ಕಿರುಕುಳ ನೀಡ್ತಿದ್ದಾರೆ. ಪಿಜಿ ಮಾಲೀಕರ ಕಿರುಕುಳ ವಿರುದ್ಧ ಪಬ್ಲಿಕ್ ಟಿವಿ ಮೆಗಾ ಅಭಿಯಾನ ಶುರು ಮಾಡಿದೆ.

    ಹೌದು. ಕೊರೊನಾ ತಂದ ಅವಾಂತರ ಅಷ್ಟಿಷ್ಟಲ್ಲ. ಬೆಂಗಳೂರಿನ ಪಿಜಿಗಳಲ್ಲಿ ನೆಲೆಸಿದ್ದ ಯುವಕ-ಯುವತಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಪಿಜಿ ಮಾಲೀಕರ ಕಿರುಕುಳಕ್ಕೆ ಅಕ್ಷರಶಃ ನಡುಗುತ್ತಿದ್ದಾರೆ. ಲಾಕ್ ಡೌನ್ ಟೈಮಲ್ಲಿ ಎರಡು ತಿಂಗಳ ಪಿಜಿ ಬಾಡಿಗೆ ಕಟ್ಟಲು ಆಗದೇ ಅದೆಷ್ಟೋ ಜನ ಒದ್ದಾಡ್ತಿದ್ದಾರೆ. ಇತ್ತ ಪಿಜಿ ಮಾಲೀಕರು ಮಾನವೀಯತೆಯನ್ನ ಮರೆತು ಹಣ ಕೊಡದಿದ್ರೆ ನಿಮ್ಮ ಲಗೇಜ್ ಗಳನ್ನ ರಸ್ತೆಗೆ ಬಿಸಾಡುತ್ತೇವೆ ಅಂತ ಧಮ್ಕಿ ಹಾಕ್ತಿದ್ದಾರೆ. ಪಿಜಿ ಮಾಲೀಕರ ಈ ಕ್ರೌರ್ಯಕ್ಕೆ ಪಿಜಿ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

    ಲಾಕ್ ಡೌನ್ ಘೋಷಣೆ ಮಾಡಿದ ನಂತರ ಬೆಂಗಳೂರಿನಲ್ಲಿ ಬಿಬಿಎಂಪಿ ಕಮಿಷನರ್, ಪಿಜಿಗಳಲ್ಲಿ ಇರುವವರನ್ನ ಖಾಲಿ ಮಾಡಿ ಮನೆಗಳಿಗೆ ಕಳಿಸುವಂತೆ ಆದೇಶ ಮಾಡಿದರು. ಆ ಟೈಮಲ್ಲಿ ಕೊರೊನಾ ಕ್ರೂರಿಗೆ ಹೆದರಿ ಪಿಜಿಯಲ್ಲಿದ್ದವರು ತಮ್ಮ ತಮ್ಮ ಮನೆ ಸೇರಿದ್ದಾರೆ. ಎರಡು ತಿಂಗಳ ಬಳಿಕ ಲಾಕ್ ಡೌನ್ ಸಡಿಲಿಕೆಯಾಗ್ತಿದ್ದಂತೆ ಮತ್ತೆ ಮರಳಿ ಬೆಂಗಳೂರಿಗೆ ಬಂದಿದ್ದಾರೆ.

    ಮರಳಿ ಬೆಂಗಳೂರಿಗೆ ಬರುವಷ್ಟರಲ್ಲಿ ಹಲವರು ತಮ್ಮ ಕೆಲಸವನ್ನು ಕಳೆದುಕೊಂಡರೆ ಕೆಲವರು ವರ್ಕ್ ಫ್ರಂ ಹೋಮ್ ನಲ್ಲಿದ್ದಾರೆ. ಎರಡು ತಿಂಗಳ ಹಣ ಪೇ ಮಾಡೋಕೆ ಆಗಲ್ಲ. ನಮ್ಮ ಕೈಲಾದಷ್ಟು ಪೇ ಮಾಡ್ತೇವೆ ಅಂತ ಮನವಿ ಮಾಡಿಕೊಂಡು ಪಿಜಿ ಮಾಲೀಕರಿಗೆ ಕನಿಕರ ಬರುತ್ತಿಲ್ಲ. ತಾವು ಲಾಸ್ ಆಗಿರೋದನ್ನೇ ವಾದಿಸಿ ಹಣ ಕಟ್ಟುವಂತೆ ಪೀಡಿಸ್ತಿದ್ದಾರೆ.

