Tag: ಮಾರ್ಷಲ್

  • ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾದ BBMP

    ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾದ BBMP

    ಬೆಂಗಳೂರು: ಮಾಸ್ಕ್ ದಂಡ, ಕಸದ ದಂಡ, ಪ್ಲಾಸ್ಟಿಕ್ ಬಳಕೆ ದಂಡ ಹಾಕಿದ್ದ ಬಿಬಿಎಂಪಿ, ಈಗ ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದೆ.

    ಕೆ.ಆರ್ ಮಾರ್ಕೆಟ್ ರೀತಿಯ ಬೃಹತ್ ಮಾರ್ಕೆಟ್‍ಗೆ ತರಕಾರಿ ಮಾರಲು ತಂದವರು ವ್ಯಾಪಾರ ನಡೆಸಿದ ಬಳಿಕ ಉಳಿದ ತರಕಾರಿಗಳನ್ನು ಮಂಡಿಯಲ್ಲೇ ಬಿಟ್ಟು ಹೋಗ್ತಾರೆ. ಆ ರೀತಿ ತರಕಾರಿಗಳನ್ನು ಮಂಡಿಯಲ್ಲಿ ಬಿಟ್ಟು ಹೋದವರ ಮೇಲೆ ಇನ್ಮುಂದೆ ದಂಡ ಬೀಳಲಿದೆ. ಕೆ.ಆರ್ ಮಾರ್ಕೆಟ್ ಬಳಿ ಮಾರ್ಷಲ್‍ಗಳು ಮೈಕ್‍ನಲ್ಲಿ ಈ ರೀತಿ ಅನೌನ್ಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ

    ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಂಡ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತರಕಾರಿ ಎಷ್ಟು ಬಿಟ್ಟು ಹೋಗಿದ್ದಾರೆ ಎಂಬ ತೂಕದ ಆಧಾರದ ಮೇಲೆ ದಂಡ ಹಾಕಲಾಗುತ್ತದೆ. ಅರ್ಧ ಟನ್, ಒಂದು ಟನ್‍ವರೆಗೂ ತರಕಾರಿ ಮಾರ್ಕೆಟ್‍ನಲ್ಲಿ ಬಿಟ್ಟು ಹೋದ್ರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಹಾಕಲು ನಿರ್ಧರಿಸಲಾಗಿದೆ. ಆದರೆ, ವ್ಯಾಪಾರಿಗಳು ನಮಗೆ ಲಾಭ ಆಗೋದೇ ನೂರು ರೂಪಾಯಿ. ಇದನ್ನು ದಂಡವಾಗಿ ಕಟ್ಟಿದರೆ ನಮ್ಮ ಗತಿ ಏನು ಎಂದು ದಂಡ ಪ್ರಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಗೆ ಮುಂದಾಗುತ್ತಾರಾ ಡಿಕೆ ಬದ್ರರ್ಸ್‌?

    ವೇಸ್ಟ್ ತರಕಾರಿಯನ್ನು ಹೀಗೆ ಮಾಡಿ:
    ಬಿಬಿಎಂಪಿ ಕಸದ ಲಾರಿಗೆ ವೇಸ್ಟ್ ತರಕಾರಿ ಹಾಕಿ. ವ್ಯಾಪಾರದ ವೇಳೆ ಪಕ್ಕದಲ್ಲಿ ಚೀಲ ಇಟ್ಕೊಂಡು ಕಸವನ್ನು ಹಾಕಿ. ಕೊಳೆತ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ ಕಸದ ಲಾರಿಗೆ ಹಾಕಿ. ತರಕಾರಿ ಮೇಲೆ ಹೊದಿಕೆಗೆ ಹಾಕಿದ ಪೇಪರ್, ಹುಲ್ಲು, ಚೀಲವನ್ನು ಪ್ರತ್ಯೇಕವಾಗಿ ಲಾರಿಗೆ ಹಾಕಿ ಈ ಮೂಲಕ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸದನದಲ್ಲಿ ಗದ್ದಲವೆಬ್ಬಿಸಿದ ಶಾಸಕರನ್ನು ಹೊತ್ತು ತಂದು ಹೊರಹಾಕಿದ ಮಾರ್ಷಲ್‍ಗಳು

    ಸದನದಲ್ಲಿ ಗದ್ದಲವೆಬ್ಬಿಸಿದ ಶಾಸಕರನ್ನು ಹೊತ್ತು ತಂದು ಹೊರಹಾಕಿದ ಮಾರ್ಷಲ್‍ಗಳು

    ಪಾಟ್ನಾ: ಬಿಹಾರದ ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಗದ್ದಲವೆಬ್ಬಿಸಿ ಚರ್ಚೆಗೆ ಅವಕಾಶ ಮಾಡಿಕೊಡದ ಕಾರಣ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾಕ್ರ್ಸಿಸ್ಟ್-ಲೆನಿನಿಸ್ಟ್ (ಸಿಪಿಐ-ಎಮ್‍ಎಲ್) ಶಾಸಕರನ್ನು ಮಾರ್ಷಲ್‍ಗಳು ಹೊತ್ತು ತಂದು ಹೊರ ಹಾಕಿದ ಘಟನೆ ನಡೆಯಿತು.

    ಬಿಹಾರ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಕುರಿತಾಗಿ ಚರ್ಚಿಸುವ ವೇಳೆ ಸರ್ಕಾರಕ್ಕೂ ಪ್ರತಿಪಕ್ಷದ ಶಾಸಕರಿಗೂ ಗದ್ದಲ ಏರ್ಪಟ್ಟಿದೆ. ಬಳಿಕ ಸದನದಲ್ಲಿದ್ದ ಮಾರ್ಷಲ್‍ಗಳು ಗದ್ದಲವೆಬ್ಬಿಸಿದ 8 ಶಾಸಕರನ್ನು ಹೊತ್ತು ತಂದು ಹೊರ ಹಾಕಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

    ಮಾರ್ಷಲ್‍ಗಳು ಸಚಿವರನ್ನು ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಹೊತ್ತು ತಂದು ಹೊರ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿಐ-ಎಮ್‍ಎಲ್ ಶಾಸಕ ಬೀರೇಂದ್ರ ಪ್ರಸಾದ್ ಗುಪ್ತಾ, ರಾಜ್ಯದಲ್ಲಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಮತ್ತು ದರ ಏರಿಕೆ ಕುರಿತಾಗಿ ಚರ್ಚೆ ನಡೆಸಲು ಮುಂದಾದಾಗ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿಲ್ಲ. ಅಲ್ಲದೆ ನಮ್ಮ ಶಾಸಕರನ್ನು  ಹೊರ ಹಾಕಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

     

  • ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

    ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

    ಮುಂಬೈ: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಾರ್ಷಲ್ ಒಬ್ಬರು ಕಾರನ್ನು ನಿಲ್ಲಿಸಿ ದಂಡ ವಿಧಿಸಿದ್ದು, ಅವರನ್ನೇ ಚಾಲಕ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ಸಾಂತಾ ಕ್ರೂಜ್ ನಲ್ಲಿ ಮಾರ್ಷಲ್ ಸುರೇಶ್ ಕರ್ತವ್ಯ ನಿರ್ವಹಿಸುತ್ತಿದ್ದು, ಟ್ರಾಫಿಕ್ ವೇಳೆ ಕಾರಿನಲ್ಲಿರುವವರು ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿ ಅವರಿಗೆ 200 ರೂ. ತಂಡ ವಿಧಿಸಲು ಮುಂದಾಗಿದ್ದರೆ. ಅವರು ಇನ್ನೂ ದಂಡ ಬರೆಯುತ್ತಿರಬೇಕಾದರೆ ಚಾಲಕ ಕಾರನ್ನು ಓಡಿಸಲು ಮುಂದಾಗಿದ್ದು, ಇದನ್ನೂ ಗಮನಿಸಿದ ಸುರೇಶ್ ಚಾಲಕನನ್ನು ತಡೆಯಲು ಕಾರಿನ ಬಾನೆಟ್ ಗೆ ಹಾರಿದ್ದಾರೆ. ಅದನ್ನು ಲೆಕ್ಕಿಸದೆ ಚಾಲಕ ಕಾರನ್ನು ಓಡಿಸಿದ್ದು, ಹೀಗೆ ಟ್ರಾಫಿಕ್‍ನಲ್ಲೆ ಸುಮಾರು ದೂರ ಸುರೇಶ್ ಅವರನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ಕೋಟಿ ವೆಚ್ಚದ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಾಣ

    ಈ ಪರಿಣಾಮ ಕಾರನ್ನು ಓಡಿಸುತ್ತಿದ್ದವನ ವಿರುದ್ಧ ದೂರು ದಾಖಲಾಗಿದ್ದು, ಸ್ಥಳದಿಂದ ಚಾಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ಅಪಘಾತದಲ್ಲಿ ಸಾವು

    ಸೆ.2 ರಂದು ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆದ ಬಳಿಕ ವಿಷಯ ಬೆಳಕಿನೆ ಬಂದಿದೆ.

     

  • ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕಲು ಸರ್ಕಾರ ಅನಿವಾರ್ಯವಾಗಿ ಇಡೀ ರಾಜ್ಯಕ್ಕೆ ಲಾಕ್ ಡೌನ್ ಜಾರಿಗೆ ತಂದಿತ್ತು. ಬಳಿಕ ಕೊರೊನಾ ಕೇಸ್‍ಗಳ ಸಂಖ್ಯೆ ಕಡಿಮೆ ಆಗುವುದಕ್ಕೆ ಶುರುವಾದ ನಂತರ ಸರ್ಕಾರ ಹಂತ ಹಂತವಾಗಿ ಅನ್‍ಲಾಕ್ ಘೋಷಿಸುತ್ತಾ ಬಂದಿದೆ.

    ಮೂರನೇ ಹಂತದ ಅನ್‍ಲಾಕ್ ಪ್ರಕ್ರಿಯೆ ಕಳೆದ ಸೋಮವಾರದಿಂದ ಜಾರಿಗೆ ಬಂದಿದೆ. ಬಹುತೇಕ ಶೇ 90ರಷ್ಟು ಚಟುವಟಿಕೆಗಳು ಈಗ ಮುಕ್ತವಾಗಿದೆ. ಇಂದು ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆಯ ಮೊದಲ ಭಾನುವಾರವಾಗಿದ್ದು, ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆಯೇ ಹೂವಿನ ವ್ಯಾಪಾರ ಜೋರಾಗಿ ನಡೆದಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಕೊರೊನಾ ನಿಯಮವಾಗಿರುವ ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತು ವ್ಯಾಪಾರದಲ್ಲಿ ತೊಡಗಿದ್ದಾರೆ.

    ಬೆಳಗ್ಗೆಯೇ ಮಾರ್ಷಲ್ ಗಳು ಸಹ ಕಾರ್ಯಾರಂಭ ಮಾಡಿದ್ದು, ಮಾರ್ಷಲ್ ಗಳನ್ನು ನೋಡಿದ ಕೂಡಲೇ ಮಾಸ್ಕ್ ಸರಿಯಾಗಿ ಹಾಕಿಕೊಳ್ಳುವ ಕಡೆ ಜನ ಗಮನ ವಹಿಸಿದ್ದಾರೆ. ಮಾರ್ಷಲ್ ಇದ್ದಾರೆ ಎಂಬ ಕಾರಣಕ್ಕೆ ನಿಯಮ ಪಾಲನೆ ಮಾಡುವುದಲ್ಲ, ಜನ ಸ್ವಪ್ರೇರಣೆಯಿಂದ ಕೊರೊನಾ ನಿಯಮಗಳ ಪಾಲನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಮತ್ತೆ ಕೊರೊನಾ ರಣಕೇಕೆ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕತ್ತರಿಸಿದ ಪತಿ

  • ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ: ಡಾ.ಕೆ.ಸುಧಾಕರ್

    ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ: ಡಾ.ಕೆ.ಸುಧಾಕರ್

    – ಲಾಕ್‍ಡೌನ್ ಹೇರುವ ಪರಿಸ್ಥಿತಿ ತರಬೇಡಿ
    – ಕೋವಿಡ್ 2 ನೇ ಅಲೆಯನ್ನು ತಡೆಯಲೇಬೇಕು

    ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾರಂಭಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. 500 ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದರು.

    ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಆಗಿದ್ದು, ಅದೇ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂದು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.

    ಸರ್ಕಾರಿ ಇಲಾಖೆಗಳಲ್ಲಿ 2,90,000 ಮಂದಿ ಇದ್ದು, ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎರಡು ಬಾರಿ ನೋಂದಣಿ ಮಾಡಿಸಿಕೊಂಡಿದ್ದು ಅದನ್ನು ತೆಗೆದು ಹಾಕಲಾಗುತ್ತಿದೆ. ಇದರಿಂದಾಗಿ ನಾವು ಮುಟ್ಟಿದ ಗುರಿ ಇನ್ನೂ ಹೆಚ್ಚಾಗಲಿದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಯಲ್ಲಿ ಶೇ.80 ರಿಂದ ಶೇ.90 ಮಂದಿಗೆ ಫೆಬ್ರವರಿ 28 ರೊಳಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಮುಂಚೂಣಿ ಸಿಬ್ಬಂದಿಗೆ ಫೆಬ್ರವರಿ 22, 23, 24 ಲಸಿಕೆ ಅಭಿಯಾನ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಸಿಕೆ ಅಭಿಯಾನ ಕುರಿತು ಮಾಹಿತಿ ಪಡೆಯುತ್ತಿದ್ದು, ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಆರೋಗ್ಯ ಸಿಬ್ಬಂದಿಯ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ಹಿಂದುಳಿದಿದೆ. ಬಾಗಲಕೋಟೆ, ದಾವಣಗೆರೆ, ಬೆಂಗಳೂರು ನಗರ, ಧಾರವಾಡ ಜಿಲ್ಲೆಗಳು ಶೇ.50 ಕ್ಕಿಂತ ಕಡಿಮೆ ಇದೆ. ಚಿಕ್ಕಬಳ್ಳಾಪುರ (79%), ತುಮಕೂರು (78%), ಉತ್ತರ ಕನ್ನಡ (73%), ಗದಗ (71%), ಚಿಕ್ಕಮಗಳೂರು (70%), ಚಾಮರಾಜನಗರ (70%) ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಸಾಧನೆಯಾಗಿದೆ. ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವಲ್ಲಿ ಗದಗ (84%) ತುಮಕೂರು (71%) ಮುಂದಿದೆ. ಬಾಗಲಕೋಟೆ (23%), ಬೆಂಗಳೂರು ನಗರ (26%), ಚಾಮರಾಜನಗರ (27%) ಹಿಂದುಳಿದಿದ್ದು, 80% ಗುರಿ ಸಾಧಿಸಬೇಕು ಎಂದು ಸೂಚಿಸಲಾಗಿದೆ ಎಂದರು.

    ಕೇರಳ, ಮಹಾರಾಷ್ಟ್ರ ಜನರ ಪ್ರಯಾಣಕ್ಕೆ ನಿರ್ಬಂಧ ಹೇರಲಿಲ್ಲ. ಆದರೆ ರಾಜ್ಯದೊಳಗೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಹಾಗೂ ಶಾಲೆಗಳನ್ನು ಹಂತಹಂತವಾಗಿ ತೆರೆಯುತ್ತಿದ್ದು, ಕೋವಿಡ್ ಸೋಂಕು ಹೆಚ್ಚಳದ ಸಮಸ್ಯೆಯಾಗಿಲ್ಲ. ಕೋವಿಡ್ 2 ನೇ ಅಲೆ ಬರದಂತೆ ಕ್ರಮ ವಹಿಸಲಾಗುತ್ತಿದೆ. ಮಾರ್ಚ್‍ನಿಂದ ಸಾಮಾನ್ಯ ಜನರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದು ನುಡಿದರು.

  • ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗಕ್ಕೆ ತಾತ್ಕಾಲಿಕ ರಿಲೀಫ್

    ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗಕ್ಕೆ ತಾತ್ಕಾಲಿಕ ರಿಲೀಫ್

    ಬೆಂಗಳೂರು: ಮಾಸ್ಕ್ ಧರಿಸದ ನೆಪದಲ್ಲಿ ಬಡವರು, ಶ್ರೀಸಾಮಾನ್ಯರಿಗೆ ಕೊರೊನಾ ಕಷ್ಟ ಕಾಲದಲ್ಲಿ 1,000 ರೂಪಾಯಿ ದಂಡ ವಿಧಿಸುತ್ತಿದ್ದ ಸರ್ಕಾರ ಸದ್ಯ ದಂಡದವನ್ನು ಇಳಿಸಿದೆ. ಆದರೆ ಇದರ ನಡುವೆಯೇ ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

    ಸದ್ಯ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ ಈ ಮೊದಲು ವಿಧಿಸಲಾಗಿದ್ದ ಸಾವಿರ ರೂಪಾಯಿ ದಂಡವನ್ನು 250ಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡವನ್ನು 100ಕ್ಕೆ ಇಳಿಸಿತು. ತಕ್ಷಣದಿಂದಲೇ ಜಾರಿಯಾಗುವಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರಿ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಆಗಬೇಕಾಗಿದ್ದು, ದುಬಾರಿ ದಂಡ ಹಾಕಲು ಆಗಲ್ಲ ಎಂಬ ಮಾಹಿತಿ ಲಭಿಸಿದೆ.

    ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಈಗಾಗಲೇ ಮಾರ್ಷಲ್‍ಗಳು ಮಾಸ್ಕ್ ಧರಿಸದೆ ಓಡಾಡುತ್ತಿರುವ ಮಂದಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗೆ ಇಳಿದಿದ್ದಾರೆ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್‍ಡೇಟ್ ಆಗಬೇಕಾಗಿದ್ದು, ಹೀಗಾಗಿ ನಗರದ ಎಲ್ಲೂ ದಂಡ ಪ್ರಯೋಗ ಸಾಧ್ಯಕ್ಕಿಲ್ಲ ಎಂದು ಮಾರ್ಷಲ್ ಮುಖ್ಯಸ್ಥ ರಾಜ್ ಬೀರ್ ಸಿಂಗ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಮಾಡುವ ಸಾಧ್ಯತೆ ಇದ್ದು, ಆ ಬಳಿಕವೇ ಹೊಸ ನಿಯಮದ ಅನ್ವಯ ದಂಡ ವಿಧಿಸಲು ಸಾಧ್ಯವಾಗುತ್ತದೆ. ಆದರೆ ಸಿಸ್ಟಂ ಅಪ್‍ಡೇಟ್ ಹಾಗಬಿದ್ದರೂ ಮಾಸ್ಕ್ ಧರಿಸದೇ ಬರುವ ವ್ಯಕ್ತಿಗಳ ಸಾಕ್ಷಿಯನ್ನು ಸಂಗ್ರಹಿಸಿ ಸಿಸ್ಟಂ ಅಪ್‍ಡೇಟ್ ಆದ ಬಳಿಕ ವಿಧಿಸುವ ಸಾಧ್ಯತೆ ಇದೆ.

    ಸರ್ಕಾರ ದಂಡ ಕಡಿಮೆ ಮಾಡುವುದರೊಂದಿಗೆ ಕೊರೊನಾ ನಿಯಂತ್ರಣದ ಹೆಚ್ಚಿನ ಜವಾಬ್ದಾರಿ ಜನರ ಹೆಗಲೇರಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿಯೇ ಇದೆ. ದಂಡ ಇಳಿಕೆಯಾಯ್ತು ಅಂತಾ ನೀವು ಮಾಸ್ಕ್ ಧರಿಸದೇ ಮೈಮರೆಯಬೇಡಿ. ಸದ್ಯದ ಮಟ್ಟಿಗೆ ಮಾಸ್ಕ್ ಒಂದೇ ಕೊರೋನಾಗೆ ಮದ್ದು, ಮಾಸ್ಕ್ ಧರಿಸಿ ಜೀವ ಉಳಿಸಿಕೊಳ್ಳಿ ಎಂಬುದು ಪಬ್ಲಿಕ್ ಟಿವಿಯ ಕಳಕಳಿಯ ಮನವಿಯಾಗಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮಾಸ್ಕನ್ನು ಮೂಗಿನಿಂದ ಕೆಳಗೆ ಇಳಿಸಿಕೊಳ್ಳುವ ಅಭ್ಯಾಸ ಕೈಬಿಡಿ. ಸರಿಯಾಗಿ ಮಾಸ್ಕ್ ಧರಿಸಿ. ವಾಹನದಲ್ಲಿ ಸಂಚರಿಸುವಾಗ ಮಾಸ್ಕ್ ಯಾಕೆ ಭಾವನೆ ಬೇಡ. ವಾಹನದಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಿ. ಮಾಸ್ಕ್ ತಪಾಸಣೆ ಬರುವ ಪೊಲೀಸರು, ಮಾರ್ಷಲ್‍ಗಳಿಗೆ ಸಹಕರಿಸಿ. ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರದ ಬಗ್ಗೆಯೂ ಗಮನ ಹರಿಸಿ.

  • ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    – ನಾಳೆಯಿಂದ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ನವದೆಹಲಿ: ಸಾರ್ವಜನಿಕರ ಸಂಪರ್ಕ ಸಾರಿಗೆ ಬಸ್‍ಗಳಲ್ಲಿ ನಿತ್ಯ ಓಡಾಡುವ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಿಎಂ ಕೇಜ್ರಿವಾಲ್ ಸರ್ಕಾರ, ಮತ್ತೆ 13 ಸಾವಿರ ಮಂದಿ ಮಾರ್ಷಲ್ ಗಳನ್ನ ನೇಮಕ ಮಾಡಿಕೊಳ್ಳುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇಜ್ರಿವಾಲ್, ಮಂಗಳವಾರದಿಂದ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ದೃಷ್ಟಿಯಿಂದ 13 ಸಾವಿರ ಮಾರ್ಷಲ್ ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

    ಮಹಿಳೆಯರಿಗೆ ರಕ್ಷಣೆ ನೀಡುವುದೆ ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರ ಸಂತಸದಿಂದ ತೆಗೆದುಕೊಂಡ ನಿರ್ಧಾರವಾಗಿದ್ದು, ಇದುವರೆಗೂ ವಿಶ್ವದ ಯಾವುದೇ ನಗರದಲ್ಲಿ ನೀಡಿರದ ಮಾದರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮಹಿಳೆಯರು ಸಾರಿಗೆ ವಾಹನದಲ್ಲಿ ಪ್ರಯಾಣಿಸುವ ವೇಳೆ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವ ಅನುಭವ ಪಡೆಯಬೇಕು ಎಂದು ತಿಳಿಸಿದರು. ನವದೆಹಲಿಯಲ್ಲಿ ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಯೋಜನೆ ಜಾರಿಯಾಗುವ ಒಂದು ದಿನ ಮುನ್ನ ಕೇಜ್ರಿವಾಲ್ ಈ ತೀರ್ಮಾನ ಪ್ರಕಟಿಸಿರುವುದು ವಿಶೇಷವಾಗಿದೆ. ಅಲ್ಲದೇ ಕೇಜ್ರಿವಾಲ್ ಇಂದಿನಿಂದಲೇ ಮುಂದಿನ ಚುನಾವಣೆಗೆ ಜನಪ್ರಿಯ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ವಿಧಾನಸಭೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಷಲ್‍ ಗಳ ನಿಯೋಜನೆ!

    ವಿಧಾನಸಭೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಷಲ್‍ ಗಳ ನಿಯೋಜನೆ!

    ಬೆಂಗಳೂರು: ಇಂದು ಬಿಜೆಪಿ ಸರ್ಕಾರದ ಬಹುಮತ ಸಾಭೀತು ಹಿನ್ನೆಲೆಯಲ್ಲಿ ವಿಧಾನ ಸಭೆಗೆ ಹೆಚ್ಚಿನ ಮಾರ್ಷಲ್ ಗಳನ್ನು ಆಯೋಜನೆ ಮಾಡಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಶಾಸಕರು ವಿಧಾನ ಸಭೆ ಆಗಮಿಸುತ್ತಿದ್ದಾರೆ. ಹೀಗಾಗಿ ಗದ್ದಲ ಮತ್ತು ಗಲಾಟೆ ನಡೆಯುವ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಆಯೋಜಿಸಲಾಗಿದೆ. ಇದನ್ನೂ ಓದಿ: ಮಾಜಿ ಪ್ರಧಾನಿಯವರ ಮನೆಯ ಸುತ್ತಮುತ್ತ ಬಿಗಿ ಭದ್ರತೆ!

    ಸಾಮಾನ್ಯವಾಗಿ 120 ಮಾರ್ಷಲ್ ಗಳು ಮಾತ್ರ ವಿಧಾನಸಭೆಗೆ ನಿಯೋಜಿಸಲಾಗುತ್ತದೆ. ಆದರೆ ಇಂದು ಮಾರ್ಷಲ್ ಗಳ ಸಂಖ್ಯೆ ಹೆಚ್ಚಳವಾಗಿದ್ದು, ಸುಮಾರು 200 ಮಾರ್ಷಲ್ ಗಳನ್ನು ಅಧಿಕವಾಗಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮಂಗ್ಳೂರು, ಬೆಂಗ್ಳೂರಲ್ಲಿ 144 ಸೆಕ್ಷನ್ ಜಾರಿ

    ಇಂದು 30 ಮಹಿಳಾ ಮಾರ್ಷಲ್ ಸೇರಿದಂತೆ 200 ಮಂದಿ ಮಾರ್ಷಲ್ ನಿಯೋಜನೆ ಮಾಡಲಾಗಿದ್ದು, ಎಲ್ಲರೂ ವೈಟ್ ಅಂಡ್ ವೈಟ್ ನಲ್ಲಿ ಸಿದ್ಧವಾಗಿ ನಿಂತಿದ್ದಾರೆ. ಇವತ್ತಿನ ಕಲಾಪದಲ್ಲಿ ಮಾರ್ಷಲ್ ಗಳ ಪಾತ್ರ ಮಹತ್ವದ್ದಾಗಿದೆ.