Tag: ಮಾರ್ಚ್

  • ಮಾರ್ಚ್ 2ರಿಂದ ಒಟಿಟಿಯಲ್ಲಿ ಹನುಮಾನ್

    ಮಾರ್ಚ್ 2ರಿಂದ ಒಟಿಟಿಯಲ್ಲಿ ಹನುಮಾನ್

    ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿರುವ ಹನುಮಾನ್ ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ (OTT) ಸ್ಟ್ರೀಮಿಂಗ್ ಆಗುವ ಕುರಿತಂತೆ ಸುದ್ದಿಯೊಂದು ಬಂದಿದೆ. ಒಪ್ಪಂದ ಪ್ರಕಾರ ಸಿನಿಮಾ ರಿಲೀಸ್ ಆಗಿ ಮೂರೇ ಮೂರು ವಾರದಲ್ಲಿ ಚಿತ್ರ ಒಟಿಟಿಯಲ್ಲಿ ಬರಬೇಕಿತ್ತು. ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಇರುವ ಕಾರಣದಿಂದಾಗಿ 55 ದಿನಗಳ ನಂತರ ಚಿತ್ರವನ್ನು ಒಟಿಟಿಯಲ್ಲಿ ತರಲು ನಿರ್ಧರಿಸಲಾಗಿದೆ. ಮಾರ್ಚ್ 2ರಿಂದ ಝೀ 5ನಲ್ಲಿ ಚಿತ್ರವನ್ನು ವೀಕ್ಷಿಸಬಹುದು.

    ಪ್ರಶಾಂತ್ ವರ್ಮಾ (Prashant Verma) ನಿರ್ದೇಶನದಲ್ಲಿ ಮೂಡಿ ಬಂದಿರುವ ಹನುಮಾನ್ (Hanuman) ಚಿತ್ರ ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಿಲೀಸ್ ಆದ 14 ದಿನಕ್ಕೆ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ ತನ್ನ ನಾಗಲೋಟವನ್ನು ಮುಂದುವರೆಸಿದೆ. ಈ ನಡುವೆ ಪಾರ್ಟ್ 2 ಮಾಡುವ ಕುರಿತೂ ಸುದ್ದಿ ಹರಿದಾಡುತ್ತಿದೆ.

    ಹನುಮಾನ್ 2ನಲ್ಲಿ ರಾಕಿಭಾಯ್?

    ಕೆಜಿಎಫ್, ಕೆಜಿಎಫ್ 2 (KGF 2) ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಬಗ್ಗೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಚಾಲ್ತಿಯಲ್ಲಿರುತ್ತಾರೆ. ಸುದ್ದಿಗೋಷ್ಠಿಯೊಂದರಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ‘ಟಾಕ್ಸಿಕ್’ ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಎಂಬ ವಿಚಾರಕ್ಕೆ ಯಶ್ ಸ್ಪಷ್ಟನೆ ನೀಡಿದ್ದರು. ಅದರಂತೆ ‘ಹನುಮಾನ್’ 2ನಲ್ಲಿ ರಾಕಿಬಾಯ್ ನಟಿಸ್ತಾರಾ ಎಂಬ ವಿಚಾರಕ್ಕೆ ಸ್ವತಃ ಯಶ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    ‘ಹನುಮಾನ್’ ಪಾರ್ಟ್ 2ನಲ್ಲಿ ನಾನು ನಟಿಸುತ್ತಿಲ್ಲ. ಈಗ ‘ಟಾಕ್ಸಿಕ್’ (Toxic) ಸಿನಿಮಾ ಬಿಟ್ಟು ಬೇರೆ ಕಡೆ ಯೋಚನೆ ಮಾಡುತ್ತಿಲ್ಲ. ಪರಭಾಷೆಯಿಂದ ಸಾಕಷ್ಟು ಸಿನಿಮಾಗಳು ನನ್ನನ್ನು ಅರಸಿ ಬಂದಿರೋದು ನಿಜ. ಆದರೆ ಯಾವ ಚಿತ್ರಕ್ಕೂ ನಾನು ಸಹಿ ಹಾಕಿಲ್ಲ ಎಂದು ಯಶ್ ಉತ್ತರಿಸಿದ್ದಾರೆ. ಅಲ್ಲಿಗೆ ಹನುಮಾನ್ 2ನಲ್ಲಿ ಯಶ್ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

     

    ತೇಜ ಸಜ್ಜ ನಟಿಸಿರುವ ‘ಹನುಮಾನ್’ (Hanuman) ಸಿನಿಮಾ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಪಾರ್ಟ್ 2 ಮಾಡಲು ತೆರೆಮರೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ‘ಹನುಮಾನ್ ಪಾರ್ಟ್ 2’ ಮೂಡಿ ಬರಲಿದ್ದು, ಯಶ್ ಲೀಡ್ ರೋಲ್‌ನಲ್ಲಿ ನಟಿಸುತ್ತಾರೆ ಎಂದೇ ಸುದ್ದಿಯಾಗಿತ್ತು. ಅದಕ್ಕೆ ರಾಕಿಭಾಯ್ ಈಗ ಉತ್ತರ ನೀಡಿದ್ದಾರೆ.

  • ಗ್ರಾಹಕರೇ ಎಚ್ಚರ ಎಚ್ಚರ – ಮಾರ್ಚ್ ತಿಂಗ್ಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ

    ಗ್ರಾಹಕರೇ ಎಚ್ಚರ ಎಚ್ಚರ – ಮಾರ್ಚ್ ತಿಂಗ್ಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ

    ಬೆಂಗಳೂರು: ಬ್ಯಾಂಕ್ ಗ್ರಾಹಕರಿಗೆ ಮಾರ್ಚ್ ತಿಂಗಳಲ್ಲಿ ದೊಡ್ಡ ಹೊಡೆತವೇ ಬೀಳಲಿದೆ. ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ವ್ಯವಹಾರ ಮಾಡುವವರಿಗೆ ಶಾಕ್ ಕಾದಿದೆ. ಯಾಕೆಂದರೆ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ ಇರಲಿದೆ. ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ವ್ಯತ್ಯಯ ಆಗುವ ಸಾಧ್ಯತೆ ಇದೆ.

    ಮಾರ್ಚ್ ತಿಂಗಳಲ್ಲಿ ಅಂದರೆ ಮುಂದಿನ ತಿಂಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ದಿನ ಬ್ಯಾಂಕ್ ಮುಷ್ಕರ ಇರಲಿದೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ಮುಷ್ಕರ ಇದೆ. ಮತ್ತೆ ಹೋಳಿ, ಯುಗಾದಿ ಹಬ್ಬ ಮತ್ತು ಎರಡನೇ ಶನಿವಾರ ಮತ್ತು ಭಾನುವಾರ ಸೇರಿ 14 ದಿನ ಬ್ಯಾಂಕ್ ಸೇವೆ ಇರಲ್ಲ. ಹೀಗಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಗ್ರಾಹಕರೇ ಗಮನಿಸಿ – ಮಾರ್ಚ್ ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು

    ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಕೂಡ ಎದುರಾಗಲಿದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರು ಬ್ಯಾಂಕ್ ಸೇವೆ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.

    ಮಾರ್ಚ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್ ಏಕೆ ರಜೆ ಅಂತಾ ನೋಡೋದಾದ್ರೆ:
    * ಮಾರ್ಚ್ 1 – ಭಾನುವಾರ
    * ಮಾರ್ಚ್ 8 – ಭಾನುವಾರ
    * ಮಾರ್ಚ್ 9 ಮತ್ತು 10 – ಹೋಳಿ
    * ಮಾರ್ಚ್ 11, 12 ಮತ್ತು 13 – ಬ್ಯಾಂಕ್ ಮುಷ್ಕರ
    * ಮಾರ್ಚ್ 14 – ಎರಡನೇ ಶನಿವಾರ
    * ಮಾರ್ಚ್ 15 – ಭಾನುವಾರ
    * ಮಾರ್ಚ್ 22 – ಭಾನುವಾರ
    * ಮಾರ್ಚ್ 25 – ಯುಗಾದಿ
    * ಮಾರ್ಚ್ 28 – ನಾಲ್ಕನೇ ಶನಿವಾರ
    * ಮಾರ್ಚ್ 31 – ಆರ್ಥಿಕ ವರ್ಷದ ಕಡೆ ದಿನ