Tag: ಮಾನ್ಸೂನ್

  • ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಲಕ್ನೋ: ಮುಂಗಾರು (Monsoon) ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ (Uttar Pradesh) ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಮುಖ್ಯವಾಗಿ ಸಂಗಮ್‌ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್‌ರಾಜ್‌ನ (Prayagraj) ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದನ್ನೂ ಓದಿ: ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

    17 ಜಿಲ್ಲೆಗಳಲ್ಲಿ ಪ್ರವಾಹ
    ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್‌ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ. ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಪ್ರಯಾಗ್‌ರಾಜ್‌ನಲ್ಲಿ ಹದಗೆಟ್ಟ ಪರಿಸ್ಥಿತಿ
    ಪ್ರಯಾಗ್‌ರಾಜ್‌ನಲ್ಲಿ ಗಂಗಾ-ಯಮುನಾ ಸಂಗಮದ ನಂತರ ಬರುವ ಪ್ರದೇಶಗಳು ಕೆಟ್ಟ ಸ್ಥಿತಿಯಲ್ಲಿವೆ. ಉಕ್ಕಿದ ಗಂಗೆ, ಯಮುನೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ NDRF, SDRF ತಂಡಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಉಳಿದಂತೆ ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

  • ಮಳೆಗಾಲದಲ್ಲಿ ಮಹಿಳೆಯರು ಗಮನಿಸಬೇಕಾದ ಡ್ರೆಸ್ಸಿಂಗ್ ಟಿಪ್ಸ್!

    ಮಳೆಗಾಲದಲ್ಲಿ ಮಹಿಳೆಯರು ಗಮನಿಸಬೇಕಾದ ಡ್ರೆಸ್ಸಿಂಗ್ ಟಿಪ್ಸ್!

    ಅಂತೂ ಇಂತೂ ಮಳೆಗಾಲವೂ ಶುರುವಾಯಿತು. ಈ ಮಳೆಗಾಲದಲ್ಲಿ ಮನೆಯಲ್ಲಿ ಕೂತು ಬಿಸಿ ಬಿಸಿ ಕಾಫಿ, ಟೀ ಜೊತೆ ಬಜ್ಜಿ ಬೋಂಡಾ ತಿಂದು ಕಾಲ ಕಳೆಯೋದು ಒಂದು ಖುಷಿಯಾದ್ರೆ. ಮನೆಯಿಂದ ಹೊರಗೆ ಕಾಲಿಟ್ಟಾಗ ಈ ಚಿತ್ರಣವೇ ಬದಲಾಗುತ್ತದೆ. ಜಿಟಿ ಜಿಟಿ ಸುರಿಯುವ ಮಳೆ, ರಸ್ತೆಯಲ್ಲಿ ನಿಂತ ಕೆಸರು ನೀರಿನಿಂದ ಹೊರಗಡೆ ಹೋಗುವಾಗ ಯಾವ ಬಟ್ಟೆ ಹಾಕೋದು ಯಾವ ಶೂ ಹಾಕೋದು ಅನ್ನೋದೇ ದೊಡ್ಡ ತಲೆನೋವುವಾಗಿದೆ.

    ಈ ಮಳೆಗಾಲದಲ್ಲಿ (Rainy Season) ಬಟ್ಟೆ ಕೇವಲ ಅಂದ ಹೆಚ್ಚಿಸೋದು ಮಾತ್ರವಲ್ಲ. ಮಳೆಗೆ ಸರಿಹೊಂದುವಂತೆ ಹಾಗೂ ದೇಹಕ್ಕೆ ಬೆಚ್ಚಗಿನ ಫೀಲ್ ನೀಡುವುದು ಸಹ ತುಂಬಾ ಮುಖ್ಯ. ಹಾಗಾಗಿ ನಾವು ಬಟ್ಟೆಗಳ ಆಯ್ಕೆಯಲ್ಲಿ ಕೊಂಚ ಚ್ಯೂಸಿಯಾಗಿರಬೇಕು. ಮಳೆಗಾಲದಲ್ಲಿ ಬಟ್ಟೆ ಆಯ್ಕೆ ಹೇಗಿರಬೇಕೆಂದರೆ ಧರಿಸಲು ಕಂಫರ್ಟ್‌ ಇರಬೇಕು. ನೋಡಲು ಸುಂದರವಾಗಿ ಕಾಣುವಂತೆ ಇರಬೇಕು.

    ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ
    ಮಳೆಗಾಲದಲ್ಲಿ ಹೊರಗಡೆ ಹೋಗುವಾಗ ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಬೇಕು. ಕೆಂಪು, ಕಪ್ಪು, ಕಡು ನೀಲಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಯಾಕೆಂದರೆ ತಿಳಿ ಬಣ್ಣದ ಡ್ರೆಸ್‌ಗಳನ್ನು ಧರಿಸುವುದರಿಂದ ಕೆಸರು ನೀರಿನ ಕಲೆಗಳು, ವಾಹನದ ಗ್ರೀಸ್‌ ಕಲೆಗಳು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಡಾರ್ಕ್‌ ಕಲರ್‌ನ ಬಟ್ಟೆಗಳನ್ನು ಧರಿಸುವುದು ಅತ್ಯಂತ ಉತ್ತಮವಾಗಿದೆ.

