Tag: ಮಾರುತಿ

  • ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ವರಾತ್ರಿ, ದೀಪಾವಳಿ ಹಬ್ಬಕ್ಕೆ ಕಾರು ಖರೀದಿ ಮಾಡಬೇಕು ಅಂತ ಪ್ಲ್ಯಾನ್‌ ಇದ್ಯಾ? ಹಾಗಾದ್ರೆ ನಿಮ್ಗೆ ಗುಡ್‌ನ್ಯೂಸ್‌. ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಯಾದ ಬೆನ್ನಲ್ಲೇ ಕಾರು ಮತ್ತು ಬೈಕುಗಳ ದರ ಇಳಿಕೆಯಾಗಿದೆ. 40 ಸಾವಿರ ರೂ. ನಿಂದ ಹಿಡಿದು ಐಷಾರಾಮಿ ಕಾರುಗಳ ಬೆಲೆ ಸುಮಾರು 18 ಲಕ್ಷ ರೂ. ಇಳಿಕೆಯಾಗಿದೆ.

    ಮೊದಲು ಕಾರು ಮತ್ತು ಬೈಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ 350 ಸಿಸಿಗಿಂತ ಕಡಿಮೆ ಇರುವ ಬೈಕ್‌ ಮತ್ತು 1200 ಸಿಸಿಗಿಂತ ಕಡಿಮೆ ಇರುವ ಸಣ್ಣ ಕಾರುಗಳ ತೆರಿಗೆಯನ್ನು 28% ನಿಂದ 18% ಇಳಿಕೆ ಮಾಡಲಾಗಿದೆ.

    ಐಷಾರಾಮಿ ವಾಹನಗಳ ಮೇಲೆ 40% ತೆರಿಗೆ ಹಾಕಲಾಗುತ್ತಿದೆ. ಐಷಾರಾಮಿ ವಾಹನಗಳಿಗೆ 40% ತೆರಿಗೆ ವಿಧಿಸಿದ್ರೂ ಬೆಲೆ ಕಡಿಮೆಯಾಗಲಿದೆ. ಈ ಮೊದಲು 28% ಜಿಎಸ್‌ಟಿ ಇದ್ದರೂ ಸೆಸ್‌ 20-22% ಹಾಕಲಾಗುತ್ತಿತ್ತು. ಇದರಿಂದಾಗಿ ತೆರಿಗೆಯೇ 50% ಆಗುತ್ತಿತ್ತು. ಆದರೆ ಇನ್ನು ಮುಂದೆ ಈ ಸೆಸ್‌ ಇರುವುದಿಲ್ಲ. ಹೀಗಾಗಿ ಐಷಾರಾಮಿ ಕಾರುಗಳ ಬೆಲೆಯೂ ಇಳಿಕೆಯಾಗಲಿದೆ.  ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ಕೆಳಗೆ ನೀಡಲಾಗಿರುವ ದರ ಶೋರೂಂ ದರ ಆಗಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ಈ ದರಕ್ಕೆ  ರೋಡ್‌ ಟ್ಯಾಕ್ಸ್‌, ರಿಜಿಸ್ಟ್ರೇಷನ್‌ ಫೀಸ್‌, ಇನ್ಶುರೆನ್ಸ್‌ ಅಪ್ಲೈ ಆಗುವುದಿಲ್ಲ.

    ಮಾರುತಿ ಸುಜುಕಿ
    ಆಲ್ಟೊ ಕೆ10: 40,000 ರೂ.
    ವ್ಯಾಗನ್ಆರ್: 57,000 ರೂ.
    ಸ್ವಿಫ್ಟ್: 58,000 ರೂ.
    ಡಿಜೈರ್: 61,000 ರೂ.
    ಬಲೆನೊ: 60,000 ರೂ.
    ಫ್ರಾಂಕ್ಸ್: 68,000 ರೂ.

    ಬ್ರೆಝಾ: 78,000 ರೂ.
    ಇಕೊ: 51,000 ರೂ.
    ಎರ್ಟಿಗಾ: 41,000 ರೂ.
    ಸೆಲೆರಿಯೊ: 50,000 ರೂ.
    ಎಸ್-ಪ್ರೆಸ್ಸೊ: 38,000 ರೂ.
    ಇಗ್ನಿಸ್: 52,000 ರೂ.
    ಜಿಮ್ನಿ: 1.14 ಲಕ್ಷ ರೂ.
    XL6: 35,000 ರೂ.
    ಇನ್ವಿಕ್ಟೋ: 2.25 ಲಕ್ಷ ರೂ.

     


    ಮಹೀಂದ್ರಾ
    ಬೊಲೆರೊ ನಿಯೋ: 1.27 ಲಕ್ಷ ಅಗ್ಗ
    XUV 3XO: 1.40 ಲಕ್ಷ ರೂ. (ಪೆಟ್ರೋಲ್), 1.56 ಲಕ್ಷ ರೂ. (ಡೀಸೆಲ್)
    ಥಾರ್: 1.35 ಲಕ್ಷ ರೂ.
    ಥಾರ್ ರಾಕ್ಸ್: 1.33 ಲಕ್ಷ ರೂ.
    ಸ್ಕಾರ್ಪಿಯೋ ಕ್ಲಾಸಿಕ್: 1.01 ಲಕ್ಷ ರೂ.
    ಸ್ಕಾರ್ಪಿಯೋ ಎನ್: 1.45 ಲಕ್ಷ ರೂ.
    XUV700: 1.43 ಲಕ್ಷ ರೂ. ಇದನ್ನೂ ಓದಿ:  ಇಂದಿನಿಂದ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ- ಮೊದಲು ಎಷ್ಟು? ಈಗ ಎಷ್ಟು ಇಳಿಕೆ?

     

    ಟಾಟಾ ಮೋಟಾರ್ಸ್
    ಟಿಯಾಗೊ: 75,000 ರೂ.
    ಟಿಗೋರ್: 80,000 ರೂ.
    ಆಲ್ಟ್ರೋಜ್: 1.10 ಲಕ್ಷ ರೂ.
    ಪಂಚ್: 85,000 ರೂ.
    ನೆಕ್ಸಾನ್: 1.55 ಲಕ್ಷ ರೂ.
    ಹ್ಯಾರಿಯರ್: 1.40 ಲಕ್ಷ ರೂ.
    ಸಫಾರಿ: 1.45 ಲಕ್ಷ ರೂ.
    ಕರ್ವ್: 65,000 ರೂ.

     


    ಟೊಯೋಟಾ 
    ಫಾರ್ಚೂನರ್: 3.49 ಲಕ್ಷ ರೂ.
    ಲೆಜೆಂಡರ್: 3.34 ಲಕ್ಷ ರೂ.
    ಹಿಲಕ್ಸ್: 2.52 ಲಕ್ಷ
    ವೆಲ್‌ಫೈರ್: 2.78 ಲಕ್ಷ ರೂ.
    ಕ್ಯಾಮ್ರಿ: 1.01 ಲಕ್ಷ ರೂ.
    ಇನ್ನೋವಾ ಕ್ರಿಸ್ಟಾ: 1.80 ಲಕ್ಷ ರೂ.
    ಇನ್ನೋವಾ ಹೈಕ್ರಾಸ್: 1.15 ಲಕ್ಷ ರೂ.

     

    ಲ್ಯಾಂಡ್‌ ರೋವರ್
    ರೇಂಜ್ ರೋವರ್ 4.4P SV LWB: 30.4 ಲಕ್ಷ ರೂ.
    ರೇಂಜ್ ರೋವರ್ 3.0D SV LWB: 27.4 ಲಕ್ಷ ರೂ.
    ರೇಂಜ್ ರೋವರ್ 3.0P: 18.3 ಲಕ್ಷ ರೂ.
    ಡಿಸ್ಕವರಿ: 9.9 ಲಕ್ಷ ರೂ.
    ಡಿಸ್ಕವರಿ ಸ್ಪೋರ್ಟ್: 4.6 ಲಕ್ಷ ರೂ.

    ಕಿಯಾ
    ಸೋನೆಟ್: 1.64 ಲಕ್ಷ ರೂ.
    ಸಿರೋಸ್: 1.86 ಲಕ್ಷ ರೂ.
    ಸೆಲ್ಟೋಸ್: 75,372 ರೂ.
    ಕ್ಯಾರೆನ್ಸ್: 48,513 ರೂ.
    ಕ್ಯಾರೆನ್ಸ್ ಕ್ಲಾವಿಸ್: 78,674 ರೂ.
    ಕಾರ್ನಿವಲ್: 4.48 ಲಕ್ಷ ರೂ.
    ಸ್ಕೋಡಾ – 5.8 ಲಕ್ಷ ರೂ.
    ಕೊಡಿಯಾಕ್: 3.3 ಲಕ್ಷ ರೂ. ಜಿಎಸ್‌ಟಿ ಕಡಿತ + 2.5 ಲಕ್ಷ ರೂ. ಹಬ್ಬದ ಕೊಡುಗೆಗಳು
    ಕುಶಾಕ್: 66,000 ರೂ. ಜಿಎಸ್‌ಟಿ ಕಡಿತ + 2.5 ಲಕ್ಷ ರೂ. ಹಬ್ಬದ ಕೊಡುಗೆಗಳು
    ಸ್ಲಾವಿಯಾ: 63,000 ರೂ. ಜಿಎಸ್‌ಟಿ ಕಡಿತ + 1.2 ಲಕ್ಷ ರೂ. ಹಬ್ಬದ ಕೊಡುಗೆಗಳು

     

    ಹುಂಡೈ 
    ಗ್ರ್ಯಾಂಡ್ ಐ10 ನಿಯೋಸ್: 73,808 ರೂ.
    ಔರಾ: 78,465 ರೂ.
    ಎಕ್ಸ್‌ಟರ್: 89,209 ರೂ.
    i20: 98,053 ರೂ. (ಎನ್-ಲೈನ್ 1.08 ಲಕ್ಷ ರೂ.)
    ವೆನ್ಯೂ: 1.23 ಲಕ್ಷ ರೂ.(ಎನ್-ಲೈನ್ 1.19 ಲಕ್ಷ ರೂ.)
    ವೆರ್ನಾ: 60,640 ರೂ.
    ಕ್ರೆಟಾ: 72,145 ರೂ.(ಎನ್-ಲೈನ್ 71,762 ರೂ.)
    ಅಲ್ಕಾಜರ್: 75,376 ರೂ.
    ಟಕ್ಸನ್: 2.4 ಲಕ್ಷ ರೂ.

