Tag: ಮಾರುತಿ ಸುಝುಕಿ

  • ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

    ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

    ಮುಂಬೈ: ಏಪ್ರಿಲ್‌ 1 ರಿಂದ ಮಾರುತಿ ಸುಝುಕಿ (Maruti Suzuki) ಕಂಪನಿ ಕಾರುಗಳ ಬೆಲೆ ದುಬಾರಿ ಆಗಲಿದೆ.

    ದೇಶದ ಅತಿದೊಡ್ಡ ಪ್ರಯಾಣಿಕ ವಾಹನ (ಪಿವಿ) ತಯಾರಕ ಮಾರುತಿ ಸುಜುಕಿ ಇಂಡಿಯಾ, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಏಪ್ರಿಲ್ 2025 ರಿಂದ ತನ್ನ ಕಾರುಗಳ ಬೆಲೆಯನ್ನು ಶೇ. 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

    ಮಾಡೆಲ್‌ ಅವಲಂಬಿಸಿ ಬೆಲೆ ಏರಿಕೆ ಬದಲಾಗುತ್ತದೆ. ಕಂಪನಿಯು ಮಾಡೆಲ್‌ವಾರು ಬೆಲೆ ಏರಿಕೆಯನ್ನು ನಿರ್ದಿಷ್ಟಪಡಿಸಿಲ್ಲ. ಮಾರುತಿ ತನ್ನ ಹೊಸ ಕಾರುಗಳನ್ನು ನೆಕ್ಸಾ ಮತ್ತು ಅರೆನಾ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ.

    ನೆಕ್ಸಾ ಮಳಿಗೆಗಳು ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್‌ಎಲ್ 6 ಮತ್ತು ಇನ್ವಿಕ್ಟೊದಂತಹ ಮಾಡೆಲ್‌ಗಳನ್ನು ನೀಡುತ್ತವೆ. ಅರೆನಾ ಮಳಿಗೆಗಳ ಮೂಲಕ ಮಾರಾಟವಾಗುವ ಮಾಡೆಲ್‌ಗಳಲ್ಲಿ ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲಿಯೊ, ಈಕೊ, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಸೇರಿವೆ. ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇದೇ ಏಪ್ರಿಲ್‌ನಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ. ಬೆಲೆ ಹೆಚ್ಚಳವು 4% ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾರುತಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

    ಮೂಲ ಸಲಕರಣೆ ತಯಾರಕರು (OEM ಗಳು) ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಬಾರಿ ಕಾರು ಬೆಲೆಗಳನ್ನು ಹೆಚ್ಚಿಸುತ್ತಾರೆ.

  • ಸುಝುಕಿ ಕಾರುಗಳ ಬೆಲೆ ಮತ್ತೆ ದುಬಾರಿ

    ಸುಝುಕಿ ಕಾರುಗಳ ಬೆಲೆ ಮತ್ತೆ ದುಬಾರಿ

    ನವದೆಹಲಿ: ಭಾರತದಲ್ಲಿ ಅತೀ ಜನಪ್ರಿಯ ಅಟೋಮೊಬೈಲ್ ಕಂಪನಿಗಳಾದ ಮಾರುತಿ, ಮಹಿಂದ್ರಾ ಕಾರುಗಳ ಬೆಲೆ ಹೆಚ್ಚಾಗಿದೆ. ಕಾರು ತಯಾರಿಕೆಯಲ್ಲಿ ಬಳಸಲಾಗುವ ಕಚ್ಛಾವಸ್ತುಗಳ ಬೆಲೆ ಏರಿಕೆಯ ಜೊತೆಗೆ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಕಂಪನಿಯು ಹೊಂದಿದೆ.

    ಕಂಪನಿ ತನ್ನ ವಿವಿಧ ಮಾದರಿಗಳ ಕಾರ್‌ಗಳ ಬೆಲೆಯನ್ನು ಶೇ.0.1 ರಿಂದ ಶೇ. 4.3ರ ವರೆಗೆ ಹೆಚ್ಚಿಸಿದೆ. ಕಳೆದ ವರ್ಷ ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6, ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಏರಿಕೆಯಾಗಿತ್ತು. ಇದೀಗ ಮತ್ತೆ ಕಂಪನಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ಟೆಸ್ಲಾ ಕಾರಿನ ಬಗ್ಗೆ ಅಪ್‌ಡೇಟ್ ಮಾಡಿ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ

    ಕಳೆದ ವರ್ಷ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದ್ದ ಕಾರು ಎಕ್ಸ್ಯುವಿ 700 ರ ಬೆಲೆ 12.99 ಲಕ್ಷ ರೂ. ಇದ್ದು, 13.47 ಲಕ್ಷಕ್ಕೆ ಏರಿಕೆಯಾಗಿದೆ. ಥಾರ್ ಡೀಸೆಲ್ ಕಾರುಗಳ ಬೆಲೆ 12.99 ಲಕ್ಷ ಇದ್ದು, 13.38 ಲಕ್ಷಕ್ಕೆ ಏರಿದೆ. ಸ್ಕಾರ್ಪಿಯೋ ಕಾರುಗಳ ಬೆಲೆ 41 ಸಾವಿರದಿಂದ 53 ಸಾವಿರ ರೂ. ವರೆಗೆ. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

  • 2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ

    2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ

    ನವದೆಹಲಿ: 2020ರ ಅಕ್ಟೋಬರ್ ನಿಂದ ಓಮ್ನಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧರಿಸಿದೆ.

    ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ(ಬಿಎನ್‍ವಿಎಸ್‍ಎಪಿ) 2020 ಅಕ್ಟೋಬರ್ ನಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಲವು ವಾಹನಗಳ ಉತ್ಪಾದನೆ ಸ್ಥಗಿತವಾಗಲಿದೆ. ಅದರಲ್ಲಿ ಮಾರುತಿ ಓಮ್ನಿ ಕಾರು ಕೂಡ ಒಂದು ಎಂದು ಮಾರುತಿ ಸುಝುಕಿ ಕಂಪನಿಯ ಮುಖ್ಯಸ್ಥ  ಆರ್‌ಸಿ ಭಾರ್ಗವ ತಿಳಿಸಿದ್ದಾರೆ.   ಇದನ್ನೂ ಓದಿ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಪೆಟ್ರೋಲ್ ಕಾರುಗಳ ವಿವರ ಇಲ್ಲಿದೆ ನೋಡಿ

    1983 ರಲ್ಲಿ ಮಾರುತಿ 800 ಕಾರುಗಳನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಝುಕಿ ಎರಡನೇ ಉತ್ಪನ್ನವಾಗಿ ಮಾರುತಿ ವ್ಯಾನ್ ಬಿಡುಗಡೆ ಮಾಡಿತ್ತು. 34 ವರ್ಷಗಳಲ್ಲಿ ಮೂಲ ಕಾರಿನ ಮಾದರಿಯಲ್ಲಿ 2 ಬಾರಿ ಮಾತ್ರ ಬದಲಾವಣೆಯಾಗಿತ್ತು. 1998 ರಲ್ಲಿ ಹೆಡ್ ಲ್ಯಾಂಪ್ ಬದಲಾಗಿದ್ದರೆ, 2005 ರಲ್ಲಿ ಕಾರಿನ ಮುಂಭಾಗದ ಡ್ಯಾಶ್ ಬೋರ್ಡ್ ನಲ್ಲಿ ಸಣ್ಣ ಬದಲಾವಣೆ ಮಾಡಿ ಬಿಡುಗಡೆ ಮಾಡಿತ್ತು.

    ಮಾರುತಿ ಅಲ್ಟೋ ಮತ್ತು ಮಾರುತಿ ಇಕೋದಲ್ಲೂ ಸುರಕ್ಷತೆಗೆ ಸಂಬಂಧಿಸಿ ದೋಷಗಳಿರುವ ಹಿನ್ನೆಲೆಯಲ್ಲಿ ಅವುಗಳ ವಿನ್ಯಾಸವನ್ನು ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗುವುದು ಎಂದು ಭಾರ್ಗವ ತಿಳಿಸಿದ್ದಾರೆ.  ಇದನ್ನೂ ಓದಿ: ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

    ಸ್ಥಗಿತ ಯಾಕೆ?
    ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ವೇಳೆಗೆ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಎಲ್ಲಾ ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿದೆ. ಓಮ್ನಿ ಕಾರಿನ ಮುಂಭಾಗ ನೇರವಾಗಿರುವ ಕಾರಣ ಅಪಘಾತದ ಸಮಯದಲ್ಲಿ ಒಳಗಿದ್ದವರಿಗೆ ಸುರಕ್ಷತೆ ನೀಡಲು ಸಾಧ್ಯವೇ ಇಲ್ಲ. ಬಿಎನ್‍ವಿಎಸ್‍ಎ ಮಾನದಂಡವನ್ನು ಅನುಸರಿಸಿ ಕಾರನ್ನು ಬಿಡುಗಡೆ ಮಾಡಲು ಓಮ್ನಿ ಮಾಡೆಲ್ ನಲ್ಲಿ ಸಾಧ್ಯವಿಲ್ಲ. ಈ ಕಾರಣಕ್ಕೆ ಈ ಮಾಡೆಲ್ ಅನ್ನೇ ಸಂಪೂರ್ಣವಾಗಿ ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ಮುಂದಾಗಿದೆ.   ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದ ವಿಟಾರಾ ಬ್ರೇಝಾ- ವಿಡಿಯೋ ನೋಡಿ ಏನಿದು ಕ್ರ್ಯಾಶ್ ಟೆಸ್ಟ್? ಹೇಗೆ ಅಂಕ ನೀಡಲಾಗುತ್ತದೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv