ಉಡುಪಿ: ಜಿಲ್ಲೆಯ ಕಾಪು ನೂತನ ಮಾರಿಗುಡಿಯ (Kapu Marigudi) ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಭಾಗಿಯಾಗಿದ್ದಾರೆ.
ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಕಾಪು ಹೊಸ ಮಾರಿಗುಡಿಗೆ ಬಂದು ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು. ಇದನ್ನೂ ಓದಿ: ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!
ತಮ್ಮ ಹೊಸ ಸಿನಿಮಾದ ಮುಹೂರ್ತಕ್ಕೂ ಮುನ್ನ ನಟ ರಕ್ಷಿತ್ ಶೆಟ್ಟಿ ಉಡುಪಿಯ ಕಾಪು (Kapu) ತಾಲ್ಲೂಕಿನ ಮಾರಿಗುಡಿ (Marigudi) ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದ ನಂತರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅವರು ವೀಕ್ಷಿಸುತ್ತಿದ್ದಾರೆ. ದೈವ ಭಕ್ತರಾಗಿರುವ ರಕ್ಷಿತ್ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಈ ಮಧ್ಯೆ ರಕ್ಷಿತ್ ಶೆಟ್ಟಿ (Rakshit Shetty) ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಿಚರ್ಡ್ ಆಂಟನಿ (Richard Antony) ಕುರಿತು ಅಪ್ ಡೇಟ್ ವೊಂದನ್ನು ನೀಡಿದ್ಧಾರೆ. ರಿಚರ್ಡ್ ಆಂಟನಿ ಯಾವಾಗಿಂದ ಶುರು ಎಂದು ಕೇಳಲಾದ ಪ್ರಶ್ನೆಗೆ ತಮ್ಮ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ (Muhurta) ದಿನಾಂಕವನ್ನೂ ಅವರು ಬಹಿರಂಗ ಪಡಿಸಿದ್ದಾರೆ.
ಈ ಹಿಂದೆ ಹೊಂಬಾಳೆ ಸಂಸ್ಥೆಯ ಆಪ್ತರು ಕೂಡ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತಾಡ್ತಾ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಮಾರ್ಚ್ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ (Hombale Films) ಅಂಗಳದಿಂದಲೇ ಬಂದಿತ್ತು. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆಯಂತೆ.
ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕು ಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.
ಉಡುಪಿ: ಜಿಲ್ಲೆಯಲ್ಲಿ ಆರಂಭಗೊಂಡ ಹಿಜಬ್ ಹೋರಾಟದ ಆಫ್ಟರ್ ಎಫೆಕ್ಟ್ ಒಂದೊಂದಾಗಿ ಹೊರ ಬರುತ್ತಿದೆ. ಉಡುಪಿಯಲ್ಲಿ ತೀರ್ಪು ವಿರೋಧಿಸಿ ಮುಸಲ್ಮಾನ ವ್ಯಾಪಾರಿಗಳು ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ವ್ಯಾಪಾರ ಬಹಿಷ್ಕಾರ ಅಭಿಯಾನ ಶುರುವಾಗಿದೆ.
ಹಿಂದೂ ಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಹೊಸ ಮಾರಿಗುಡಿಯ ಮುಂಭಾಗದಲ್ಲಿ ಜಮಾಯಿಸಿ, ಯಾವುದೇ ಕಾರಣಕ್ಕೂ ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.
ಹಿಜಬ್ ತೀರ್ಪಿನ ನಂತರ ಮುಸಲ್ಮಾನ ವ್ಯಾಪಾರಿಗಳು ರಾಜ್ಯಾದ್ಯಂತ ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೆಲ ಹಿಂದೂಗಳ ಅಂಗಡಿಗಳನ್ನು ಕೂಡ ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸಿದ್ದಾರೆ. ಜಾತ್ರೆ-ಉತ್ಸವಗಳಲ್ಲಿ ಮುಸಲ್ಮಾನ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ
ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿದ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿ, ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ. ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ. ನೂರಾರು ಅಂಗಡಿಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ಹಣ್ಣುಕಾಯಿ ಹೂವು ಮತ್ತು ದೇವಿಗೆ ಬಲಿ ಕೊಡುವ ಕುರಿ ಮತ್ತು ಕೋಳಿ ವ್ಯಾಪಾರ ಕಾಪುವಿನಲ್ಲಿ ಜೋರಾಗಿ ನಡೆಯುತ್ತದೆ. ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ. ಹಿಜಬ್ ವಿವಾದ, ತೀರ್ಪು ನಂತರ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿಯು ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ.