Tag: ಮಾರಮ್ಮಾ ದೇವಸ್ಥಾನ

  • ದೇವಸ್ಥಾನದಲ್ಲಿ ಪ್ರಸಾದ ನೀಡುವಾಗ ಎಚ್ಚರಿಕೆ ವಹಿಸಬೇಕು – ಸಿಎಂ

    ದೇವಸ್ಥಾನದಲ್ಲಿ ಪ್ರಸಾದ ನೀಡುವಾಗ ಎಚ್ಚರಿಕೆ ವಹಿಸಬೇಕು – ಸಿಎಂ

    – ಮೃತರ ಕುಟುಂಬಕ್ಕೆ ಪರಿಹಾರ ಭರವಸೆ ನೀಡಿದ ಎಚ್‍ಡಿಕೆ

    ಚೆನ್ನೈ: ಹಾನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ನಡೆದಿರುವ ಘಟನೆ ನೋವನ್ನು ತಂದಿದ್ದು, ಮೃತರ ಕುಟುಂಬಕ್ಕೆ ಸರ್ಕಾರವು ಸೂಕ್ತ ಪರಿಹಾರ ಒದಗಿಸಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸೂಕ್ತ ಸೌಲಭ್ಯ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಷ್ಟೇ ಅಲ್ಲದೆ ಉಚಿತ ಚಿಕಿತ್ಸೆಗೆ ಆದೇಶ ಹೊರಡಿಸಿರುವೆ ಎಂದು ಹೇಳಿದರು.

    ದೇವಸ್ಥಾನದಲ್ಲಿ ಪ್ರಸಾದ ನೀಡುವ ಮುನ್ನ ಜಾಗೃತಿ ವಹಿಸಬೇಕಿತ್ತು. ಆದರೆ ಯಾವುದೇ ಮುಂಜಾಗೃತೆ ವಹಿಸದೇ ಇರುವುದರಿಂದ ಈ ಅನಾಹುತ ನಡೆದಿದೆ. ಈ ಕುರಿತು ಸಂಪೂರ್ಣ ವಿಷಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಮಾಹಿತಿ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡಿತ್ತೇನೆ ಎಂದು ತಿಳಿಸಿದರು.

    https://www.youtube.com/watch?v=V_qoMhCwGNs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv