Tag: ಮಾರತ್ತಹಳ್ಳಿ

  • ಯುವತಿಯ ಹಿಂಬದಿ ಟಚ್‌ ಮಾಡಿ ಅಸಭ್ಯ ವರ್ತನೆ ತೋರಿದ್ದ ಎಂಬಿಎ ಪದವೀಧರ ಅರೆಸ್ಟ್‌

    ಯುವತಿಯ ಹಿಂಬದಿ ಟಚ್‌ ಮಾಡಿ ಅಸಭ್ಯ ವರ್ತನೆ ತೋರಿದ್ದ ಎಂಬಿಎ ಪದವೀಧರ ಅರೆಸ್ಟ್‌

    ಬೆಂಗಳೂರು: ನಗರದ ಮಾರತ್ತಹಳ್ಳಿಯಲ್ಲಿ ಯುವತಿಯ (Young Woman) ಜೊತೆಗೆ ಅಸಭ್ಯ ವರ್ತನೆ ತೋರಿದ್ದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

    ಇಲ್ಲಿನ ದೇವರ ಬಿಸನಹಳ್ಳಿ ವಾಸಿಯಾಗಿರೋ ಶ್ರೀಕಾಂತ್ ಬಂಧಿತ ಬೀದಿ ಕಾಮಣ್ಣ. ಕಳೆದ ಏ.30ರಂದು ರಾತ್ರಿ 11:30 ಗಂಟೆ ಸುಮಾರಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ಇಕೋ ಸ್ಪೇಸ್‌ನ ಮುಖ್ಯದ್ವಾರದ ಬಳಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿ, ಯುವತಿಯ ಹಿಂಬದಿ ಡಚ್ ಮಾಡಿ ನಂತರ ಅಸಭ್ಯವಾಗಿ ವರ್ತಿಸಿ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

    ಈ ವೇಳೆ ಯುವತಿ ಜೋರಾಗಿ ಕೂಗಿಕೊಂಡು ಸಹಾಯಕ್ಕಾಗಿ ಕರೆದಿದ್ದರು. ಆದ್ರೂ ಕೂಡ ಯುವತಿಯ ಸಹಾಯಕ್ಕೆ ಯಾರೋಬ್ಬರೂ ಬಂದಿರಲಿಲ್ಲ ಅಂತ ಆಕೆ ಅಸಮಾಧಾನ ವ್ಯಕ್ತಪಡಿಸಿದ್ಲು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಾರತ್ತಹಳ್ಳಿ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿ, ಅಲ್ಲಿದ್ದ ಸೆಕ್ಯೂರಿಟಿಗಳಿಂದ ಮಾಹಿತಿ ಕಲೆಹಾಕಿದ್ದರು.

    ತನಿಖೆ ಮುಂದುವರೆಸಿ ಆರೋಪಿ ಶ್ರೀಕಾಂತ್‌ನನ್ನ ಬಂಧಿಸಿದ್ದಾರೆ. ಆರೋಪಿ ಕೂಡ ಎಂಬಿಎ ಪದವೀಧರನಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 700 ಅಡಿ ಆಳದ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ಮೂವರು ಯೋಧರು ಸಾವು 

  • ಟೆಕ್ಕಿ ಅತುಲ್ ಪತ್ನಿಗೆ ಖಾಕಿ ನೋಟಿಸ್ – 3 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗದಿದ್ರೆ ಬಂಧನ ಸಾಧ್ಯತೆ

    ಟೆಕ್ಕಿ ಅತುಲ್ ಪತ್ನಿಗೆ ಖಾಕಿ ನೋಟಿಸ್ – 3 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗದಿದ್ರೆ ಬಂಧನ ಸಾಧ್ಯತೆ

    ಬೆಂಗಳೂರು: ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾರತ್ತಹಳ್ಳಿ ಪೊಲೀಸರು ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆರೋಪಿಗಳಿಗಾಗಿ ಉತ್ತರ ಪ್ರದೇಶದಲ್ಲಿ ಬೀಡುಬಿಟ್ಟಿದ್ದು,  ತೀವ್ರ ಶೋಧ ನಡೆಸುತ್ತಿದ್ದಾರೆ.

    ಟೆಕ್ಕಿ ಅತುಲ್ (Techie Atul Subhash) ಮಾರತ್ತಹಳ್ಳಿ ಮಂಜುನಾಥ್ ಲೇಔಟ್‌ನ (Manjunath Layout) ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಹಾಗೂ ಆಕೆಯ ತಾಯಿ, ಸಹೋದರನ ಮೇಲೆ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದರು. ಟೆಕ್ಕಿ ಅತುಲ್ ಸಾವಿಗೆ ಕಾರಣವಾಗಿರೋ ಆರೋಪ ಎದುರಿಸುತ್ತಿರೋ ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಉತ್ತರ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಇನ್ನು ಪ್ರಕರಣ ಪ್ರಮುಖ ಆರೋಪಿಯಾಗಿರುವ ಮೃತ ಅತುಲ್ ಪತ್ನಿ ನಿಖಿತಾ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ಬಂದಿರುವ ವಿಚಾರ ತಿಳಿದು ಊರು ಬಿಟ್ಟು ಹೋಗಿದ್ದಾಳೆ. ಆರೋಪಿ ನಿಖಿತಾ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ನಿಖಿತಾ ಮೊಬೈಲ್ ಸ್ವೀಚ್‌ಆಫ್ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ಹಾಗಾಗಿ ಮಾರತ್ತಹಳ್ಳಿ ಪೊಲೀಸರು ಸ್ಥಳೀಯ ಪೊಲೀಸರ ಸಹಾಯ ಪಡೆದು ಉತ್ತರ ಪ್ರದೇಶದಲ್ಲಿರುವ ಆರೋಪಿ ನಿಖಿತಾ ಮನೆಗೆ ಹೋಗಿ ನೋಟಿಸ್ ಹಾಗೂ ಎಫ್‌ಐಆರ್ ಅಂಟಿಸಿ ಬಂದಿದ್ದಾರೆ. ನೋಟಿಸ್‌ನಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಒಂದು ವೇಳೆ ಆರೋಪಿತ ಮಹಿಳೆ ಪೊಲೀಸರ ಮುಂದೆ ಹಾಜರಾಗದೆ ಹೋದರೆ ಬಹುತೇಕ ನಿಖಿತಾಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲು ಮಾರತ್ತಹಳ್ಳಿ ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೋವಿಡ್ ಅಕ್ರಮದ ತನಿಖೆಗೆ ಕೌಂಟ್ ಡೌನ್ – ಎಫ್‍ಐಆರ್ ದಾಖಲು

  • ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು

    ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು

    ಬೆಂಗಳೂರು: ಮೂವರು ಯುವಕರು ರೈಲಿಗೆ (Train) ಸಿಲುಕಿ ಸಾವಿಗೀಡಾದ ದಾರುಣ ಘಟನೆ ಮಾರತ್ತಹಳ್ಳಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದ ಶಶಿಕುಮಾರ್ (23) ಲೋಕೇಶ್ (25) ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಸಾರ್ವಜನಿಕರು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ (Byappanahalli Police) ಯುವಕರ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ ಸಾವಿಗೀಡಾದ ಮತ್ತೋರ್ವನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ: ಸಿದ್ದರಾಮಯ್ಯ

    ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ- ಕೊಚ್ಚಿ ಹೋಯ್ತು ಚೀನಾ ಗಡಿ ಸಂಪರ್ಕಿಸೋ ಹೆದ್ದಾರಿ