Tag: ಮಾಲಕಿ

  • ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    – ಮರು ತಯಾರಿಕೆಗಾಗಿ ದಿನಗೂಲಿ ಕಾರ್ಮಿಕರ ನೇಮಕ
    – ಮಾಹಿತಿ ಮೇರೆಗೆ ದಾಳಿ, ಮಾಲಕಿ ಅರೆಸ್ಟ್

    ಹನೋಯಿ: ಉಪಯೋಗಿಸಿ ಬಿಸಾಡಿದ್ದ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಮರುಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ವಿಯೆಟ್ನಾ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಮರುಬಳಕೆ ಮಾಡಲಾಗುತ್ತಿದ್ದ 3,24,000 ಉಪಯೋಗಿಸಿದ ಕಾಂಡೋಮ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲಿಗೆ ಉಪಯೋಗಿಸಿದ್ದ ಕಾಂಡೋಮ್‍ಗಳನ್ನು ಸಂಗ್ರಹಿಸಿ ರಾಸಾಯನಿಕಯುಕ್ತ ನೀರಿನಿಂದ ಶುಚಿಗೊಳಿಸಲಾಗುತ್ತಿತ್ತು. ನಂತರ ಅದನ್ನು ಮರದ ಕೋಲಿನಿಂದ ಮರು ರೂಪಿಸಲಾಗುತ್ತಿತ್ತು. ಈ ಕೆಲಸವನ್ನು ಮಾಡಲು ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.

    ಇದು ದಕ್ಷಿಣ ವಿಯೆಟ್ನಾಂನ ಭಾಗದಲ್ಲಿರುವ ಬಿನ್ಹ್ ಡುವಾಂಗ್ ಪ್ರಾಂತ್ಯದ ಗೋದಾಮಿನಲ್ಲಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಆಗ ಬಳಸಿದ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮರು ಪ್ಯಾಕೇಜ್ ಮಾಡಿ ಸುರಕ್ಷಿತವಲ್ಲದ ಕಾಂಡೋಮ್‍ಗಳನ್ನು ಮತ್ತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಸಾವಿರಾರು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಗೋದಾಮಿನ ಮಾಲಕಿ ಫಾಮ್ ಥಿ ಥನ್ ನ್ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಒಂದು ತಿಂಗಳ ಹಿಂದೆ ಕಾಂಡೋಮ್ ಸ್ವೀಕರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕಾಂಡೋಮ್‍ಗಳನ್ನು ಸಾಕ್ಷಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಆದರೆ ಅವುಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈಗಾಗಲೇ ಎಷ್ಟು ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದಿಲ್ಲ. ಆದರೆ ಪೊಲೀಸರು 360 ಕೆ.ಜಿ. ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಗೋದಾಮಿನ ಸಮೀಪವಿರುವ ಹೋಟೆಲ್‍ಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.

  • ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ.

    ವಾಷಿಂಗ್ಟನ್‍ನ ಬೆಲ್ಲಿಂಗ್‍ಹ್ಯಾಮ್ ನಿವಾಸಿಯಾದ 16 ವರ್ಷದ ಯುವತಿ ಮೇರಿ, ತನ್ನ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ 2 ವರ್ಷದ ಮುದ್ದು ನಾಯಿಮರಿ ಜೊತೆ ಐರಿಶ್ ಡ್ಯಾನ್ಸ್ ಸ್ಟೆಪ್ ಕಲಿಯುತ್ತಿರುವ ವಿಡಿಯೋವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯರೊಬ್ಬರು ಈ ನಾಯಿಗಾಗಿಯೇ ಕೊರಿಯಾಗ್ರಫಿ ಮಾಡಿದ ಸ್ಟೆಪ್ ಕಲಿಯುತ್ತಿದ್ದೇವೆ ಅಂತ ಮೇರಿ ತನ್ನ ಪೋಸ್ಟ್‍ನಲ್ಲಿ ಹೇಳಿದ್ದಾರೆ.

    ಸೀಕ್ರೆಟ್ ಎಂಬ ಹೆಸರಿನ ಈ ನಾಯಿ ಮಾಲಕಿಯೊಂದಿಗೆ ಯೋಗಾಭ್ಯಾಸ ಕೂಡ ಮಾಡಿರುವ ವೀಡಿಯೋಗಳನ್ನ ಮೇರಿ ಹಂಚಿಕೊಂಡಿದ್ದು ಈಗಾಗಲೇ ಈ ನಾಯಿಗೆ ಇನ್ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಮೇರಿಯ ಅಕೌಂಟನ್ನ ಫಾಲೋ ಮಾಡ್ತಿದ್ದಾರೆ.

    ಮೇರಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿ ಹೇಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನಿಟ್ಟು ಡ್ಯಾನ್ಸ್ ಕಲಿಯುತ್ತಿದೆ ಎಂಬುವುದನ್ನು ಗಮನಿಸಬಹುದು. ಈ ವೀಡಿಯೋವನ್ನು ಇದುವರೆಗೆ 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋಗೆ ಸಾಕಷ್ಟು ಜನ ಕಮೆಂಟ್‍ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಓ ಮೈ ಗಾಡ್ ನಾಯಿ ಎಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ ಅಂದ್ರೆ ಇನ್ನೂ ಕೆಲವರು ಇದು ನಿಜಕ್ಕೂ ಅದ್ಭುತವಾಗಿದೆ ಅಂತಾ ಹೇಳಿದ್ದಾರೆ.

    https://www.youtube.com/watch?v=ILmfmHevjBk