Tag: ಮಾರುತಿ

  • ಆಲ್ಟೋ ನಂ.1 ಕಾರು  – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ಆಲ್ಟೋ ನಂ.1 ಕಾರು – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ನವದೆಹಲಿ: ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು 2018-19ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೂಲಕ ಪ್ಯಾಸೆಂಜರ್ ವೆಹಿಕಲ್(ಪಿವಿ) ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಕರ ಒಕ್ಕೂಟ(ಎಸ್‍ಐಎಎಂ) ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಕಾರುಗಳ ಪೈಕಿ 7 ಮಾರುತಿ ಕಂಪನಿಯ ಕಾರುಗಳು ಸ್ಥಾನ ಪಡೆದಿದ್ದರೆ ಹುಂಡೈ ಕಂಪನಿಯ ಮೂರು ಕಾರುಗಳು ಸ್ಥಾನ ಪಡೆದಿದೆ. ಹೀಗಾಗಿ ಇಲ್ಲಿ 2018-19ರ ಹಣಕಾಸು ವರ್ಷದಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ ಎನ್ನುವ ವಿವರವನ್ನು ನೀಡಲಾಗಿದೆ.

    ಯಾವ ಕಾರು ಎಷ್ಟು?


    1. ಆಲ್ಟೋ:
    2,59,401 ಕಾರುಗಳು ಮಾರಾಟವಾಗುವ ಮೂಲಕ ಅಲ್ಟೋ ಕಾರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ 2,58,539 ಕಾರುಗಳು ಮಾರಾಟ ಕಂಡಿತ್ತು.

     

    2. ಡಿಸೈರ್:
    ಸೆಡಾನ್ ವಿಭಾಗದ ಡಿಸೈರ್ 2,53,859 ಕಾರುಗಳು ಮಾರಾಟಗೊಂಡಿದ್ದು ಎರಡನೇ ಸ್ಥಾನ ಸಿಕ್ಕಿದೆ. ಹೊಸ ಮತ್ತು ಹಳೆಯ ಆವೃತ್ತಿ ಸೇರಿ ಈ ಪ್ರಮಾಣದ ಕಾರು ಮಾರಾಟಗೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2,40,124 ಕಾರುಗಳು ಮಾರಾಟವಾಗಿತ್ತು.

    3. ಸ್ವಿಫ್ಟ್:
    ಮಾರುತಿ ಕಂಪನಿಯ ಹ್ಯಾಚ್‍ಬ್ಯಾಕ್ ಸ್ವಿಫ್ಟ್ 3ನೇ ಸ್ಥಾನ ಪಡೆದುಕೊಂಡಿದ್ದು, ಒಟ್ಟು 2,23,924 ಕಾರುಗಳನ್ನು ಮಾರಾಟವಾಗಿದೆ. 2017-18ರ ಅವಧಿಯಲ್ಲಿ 1,75,928 ಸ್ವಿಫ್ಟ್ ಕಾರು ಮಾರಾಟಗೊಂಡಿತ್ತು.

    4. ಬಲೆನೊ:
    ಬಲೆನೊ ಒಟ್ಟು 2,12,330 ಕಾರುಗಳು ಮಾರಾಟಗೊಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 1,90,480 ಕಾರುಗಳು ಮಾರಾಟವಾಗಿತ್ತು.

    5. ಬ್ರಿಝಾ:
    ಮಾರುತಿ ಕಂಪನಿಯ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಳೆದ ವರ್ಷಕ್ಕೆ ಹೋಲಿಸಿದರೆ 2 ಸ್ಥಾನ ಏರಿಕೆಯಾಗಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. 2018-19 ರಲ್ಲಿ 1,57,880 ಕಾರುಗಳನ್ನು ಮಾರಾಟಗೊಂಡಿದ್ದರೆ, 2017-18ರ ಅವಧಿಯಲ್ಲಿ 1,48,462 ಕಾರುಗಳು ಮಾರಾಟಗೊಂಡಿತ್ತು.

    6.ಐ20:
    ಹುಂಡೈ ಕಂಪನಿಯ ಐ20 2018-19ರ ಅವಧಿಯಲ್ಲಿನ 6ನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದ್ದು, ಈ ಅವಧಿಯಲ್ಲಿ 1,40,225 ಕಾರುಗಳು ಮಾರಾಟಗೊಂಡಿದೆ. 2017-18ರ ಅವಧಿಯಲ್ಲಿ 1,36,182 ಕಾರುಗಳು ಮಾರಾಟವಾಗಿತ್ತು.

    7. ಗ್ರಾಂಡ್ ಐ10:
    ಹುಂಡೈ ಕಂಪನಿಯ ಎಂಟ್ರಿ ಲೆವೆಲ್ ಐ10 1,26,041 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ 1,51,113 ಕಾರುಗಳು ಮಾರಾಟವಾಗಿತ್ತು.

    8. ಕ್ರೇಟಾ:
    ಹುಂಡೈ ಕಂಪನಿಯ ಪ್ರಸಿದ್ಧ ಎಸ್‍ಯುವಿ ಕ್ರೇಟಾ 1,24,300 ಕಾರುಗಳು ಮಾರಾಟಗೊಂಡಿದ್ದು, 8ನೇ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಹಣಕಾಸು ವರ್ಷದಲ್ಲಿ 1,07,136 ಕಾರುಗಳನ್ನು ಮಾರಾಟ ಮಾಡಿತ್ತು.

    9. ವ್ಯಾಗನ್ ಆರ್:
    ಮಾರುತಿ ಕಂಪನಿಯ ವ್ಯಾಗನ್ ಆರ್ ಒಟ್ಟು 1,19,649 ಕಾರುಗಳು ಮಾರಾಟಗೊಂಡಿದೆ. ಕಳೆದ ಅವಧಿಯಲ್ಲಿ ಒಟ್ಟು 1,68,644 ಕಾರುಗಳು ಮಾರಾಟವಾಗಿತ್ತು.

    10. ಸೆಲಿರಿಯೋ:
    ಒಟ್ಟು 1,03,734 ಕಾರುಗಳನ್ನು ಮಾರಾಟಗೊಳ್ಳುವ ಮೂಲಕ ಮಾರುತಿ ಕಂಪನಿಯ ಸೆಲಿರಿಯೋ ಟಾಪ್ – 10 ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ ಒಟ್ಟು 94,721 ಸೆಲಿರಿಯೋ ಮಾರಾಟ ಕಂಡಿತ್ತು.

     

  • ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಬೆಂಗಳೂರು: ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಡಿಸೈರ್ ಭಾರತದಲ್ಲಿ ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ
    30,934 ಡಿಸೈರ್ ಕಾರುಗಳು ಮಾರಾಟವಾಗಿದ್ದರೆ, 21,521 ಆಲ್ಟೋ ಕಾರುಗಳು ಮಾರಾಟವಾಗಿದೆ.

    ಈ ಪಟ್ಟಿಯಲ್ಲಿ ಮಾರುತಿ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು ಸ್ಥಾನ ಪಡೆದುಕೊಂಡಿದ್ದರೆ, ಹುಂಡೈ ಕಂಪೆನಿಯ ಮೂರು ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಯಾವ ಕಾರುಗಳು ಎಷ್ಟು ಮಾರಾಟವಾಗಿದೆ?
    1. ಮಾರುತಿ ಸುಜುಕಿ ಡಿಸೈರ್ – 30,934


    2. ಮಾರುತಿ ಅಲ್ಟೋ – 21,521


    3. ಮಾರುತಿ ಬಲೆನೊ – 17,190


    4. ಮಾರುತಿ ವಿಟಾರಾ ಬ್ರೆಜಾ – 14,396


    5. ಮಾರುತಿ ವ್ಯಾಗನ್ ಆರ್ – 13,907


    6. ಸ್ವಿಫ್ಟ್ – 12,631


    7. ಹುಂಡೈ ಗ್ರಾಂಡ್ ಐ10 – 12,306


    8. ಹುಂಡೈ ಗ್ರಾಂಡ್ ಐ20 – 11,832


    9. ಹುಂಡೈ ಕ್ರೇಟಾ – 10,158


    10. ಸೆಲರಿಯೋ – 9,210