Tag: ಮಾರ್ಬಲ್

  • ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    – ಭಾರತೀಯರಿಂದ ಟರ್ಕಿಗೆ ಬ್ಯಾನ್ ಬಿಸಿ

    ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ಪಾಕ್‌ಗೆ ಟರ್ಕಿ (Turkey) ಡ್ರೋನ್‌ಗಳನ್ನು ನೀಡಿತ್ತು. ಈ ಹಿನ್ನೆಲೆ ಟರ್ಕಿ ವಿರೋಧಿ ಅಲೆ ಭಾರತದಲ್ಲಿ ಹೆಚ್ಚಾಗಿದೆ. ಟರ್ಕಿ ಮಾರ್ಬಲ್ (Marble) ಬ್ಯಾನ್ ಆಗಿದ್ದು, ಬೆಂಗಳೂರಿಗೆ (Bengaluru) ಬರುತ್ತಿಲ್ಲ.

    ಭಾರತ ಹಾಗೂ ಪಾಕ್ ನಡುವೆ ನಡೆದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ, ಶತ್ರು ದೇಶಕ್ಕೆ ಸಹಾಯ ಮಾಡಿದ ಟರ್ಕಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದಿಂದ ಸಹಾಯ ಪಡೆದ ಟರ್ಕಿಗೆ ಭಾರತ ಮಾಡಿದ ಸಹಾಯ ಸಹ ಮರೆತು ಪಾಕ್‌ನ್ನು ಬೆಂಬಲಿಸಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಟರ್ಕಿ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರ್ತಿದೆ. ಇದನ್ನೂ ಓದಿ: S-500 ಏರ್ ಡಿಫೆನ್ಸ್ ಸಿಸ್ಟಂ ಬಂದ್ರೆ ವಿಶ್ವದಲ್ಲಿ ಭಾರತವೇ ಪವರ್‌ಫುಲ್‌

    ಅದರಲ್ಲಿ ಟರ್ಕಿ ಸಪ್ಲೈ ಮಾಡುತ್ತಿದ್ದ ಪ್ರಮುಖ ಆಮದು ವಸ್ತುಗಳಲ್ಲಿ ಮಾರ್ಬಲ್ ಗಳು ಸಹ ಒಂದು.ಈಗಾಗಲೇ ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್ ಟರ್ಕಿಯಿಂದ ಅಮೃತಶಿಲೆಯ ಆಮದನ್ನು ಸ್ಥಗಿತಗೊಳಿಸಿದೆ. ಅದರಂತೆ ಬೆಂಗಳೂರಿಗೂ ಕಳೆದ ನಾಲ್ಕೈದು ದಿನಗಳಿಂದ ಟರ್ಕಿ ಮಾರ್ಬಲ್‌ಗಳು ಬರುತ್ತಿಲ್ಲ.

    ಭಾರತವು ಪ್ರತಿ ವರ್ಷ 14-18 ಲಕ್ಷ ಟನ್ ಟರ್ಕಿ ಮಾರ್ಬಲ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ. 70 ರಷ್ಟು ಅಮೃತಶಿಲೆಯನ್ನು ಟರ್ಕಿ ದೇಶವೊಂದರಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಈ ವ್ಯಾಪಾರದ ಮೌಲ್ಯ ಸುಮಾರು 2,500 ರಿಂದ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ 600 ಡ್ರೋನ್‌ಗಳಿಂದ ಪಾಕ್‌ ದಾಳಿ – ಎಲ್ಲವನ್ನೂ ಹೊಡೆದುರುಳಿಸಿದ್ದ ಭಾರತ

    ಸಾಮಾನ್ಯವಾಗಿ ಟರ್ಕಿ ಮಾರ್ಬಲ್‌ಗಳನ್ನು ಪ್ಲೋರಿಂಗ್‌ಗೆ ಬಳಸಲಾಗುತ್ತಿತ್ತು. ಆದರೆ, ಪಾಕ್‌ಗೆ ಟರ್ಕಿ ಸಹಾಯ ಮಾಡಿದ ಹಿನ್ನೆಲೆ ಟರ್ಕಿ ಮಾರ್ಬಲ್ ಬ್ಯಾನ್ ಮಾಡಲಾಗಿದೆ. ಈ ದೇಶದ ಮಾರ್ಬಲ್‌ಗಳ ಬದಲಾಗಿ ಇಟಲಿ, ವಿಯೆಟ್ನಾಂ, ಇರಾನ್ ಜೊತೆಗೆ ಭಾರತದ ಒಳಗೆ ಉತ್ಪಾದನೆಯಾಗುವ ಮಾರ್ಬಲ್, ಗ್ರಾನೈಟ್‌ಗಳನ್ನು ಜನ ಕೊಳ್ಳುತ್ತಿದ್ದಾರೆ. ಹೀಗಾಗಿ, ಟರ್ಕಿ ಮಾರ್ಬಲ್‌ಗಳಿಗೆ ಡಿಮ್ಯಾಂಡ್ ಕುಗ್ಗಿದೆ.

  • Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    – ಭಾರತದಿಂದ ಟರ್ಕಿ ಪ್ರವಾಸಕ್ಕೆ ಬಹಿಷ್ಕಾರ
    – ಚಿತ್ರೀಕರಣ ಕೂಡ ಬ್ಯಾನ್

    ನವದೆಹಲಿ: ಪಾಕಿಸ್ತಾನದ (Pakistan) ಬೆನ್ನಿಗೆ ನಿಂತ ಟರ್ಕಿಗೆ (Turkey) ಭಾರತೀಯರು ದೇಶಾದ್ಯಾಂತ ಸರಿಯಾದ ಬುದ್ಧಿ ಕಲಿಸುತ್ತಿದ್ದಾರೆ. ಟರ್ಕಿ ದೇಶದ ವಿರುದ್ಧ ಭಾರತದಿಂದ ಬಾಯ್ಕಾಟ್ (Boycott Turkey) ಅಭಿಯಾನ ಜೋರಾಗಿದೆ. ಸೇಬು, ಚೆರ‍್ರಿ, ಆಲಿವ್ ಆಯಿಲ್, ಮಾರ್ಬಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಉತ್ಪನ್ನಗಳು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ.

    ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿ ವಿರುದ್ಧ ಮಂಗಳವಾರ ಪುಣೆಯ ಹೋಲ್‌ಸೆಲ್, ರೀಟೇಲ್ ವ್ಯಾಪಾರಸ್ಥರು ಸೇಬು ಹಣ್ಣು ಆಮದು ಮಾಡಿಕೊಳ್ಳುವುದನ್ನು ಬಹಿಷ್ಕರಿಸಿದ್ದರು. ಇದೀಗ ಉದಯಪುರದ ಮಾರ್ಬಲ್ ಅಸೋಸಿಯೇಷನ್ ಕೂಡ ಟರ್ಕಿ ಮಾರ್ಬಲ್‌ಗಳ ಆಮದು ಬ್ಯಾನ್ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಮೂರು ತಿಂಗಳಿಗೆ ಸುಮಾರು 1,200 ರಿಂದ 1,500 ಕೋಟಿ ರೂಪಾಯಿ ಮೌಲ್ಯದ ಟರ್ಕಿ ಸೇಬನ್ನು ಖರೀದಿ ಮಾಡಲಾಗುತ್ತಿತ್ತು. ಇದೀಗ ಬ್ಯಾನ್‌ನಿಂದ ಟರ್ಕಿಗೆ ಶಾಕ್ ಎದುರಾಗಿದೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

    ಇತ್ತ ಟರ್ಕಿಯ ಮಾರ್ಬಲ್‌ಗಳನ್ನು ಬ್ಯಾನ್ ಮಾಡಿರುವ ಭಾರತದ ವ್ಯಾಪಾರಿಗಳು ಟರ್ಕಿಯ ಹಲವು ಉತ್ಪನ್ನ ಮತ್ತು ಪ್ರವಾಸವನ್ನು ಬಹಿಷ್ಕರಿಸಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಟರ್ಕಿ ಆರ್ಥಿಕ ಹೊಡೆತದ ಭೀತಿ ಎದುರಿಸುವಂತಾಗಿದೆ. ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಸಾವಿರಾರು ಭಾರತೀಯರು ಈಗಾಗಲೇ ತಮ್ಮ ಟರ್ಕಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿ, ಅಜರ್‌ಬೈಜಾನ್ ದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಸಿ ಮೈ ಟ್ರಿಪ್ (EaseMyTrip) ಕೂಡ ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದೆ. ಪ್ರವಾಸಿಗರ ಈ ಬಾಯ್ಕಾಟ್‌ನಿಂದ ಟರ್ಕಿ, ಅಜರ್‌ಬೈಜಾನ್ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

    ಇದಷ್ಟೇ ಅಲ್ಲದೇ ಭಾರತೀಯ ಚಿತ್ರೋದ್ಯಮ ಕೂಡ ಟರ್ಕಿಗೆ ಶಾಕ್ ಕೊಟ್ಟಿದೆ. ಇನ್ನುಮುಂದೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಟರ್ಕಿಗೆ ತೆರಳದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.‌  ಇದನ್ನೂ ಓದಿ:  ಭಾರತದಲ್ಲಿ ಕಾಂಗ್ರೆಸ್ ಉಗ್ರರನ್ನು ಸಾಕುತ್ತಿದೆ: ರವಿಕುಮಾರ್ ಕಿಡಿ