Tag: ಮಾಲೀಕಯ್ಯ ಗುತ್ತೇದಾರ

  • ಗೋಯಲ್ ಬಗ್ಗೆ ಟ್ವೀಟ್ ಮಾಡೋ ನೈತಿಕತೆ ಪ್ರಿಯಾಂಕ್ ಖರ್ಗೆಗಿಲ್ಲ: ಮಾಲೀಕಯ್ಯ ಗುತ್ತೇದಾರ

    ಗೋಯಲ್ ಬಗ್ಗೆ ಟ್ವೀಟ್ ಮಾಡೋ ನೈತಿಕತೆ ಪ್ರಿಯಾಂಕ್ ಖರ್ಗೆಗಿಲ್ಲ: ಮಾಲೀಕಯ್ಯ ಗುತ್ತೇದಾರ

    ಕಲಬುರಗಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಗ್ಗೆ ಟ್ವೀಟ್ ಮಾಡುವ ನೈತಿಕತೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗಿಲ್ಲ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಿಡಿಕಾರಿದ್ದಾರೆ.

    ಕಲಬುರಗಿ ನಗರದಲ್ಲಿ ನಡೆದ ಸಿಎಎ ಜಾಗೃತಿ ರ‍್ಯಾಲಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ದೇಶದ ಏಕತೆಗಾಗಿ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು. ಪ್ರಿಯಾಂಕ್ ಖರ್ಗೆ ತಮ್ಮ ತಟ್ಟೆಯಲ್ಲಿನ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಲಿ. ಮೊದಲು ಅವರ ಕ್ಷೇತ್ರ ಚಿತ್ತಾಪುರದಲ್ಲಿ ಕೋಟಿಗಟ್ಟಲೆ ಅವ್ಯವಹಾರದ ನಡೆದಿದೆ. ಕೆಆರ್‍ಐಡಿಎಲ್, ಲ್ಯಾಂಡ್ ಆರ್ಮಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇವೆಲ್ಲದರ ಬಗ್ಗೆ ದಾಖಲೆಗಳ ಸಮೇತ ದೂರು ನೀಡಲು ನಿರ್ಧರಿಸಿದ್ದೇನೆ. ಹೀಗೆ ಕೋಟಿಗಟ್ಟಲೆ ಅವ್ಯವಹಾರ ಮಾಡಿದವರು ಪಿಯೂಷ್ ಗೋಯಲ್ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಅಂತಾ ಮಾಲೀಕಯ್ಯ ಗುತ್ತೇದಾರ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೋಯಲ್ ಟ್ವೀಟಿಗೆ ಪ್ರಿಯಾಂಕ್ ಖರ್ಗೆ ಟಾಂಗ್

    ಮುಂಬರುವ ದಿನಗಳಲ್ಲಿ ಪ್ರಿಯಾಂಕ್ ಅವರ ಕ್ಷೇತ್ರದ ಅವ್ಯವಹಾರದ ಬಗ್ಗೆ ದೂರು ಕೊಡುತ್ತೆನೆ, ನಮ್ಮ ಅವಧಿಯಲ್ಲಿ ಅಫಜಲ್‍ಪುರ ಕ್ಷೇತ್ರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳು ಇದ್ದರೆ ಅವರು ದೂರು ನೀಡಲಿ ನಾನು ಅದನ್ನು ಸ್ವಾಗತಿಸುತ್ತೆನೆ ಅಂತಾ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಲೀಕಯ್ಯ ಗುತ್ತೇದಾರ ಸವಾಲ್ ಹಾಕಿದ್ದಾರೆ.

  • ಸಿಎಎ ಬಗ್ಗೆ ಜಾಗೃತಿಗಾಗಿ ಜನವರಿ 11ರಂದು ಬೃಹತ್ ಜಾಥಾ – ಮಾಲೀಕಯ್ಯ ಗುತ್ತೇದಾರ

    ಸಿಎಎ ಬಗ್ಗೆ ಜಾಗೃತಿಗಾಗಿ ಜನವರಿ 11ರಂದು ಬೃಹತ್ ಜಾಥಾ – ಮಾಲೀಕಯ್ಯ ಗುತ್ತೇದಾರ

    ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲಿಸಿ ಹಾಗೂ ಜನರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಇದೇ ತಿಂಗಳು 11 ರಂದು ಕಲಬುರಗಿಯಲ್ಲಿ ಬೃಹತ್ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹೇಳಿದರು.

    ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತೇದಾರ್, ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆ ಬಹತೇಕ ಜನರಿಗೆ ಗೊತ್ತೇ ಇಲ್ಲ, ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿ ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅದಕ್ಕಾಗಿ ಜನರಿಗೆ ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆ ಅರಿವು ಮೂಡಿಸಲು ಜ.11 ರಂದು ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಈ ಜಾಥಾವು ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆಯಲಿದೆ ಎಂದರು. ಜಾಥಾದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.