Tag: ಮಾರ್ಗ ಬದಲಾವಣೆ

  • ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?

    ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?

    – ಮೋದಿ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

    ಮೈಸೂರು: ಕರ್ನಾಟಕ ಕುರುಕ್ಷೇತ್ರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧುಮುಕುತ್ತಿದ್ದಾರೆ. ಇಂದು (ಏ.14) ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ (Mysuru) ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯೂ ನಡೆಸಲಿದ್ದಾರೆ. ಬಳಿಕ ಸಂಜೆ 7:45ರ ವೇಳೆಗೆ ಮಂಗಳೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಲಿದ್ದು, ಬಿಜೆಪಿ-ಜೆಡಿಎಸ್‌ (BJP JDS) ನಾಯಕರೂ ಸಾಥ್‌ ನೀಡಲಿದ್ದಾರೆ.

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ಸಾರ್ವಜನಿಕ ಸಭೆ ಹಿನ್ನೆಲೆ, ಮೋದಿ ಸಂಚರಿಸುವ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಹುಣಸೂರು ರಸ್ತೆ ಮಾರ್ಗವಾಗಿ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿಕೊಡಲಾಗಿದೆ.

    ಕೆಎಸ್‌ಆರ್‌ಟಿಸಿ ರೂಟ್ ಬಸ್ಸುಗಳು ಸಂಚರಿಸಬೇಕಾದ ಮಾರ್ಗ

    1. ಹುಣಸೂರು ಮಾರ್ಗದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾರ್ಗ:
    ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಿನಕಲ್ ಫ್ಲೈಓವರ್‌ ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ರಾಯಲ್‌ಇನ್‌ಜಂಕ್ಷನ್- ಬಲ ತಿರುವು- ಕೆ.ಆರ್.ಎಸ್. ರಸ್ತೆ- ವಿ.ವಿ.ಪುರಂ ವೃತ್ತ- ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಮೆಟ್ರೋಪೋಲ್ ವೃತ್ತ- ಮೂಡಾ ವೃತ್ತ- ಎಡತಿರುವು- ರಮಾವಿಲಾಸ ರಸ್ತೆ- ಬನುಮಯ್ಯಜಂಕ್ಷನ್- ಬಲ ತಿರುವು- ಬಿ.ರಾಚಯ್ಯ ವೃತ್ತ- ಎಡತಿರುವು- ಪುರಂದರರಸ್ತೆ- ಕುಸ್ತಿ ಅಖಾಡ ಜಂಕ್ಷನ್- ಹಾರ್ಡಿಂಜ್ ವೃತ್ತ- ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು.

    2. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹುಣಸೂರು ರಸ್ತೆಗೆ ಮಾರ್ಗ:
    ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತ- ರಾಯಲ್‌ಇನ್‌ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ಹಿನಕಲ್ ಫ್ಲೈಓವರ್‌ ಜಂಕ್ಷನ್- ಬಲ ತಿರುವು ಪಡೆದು ಹುಣಸೂರು ರಸ್ತೆಯಲ್ಲಿ ಮುಂದುವರಿಯುವುದು.

    3. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ರಸ್ತೆಗೆ ಮಾರ್ಗ:-
    ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡತಿರುವು- ಫೈವ್ ಲೈಟ್ ವೃತ್ತ- ಡಾ.ರಾಜಕುಮಾರ್ ವೃತ್ತ- ಟಿಪ್ಪು ವೃತ್ತ- ಬಲ ತಿರುವು- ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಕೆಂಪೇಗೌಡ ಜಂಕ್ಷನ್ ಮೂಲಕ ಮುಂದುವರಿಯುವುದು.

    4. ನಂಜನಗೂಡುರಸ್ತೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಚರಿಸುವ ಮಾರ್ಗ:-
    ನಂಜನಗೂಡು ರಿಂಗ್‌ರಸ್ತೆ ಜಂಕ್ಷನ್- ಬಲತಿರುವು- ರಿಂಗ್‌ರಸ್ತೆ- ಸಾವಿತ್ರಿ ಬಾಯಿಪುಲೆ ವೃತ್ತ- ಟಿ.ಎನ್ ಪುರರಸ್ತೆಟಿ-ಜಂಕ್ಷನ್- ಲಲಿತ ಮಹಲ್‌ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ- ಬುಲೆವಾರ್ಡ್ ವೃತ್ತ- ಟ್ಯಾಂಕ್ ಬಂಡ್‌ರಸ್ತೆ- ಲೋಕರಂಜನ್‌ರಸ್ತೆ- ಹಾರ್ಡಿಂಜ್ ವೃತ್ತ- ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು.

    ಎಲ್ಲೆಲ್ಲಿ ವಾಹನ ಸಂಚಾರ ನಿರ್ಬಂಧ? (ಮಧ್ಯಾಹ್ನ 1 ರಿಂದ ರಾತ್ರಿ 7 ಗಂಟೆ ವರೆಗೆ)
    1. ಡಿ.ಸಿ ಕಚೇರಿ ಆರ್ಚ್ ಜಂಕ್ಷನ್‌ನಿಂದ ಕೋರ್ಟ್‌ ಜಂಕ್ಷನ್‌ವರೆಗಿನ ಕೆ.ಆರ್.ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
    2. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ನಿರ್ಬಂಧ.
    3. ನಗರಕ್ಕೆ ಆಗಮಿಸುವ ವಾಹನಗಳು ಪಡುವಾರಹಳ್ಳಿ ವೃತ್ತದ ಬಳಿ ಬಲ ತಿರುವು ಪಡೆದು ಬಯಲುರಂಗ ಮಂದಿರ ರಸ್ತೆಯಲ್ಲಿ ಸಂಚರಿಸುವುದು.
    4. ಮೆಟ್ರೋಪೋಲ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗಿನ ಜೆ.ಎಲ್.ಬಿ ರಸ್ತೆ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
    5. ಸಾರ್ವಜನಿಕ ವಾಹನಗಳು ಸಂಚರಿಸುವ ಬದಲಿ ಮಾರ್ಗಗಳು: ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತದಿಂದ ವಿನೋಬ ರಸ್ತೆ- ಚಿಕ್ಕಗಡಿಯಾರ ವೃತ್ತ- ಕೆ.ಆರ್ ವೃತ್ತದ ಮೂಲಕ ಸಂಚರಿಸುವುದು.
    * ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ- ಜೆ.ಕೆ.ಗ್ರೌಂಡ್ ಜಂಕ್ಷನ್- ಆಯುರ್ವೇದಿಕ್ ವೃತ್ತದ ಮೂಲಕ ಸಂಚರಿಸುವುದು.
    * ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.
    ಸೆಂಟ್ ಜೋಸೆಫ್ ಜಂಕ್ಷನ್ ನಿಂದ ಮೆಟ್ರೋಪೋಲ್ ವೃತ್ತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧ.

    ಸಾರ್ವಜನಿಕ ವಾಹನಗಳು ಸಂಚರಿಸುವ ಬದಲಿ ಮಾರ್ಗಗಳು:
    * ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೆಂಟ್ ಜೋಸೆಫ್‌ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟೆಂಪಲ್‌ರಸ್ತೆ- ಬಿ.ಸಿ ಲಿಂಗಯ್ಯ ವೃತ್ತ- ಕೆ.ಆರ್.ಎಸ್‌ರಸ್ತೆ ಮೂಲಕ ಮುಂದೆ ಸಾಗುವುದು.
    * ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲ ತಿರುವು ಪಡೆದು ಚದರಂಗ ರಸ್ತೆ ಮೂಲಕ ಮುಂದೆ ಸಾಗುವುದು.
    * ನಗರಕ್ಕೆ ಆಗಮಿಸುವ ವಾಹನಗಳು ವಾಲ್ಮೀಕಿ ರಸ್ತೆಯಲ್ಲಿ ಎಡತಿರುವು ಪಡೆದು ಆಕಾಶವಾಣಿ ವೃತ್ತದ ಮೂಲಕ ಸಂಚರಿಸುವುದು.
    * ನಗರದಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.
    * ಮೂಡಾ ಜಂಕ್ಷನ್ ನಿಂದ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಪ್ರತಿಮೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. ಬೋಗಾದಿ ರಸ್ತೆಕಡೆಗೆ ಸಂಚರಿಸುವ ವಾಹನಗಳು ಆರ್‌ಟಿಒ ವೃತ್ತ- ಬಲ್ಲಾಳ್ ವೃತ್ತ- ಕೆ.ಜಿ.ಕೊಪ್ಪಲು ರಸ್ತೆ- ವಿಜಯ ಬ್ಯಾಂಕ್‌ರಸ್ತೆ ಮೂಲಕ ಸಂಚರಿಸುವುದು.
    * ಹುಣಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಿಪ್ಪೇಸ್ವಾಮಿ ವೃತ್ತ- ಬಯಲು ರಂಗಮಂದಿರ ರಸ್ತೆ- ಪಡುವಾರಹಳ್ಳಿ ಜಂಕ್ಷನ್- ಹುಣಸೂರು ರಸ್ತೆ ಮೂಲಕ ಸಂಚರಿಸುವುದು.
    * ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿ.ಎಂ.ಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಾಗುವುದು.

  • ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ

    ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ

    ಬೆಂಗಳೂರು: ಶುಕ್ರವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮನ ಹಿನ್ನೆಲೆ ಸಾರ್ವಜನಿಕರ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಆಗಲಿದೆ.

    ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಸಂಚಾರ ಮಾರ್ಗದ ಹಲವೆಡೆ ನಿರ್ಬಂಧ ಹೇರಲಾಗಿದೆ. ಗೊಲ್ಲರಹಳ್ಳಿ ಗೇಟ್-ಹುಣಸೂರು ಗ್ರಾಮ (ಕೆಐಎಡಿಬಿ ಕೈಗಾರಿಕ ಪ್ರದೇಶ), ಡಾಬಾ ಗೇಟ್‌ನಿಂದ (ಎನ್‌ಹೆಚ್ 648) ವಿಮಾನ ನಿಲ್ದಾಣದ ಕಡೆಗೆ, ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಿಂದ ವಿಮಾನ ನಿಲ್ದಾಣದ ಕಡೆಗೆ, ಚಿಕ್ಕಜಾಲ ಕೋಟೆ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ನೀಡಿದ್ದ SC ಒಳಮೀಸಲಾತಿಯನ್ನ ಪುನರ್ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್

    ಇನ್ನು ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಶುಕ್ರವಾರ ಬೆಳಗ್ಗೆ 9:35ಕ್ಕೆ ದೆಹಲಿಯಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. 9:40 ಕ್ಕೆ ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: ಭಾರತ ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಎರಡು ಪ್ರತಿಷ್ಠಿತ ಪ್ರಶಸ್ತಿ ಘೋಷಣೆ

    1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2:10 ಕ್ಕೆ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. 2:15 ಕ್ಕೆ ಕೆಐಎಎಲ್ ನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಮಾಡಲಿದ್ದಾರೆ. 2:45 ಕ್ಕೆ ಭಟ್ಟರಮಾರನಹಳ್ಳಿಗೆ ತಲುಪಲಿದ್ದಾರೆ. ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಬೆಸ್ಕಾಂ ವ್ಯಾಪ್ತಿಯ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯ – ಎಲ್ಲೆಲ್ಲಿ?

  • ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ಬೆಂಗಳೂರು: ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಗಂಗಾ ಮಠಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರಿಗೆ ಬರುವವರ ಹಾಗೂ ತುಮಕೂರು ಮೂಲಕ ಬೆಂಗಳೂರು, ಉತ್ತರ ಕರ್ನಾಟಕದ ಕಡೆಗೆ ಹೋಗುವ ಮಾರ್ಗವನ್ನು ಬದಲಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ-04 ಮಾರ್ಗದಲ್ಲಿ ಕ್ಯಾತ್ಸಂದ್ರದಿಂದ ಸರ್ಕಲ್‍ವರೆಗೂ ಎಲ್ಲ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಕೆಲವು ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಸಿದ್ದಗಂಗಾ ಮಠಕ್ಕೆ ಬರುವ ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಗಣ್ಯರು ಹೆಲಿಕಾಪ್ಟರ್ ಮೂಲಕ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಮಾರ್ಗ ಬದಲಾವಣೆ ಹೇಗಿದೆ?:
    ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಮಧುಗಿರಿ, ಕೊರಟಗೆರೆ, ದಾಬಸಪೇಟೆ ಮಾರ್ಗವಾಗಿ ತೆರಳಲಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ವಾಹನಗಳು ಗುಬ್ಬಿ ಗೇಟ್ ರಿಂಗ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಗೂಳೂರು ಮೂಲಕ ಸಾಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ಆಗಮಿಸುವ ವಾಹನಗಳು ಗುಬ್ಬಿ ರಿಂಗ್ ರಸ್ತೆ ಮುಖಾಂತರ ನಗರವನ್ನು ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ರಂಗಾಪುರ ಬ್ರಿಡ್ಜ್ ಬಳಿ ಸರ್ವಿಸ್ ರಸ್ತೆ, ಶ್ರೀದೇವಿ ಕಾಲೇಜ್ ಮುಖಾಂತರ ತುಮಕೂರು ತಲುಪಬಹುದು.

    https://youtu.be/jtctwPaRF7o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv