Tag: ಮಾರ್ಗಸೂಚಿ

  • ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

    ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

    -ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ

    ನವದೆಹಲಿ: ಕೇಂದ್ರ ಸರ್ಕಾರ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಂಟೈನ್ಮೆಂಟ್ ಝೋನ್‍ಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದೆ. ಜೂನ್ 8ರಿಂದ ಮಂದಿರ, ಮಸೀದಿ, ಚರ್ಚ್ ತೆರೆಯಲಿದೆ.

    ಕೇಂದ್ರದ ಮಾರ್ಗಸೂಚಿಯಂತೆ ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ ಎಂದು ತಿಳಿಸಿದ್ದು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಫೇಸ್ ಕವರ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಬದಲಾಗಿ, ವೈಯಕ್ತಿಕ ಪೂಜೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

    ಧಾರ್ಮಿಕ ಕ್ಷೇತ್ರವನ್ನು ನಿಯಮಿತವಾಗಿ ಸ್ವಚ್ಛ ಮಾಡುವುದು, ನಿಯಮಿತವಾಗಿ ಕೈ ಸ್ಯಾನಿಟೈಸ್ ಅಥವಾ ಸಾಬೂನಿಂದ ಕೈ ತೊಳೆದುಕೊಳ್ಳಲು ತಿಳಿಸಿದೆ. ಕೆಮ್ಮುವಾಗ ಸೀನುವಾಗ ಟಿಶು, ಕರವಸ್ತ್ರ ಬಳಸಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಧಾರ್ಮಿಕ ಕೇಂದ್ರ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮತ್ತು ಕೈ ಸ್ವಚ್ಛ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೋಗದ ಗುಣಲಕ್ಷಣಗಳ ಇಲ್ಲದವರಿಗೆ ಮಾತ್ರ ಪ್ರವೇಶ ನೀಡಲು ಸೂಚನೆ ನೀಡಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಭಿತ್ತಿ ಪತ್ರ ಪೋಸ್ಟರ್ ಪ್ರದರ್ಶನ ಮಾಡುವುದು. ವಿಡಿಯೋ, ಆಡಿಯೋಗಳನ್ನು ಪ್ಲೇ ಮಾಡುವುದು ಕಡ್ಡಾಯ ಮಾಡಲಾಗಿದೆ.

    ಧಾರ್ಮಿಕ ಕೇಂದ್ರಗಳಲ್ಲಿ ಪ್ರವೇಶವನ್ನು ನಿಯಂತ್ರಿಸಣ, ಸಮಯದ ಆಧಾರದಲ್ಲಿ ಶಿಫ್ಟ್ ಗಳನ್ನು ಮಾಡಲು ತಿಳಿಸಿದೆ. ಅಲ್ಲದೇ ಶೂ ಚಪ್ಪಲಿಗಳನ್ನು ಭಕ್ತರು ವಾಹನದಲ್ಲಿ ಇಟ್ಟುಕೊಳ್ಳಬೇಕು, ಧಾರ್ಮಿಕ ಕ್ಷೇತ್ರದ ಒಳ ತರುವಂತಿಲ್ಲ, ಅನಿವಾರ್ಯವಾದರೆ ಚಪ್ಪಲಿಗಳನ್ನು ಪ್ರತ್ಯೇಕಿಸಿ ಇಡಬೇಕು ಎಂದು ಸೂಚಿಸಿದೆ.

    ಧಾರ್ಮಿಕ ಕ್ಷೇತ್ರದೊಳಗೆ ಸಾಮಾಜಿಕ ಅಂತರಕ್ಕೆ ಸೂಕ್ತ ಮಾರ್ಕ್ ಮಾಡುವುದು. ಧಾರ್ಮಿಕ ಕೇಂದ್ರದ ಆವರಣದೊಳಗಿನ ಅಂಗಡಿಗಳು, ಹೋಟೆಲ್, ಪಾರ್ಕಿಂಗ್ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಪ್ರತ್ಯೇಕವಾಗಿಡುವ ಸಲಹೆಯನ್ನು ನೀಡಿದೆ. ಯಾವುದೇ ಸ್ಥಳದಲ್ಲಿ ಎಸಿಗಳ ಬಳಕೆ ಬಿಟ್ಟು ನೈಸರ್ಗಿಕ ಗಾಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

  • ‘ಕೊರೊನಾ ಟೆಸ್ಟ್ ನೆಗೆಟಿವ್ ರಿಪೋರ್ಟ್ ಇದ್ದರೆ ಬನ್ನಿ’- ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ

    ‘ಕೊರೊನಾ ಟೆಸ್ಟ್ ನೆಗೆಟಿವ್ ರಿಪೋರ್ಟ್ ಇದ್ದರೆ ಬನ್ನಿ’- ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ

    ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಮಾಡಲಾಗುವುದು. ಬೆಂಗಳೂರು ಮಾರ್ಗಸೂಚಿ ಮಂಗಳೂರಿಗೂ ಅನ್ವಯ ಮಾಡುತ್ತೇವೆ. ಕೆಲ ಬದಲಾವಣೆ ಮಾಡಿ ತಕ್ಷಣ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯ, ಹೊರ ದೇಶದಿಂದ ಬಂದವರ ವಿಚಾರಕ್ಕೆ ಮಾರ್ಗಸೂಚಿ ಇದೆ. ವಿಮಾನ ಮೂಲಕ ಬರುವವರು ಮೊದಲೇ ರಿಜಿಸ್ಟರ್ ಮಾಡಬೇಕು. ಐಸಿಎಂಆರ್ ಗೈಡ್ ಲೈನ್ ಫಾಲೋ ಮಾಡಬೇಕು. ಬರುವ 48 ಗಂಟೆ ಒಳಗೆ ಕೊರೊನಾ ಟೆಸ್ಟ್ ನೆಗೆಟಿವ್ ವರದಿ ತರಬೇಕು. ಈ ಕಾನೂನನ್ನು ಮಂಗಳೂರು ವಿಮಾನ ನಿಲ್ದಾಣ ದಲ್ಲೂ ಜಾರಿಗೆ ತರುತ್ತೇವೆ ಎಂದು ವಿವರಿಸಿದರು.

    ರಾಜ್ಯದ ಗ್ರಾಮಾಂತರದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಆಗಿದೆ. ನಗರದ ವಾರ್ಡ್ ಮತ್ತು ಬೂತ್ ವಾರು ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಮಾಡುತ್ತಿದೆ. ಹೊಸ ವ್ಯಕ್ತಿ ಅಥವಾ ಸೋಂಕಿತ ಬಂದಾಗ ವಿವರ ಸಂಗ್ರಹಿಸಲಾಗುವುದು. ರಾಜ್ಯದಲ್ಲಿ 10 ಲಕ್ಷ ಜನ ಸೋಂಕಿತರಾದರೂ ಕಟ್ಟೆಚ್ಚರ ವಹಿಸಬಹುದು ಎಂದು ಮಾಹಿತಿ ನೀಡಿದರು.

    ನಮ್ಮಲ್ಲಿ ತಂತ್ರಜ್ಞಾನ ಸಿದ್ಧವಾಗಿದೆ. ಜನರ ನಡುವೆ ಕೊರೊನಾ ಕಳಂಕ ಬೇಡ. ವೈರಾಣುವಿನಿಂದ ದೂರವಿರಿ ವ್ಯಕ್ತಿಗಳಿಂದ ಅಲ್ಲ. ಹೊರ ರಾಜ್ಯದಿಂದ ಜನರನ್ನು ಕರೆದುಕೊಂಡು ಬರುವುದು ಸುಪ್ರೀಂ ಕೋರ್ಟ್ ಆದೇಶ. ಅದನ್ನು ನಾವು ಅನುಸರಿಸುತ್ತೇವೆ. ಆಯಾ ರಾಜ್ಯದವರು ಆ ರಾಜ್ಯಕ್ಕೆ ಬಿಟ್ಟುಕೊಳ್ಳಬೇಕಾಗುತ್ತದೆ ಎಂದರು.

  • ಜೂನ್ 8 ರಿಂದ ದೇವಾಲಯ, ಮಸೀದಿ, ಚರ್ಚ್ ಓಪನ್ – ಷರತ್ತುಗಳು ಅನ್ವಯ

    ಜೂನ್ 8 ರಿಂದ ದೇವಾಲಯ, ಮಸೀದಿ, ಚರ್ಚ್ ಓಪನ್ – ಷರತ್ತುಗಳು ಅನ್ವಯ

    ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 30 ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ್ದು, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.

    ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ದೇವಾಲಯ ತೆರೆಯಲು ದೇವಾಲಯಗಳ ಸಿಬ್ಬಂದಿ ಸಿದ್ಧವಾಗಿದ್ದರು. ದೇವಸ್ಥಾನಗಳನ್ನ ಸ್ವಚ್ಛ ಮಾಡಿ ಅರ್ಚಕರು ಕೂಡ ಸಿದ್ಧರಾಗಿದ್ದರು. ಆದರೆ ಜೂನ್ 1 ಅಲ್ಲ ಜೂನ್ 8 ರಿಂದ ದೇವಾಲಯಗಳನ್ನು ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಈ ವಾರವೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಮಸೀದಿ, ಮಂದಿರ, ಚರ್ಚ್‍ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

    ಷರತ್ತುಗಳು ಏನಿರಬಹುದು?
    * ಪ್ರತಿದಿನ ದೇವಾಲಯದ ಒಳಗೆ, ಹೊರಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು
    * ಭಕ್ತರು ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಂತೆ ನೋಡಿಕೊಳ್ಳಬೇಕು
    * ಪ್ರತಿಯೊಬ್ಬರಿಗೂ ಥರ್ಮಲ್ ಸ್ಯ್ಕಾನಿಂಗ್ ಮಾಡಬೇಕು
    * ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಡಬೇಕು
    * ಜನರನ್ನ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ದೇವಸ್ಥಾನದ ಖರ್ಚಿನಲ್ಲಿ ನೇಮಕಾತಿ ಮಾಡಿಕೊಳ್ಳಬೇಕು
    * ದೇವಸ್ಥಾನಗಳನ್ನು ತೆರೆಯಲು ಸಮಯ ನಿಗದಿ ಸಾಧ್ಯತೆ
    * ಅರ್ಚಕರು, ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿಗಿದ್ದರೆ, ಶೇ.50 ರಷ್ಟು ಹಾಜರಿ
    * ಭಕ್ತರು ಕೊಡುವ ಕಾಣಿಕೆ, ಹರಕೆ ವಸ್ತು, ಹೂ ಹಣ್ಣು ಸ್ವೀಕಾರಕ್ಕೆ ಪ್ರತ್ಯೇಕ ಸ್ಥಳ
    * ದಿನಕ್ಕೆ ಎರಡರಿಂದ ಮೂರು ಸಲ ಇಡೀ ದೇವಸ್ಥಾನ ಸ್ಯಾನಿಟೈಸ್

    ಮಸೀದಿಯಲ್ಲಿ ಷರತ್ತುಗಳು ಏನಿರಬಹುದು?
    * ಮುಸ್ಲಿಂ ಬಾಂಧವರು ಸಾಧ್ಯವಾದಷ್ಟು ಮನೆಗಳಲ್ಲೇ ವಝೂ ಅಂದ್ರೆ ಮುಖ ಕೈ ಕಾಲು ಶುಚಿಗೊಳಿಸಿ ಮಸೀದಿಗೆ ಬರಬೇಕು
    * ಮಸೀದಿಗಳಲ್ಲಿ ಕೈಕಾಲು ಶುಚಿಗೊಳಿಸುವ ಕೊಳವನ್ನು ಮುಚ್ಚಬೇಕು. ಅದರ ಬದಲು ಟ್ಯಾಪ್ ಬಳಸಬೇಕು
    * ಮಸೀದಿಗಳಲ್ಲಿ ಒಂದೇ ಆಗಮನ, ನಿರ್ಗಮನ ದ್ವಾರ ಇರಬೇಕು
    * ಪ್ರತಿ ಪ್ರಾರ್ಥನೆ ಮುನ್ನ ಮಸೀದಿಯ ಹಾಲ್ ಅನ್ನು ಶುಚಿಗೊಳಿಸಬೇಕು
    * ಮಸೀದಿಗೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು

    * ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯಬೇಕು
    * ಪ್ರತಿ ವ್ಯಕ್ತಿ ತನ್ನ ಸ್ವಂತ ಪ್ರಾರ್ಥನಾ ಚಾಪೆಯನ್ನು ತರಬೇಕು
    * ಫರ್ಜ್ ನಮಾಜನ್ನು 10-15 ನಿಮಷಕ್ಕೆ ಸೀಮಿತಗೊಳಿಸಬೇಕು
    * ನಮಾಜ್ ಮಾಡಲು ಅತಿ ಹೆಚ್ಚು ಜನರಿದ್ದರೆ, ಎರಡು ಜಮಾತ್‍ಗೆ ವ್ಯವಸ್ಥೆ ಕಲ್ಪಿಸಬೇಕು


    * ಸುನ್ನತ್ ಮತ್ತು ನಫೀಸ್ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು
    * ಶುಕ್ರವಾರದ ಪ್ರಾರ್ಥನೆ 15-20 ನಿಮಿಷಕ್ಕೆ ಸೀಮಿತವಾಗಿರಬೇಕು
    * ಮಸೀದಿ, ದರ್ಗಾಗಳ ಬಳಿ ಭಿಕ್ಷಾಟನೆಗೆ ನಿಷೇಧ
    * ಮಸೀದಿ ಬಳಿ ಪ್ರಸಾದ ಹಂಚುವುದಕ್ಕೆ ನಿರ್ಬಂಧ
    * ದರ್ಗಾದಲ್ಲಿನ ಸಮಾಧಿಗಳೆದುರು ಕೂತು ಪ್ರಾರ್ಥನೆ ಮಾಡಬಾರದು
    * ಆಲಿಂಗನ, ಹಸ್ತಲಾಘವಕ್ಕೆ ನಿರ್ಬಂಧ

    ಚರ್ಚ್ ತೆರೆಯಲು ಷರತ್ತು ಏನಿರಬಹುದು?
    * ಚರ್ಚ್‍ನಲ್ಲಿ ಭಕ್ತರ ಸಂಖ್ಯೆಗೆ ಮಿತಿ ಹೇರಿಕೆ ಸಾಧ್ಯತೆ
    * ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
    * ಇನ್ನೂ ದಿನದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಚರ್ಚ್ ತೆರೆಯಲು ಅವಕಾಶ ಸಾಧ್ಯತೆ
    * ಪ್ರಾರ್ಥನೆ ಬಳಿಕ ಚರ್ಚ್ ಒಳಗೆ ಸ್ವಚ್ಛಗೊಳಿಸೋದು ಕಡ್ಡಾಯ
    * ಯಾವುದೇ ಕಾರಣಕ್ಕೂ ಜನಜಾತ್ರೆ ಆಗದಂತೆ ಕಟ್ಟುನಿಟ್ಟಿನ ಕ್ರಮ

  • ಇನ್ನೂ ಒಂದು ತಿಂಗಳು ಲಾಕ್‍ಡೌನ್ ಮುಂದುವರಿಕೆ – ಮೂರು ಹಂತಗಳಲ್ಲಿ ಅನ್‍ಲಾಕ್

    ಇನ್ನೂ ಒಂದು ತಿಂಗಳು ಲಾಕ್‍ಡೌನ್ ಮುಂದುವರಿಕೆ – ಮೂರು ಹಂತಗಳಲ್ಲಿ ಅನ್‍ಲಾಕ್

    ನವದೆಹಲಿ: ಲಾಕ್‍ಡೌನ್ 4.0 ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜೂನ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಪ್ರಮುಖವಾಗಿ ಜೂನ್ 2ರಿಂದ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಅಲ್ಲದೆ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕರ್ಫ್ಯೂ ವಿಧಿಸಿದೆ. ಚಿತ್ರಪ್ರದರ್ಶನ ನಿಷೇಧವನ್ನು ಮುಂದುವರಿಸಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಕಠಿಣ ನಿಯಮಾವಳಿಗಳನ್ನು ತರುತ್ತಿದೆ.

    ಈ ಬಗ್ಗೆ ಇಂದು ಸಂಜೆಯೊಳಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಇನ್ನೂ ಜೂನ್ 8ರಿಂದ 3 ಹಂತಗಳಲ್ಲಿ ಲಾಕ್‍ಡೌನ್ ಅನ್‍ಲಾಕ್ ಆಗುತ್ತಿದೆ. ಆ 3 ಹಂತಗಳಲ್ಲಿ ಯಾವುದೆಲ್ಲಾ ಓಪನ್ ಆಗುತ್ತಿದೆ.

    ಇಂಡಿಯಾ ಅನ್‍ಲಾಕ್- ಹಂತ 1 (ಜೂನ್ 8ರ ನಂತರ ಇವು ಓಪನ್ ಆಗ್ತವೆ)
    * ಧಾರ್ಮಿಕ ಸ್ಥಳಗಳು
    * ಹೊಟೇಲ್, ರೆಸ್ಟೋರೆಂಟ್ಸ್ , ಆತಿಥ್ಯ ಸ್ಥಳಗಳು
    * ಶಾಪಿಂಗ್ ಮಾಲ್‍ಗಳು
    (ಕೇಂದ್ರ ಸಚಿವಾಲಯಗಳು/ ಇಲಾಖೆಗಳು/ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಲಿದೆ)

    ಇಂಡಿಯಾ ಅನ್‍ಲಾಕ್- ಹಂತ 2 (ಜೂನ್ 8ರ ನಂತರ ಓಪನ್ ಇಲ್ಲ – ಜುಲೈನಲ್ಲಿ ನಿರ್ಧಾರ)
    * ಶಾಲೆಗಳು, ಕಾಲೇಜ್‍ಗಳು, ತರಬೇತಿ/ಟ್ಯೂಷನ್ ಸಂಸ್ಥೆಗಳು
    * ರಾಜ್ಯಗಳು, ಶೈಕ್ಷಣಿಕ ಸಂಸ್ಥೆಗಳು, ಪೋಷಕರ ಜೊತೆ ಚರ್ಚಿಸಿ ತೀರ್ಮಾನ
    * ಜುಲೈ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಷರತ್ತುಬದ್ಧ ಅನುಮತಿ

    ಇಂಡಿಯಾ ಅನ್‍ಲಾಕ್- ಹಂತ 3 (ಪರಿಸ್ಥಿತಿ ಆಧರಿಸಿ ತೀರ್ಮಾನ, ಅಂದರೆ ಸದ್ಯಕ್ಕೆ ಇವೆಲ್ಲಾ ಓಪನ್ ಆಗಲ್ಲ. ಓಪನ್‍ಗೆ ದಿನಾಂಕ ನಿಗದಿಯಾಗಿಲ್ಲ)
    * ಅಂತಾರಾಷ್ಟ್ರೀಯ ವಿಮಾನಯಾನ
    * ಮೆಟ್ರೋ ರೈಲು ಸೇವೆ
    * ಥಿಯೇಟರ್, ಜಿಮ್, ಸ್ವಿಮ್ಮಿಂಗ್‍ಪೂಲ್
    * ಮನರಂಜನಾ ಪಾರ್ಕ್, ಬಾರ್
    * ಆಡಿಟೋರಿಯಂ, ಅಸೆಂಬ್ಲಿ ಹಾಲ್
    * ಸಾಮಾಜಿಕ/ರಾಜಕೀಯ/ಕ್ರೀಡೆ/ಎಂಟರ್ ಟೈನ್ಮೆಂಟ್/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮ

    ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸದ್ಯ ಇರುವ ಸಡಿಲಿಕೆಗಳೊಂದಿಗೆ ಯಥಾಸ್ಥಿತಿ ಮುಂದುವರಿಯಲಿದೆ. ಜೂನ್ 30ರವರೆಗೆ ಲಾಕ್‍ಡೌನ್ ನಿಯಮಗಳು ಅನ್ವಯವಾಗಲಿವೆ. ವೈದ್ಯಕೀಯ ಸೇವೆ, ಮೆಡಿಕಲ್, ದಿನಬಳಕೆ ಸರಕು ಪೂರೈಕೆ ಸೇರಿದಂತೆ ಅವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

  • ಸಲೂನ್ ಶಾಪ್‍ಗಳಲ್ಲಿ ಫುಲ್ ಗೊಂದಲ- ಪ್ರತ್ಯೇಕ ಮಾರ್ಗಸೂಚಿ ನೀಡಲು ಒತ್ತಾಯ

    ಸಲೂನ್ ಶಾಪ್‍ಗಳಲ್ಲಿ ಫುಲ್ ಗೊಂದಲ- ಪ್ರತ್ಯೇಕ ಮಾರ್ಗಸೂಚಿ ನೀಡಲು ಒತ್ತಾಯ

    ಬೆಂಗಳೂರು: ಬರೋಬ್ಬರಿ 54 ದಿನಗಳ ಬಳಿಕ ರಾಜ್ಯದಲ್ಲಿ ಸಲೂನ್ ಶಾಪ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಸಲೂನ್ ಶಾಪ್ ತೆರಲು ಅನುಮತಿ ನೀಡಿದ್ದರು ಕೆಲ ಗೊಂದಲಗಳು ಸಲೂನ್ ಶಾಪ್‍ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮೂಡಿದೆ. ಪರಿಣಾಮ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ನೀಡಬೇಕು ಎಂದು ಸವಿತಾ ಸಮಾಜ ಆಗ್ರಹಿಸಿದೆ.

    ಸಲೂನ್ ಶಾಪ್ ಬಹುದಿನಗಳ ಬಳಿಕ ತೆರೆಯುತ್ತಿರುವ ಕಾರಣ ಸಾಕಷ್ಟು ಗ್ರಾಹಕರು ಆಗಮಿಸುತ್ತಾರೆ. ಆದರೆ ಜ್ವರ, ಶೀತ, ಕೆಮ್ಮು ಇರುವ ಗ್ರಾಹಕರಿಗೆ ನಾವು ಸೇವೆ ಕೊಡಬೇಕಾ ಬೇಡ್ವಾ ಎಂಬ ಬಗ್ಗೆ ಇನ್ನು ಗೊಂದಲ ಇದೆ ಎಂದು ಸವಿತಾ ಸಮಾಜದವರು ಹೇಳಿದ್ದಾರೆ. ಅಲ್ಲದೇ ಸರ್ಕಾರ ನಾಳೆಯಿಂದ ಸಲೂನ್ ತೆರೆಯಲು ಅನುಮತಿ ನೀಡದ್ದರೂ ಸಾಮಾನ್ಯ ದಿನಗಳಲ್ಲಿ ಮಂಗಳವಾರ ಸಲೂನ್ ತೆರೆಯುವುದಿಲ್ಲ. ಆದರು ನಾಳೆ ಬಹುತೇಕ ಅಂಗಡಿಗಳು ಜನರ ಸೇವೆಗೆ ಲಭ್ಯವಿರುತ್ತವೆ ಎಂಬ ಮಾಹಿತಿ ಲಭಿಸಿದೆ.

    ಇತ್ತ ಉಡುಪಿಯಲ್ಲಿ ಸಲೂನ್ ಶಾಪ್ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಸವಿತಾ ಸಮಾಜಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ವಿಧಿಸಿದೆ. ಮಾಸ್ಕ್ -ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಜೊತೆಗೆ ಸಾಕಷ್ಟು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಹೇರ್ ಕಟ್ಟಿಂಗ್, ಶೇವಿಂಗ್ ಮಾಡಲು ಬೆಳವಣಿಗೆ ಬರುವ ಗ್ರಾಹಕರು ಮುಂಚಿತವಾಗಿಯೇ ಮಾಲೀಕನಿಗೆ ಫೋನ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಮಾಲೀಕರು ಗ್ರಾಹಕರಿಗೆ ಕೊಟ್ಟ ಸಮಯಕ್ಕೆ ಬಂದು ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಕೊಂಡು ವಾಪಸ್ಸಾಗಬೇಕು. ಸಲೂನ್ ಮುಂಭಾಗ ಮತ್ತು ಒಳಭಾಗದಲ್ಲಿ ಜನ ಜಮಾಯಿಸುವಂತಿಲ್ಲ. ಪ್ರತಿಯೊಬ್ಬ ಗ್ರಾಹಕನಿಗೆ ಉಪಯೋಗಿಸಿದ ಬಟ್ಟೆಯನ್ನು ಪೆಟ್ರೋಲ್ ಅಥವಾ ಸಾಬೂನಿನ ನೀರಿನಲ್ಲಿ ಮುಳುಗಿಸಿಡಬೇಕು. ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಈ ಎಲ್ಲ ನಿಯಮಗಳನ್ನು ಪಾಲಿಸಿ ದಿನಕ್ಕೆ ಹದಿನೈದರಿಂದ ಇಪ್ಪತ್ತು ಜನರಿಗೆ ಮಾತ್ರ ಕ್ಷೌರ ಸೇವೆ ಕೊಡಲು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ.

  • ಲಾಕ್‍ಡೌನ್ 4.0 ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

    ಲಾಕ್‍ಡೌನ್ 4.0 ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

    ನವದೆಹಲಿ: ಲಾಕ್‍ಡೌನ್ 4.0 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೊರೊನಾ ತಡೆಗಾಗಿ ಕೇಂದ್ರ ಸರ್ಕಾರ ಲಾಕ್‍ಡೌನ್ ನನ್ನು ಮೇ 31ರವರೆಗೆ ವಿಸ್ತರಿಸಿ ಈಗಾಗಲೇ ಆದೇಶ ಹೊರಡಿಸಿದೆ.

    ಅಂತಾರಾಜ್ಯಗಳ ಮಧ್ಯೆ ಯಾವುದಕ್ಕೆ ಪರವಾನಿಗೆ?
    * ಉಭಯ ರಾಜ್ಯಗಳ ಪರವಾನಿಗೆ ಪಡೆದು ವಾಹನ ಹಾಗೂ ಬಸ್ ಸಂಚಾರಕ್ಕೆ ಪಾಸ್ ನೀಡಬಹುದು.
    * ಅಂತಾರಾಜ್ಯಗಳ ಮಧ್ಯ ಬಸ್, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿರ್ಧಾರ ಆಯಾಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಬಿಟ್ಟಿದ್ದು.
    * ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಪಾರಾ ಮೆಡಿಕಲ್ ಸಿಬ್ಬಂದಿ, ಸ್ಯಾನಿಟೈಸನ್ ಸಿಬ್ಬಂದಿ, ಅಂಬುಲೆನ್ಸ್ ಬಳಸಿಕೊಳ್ಳಬಹುದು.
    ಎಲ್ಲ ಮಾದರಿಯ ಸರಕು ಸಾಗಣೆಯ ವಾಹನಗಳ ಓಡಾಟಕ್ಕೆ ಅನುಮತಿ.

    ಯಾವುದಕ್ಕೆ ನಿಷೇಧ?
    * ದೇಶಿ ಮತ್ತು ವಿದೇಶಿ ವಿಮಾನಗಳ ಹಾರಾಟಕ್ಕೆ ನಿಷೇಧ. (ವೈದ್ಯಕೀಯ ತುರ್ತುಸಂದರ್ಭ ಹೊರತುಪಡಿಸಿ)
    * ಮೆಟ್ರೋ, ರೈಲು ಸಂಚಾರ ಇರಲ್ಲ.
    * ಶಾಲೆ, ಕಾಲೇಜು, ತರಬೇತಿ, ಶಿಕ್ಷಣ ಸಂಸ್ಥೆಗಳು ಬಂದ್. ಆನ್‍ಲೈನ್ ಅಥವಾ ಸಾಮಾಜಿಕ ಅಂತರ ಕಾಪಾಡಿಕೊಂಡ್ರೆ ಅನುಮತಿ ಸಿಗುವ ಸಾಧ್ಯತೆ.
    * ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಮ್ ಡೆಲಿವರಿ ಅವಕಾಶ.
    * ಥಿಯೇಟರ್, ಶಾಪಿಂಗ್ ಮಾಲ್, ಜಿಮ್ ಕೇಂದ್ರ, ಸ್ವಿಮಿಂಗ್ ಪೂಲ್, ಪಾರ್ಕ್, ಸಿನಿಮಾ ಹಾಲ್, ಬಾರ್, ಸಭಾಂಗಣ ತೆರೆಯುವಂತಿಲ್ಲ.
    * ಸ್ಪೋರ್ಟ್ಸ್  ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂ (ಕ್ರೀಡಾಂಗಣ)ಗಳಿಗೆ ಷರತ್ತು ಬದ್ಧ ಅನುಮತಿ
    * ಎಲ್ಲ ಸಾಮಾಜಿಕ/ಧಾರ್ಮಿಕ/ ರಾಜಕೀಯ/ ಕ್ರೀಡಾ/ ಮನರಂಜನಾ/ಸಾಂಸ್ಕೃತಿಕ/ಕೌಟುಂಬಿಕ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ನಿಷೇಧ
    * ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಯಾವುದೇ ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ.

    ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು:
    ಅನುಬಂಧ 2ರಲ್ಲಿ ನಿರ್ದಿಷ್ಟಪಡಿಸಿದಂತೆ ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ದೇಶಾದ್ಯಂತ ಅನುಸರಿಸಲಾಗುವುದು.

    ಕಂಟೈನ್‍ಮೆಂಟ್, ಬಫರ್, ರೆಡ್, ಗ್ರೀನ್ ಮತ್ತು ಆರೇಂಜ್ ಝೋನ್:
    * ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡುವ ಮಾಹಿತಿ ಗಣನೆಗೆ ತೆಗೆದುಕೊಂಡ ನಂತರ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳೆಂದು ಆಯಾ ರಾಜ್ಯ/ ಕೇಂದ್ರಾಡಳಿತ ಸರ್ಕಾರಗಳು ನಿರ್ಧರಿಸುತ್ತವೆ.
    * ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡುವ ಮಾಹಿತಿ ಆಧಾರದ ಮೇಲೆ ಆಯಾ ಪ್ರದೇಶದ ಜಿಲ್ಲಾಡಳಿತವು ರೆಡ್, ಗ್ರೀನ್ ಮತ್ತು ಆರೇಂಜ್ ಝೋನ್ ಎಂದು ಘೋಷಿಸಬಹುದು.
    * ಕಂಟೈನ್‍ಮೆಂಟ್ ಝೋನ್‍ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಇಲ್ಲಿ ತುರ್ತು ಚಿಕಿತ್ಸೆ, ಅಗತ್ಯ ವಸ್ತು, ಔಷಧಿಗಳನ್ನು ಪಡೆಯಲು ಮಾತ್ರ ಜನರು ಮನೆಯಿಂದ ಹೊರಗೆ ಬರಬೇಕು.
    * ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಜನರ ಚಲನವನದ ಮೇಲೆ ನಿಗಾ ಇಡಬೇಕು. ಮನೆಯಿಂದ ಮನೆಗೆ ಕಣ್ಗಾವಲು ಇಡಬೇಕು. ಜೊತೆಗೆ ಅಗತ್ಯವಿರುವ ಔಷಧಿ ಅಂಗಡಿಗಳ ಮೇಲೂ ನಿಗಾ ಇಡಬೇಕು.

    ಕರ್ಫ್ಯೂ ಮುಂದುವರಿಕೆ:
    ರಾತ್ರಿ 7ರಿಂದ ಬೆಳಗ್ಗೆ 7 ಗಂಟೆ ವರೆಗೆ ಅಗತ್ಯ ಚಟುವಟಿಕೆ ಹೊರತುಪಡಿಸಿ ವೈಯಕ್ತಿಕ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ವೇಳೆ ಸೆಕ್ಷನ್ 144(ಕರ್ಫ್ಯೂ) ಜಾರಿ ಇರಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಸುರಕ್ಷತೆ ದೃಷ್ಟಿಯಿಂದ 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, 10 ವರ್ಷದ ವಳಗಿನ ಮಕ್ಕಳು ಆರೋಗ್ಯ ಸಮಸ್ಯೆ ಹಾಗೂ ಇತರೆ ತುರ್ತು ಸಂದರ್ಭ ಹೊರತುಪಡಿಸಿ ಉಳಿದೆಲ್ಲ ಸಮಯ ಮನೆಯಲ್ಲೇ ಇರಬೇಕು.

    ನಿಷೇಧಿತ ಅಂಶವನ್ನು ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕಂಟೈನಮೆಂಟ್ ಝೋನ್‍ಗಳಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳೆದಲ್ಲವನ್ನೂ ಬಂದ್ ಮಾಡಲಾಗುವುದು. ಉಳಿದಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ. ಯಾವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು, ಯಾವುದನ್ನು ಬಂದ್ ಮಾಡಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಝೋನ್‍ಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ನಿರ್ಬಂಧ ಹೇರಬಹುದಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಆರೋಗ್ಯ ಸೇತು ಆ್ಯಪ್ ಬಳಕೆ: ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಬಳಸಬೇಕು. ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ಕಂಪನಿಗಳು ಎಲ್ಲ ನೌಕರರಿಗೆ ಆರೋಗ್ಯ ಸೇತು ಆ್ಯಪ್ ಬಳಸುವಂತೆ ಸೂಚಿಸುವುದು. ಪ್ರತಿಯೊಬ್ಬ ಬಳಕೆದಾರರ ತಮ್ಮ ಆರೋಗ್ಯದ ಮಾಹಿತಿಯನ್ನ ಅಪ್‍ಡೇಟ್ ಮಾಡಿಕೊಳ್ಳಬೇಕು.

    ಸಲಹೆಗಳು
    1. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು.
    2. ಸಾರ್ವಜನಿಕ ಮತ್ತು ಕೆಲಸದ ಸ್ಥಳದಲ್ಲಿ ಉಗುಳುವುದು ದಂಡಾರ್ಹ.
    3. ಸಾರ್ವಜನಿಕ ಸ್ಥಳ ಮತ್ತು ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.
    4. ಮದುವೆ ಇನ್ನಿತರ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
    5. ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆ 20ಕ್ಕಿಂಯ ಹೆಚ್ಚು ಜನರು ಸೇರುವಂತಿಲ್ಲ.


    6. ಸಾರ್ವಜನಿಕ ಸ್ಥಳದಲ್ಲಿ ಮದ್ಯ, ಪಾನ್, ಗುಟ್ಕಾ , ತುಂಬಾಕು ಸೇವನೆ ಮಾಡುವಂತಿಲ್ಲ.
    7. ಅಂಗಡಿಗಳಲ್ಲಿ ಐದು ಜನಕ್ಕಿಂತ ಹೆಚ್ಚು ಕೆಲಸ ಮಾಡುವಂತಿಲ್ಲ. ಮಾರಾಟಗಾರರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
    8. ವರ್ಕ್ ಫ್ರಮ್ ಹೋಮ್ ಗೆ ಮೊದಲ ಆದ್ಯತೆ ನೀಡುವುದು.
    9. ಕಂಪನಿ, ಸರ್ಕಾರಿ ಕಚೇರಿ ಸೇರಿದಂತೆ ಸಾಮಾನ್ಯ ಪ್ರದೇಶಗಳ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸೋದು.
    10. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಮತ್ತು ಶಿಫ್ಟ್ ಗಳಲ್ಲಿ ಕೆಲಸಕ್ಕೆ ಪ್ರಾದನ್ಯತೆ

  • ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಗದಗ: ಜಿಲ್ಲೆನಲ್ಲಿ ಬಸ್ ಸಂಚಾರಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಾಗಿ ಸಾರಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ.

    ಜಿಲ್ಲೆಯ ಒಟ್ಟು 7 ಘಟಕಗಳಿಂದ 136 ಬಸ್ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ವಿಭಾಗಿಯ ಘಟಕದಲ್ಲಿ ಸಿಬ್ಬಂದಿಗಳ ಸ್ಕ್ರೀನಿಂಗ್, ಬಸ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಮೆಕ್ಯಾನಿಕ್, ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.

    ಬಸ್ ಆಸನಗಳಲ್ಲೂ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಅದಕ್ಕಾಗಿ ಬಸ್‍ನ ಆಸನಗಳಿಗೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಲಾಗುತ್ತಿದೆ. ಮಾರ್ಕ್ ಮಾಡಿದ ಸ್ಥಳದಲ್ಲಿ ಕೂರದೆ ಅಂತರ ಕಾಯ್ದುಕೊಳ್ಳಲು ಒಂದು ಬಸ್‍ನಲ್ಲಿ 28 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲೂ ಒಂದೇ ಗೇಟ್ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. 3 ಗೇಟ್ ಗಳ ಪೈಕಿ, 2 ಗೇಟ್ ಗೆ ಮುಳ್ಳಿನ ಬೇಲಿ ಹಾಕಿ ಮುಚ್ಚಲಾಗಿದೆ. ಒಂದೇ ಗೇಟ್ ತೆರೆಯಲಾಗಿದೆ. ಇದರಿಂದಾಗಿ ಪ್ರಯಾಣಿಕರ ಆರೋಗ್ಯ ತಪಾಸಣೆ ಅನುಕೂಲವಾಗತ್ತದೆ. ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಬಸ್ ಬಿಡುವುದಾಗಿ ಗದಗ ಸಾರಿಗೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಸೋಮವಾರದಿಂದ ಲಾಕ್‍ಡೌನ್ 4.0 ಫಿಕ್ಸ್- ನಯಾ ಲಾಕ್‍ಡೌನ್‍ನಲ್ಲಿ ಏನಿರುತ್ತೆ? ಏನಿರಲ್ಲ?

    ಸೋಮವಾರದಿಂದ ಲಾಕ್‍ಡೌನ್ 4.0 ಫಿಕ್ಸ್- ನಯಾ ಲಾಕ್‍ಡೌನ್‍ನಲ್ಲಿ ಏನಿರುತ್ತೆ? ಏನಿರಲ್ಲ?

    – ಸಂಜೆಯೊಳಗೆ ಕೇಂದ್ರದಿಂದ ಮಾರ್ಗಸೂಚಿ ರಿಲೀಸ್

    ನವದೆಹಲಿ: ಮೂರನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆ ನಾಲ್ಕನೇ ಹಂತದ ಲಾಕ್‍ಡೌನ್ ಹೇಗಿರಲಿದೆ ಅನ್ನೋ ಚರ್ಚೆ ನಡೆದಿದೆ.

    ಲಾಕ್‍ಡೌನ್ 4.0 ವಿಭಿನ್ನವಾಗಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಹೆಚ್ಚಿಸಿದ್ದರು. ಹೀಗಾಗಿ ಲಾಕ್‍ಡೌನ್‍ನಿಂದ ಹೆಚ್ಚಿನ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಏನಿರಬಹುದು..?
    * ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ (ಕಂಟೈನ್ಮೆಂಟ್ ಝೋನ್ ಬಿಟ್ಟು)
    * ಎಲ್ಲಾ ಕಡೆ ಬಸ್ ಸಂಚಾರಕ್ಕೆ ಅನುಮತಿ ನಿರೀಕ್ಷೆ
    * ರೆಡ್ ಝೋನ್‍ನಲ್ಲಿ ಆಟೋ, ಕ್ಯಾಬ್‍ಗೆ ಅವಕಾಶ
    * ಹಂತ ಹಂತವಾಗಿ ರೈಲು, ದೇಶಿಯ ವಿಮಾನ
    * ಮೆಟ್ರೋ, ಲೋಕಲ್ ರೈಲಿಗೆ ಷರತ್ತುಬದ್ಧ ಅನುಮತಿ
    * ರೆಡ್ ಝೋನ್‍ನಲ್ಲಿ ಸಲೂನ್, ಸ್ಪಾಗೆ ಅನುಮತಿ
    * ರೆಡ್ ಝೋನ್‍ನಲ್ಲಿ ಕನ್ನಡಕದ ಅಂಗಡಿ ತೆರೆಯಲು ಅವಕಾಶ
    * ಐಟಿ, ಎಂಎನ್‍ಸಿ ಕಂಪನಿಗಳಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕೆಲಸ
    * ರಾತ್ರಿ ಸಂಚಾರದ ಮೇಲಿನ ಕರ್ಫ್ಯೂ ತೆರವು ಮಾಡಬಹುದು
    * ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಅಧಿಕಾರ ರಾಜ್ಯಗಳ ಕೈಗೆ
    * ಅಂತರ್ ರಾಜ್ಯ ಸಂಚಾರಕ್ಕೆ ಮಾತ್ರ ಕಡ್ಡಾಯ ಪಾಸ್

    ಏನಿರಲ್ಲ..?
    * ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ಕಾಂಪ್ಲೆಕ್ಸ್, ಥಿಯೇಟರ್
    * ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
    * ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ
    * ಮೇ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ ಆಗಬಹುದು

    ಇನ್ನು ಎರಡು ದಿನದಲ್ಲಿ ಲಾಕ್‍ಡೌನ್ ಅಂತ್ಯವಾಗ್ತಿರುವ ಹಿನ್ನೆಲೆಯಲ್ಲಿ ಹೊಸ ಲಾಕ್‍ಡೌನ್ ನಿಯಮಗಳಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಎರಡು ದಿನ ಮುಂಚೆ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತೆ ಎನ್ನಲಾಗಿದ್ದು, ಇಂದು ಸಂಜೆ ವೇಳೆ ಹೊಸ ನಿಯಮಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.

  • ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮಗಳು ಪಾಲಿಸಬೇಕು

    ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮಗಳು ಪಾಲಿಸಬೇಕು

    ನವದೆಹಲಿ: ದೇಶಾದ್ಯಂತ ಪ್ರಮುಖ ಹದಿನೈದು ನಗರಗಳಿಗೆ ಸೀಮಿತ ರೈಲು ಸಂಚಾರ ಪುನಾರಂಭವಾದ ಬೆನ್ನೆಲ್ಲೆ ಕೇಂದ್ರ ಗೃಹ ಇಲಾಖೆ ಪ್ರಯಾಣದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಇಂದು ಸಂಜೆ ನಾಲ್ಕು ಗಂಟೆಯಿಂದ ಬುಕ್ಕಿಂಗ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪ್ರಯಾಣದ ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಟಿಕೇಟ್ ಕನ್ಫರ್ಮ್ ಆದವರಿಗೆ ಮಾತ್ರ ರೈಲ್ವೆ ಸ್ಟೇಷನ್ ಪ್ರವೇಶ ಮತ್ತು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

    ಪ್ರಯಾಣಕ್ಕೂ ಮುನ್ನ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಒಳಪಡಬೇಕು ಸೋಂಕಿನ ಗುಣಲಕ್ಷಣಗಳು ಖಚಿತಪಡಿಸಿಕೊಳ್ಳಬೇಕು. ರೋಗದ ಗುಣಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ಪ್ರಯಾಣ ಆರಂಭಕ್ಕೂ ಮುನ್ನ ಮತ್ತು ಅಂತ್ಯದ ವೇಳೆ ಸ್ವಾನಿಟೈಜಿಂಗ್ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಸ್ಯಾನಿಟೈಸರ್ ಜೊತೆಗಿಟ್ಟುಕೊಳ್ಳುವುದು ಉತ್ತಮ ಎಂದು ಗೃಹ ಇಲಾಖೆ ಹೇಳಿದೆ. ಪ್ರಯಾಣದ ಅವಧಿಯಲ್ಲಿ ಫೇಸ್ ಮಾಸ್ಕ್ ಕಡ್ಡಾಯ ಎಂದು ಸಾರ್ವಜನಿಕರಿಗೆ ತಿಳಿಸಿದೆ.

  • ಕೊರೊನಾ ವಾರ್- 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್, ಹಸಿರು ವಲಯವಾಗಿ ವಿಭಜನೆ

    ಕೊರೊನಾ ವಾರ್- 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್, ಹಸಿರು ವಲಯವಾಗಿ ವಿಭಜನೆ

    ನವದೆಹಲಿ: ಕೊರೊನಾ ವೈರಸ್ ಹೆಡೆಮುರಿ ಕಟ್ಟಲು ಮತ್ತಷ್ಟು ಕಠಿಣ ನಿಯಮಗಳ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯಗಳನ್ನಾಗಿ ವಿಭಜಿಸಿದೆ.

    ಕೊರೊನಾ ತೀವ್ರತೆ ಹೆಚ್ಚಿರುವ ಹಾಟ್ ಸ್ಪಾಟ್ 170 ಜಿಲ್ಲೆಗಳ ಪೈಕಿ 113 ಜಿಲ್ಲೆಗಳನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೊನಾ ಸೋಂಕಿನ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ. ಕರ್ನಾಟಕದ 8 ಜಿಲ್ಲೆಗಳು ಹಾಟ್ ಸ್ಪಾಟ್‍ನಲ್ಲಿದ್ದು, 11 ಜಿಲ್ಲೆಗಳು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೋನಾ ಸೋಂಕಿನ ಸಂಖ್ಯೆಗಳ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ.

    ದೇಶದಲ್ಲಿ ಕೊರೊನಾ ಸೋಂಕು ಕ್ಷಣ ಕ್ಷಣಕ್ಕೂ ತೀವ್ರ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಸೋಂಕು ವ್ಯಾಪಿಸುತ್ತಿರುವ ಪರಿ ಕೇಂದ್ರ ಸರ್ಕಾರವನ್ನು ಕಂಗೆಡಿಸಿದೆ. 2 ಸಾವಿರ ಸೋಂಕಿತರು ಇರುವ ಮುಂಬೈ ನಗರ ಮತ್ತೊಂದು ವುಹಾನ್ ಆಗಿಬಿಡುತ್ತಾ ಎಂಬ ಆತಂಕ ಮನೆ ಮಾಡಿದೆ.

    ಸಮುದಾಯಕ್ಕೆ ಎಲ್ಲಿ ಹರಡುತ್ತೋ ಎಂಬ ಭಯ ಕಾಡುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 38 ಮಂದಿ ಬಲಿ ಆಗಿದ್ದಾರೆ. ಸೋಂಕಿತರ ಸಂಖ್ಯೆ 12 ಸಾವಿರ ಸಮೀಪಿಸಿದೆ. ಮೃತರ ಸಂಖ್ಯೆ 405 ಆಗಿದೆ. ಕೊರೊನಾ ಭಯದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹೋಂ ಕ್ವಾರಂಟೇನ್‍ನಲ್ಲಿದ್ದಾರೆ.

    ಹೇಗಿರುತ್ತೆ ಕೊರೊನಾ ಹಾಟ್‍ಸ್ಪಾಟ್ ರೆಡ್ ಝೋನ್ ಜಿಲ್ಲೆ?
    – ಭಾರತದಲ್ಲಿ 170 ಕೊರೋನಾ ಹಾಟ್‍ಸ್ಪಾಟ್ ಜಿಲ್ಲೆಗಳು
    – ನಾಲ್ಕು ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ಡಬಲ್ ಆಗ್ತಿರುವ ಜಿಲ್ಲೆಗಳು ಹಾಟ್‍ಸ್ಪಾಟ್ ವ್ಯಾಪ್ತಿಗೆ
    – ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಜನ ಹೊರಗೆ ಓಡಾಡುವಂತೆಯೇ ಇಲ್ಲ
    – ಜನ ಸಂಪೂರ್ಣವಾಗಿ ತಮ್ಮ ಮನೆಗಳಿಗೆ ಸೀಮಿತ ಆಗಬೇಕು
    – ಜನತೆಗೆ ಬೇಕಿರುವ ಅಗತ್ಯ ವಸ್ತು, ಸೇವೆಗಳು ಸ್ಥಳೀಯ ಆಡಳಿತದಿಂದ ಪೂರೈಕೆ
    – ಮನೆ ಮನೆಗೆ ತೆರಳಿ ಎಲ್ಲರಿಗೂ ಕೊರೋನಾ ಟೆಸ್ಟ್
    – ಸೋಂಕಿತರ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚುವ ಕೆಲಸ, ಕ್ವಾರಂಟೇನ್
    – ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಣೆ

    ಹೇಗಿರುತ್ತೆ ಕೊರೊನಾ ನಾನ್ ಹಾಟ್‍ಸ್ಪಾಟ್ ಆರೆಂಜ್ ಝೋನ್ ಜಿಲ್ಲೆ
    – 207 ಜಿಲ್ಲೆಗಳನ್ನು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಿರುವ ಕೇಂದ್ರ
    – ಈ ಪ್ರದೇಶಗಳು ಶೀಘ್ರವಾಗಿ ಹಾಟ್‍ಸ್ಪಾಟ್ ಪ್ರದೇಶಗಳಾಗಿ ಬದಲಾಗುವ ಆತಂಕ
    – ಸೋಂಕಿತರು ಇರುವ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ (3 ಕಿ.ಮೀ. ವ್ಯಾಪ್ತಿ)
    – ಸೋಂಕಿತರು ಇರುವ ಪ್ರದೇಶಕ್ಕೆ ಯಾರು ಕಾಲಿಡುವಂತಿಲ್ಲ
    – ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಟೆಸ್ಟ್
    – ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗೆ ಕ್ರಮ, ಮನೆ ಮನೆ ಪರೀಕ್ಷೆ
    – ಸೋಂಕು ಕಡಿಮೆ ಆದರೆ, ಏ.20 ಬಳಿಕ ಲಾಕ್‍ಡೌನ್ ಸಡಿಲಿಕೆ (ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ)

    ಹೇಗಿರುತ್ತೆ ಹಸಿರು ವಲಯದ ಜಿಲ್ಲೆ (ಗ್ರೀನ್ ಝೋನ್)
    – ದೇಶದಲ್ಲಿ 263 ಜಿಲ್ಲೆಗಳು ಹಸಿರು ವಲಯದ ವ್ಯಾಪ್ತಿಗೆ
    – ಕಳೆದ 28 ದಿನಗಳಿಂದ ಸೋಂಕು ಪತ್ತೆಯಾಗದ ಜಿಲ್ಲೆಗಳು
    – ಇಲ್ಲಿ ಇದುವರೆಗೂ ಕೊರೊನಾ ಸೋಂಕಿತರು ಕಂಡುಬಂದಿಲ್ಲ
    – ಹಸಿರುವಲಯದ ಜಿಲ್ಲೆಗಳಿಗೆ ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಜಿಲ್ಲೆಗಳಿಂದ ಸಂಪರ್ಕ ಕಟ್
    – ಕೊರೊನಾ ಸೋಂಕು ಹರಡದಂತೆ ತೀವ್ರ ಕಟ್ಟೆಚ್ಚರ