Tag: ಮಾರಿಷಸ್‌

  • ಮಾರಿಷಸ್‌ನಲ್ಲಿ ಹೊಸ ಸಂಸತ್ ನಿರ್ಮಾಣಕ್ಕೆ ಭಾರತದ ಸಹಕಾರ: ಪ್ರಧಾನಿ ಮೋದಿ

    ಮಾರಿಷಸ್‌ನಲ್ಲಿ ಹೊಸ ಸಂಸತ್ ನಿರ್ಮಾಣಕ್ಕೆ ಭಾರತದ ಸಹಕಾರ: ಪ್ರಧಾನಿ ಮೋದಿ

    ಪೋರ್ಟ್ ಲೂಯಿಸ್: ಮಾರಿಷಸ್‌ನಲ್ಲಿ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುವಲ್ಲಿ ಭಾರತ ಸಹಕರಿಸಲಿದೆ. ಇದು ಪ್ರಜಾಪ್ರಭುತ್ವದ ತಾಯಿಯಿಂದ ಮಾರಿಷಸ್‌ಗೆ ಉಡುಗೊರೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಮತ್ತು ಮಾರಿಷಸ್ ಹಿಂದೂ ಮಹಾಸಾಗರದಿಂದ ಮಾತ್ರವಲ್ಲದೆ ಸಂಪ್ರದಾಯಗಳು ಮತ್ತು ಸಂಸ್ಕೃತಿಯಿಂದಲೂ ಸಂಪರ್ಕ ಹೊಂದಿವೆ. ನಾವು ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಪ್ರಯಾಣದಲ್ಲಿ ಪಾಲುದಾರರು. ನಾವು ಯಾವಾಗಲೂ ಪರಸ್ಪರ ಬೆಂಬಲವಾಗಿ ನಿಂತಿದ್ದೇವೆ ಎಂದರು.

    ಬಳಿಕ 140 ಕೋಟಿ ಭಾರತೀಯರ ಪರವಾಗಿ ಪ್ರಧಾನಿ ಮೋದಿ ಅವರು ಮಾರಿಷಸ್ ಜನತೆಗೆ ಅವರ ರಾಷ್ಟ್ರೀಯ ದಿನದಂದು ಅಭಿನಂದನೆ ಸಲ್ಲಿಸಿದರು ಮತ್ತು ಮಾರಿಷಸ್ ರಾಷ್ಟ್ರೀಯ ದಿನದಂದು ಅಲ್ಲಿಗೆ ಮತ್ತೊಮ್ಮೆ ಬರುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿದರು.

    ಸುದ್ದಿಗೋಷ್ಠಿಗೂ ಮುನ್ನ ಪ್ರಧಾನಿ ಮೋದಿ ಮಾರಿಷಸ್‌ನ ಮಾಜಿ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರನ್ನು ಭೇಟಿಯಾದರು. ವಿವಿಧ ಕ್ಷೇತ್ರಗಳಲ್ಲಿ ಭಾರತ-ಮಾರಿಷಸ್ ಸಹಕಾರವನ್ನು ಹೆಚ್ಚಿಸುವ ಕುರಿತು ಇಬ್ಬರೂ ಚರ್ಚೆಗಳನ್ನು ನಡೆಸಿದರು. ಬಳಿಕ ಮಾರಿಷಸ್‌ನ ಸಂಸದ ಮತ್ತು ವಿರೋಧ ಪಕ್ಷದ ನಾಯಕ ಜಾರ್ಜಸ್ ಪಿಯರೆ ಲೆಸ್‌ಜೊಂಗಾರ್ಡ್ ಅವರನ್ನು ಮೋದಿ ಭೇಟಿ ಮಾಡಿದರು. ಭಾರತ-ಮಾರಿಷಸ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಕುರಿತು ಅವರು ಫಲಪ್ರದ ಚರ್ಚೆಗಳನ್ನು ನಡೆಸಿದರು.

    ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾರಿಷಸ್ ಪ್ರತಿರೂಪ ನವೀನ್‌ಚಂದ್ರ ರಾಮ್‌ಗೂಲಂ ಅವರೊಂದಿಗೆ ಸಭೆ ನಡೆಸಿದರು, ಅಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ವಿಶೇಷ ಬಾಂಧವ್ಯವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಏರಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಿದರು.

    ಸಭೆಯಲ್ಲಿ, ಪ್ರಧಾನಿ ಮೋದಿ ಅವರು ಭಾರತವು ಮಾರಿಷಸ್‌ಗೆ ಮೌಲ್ಯಯುತ ಮತ್ತು ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರ ಎಂದು ಹೆಮ್ಮೆಪಡುತ್ತದೆ ಮತ್ತು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಉತ್ತೇಜಿಸಲು ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.

    ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಮ್ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಔತಣಕೂಟದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಯಾವುದೇ ಗಡಿಗಳಿಲ್ಲ, ಮತ್ತು ಅವರು ಎರಡೂ ರಾಷ್ಟ್ರಗಳ ಜನರಿಗೆ ಹಾಗೂ ಪ್ರದೇಶದ ಶಾಂತಿ ಮತ್ತು ಸುರಕ್ಷತೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

  • ಪ್ರಧಾನಿ ಮೋದಿಗೆ ಮಾರಿಷಸ್‌ನಲ್ಲಿ ಬಿಹಾರಿ ಸಂಪ್ರದಾಯದಂತೆ ಸ್ವಾಗತ

    ಪ್ರಧಾನಿ ಮೋದಿಗೆ ಮಾರಿಷಸ್‌ನಲ್ಲಿ ಬಿಹಾರಿ ಸಂಪ್ರದಾಯದಂತೆ ಸ್ವಾಗತ

    ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾರಿಷಸ್‌ನ ಪೋರ್ಟ್ ಲೂಯಿಸ್‌ಗೆ ಭೇಟಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರಿಗೆ ಬಿಹಾರಿ ಸಂಪ್ರದಾಯದಂತೆ ಸ್ವಾಗತ ಕೋರಲಾಯಿತು.

    ಮಾರಿಷಸ್ ಪಿಎಂ ನವೀನ್ ರಾಮ್‌ಗೂಲಾಮ್ ಅವರು ವಿಮಾನ ನಿಲ್ದಾಣ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡು. ಪರಸ್ಪರರು ಆಲಂಗಿಸಿ ಕುಶಲೋಪರಿ ವಿಚಾರಿಸಿಕೊಂಡರು.

    ಭಾರತೀಯ ವಲಸೆಗಾರರ ​​ಸದಸ್ಯ ಶರದ್ ಬಾರ್ನ್‌ವಾಲ್, ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಾವು ಬೆಳಿಗ್ಗೆ ಇಲ್ಲಿ ಒಟ್ಟುಗೂಡಿದ್ದೇವೆ. ಭಾರತ ಮತ್ತು ಮಾರಿಷಸ್ ನಡುವಿನ ಸ್ನೇಹ ಉತ್ತಮವಾಗಿದೆ. ಪಿಎಂ ಮೋದಿಯವರ ಈ ಭೇಟಿಯ ನಂತರ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಡರಾತ್ರಿ ಮಾರಿಷಸ್‌ಗೆ ಎರಡು ದಿನಗಳ ಭೇಟಿಗೆ ತೆರಳಿದ್ದಾರೆ. ಮಾ.12 ರಂದು ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸೋಮವಾರ ನಿರ್ಗಮನಕ್ಕೂ ಮೊದಲು, ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷತೆ, ಅಭಿವೃದ್ಧಿಯ ಸ್ನೇಹವನ್ನು ಬಲಪಡಿಸಲು ಮಾರಿಷಸ್‌ಗೆ ಭೇಟಿ ನೀಡುತ್ತಿದ್ದೇನೆ ಎಂದು ಪಿಎಂ ಮೋದಿ ತಿಳಿಸಿದ್ದರು.

  • ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!

    ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!

    ಮಾರಿಷಸ್‌ನ ದಕ್ಷಿಣ ಭಾಗದಲ್ಲಿ ಬೆಟ್ಟಗಳ ನಡುವೆ ಸಮುದ್ರಮಟ್ಟದಿಂದ 1,800 ಅಡಿ ಎತ್ತರದಲ್ಲಿ ಒಂದು ವಿಶಾಲ ಸರೋವರ ಇದೆ. ಪ್ರಾಚೀನ ಕಾಲದಲ್ಲಿ ಉಲ್ಕಾಪಾತದಿಂದ ನಿರ್ಮಾಣವಾಗಿದ್ದ ಸರೋವರ ಇದು. ಇದಕ್ಕೆ ʻಗಂಗಾ ತಲಾವ್‌ʼ ಎಂದು ಹೆಸರು.

    1897ರಲ್ಲಿ ಶ್ರೀ ಜಮ್ಮೂನ್ ಗಿರಿ ಎಂಬ ದಶನಾಮಿ ಗೋಸಾವಿ (ಸನ್ಯಾಸಿ) ಈ ಸರೋವರದ ಬಳಿ ಒಂದು ಶಿವ ದೇವಾಲಯ ನಿರ್ಮಿಸಿದ್ದರು. ಕೊಳದ ನಡುವೆ ಸುಂದರ ಶಿವವಿಗ್ರಹ ಸ್ಥಾಪನೆಯಾಗಿದೆ. ಮುಂದೆ ಈ ಕೆರೆಯ ಸುತ್ತ ಹನುಮಂತ, ಗಣೇಶ ಮತ್ತು ಗಂಗಾದೇವಿಯರ ದೇವಾಲಯಗಳು ಮತ್ತು ದೊಡ್ಡ ಗಾತ್ರದ ವಿಗ್ರಹಗಳು ಸ್ಥಾಪನೆಯಾದವು. ಇದನ್ನೂ ಓದಿ: ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್‌ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?

    2008ರಲ್ಲಿ ಇದರ ಪಕ್ಕದ ಬೆಟ್ಟದ ಮೇಲೆ 108 ಅಡಿ ಎತ್ತರದ ಮಹಾದೇವನ ವಿಗ್ರಹ ಸ್ಥಾಪನೆಯಾಗಿತ್ತು. ಬರೋಡಾ (ಗುಜರಾತ್)ದ ಸೂರ್‌ಸಾಗರ್ ಎಂಬ ಸರೋವರದ ನಡುವೆ ಇರುವ ಕೆರೆಯ ಭವ್ಯ ಶಿವವಿಗ್ರಹದ ಮಾದರಿಯಲ್ಲಿ ಈ ಶಿವ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ತ್ರಿಶೂಲ ಹಿಡಿದು ನಿಂತಿರುವ ಮಹಾದೇವನ ಈ ವಿಗ್ರಹಕ್ಕೆ ಮಂಗಲ ಮಹಾದೇವ ಎಂದು ನಾಮಕರಣ ಮಾಡಲಾಗಿದೆ. ಮಾರಿಷಸ್‌ನಲ್ಲೇ ಇಷ್ಟೊಂದು ದೊಡ್ಡ ಪ್ರತಿಮೆ ಬೇರೊಂದಿಲ್ಲ.

    ಗಂಗಾ ತಲಾವ್‌ನ ಶಿವದೇವಾಲಯವಿಂದು ಮಾರಿಷಸ್‌ನ ಹಿಂದೂಗಳ ಆದ್ಯ ತೀರ್ಥಕ್ಷೇತ್ರವಾಗಿದೆ. ಶಿವರಾತ್ರಿಯ ವೇಳೆ ಭಕ್ತರು ಇಲ್ಲಿನ ಶಿವಾಲಯಕ್ಕೆ ಬರಿಗಾಲಿನಲ್ಲಿ ನಡೆದುಕೊಂಡು ಬರುತ್ತಾರೆ. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?

  • ಮಾ.11 ರಿಂದ ಪ್ರಧಾನಿ ಮೋದಿ ಮಾರಿಷಸ್ ಪ್ರವಾಸ

    ಮಾ.11 ರಿಂದ ಪ್ರಧಾನಿ ಮೋದಿ ಮಾರಿಷಸ್ ಪ್ರವಾಸ

    ನವದೆಹಲಿ: ಮಾ.11 ಮತ್ತು ಮಾ.12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರಿಷಸ್‌ (Mauritius) ಪ್ರವಾಸ ಕೈಗೊಳ್ಳಲಿದ್ದಾರೆ.

    ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ (Mauritius National Day) ಮೋದಿ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಂ (Navin Ramgoolam) ತಿಳಿಸಿದ್ದಾರೆ.  ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಶುಕ್ರವಾರ ಸದನವನ್ನುದ್ದೇಶಿಸಿ ಮಾತನಾಡಿದ ನವೀನ್ ರಾಮ್‌ಗೂಲಂ, ನಮ್ಮ ದೇಶದ ಸ್ವಾತಂತ್ರ್ಯದ 57ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ, ಸದನಕ್ಕೆ ಒಂದು ವಿಷಯ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆಹ್ವಾನದ ಮೇರೆಗೆ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ಅವರು ಒಪ್ಪಿದ್ದಾರೆ. ಇದು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮೋದಿ ಅವರ ಇತ್ತೀಚಿನ ಪ್ಯಾರಿಸ್‌, ಅಮೆರಿಕ ಭೇಟಿಯನ್ನು ಪ್ರಸ್ತಾಪಿಸಿದರು. ಒತ್ತಡದ ನಡುವೆಯು ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಇಂತಹ ಪ್ರತಿಷ್ಟಿತ ವ್ಯಕ್ತಿಗೆ ಅತಿಥ್ಯ ವಹಿಸುವುದು ನಿಜಕ್ಕೂ ನಮ್ಮ ದೇಶದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮುರಿದ ಸೀಟ್‌ ನೀಡಿ ಮೋಸ ಮಾಡಿದ್ದೀರಿ: ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕೆಂಡಾಮಂಡಲ

    ಮಾರಿಷತ್‌ ಪ್ರತಿ ವರ್ಷ ಮಾರ್ಚ್‌ 12ರಂದು ರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡುತ್ತದೆ. ಈ ದಿನವು 1968ರಲ್ಲಿ ಬ್ರಿಟಿಷ್‌ ಅಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದ ಸೂಚಕವಾಗಿದೆ. ಕಾರ್ಯಕ್ರಮದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಇದನ್ನೂ ಓದಿ: ಬಸ್‌, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ! – ತೆಂಗಿನ ಎಣ್ಣೆ ದರ ದಿಢೀರ್‌ ಏರಿಕೆಯಾಗಿದ್ದು ಯಾಕೆ?

  • ರಾಮ ಪ್ರತಿಷ್ಠಾಪನೆ ವೀಕ್ಷಣೆಗೆ ಮಾರಿಷಸ್ ಉದ್ಯೋಗಿಗಳಿಗೆ 2 ಗಂಟೆ ವಿಶೇಷ ಬ್ರೇಕ್

    ರಾಮ ಪ್ರತಿಷ್ಠಾಪನೆ ವೀಕ್ಷಣೆಗೆ ಮಾರಿಷಸ್ ಉದ್ಯೋಗಿಗಳಿಗೆ 2 ಗಂಟೆ ವಿಶೇಷ ಬ್ರೇಕ್

    ಮಾರಿಷಸ್: ಅಯೋಧ್ಯೆಯಲ್ಲಿ (Ayodhya) ರಾಮನ ಪ್ರಾಣ ಪ್ರತಿಷ್ಠಾ (Ram Prana Prathista) ಕಾರ್ಯಕ್ರಮ ವೀಕ್ಷಿಸಲು ಮಾರಿಷಸ್ (Mauritius) ಸರ್ಕಾರವು ಜ.22 ರಂದು ಹಿಂದೂ (Hindu) ಧರ್ಮೀಯ ಉದ್ಯೋಗಿಗಳಿಗೆ 2 ಗಂಟೆಗಳ ವಿಶೇಷ ಸಮಯಾವಕಾಶ ನೀಡುವುದಾಗಿ ಪ್ರಕಟಿಸಿದೆ.

    ಜ.22 ರಂದು ಎರಡು ಗಂಟೆಗಳ ವಿರಾಮ ನೀಡಬೇಕೆಂದು ಹಿಂದೂ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಮನವಿಗೆ ಮಾರಿಷಸ್ ಸರ್ಕಾರ ಒಪ್ಪಿಗೆ ನೀಡಿದೆ.  ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ

    ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ನೇತೃತ್ವದ ಮಂತ್ರಿ ಮಂಡಳಿಯು ಶುಕ್ರವಾರ ಸಭೆ ಸೇರಿ ರಾಮಮಂದಿರ ಧಾರ್ಮಿಕ ಕಾರ್ಯಕ್ರಮವು ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿದೆ ಮತ್ತು ಆಚರಣೆಯಲ್ಲಿ ಭಕ್ತರು ಭಾಗವಹಿಸಲು ಅನುಕೂಲ ಮಾಡಿಕೊಡಲು 2 ಗಂಟೆಗಳ ವಿರಾಮ ನೀಡುವುದಾಗಿ ಪ್ರಕಟಿಸಿತು. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

    ಮಾರಿಷಸ್‌ನನಲ್ಲಿ ಹಿಂದೂ ಧರ್ಮವು ಪ್ರಮುಖ ಸ್ಥಾನವನ್ನು ಹೊಂದಿದೆ. 2011ರ ಅಂಕಿಅಂಶಗಳ ಪ್ರಕಾರ ಹಿಂದೂಗಳು ಸರಿಸುಮಾರು 48.5 ಪ್ರತಿಶತ ಜನಸಂಖ್ಯೆ ಹೊಂದಿದ್ದಾರೆ.

    ಆಫ್ರಿಕಾ ಖಂಡದ ದೇಶಗಳ ಪೈಕಿ ಮಾರಿಷಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಂದೂಗಳಿದ್ದಾರೆ. ಜಾಗತಿಕವಾಗಿ ಭಾರತ, ನೇಪಾಳದ ನಂತರ ಅತಿ ಹೆಚ್ಚು ಹಿಂದೂಗಳಿರುವ ಮೂರನೇ ರಾಷ್ಟ್ರ ಮಾರಿಷಸ್‌ ಆಗಿದೆ. ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ

    ವಸಾಹತುಶಾಹಿ ಯುಗದಲ್ಲಿ ಭಾರತೀಯರನ್ನು ಫ್ರೆಂಚ್ ಮತ್ತು ಬ್ರಿಟಿಷ್ ತೋಟಗಳಿಗೆ ಒಪ್ಪಂದದ ಕಾರ್ಮಿಕರಾಗಿ ಕರೆತರಲಾಗಿತ್ತು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ಭಾರತೀಯ ರಾಜ್ಯಗಳಿಂದ ವಲಸೆ ಬಂದ ಪರಿಣಾಮ ಮಾರಿಷಸ್‌ನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದೆ.

     

  • ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರಲು ಮೋದಿಯಿಂದ ಮಾತ್ರ ಸಾಧ್ಯವಾಯ್ತು: ಮಾರಿಷಸ್‌ ಸಂಸದ

    ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರಲು ಮೋದಿಯಿಂದ ಮಾತ್ರ ಸಾಧ್ಯವಾಯ್ತು: ಮಾರಿಷಸ್‌ ಸಂಸದ

    – ಮೋದಿಯವರು ಭಾರತದ ಚಿತ್ರಣವನ್ನೇ ಪರಿವರ್ತಿಸಿದ್ದಾರೆ

    ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರುವಲ್ಲಿ ಸಾಧ್ಯವಾಯಿತು. ಹೀಗಾಗಿ ಮೋದಿಯವರ ಮೇಲೆ ನಮಗೆ ವಿಶೇಷ ಗೌರವ ಇದ್ದು, ನಿಜಕ್ಕೂ ನಾವು ಹೆಮ್ಮೆಪಡುತ್ತೇವೆ ಎಂದು ಮಾರಿಷಸ್‌ ಸಂಸದ (Mauritius MP) ಮಹೇಂದ್ ಗಂಗಾಪ್ರಸಾದ್‌ (Mahend Gungapersad) ಹೇಳಿದ್ದಾರೆ.

    2024ರ ಜನವರಿ 22 ರಂದು ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು (Ayodhya Ram Mandir) ಉದ್ಘಾಟಿಸಲಿದ್ದೇವೆ. ಇಂದು ಭಗವಾನ್ ರಾಮನು ಜನಿಸಿದ ಸ್ಥಳದಲ್ಲಿ ತನ್ನ ದೇವಾಲಯವನ್ನು ಹೊಂದಿದ್ದಾನೆ. ಈ ಸಮಯದಲ್ಲಿ ಭಾರತದಲ್ಲಿರಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮಲ್ಲಿ ಹೆಚ್ಚಿನವರಿಗೆ ಊಹಿಸಲೂ ಸಾಧ್ಯವಿಲ್ಲ ಅಷ್ಟೊಂದು ಭಾರತದ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಚಿತ್ರಣವನ್ನು ಪರಿವರ್ತಿಸಿದ್ದಾರೆ. ಈ ಮೂಲಕ ಇಂದು ಇಡೀ ವಿಶ್ವದ ಜನ ಭಾರತದತ್ತ ತಿರುಗಿ ನೋಡುತ್ತಿದ್ದಾರೆ. ಮೋದಿಯವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಈ ನವ ಭಾರತ ಸಾಧ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಅಧಿಕಾರಾವಧಿಯಲ್ಲಿ ಭಾರತವು ಇಂದಿನಂತೆ ಮುಂದೆಯೂ ಉಜ್ವಲ ಭವಿಷ್ಯವನ್ನು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್‌ ರಾವತ್

    ಸದ್ಯ ಹಲವು ದೇಶಗಳು ಭಾರತದೊಂದಿಗೆ (India) ಸ್ನೇಹ ಹೊಂದಲು ಬಯಸುತ್ತವೆ. ಅಲ್ಲದೇ ಭಾರತದೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಲು ಬಯಸುತ್ತಾರೆ. ನಾವು ಮಾರಿಷಿಯನ್ನರು ಯಾವಾಗಲೂ ಭಾರತದ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಈ ಸಂಬಂಧ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು ಎಂದು ಅವರು ತಿಳಿಸಿದ್ದಾರೆ.

  • ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್‌ ಸಂಸತ್ತಿಗೆ ಸರ್ಕಾರ ಉತ್ತರ

    ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್‌ ಸಂಸತ್ತಿಗೆ ಸರ್ಕಾರ ಉತ್ತರ

    ಪೋರ್ಟ್ ಲೂಯಿಸ್: ಅದಾನಿ ಸಮೂಹದ (Adani Group) ಕಂಪನಿಗಳ ಬಗ್ಗೆ ಹಿಂಡೆನ್‌ಬರ್ಗ್‌ (Hindenburg) ಮಾಡಿರುವ ಸಂಶೋಧನಾ ವರದಿ ಸುಳ್ಳು ಮತ್ತು ಆಧಾರ ರಹಿತ ಎಂದು ಮಾರಿಷಸ್ (Mauritius) ಸರ್ಕಾರ ಅಲ್ಲಿನ ಸಂಸತ್ತಿಗೆ ಉತ್ತರ ನೀಡಿದೆ.

    ಲಿಖಿತ ಉತ್ತರ ನೀಡಿದ ಹಣಕಾಸು ಸೇವೆಗಳ ಸಚಿವ ಮಹೇನ್ ಕುಮಾರ್ ಸೀರುತ್ತುನ್, ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿವೆ ಎಂಬ ಆರೋಪಗಳು ಸುಳ್ಳು ಮತ್ತು ನಿರಾಧಾರ ಎಂದು ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

    ಹಣಕಾಸು ಸೇವಾ ಆಯೋಗದಿಂದ ಪರವಾನಗಿ ಪಡೆದ ಎಲ್ಲಾ ಜಾಗತಿಕ ವ್ಯಾಪಾರ ಕಂಪನಿಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಆಯೋಗವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

    ಹಿಂಡೆನ್‌ಬರ್ಗ್‌ ಆರೋಪ ಸುಳ್ಳು ಮತ್ತು ಆಧಾರ ರಹಿತ ಎಂದು ಹೇಗೆ ತೀರ್ಮಾನಕ್ಕೆ ಬರಲಾಯಿತು ಎಂದು ಕೇಳಿದ ಪ್ರಶ್ನೆಗೆ, ಮಾರಿಷಸ್‌ನಲ್ಲಿ ಕಂಪನಿ ಪರವಾನಗಿ ಪಡೆಯಬೇಕಾದರೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಆ ಕಂಪನಿಗಳು ಷರತ್ತುಗಳಿಗೆ ಬದ್ಧವಾಗಿರಬೇಕು ಮತ್ತು ಆಯೋಗವೂ ಕಂಪನಿಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಈ ಷರತ್ತುಗಳನ್ನು ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಅವರು ತಿಳಿಸಿದರು.

     

    ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿತ್ತು.

    ಅದಾನಿ ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿನ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ನೇಮಕ ಮಾಡಿದ ಸಮಿತಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

     

    ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ಒ.ಪಿ. ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡ ಸಮಿತಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ ಮಾರ್ಚ್‌ನಲ್ಲಿ ನೇಮಿಸಿತ್ತು. ಸಮಿತಿ ವರದಿಯನ್ನು ಸಲ್ಲಿಸಿದ್ದು ಮೇ 12 ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.