Tag: ಮಾರಕಾಸ್ತ್ರಗಳು

  • ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಬೆಂಗಳೂರು: ಗ್ಯಾಂಗ್‍ವೊಂದು ಜುಟ್ಟು ಅಂದಿದ್ದಕ್ಕೆ ಸಿನಿಮಾ ಸ್ಟೈಲ್‍ನಲ್ಲಿ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಹಲ್ಲೆಗೈದ ಘಟನೆ ನಗರದ ರಾಮಮೂರ್ತಿ ನಗರ ಟಿಸಿ ಪಾಳ್ಯದಲ್ಲಿ ನಡೆದಿದೆ.

    ವಿನಯ್, ಬಸವರಾಜು, ಗುರು, ಹಲ್ಲೆಗೊಳಾದ ಯುವಕರು. ತರುಣ್, ರಾಹುಲ್, ವಿಕ್ಕಿ, ಆ್ಯಂಡ್ ಗ್ಯಾಂಗ್‍ನಿಂದ ಹಲ್ಲೆ ನಡೆದಿದೆ. ಯುವಕರು ಮದ್ಯಪಾನ ಮಾಡಲು ಬಾರ್‍ಗೆ ತೆರಳಿದ್ದರು. ಇದೇ ವೇಳೆ ತರುಣ್ ಗ್ಯಾಂಗ್ ಅಲ್ಲಿಗೆ ಬಂದಿತ್ತು. ಗ್ಯಾಂಗ್‍ನಲ್ಲಿ ರಾಹುಲ್ ಜುಟ್ಟು ಬಿಟ್ಟಿದ್ದನ್ನು ನೋಡಿ ಯುವಕರು ನಕ್ಕಿದ್ದಾರೆ. ಇದೇ ವಿಚಾರಕ್ಕೆ ಎರಡು ಗ್ಯಾಂಗ್‍ಗಳ ನಡುವೆ ಮಾರಮಾರಿ ನಡೆದು ಗಲಾಟೆ ಶುರುವಾಗಿದೆ. ಇದನ್ನೂ ಓದಿ: ಎನ್‍ಟಿಆರ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್

    ನಂತರ ಆ ಮೂವರು ಯುವಕರ ಮೇಲೆ ತರುಣ್ ಆ್ಯಂಡ್ ಗ್ಯಾಂಗ್ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಗಾಯಗೊಂಡ ಯುವಕರು ರಾಮಮೂರ್ತಿ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಪೆÇಲೀಸರು ತರುಣ್‍ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಅನ್ಯಕೋಮಿನ ಯುವತಿಯನ್ನ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

    ಅನ್ಯಕೋಮಿನ ಯುವತಿಯನ್ನ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

    ಕಲಬುರಗಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೋಲೆಗೈದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

    ವಾಡಿ ಪಟ್ಟಣದ ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ (25) ಕೊಲೆಗೀಡಾದ ಯುವಕ. ವಿಜಯ ಅನ್ಯಕೋಮಿನ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಇದೇ ಕಾರಣಕ್ಕೆ ಯುವತಿಯ ಕುಟುಂಬಸ್ಥರು ವಿಜಯನನ್ನು ಕೊಲೆಗೈದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ದೈನಂದಿನಂತೆ ವಾಡಿ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ವಿಜಯನನ್ನು ರೈಲ್ವೆ ತಡೆಗೋಡೆ ಹತ್ತಿರ ತಡೆದು ಜಗಳ ತೆಗೆದ ದುಷ್ಕರ್ಮಿಗಳು, ಮಾರಕಾಸ್ತ್ರ, ಕಲ್ಲು, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲಿದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    POLICE JEEP

    ಕೊಲೆ ಪ್ರಕರಣದಿಂದ ವಾಡಿ ಪಟ್ಟಣದಲ್ಲಿ ಆತಂಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿದ ಪೊಲೀಸರು ಹಂತಕರ ಶೋಧಕಾರ್ಯ ಆರಂಭಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

  • ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗಳೂರು: ರೌಡಿಗಳ ಕೈಗೆ ಮಾರಕಾಸ್ತ್ರಗಳು ಹೇಗೆ ಸಿಗುತ್ತೆ, ಎಲ್ಲಿ ಸಿಗುತ್ತೆ ಎನ್ನುವುದು ಸಾಮಾನ್ಯರಿಗೆ ತಿಳಿಯದ ವಿಚಾರ. ಎಲ್ಲೋ ಅಜ್ಞಾತ ಸ್ಥಳಗಳಲ್ಲಿ ಈ ಮಚ್ಚು ಲಾಂಗ್‍ಗಳು ರೆಡಿಯಾಗುತ್ತಿದ್ದವು. ಆದರೆ ಮಧ್ಯಪ್ರದೇಶ ಮೂಲದ ಅಲೆಮಾರಿ ಜನರು ರಾಜರೋಷವಾಗಿ ಬೆಂಗಳೂರು ರಸ್ತೆಯ ಪಕ್ಕದಲ್ಲೇ ಇಂತಹ ಮಾರಕಾಸ್ತ್ರಗಳನ್ನ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

    ರೈತಾಪಿ ವರ್ಗದವರಿಗೆ ಬೇಕಾದ ಸಲಕರಣೆಗಳ ಜೊತೆಗೆ ಭಾರೀ ಹರಿತವಾಗಿರೋ ಮಚ್ಚುಗಳನ್ನ ರಸ್ತೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಟ್ಟಿಯ ರಸ್ತೆ ಪಕ್ಕ ಬಿಡಾರ ಹಾಕಿರುವ ಅಲೆಮಾರಿಗಳು ಹೆಚ್ಚು ಉದ್ದವಾದ ಮಚ್ಚುಗಳನ್ನ ಮಾಡಿಕೊಡಲ್ಲ ಎನ್ನುತ್ತಾರೆ. ಆದರೆ ನಮಗೆ ಸಿನಿಮಾ ಶೂಟಿಂಗ್‍ಗೆ ಲಾಂಗ್ ಬೇಕು ಮಾಡಿ ಕೊಡುತ್ತಿರಾ ಎಂದು ಕೇಳಿದರೆ, “ಮಾಡ್ತಿವಿ ಇದೇ ಲಾಸ್ಟ್ ಸೈಜ್” ಎಂದು ಹೇಳಿ ಚೀಲಗಳ ಮಧ್ಯೆ ಇಟ್ಟಿದ್ದ ದೊಡ್ಡ ಮಚ್ಚುಗಳನ್ನು ತೋರಿಸುತ್ತಾರೆ. ಇದೇ ಅಳತೆಯಲ್ಲಿ ಲಾಂಗ್ ಮಾಡಿಕೊಡುವಂತೆ ಕೇಳಿದರೆ, ಮಾಡಿಕೊಡಲು ಈ ಮಧ್ಯಪ್ರದೇಶದ ಗ್ಯಾಂಗ್ ಒಪ್ಪಿಕೊಂಡಿರುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ.

    ಮೊದಲು ಲಾಂಗ್ ತಯಾರಿಸಿ ಕೊಡಲು ಒಪ್ಪಿಕೊಂಡಿದ್ದ ಅಲೆಮಾರಿಗಳು ನಂತರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯ ಸುಳಿವು ತಿಳಿದು ಆಗಲ್ಲ ಮುಂದೆ ಇರೋದನ್ನು ತಗೆದುಕೊಳ್ಳಿ, ನಮಗೆ ಆ ಲಾಂಗ್ ತರ ಮಾಡೋದಕ್ಕೆ ಬರೋದಿಲ್ಲ ಎಂದು ದೂರ ಸರಿದಿದ್ದಾರೆ.

    ಎಷ್ಟು ಸುಲಭವಾಗಿ ಮಚ್ಚು, ಚೂರಿ, ಲಾಂಗ್‍ಗಳು ಕಡಿಮೆ ಬೆಲೆಗೆ ಸಿಗುತ್ತೆ ಎಂದು ತಿಳಿದ ಪುಡಿ ರೌಡಿಗಳ ಇದನ್ನೇ ಕೊಂಡುಕೊಂಡು ನಾನೇ ಡಾನ್ ಎಂದುಕೊಂಡು ಬಿಲ್ಡಪ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ರಾಜರೋಷವಾಗಿ ರಸ್ತೆಯಲ್ಲಿ ಮಾರಕಾಸ್ತ್ರಗಳು ತಯಾರಿಕೆಯಾಗಿ, ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಸುಮ್ಮನಿದ್ದಾರೆ.

  • ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿದ ದರೋಡೆಕೋರರು- ವಿಡಿಯೋ ನೋಡಿ

    ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿದ ದರೋಡೆಕೋರರು- ವಿಡಿಯೋ ನೋಡಿ

    ಬೀದರ್: ಶನಿವಾರದಂದು ಸಿನಿಮೀಯ ರೀತಿಯಲ್ಲಿ 6 ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಸಿಟಿವಿಗೆ ಸ್ಪ್ರೇ ಮಾಡಿ ದರೋಡೆಗೆ ಯತ್ನಿಸಿದ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಜಿಲ್ಲೆಯ ಮಡಿವಾಳ ವೃತ್ತದಲ್ಲಿರುವ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ದರೋಡೆ ಮಾಡಲು 6 ಮಂದಿ ಯತ್ನಿಸಿದ್ದರು. ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದ ಖದೀಮರು, ಮೊದಲೇ ಪ್ಲಾನ್ ರೂಪಿಸಿಕೊಂಡು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿದ್ದರು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್‍ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಾಗಿದ್ದರು. ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿತ್ತು. ಆದರೆ ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾಗಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಒಳಗೆ ಖದೀಮರು ಮಾಡಿದ ದುಷ್ಕೃತ್ಯದ ವಿಡಿಯೋ ಇಂದು ಲಭ್ಯವಾಗಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಫುಲ್‍ಪ್ಲಾನ್ ಮಾಡಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಂಕ್ ಒಳ ನುಗ್ಗಿದ ದರೋಡೆಕೋರರು ಸಿಬ್ಬಂದಿ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಹೆದರಿಸಿದ್ದಾರೆ. ಅಲ್ಲದೆ ಬ್ಯಾಂಕ್ ಒಳಗೆ ಬಂದಂತೆ ಅಲ್ಲಿನ ಸಿಸಿ ಕ್ಯಾಮೆರಾಗೆ ಸ್ಪ್ರೇ ಮಾಡಿ ದರೋಡೆ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರು ಬೆದರಿಸುತ್ತಿರುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ದೊರಕಿದೆ.

    https://www.youtube.com/watch?v=xDwDxv7oGts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv