Tag: ಮಾರ್ಕ್ಸ್  ಕಾರ್ಡ್

  • ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ದಂಪತಿ ಬಂಧನ

    ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ದಂಪತಿ ಬಂಧನ

    ಬೆಂಗಳೂರು: ಅಕ್ರಮವಾಗಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮುಖೇಶ್ ಮತ್ತು ರೋಹಿ ಬಂಧಿತ ದಂಪತಿ. ಮೂಲತಃ ಪಂಜಾಬ್ ರಾಜ್ಯದವರಾದ ಆರೋಪಿಗಳು ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಆರೋಪಿಗಳು ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೀಣ್ಯಾ ಬಳಿ ಜಗಜ್ಯೋತಿ ಎಜುಕೇಶನ್ ಇನ್ಟ್ಸಿಟ್ಯೂಟ್ ನಡೆಸುತ್ತಿದ್ದರು. ಈ ಸಂಸ್ಥೆ ಹೆಸರಲ್ಲಿ ಎಂಎ, ಎಂಬಿಎ, ಬಿಸಿಎ, ಬಿಟೆಕ್, ಬಿಬಿಎ, ಬಿಕಾಂ, ಬಿಎಸ್‍ಸಿ, ಸೇರಿ ಹಲವು ಡಿಗ್ರಿ ಮಾರ್ಕ್ಸ್ ಕಾರ್ಡ್ ನೀಡುತಿದ್ದರು. ಒಂದು ಡಿಗ್ರಿಗೆ 60 ಸಾವಿರದಿಂದ 70 ಸಾವಿರ ರೂಪಾಯಿ ವರೆಗೆ ಹಣ ಪಡೆದು ಪದವಿ ಅಂಕಪಟ್ಟಿಗಳನ್ನು ನೀಡುತ್ತಿದ್ದರು. ಇದನ್ನೂ ಓದಿ: ವಾಹನ ಗುಜುರಿ ನೀತಿ ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ: ಮೋದಿ

    ಸಿಸಿಬಿ ಪೊಲೀಸರ ದಾಳಿಯ ವೇಳೆ ಸಿ.ವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ್ ಟ್ಯಾಗೋರ್ ಯುನಿವರ್ಸಿಟಿ. ಅಸೆಟ್ ಯುನಿವರ್ಸಿಟಿಗೆ ಸೇರಿದ ಮಾರ್ಕ್ಸ್ ಕಾರ್ಡ್‍ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಇಲ್ಲಿಯವರೆಗೂ 500ಕ್ಕೂ ಹೆಚ್ಚು ಫಲನುಭವಿಗಳಿಗೆ ಮಾರ್ಕ್ಸ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಘಟನೆ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಹೆಚ್ಚಿನ ತನಿಖೆಯಿಂದ ಮತ್ತಷ್ಟು ನಕಲಿ ಅಂಕಪಟ್ಟಿ ಹಿಂದಿನ ಮುಖವಾಡ ಬಯಲಾಗುವ ಸಾದ್ಯತೆ ಇದೇ ಎನ್ನುತ್ತಿದೆ ಸಿಸಿಬಿ ಮೂಲಗಳು.

  • 10 ಸಾವಿರ ಕೊಟ್ರೆ ಕೈಗಿಡ್ತಾರೆ ನಿಮಗೆ ಬೇಕಾದ ಮಾರ್ಕ್ಸ್ ಕಾರ್ಡ್

    10 ಸಾವಿರ ಕೊಟ್ರೆ ಕೈಗಿಡ್ತಾರೆ ನಿಮಗೆ ಬೇಕಾದ ಮಾರ್ಕ್ಸ್ ಕಾರ್ಡ್

    – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ವಿಜಯಪುರ: 5ರಿಂದ 10 ಸಾವಿರ ರೂಪಾಯಿ ಕೊಟ್ಟರೆ ನೀವು ಶಾಲೆಗೆ ಹೋಗಬೇಕಿಲ್ಲ, ಓದೋದಂತು ಬೇಕೇ ಇಲ್ಲ. ಕಾಸು ಕೊಟ್ರೆ ಬೇಕಾದ ಕ್ಲಾಸ್‍ನ ಮಾರ್ಕ್ಸ್ ಕಾರ್ಡ್ ನಿಮ್ಮ ಕೈಗಿಡುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.

    ಹೌದು. ದುಡ್ಡು ಕೊಟ್ಟರೆ ಮಲ್ಲಪ್ಪ ಎಂಬಾತ ಏನ್ ಬೇಕಾದ್ರೂ ಮಾಡಿಕೊಡುತ್ತಾನೆ. ಅದರಲ್ಲೂ ಶಾಲೆಗೆ ಹೋಗದೇ ಇದ್ದರೂ ಪರೀಕ್ಷೆ ಬರೆಯದೇ ಇದ್ದರೂ ಒಂದರಿಂದ 10ನೇ ತರಗತಿವರೆಗೆ ಪಾಸ್ ಆಗಿದ್ದೀರಿ ಅಂತ ಒಂದೇ ದಿನದಲ್ಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಡುತ್ತಾನೆ. ಅಂದಹಾಗೆ ಈತ ಮಾಡಿ ಕೊಡುವ ಸ್ಪಾಟ್ ಮಾಕ್ರ್ಸ್ ಕಾರ್ಡಿಗೆ 5-10 ಸಾವಿರ ರೂಪಾಯಿ ಕೊಡಬೇಕು.

    ಮಲ್ಲಪ್ಪ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಗೆ ಏಜೆಂಟ್ ಆಗಿರೋದು ಪಿ.ಕೆ ರಾಥೋಡ್ ಅನ್ನೋ ಮಹಾನುಭವನಿಂದ. ರಾಥೋಡ್ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದ ಹೆಚ್ ಪಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯ. ಅಲ್ಲದೆ ಮಲ್ಲಪ್ಪ ಮಾಡೋ ದಂಧೆಯಲ್ಲಿ ಶೇರ್ ತಗೊಂಡು ನಕಲಿ ಅಂಕಪಟ್ಟಿ ಮತ್ತು ಟಿಸಿ ಕೊಡೋ ಪುಣ್ಯಾತ್ಮ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯನ್ನೂ ರಾಥೋಡ್ ನಕಲಿ ಮಾಡುತ್ತಾರೆ.

    ಸ್ವತಃ ಮಲ್ಲಪ್ಪ ಹೇಳುವಂತೆ ನಕಲಿ ಅಂಕಪಟ್ಟಿಗಳನ್ನ ಡಿಎಲ್, ಅಂಗನವಾಡಿ ಸಹಾಯಕಿಯರ ಕೆಲಸ ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಪಬ್ಲಿಕ್ ಟಿವಿ ಸ್ಟಿಂಗ್ ಬಳಿಕವಾದ್ರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲಪ್ಪ ಮತ್ತು ರಾಥೋಡ್ ವಿರುದ್ಧ ಕ್ರಮಕೈಗೊಳ್ಳಬೇಕಿದೆ.

  • ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ರಾಜ್ಯದ ಎಲ್ಲಾ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್. ಆನ್ ಲೈನ್ ನಲ್ಲಿ ಮಾರ್ಕ್ಸ್  ಕಾರ್ಡ್ ಸಿಗುವಂತೆ ಮಾಡಿದ್ದ ಪಿಯು ಮಂಡಳಿ, ಅನ್ ಸೇಫ್ ಟೆಕ್ನಾಲಜಿ ಮೊರೆ ಹೋಗಿದೆ. ಇದರಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಟ ಆತಂಕಕ್ಕೆ ಸಿಲುಕಿದೆ.

    ಇತ್ತೀಚೆಗಷ್ಟೆ ರಾಜ್ಯ ಪಿಯು ಮಂಡಳಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದೆ. ಡಿಜಿ ಲಾಕರ್ ಎಂಬ ನೂತನ ಟೆಕ್ನಾಲಜಿ ಬಳಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಇಲ್ಲಿ ಯಾವ ಮಾರ್ಕ್ಸ್ ಕಾರ್ಡ್ ಕೂಡ ಸೇಫ್ ಆಗಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

    ಡಿಜಿ ಲಾಕರ್ ಕೇಂದ್ರೀಕೃತ ಸರ್ವರ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಹ್ಯಾಕರ್ ಬೇಕಾದರು ಸರಳವಾಗಿ ಇದನ್ನು ಕ್ರಾಕ್ ಮಾಡಬಹುದು. ನ್ಯಾಶನಲ್ ಅಕಾಡಿಮೆಕ್ ಡೆಪಾಸಿಟರಿ (ನ್ಯಾಡ್) ಎಂಬ ಸಂಟ್ರಲೈಸಡ್ ಸರ್ವರ್ ಈ ಹಿಂದೆ ಹ್ಯಾಕ್ ಮಾಡಲಾಗಿತ್ತು. ಅದೇ ರೀತಿಯ ತಂತ್ರಜ್ಞಾನವನ್ನು ಡಿಜಿಲಾಕರ್ ಬಳಸುತ್ತಿದೆ. ಹಾಗಾಗಿ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಸೇವ್ ಮಾಡಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಪಿಯು ಮಂಡಳಿ ವಿದ್ಯಾರ್ಥಿಗಳ ಭವಿಷ್ಯವನ್ನು ಆತಂತಕ್ಕೆ ಸಿಲುಕಿಸಿದೆ.

    ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರು ಕಳೆದ ತಿಂಗಳಷ್ಟೆ ಈ ತಂತ್ರಜ್ಞಾನದ ಬಳಕೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇವರು ಆತುರದಲ್ಲಿ ನಿರ್ಣಯ ಕೈಗೊಂಡಂತಿದೆ. ಈ ರೀತಿ ಕೇಂದ್ರೀಕೃತ ಸರ್ವರ್ ಬಳಸುದರಿಂದ ದಾಖಲೆಗಳನ್ನು ತಿರುಚುವ ಸಾಧ್ಯತೆ ಇದೆ. ಜೊತೆಗೆ ತಿದ್ದುಪಡಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಟಿ ಪರಿಣಿತ ಮಧಸೂಧನ್ ಹೇಳಿದ್ದಾರೆ.

    ಸೆಂಟ್ರಲೈಸಡ್ ಸರ್ವರ್ ಬಳಸದೆ ಆನ್ ಲೈನ್ ನಲ್ಲಿ ಡಾಕ್ಯೂಮೆಂಟ್ ಸೇವ್ ಮಾಡುವುದಕ್ಕೆ ಬೇರ ಅವಕಾಶವಿದ್ದು, ಸದ್ಯಕ್ಕೆ ಹ್ಯಾಕರ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮುಕ್ತಿ ಪಡೆಯಲು ಬ್ಲಾಕ್ ಚೈನ್ ಟೆಕ್ನಾಲಜಿ ಬಳಸಬೇಕಾಗುತ್ತದೆ.

    ಏನಿದು ಬ್ಲಾಕ್ ಚೈನ್ ಟೆಕ್ನಾಲಜಿ?
    ಇಲ್ಲಿ ದಾಖಲೆಗಳು ಲಿಂಕ್ ಮೂಲಕ ಸೇವ್ ಮಾಡಲಾಗುತ್ತದೆ. ಲಕ್ಷಗಟ್ಟಲೆ ಕಂಪ್ಯೂಟರ್ ಬಳಕೆದಾರರು ಈ ಡೇಟಾ ಅನ್ನು ನಿರ್ವಹಿಸುತ್ತಾರೆ. ಇಲ್ಲಿ ಯಾವುದೇ ಮಾರ್ಕ್ಸ್ ಕಾರ್ಡ್ ನ ಡೇಟಾ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಯಾವುದೇ ಮೂರನೇ ವ್ಯಕ್ತಿ ಸರ್ವರ್ ಬಳಕೆ ಮಾಡುವುದಿಲ್ಲ. ಓಪನ್ ಸೋರ್ಸ್ ಡೇಟಾ ಮೈಂಟೈನೆನ್ಸ್ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ಕ್ರೋಢಿಕರಿಸಲಾಗುತ್ತದೆ.

    ಹ್ಯಾಕರ್ಸ್ ನಿಂದ ನಿಮ್ಮ ದಾಖಲೆಗಳನ್ನು ರಕ್ಷಿಸಿಕೊಳ್ಳಬೇಕಿದಾರೆ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಸಬಹುದಾಗಿದೆ. ಇದರಲ್ಲಿ ಯಾರೂ ಕೂಡ ಹ್ಯಾಕ್ ಮಾಡಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಮಾಹಿತಿ ನಿರ್ವಹಣೆ ಮಾಡಲು ಲಕ್ಷಾಂತರ ಕಂಪ್ಯೂಟರ್ ಪರಿಣಿತರು ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ಸರ್ವರ್ ಸೇವೆಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಇದು ಅತಿ ಸುರಕ್ಷಿತ ತಂತ್ರಜ್ಞಾನ ಎಂದು ಐಟಿ ಪರಿಣಿತ ರಜತ್ ತಿಳಿಸಿದ್ದಾರೆ.

    ಡಿಜಿಲಾಕರ್ ಹಾಗೂ ನ್ಯಾಡ್ ಬಳಸಿದ್ರೆ ಎದುರಾಗೋ ತೊಂದರೆಗಳೇನು?

    * ಇವುಗಳಲ್ಲಿ ಸೆಂಟ್ರಲೈಸ್ಡ್ ಸರ್ವರ್ ಮೂಲಕ ಎಲ್ಲಾ ಮಾಹಿತಿ ಕ್ರೋಢೀಕರಿಸಲಾಗುತ್ತದೆ.
    * ಥರ್ಡ್ ಪಾರ್ಟಿ ಸರ್ವರ್ ಬಳಕೆ ಮಾಡುವುದರಿಂದ ಬಳಕೆದಾರರಿಗೆ ಆತಂಕವಿರುತ್ತದೆ.
    * ಹ್ಯಾಕರ್ಸ್ ಸಹಾಯದಿಂದ ಸರ್ವರ್ ಹ್ಯಾಕ್ ಮಾಡಬಹುದು.
    * ಮೇಲಿನ ಸಂಸ್ಥೆಗಳಲ್ಲಿನ ಸಿಬ್ಬಂದಿಗಳ ಸಹಾಯದಿಂದ ಡೇಟಾ ಬದಲಾಯಿಸಬಹುದು.
    * ಮಾರ್ಕ್ಸ್ ಕಾರ್ಡ್ ಗಳನ್ನು ದುರುಪಯೋಗ ಪಡೆಸಿಕೊಳ್ಳಬಹುದು.

    ಪಿಯು ನಿರ್ದೇಶಕರು ಎಷ್ಟೇ ಒಳ್ಳೆಯ ಉದ್ದೇಶದಿಂದ ಡಿಜಿಲಾಕರ್ ನಂತ ಸೇವೆ ವಿದ್ಯಾರ್ಥಿಗಳಿಗೆ ನೀಡಿದರು ಹ್ಯಾಕರ್ಸ್ ಗಳ ಹಾವಳಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

  • ನಿನ್ನೆ ಪ್ರಧಾನಿ ಮೋದಿ, ಇಂದು ಸಿಎಂ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ರಿಲೀಸ್

    ನಿನ್ನೆ ಪ್ರಧಾನಿ ಮೋದಿ, ಇಂದು ಸಿಎಂ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ರಿಲೀಸ್

    ಮಂಡ್ಯ: ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದರ ಬಗ್ಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಮ್ಯಾ ಮಾರ್ಕ್ಸ್ ಕಾರ್ಡ್ ಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.

    ಕಳೆದ ದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒಂದು ರಿಪೋರ್ಟ್ ಕಾರ್ಡ್ ಕೊಟ್ಟಿತ್ತು. ಅದನ್ನು ಮಾಜಿ ಸಂಸದೆ ರಮ್ಯಾ ಶಾಲೆಯಲ್ಲಿ ಸಿಗೋ ಮಾರ್ಕ್ಸ್ ಕಾರ್ಡ್ ನಂತೆ ಮಾಡಿ ಅದರಲ್ಲಿ ವಿಷಯ, ರಿಮಾರ್ಕ್ ಮತ್ತು ದರ್ಜೆ ಅಂತ ರಿಪೋರ್ಟ್ ಕಾರ್ಡ್ ನಲ್ಲಿ ನಮೂದಿಸಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮಾರ್ಕ್ಸ್  ಕಾರ್ಡ್ ತಯಾರಿಸಿದ್ದು, ಬ್ಯಾನರ್ ಹಾಕಿದ್ದಾರೆ. ಇದನ್ನು ಓದಿ: ಕಾಣೆಯಾಗಿದ್ದ ಮೋದಿ ಮಾರ್ಕ್ಸ್ ಕಾರ್ಡ್ ರಮ್ಯಾಗೆ ಸಿಕ್ತಂತೆ!

    ವಿದ್ಯಾರ್ಥಿ ಹೆಸರು – ಸಿದ್ದರಾಮಯ್ಯ
    ಟರ್ಮ್ – 2013 ರಿಂದ
    ರೋಲ್ ನಂಬರ್ – 419
    ಬ್ಲಡ್ ಗ್ರೂಪ್ – ಖಾನ್ ಗ್ರೇಸ್

    ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ – ಡಿ ಗ್ರೇಡ್
    ರಕ್ಷಣಾ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಆರೋಗ್ಯ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಆರ್ಥಿಕ ಪರೀಕ್ಷೆಯಲ್ಲಿ – ಎಫ್ ಗ್ರೇಡ್

    ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಸ್ಟೋರಿ ಟೆಲ್ಲಿಂಗ್‍ನಲ್ಲಿ – ಎ + +
    ಫೈನಲ್ ಗ್ರೇಡ್ – ಡಿ

    ಈ ರೀತಿ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ಅನ್ನು ಬಿಜೆಪಿ ಮುಖಂಡರಾದ ಮಂಜುನಾಥ್, ಶಿವಕುಮಾರ್ ಆರಾಧ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಾಕ್ಸ್ ಕಾರ್ಡ್ ಬ್ಯಾನರ್ ಮಾಡಿಸಿ ಮಂಡ್ಯದಲ್ಲಿ ಹಾಕಿದ್ದಾರೆ. ರಮ್ಯಾ ಅವರೇ ಮೋದಿ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಮುಖ್ಯಮಂತ್ರಿ ಆಡಳಿತ ನೋಡಿಕೊಳ್ಳಿ. ಮಂಡ್ಯಕ್ಕೆ ಬಾರದ ನಿಮಗೆ ಪ್ರಧಾನಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.