    ಲಾಕ್ ಡೌನ್ ಸ್ಟ್ರೋಕ್ ಗೆ ಈಗಾಗಲೇ ಹಲವರು ಕೆಲಸ ಕಳೆದುಕೊಂಡು ಅಲೆದಾಡ್ತಿದ್ದಾರೆ. ಹುಟ್ಟಿದ ಊರು ಬಿಟ್ಟು ಮಹಾನಗರಿಯಲ್ಲಿ ಕೊರೊನಾ ಮಧ್ಯೆಯೇ ಕಂಪನಿಯಿಂದ ಕಂಪನಿಗಳಿಗೆ ಕೆಲಸಕ್ಕಾಗಿ ಅಲೆದಾಡ್ತಿದ್ದಾರೆ. ಇದ್ಯಾವ ಕನಿಕರವಿಲ್ಲದೇ ಪಿಜಿ ಮಾಲೀಕರು ಘರ್ಜಿಸ್ತಿದ್ದಾರೆ. ಹಣ ನೀಡುವಂತೆ ಕಿರುಕುಳ ಕೊಟ್ಟರೆ ಅಂತವರ ವಿರುದ್ಧ ನಾವು ಕ್ರಮ ಕೈಗೊಳ್ತೇವೆ ಅಂತ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕೂಡ ಪಿಜಿ ನಿವಾಸಿಗಳಿಗೆ ಹಣ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ ಅಂತ ಸೂಚನೆ ನೀಡಿದೆ. ಆದರೆ ಇದನ್ನ ಅಲ್ಲಗೆಳೆದು ಪಿಜಿ ಆಶ್ರಿತರಿಗೆ ಟಾರ್ಚರ್ ನೀಡಲಾಗ್ತಿದೆ. ಮಾನವೀಯತೆ ದೃಷ್ಟಿಯಲ್ಲಿ ಪಿಜಿಯಲ್ಲಿದ್ದವರು ಕೂಡ ತಮ್ಮಿಂದ ಆದಷ್ಟು ಹಣವನ್ನ ಪಿಜಿ ಮಾಲೀಕರಿಗೆ ನೀಡಲು ಸಿದ್ಧರಿದ್ದಾರೆ. ಆದರೆ ಪಿಜಿ ಮಾಲೀಕರು ಇದಕ್ಕೆ ಒಪ್ಪುತ್ತಿಲ್ಲ. ಎಷ್ಟು ತಿಂಗಳು ಖಾಲಿ ಮಾಡಿದ್ರೂ ಅಷ್ಟು ತಿಂಗಳ ಬಾಡಿಗೆಯ ಹಣವನ್ನ ಕೊಡ್ಲೇ ಬೇಕು ಅಂತ ಅವಾಜ್ ಹಾಕ್ತಿದ್ದಾರೆ.

  • ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಇಸ್ಲಾಮಾಬಾದ್: ಮನೆ ಕೆಲಸಕ್ಕೆ ಇದ್ದ ಎಂಟು ವರ್ಷದ ಬಾಲಕಿ ಪಂಜರದಲ್ಲಿ ಇದ್ದ ಗಿಳಿಯನ್ನು ಬಿಟ್ಟಿದ್ದಕ್ಕೆ ಮನೆ ಮಾಲೀಕರು ಆಕೆಯನ್ನು ಹೊಡೆದು ಕೊಂದಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಜೊಹ್ರಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜೊಹ್ರಾ ಹಕ್ಕಿಗಳಿಗೆ ಆಹಾರ ಹಾಕಲು ಪಂಜರದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಒಂದು ಗಿಳಿ ಮರಿ ತಪ್ಪಿಸಿಕೊಂಡು ಹಾರಿ ಹೋಗಿದೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಆಕೆಯನ್ನು ಹೊಡೆದು ಸಾಯಿಸಿದ್ದಾರೆ.

    ಜೊಹ್ರಾ ಕೆಲಸ ಮಾಡುತ್ತಿದ್ದ ಮನೆಯವರು ಪ್ರಾಣಿ ಪಕ್ಷಿಗಳನ್ನು ಸಾಕಿ ಅವುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಇರುವ ಪುಟ್ಟಮಕ್ಕಳನ್ನು ನೋಡಿಕೊಳ್ಳಲು ಜೊಹ್ರಾಳನ್ನು ಮನೆ ಕೆಲಸಕ್ಕೆ ಇಟ್ಟಿಕೊಂಡಿದ್ದರು. ಈ ವೇಳೆ ಜೊಹ್ರಾ ಗಿಳಿ ಹಾರಿಹೋಗಲು ಬಿಟ್ಟಿದ್ದಾಳೆ ಎಂದು ಮಾಲೀಕರು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನಾಳದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್, ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಆಕೆ ಬದುಕಿದ್ದಳು. ಆದರೆ ಆಕೆಯ ಮುಖ, ಕೈ-ಕಾಲು, ಪಕ್ಕೆಲುಬು ಮತ್ತು ಕಾಲಿನ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಬಾಲಕಿಯ ತೊಡೆಯ ಭಾಗದಲ್ಲಿ ಗಾಯವಾಗಿದ್ದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬವುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

    ಜೊಹ್ರಾಳನ್ನು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಮನೆಯ ಕೆಲಸಕ್ಕೆ ಇಟ್ಟಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಹಣದ ರೂಪದಲ್ಲಿ ಅವಳ ಓದಿಗೆ ಸಹಾಯ ಮಾಡುವುದಾಗಿ ಮಾಲೀಕರು ಹೇಳಿದ್ದರು. ಆದರೆ ಗಿಳಿಗಾಗಿ ಆಕೆಯಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರವಾಗಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ಜಿಯಾ ಉದ್ದೀನ್ ಮಾಹಿತಿ ನೀಡಿದ್ದಾರೆ.

  • ಬಾರ್ ಮಾಲೀಕರನ್ನ ಉದ್ಧಾರ ಮಾಡಬೇಡಿ: ಸಚಿವ ಸುರೇಶ್ ಕುಮಾರ್

    ಬಾರ್ ಮಾಲೀಕರನ್ನ ಉದ್ಧಾರ ಮಾಡಬೇಡಿ: ಸಚಿವ ಸುರೇಶ್ ಕುಮಾರ್

    ಚಾಮರಾಜನಗರ: ಬಾರ್ ಮಾಲೀಕರನ್ನು ಉದ್ಧಾರ ಮಾಡಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಮಿಕರಿಗೆ ಕಿವಿಮಾತು ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಉಗುರು ಕಟ್ಟೆ ಬಳಿ ನರೇಗಾ ಕಾಮಗಾರಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯ ವಿವಿದೆಡೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಬಳಿಕ ಕಾರ್ಮಿಕರಿಗೆ ಸಚಿವರು ಬುದ್ಧಿ ಮಾತು ಹೇಳಿದ್ದಾರೆ.

    ಬಾರ್ ಮುಚ್ಚಿತ್ತಲ್ಲ ಆಗ ಯಾರಿಗೆ ಖುಷಿಯಾಯ್ತು? ಯಾರಿಗೆ ಆಗಿಲ್ಲ? ಕೈ ಎತ್ತಿ ಎಂದು ಮಹಿಳಾ ಕಾರ್ಮಿಕರನ್ನು ಪ್ರಶ್ನಿಸಿದರು. ಈ ವೇಳೆ ಎಲ್ಲಾ ಮಹಿಳೆಯರು ನಮಗೆ ಖುಷಿಯಾಗಿತ್ತು ಎಂದು ಹೇಳಿದ್ದಾರೆ.

    ಆಗ ದುಡಿದ ಹಣವನ್ನು ಸದುಪಯೋಗಪಡಿಸಿಕೊಳ್ಳಿ. ಸುಮ್ಮನೆ ಕುಡಿಯಲು ಬಳಸಬೇಡಿ. ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಕುಡಿದು ಬಾರ್ ಮಾಲೀಕರನ್ನು ಉದ್ದಾರ ಮಾಡುಬೇಡಿ ಎಂದು ಕಿವಿಮಾತು ಹೇಳುವ ಮೂಲಕ ಸುರೇಶ್ ಕುಮಾರ್ ಮದ್ಯಪಾನದ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

    ಇದೇ ವೇಳೆ ಹಾರೆ ಹಿಡಿದು ರೈತರೊಂದಿಗೆ ಕೆಲಸ ಮಾಡಿ ಕಾರ್ಮಿಕರನ್ನು ಹುರಿದುಂಬಿಸುವ ಕೆಲಸಕ್ಕೆ ಮುಂದಾದರು. ಸಚಿವರಿಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಸಾಥ್ ನೀಡಿದರು.

  • ಕೊರೊನಾ ಸಂಕಷ್ಟದ ನಡುವೆಯೇ 62 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ

    ಕೊರೊನಾ ಸಂಕಷ್ಟದ ನಡುವೆಯೇ 62 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ

    – ಮಾಲೀಕರ ಕಣ್ಣೆದುರೇ ಸಾವನ್ನಪ್ಪಿದ ಕುರಿಗಳು

    ಗದಗ: ವಿಷಪ್ರಾಶನದಿಂದ 62 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆ ಗಜೇಂಡ್ರಗಡ ತಾಲೂಕಿನ ನರೇಗಲ್ ಬಳಿ ನಡೆದಿದೆ.

    ಈ ಕುರಿಗಳು ಜೋಳದ ಚಿಗುರು ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಬಳ್ಳಾರಿ ಜಿಲ್ಲೆಯಿಂದ ಕುರಿಗಳಿಗಾಗಿ ಆಹಾರ ಅರಸಿ ಬಂದ ಮೂರು ಜನ ಮಾಲೀಕರಿಗೆ ಸಂಬಂಧಿಸಿದ ಕುರಿಗಳು ಸಾವನ್ನಪ್ಪಿವೆ. ಕುರಿಗಾಹಿ ಸಿದ್ದಪ್ಪ ಪೂಜಾರಿ, ದೇವರಾಜ್, ಅಜಿತ್ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

    ಬುಧವಾರ ಸಂಜೆಯ ವೇಳೆ ಚೆನ್ನಾಗಿಯೇ ಇದ್ದ ಕುರಿಗಳು, ಬೆಳಗ್ಗೆ ಕಣ್ಣೆದುರಿಗೆ ಸಾಯುವುದನ್ನು ನೋಡಿ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ನರೇಗಲ್ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕುರಿಗಳನ್ನು ಬಾಗಲಕೋಟೆ ಪಶು ಸಂಗೋಪನಾ ಜೈವಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಈಗ ಕೊರೊನಾ ಸಂಕಷ್ಟದಲ್ಲಿ ಕುರಿಗಾರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಸರ್ಕಾರ ಈ ಕುರಿಗಾಹಿಗಳ ನೆರವಿಗೆ ಬರಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ.

  • ಬೆಂಗ್ಳೂರಿನಲ್ಲಿ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ – ಮಾಲೀಕರು 1 ತಿಂಗ್ಳ ಬಾಡಿಗೆ ಕೇಳುವಂತಿಲ್ಲ

    ಬೆಂಗ್ಳೂರಿನಲ್ಲಿ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ – ಮಾಲೀಕರು 1 ತಿಂಗ್ಳ ಬಾಡಿಗೆ ಕೇಳುವಂತಿಲ್ಲ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಬೆಂಗಳೂರಿನ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ ನೀಡಿದೆ.

    ಸಿಲಿಕಾನ್ ಸಿಟಿಯಲ್ಲಿ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರು ಒಂದು ತಿಂಗಳ ಬಾಡಿಗೆಯನ್ನು ನೀಡುವಂತಿಲ್ಲ. ಈ ಬಗ್ಗೆ ಬಿಬಿಎಂಪಿ ಭೂ ಮಾಲೀಕರು, ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಮನೆ ಮಾಲೀಕರು, ಕಾರ್ಮಿಕರನ್ನು ಬಾಡಿಗೆ ಕೊಡುವಂತೆ ಪೀಡಿಸುವಂತಿಲ್ಲ. ಅಲ್ಲದೇ ಅವರ ಒಂದು ತಿಂಗಳು ಬಾಡಿಗೆ ಕೇಳುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಬಾಡಿಗೆ ಕೇಳಿದರೆ ಕಾನೂನು ರೀತಿ ಕ್ರಮಗೊಳ್ಳಲು ಪಾಲಿಕೆ ಮುಂದಾಗುತ್ತದೆ.

    ವಾರ್ಡ್ ಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಲು ಬಿಬಿಎಂಪಿ ಮುಂದಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಕೋಶ ಆರಂಭವಾಗಲಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿರ್ವಹಣೆಯ ಹೊಣೆಯನ್ನು ವಿಪತ್ತು ನಿರ್ವಹಣಾ ಕೋಶ ವಹಿಸಿಕೊಳ್ಳಲಿದೆ.

    ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಬಡವರಿಗೆ ಹಾಲು, ಆಹಾರ, ಆಶ್ರಯ ಒದಗಿಸಬೇಕು. ಆಶ್ರಯ ಇಲ್ಲದ ಬಡ ಜನರನ್ನು ಪಾಲಿಕೆ ನಿರ್ಮಿಸಿರುವ ನೂರು ಸೂರುಗಳಿಗೆ ಸ್ಥಳಾಂತರಿಸಲು ಮಾರ್ಷಲ್‍ಗಳ ಗಮನಕ್ಕೆ ತರಬೇಕು. ವಲಸೆ ಕಾರ್ಮಿಕರಿಗೆ ಮಾಲೀಕರು ಒಂದು ತಿಂಗಳು ಬಾಡಿಗೆ ಕೊಡಲು ಒತ್ತಾಯಿಸುವಂತಿಲ್ಲ. ಈ ರೀತಿ ನಡೆದರೆ ಸ್ಥಳೀಯ ಪೊಲೀಸರ ಸಹಾಯದಿಂದ ವಲಸಿಗರಿಗೆ ರಕ್ಷಣೆ ಕೊಡಲು ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನೂ ಪ್ರತಿ ವಲಯದ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

  • ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ಆದೇಶ ನೀಡಿದೆ. ಆದರೆ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ 30 ಕೆಜಿ ಅಕ್ಕಿ ನೀಡಬೇಕಾಗಿದ್ದ ಅಳತೆಯಲ್ಲಿ 25 ಕೆಜಿ ನೀಡುತ್ತಿದ್ದು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಸಂದ್ರ, ಕದಿರನ್ನಾಗಾರಪಲ್ಲಿ, ಊಗಲನಾಗೇಪಲ್ಲಿ ಗ್ರಾಮಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.

    ಈ ರೀತಿ ಪ್ರತಿಯೊಬ್ಬರಿಗೂ 1 ಕೆಜಿ, 2 ಕೆಜಿ, ಮತ್ತು 3 ಕೆಜಿ ತೂಕದಲ್ಲಿ ಕಡಿತ ಮಾಡಿ ಕಡಿಮೆ ನೀಡುತ್ತಿದ್ದರೆ. ಇದೇ ರೀತಿ ಮಾಲೀಕ ಉಳಿತಾಯ ಮಾಡಿ ಲಾಭಗಳಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಮಾಲೀಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಇನ್ನು ಮುಂದೆ ಈ ರೀತಿ ನಡೆಯದಂತೆ ನಮಗೆ ಸೂಕ್ತ ನ್ಯಾಯಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.