Tag: ಮಾರಾಟಗಾರ

  • ನಾನು ಬಡವ ಎಂದರು ತಳ್ಳುವ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ್ಲು!

    ನಾನು ಬಡವ ಎಂದರು ತಳ್ಳುವ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ್ಲು!

    ಭೋಪಾಲ್: ಕಾರಿಗೆ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡು ಮಹಿಳೆಯೊಬ್ಬಳು ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ ವೀಡಿಯೋ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ಕಾರಿಗೆ ತಳ್ಳು ಗಾಡಿ ತಾಗಿದ್ದರಿಂದ ಕೋಪಗೊಂಡ ಮಹಿಳೆ ಹಣ್ಣು ವ್ಯಾಪಾರಿಯ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಡಿಕ್ಕಿ ಹೊಡೆದಿದ್ದಕ್ಕೆ ಹಣ್ಣು ಮಾರಾಟಗಾರನೊಂದಿಗೆ ಜಗಳವಾಡಿದ ಆಕೆ ಬಳಿಕ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನು ಬೀಸಾಕಿದ್ದಾಳೆ. ಮಾರಾಟಗಾರ ನಾನು ಬಡವ ಎಂದು ಬೇಡಿಕೊಂಡು, ಮನವಿ ಮಾಡಿದ್ರ ಮಹಿಳೆ ಮನಸ್ಸು ಮಾತ್ರ ಕರಗಿಲ್ಲ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ಮಹಿಳೆ ತನ್ನ ಕಾರನ್ನು ಪಾಕಿರ್ಂಗ್‍ನಿಂದ ಹೊರತೆಗೆದು ರಸ್ತೆಗೆ ಬರುತ್ತಿದ್ದಂತೆ ತಳ್ಳು ಗಾಡಿ ಆಕೆಯ ಕಾರಿನ ಪಕ್ಕದಲ್ಲಿ ಹಾದುಹೋಗುತ್ತಿತ್ತು. ಆಗ ಆಕೆಯ ಕಾರಿನ ಹಿಂಭಾಗಕ್ಕೆ ಹಣ್ಣಿನ ಗಾಡಿ ತಾಗಿತು. ತನ್ನ ಕಾರಿಗೆ ಸ್ಕ್ರಾಚ್ ಆಗಿದ್ದನ್ನು ನೋಡಿದ ಮಹಿಳೆ ಕೋಪಗೊಂಡು ಆ ಗಾಡಿಯಲ್ಲಿದ್ದ ಹಣ್ಣುಗಳನ್ನು ಬಿಸಾಡಿದ್ದಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಜಿಎಸ್‍ಟಿ ನೋಟಿಸ್‌ನಲ್ಲಿ ಮೊತ್ತ ನೋಡಿ ಶಾಕ್ ಆದ ದಂಪತಿ!

  • ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

    ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

    ತಿರುವನಂತಪುರಂ: ಟೀ ಸ್ಟಾಲ್ ನಿಂದ ಸಂಪಾದಿಸಿದ ಹಣದಿಂದ ಪತ್ನಿಯೊಂದಿಗೆ ವಿಶ್ವ ಪರ್ಯಟನೆ ಮಾಡುತ್ತಾ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನವಾಗಿದ್ದಾರೆ.

    ಕೊಚ್ಚಿ ಮೂಲದ ಟೀ ಸ್ಟಾಲ್ ಮಾಲೀಕ ಕೆ ಆರ್ ವಿಜಯನ್(71) ನಿನ್ನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಟೀ ಸ್ಟಾಲ್ ನಡೆಸಿ ಸಂಪಾದಿಸಿದ ಹಣದಲ್ಲಿ ಅವರು ಪತ್ನಿಯೊಂದಿಗೆ ಪ್ರಪಂಚದಾದ್ಯಂತದ ಪ್ರವಾಸಗಳನ್ನು ಮಾಡಿದ್ದು ಜಾಗತಿಕ ಖ್ಯಾತಿಯನ್ನು ಗಳಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ

    ವಾರಕ್ಕೆ ಎರಡು ಬಾರಿಯಾದರೂ ನನ್ನ ಪರಿಪ್ಪು ವಡಾ, ಪಳಂ ಪೊರಿ ಮತ್ತು ಚಾಯ್ ಒದಗಿಸುವವರು, ಪ್ರಯಾಣದ ಕಥೆಗಳನ್ನು ಹೇಳುವವರು, ಯುವ-ಹೃದಯದ ಗೆಳೆಯ, ಎರ್ನಾಕುಲಂನ ಜಗತ್ತು ಸುತ್ತುವ ಟೀ-ಮಾರಾಟಗಾರ, ವಿಜಯನ್ ನಿಧನರಾದರು. ಅವರು ರಷ್ಯಾದಿಂದ ಹಿಂತಿರುಗಿದ್ದರು, ಅಲ್ಲಿ ಅವರು ಪುಟಿನ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು ಎಂದು ಖ್ಯಾತ ಬರಹಗಾರ ಎನ್ ಎಸ್ ಮಾಧವನ್ ಟ್ವೀಟ್ ಮಾಡಿದ್ದಾರೆ. ವಿಜಯನ್ ಅವರು ಪತ್ನಿ, ಇಬ್ಬರು ಪುತ್ರಿಯರಾದ ಶಶಿಕಲಾ, ಉಷಾ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!

    ಹಿನ್ನೆಲೆ: ವಿಜಯನ್ ಚಿಕ್ಕವರಿದ್ದಾಗಲೇ ಪ್ರವಾಸ ಮಾಡುವ ಹುಚ್ಚಿತ್ತು. ಅವರು ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುತ್ತಿದ್ದರು. ಆಮೇಲೆ ದೂರದ ಸ್ಥಳಗಳಿಗೆ ಪ್ರವಾಸ ಮಾಡಲು ಶುರು ಮಾಡಿದರು. ಮೊದಲು ದೇಶದೊಳಗೆ ಮತ್ತು ನಂತರ ವಿದೇಶಗಳಿಗೆ. ನಾನು ಯಾವಾಗಲೂ ಪ್ರಯಾಣಿಸಲು ಇಷ್ಟಪಡುತ್ತೇನೆ. ನಾನು ಕೇವಲ 12 ವರ್ಷದವನಿದ್ದಾಗ ನನ್ನ ತಂದೆ ನನ್ನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತು ನಾನು ಬೆಳೆದ ನಂತರ, ನಾನು ಮುನ್ನಾರ್, ತೇಕ್ಕಡಿ ಅಥವಾ ಕನ್ಯಾಕುಮಾರಿಯಂತ ಸುತ್ತಮುತ್ತಲಿನ ಸ್ಥಳಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ.

    ಹೊಸದನ್ನು ಕಲಿಯಲು ಅಥವಾ ನಾನು ಏನನ್ನಾದರೂ ಅನುಭವಿಸಿದ್ದೇನೆ ಎಂದು ಹೇಳಿಕೊಳ್ಳಲು ನಾನು ಪ್ರಯಾಣಿಸುವುದಿಲ್ಲ. ನಾನು ಇದನ್ನು ಮಾಡುತ್ತೇನೆ ಏಕೆಂದರೆ ನಾನು ಇದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಬೇಕು. ಪ್ರಪಂಚದ ಇತರ ಭಾಗಗಳು ಎಷ್ಟು ಸುಂದರವಾಗಿವೆ ಎಂಬುದರ ಕುರಿತು ಇನ್ನೊಬ್ಬ ವ್ಯಕ್ತಿಯ ಹೇಳುವುದನ್ನು ಕೇಳಿಸಿಕೊಳ್ಳಲು ನನಗೆ ಆಸಕ್ತಿಯಿಲ್ಲ. ನಾನು ಅದನ್ನು ನೋಡಿ ಮತ್ತು ನಾನೇ ನಿರ್ಧರಿಸಲು ಬಯಸುತ್ತೇನೆ. ಮತ್ತು ನಾನು ಪ್ರೀತಿಸುವ ಮಹಿಳೆಯೊಂದಿಗೆ ಜಗತ್ತನ್ನು ನೋಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದೇನಿದೆ ಎಂದು ವಿಜಯನ್ ಹೇಳಿದ್ದರು.

    ಇತ್ತೀಚೆಗೆ ಒರು ಚಿರಿ ಇರು ಚಿರಿ ಬಂಪರ್ ಚಿರಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಂಪತಿ ಮುಂದಿನ ಪ್ರಯಾಣ ಜಪಾನ್ ದೇಶಕ್ಕೆ ಎಂದು ಹೇಳಿದ್ದರು.ತನ್ನ 69 ವರ್ಷದ ಪತ್ನಿ ಮೋಹನ ಅವರೊಂದಿಗೆ ವಿಯೆಟ್ನಾಂ ಮತ್ತು ಕಾಂಬೋಡಿಯಾದ ನಂತರ ಜಪಾನ್ ಪ್ರವಾಸ ಮಾಡಲು ಅವರು ಬಯಸಿದ್ದರು. ದಂಪತಿ ಕಳೆದ ವರ್ಷ(ಚಾಯ ವಿಟ್ಟು ವಿಜಯನ್ಡೇಯುಂ ಮೋಹನಯುಡೆಯುಂ ಲೋಕ ಸಂಚಾರ) ಚಹಾ ಮಾರಿ ವಿಜಯನ್ ಮತ್ತು ಮೋಹನ ಅವರ ಪ್ರಪಂಚ ಸುತ್ತಾಟ ಎಂಬ ಪುಸ್ತಕವನ್ನು ಹೊರತಂದಿದ್ದರು.

  • 10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    ಕೊಪ್ಪಳ: ಎಂಆರ್ ಪಿ ದರಕ್ಕಿಂತ ಹೆಚ್ಚಿಗೆ ರೂ. ಪಡೆದು ಮದ್ಯ ಮಾರಾಟ ಮಾಡಿದ್ದಕ್ಕೆ ಗ್ರಾಹಕರು ಹಾಗೂ ಮಾರಾಟಗಾರ ನಡುವೆ ಮಾತಿನ ಚಕಮಕಿಯಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

    ಇಲ್ಲಿನ ಜುಲಾಯ್ ನಗರದಲ್ಲಿರೋ ಸರಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮಳಿಗೆಯಲ್ಲಿ ಎಂಆರ್ ಪಿ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಪಡೆದಿದ್ದಾರೆ. ಆಗ ಗ್ರಾಹಕರು ನೀವು ಎಂಆರ್ ಪಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಬೋರ್ಡ್ ಹಾಕಿದ್ದೀರಿ ಅಂತ ಜಗಳ ಆರಂಭಿಸಿದ್ದಾರೆ.

    ಆದ್ರೆ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದಾಗ ಮಳಿಗೆಯ ಮಾರಾಟಗಾರ ಶಾಸಕ ಇಕ್ಬಾಲ್ ಅನ್ಸಾರಿ, ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ 40 ರೂಪಾಯಿ ಹೆಚ್ಚಿಗೆ ಕೊಟ್ಟು ಕುಡಿಯುತ್ತೀರಿ.ನಮಗೆ 10 ರೂಪಾಯಿ ಕೊಡೋಕೆ ಕಿರಿಕ್ ಮಾಡುತ್ತೀರಿ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಕೂಡಾ ನಡೆದಿದೆ. ಬಳಿಕ ಗ್ರಾಹಕರು ಅಂಗಡಿ ಬಂದ್ ಮಾಡಿಸಿದ್ದಾರೆ.