    ರೆನಾಲ್ಟ್
    ಕಿಗರ್: 96,395 ರೂ


    ನಿಸ್ಸಾನ್ – 1 ಲಕ್ಷ ರೂ.
    ಮ್ಯಾಗ್ನೈಟ್ ವಿಸಿಯಾ ಎಂಟಿ: 6 ಲಕ್ಷ ರೂ.
    ಮ್ಯಾಗ್ನೈಟ್ ಸಿವಿಟಿ ಟೆಕ್ನಾ: 97,300 ರೂ.
    ಮ್ಯಾಗ್ನೈಟ್ ಸಿವಿಟಿ ಟೆಕ್ನಾ+: 1,00,400 ರೂ.
    ಸಿಎನ್‌ಜಿ ರೆಟ್ರೋಫಿಟ್ ಕಿಟ್: 71,999 ರೂ.

  • ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಂಪನಿಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharath NCAP)ನಲ್ಲಿ ಹೊಸ ಮಾರುತಿ ಸುಜುಕಿ ಡಿಸೈರ್ (Maruti Suzuki Dzire) 5-ಸ್ಟಾರ್ ಸೇಫ್ಟಿ ರೇಟಿಂಗ್ ಮತ್ತು ಮಾರುತಿ ಸುಜುಕಿ ಬಲೆನೊ (Maruti Suzuki Baleno) 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.

    ಮಾರುತಿ ಸುಜುಕಿ ಡಿಸೈರ್
    ಭಾರತ್ ಎನ್‌ಸಿಎಪಿ (Bharath NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 29.46 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41.57 ಅಂಕಗಳನ್ನು ಪಡೆದು ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಸೀಟ್ ಮೌಂಟ್‌ ಸ್ಟ್ಯಾಂಡರ್ಡ್ ಫೀಚರ್ಸ್‌ಗಳಾಗಿವೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

     

    ಮಾರುತಿ ಸುಜುಕಿ ಬಲೆನೊ
    6 ಏರ್ ಬ್ಯಾಗ್ ಹೊಂದಿರುವ ಬಲೆನೊ ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 26.52 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್ ಪಡೆದಿದೆ ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 34.81 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

    ಭಾರತ್ ಎನ್‌ಸಿಎಪಿ 2 ಏರ್ ಬ್ಯಾಗ್ ಹೊಂದಿರುವ ಬಲೆನೊ ಕಾರನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದ್ದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 24.04 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್ ಪಡೆದಿದೆ ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 34.81 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    2024ರ ನವೆಂಬರ್ ತಿಂಗಳಲ್ಲಿ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ್ದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿತ್ತು. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿತ್ತು.

     

  • ಸಂಕ್ರಾಂತಿಗೆ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಸಂಕ್ರಾಂತಿಗೆ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಖ್ಯಾತ ನಟ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಅವರು ಹೊಸ ಸಿನಿಮಾ (New Movie) ಬಗ್ಗೆ ಅಪ್ ಡೇಟ್ ಸಿಗಲಿದೆ. ಪ್ರಭಾಸ್ ಅವರ 24ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಅನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಸಂಕ್ರಾಂತಿ ಹಬ್ಬ ಪ್ರಭಾಸ್ ಅಭಿಮಾನಿಗಳಿಗೆ ಎಳ್ಳು ಬೆಲ್ಲ ತರಲಿದೆ.

    ಪ್ರಭಾಸ್ ಅವರ ಮುಂದಿನ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಮಾರುತಿ (Maruti) ಈ ಚಿತ್ರದ ನಿರ್ದೇಶಕರು. ಬಸ್ ಸ್ಟಾಪ್, ಎ ರೋಜುಲೋ ಸೇರಿದಂತೆ ಹಲವು ಚಿತ್ರಗಳನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ 24ನೇ ಚಿತ್ರಕ್ಕಾಗಿ ಇವರು ಹೊಸ ಬಗೆಯ ಕಥೆಯನ್ನು ಹುಡುಕಿ ತಂದಿದ್ದಾರೆ.

     

    ಪ್ರಭಾಸ್ ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ಮುಗಿಸಿದ್ದಾರೆ. ಸಲಾರ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಜೊತೆಗೆ ಮತ್ತೆರಡು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಭಾಸ್ ಸತತ ಐದು ವರ್ಷಗಳ ಕಾಲ ಬ್ಯೂಸಿಯಾಗಿದ್ದಾರೆ.

  • 9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನವದೆಹಲಿ: ಮಾರುತಿ ಸುಜುಕಿ ಇಂಡಿಯಾ(Maruti Suzuki India) ಸಿಯಾಜ್, ಬ್ರೆಝಾ, ಎರ್ಟಿಗಾ, ಎಕ್ಸ್‌ಎಲ್ 6 ಮತ್ತು ಗ್ರ್ಯಾಂಡ್ ವಿಟಾರಾ ಸೇರಿ ಒಟ್ಟು 9,125 ಕಾರುಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ತಿಳಿಸಿದೆ.

    ನವೆಂಬರ್ 2 ರಿಂದ 28ರವರೆಗಿನ ಅವಧಿಯಲ್ಲಿ ಉತ್ಪಾದನೆಯಾದ ಕಾರುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

    ಮುಂಭಾಗದ ಸಾಲಿನ ಸೀಟ್ ಬೆಲ್ಟ್‌ಗಳ(Seat Belt) ಭುಜದ ಎತ್ತರ ಹೊಂದಾಣಿಕೆಯ ಜೋಡಣೆಯ ಸಣ್ಣ ಭಾಗದಲ್ಲಿ ಒಂದು ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ. ಇದು ಅಪರೂಪದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಬೇರ್ಪಡಿಸಬಹುದು ಎಂದು ಹೇಳಿದೆ. ಇದನ್ನೂ ಓದಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ – ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್

    ದೋಷಪೂರಿತ ವಾಹನಗಳನ್ನು ತಪಾಸಣೆ ಮತ್ತು ದೋಷಪೂರಿತ ಭಾಗವನ್ನು ಉಚಿತವಾಗಿ ಹಿಂಪಡೆಯಬಹುದು. ವಾಹನದ ಮಾಲೀಕರ ಜೊತೆ ಕಂಪನಿ ಸಂವಹನ ನಡೆಸಲಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • 24.5 ಕಿ.ಮೀ ಮೈಲೇಜ್‌ ನೀಡ್ತಿದ್ದ ಮಾರುತಿ 800ಸಿಸಿ ಎಂಜಿನ್‌ಗೆ ಗುಡ್ ಬೈ

    24.5 ಕಿ.ಮೀ ಮೈಲೇಜ್‌ ನೀಡ್ತಿದ್ದ ಮಾರುತಿ 800ಸಿಸಿ ಎಂಜಿನ್‌ಗೆ ಗುಡ್ ಬೈ

    ನವದೆಹಲಿ: ಮಾರುತಿ ಸುಜುಕಿ(Maruti suzuki) ಕಂಪನಿಯು ತನ್ನ 800ಸಿಸಿ (800cc) ಎಂಜಿನ್‌ಗೆ ಈ ಆರ್ಥಿಕ ವರ್ಷದ ಕೊನೆಯಲ್ಲಿ(ಮಾರ್ಚ್ 2023) ಗುಡ್ ಬೈ ಹೇಳಲಿದೆ.

    ಮಾರುತಿ 800 ಕಾರಿನ ಮುಖಾಂತರ 1983ರಲ್ಲಿ ಈ ಎಂಜಿನನ್ನು ಪರಿಚಯಿಸಲಾಗಿತ್ತು. ನಾಲ್ಕು ದಶಕಗಳ ಕಾಲದ ಎಂಜಿನ್‌ಗೆ ಈಗ ವಿದಾಯ ಹೇಳುವ ಸಮಯ ಬಂದಿದೆ. ಮುಂಬರುವ ಇಂಧನ ಹೊರಸೂಸುವಿಕೆ ಮಾನದಂಡಗಳು ಮತ್ತು ಈ ಎಂಜಿನ್‌ಗೆ ಅಷ್ಟಾಗಿ ಬೇಡಿಕೆ ಇಲ್ಲದಿರುವುದರಿಂದ ಕಂಪನಿ ಗುಡ್‌ ಬೈ ಹೇಳಲು ಮುಂದಾಗಿದೆ.

    800ಸಿಸಿ ಎಂಜಿನ್ ಭಾರತಕ್ಕೆ ಬಂದಿದ್ದು 1983ರಲ್ಲಿ. ಇದನ್ನು F8B ಎಂಬ ಕೋಡ್‌ನಿಂದ ಕರೆಯಲಾಗುತ್ತಿತ್ತು. ಈ ಎಂಜಿನ್ 39hp ಶಕ್ತಿ ಮತ್ತು 59Nm ಟಾರ್ಕ್ ಉತ್ಪಾದಿಸುತ್ತಿತ್ತು. 2000ನೇ ಇಸವಿಯಲ್ಲಿ ಇದನ್ನು ಮೇಲ್ದರ್ಜೆಗೆ ಏರಿಸಲಾಯ್ತು. ಇದನ್ನು F8D ಎಂದು ಕರೆಯಲಾಯ್ತು. ಮೇಲ್ದರ್ಜೆಗೆ ಏರಿಸಿದ ನಂತರ ಈ ಎಂಜಿನ್‌ನ ಸಾಮರ್ಥ್ಯ ಮತ್ತಷ್ಟು ಹೆಚ್ಚಾಯ್ತು. ಫ್ಯೂಯಲ್ ಇಂಜೆಕ್ಷನ್ ಮತ್ತು ಪ್ರತಿ ಸಿಲಿಂಡರ್‌ಗೆ ನಾಲ್ಕು ವಾಲ್ವ್‌ಗಳನ್ನು ಸೇರಿಸಿದ್ದರಿಂದ ಇದು ಆಗಿನ BS2 ಮಾನದಂಡಕ್ಕೆ ಮಾತ್ರವಲ್ಲ, 2020ರ BS6 ಮಾನದಂಡಕ್ಕೂ ಅನುಗುಣವಾಗುವಾಗಿತ್ತು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

    ಈ ಎಂಜಿನನ್ನು ಮಾರುತಿ 800 ಓಮ್ನಿ(Maruti Omni) ಮತ್ತು ಆಲ್ಟೋ ಕಾರುಗಳಲ್ಲಿ(Alto Car) ಉಪಯೋಗಿಸಲಾಗಿದೆ. ಇದು ಅತ್ಯಂತ ಇಂಧನ ದಕ್ಷತೆ ಹೊಂದಿದ್ದ ಎಂಜಿನ್. ಈಗಿರುವ ಆಲ್ಟೋ 800 ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ನೀಡುವ ಮೈಲೇಜ್ 24.5 ಕಿ.ಮೀ. (ARAI). F8B ಎಂಜಿನ್ 4-ಸ್ಪೀಡ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಿತ್ತು. ಮೇಲ್ದರ್ಜೆಗೆ ಏರಿಸಿದ ನಂತರ 5-ಸ್ಪೀಡ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಾಯಿತು. ಸ್ವಲ್ಪ ಸಮಯಗಳ ಕಾಲ 3-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಕೂಡ ಈ ಎಂಜಿನ್ ಲಭ್ಯವಿತ್ತು.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಬಾಹುಬಲಿ ಸಿನಿಮಾ ವೇಳೆಯಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರದ್ದೇ ಮಾತು. ಸಿನಿಮಾಗೆ ಸಂಬಂಧಿಸಿದ ಸುದ್ದಿ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಇಬ್ಬರೂ ಒಟ್ಟಾಗಿ ಓಡಾಡುತ್ತಿದ್ದಾರೆ ಎಂದು ಶುರುವಾದ ಮಾತುಗಳು ಇನ್ನೇನು ಮದುವೆ ಕೂಡ ಆಗಲಿದ್ದಾರೆ ಎಂದು ದೊಡ್ಡ ಸುದ್ದಿ ಆಯಿತು. ಆನಂತರ ಈ ಜೋಡಿ ಮತ್ತೆ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.

    ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾದರೆ, ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದಲೇ ದೂರವಾದರು. ಅವರು ಅಷ್ಟೇನೂ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲದೇ, ಪ್ರಭಾಸ್ ಅವರಿಂದ ಅಂತರವನ್ನೂ ಕಾಪಾಡಿಕೊಂಡರು. ಇದೀಗ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಕೂಡ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು,  ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾದರೆ, ಅನುಷ್ಕಾ ಶೆಟ್ಟಿ ನಾಯಕಿಯಂತೆ. ಈಗಾಗಲೇ ಇಬ್ಬರಿಗೂ ಸಿನಿಮಾದ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ಈ ಚಿತ್ರದಲ್ಲಿ ನಟಿಸಲು ಈ ಜೋಡಿ ಕೂಡ ಒಪ್ಪಿಕೊಂಡಿದೆ ಎನ್ನುವ ಸುದ್ದಿಯಿದೆ. ಅಧಿಕೃತವಾಗಿ ಇವರಾರೂ ಹೇಳದೇ ಇದ್ದರೂ, ತೆರೆ ಮರೆಯಲ್ಲಿ ಎಲ್ಲವೂ ನಡೆಯುತ್ತಿದೆಯಂತೆ. ಸದ್ಯ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ತೊಡಗಿಕೊಂಡಿದ್ದರಿಂದ, ಕೆಲವೇ ದಿನಗಳಲ್ಲಿ ಅಧಿಕೃತ ಸುದ್ದಿ ಸಿಗಬಹುದು ಎನ್ನಲಾಗುತ್ತಿದೆ.

    Live Tv

  • ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

    ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

    ಗುರುಗ್ರಾಮ: ಮಾರುತಿ ಸುಜುಕಿ ಹರ್ಯಾಣದಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿದ್ದು ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.75 ರಷ್ಟು ಮೀಸಲಾತಿ ನೀಡುವುದಾಗಿ ಪ್ರಕಟಿಸಿದೆ.

    ಮಾರುತಿ ಸುಜುಕಿ ಕಂಪನಿ ಸೋನಿಪತ್‌ ಜಿಲ್ಲೆಯ ಖರ್ಖೋಡಾದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 18 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಈ ಘಟಕದಿಂದ 13 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ.

    800 ಎಕ್ರೆ ಜಾಗದಲ್ಲಿ ತಲೆ ಎತ್ತಲಿರುವ ಈ ಘಟಕ 2025ಕ್ಕೆ ಕಾರ್ಯಾಚರಣೆ ಮಾಡಲಿದೆ. 8 ವರ್ಷದಲ್ಲಿ ಪೂರ್ಣವಾಗಿ ಕೆಲಸ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌

    ಮೀಸಲಾತಿ ನಿಯಮ ಏನು?
    ಈ ಹಿಂದೆ ತಿಂಗಳಿಗೆ ಗರಿಷ್ಠ 50 ಸಾವಿರ ರೂ. ವೇತನ ಪಡೆಯುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿತ್ತು. ಆದರೆ ಹಲವು ಸುತ್ತಿನ ಮಾತುಕತೆಯ ಬಳಿಕ ಇದು ಈಗ 30 ಸಾವಿರ ರೂ.ಗೆ ಇಳಿಕೆಯಾಗಿದೆ.

    ಈ ಹಿಂದೆ 15 ವರ್ಷದ ಹರ್ಯಾಣದಲ್ಲಿ ನೆಲೆಸಿದವರಿಗೆ ಮೀಸಲಾತಿ ನೀಡಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಸಡಿಲಿಸಲಾಗಿದ್ದು 5 ವರ್ಷ ರಾಜ್ಯದಲ್ಲಿ ನೆಲೆಸಿದವರಿಗೆ ಮೀಸಲಾತಿ ಲಾಭ ಸಿಗಲಿದೆ.

    ಈ ಹಿಂದೆ ಮಾರುತಿ ಮುಖ್ಯಸ್ಥ ಆರ್‌ಸಿ ಭಾರ್ಗವ ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಆದರೆ ಈಗ ಸ್ಥಳೀಯರ ರಕ್ಷಣೆಯೂ ಬೇಕು ಎಂದು ಹೇಳಿ ಮೀಸಲಾತಿ ನಿಯಮಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನವೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳ ಪಟ್ಟಿ

    ನವೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳ ಪಟ್ಟಿ

    ನವದೆಹಲಿ: ನವೆಂಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದ್ದು ಎಂದಿನಂತೆ ಮಾರುತಿ ಸ್ವಿಫ್ಟ್‌ ಮೊದಲ ಸ್ಥಾನ ಪಡೆದುಕೊಂಡಿದೆ.

    ಟಾಪ್‌ 10 ಪಟ್ಟಿಯಲ್ಲಿ ಮಾರುತಿ ಕಂಪನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿವೆ. ಹುಂಡೈ ಕಂಪನಿಯ 2 ಕಾರುಗಳು, ಕಿಯಾ ಕಂಪನಿಯ 1 ಕಾರು ಸ್ಥಾನ ಪಡೆದಿದೆ.

    1. ಮಾರುತಿ ಸ್ವಿಫ್ಟ್‌:


    ಮಾರುತಿ ಕಂಪನಿಯ ಸ್ವಿಫ್ಟ್‌ 18,498 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಶೇ.4.2 ರಷ್ಟು ಬೇಡಿಕೆ ಕಳೆದುಕೊಳ್ಳುತ್ತಿದ್ದರೂ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

     

    2. ಮಾರುತಿ ಸುಜುಕಿ ಬಲೆನೊ:


    ಹ್ಯಾಚ್‌ಬ್ಯಾಕ್‌ ಕಾರು ಬಲೆನೊ ಸ್ವಿಫ್ಟ್‌ ಕಾರಿಗೆ ಸ್ಪರ್ಧೆ ನೀಡುತ್ತಿದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ 17,872 ಕಾರುಗಳನ್ನು ಮಾರಾಟ ಮಾಡಿದೆ.

    3. ಮಾರುತಿ ಸುಜುಕಿ ವ್ಯಾಗನಾರ್‌:


    ಮೂರನೇ ಸ್ಥಾನವನ್ನೂ ಮಾರುತಿ ಕಂಪನಿಯ ಮತ್ತೊಂದು ಹ್ಯಾಚ್‌ಬ್ಯಾಕ್‌ ಕಾರು ವ್ಯಾಗನಾರ್‌ ಪಡೆದುಕೊಂಡಿದೆ. ನವೆಂಬರ್‌ನಲ್ಲಿ 16,356 ಕಾರುಗಳನ್ನು ಮಾರಾಟ ಮಾಡಿದ್ದು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತದೆ.

    4. ಮಾರುತಿ ಸುಜುಕಿ ಆಲ್ಟೋ:


    ಒಟ್ಟು 15,321 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್‌ -10 ಪಟ್ಟಿಯಲ್ಲಿ ಆಲ್ಟೋ 4ನೇ ಸ್ಥಾನ ಪಡೆದಿದೆ.

    5. ಮಾರುತಿ ಸುಜುಕಿ ಡಿಸೈರ್‌:


    ಸೆಡಾನ್‌ ಕಾರುಗಳ ಮಾರುಕಟ್ಟೆಯಲ್ಲಿ ಮಾರುತಿ ಡಿಸೈರ್‌ ಕಾರಿನ ಆರ್ಭಟ ಈಗಲೂ ಮುಂದುವರಿದಿದೆ. ಹೋಂಡಾ ಅಮೇಜ್‌, ಟಾಟಾ ಟಿಗೊರ್‌ ಕಾರುಗಳಿದ್ದರೂ ಡಿಸೈರ್‌ 13,536 ಕಾರುಗಳನ್ನು ಮಾರಾಟ ಮಾಡಿ 5ನೇ ಸ್ಥಾನ ಪಡೆದುಕೊಂಡಿದೆ. ಕಳೆದ ನವೆಂಬರ್‌ಗೆ ಹೋಲಿಸಿದರೆ ಶೇ.23.3 ರಷ್ಟು ಬೇಡಿಕೆ ಕಡಿಮೆಯಾಗಿದ್ದರೂ ಜನಪ್ರಿಯತೆ ಕುಸಿದಿಲ್ಲ.

    6.ಹುಂಡೈ ಕ್ರೇಟಾ


    ಎರಡನೇ ತಲೆಮಾರಿನ ಕ್ರೇಟಾ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎಸ್‌ಯುವಿ(ಸ್ಫೋರ್ಟ್‌ ಯುಟಿಲಿಟಿ ವೆಹಿಕಲ್‌) ಮಾದರಿಯಲ್ಲಿ ಪ್ರಸಿದ್ಧವಾಗಿರುವ ಕ್ರೇಟಾ ನವೆಂಬರ್‌ನಲ್ಲಿ 12,017 ಕಾರುಗಳನ್ನು ಮಾರಾಟ ಮಾಡಿ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

    7. ಕಿಯಾ ಸಾನೆಟ್‌:


    ದಕ್ಷಿಣ ಕೊರಿಯಾ ಕಿಯಾ ಕಂಪನಿ ನಿಧನವಾಗಿ ಭಾರತದಲ್ಲಿ ಜನಪ್ರಿಯವಾಗಲು ಆರಂಭವಾಗಿದೆ. ಒಟ್ಟು 11,417 ಸಾನೆಟ್‌ ಕಾರುಗಳು ಮಾರಾಟಗೊಂಡಿದ್ದು, 7ನೇ ಸ್ಥಾನವನ್ನು ಪಡೆದುಕೊಂಡಿದೆ.

    8.ಮಾರುತಿ ಸುಜುಕಿ ಇಕೋ


    ಮಾರುತಿ ಕಂಪನಿಯ ಯಟಿಲಿಟಿ ವೆಹಿಕಲ್‌ ಇಕೋ 11,183 ಕಾರುಗಳನ್ನು ಮಾರಾಟ ಮಾಡಿದೆ. ಕಡಿಮೆ ಬೆಲೆ ಮತ್ತು ಹೆಚ್ಚು ಜನರನ್ನು ಸಾಗಿಸಬಲ್ಲ ಈ ಕಾರಿನ ಪ್ರಸಿದ್ಧಿ ಈಗ ಕಡಿಮೆಯಾಗುತ್ತಿದ್ದರೂ 8ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

    9. ಹುಂಡೈ ಗ್ರಾಂಡ್‌ ಐ10


    ನವೆಂಬರ್‌ನಲ್ಲಿ ಒಟ್ಟು 10,936 ಗ್ರಾಂಡ್‌ ಐ10 ಕಾರುಗಳ ಮಾರಾಟ ಕಂಡಿದೆ. ಕ್ರೇಟಾದ ಬಳಿಕ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಹುಂಡೈ ಕಂಪನಿಯ ಕಾರು ಇದಾಗಿದೆ. ಈ ಕಾರಿನ ಮಾರಾಟ ಶೇ.7.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.

    10: ಮಾರುತಿ ಸುಜುಕಿ ಎರ್ಟಿಗಾ


    ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ದೊಡ್ಡ ಕಾರು ಎರ್ಟಿಗಾ ಆಗಿದೆ. ಒಟ್ಟು 9,557 ಕಾರುಗಳನ್ನು ಮಾರಾಟ ಮಾಡಿ ಮೀಡಿಯಂ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆ ಬಾರಿ 10ನೇ ಸ್ಥಾನವನ್ನು ವಿಟಾರಾ ಬ್ರೀಜಾ ಪಡೆದುಕೊಂಡಿತ್ತು.

  • ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    – ಪ್ರಧಾನಿ ಮೋದಿ ಆಲೋಚನೆಯಿಂದ ದೇಶ ಆರ್ಥಿಕತೆ ನಾಶ: ರಾಹುಲ್
    – ಮಾರುಕಟ್ಟೆ ತೆರೆಯುತ್ತಿದ್ದಂತೆ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿತ

    ಮುಂಬೈ: ಕೊರೊನಾ ವೈರಸ್ ಹಾಗೂ ಯೆಸ್ ಬ್ಯಾಂಕಿನ ಬಿಕ್ಕಟ್ಟಿನಿಂದ ಭಯಭೀತರಾದ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಬಿಎಸ್‍ಇ ಸೆನ್ಸೆಕ್ಸ್ ಶುಕ್ರವಾರ 893.99 ಪಾಯಿಂಟ್‍ಗಳ ಕುಸಿತ ಕಂಡು 37,576.62 ಕ್ಕೆ ತಲುಪಿದೆ. ಅಂತೆಯೇ, ಎನ್‍ಎಸ್‍ಇ ನಿಫ್ಟಿ 368.15 ಪಾಯಿಂಟ್‍ಗಳ ಕುಸಿತದಿಂದ 11,000 ಪಾಯಿಂಟ್‍ಗಳ ಪಾತಾಳಕ್ಕೆ ತಲುಪಿದೆ.

    ಬ್ಯಾಂಕ್ ಷೇರುಗಳು ಬಿಎಸ್‍ಇಯಲ್ಲಿ ಶೇ.56 ಮತ್ತು ಎನ್‍ಎಸ್‍ಇಯಲ್ಲಿ ಶೇ.74 ಕುಸಿತ ಕಂಡಿವೆ. ಟಾಟಾ ಸ್ಟೀಲ್ ಷೇರುಗಳು ಬಿಎಸ್‍ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಬಜಾಜ್ ಆಟೋ, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಭಾರೀ ಲಾಭ ಗಳಿಸಿವೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಮಾರುಕಟ್ಟೆ ತೆರೆದ ಕೂಡಲೇ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿದು, 37,011.09ಕ್ಕೆ ತಲುಪಿತ್ತು. ಬಿಎಸ್‍ಇಯಲ್ಲಿ ಗುರುವಾರ ದಿನದಂತ್ಯಕ್ಕೆ 37,524 ಪಾಂಯಿಂಟ್ಸ್ ಇತ್ತು. ಆದರೆ ಇಂದಿನ ದಿನದಂತ್ಯಕ್ಕೆ 893.99 ಪಾಯಿಂಟ್ಸ್ ಕಳೆದುಕೊಂಡು, 37,576.62 ಪಾಯಿಂಟ್ಸ್ ಗೆ ತಲುಪಿದೆ.

    ಎನ್‍ಎಸ್‍ಇ ಇಂದು 279.55 ಪಾಯಿಂಟ್ಸ್ ಕುಸಿತ ಕಂಡಿದೆ. ಗುರುವಾರ ದಿನದಂತ್ಯಕ್ಕೆ 10,979 ಪಾಂಯಿಂಟ್ಸ್ ಹೊಂದಿದ್ದ ನಿಫ್ಟಿ ಇಂದಿನ ದಿನದ ಅಂತ್ಯಕ್ಕೆ 10,989.45 ಪಾಯಿಂಟ್ಸ್ ತಲುಪಿದೆ.

    ಎನ್‍ಎಸ್‍ಇಯಲ್ಲಿ ಬ್ಯಾಂಕ್ ಷೇರುಗಳು ಶೇ.76 ರಷ್ಟು ಕುಸಿದಿವೆ. ಎಸ್‍ಬಿಐ ಷೇರುಗಳು ಶೇ.12 ಕಡಿಮೆ ಆಗಿದೆ. ಗುರುವಾರ, ಯೆಸ್ ಬ್ಯಾಂಕ್ ಅನ್ನು ಉಳಿಸಲು ಸರ್ಕಾರ ಎಸ್‍ಬಿಐಗೆ ಫಾರ್ವರ್ಡ್ ಮಾಡಬಹುದು ಎಂಬ ವರದಿಯಿತ್ತು. ಈ ಕಾರಣದಿಂದಾಗಿ ಎಸ್‍ಬಿಐ ಷೇರುಗಳು ಕುಸಿತ ಕಂಡಿವೆ.

    ಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 1 ಲಕ್ಷವನ್ನು ತಲುಪುತ್ತಿದೆ ಹಾಗೂ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ 14 ವಹಿವಾಟು ಅವಧಿಯಲ್ಲಿ ಎಫ್‍ಐಐಗಳು ಭಾರತೀಯ ಮಾರುಕಟ್ಟೆಯಿಂದ 18,343 ಕೋಟಿ ರೂ. ಹಿಂಪಡೆದಿದ್ದಾರೆ.

    ಅಮೆರಿಕದ ಷೇರು ಮಾರುಕಟ್ಟೆ ಡೌ ಜೋನ್ಸ್ ಶೇ.3.58 ಮತ್ತು ನಾಸ್ಡಾಕ್ ಶೇ.3.10 ಇಳಿದಿದೆ. ನಿಕ್ಕಿ ಶೇ.2.94 ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆ ಶೇ.2.44 ಕುಸಿದಿದೆ.

    ಮೋದಿಯಿಂದ ನಾಶ:
    ಯೆಸ್ ಬ್ಯಾಂಕ್‍ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹನೆಯನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದೆ. ಜೊತೆಗೆ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ಭಾರತದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ಮಾರುತಿ ಸುಜುಕಿ

    ಭಾರತದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ಮಾರುತಿ ಸುಜುಕಿ

    ನವದೆಹಲಿ: ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ 37 ವರ್ಷದಲ್ಲಿ ಒಟ್ಟು 2 ಕೋಟಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ಮೈಲಿಗಲ್ಲನ್ನು ನಿರ್ಮಿಸಿದೆ.

    ಭಾರತ ಮತ್ತು ಜಪಾನ್ ಕಂಪನಿ ಮೊದಲ 29 ವರ್ಷದಲ್ಲಿ 1 ಕೋಟಿ ಕಾರುಗಳನ್ನು ಮಾರಾಟ ಮಾಡಿದ್ದರೆ ಕಳೆದ 8 ವರ್ಷದಲ್ಲಿ ಒಟ್ಟು 1 ಕೋಟಿ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಒಟ್ಟು 2 ಕೋಟಿ ಕಾರುಗಳನ್ನು ಮಾರಾಟ ಮಾಡಿದ ದೇಶದ ಏಕೈಕ ಕಂಪನಿಯಾಗಿ ಮಾರುತಿ ಹೊರಹೊಮ್ಮಿದೆ.

    1983ರ ಡಿಸೆಂಬರ್ 14 ರಂದು ಮಾರುತಿ 800 ಕಾರುಗಳನ್ನು ಮಾರಾಟ ಮಾಡುವ ಮೂಲಕ ಈ ಕ್ಷೇತ್ರಕ್ಕೆ ಕಾಲಿಟ್ಟ ಕಂಪನಿ 2005-06 ರಲ್ಲಿ ಕಂಪನಿ ಒಟ್ಟು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಇದನ್ನೂ ಓದಿ: ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

    ಯಾವ ವರ್ಷ ಎಷ್ಟು ಕಾರು ಮಾರಾಟ?
    1994-95 – 10 ಲಕ್ಷ
    2005-06 – 50 ಲಕ್ಷ
    2011-12 – 1 ಕೋಟಿ
    2016-17 – 1.5 ಕೋಟಿ
    2019-20 – 2 ಕೋಟಿ

    ಕಳೆದ ಹಲವಾರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿ ನಂಬರ್ ಒನ್ ಸ್ಥಾನದಲ್ಲಿದೆ. ಕಂಪನಿಯ 8 ಕಾರುಗಳು ಬಿಎಸ್6 ಎಂಜಿನ್ ಕಾರುಗಳಾಗಿದ್ದು ಈಗಾಗಲೇ ರಸ್ತೆಗೆ ಇಳಿದಿದೆ. ಸುಜುಕಿ ಜೊತೆಗೂಡಿ ಮಾರುತಿ ಈಗ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ತೊಡಗಿದ್ದು 50 ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಈಗ ದೇಶದ ಹಲವು ಭಾಗಗಳಲ್ಲಿ ಪರೀಕ್ಷೆ ನಡೆಸುತ್ತಿದೆ.