Tag: ಮಾನ್ಸೂನ್

  • ಮಾನ್ಸೂನ್ ವೇಳೆ ಧರಿಸಬಹುದಾದ 7 ಶೈಲಿಯ ಡ್ರೆಸ್‍ಗಳು

    ಮಾನ್ಸೂನ್ ವೇಳೆ ಧರಿಸಬಹುದಾದ 7 ಶೈಲಿಯ ಡ್ರೆಸ್‍ಗಳು

    ಳೆಗಾಲವನ್ನು ಸ್ವಲ್ಪ ಜನ ಇಷ್ಟಪಟ್ಟರೆ ಮತ್ತುಷ್ಟು ಮಂದಿ ಇಷ್ಟಪಡುವುದಿಲ್ಲ. ಮಾನ್ಸೂನ್ ವೇಳೆ ಎಷ್ಟೋ ಜನರಿಗೆ ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ. ಅಂತಹವರಿಗೆ ಮಳೆಗಾಲದಲ್ಲಿ ಯಾವ ರೀತಿಯ ಡ್ರೆಸ್ ಧರಿಸಬೇಕು ಎಂಬುವುದಕ್ಕೆ ಕೆಲವೊಂದು ಟಿಪ್ಸ್ ಈ ಕೆಳಗೆ ನೀಡಲಾಗಿದೆ.

    ಕುಲೋಟ್ಸ್
    ಹಳೆಯ ಶೈಲಿಯ ಡೆನಿಮ್ ಮತ್ತು ಪ್ಯಾಂಟ್‍ಗಳನ್ನು ಧರಿಸಿ ಬೇಸರಗೊಂಡಿರುವವರು ಇದನ್ನು ಚೂಸ್ ಮಾಡಬಹುದು. ಟೀ ಶರ್ಟ್, ಚಿಕ್ಕ ಕುರ್ತಾ ಅಥವಾ ಕ್ರಾಪ್ ಟಾಪ್‍ನೊಂದಿಗೆ ಇದು ಬಹಳ ಚೆನ್ನಾಗಿ ಸೂಟ್ ಆಗುತ್ತದೆ.

    ಪ್ಲೇ ಸೂಟ್
    ಪ್ಲೇ ಸೂಟ್ ಧರಿಸುವುದಕ್ಕೆ ಬಹಳ ಕಂಫರ್ಟ್ ಆಗಿರುತ್ತದೆ. ಮನ್ಸೂನ್ ವೆದರ್‍ಗೆ ಬ್ರೈಟ್ ಆಗಿರುವ ಬಣ್ಣದ ಪ್ಲೇಟ್ ಸೂಟ್‍ನನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿಯೂ ನೈಲಾನ್ ಮತ್ತು ಕಾಟನ್ ನಿಂದ ತಯಾರಿಸಲ್ಪಟ್ಟ ಬಟ್ಟೆಗಳನ್ನು ಆರಿಸಿಕೊಳ್ಳುವುದು ಉತ್ತಮ.

    ಪ್ರಿಂಟೆಡ್ ಡ್ರೆಸ್
    ದಿನನಿತ್ಯ ಒಂದೇ ತರಹದ ಡ್ರೆಸ್‍ಗಳನ್ನು ಧರಿಸಲು ಬೋರಿಂಗ್ ಅನಿಸಬಹುದು. ಹಾಗಾಗಿ ಅದರ ಮೇಲೆ ಪ್ರಿಂಟೆಡ್ ಇರುವ ಡ್ರೆಸ್‍ಗಳನ್ನು ಧರಿಸಿ ಇದು ನಿಮಗೆ ಫ್ಯಾಷನ್ ಲುಕ್ ನೀಡುತ್ತದೆ. ಅದರಲ್ಲೂ ಲೇಯರ್ ಇರುವಂತಹ ಡ್ರೆಸ್‍ಗಳನ್ನು ಹೆಚ್ಚಾಗಿ ಬಳಸಿ, ಇದು ಸಿಂಪಲ್ ಲುಕ್ ನೀಡುವುದರ ಜೊತೆಗೆ ನಿಮ್ಮನ್ನು ಬೆಚ್ಚಗೆ ಇರಿಸುತ್ತದೆ.

    ಸ್ಕರ್ಟ್‍ಗಳು
    ಸ್ಕಟ್ ಹಾಗೂ ಟಾಪ್‍ಗಳು ಕ್ಲಾಸಿಕ್ ಕಾಂಬಿನೇಷನ್ ಡ್ರೆಸ್ ಎಂದೇ ಹೆಳಬಹುದು. ಉದ್ಯೋಗದ ಸ್ಥಳದಲ್ಲಿ ನೀವು ಫಾರ್ಮಲ್ ಸ್ಕರ್ಟ್‍ಗಳನ್ನು ಧರಿಸಿ ಇದು ನಿಮಗೆ ಫ್ಯಾಶನ್ ಲುಕ್ ನೀಡುತ್ತದೆ. ಶರ್ಟ್‍ಗಳ ಜೊತೆಗೆ ಸ್ಕರ್ಟ್‍ಗಳನ್ನು ಧರಿಸಬಹುದು. ಆರಾಮವಾಗಿ ಓಡಾಡಲು ಪೆನ್ಸಿಲ್ ಸ್ಕರ್ಟ್ ಗಳಿಗಿಂತ ಎ-ಲೈನ್ ಅಥವಾ ಮಿಡಿ ಸ್ಕರ್ಟ್ ಬಹಳ ಸುಂದರವಾಗಿ ಕಾಣಿಸುತ್ತದೆ.

    ಜೀನ್ಸ್
    ನೀವು ಜೀನ್ಸ್ ಪ್ರಿಯರಾಗಿದ್ದರೆ, ಸ್ಲಿಮ್ ಫಿಟ್ ಜೀನ್ಸ್‍ಗಿಂತ ಬಾಯ್‍ಫ್ರೆಂಡ್ ಜೀನ್ಸ್‍ನನ್ನು ಹೆಚ್ಚಾಗಿ ಆಯ್ಕೆ ಮಾಡಿ. ಇದು ಮಳೆಗಾಲದಲ್ಲಿ ಧರಿಸಲು ಸುಲಭಕರವಾಗಿರುತ್ತದೆ.

  • ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

    ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

    – ಮಡಿಕೇರಿ ಆಕಾಶವಾಣಿ ಬಳಿ ಮತ್ತೆ ಗುಡ್ಡ ಕುಸಿತ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೂ ಮಡಿಕೇರಿ ಮಂಗಳೂರು ಹೆದ್ದಾರಿಯ ಕೆಳಭಾಗದಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಅಲ್ಲಿರುವ ಆರು ಕುಟುಂಬಗಳು ಭೂಕುಸಿತದ ಭೀತಿಯಲ್ಲಿವೆ.

    ಕತ್ತಲೆಯಲ್ಲಿ ಕೊಡಗು:
    ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆರು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ ದೇವಸ್ತೂರು, ಹೆಬ್ಬೆಟಗೇರಿಯಲ್ಲಿ ದೇವಸ್ತೂರು ಹೊಳೆ ಭೋರ್ಗರೆದು ಹರಿಯುತ್ತಿದೆ. ದೇವಸ್ತೂರು ಕೆಳಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ದೇವಸ್ತೂರು, ಬಾಣೆಗದ್ದೆ ಮತ್ತು ಹೆಬ್ಬೆಟಗೇರಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಇನ್ನು ತೀವ್ರ ಮಳೆಗೆ ಕೊಡಗು ಜಿಲ್ಲೆಗೆ ವಿದ್ಯುತ್ ಪೂರೈಸುವ ಲೈನ್ ಮೇಲೆ ಕುಶಾಲನಗರ ಸಮೀಪ ಭಾರೀ ಘಾತ್ರದ ಮರಬಿದ್ದ ಪರಿಣಾಮ ವಿದ್ಯುತ್ ಕಡಿತವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆ ಬಹುತೇಕ ಕತ್ತಲೆಯಲ್ಲಿ ಮುಳುಗಿದೆ.

    ಮಳೆ ಜೊತೆಗೆ ಭಾರೀ ಗಾಳಿ ಬೀಸುತ್ತಿದ್ದು, ನೂರಾರು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮವಾಗಿ ಗ್ರಾಮೀಣ ಕೊಡಗು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ. ಭಾಗಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಭಾಗಮಂಡದಲ್ಲಿ ಕಳೆದ 24 ಗಂಟೆಯಲ್ಲಿ 103 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಇದು ಕಾವೇರಿ ನದಿ ಪಾತ್ರದ ಹತ್ತಾರು ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ದೂಡಿದೆ. ಒಟ್ಟಿನಲ್ಲಿ ಎರಡು ದಿನದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇನ್ನೂ ಎರಡು ದಿನ ಭಾರೀ ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಆಕಾಶವಾಣಿ ಬಳಿ ಮತ್ತೆ ಗುಡ್ಡ ಕುಸಿತ:
    ಮಡಿಕೇರಿ ನಗರದ ಆಕಾಶವಾಣಿ ಕೇಂದ್ರದ ಬಳಿಯು ಭೂಕುಸಿತ ಕುಸಿತ ಉಂಟಾಗಿದೆ. ಮಡಿಕೇರಿಯ ಆಕಾಶವಾಣಿ ಟವರ್ ಗೆ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಟವರ್ ನಿಂದ ಕೇವಲ ಐದು ಅಡಿ ದೂರದಲ್ಲಿ ಭೂಕುಸಿತ ಅಗಿದೆ. ಕಳೆದ ಬಾರಿ ಕುಸಿದಿದ್ದ ಜಾಗದ ಪಕ್ಕದಲ್ಲೇ ಮತ್ತೆ ಭೂ ಕುಸಿತವಾಗಿದೆ. ಮಳೆ ಇದೇ ರೀತಿಯಲ್ಲಿ ಮುಂದುವರಿದಲ್ಲಿ ಆಕಾಶವಾಣಿ ಟವರ್ ಬೀಳುವ ಸಾಧ್ಯತೆ ಹೆಚ್ಚಾಗಿದು. ಆಕಾಶವಾಣಿ ಸಿಬ್ಬಂದಿಗಳಿಗೆ ಅತಂಕ ಮನೆ ಮಾಡಿದೆ.

    2018 ರಲ್ಲೂ ಆಕಾಶವಾಣಿ ಟವರ್ ಬಳಿಯೇ ಗುಡ್ಡ ಕುಸಿದಿತ್ತು. ಬಳಿಕ 2020 ರಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಮಾಡುವ ಸಂದರ್ಭದಲ್ಲಿಯೂ ಗುಡ್ಡ ಕುಸಿದಿತ್ತು. ಕಾರ್ಮಿಕರು ಪ್ರಾಣಾಪಾಯದಿಂದ ಪಾರಗಿದ್ರು. ಇದೀಗ ತಡೆಗೋಡೆ ನಿರ್ಮಾಣ ಮಾಡಿದ ಪಕ್ಕದಲ್ಲೇ ಮತ್ತೆ ಭೂ ಕುಸಿತವಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಹಾಗೂ ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆ ಅಡ್ಡಲಾಗಿ ಮಡಿಕೇರಿ ಪೊಲೀಸರು ಬ್ಯಾರೀಕೇಟ್ ಗಳನ್ನು ಅಳವಡಿಸಿ ಸಾರ್ವಜನಿಕರು ಯಾರು ಹೋಗದಂತೆ ಸೂಚನೆ ನೀಡಿದ್ದಾರೆ.

    ನದಿ ತೀರದ ನಿವಾಸಿಗಳಲ್ಲಿ ಆತಂಕ
    ಮದೆನಾಡು, ಜೋಪುಪಾಲ, ಕೊಯನಾಡು ಮತ್ತು ಸಂಪಾಜೆ ಸುತ್ತಮುತ್ತ ಗ್ರಾಮಗಳಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದೆ. ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದಿಂದ ಕೊಯನಾಡು ಗ್ರಾಮದ ಸುತ್ತಮುತ್ತಲ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮಣ್ಣಿನ ರಾಶಿ ಮತ್ತು ಮರಗಳು ಕೊಚ್ಚಿಕೊಂಡು ಬರುತ್ತಿದ್ದು, ಇತ್ತೀಚೆಗೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರುಕಟ್ಟೆಯಿಂದ ಪ್ರವಾಹದ ಮಾರ್ಗ ಬದಲಾಗಿ ಅಪಾಯ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ

    ಕ್ಷಣ ಕ್ಷಣಕ್ಕೂ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. 2018 ರಲ್ಲಿ ಇದೇ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಸಾವು, ನೋವಿನ ಬಗ್ಗೆ ಇಲ್ಲಿಯವರು ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿರಾಜಪೇಟೆ ತಾಲೂಕಿನ ಕರಡಿಗೋಡು ಗುಹ್ಯ ಕಕ್ಕಟ್ ಕಾಡು ಪ್ರದೇಶದಲ್ಲಿಯೂ ಕಾವೇರಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು.ಇಲ್ಲಿನ ನಿವಾಸಿಗಳಿಗೆ ಮತ್ತೆ ಪ್ರವಾಹದ ಅತಂಕ ಎದುರಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

  • ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

    ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

    – ದ.ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆ

    ಉಡುಪಿ: ಜಿಲ್ಲೆಯಲ್ಲಿ ಆರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾನೆಯಿಂದಲೇ ಉಡುಪಿ ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸುಮಾರು 80 ಮಿಲಿ ಮೀಟರ್ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಜಿಲ್ಲೆಯ ಕಾಪು ಉಡುಪಿ ಕುಂದಾಪುರ ಮತ್ತು ಬೈಂದೂರ್ ತಾಲೂಕಿನಲ್ಲಿ ನಾಡದೋಣಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ 45 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಅಲೆಗಳ ಪ್ರಮಾಣ ಏರಿಕೆಯಾಗಲಿದೆ. ಸಮುದ್ರ ತೀರದಲ್ಲಿ ವಾಸಿಸುವ ಮೀನುಗಾರರು ಎಚ್ಚರಿಕೆಯಿಂದ ಇರಬೇಕು. ಕಡಲತೀರದಲ್ಲಿ 2 ಮೀಟರ್ ವರೆಗೂ ಅಲೆಗಳು ಹೇಳಬಹುದು ಮೀನುಗಾರರು ಎಚ್ಚರಿಕೆಯಿಂದ ಇರಿ ಎಂದು ಸೂಚಿಸಲಾಗಿದೆ.

    ಮುಂದಿನ ನಾಲ್ಕೈದು ದಿನ ಗಾಳಿ ಜೊತೆ ಮಳೆಯಾಗುವ ಮುನ್ಸೂಚನೆ ಇದೆ. ನದಿ, ಸಮುದ್ರ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಹೇಳಿದೆ. ನದಿ ಮತ್ತು ಸಮುದ್ರ ತೀರಕ್ಕೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ನೀರಿಗೆ ಇಳಿಯಬಾರದು ಎಂದು ಡಿಸಿ ಜಗದೀಶ್ ಸೂಚನೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹವಾಮಾನ ಇಲಾಖೆ ಎಚ್ಚರಿಕೆಯಂತೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೆಲಸ ಕಾರ್ಯದ ನಿಮಿತ್ತ ಓಡಾಡುವ ಜನ ಎಚ್ಚರಿಕೆಯಿಂದ ಇರಬೇಕು. ನದೀತೀರದಲ್ಲಿ ಸಮುದ್ರ ತೀರದಲ್ಲಿ ನೀರಿನ ಮಟ್ಟ ಜಾಸ್ತಿಯಾದರೆ ತಕ್ಷಣ ಕಂಟ್ರೋಲ್ ರೂಮ್ ಅಲ್ಲ ಸಂಪರ್ಕ ಮಾಡಬೇಕು ಎತ್ತರ ಪ್ರದೇಶಗಳಿಗೆ ಹೋಗಬೇಕು ಎಂದು ಮಾಹಿತಿ ನೀಡಿದರು. ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಯಾರು ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

    ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ
    ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದ್ದು, ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ,ಬೆಳ್ತಂಗಡಿ ತಾಲೂರು ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ಮಂಗಳೂರು ನಗರ ಪ್ರದೇಶದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ.

    ಪಶ್ಚಿಮಘಟ್ಟದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನದಿಗಳಿಗೆ ಮಳೆ ನೀರು ಹರಿದು ಬರುತ್ತಿರೋದ್ರಿಂದ ಜೀವನದಿಗಳು ತುಂಬಲಾರಂಭಿಸಿದೆ. ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

  • ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್ ಎಂಟ್ರಿ – ಕೂಲ್ ಆದ ಜನರು

    ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್ ಎಂಟ್ರಿ – ಕೂಲ್ ಆದ ಜನರು

    ನವದೆಹಲಿ: ನಿಗದಿತ ಅವಧಿಗಿಂತ 16 ದಿನಗಳ ಕಾಲ ವಿಳಂಬವಾಗಿ ನೈಋತ್ಯ ಮಾನ್ಸೂನ್ ಮಳೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಇಂದು ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. 44 ಡಿಗ್ರಿ ಬಿಸಿಲ ಝಳಕ್ಕೆ ತತ್ತರಿಸಿದ ಜನರು ಮಾನ್ಸೂನ್ ಮಳೆಯಿಂದ ಕೊಂಚ ತಣ್ಣಗಾಗಿದ್ದಾರೆ.

    ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜೂನ್ 27ಕ್ಕೆ ದೆಹಲಿಗೆ ಮಾನ್ಸೂನ್ ಪ್ರವೇಶಿಸಬೇಕಿತ್ತು. ಜುಲೈ 8 ವೇಳೆಗೆ ಇಡೀ ದೇಶವನ್ನು ಆವರಿಸಿಕೊಳ್ಳಬೇಕಿತ್ತು. 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿಗೆ ಮಳೆ ತಡವಾಗಿ ಆಗಮಿಸಿದೆ. ಕಳೆದ ವರ್ಷ ಜೂನ್ 25 ರಂದು ದೆಹಲಿಯನ್ನು ತಲುಪಿ ಜೂನ್ 29ರ ವೇಳೆಗೆ ಇಡೀ ದೇಶವನ್ನು ಆವರಿಸಿತ್ತು.

    ಈ ವರ್ಷ ಮಾನ್ಸೂನ್ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಕೆ. ಜೆನಮಣಿ ಹೇಳಿದ್ದಾರೆ. ದೆಹಲಿಗೆ ಮಾನ್ಸೂನ್ ಆಗಮಿಸುವುದನ್ನು ಈ ಬಾರಿ ನಿರೀಕ್ಷಿಸಲು ತುಸು ಕಷ್ಟವಾಗುತ್ತಿದೆ. ಹಲವು ಬಾರಿ ಮುನ್ಸೂಚನೆ ಸಿಕ್ಕರೂ ಮಳೆಯಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

    ಬೆಳಗ್ಗೆ 8:30ರ ವರದಿ ಪ್ರಕಾರ ಲೋಧಿ ರಸ್ತೆಯಲ್ಲಿ 19.4 ಮಿಲಿ ಮೀಟರ್, ಸಬ್ದರ್‍ಜಂಗ್‍ನಲ್ಲಿ 2.4 ಮತ್ತು ಪಾಲಮ್ ನಲ್ಲಿ 2.4 ಮಿಲಿ ಮೀಟರ್ ಮಳೆ ಸುರಿದದೆ. ಮುಂದಿನ 24 ಗಂಟೆಯಲ್ಲಿ 2.4 ನಿಂದ 64.4 ಮಿಲಿ ಮೀಟರ್ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಎರಡು ಗಂಟೆಯಲ್ಲಿ ಬಹದ್ದೂರ್ ಘ್ರಹ್, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾ, ಸೋನಿಪತ್ ಮತ್ತು ರೋಹ್ಟಕ್ ನಲ್ಲಿ ಮಳೆಯಾಗಲಿದೆ.

    ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಫ್ಲೈ ಓವರ್ ಕೆಳಗೆ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೆಲವು ಕಡೆ ವಾಹನಗಳು ಸಿಲುಕಿ ಸವಾರರು ಪರದಾಡುವಂತಾಯಿತು. ಇದರಿಂದ ಟ್ರಾಫಿಕ್ ಜಾಮ್ ಆಗಿ ಜನರು ಮಳೆಯಲ್ಲಿ ಕಾಲ ಕಳೆಯುವಂತಾಗಿದೆ.

    ಮಾನ್ಸೂನ್ ಮಳೆಗೂ ಮುನ್ನ ದೆಹಲಿಯಲ್ಲಿ ಗರಿಷ್ಠ ತಾಪಮಾನ 44-46ಲಿ ಇದ್ದರೇ ಕನಿಷ್ಠ 34-36ಲಿ ತಾಪಮಾನ ದಾಖಲಾಗುತ್ತಿತ್ತು. ಬಿಸಿಲಿನ ಝಳಕ್ಕೆ ದೆಹಲಿಯ ಜನರು ಹೈರಣಾಗಿದ್ದರು. ಮಳೆಯಿಂದ ತಾಪಮಾನ 28ಲಿ. ಗೆ ಕುಸಿದಿದ್ದು, ವಾತಾವರಣ ತುಸು ತಣ್ಣಗಾಗಿದೆ.

  • ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ- ಒಂದು ವಾರ ಆರೆಂಜ್ ಅಲರ್ಟ್ ಘೋಷಣೆ

    ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ- ಒಂದು ವಾರ ಆರೆಂಜ್ ಅಲರ್ಟ್ ಘೋಷಣೆ

    – ಬೆಂಗಳೂರಲ್ಲಿ ಎರಡು ದಿನ ಹೆಚ್ಚು ಮಳೆ ಸಾಧ್ಯತೆ
    – ಇಂದಿನಿಂದ ರಾಜ್ಯಾದ್ಯಂತ ಭಾರೀ ಮಳೆ

    ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಗುಡುಗು ಸಿಡಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಕರಾವಳೆಯ ಕೆಲ ಜಿಲ್ಲಗಳಲ್ಲಿ ಮಳೆಯ ಅಬ್ಬರ ಶುರುವಾಗಿದೆ.

    ಜೂನ್ 12 ರಿಂದ ಒಂದು ವಾರದ ಕಾಲ ಗುಡುಗುಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಅಲ್ಲದೆ ಇಂದಿನಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಕಡೆ ಮೋಡ ಕವಿದ ವಾತಾವರಣವಿರುತ್ತದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಜೂನ್ 12 ರಿಂದ 16ರ ವರೆಗೆ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ, ಕೋಲಾರ, ಕೊಪ್ಪಳ, ದಾವಣಗೆರೆ ಹಾಗೂ ತುಮಕೂರಿನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ

    ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರತೀ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 64 ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದರಂತೆ ಉಡುಪಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.

    ತಾಸಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ಎಲ್ಲಾ ತಾಲೂಕುಗಳಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಬೇಸಾಯ ಆರಂಭಿಸಲು ಕಾದಿದ್ದ ಕೃಷಿಕರಿಗೆ ಅನುಕೂಲವಾಗಿದೆ.

  • ಉಡುಪಿಯಲ್ಲಿ 114 ಮಿಲಿ ಮೀಟರ್ ಮಳೆ – ಮಾನ್ಸೂನ್ ಅಬ್ಬರಕ್ಕೆ 4 ಮನೆಗಳಿಗೆ ಹಾನಿ

    ಉಡುಪಿಯಲ್ಲಿ 114 ಮಿಲಿ ಮೀಟರ್ ಮಳೆ – ಮಾನ್ಸೂನ್ ಅಬ್ಬರಕ್ಕೆ 4 ಮನೆಗಳಿಗೆ ಹಾನಿ

    ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 114 ಮಿಲಿ ಮೀಟರ್ ಮಳೆ ದಾಖಲಾಗಿದೆ.

    ಜಿಲ್ಲೆಯಲ್ಲಿ 114 ಮಿಲಿ ಮೀಟರ್ ಸರಾಸರಿ ಮಳೆ ದಾಖಲಾಗಿದ್ದು, ಉಡುಪಿ ನಗರ ಮತ್ತು ತಾಲೂಕಿನಲ್ಲಿ 121 ಮಿ.ಮೀ, ಕುಂದಾಪುರದಲ್ಲಿ 120 ಮಿ.ಮೀ ಮಳೆ ಬಿದ್ದಿದೆ. ಕಾರ್ಕಳ ತಾಲೂಕಿನಲ್ಲಿ 100 ಮಿಲಿ ಮೀಟರ್ ಮಳೆ ಸುರಿದಿದೆ. ಉಡುಪಿ ಜಿಲ್ಲಾಡಳಿತದಿಂದ ಮಳೆ ಮಾಹಿತಿ ಲಭ್ಯವಾಗಿದ್ದು, ಮುಂದಿನ 24 ಗಂಟೆಗಳ ಕಾಲ ಗುಡುಗು ಮಳೆ ಮುಂದುವರೆಯುವ ಸಾಧ್ಯತೆ ಇದೆ.

    ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ರಾತ್ರಿಪೂರ್ತಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾರಾಂತ್ಯದವರೆಗೆ ಭಾರೀ ಮಳೆ ಸಾಧ್ಯತೆಯಿದ್ದು, ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ನದಿ ಸಮುದ್ರ ತೀರದ ಜನಕ್ಕೆ ಎಚ್ಚರಿಕೆ ರವಾನೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕಲ್ಲಿ ಮೂರು ಮನೆಗಳ ಹಂಚು ಹಾರಿಹೋಗಿದ್ದು, ತಲಾ ಏಳು ಸಾವಿರ ರುಪಾಯಿಯಷ್ಟು ನಷ್ಟವಾಗಿದೆ ಎಂದು ಮನೆ ಮಾಲೀಕರಾದ ಭಾಸ್ಕರ್, ಲಿಲಾತಾ, ಬೇಬಿ ಅವರು ಪಂಚಾಯತ್‍ಗೆ ದೂರಿದ್ದಾರೆ. ಎರ್ಲಪಾಡಿ ವ್ಯಾಪ್ತಿಯ ವಿಶ್ವನಾಥ ಎಂಬವರ ಮನೆ ಮೇಲೆ ಮರ ಬಿದ್ದಿದ್ದು ಸುಮಾರು 10 ಸಾವಿರ ರುಪಾಯಿ ನಷ್ಟವಾಗಿದೆ.

  • ಕೊಡಗಿನಲ್ಲಿ ಬೆಳಗ್ಗೆಯಿಂದಲೂ ಉತ್ತಮ ಮಳೆ

    ಕೊಡಗಿನಲ್ಲಿ ಬೆಳಗ್ಗೆಯಿಂದಲೂ ಉತ್ತಮ ಮಳೆ

    ಮಡಿಕೇರಿ : ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದೆ. ಬೆಳಗ್ಗೆಯಿಂದಲೇ ಜಿಲ್ಲೆಯ ಭಾಗಮಂಡಲ, ತಲಕಾವೇರಿ ನಾಪೋಕ್ಲು, ಮಡಿಕೇರಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ದಿನವಿಡೀ ಬಿಟ್ಟು ಬಿಟ್ಟು ಸುರಿಯುತ್ತಿದೆ.

    ತೀವ್ರ ಗಾಳಿ ಬೀಸುತ್ತಿದ್ದು ಜೊತೆಗೆ ಸಂಪೂರ್ಣ ಮಂಜಿನಿಂದ ಕೂಡಿದೆ. ಹೀಗಾಗಿ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶೀತಗಾಳಿಯಿಂದ ಜನರು ತತ್ತರಿಸುವಂತೆ ಮಾಡಿದೆ. ಇನ್ನು ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ರೈತ ವರ್ಗ ಹರ್ಷಗೊಂಡಿದ್ದು, ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದಗೊಳಿಸುತ್ತಿದೆ.

    ಹಲವು ರೈತರು ಬಿತ್ತನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಉತ್ತಮ ಮಳೆ ಇಂದು ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳ ಪ್ರವಾಹ ಮತ್ತು ಭೂ ಕುಸಿತದ ಆತಂಕ ಜನರಲ್ಲಿ ಮನೆ ಮಾಡಿದೆ.

  • ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಎರಡು ವರ್ಷಗಳಿಂದಲೂ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಒಂದು ವರ್ಷ ಭೀಕರ ಭೂಕುಸಿತವಾಗಿದ್ದರೆ, 2019ರಲ್ಲಿ ದೊಡ್ಡ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ದುರಂತ ಈ ಬಾರಿಯೂ ಕೊಡಗಿಗೆ ಎದುರಾಗುತ್ತಾ ಅನ್ನೋ ಅನುಮಾನ ದಟ್ಟವಾಗಿದೆ.

    ಈಗಾಗಲೇ ಮುಂಗಾರು ಮಾರುತಗಳು ಕೇರಳಕ್ಕೆ ಎಂಟ್ರಿಯಾಗಿದ್ದು, ಇನ್ನೆರಡು ದಿನಗಳಲ್ಲೇ ರಾಜ್ಯಕ್ಕೂ ಮಳೆ ಕಾಲಿಡಲಿದೆ. 2018ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಭೀಕರ ಭೂಕುಸಿತಗಳು ಸಂಭವಿಸಿದ್ದರೆ, 2019ರಲ್ಲಿ ಮೂರು ತಾಲೂಕುಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲದೆ ವಿರಾಜಪೇಟೆ ತಾಲೂಕಿನಲ್ಲಿ ಭೂಕುಸಿತವೂ ಸಂಭವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ರು. ಹೀಗಾಗಿಯೇ ಈ ಬಾರಿ ಜಿಲ್ಲಾಡಳಿತ ಮೂರು ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿದೆ.

    ಮತ್ತೊಂದೆಡೆ ಹವಾಮಾನ ಇಲಾಖೆ ಈ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತೇ ಅನ್ನೋ ಮುನ್ಸೂಚನೆ ನೀಡಿದೆ. ಇಷ್ಟೇ ಅಲ್ಲ ರಾಜ್ಯದ ಪ್ರಸಿದ್ದ ಸ್ವಾಮೀಜಿಯೊಬ್ಬರು ಕೊಡಗಿನಲ್ಲಿ ಭೂಕಂಪ ಆಗಿ ಇಡೀ ಜಿಲ್ಲೆಯೇ ನೆಲಸಮವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಹೇಳುತ್ತಲೇ ಕೊಡಗಿನ ಬೆಳೆಗಾರರ ಸಂಘವು ಆ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮತ್ತೊಂದೆಡೆ ಮಡಿಕೇರಿ ವಿಜಯ ವಿನಾಯಕ ದೇವಾಲಯದ ಅರ್ಚಕರು ಜೋತಿಷ್ಯಿಯೂ ಆಗಿರುವ ಕೃಷ್ಣ ಭಟ್ ಅವರು ಕೊಡಗಿನಲ್ಲಿ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಮಳೆಯಿಂದ ಅವಾಂತರ, ಅವಘಡಗಳು ಸಂಭವಿಸುತ್ತವೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ಭವಿಷ್ಯ ಹೇಳಿದ್ದಾರೆ.

    ಕಳೆದ ಎರಡು ವರ್ಷಗಳು ಜಿಲ್ಲೆಯಲ್ಲಿ ಮಳೆಯಿಂದ ಆದ ದುರಂತಗಳ ಅನುಭವ ಜಿಲ್ಲಾಡಳಿತಕ್ಕೆ ಇರುವುದರಿಂದ ಈಗಾಗಲೇ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಸದ್ಯದಲ್ಲೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೂಡ ಅಗ್ನಿ ಶಾಮಕ ತಂಡ, ಡಿಆರ್ ಪೊಲೀಸ್, ಹೋಂ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತರಬೇತಿ ನೀಡಿದೆ.

    ಕೊಡಗಿನ ಹಾರಂಗಿ ಜಲಾಶಯ, ಕೂಟ್ಟು ಹೊಳೆಗಳಲ್ಲಿ ಬೋಟ್‍ಗಳ ಮೂಲಕ ತಾಲೀಮು ನಡೆಸಿದೆ. ಅಷ್ಟೇ ಅಲ್ಲದೆ ಪ್ರಾಕೃತಿಕ ವಿಕೋಪ ಎದುಸಿರುವುದಕ್ಕಾಗಿ ಮೂರು ತಾಲೂಕುಗಳ ತಹಶೀಲ್ದಾರ್ ಗಳ ಖಾತೆಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಅಲ್ಲದೆ ಪ್ರತೀ ಗ್ರಾಮ ಪಂಚಾಯಿತಿಗೆ 50 ಸಾವಿರ ರೂಪಾಯಿ, ಪ್ರತಿ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂಪಾಯಿ ಮತ್ತು ನಗರ ಸಭೆಗೆ 2 ಲಕ್ಷ ರೂಪಾಯಿ ಹಣವನ್ನು ಹಾಕಲಾಗಿದೆ.

    ಈ ಎಲ್ಲಾ ಸಿದ್ಧತೆಗಳನ್ನು ನೋಡಿದ್ರೆ ಕೊಡಗಿಗೆ ನಿಜವಾಗಿಯೂ ಮತ್ತೆ ಪ್ರವಾಹ ಎದುರಾಗುತ್ತಾ, ಪ್ರಾಕೃತಿಕ ವಿಕೋಪ ಉಂಟಾಗುತ್ತಾ. ಅದಕ್ಕಾಗಿಯೇ ಜಿಲ್ಲಾಡಳಿತ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅನ್ನೋ ಅನುಮಾನ ಮೂಡಿದೆ.

  • ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.

    ವಿಶ್ವ ಕ್ರಿಕೆಟಿನ ಅತ್ಯುತ್ತಮ ಆಟಗಾರರು ಐಪಿಎಲ್ ಆಡುತ್ತಾರೆ. ಈ ಲೀಗ್ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯದ ಮೇಲೆ ನಮ್ಮ ನಿರ್ಧಾರ ತೀರ್ಮಾನವಾಗುತ್ತದೆ. ಕ್ರಮಬದ್ಧ ವಿಧಾನದಲ್ಲಿ ಲೀಗ್ ಆಯೋಜಿಸುವ ಅಗತ್ಯ ದೇಶದಲ್ಲಿ ನಿರ್ಮಾಣವಾಗಿದೆ. ಲಾಕ್‍ಡೌನ್ ಮುಗಿಯುತ್ತಿದಂತೆ ಮಾನ್ಸೂನ್ ಆರಂಭವಾಗುತ್ತದೆ. ಆ ಬಳಿಕವೇ ಐಪಿಎಲ್ ಕುರಿತು ಯೋಚಿಸಬೇಕಿದೆ. ಪ್ರೇಕ್ಷಕರಿಲ್ಲದೇ ಐಪಿಎಲ್ ನಿರ್ವಹಿಸುವುದರಿಂದ ಉಂಟಾಗುವ ನಷ್ಟ ಕಡಿಮೆ ಎಂದು ಮಾಧ್ಯಮಗಳೊಂದಿಗೆ ಜೋಹ್ರಿ ಹೇಳಿದ್ದಾರೆ.

    ಮಾರ್ಚ್ 29ರಂದು ಪ್ರಾರಂಭವಾಬೇಕಿದ್ದ ಐಪಿಎಲ್ 2020 ಆವೃತ್ತಿ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಐಪಿಎಲ್ ಆವೃತ್ತಿ ಆಯೋಜಿಸಲು ಕನಿಷ್ಠ 2 ತಿಂಗಳ ಅವಧಿ ಅಗತ್ಯವಿದ್ದು, ದೇಶದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಮತ್ತೆ ಲಾಕ್‍ಡೌನ್ ಅವಧಿ ಹೆಚ್ಚಿಸಲಾಗುತ್ತಾ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಇತ್ತ ಭಾರತದಲ್ಲಿ ಜೂನ್‍ನಿಂದಲೇ ಮಳೆ ಆರಂಭವಾಗುವ ಸೂಚನೆ ಲಭಿಸುತ್ತಿದ್ದು, ಸೆಪ್ಟೆಂಬರ್ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಪರಿಣಾಮ ಅಕ್ಟೋಬರ್-ನವೆಂಬರ್ ನಡುವಿನ ಅವಧಿಯಲ್ಲಿ ಮಾತ್ರ ಐಪಿಎಲ್ 2020ರ ಆವೃತ್ತಿ ನಿರ್ವಹಿಸಲು ಅವಕಾಶವಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೂ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಟಿ20 ವಿಶ್ವಕಪ್ ಮುಂದೂಡಿದರೆ ಮಾತ್ರ ಐಪಿಎಲ್ ನಿರ್ವಹಿಸುವ ಅವಕಾಶವಿದೆ. ಮೇ28ಕ್ಕೆ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಐಸಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ.