Tag: ಮಾಲೀಕ

  • ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

    ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

    ಬೆಂಗಳೂರು: ಅಪರಿಚಿತರು ಬಂದಾಗ ಸಾಕು ನಾಯಿಗಳು ಬೊಗಳುವುದು ಸಾಮಾನ್ಯ. ಅಂತೆಯೇ ನಾಯಿ ಬೊಗಳಿದ್ದಕ್ಕೆ (Dog Barking) ಪಕ್ಕದ ಮನೆಯವನು ಕಿರಿಕ್ ಮಾಡಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ್ದಾರೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಪೊಲೀಸರನ್ನೇ ಅಟ್ಟಾಡಿಸಿದ ರೈತರು

    ನಡೆದಿದ್ದೇನು..?: ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಸಾಕುತ್ತಿದ್ದಾರೆ. ಮಾರ್ಚ್ 7 ರಂದು ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು. ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ಅಟ್ಯಾಕ್ ಮಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದೆ.

    ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು.

    ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ.

  • ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

    ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ (Rented House) ಪಡೆಯುವವರು ಹುಷಾರಾಗಿರಬೇಕು ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ. ಲಕ್ಷ ಲಕ್ಷ ಹಣ ಅಡ್ವಾನ್ಸ್ ಪಡೆದಿದ್ದ ಮನೆ ಮಾಲೀಕ (Owner) ನಾಪತ್ತೆ ಆಗಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.

    ಬಿಲ್ಡಿಂಗ್ ಮಾಲೀಕರಾದ ಸೈಯದ್ ಇತ್ನೈನ್, ಸೈಯದ್ ಅಬ್ಬಾಸ್ ಎಸ್ಕೇಪ್ ಆದ ಮಾಲೀಕರು. ಆರ್.ಟಿ ನಗರದಲ್ಲಿ 3 ಕುಟುಂಬಗಳು, 10 ಲಕ್ಷ, 15 ಲಕ್ಷ, 12 ಲಕ್ಷ ಅಡ್ವಾನ್ಸ್ ಕೊಟ್ಟು ಲೀಸ್‍ಗೆ ಮನೆಯಲ್ಲಿದ್ದಾರೆ. ಈ 3 ಕುಟುಂಬಗಳು ಕಳೆದ ನಾಲ್ಕೈದು ವರ್ಷಗಳಿಂದ ಲೀಸ್‍ಗೆ ಇದ್ದಾರೆ. ಆದರೆ ಮನೆ ಮಾಲೀಕರು ಮಾತ್ರ ಎಲ್‍ಐಸಿ ಫೈನಾನ್ಸ್‌ನಲ್ಲಿ, ಈ ಬಿಲ್ಡಿಂಗ್ ಮೇಲೆ ಸಾಲ ಪಡೆದು, ಫೈನಾನ್ಸ್ ಅವರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

    ಇದೀಗ ಮನೆಗೆ ನೋಟಿಸ್ ಕೊಟ್ಟಿರುವ ಫೈನಾನ್ಸ್ ಕಂಪನಿ, ಹಣ ಕಟ್ಟದಿದ್ದರೇ ಬಿಲ್ಡಿಂಗ್‍ನ ವಶಪಡಿಸಿಕೊಳ್ಳುದಾಗಿ ಎಚ್ಚರಿಸಿದ್ದಾರೆ. ಇದರಿಂದ ಬಾಡಿಗೆದಾರರು ಹೆದರಿದ್ದು, ನಾವು ಅಡ್ವಾನ್ಸ್ ಹಣ ಕೊಟ್ಟು, ಬೀದಿಗೆ ಬರಬೇಕಾಗುತ್ತದೆ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

    ಸದ್ಯ ಸಾಲ ಸೂಲ ಮಾಡಿ, ಲಕ್ಷ ಲಕ್ಷ ಹಣ ಅಡ್ವಾನ್ಸ್ ಕೊಟ್ಟವರು ಇದೀಗ ಕಣ್ಣೀರು ಹಾಕುತ್ತಿದ್ದು, ಫೈನಾನ್ಸ್‌ನವರು ನಮ್ಮನ್ನ ಮನೆಯಿಂದ ಹೊರ ಹಾಕಿದರೇ, ನಮ್ ಗತಿ ಏನ್ ಅಂತ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಮನೆ ಮಾಲೀಕರ ವಿರುದ್ಧ ಬಾಡಿಗೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್‌ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಳ್ಳನ ಕಾಲಿಗೆ ಗುಂಡು ಹಾರಿಸಿದ ಮನೆ ಮಾಲೀಕ

    ಕಳ್ಳನ ಕಾಲಿಗೆ ಗುಂಡು ಹಾರಿಸಿದ ಮನೆ ಮಾಲೀಕ

    ಬೆಂಗಳೂರು: ಕಳ್ಳತನಕ್ಕೆಂದು ಬಂದಿದ್ದ ಕಳ್ಳನ (Thief) ಮೇಲೆ ಮನೆ ಮಾಲೀಕ (Owner) ಗುಂಡು ಹಾರಿಸಿದ ಘಟನೆ ಬೆಂಗಳೂರಿನ (Bengaluru) ಸಂಪಿಗೇಹಳ್ಳಿಯ ರಾಚೇನಹಳ್ಳಿಯಲ್ಲಿ ನಡೆದಿದೆ.

    ಕಳ್ಳ ಲಕ್ಷ್ಮಣ್ ಎಂಬಾತನ ಕಾಲಿಗೆ ಮಾಲೀಕ ವೆಂಕಟೇಶ್ ಎಂಬಾತ ಗುಂಡು ಹಾರಿಸಿದ್ದಾನೆ. ಬೆಳಗಿನ ಜಾವ ಎರಡೂವರೆ ಸುಮಾರಿಗೆ ಮನೆಗೆ ಕಳ್ಳ ಲಕ್ಷ್ಮಣ್ ಎಂಟ್ರಿಯಾಗಿದ್ದ. ಲಕ್ಷ್ಮಣ್ ಕಾಂಪೌಂಡ್ ಹಾರುತ್ತಿದ್ದಂತೆ ನಾಯಿಗಳು ಜೋರಾಗಿ ಬೊಗಳೋಕೆ ಶುರು ಮಾಡಿದ್ದವು. ಈ ವೇಳೆ ನಾಯಿ (Dog) ಬೊಗಳುವ ಸದ್ದು ಕೇಳಿ ಎಚ್ಚೆತ್ತ ವೆಂಕಟೇಶ್ ತನ್ನ ಬಳಿಯಿದ್ದ ಲೈಸೆನ್ಸ್ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಹೊರಬಂದಿದ್ದಾನೆ.

    crime

    ಇದನ್ನು ನೋಡಿದ ಲಕ್ಷ್ಮಣ್ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಆ ವೇಳೆಗೆ ಲಕ್ಷ್ಮಣ್‍ನ ಬಲಗಾಲಿಗೆ ಮಾಲೀಕ ವೆಂಕಟೇಶ್ ಗುಂಡು ಹಾರಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಳ್ಳ ಲಕ್ಷ್ಮಣ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಪಿಗೇಹಳ್ಳಿ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್‍ನ ಹಾಲಿ ಶಾಸಕರ ಹೆಸರು!

    ಈ ಬಗ್ಗೆ ಮನೆ ಮಾಲೀಕ ವೆಂಕಟೇಶ್ ಮಾತನಾಡಿ, ರಾತ್ರಿ ಎರಡೂವರೆ ಸುಮಾರಿಗೆ ಮನೆಯಲ್ಲಿ ನಾಯಿಗಳು ಜೋರಾಗಿ ಬೊಗಳಲು ಶುರುಮಾಡಿದ್ದವು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸಿಸಿಟಿವಿ ಮಾನಿಟರ್ ನೋಡಿದ ವೇಳೆ ಕಳ್ಳನೊಬ್ಬ ಒಳಗೆ ಬರುತ್ತಿರುವುದು ಗೊತ್ತಾಗಿತ್ತು. ತಕ್ಷಣ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಹಿಡಿದು ಹೊರ ಬಂದಿದ್ದೆ ಎಂದರು.

    ಈ ವೇಳೆ ಆತ ಗ್ಯಾಸ್ ಕಟರ್ ಹಿಡಿದು ಮನೆಯ ಗೇಟ್ ಒಳಗೆ ಬಂದಿದ್ದ. ಆಗ ನಾನು ಫಸ್ಟ್ ಫ್ಲೋರ್‌ನಿಂದಲೇ ಆತನ ಮೇಲೆ ಫೈರ್ ಮಾಡಿದೆ. ಇನ್ನೂ ತುಂಬಾ ಜನ ಕಳ್ಳರು ಒಟ್ಟಿಗೆ ಬಂದಿದ್ದಾರೆ ಅಂತಾ ಭಯವಾಗಿ ಫೈರ್ ಮಾಡಿದೆ ಎಂದ ಅವರು, ಐವತ್ತು ವರ್ಷದಿಂದ ಇದೇ ಜಾಗದಲ್ಲಿ ವಾಸವಾಗಿದ್ದಾನೆ, ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು

    Live Tv
    [brid partner=56869869 player=32851 video=960834 autoplay=true]

  • ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ಅಥಣಿ (Athani) ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ಪುರಸಭೆ ವಾಹನಗಳ ಮೂಲಕ ಕಸ ಸಂಗ್ರಹಿಸುವ ಪೌರಕಾರ್ಮಿಕರು (Civic Worker) ಕಸದಲ್ಲಿ ದೊರೆತ 50 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಸಂಬಂಧಪಟ್ಟ ಮಾಲೀಕರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಪ್ರತಿದಿನದಂತೆ ಮುಂಜಾನೆ ಎಂ.ಜಿ. ಮಾರ್ಕೆಟ್‍ನಲ್ಲಿ (M.G.Market) ಕಸ ಸಂಗ್ರಹಿಸಿದ ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು. ಚಿನ್ನದ ಸರವನ್ನು ಕಳೆದುಕೊಂಡ ಮಾಳಿ ಜ್ಯುವೆಲರಿ ಮಾಲೀಕರು ಕಾಗದ ಒಂದರಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಸರ ಕಸದ ಡಬ್ಬಿಯಲ್ಲಿ ಹೋಗಿರುವ ಸಂದೇಹವಿದೆ. ಸ್ವಲ್ಪ ಹುಡುಕಿ ನೋಡಿ ಎಂದು ಪೌರಕಾರ್ಮಿಕರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌

    ನಂತರ ಎರಡನೇ ಬಾರಿಗೆ ಕಸ ವಿಲೇವಾರಿ ಮಾಡಲು ಹೋದಾಗ ಮೊದಲನೇ ಬಾರಿ ವಿಲೇವಾರಿ ಮಾಡಿದ್ದ ಕಸದಲ್ಲಿ ಚಿನ್ನದ ಸರ ದೊರಕಿದ್ದು, ಅದನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ಬಸವರಾಜು ಕೋರಿ ಅವರನ್ನು ಪಟ್ಟಣದ ವ್ಯಾಪಾರಸ್ಥರು, ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ

    Live Tv
    [brid partner=56869869 player=32851 video=960834 autoplay=true]

  • ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    -ಹಣದ ಬ್ಯಾಗ್‍ನೊಂದಿಗೆ ರಾಜ್ಯಾದ್ಯಾಂತ ತೀರ್ಥಯಾತ್ರೆ
    -ಕಂತೆ ಕಂತೆ ನೋಟುಗಳೇ ಈತನ ತಲೆದಿಂಬು..!

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನನ್ನ ಕಾರಿನ ಚಾಲಕ 75 ಲಕ್ಷ ರೂಪಾಯಿ ಹಣದ ಸಮೇತ, ಕಾರು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ನಗರದ ಬ್ಯಾಟರಾಯನಪುರ (Batarayanpura) ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

    ಹೌದು, ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಹರೀಶ್ ಅವರ ಕಾರು ಚಾಲಕ ಸಂತೋಷ್ ಜೊತೆಗೆ ನಗರದ ಕಡೆಗೆ ಹೊರಟಿದ್ದರು. ಹೊರಡುವ ವೇಳೆ ವ್ಯವಹಾರ ಸಂಬಂಧ 75 ಲಕ್ಷ ರೂ. ಹಣದ ಬ್ಯಾಗ್ ಅನ್ನು ಕಾರಿನಲ್ಲಿಟ್ಟುಕೊಂಡು ಹೊರಟಿದ್ದರು. ಕಾರು ಬ್ಯಾಟರಾಯನಪುರದ ಬಳಿ ಬರುತ್ತಿದ್ದಂತೆ, ಮಾಲೀಕ ಹರೀಶ್ ಸಿಗರೇಟು ಸೇದುವುದಕ್ಕೆ ಅಂತಾ ಗಾಡಿ ನಿಲ್ಲಿಸಲು ಹೇಳಿ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

    ಇದೇ ಸಮಯಕ್ಕಾಗಿ ಕಾಯುತ್ತಿದ್ದ ಚಾಲಕ ಸಂತೋಷ್, ಕ್ಷಣಮಾತ್ರದಲ್ಲೇ ಪೋರ್ಡ್ ಕಾರಿನ ಸಮೇತ 75 ಲಕ್ಷ ಹಣ ರೂ. ದೋಚಿ ಎಸ್ಕೇಪ್ ಆಗಿದ್ದಾನೆ. ಹೀಗೆ ಹಣ ಜೊತೆಗೆ ಎಸ್ಕೇಪ್ ಆದ ಚಾಲಕ, ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಸುತ್ತಾಡಿ, ಯಾರಿಗೂ ಅನುಮಾನ ಬಾರದಂತೆ, ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ತಿಂದುಕೊಂಡು, ದೇವಸ್ಥಾನದ ಅವರಣದಲ್ಲೇ 75 ಲಕ್ಷ ರೂ. ಹಣದ ಬ್ಯಾಗ್ ತಲೆದಿಂಬು ಮಾಡಿಕೊಂಡು, ಯಾರಿಗೂ ಅನುಮಾನ ಬಾರದಂತೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಆರೋಪಿಯನ್ನು ಶೃಂಗೇರಿಯಲ್ಲಿ ಬಂಧಿಸಿ 72 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಾಮಾನ್ಯವಾಗಿ ಹಣ ಕಳೆದುಕೊಂಡ ಮರುಕ್ಷಣವೇ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ 75 ಲಕ್ಷ ರೂ. ಹಣವನ್ನು ತನ್ನ ಡ್ರೈವರ್ ಕಳ್ಳತನ ಮಾಡಿ ಎಸ್ಕೇಪ್ ಆಗಿರುವುದು ಕಣ್ಣಾರೆ ನೋಡಿದರೂ ಕೂಡ, ಉದ್ಯಮಿ ಹರೀಶ್ ಪೊಲೀಸರಿಗೆ ದೂರು ನೀಡಿಲ್ಲ. ಘಟನೆ ನಡೆದು 20 ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ ಹಿಂದಿನ ಸತ್ಯವೇನು ಎಂಬ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಉದ್ಯಮಿ ಮಾತ್ರ 75 ಲಕ್ಷ ರೂ. ಹಣದ ಮೂಲದ ಬಗ್ಗೆ ಸೂಕ್ತ ಉತ್ತರ ನೀಡಿಲ್ಲ. ಬದಲಿದೆ, ಡ್ರೈವರ್‌ನ ಪತ್ತೆ ಮಾಡುವುದಕ್ಕೆ ತಾನೇ ಪ್ರಯತ್ನ ಪಟ್ಟು ಕೊನೆಗೆ ದೂರು ನೀಡಿದ್ದಾರೆ. ಹೀಗಾಗಿ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲು ಐಟಿ ಇಲಾಖೆಗೆ ಬ್ಯಾಟರಾಯನಪುರ ಪೊಲೀಸರು, ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಯುವಜನತೆಗೆ ಕೇಂದ್ರ ಸರ್ಕಾರ 10 ಲಕ್ಷ ಉದ್ಯೋಗ ಒದಗಿಸುವ ಕೆಲಸ ಮಾಡ್ತಿದೆ – ಮೋದಿ

    ಪೊಲೀಸರಿಗೆ ಇರುವ ಮಾಹಿತಿ ಪ್ರಕಾರ, 75 ಲಕ್ಷ ರೂ. ಬ್ಲಾಕ್ ಮನಿ ಇರಬಹುದು ಅಂತಾ ಶಂಕಿಸಲಾಗಿದೆ. ಈ ವಿಚಾರ ತಿಳಿದೇ ಡ್ರೈವರ್ ಹಣವನ್ನು ದೋಚಿದ್ದ ಎನ್ನಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು, ನಂತವಷ್ಟೇ ಈ ಹೈಡ್ರಾಮದ ಆಸಲಿ ಕಹಾನಿ ತಿಳಿಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ  ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.

    crime

    ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    Live Tv
    [brid partner=56869869 player=32851 video=960834 autoplay=true]

  • 14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    ಚಿಕ್ಕಮಗಳೂರು: ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ (Labour) ಮೇಲೆ ತೋಟದ ಮಾಲೀಕ (Owner) ಹಲ್ಲೆ (Assault) ಮಾಡಿದ್ದು, ಇದರಿಂದ 2 ತಿಂಗಳ ಗರ್ಭಿಣಿಗೆ (Pregnant) ಗರ್ಭಪಾತವಾಗಿದೆ (Miscarriage) ಎಂದು ಕೂಲಿ ಕಾರ್ಮಿಕರು ತೋಟದ ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿ, ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.

    ಪುರ ಗ್ರಾಮದ ಜಗದೀಶ್ ಎಂಬವರ ತೋಟದಲ್ಲಿ ಆಲ್ದೂರು ಸಮೀಪದ 6-7 ಕುಟುಂಬಗಳು ಕಳೆದ 4-5 ತಿಂಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ, ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕುಟುಂಬಗಳ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನು ಮುಟ್ಟಿ ಮಾಲೀಕರ ಬಳಿಯೂ ಹೋಗಿತ್ತು. ಈ ವೇಳೆ ಮಾಲೀಕ ಮಕ್ಕಳ ಜಗಳ ಸುಮ್ಮನರ‍್ರೋ ಎಂದು ಹೇಳಿ ಸುಮ್ಮನಾಗಿದ್ದರೆ ಮುಗಿದೋಗುತ್ತಿತ್ತು. ಸಾಹುಕಾರರು ದೊಡ್ಡವರಾಗುತ್ತಿದ್ದರು. ಆದರೆ ಕಾರ್ಮಿಕರು ದೂರು ಹೇಳುತ್ತಿದ್ದಂತೆ ಏಕಾಏಕಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್

    ತೋಟದ ಮಾಲೀಕ ಜಗದೀಶ್ ತಮಗೆ ಹೊಡೆದಿರುವುದು ಮಾತ್ರವಲ್ಲದೇ 6 ಕುಟುಂಬದ 14 ಕಾರ್ಮಿಕರನ್ನು ಒಂದು ದಿನವಿಡೀ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ನೊಂದ ಕಾರ್ಮಿಕರು ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಮಿಕರ ಬಳಿ ಇದ್ದ ಮೊಬೈಲ್ ಅನ್ನೂ ಕೂಡ ಮಾಲೀಕ ಕಿತ್ತುಕೊಂಡಿದ್ದು, ಗರ್ಭಿಣಿಯೊಬ್ಬಳು ತನ್ನ ಫೋನ್ ಅನ್ನು ಕೊಡಲು ಹಿಂದೇಟು ಹಾಕಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

    ಮಾಲೀಕ 2 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆಗೆ ಗರ್ಭಪಾತವಾಗಿರುವುದಾಗಿ ಆಕೆಯ ತಾಯಿ ಗೀತಾ ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕ ಜಗದೀಶ್ ಹಾಗೂ ತಿಲಕ್ ಎಂಬವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 504(ಶಾಂತಿ ಭಂಗವನ್ನು ಮಾಡಲು ಉದ್ದೇಶಿಸುವುದಕ್ಕಾಗಿ ಉದ್ದೇಶ ಪೂರ್ವಕ ಅವಮಾನ), 323(ಸ್ವಯಿಚ್ಛೆಯಿಂದ ಗಾಯವನ್ನುಂಟುಮಾಡಿದ್ದಕ್ಕೆ ದಂಡನೆ), 342(ಅಕ್ರಮ ಬಂಧನಕ್ಕಾಗಿ ದಂಡನೆ) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    Live Tv
    [brid partner=56869869 player=32851 video=960834 autoplay=true]

  • ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಲಕ್ನೋ: ಎಸ್‍ಯುವಿ (SUV) ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಪೆಟ್ರೋಲ್ ಪಂಪ್ ಮಾಲೀಕನನ್ನು (Petrol Pump Owner) ಅಪರಿಹರಿಸಲು ಯತ್ನಿಸಿರುವ ಘಟನೆ ವಾರಣಾಸಿಯಲ್ಲಿ (Varanasi) ನಡೆದಿದೆ.

    ಗುರುವಾರ ರಾತ್ರಿ ಶಿವಪುರಿಯ (Shivpuri) ತರ್ನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಹನಕ್ಕೆ ಇಂಧನ ತುಂಬಿದ ನಂತರ ಆರೋಪಿಗಳು ಪೆಟ್ರೋಲ್ ಪಂಪ್ ಮಾಲೀಕರನನ್ನು ಅಪಹರಿಸಲು ಪ್ರಯತ್ನಿಸಿದರು. ಆದರೆ ಸಿಬ್ಬಂದಿ ಮಧ್ಯಪ್ರವೇಶಿಸಿದ ಹಿನ್ನೆಲೆ ಅವರ ಕಿಡ್ನ್ಯಾಪ್‍ ಪ್ಲಾನ್ ವಿಫಲವಾಯಿತು.  ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    ವೀಡಿಯೋದಲ್ಲಿ ಆರೋಪಿಯೊರ್ವ ಪೆಟ್ರೋಲ್ ಪಂಪ್ ಮಾಲೀಕರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮತ್ತಿಬ್ಬರು ಎಸ್‍ಯುವಿ ಕಾರನ್ನು ಚಾಲನೆ ಮಾಡುವಂತೆ ಮತ್ತೊಬ್ಬನಿಗೆ ಹೇಳುತ್ತಿರುತ್ತಾನೆ. ವಾಹನ ಸಮೀಪಕ್ಕೆ ಬರುತ್ತಿದ್ದಂತೆ ಆರೋಪಿ, ಪೆಟ್ರೋಲ್ ಪಂಪ್ ಮಾಲೀಕನನ್ನು ಕಾರಿನೊಳಗೆ ತಳ್ಳಲು ಪ್ರಯತ್ನಿಸುತ್ತಾನೆ. ಇದನ್ನೂ ಓದಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು

    ನಂತರ ಭದ್ರತಾ ಸಿಬ್ಬಂದಿ, ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದಾಗ ಅಲ್ಲಿಯೇ ಇದ್ದ ಗ್ರಾಹಕರು ಜಮಾಯಿಸುತ್ತಾರೆ. ಈ ವೇಳೆ ಗಾಬರಿಗೊಂಡ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಿ ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೃತ ಹೋರಿಗೆ ತಿಥಿ ಕಾರ್ಯ – ಶರವೇಗದ ಓಟಗಾರ ಹಠವಾದಿಗೆ ವಿದಾಯ

    ಮೃತ ಹೋರಿಗೆ ತಿಥಿ ಕಾರ್ಯ – ಶರವೇಗದ ಓಟಗಾರ ಹಠವಾದಿಗೆ ವಿದಾಯ

    ಹಾವೇರಿ: ಈ ‘ಹಠವಾದಿ’ಗೆ ಮನೆಯವರು, ಊರಿನವರು ಮಾತ್ರವಲ್ಲ ಸಾಕಷ್ಟು ಅಭಿಮಾನಿಗಳ ದಂಡೇ ಇದೆ. ಶರವೇಗದ ಓಟಕ್ಕೆ ಹೆಸರಾಗಿದ್ದ ಹಠವಾದಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಇದೀಗ ಮನೆಯವರು ಆತನಿಗೆ ತಿಥಿಕಾರ್ಯ ನೆರವೇರಿಸಿ, ಊರಿನವರು ಮತ್ತು ಅಭಿಮಾನಿಗಳಿಗೆ ತಿಥಿ ಊಟ ಹಾಕಿದ್ರು.

    ಹೌದು. ಹಾವೇರಿ (Haveri) ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಸುರೇಶ ಸೋಮನಕಟ್ಟಿ ಎಂಬ ರೈತ 18 ವರ್ಷಗಳ ಹಿಂದೆ ಶಿವಮೊಗ್ಗದಿಂದ ಹೋರಿಯೊಂದನ್ನು ತಂದಿದ್ರು. ತಂದ ವರ್ಷವೇ ಹೋರಿಯನ್ನು ಹೋರಿ (Bull) ಹಬ್ಬದ ಅಖಾಡಕ್ಕೆ ಬಿಡೋಕೆ ಶುರು ಮಾಡಿದ್ರು. ಹೋರಿಯ ಗತ್ತು, ದವಲತ್ತು, ಅದರ ಗುಣಗಳನ್ನು ನೋಡಿ ಅದಕ್ಕೆ ಹಠವಾದಿ ಅಂತ ಹೆಸರಿಟ್ಟರು. ಅಲ್ಲಿಂದ ಶುರುವಾದ ಹಠವಾದಿಯ ಶರವೇಗದ ಓಟ ಬಹುಮಾನ ಬಾಚಿಕೊಳ್ತಿದ್ದ. ಹೀಗಿದ್ದ ಹೋರಿ ಹಬ್ಬದ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಹಠವಾದಿಯ ಮೃತಪಟ್ಟು ನೆನ್ನೆಗೆ 5 ದಿನಗಳು ಕಳೆದಿದ್ದರಿಂದ ಮನುಷ್ಯರಿಗೆ ತಿಥಿ ಕಾರ್ಯ ಮಾಡುವಂತೆ ಹಠವಾದಿ ಹೋರಿಗೂ ತಿಥಿ ಕಾರ್ಯ ನೆರವೇರಿಸಿದ್ರು. ಇದನ್ನೂ ಓದಿ: ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ’

    ಮನುಷ್ಯರು ಕಾಲವಾದಾಗ ತಿಥಿ ಕಾರ್ಯ ಮಾಡುತ್ತಾರೆ. ಅದೇ ರೀತಿ ಹಠವಾದಿ ಹೋರಿ ಮೃತಪಟ್ಟ 5 ದಿನಗಳಾಗಿದ್ದು, ಮಾಲೀಕ ನೆಚ್ಚಿನ ಹೋರಿಗೆ ತಿಥಿ ಕಾರ್ಯ ನೆರವೇರಿಸಿದ್ರು. ತರಹೇವಾರಿ ಹಣ್ಣುಗಳು, ಸಿಹಿ ತಿನಿಸುಗಳು ಇಟ್ಟು ಗ್ರಾಮದಲ್ಲಿನ ಸ್ವಾಮೀಜಿಯನ್ನು ಕರೆಸಿ ಪೂಜೆ ನೆರವೇರಿಸಿದರು. ಹಠವಾದಿ ಹೆಸರಿನ ಹೋರಿ ಮನೆಗೆ ಬಂದಾಗಿಂದ ಮನೆಯವರಿಗೆ ಸಾಕಷ್ಟು ಒಳ್ಳೆಯದಾಗಿತ್ತಂತೆ. ಜಮೀನು, ಸೈಟ್ ಕೂಡ ಖರೀದಿ ಮಾಡಿದ್ದಾರಂತೆ.

    ಹಾವೇರಿ, ದಾವಣಗೆರೆ, ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಹಬ್ಬದ ಅಖಾಡದಲ್ಲಿ ಹಠವಾದಿ ದೊಡ್ಡ ಹೆಸರು ಮಾಡಿದ್ದರಿಂದ ಅಭಿಮಾನಿಗಳು (Followers) ಹೋರಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ಹೋರಿಗೆ ಪೂಜೆ ಸಲ್ಲಿಸಿ, ಗೋಧಿ ಹೂಗ್ಗಿಯ ಊಟ ಸವಿದು ಮನೆಯತ್ತ ಹೆಜ್ಜೆ ಹಾಕಿದ್ರು.

    Live Tv
    [brid partner=56869869 player=32851 video=960834 autoplay=true]