Tag: ಮಾರತಹಳ್ಳಿ

  • `ನಾಪತ್ತೆ’ಯಾಗಿದ್ದ ಅತುಲ್ ಸುಭಾಷ್ ಪುತ್ರ ಹರ್ಯಾಣ ಬೋರ್ಡಿಂಗ್ ಸ್ಕೂಲ್‌ನಲ್ಲಿ – ಖಚಿತಪಡಿಸಿದ ಫರಿದಾಬಾದ್ ಶಾಲೆ

    `ನಾಪತ್ತೆ’ಯಾಗಿದ್ದ ಅತುಲ್ ಸುಭಾಷ್ ಪುತ್ರ ಹರ್ಯಾಣ ಬೋರ್ಡಿಂಗ್ ಸ್ಕೂಲ್‌ನಲ್ಲಿ – ಖಚಿತಪಡಿಸಿದ ಫರಿದಾಬಾದ್ ಶಾಲೆ

    ಛತ್ತಿಸಗಢ: ನಾಪತ್ತೆಯಾಗಿದ್ದ ಅತುಲ್ ಸುಭಾಷ್ (Atul Subhash) ಪುತ್ರ ಹರಿಯಾಣದ ಫರಿದಾಬಾದ್ (Faridabad) ಬೋರ್ಡಿಂಗ್ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ಇರುವುದಾಗಿ ಶಿಕ್ಷಣ ಸಂಸ್ಥೆ ಖಚಿತಪಡಿಸಿದೆ.

    ಬೆಂಗಳೂರು (Bengaluru) ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತುಲ್ ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸುತ್ತಿರುವ ವೇಳೆ ಈ ಬೆಳವಣಿಗೆ ನಡೆದಿದೆ.ಇದನ್ನೂ ಓದಿ: ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ – ಸುಟ್ಟು ಕರಕಲು

    ಮಗುವಿಗಾಗಿ ತನಿಖೆ ನಡೆಸಿದ್ದ ಬೆಂಗಳೂರಿನ ಮಾರತಹಳ್ಳಿ ಪೊಲೀಸರಿಗೆ ಶಾಲಾ ಆಡಳಿತ ಮಂಡಳಿ ಪತ್ರ ಬರೆದಿದ್ದು, ಹರಿಯಾಣದ (Haryana) ಫರಿದಾಬಾದ್‌ನ ಬೋರ್ಡಿಂಗ್ ಶಾಲೆಯೊಂದು ದೃಢಪಡಿಸಿದೆ. ಪತ್ರದಲ್ಲಿ ಇತ್ತೀಚಿಗೆ ಪತ್ನಿಯ ಕಿರುಕುಳದ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ಅವರ ಮಗು ನಮ್ಮ ಹಾಸ್ಟೆಲ್‌ನಲ್ಲಿದ್ದಾನೆ. ನಾಲ್ಕು ವರ್ಷದ ಬಾಲಕ ನರ್ಸರಿಯಲ್ಲಿ ಓದುತ್ತಿದ್ದಾನೆ. ಆತನ ತಾಯಿ ನಿಕಿತಾ ಸಿಂಘಾನಿಯಾ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ಜೊತೆಗೆ ಮಗುವಿಗೆ ತಾಯಿಯಾಗಿ ತಾನೊಬ್ಬಳೇ ಇರುವುದಾಗಿ ಹೇಳಿಕೊಂಡಿದ್ದಳು ಎಂದು ಉಲ್ಲೇಖಿಸಿದ್ದಾರೆ.

    ಇನ್ನೂ ಸದ್ಯ ಚಳಿಗಾಲದ ರಜೆಯಿದ್ದು, ಮಗುವನ್ನು ಕರೆದುಕೊಂಡು ಹೋಗಲು ಯಾರೂ ಬರದ ಕಾರಣ ಮಗುವನ್ನು ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

    ಏನಿದು ಪ್ರಕರಣ?
    ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್‌ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್‌ನೋಟ್ ಬರೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿವರಿಸಿದ್ದರು.ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಾಡಹಗಲೇ ಚಾಕು ಇರಿದ ಸ್ನೇಹಿತ – ಆರೋಪಿ ಅರೆಸ್ಟ್

  • ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ

    ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ

    ನವದೆಹಲಿ: ವೈವಾಹಿಕ ಜೀವನದಲ್ಲಿ ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ ಎಂದು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಹೇಳಿಕೆ ನೀಡಿದ್ದು, ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತುಲ್ ಸುಭಾಷ್‌ಗೆ (Atul Subhash Suicide Case) ಆತ್ಮಹತ್ಯೆಗೂ ಮುಂಚೆ ಹರಿಬಿಟ್ಟಿರುವ ವಿಡಿಯೋ ಅವರ ಪತ್ನಿ ಯಾವ ಮಟ್ಟದಲ್ಲಿ ಕಿರುಕುಳ ನೀಡಿದ್ದರೆಂದು ತಿಳಿಯುತ್ತದೆ. ಆತನಿಂದ ಸಾಮರ್ಥ್ಯ ಮೀರಿ ಕೋಟ್ಯಂತರ ಹಣ ವದೂಲಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 12-12-2024

    ಈ ಆತ್ಮಹತ್ಯೆಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಅವರ ವಿಡಿಯೋ ಹೃದಯ ವಿದ್ರಾವಕವಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ಆ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರಿಂದ ಈ ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಮಹಿಳೆಯ ತಪ್ಪಿನ ಉದಾಹರಣೆಯನ್ನು ಇಟ್ಟುಕೊಂಡು ದಿನವೂ ಕಿರುಕುಳಕ್ಕೊಳಗಾಗುವ ಮಹಿಳೆಯರ ಸಂಖ್ಯೆಯನ್ನು ಅಲ್ಲಗಳೆಯುವಂತಿಲ್ಲ. ವೈವಾಹಿಕ ಜೀವನದಲ್ಲಿ ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ ಎಂದು ಹೇಳಿದರು.

    ಏನಿದು ಪ್ರಕರಣ?
    ಉತ್ತರ ಪ್ರದೇಶ (Uttar Pradesh) ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿವರಿಸಿದ್ದರು.

    ಸುಭಾಷ್ ಹೇಳಿದ್ದೇನು?
    ಪತ್ನಿ ನಿಖಿತಾ ಹಾಗೂ ಆಕೆಯ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದರು. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನ್ನ ಮೇಲೆ 9 ಪ್ರಕರಣ ದಾಖಲಿಸಿದ್ದರು. ಆರು ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದರೆ ಮೂರು ಪ್ರಕರಣಗಳು ಹೈಕೋರ್ಟ್ನಲ್ಲಿದೆ. ನಾನು ಬೆಂಗಳೂರಿನಲ್ಲಿದ್ದರೂ 9 ಪ್ರಕರಣಗಳ ವಿಚಾರಣೆಗಾಗಿ ಪದೇ ಪದೇ ಉತ್ತರ ಪ್ರದೇಶಕ್ಕೆ ಹೋಗಬೇಕಿತ್ತು. ಪತ್ನಿ ಕುಟುಂಬದವರ ಹಣದ ಬೇಡಿಕೆಯನ್ನು ಈಡೇರಿಸಿ ನನಗೆ ಸಾಕಾಗಿ ಹೋಗಿದೆ. ನಾನು ದುಡಿದ ಹಣವನ್ನು ಶತ್ರುಗಳಿಗೆ ನೀಡುತ್ತಿದ್ದೆ. ನನ್ನ ದುಡ್ಡಿನಿಂದ ಬಲವಾಗುತ್ತಿದ್ದ ಅವರು ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಒಂದು ಬಾರಿ ಒಂದು ಪ್ರಕರಣವನ್ನು ಪತ್ನಿ ವಾಪಸ್ ಪಡೆದಿದ್ದಳು. ವಾಪಸ್ ಪಡೆದ ನಂತರ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಳು.

    ಹಣ ಪಡೆಯಲೆಂದೇ ನನ್ನ ಮೇಲೆ ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದರೂ ಕೋರ್ಟ್ ಪತ್ನಿಯ ಪರವಾಗಿಯೇ ಇರುವಂತೆ ವರ್ತಿಸಿತ್ತು. ಉತ್ತರ ಪ್ರದೇಶದ ಕೋರ್ಟ್ಗಿಂತಲೂ ಬೆಂಗಳೂರಿನ ಕೋರ್ಟ್ಗಳು ಹೆಚ್ಚು ನ್ಯಾಯದ ಪರವಾಗಿವೆ. ನನ್ನ ಎಲ್ಲಾ ಕೇಸ್‌ಗಳನ್ನು ಕರ್ನಾಟಕದಲ್ಲಿ ನಡೆಸಬೇಕು ಎನ್ನುವುದು ನನ್ನ ಮನವಿ. ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ ವಿಚಾರಣೆ ಮುಗಿಯುವವರೆಗೂ ಪತ್ನಿಯನ್ನು ಬೆಂಗಳೂರಿನಲ್ಲಿಯೇ ನ್ಯಾಯಾಂಗ ಬಂಧನದಲ್ಲಿ ಇಡಬೇಕು.

    ಉತ್ತರಪ್ರದೇಶದ ಜೌನ್‌ಪುರದಲ್ಲಿ ಅತುತ್ ಸುಭಾಷ್ ಪರವಾಗಿ ವಾದಿಸಿದ್ದ ವಕೀಲ ಅವಧೇಶ್ ತಿವಾರಿ ಪ್ರತಿಕ್ರಿಯಿಸಿ, ವರದಕ್ಷಿಣೆ, ಹಲ್ಲೆ ಮತ್ತು ಜೀವನಾಂಶದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಜುಲೈ 2024 ರಲ್ಲಿ ನ್ಯಾಯಾಲಯದ ಮಗನ ಪೋಷಣೆಗಾಗಿ ಮಾಸಿಕ 40,000 ರೂ. ಪಾವತಿಸುವಂತೆ ಆದೇಶಿಸಿತ್ತು. ಆದರೆ ಪತ್ನಿ ಮಾಡಿದ ಹೆಚ್ಚುವರಿ ಬೇಡಿಕೆಗಳನ್ನು ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 12-12-2024

  • ನಾಯಿ ಕಳ್ಳರಿದ್ದಾರೆ ಹುಷಾರ್! – ಬಿಸ್ಕತ್ ಹಾಕಿ ಸಾಕು ನಾಯಿ ಕದ್ದ ಚಾಲಾಕಿ ಕಳ್ಳ

    ನಾಯಿ ಕಳ್ಳರಿದ್ದಾರೆ ಹುಷಾರ್! – ಬಿಸ್ಕತ್ ಹಾಕಿ ಸಾಕು ನಾಯಿ ಕದ್ದ ಚಾಲಾಕಿ ಕಳ್ಳ

    ಬೆಂಗಳೂರು: ನೀವೆನಾದ್ರೂ ಇನ್ಮುಂದೆ ಸಾಕು ನಾಯಿಗಳನ್ನು (Dog) ಹೊರಬಿಟ್ರೆ ಅದರ ಕಡೆ ಗಮನವಿಡಿ. ಏಕೆಂದರೆ ನಿಮಗೆ ಗೊತ್ತಿಲ್ದೇ ಶ್ವಾನಕ್ಕೆ ಬಿಸ್ಕತ್ ಹಾಕಿ ಕಳ್ಳತನ ಮಾಡ್ತಾರೆ ಜೋಕೆ. ಹೀಗೊಂದು ಘಟನೆ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದೆ.

    ಕಳೆದ ಒಂದು ವಾರದ ಹಿಂದೆ ಮಾರತಹಳ್ಳಿಯ ಬಿಆರ್ ಲೇಔಟ್‍ನಲ್ಲಿ ಮುರಳಿ ಮಾಧವ್ ಎಂಬುವವರ ಸಾಕು ನಾಯಿಯನ್ನು ಖದೀಮನೊಬ್ಬ ಕದ್ದು ಎಸ್ಕೇಪ್ ಆಗಿದ್ದಾನೆ. ಇದೀಗ ಈ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಸಾಕು ನಾಯಿಗೆ ಬಿಸ್ಕತ್ ಹಾಕ್ತಿರೋ ಆ ವ್ಯಕ್ತಿನಾ ನೋಡಿದ್ರೆ, ಶ್ವಾನಪ್ರಿಯ ಅನ್ಕೊಬೇಕು. ಆದ್ರೆ, ಇತ ನಾಯಿಕದ್ದ ಕಳ್ಳ ಅಂತ ಗೊತ್ತಾಗಿದ್ದೇ, ತನ್ನ ಕೈ ಚಳಕ ತೋರಿಸಿದ ಮೇಲೆ. ಇದನ್ನೂ ಓದಿ: 5 ದಿನ ಕಳೆದ್ರೂ ಬೋನಿಗೆ ಬೀಳದೇ ಚಿರತೆ ಕಳ್ಳಾಟ- ರೋಡ್ ಬಿಟ್ಟು ಮನೆಯಂಗಳದಲ್ಲಿಯೇ ಪ್ರತ್ಯಕ್ಷ

    ಮನೆಯಿಂದ ಹೊರ ಬಂದಿದ್ದ ಶ್ವಾನಕ್ಕೆ ಬಿಸ್ಕತ್ ತಿನ್ನಿಸಿ, ಬೈಕ್ ಹತ್ತಿಸಲು ಈ ಕಳ್ಳ ಪ್ರಯತ್ನಿಸಿದ್ದಾನೆ. ಬೈಕ್ ಹತ್ತದೇ ಇದ್ದಾಗ, ಕೈಯಲ್ಲೇ ಎತ್ಕೊಂಡು ಹೋಗಿದ್ದಾನೆ. 38 ಕೆ.ಜಿ ತೂಕವಿರುವ, ಒಂದುವರೆ ವರ್ಷದ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯನ್ನು ಖದೀಮ ಕದ್ದು ಎಸ್ಕೇಪ್ ಆಗಿದ್ದಾನೆ. ಬಿಆರ್ ಲೇಔಟ್‍ನ ಎ2ಬಿ ಹತ್ರ ಈ ಶ್ವಾನ ಕಾಣೆಯಾಗಿತ್ತು. ಸಿಸಿಟಿವಿಗಳನ್ನು ಪರಿಶೀಲಿಸಿದ ಬಳಿಕ ಅಸಲಿ ಸತ್ಯ ಗೊತ್ತಾಗಿದೆ. ಇದೀಗ ಘಟನೆ ಬಳಿಕ ಶ್ವಾನದ ಮಾಲೀಕ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್

    Live Tv
    [brid partner=56869869 player=32851 video=960834 autoplay=true]

  • ರಾಜಕಾಲುವೆಯಲ್ಲಿ ಕೊಚ್ಚಿಹೋಯ್ತು 6 ವರ್ಷದ ಕಂದಮ್ಮ

    ರಾಜಕಾಲುವೆಯಲ್ಲಿ ಕೊಚ್ಚಿಹೋಯ್ತು 6 ವರ್ಷದ ಕಂದಮ್ಮ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, 6 ವರ್ಷದ ಹೆಣ್ಣು ಮಗು ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳ್ಳಂದೂರಿನ ಕರಿಯಮ್ಮನಗರದಲ್ಲಿ ನಡೆದಿದೆ.

    ಕೊಚ್ಚಿಹೋದ ಮಗುವನ್ನು 6 ವರ್ಷದ ಭೂಮಿಕ ಎಂದು ಗುರುತಿಸಲಾಗಿದೆ. ಅಸ್ಸಾನಿಂದ ಕೂಲಿ ಕೆಲಸಕ್ಕೆ ಬಂದಿದ್ದ ದಂಪತಿ ಪುತ್ರಿಯಾದ ಭೂಮಿಕಾ, ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಆಟವಾಡುತ್ತಿರುವಾಗ ಮಾರತಹಳ್ಳಿಯ ರಾಜಕಾಲುವೆಗೆ ಬಿದ್ದಿದ್ದಾಳೆ. ಸ್ವಲ್ಪ ದೂರದವರೆಗೂ ತೇಲಿಹೋದ ಮಗು ಬಳಿಕ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದೆ.

    ಅಸ್ಸಾಂ ಮೂಲದಿಂದ ಬದುಕನ್ನು ಕಟ್ಟಿಕೊಳ್ಳು ಮಗುವಿನ ಜೊತೆ ಬೆಂಗಳೂರಿಗೆ ಬಂದಿದ್ದ ದಂಪತಿ, ಬಾಂಗ್ಲಾ ವಲಸಿಗರ ಕ್ಯಾಂಪ್‍ಗಳಲ್ಲಿ ವಾಸವಿದ್ದರು. ಇಬ್ಬರು ಕೊಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದು ಆಟವಾಡುತ್ತಿದ್ದ ಮಗಳು ಭೂಮಿಕಾ ಆಯಾ ತಪ್ಪಿ ರಾಜಕಾಲುವೆಗೆ ಬಿದ್ದಿದ್ದಾಳೆ. ಪರಿಣಾಮ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕ್ಯಾಂಪ್‍ಗಳ ಬಳಿ ರಾಜಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಹೇಳಾಗಿದೆ.

    ಈಗಾಗಲೇ ಸ್ಥಳಕ್ಕೆ ಸರ್ಜಾಪುರ ಮತ್ತು ಮಹದೇವಪುರ ಅಗ್ನಿಶಾಮಕ ದಳದವರು ಬಂದಿದ್ದು, 25 ಜನರ ಅಗ್ನಿಶಾಮಕ ದಳ ತಂಡದವರಿಂದ ಕಾರ್ಯಾಚರಣೆ ನಡೆಯುತ್ತಿದೆ. ಬೋಟ್ ಮೂಲಕ ಮಗುವಿನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಆಗಮಿಸಿದ್ದು, ಅಗ್ನಿಶಾಮಕ ದಳಕ್ಕೆ ಸೂಕ್ತ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ.