Tag: ಮಾರ್ಟರ್ ಶೆಲ್

  • ಮಾರ್ಟರ್ ಶೆಲ್ ಸ್ಫೋಟ – ಓರ್ವ ಸಾವು

    ಮಾರ್ಟರ್ ಶೆಲ್ ಸ್ಫೋಟ – ಓರ್ವ ಸಾವು

    ಶ್ರೀನಗರ: ಮಾರ್ಟರ್ ಶೆಲ್ (Mortar Shell) ಸ್ಫೋಟಗೊಂಡು (Blast) ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸಾಂಬಾ (Samba) ಜಿಲ್ಲೆಯಲ್ಲಿ ನಡೆದಿದೆ.

    ಮೃತನನ್ನು ರಾಜೌರಿ ನಗರದ ಮೋಹನ್ ಲಾಲ್ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕಾರ್ಖಾನೆಯು ಬರಿಬ್ರಹ್ಮಣ ಪ್ರದೇಶದಲ್ಲಿದೆ. ಮಾರ್ಟರ್ ಶೆಲ್‍ಗಳನ್ನು ತಟಸ್ಥಗೊಳಿಸಿದ ನಂತರ ಕಾರ್ಖಾನೆಗೆ ತರಲಾಯಿತು. ಇದನ್ನೂ ಓದಿ: ಮೋದಿ ಭದ್ರತೆ ಲೋಪ ವಿಚಾರ- ಕೊಪ್ಪಳದಲ್ಲಿ ಯುವಕನ ಮನೆಗೆ ಬೀಗ!

    ಈ ಘಟನೆಯಲ್ಲಿ ಯಾವುದೇ ಉಗ್ರರು ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇವಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾದ್ರಾ ಸಿದ್ದರಾಮಯ್ಯ?

  • ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಹಾರಿಸಿದ್ದ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ಭಾರತೀಯ ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ.

    ಪಾಕಿಸ್ತಾನ ಸೇನೆಯು ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಸಾರ್ವಜನಿಕರನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದೆ. ಆದ್ದರಿಂದ ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಫಾರ್ವರ್ಡ್ ಪೋಸ್ಟ್‌ಗಳ ಬಳಿ ಸಣ್ಣ ಶಸ್ತ್ರಾಸ್ತ್ರ ಮತ್ತು ಮಾರ್ಟರ್ ಶೆಲ್‍ಗಳನ್ನು ಪಾಕ್ ಹಾರಿಸಿತ್ತು. ಇದನ್ನೂ ಓದಿ:ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

    ಬುಧವಾರ ಮೆಂಧರ್ ವಲಯದ ಬಾಲಕೋಟೆ, ಸ್ಯಾಂಡೋಟೆ ಮತ್ತು ಬಾಸೋನಿ ಪ್ರದೇಶಗಳಲ್ಲಿ 120 ಎಂಎಂ ಮತ್ತು 81 ಎಂಎಂನ 9 ಮಾರ್ಟರ್ ಶೆಲ್‍ಗಳನ್ನು ಭದ್ರತಾ ಪಡೆ ಯೋಧರು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಈ ಕೆಲವು ಮಾರ್ಟರ್ ಶೆಲ್‍ಗಳು ವಲಯದ ಗ್ರಾಮ ಪ್ರದೇಶಗಳಲ್ಲಿ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಈ ಹಿಂದೆ ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದರು.