Tag: ಮಾರ್ಟಿನ್ ವುಲ್ಫ್

  • World Economic Forum – ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ ಮಾರ್ಟಿನ್ ವುಲ್ಫ್

    World Economic Forum – ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ ಮಾರ್ಟಿನ್ ವುಲ್ಫ್

    ದಾವೋಸ್: ಮುಂದಿನ 10-20 ವರ್ಷಗಳ ಕಾಲ ವಿಶ್ವದಲ್ಲೇ ಭಾರತ (India) ಅತ್ಯಂತ ವೇಗವಾದ ಆರ್ಥಿಕ ಪ್ರಗತಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮುವುದು ಖಚಿತ ಎಂದು ಫೈನಾನ್ಷಿಯಲ್ ಟೈಮ್ಸ್‌ನ ಮುಖ್ಯ ಅರ್ಥಶಾಸ್ತ್ರ ನಿರೂಪಕ ಮಾರ್ಟಿನ್ ವುಲ್ಫ್ (Martin Wolf) ಭವಿಷ್ಯ ನುಡಿದಿದ್ದಾರೆ.

    ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ(World Economic Forum) ಅಧಿವೇಶನವೊಂದರಲ್ಲಿ ಮಾತನಾಡಿದ ಅವರು, 70ರ ದಶಕದಿಂದ ನಾನು ಭಾರತದ ಆರ್ಥಿಕತೆಯನ್ನು ಗಮನಿಸುತ್ತಾ ಬಂದಿದ್ದೇನೆ. ಮುಂದಿನ 10-20 ವರ್ಷಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಇದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಎಂದು ಹೇಳಿದರು. ಇದನ್ನೂ ಓದಿ: ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ಇಲ್ಲಿಯವರೆಗೆ ಭಾರತದಲ್ಲಿ ಯಾರು ಉದ್ಯಮ ಹೊಂದಿಲ್ಲವೋ ಅವರು ಭಾರತವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k