    ಲೆಹಂಗಾ, ಅನಾರ್ಕಲಿ ಡ್ರೆಸ್‌ಗಳು ಬೇಡ
    ಇನ್ನು ಈ ಮಾನ್ಸೂನ್‌ ಸಮಯದಲ್ಲಿ ಉದ್ದನೆಯ ಬಟ್ಟೆಗಳನ್ನು ಧರಿಸುವುದನ್ನು ಅವಾಯ್ಡ್‌ ಮಾಡಬೇಕು. ಲೆಹಂಗಾ, ಅನಾರ್ಕಲಿ ಅಥವಾ ಜೀನ್ಸ್‌ ಪ್ಯಾಂಟ್‌ಗಳನ್ನು ಬಳಸದೇ ಇರುವುದು ಉತ್ತಮ. ಲೆಹಂಗಾ, ಸೀರೆ, ಅನಾರ್ಕಲಿ ಬಟ್ಟೆಗಳು ಮಳೆಯಲ್ಲಿ ಒದ್ದೆಯಾದರೆ ತುಂಬಾ ಭಾರವೆನಿಸುತ್ತದೆ. ಅಲ್ಲದೇ ಬಳಿಕ ಅನ್‌ಕಂಪರ್ಟ್‌ ಫೀಲ್‌ ಸಹ ನೀಡುತ್ತದೆ. ಜೀನ್ಸ್‌ ಪ್ಯಾಂಟ್‌ಗಳು ಮಳೆಗಾಲದಲ್ಲಿ ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ ಇಂತಹ ಬಟ್ಟೆಗಳನ್ನು ಧರಿಸದೇ ಇರುವುದು ಒಳ್ಳೆಯದು.

    ಶಾರ್ಟ್‌ ಡ್ರೆಸ್‌ಗಳು ಉತ್ತಮ
    ಮಳೆಗಾಲದಲ್ಲಿ ಹೆಚ್ಚು ಉದ್ದವಾಗಿರುವ ಬಟ್ಟೆಗಳ ಬದಲಾಗಿ ಶಾರ್ಟ್‌ ಡ್ರೆಸ್‌ಗಳನ್ನು ಧರಿಸಬೇಕು. ಇದು ಮಳೆಯಿಂದ ನಿಮ್ಮ ಬಟ್ಟೆಗಳು ಒದ್ದೆಯಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುತ್ತದೆ. ಆದ್ದರಿಂದ ಸಿಂಪಲ್‌ ಕುರ್ತಾ, ಶಾರ್ಟ್‌ ಡ್ರೆಸ್‌, ಲೆಗ್ಗಿನ್ಸ್‌ ಅಥವಾ ಕಾಟನ್‌ ಪ್ಯಾಂಟ್‌ ಧರಿಸುವುದರಿಂದ ಉತ್ತಮ ಅನುಭವ ನೀಡುತ್ತದೆ.

    ಮೇಕಪ್‌ ಬಗ್ಗೆಯೂ ಗಮನವಿರಲಿ
    ಇನ್ನೂ ಹುಡುಗಿಯರಿಗೆ ಈ ಮಳೆಗಾಲದಲ್ಲಿ ಮೇಕಪ್‌ದೇ ಚಿಂತೆಯಾಗಿರುತ್ತದೆ. ಮಳೆಗೆ ಒದ್ದೆಯಾಗಿ ಮೇಕಪ್‌ ಹಾಳಾಗಬಹುದೆಂಬ ಭಯವಿದ್ದರೆ, ಆದಷ್ಟು ಲೈಟ್‌ ಮೇಕಪ್‌ನ್ನು ಮಾಡಬೇಕು. ಇಲ್ಲದಿದ್ದರೆ ವಾಟರ್‌ ಪ್ರೂಫ್‌ ಮೇಕಪ್‌ಗಳನ್ನು ಧರಿಸುವುದರಿಂದ ಮಳೆಗಾಲದಲ್ಲಿ ಚಿಂತೆಯಿಲ್ಲದೆ ಸುತ್ತಾಟಬಹುದಾಗಿದೆ. ಇನ್ನು ಈ ವೇಳೆ ಡಾರ್ಕ್‌ ಲಿಪ್‌ಸ್ಟಿಕ್‌ ಧರಿಸುವುದರಿಂದ ಮಳೆಗಾಲದಲ್ಲಿ ಒದ್ದೆಯಾದರೂ ಆಡ್‌ ಆಗಿ ಕಾಣುವುದಿಲ್ಲ. ಲೈಟ್ ಫೌಂಡೇಶನ್, ವಾಟರ್ ಪ್ರೂಫ್ ಮಸ್ಕರಾ ಮತ್ತು ಟಿಂಟೆಡ್ ಲಿಪ್ ಬಾಮ್ ಉತ್ತಮ ಆಯ್ಕೆಗಳಾಗಿವೆ.

    ಸ್ಲೀಪ್, ಶೂಗಳನ್ನು ಅವಾಯ್ಡ್ ಮಾಡಿ
    ಮಳೆಗಾಲದಲ್ಲಿ ಕೇವಲ ಬಟ್ಟೆ ಮಾತ್ರವಲ್ಲ ಚಪ್ಪಲಿ ಆಯ್ಕೆ ಕೂಡ ಅಷ್ಟೇ ಇಂಪಾರ್ಟೆಂಟ್. ಮಳೆಗಾಲದಲ್ಲಿ ಸ್ಲಿಪ್ಪರ್ ಬಳಕೆಯಿಂದ ಬಟ್ಟೆಗಳು ಕೊಳೆಯಾಗುತ್ತದೆ. ಸ್ಲಿಪ್ಪರ್ ಗಳನ್ನು ಬಳಸಿದರೆ, ಅದರಿಂದ ಬಟ್ಟೆಗಳಿಗೆ ಕೆಸರು ನೀರು ಬಿದ್ದು ಹಾಳುಮಾಡುತ್ತದೆ. ಅದಕ್ಕಾಗಿ ರಬ್ಬರ್ ಶೂಗಳು, ಉಂಗುಷ್ಠವಿರುವ ಚಪ್ಪಲಿಗಳ ಅಥವಾ ಬೆಲ್ಟ್ ಚಪ್ಪಲಿಗಳ ಬಳಕೆ ಒಳ್ಳೆಯದು.

    ಮಳೆಗಾಲದಲ್ಲಿ ಯಾವಾಗಲೂ ತೆಳುವಾಗಿರುವ, ಕಾಟನ್ ಡ್ರೆಸ್ ಹಾಗೂ ಒಣಗಿಸಲು ಸುಲಭವಾಗುವ ಬಟ್ಟೆಗಳನ್ನು ಧರಿಸಬೇಕು. ಮಾನ್ಸೂನ್ ಸಮಯದಲ್ಲಿ ಮಹಿಳೆಯರು ಆರಾಮದಾಯಕ ಮತ್ತು ಸ್ಟೈಲಿಶ್ ಆಗಿ ಕಾಣಲು ಸರಿಯಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

  • Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ತಾಪಮಾನ ಹೆಚ್ಚುತ್ತಿದ್ದು ಜನರು ಮನೆಯಿಂದ ಹೊರ ಬರಲು‌ ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ತೀವ್ರ ಬಿಸಿಲಿಸಿದ್ದು, ಗಂಟೆಗೆ 30-40 ಕಿಮೀ ವೇಗದಲ್ಲಿ ಬಿಸಿ ಗಾಳಿ ಬೀಸಲಿದೆ.

    weather (1)

    ಮಂಗಳವಾರ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ಬುಧವಾರ ಇದು 41 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿಪರ್‌ ಜಾಯ್‌ ಚಂಡಮಾರುತ (Biparjoy Cyclone) ಇಂದು‌ ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ ಭಾಗದಲ್ಲಿ ಅಪ್ಪಳಿಸುತ್ತಿರುವ ಹಿನ್ನಲೆ‌ ಬಿಸಿ ಗಾಳಿಯ ಪ್ರಮಾಣ ತಗ್ಗಲಿದ್ದು ಮುಂದಿನ 4 ದಿನಗಳ 37°-39° ಸೆಲ್ಸಿಯಸ್‌ ತಾಪಮಾನ ಇರಲಿದೆ‌ ಎಂದು ಭಾರತೀಯ ಹವಾಮಾನ ‌ಇಲಾಖೆ‌ (IMD) ಹೇಳಿದೆ. ಇದನ್ನೂ ಓದಿ: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    weather

    ಸದ್ಯ ತೀವ್ರ ಬಿಸಿಲಿರುವ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬರಲು‌ ಹಿಂದೇಟು‌ ಹಾಕ್ತಿದ್ದಾರೆ. ಮಧ್ಯಾಹ್ನದ ವೇಳೆ‌ ಜನರ ಸಂಚಾರ ‌ವಿರಳವಾಗಿದೆ. ಉರಿ ಬಿಸಿಲಿನಿಂದ ಜನರಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದ್ದು ಬೆವರಿನಿಂದ ತುರಿಕೆ ಸಮಸ್ಯೆಯೂ‌ ಕಂಡು ಬರುತ್ತಿದೆ. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

    ನೈಋತ್ಯ ಮಾನ್ಸೂನ್ ಕಳೆದ ಗುರುವಾರ ಕೇರಳ ಕರಾವಳಿ ಭಾಗಕ್ಕೆ ಆಗಮಿಸಿದೆ. ದೆಹಲಿಯಲ್ಲಿ ಜೂನ್ 27ರ ವೇಳೆಗೆ ಮಾನ್ಸೂನ್ ಕಾಣಿಸಿಕೊಳ್ಳಬೇಕಿತ್ತು. ಆದರೆ ದೆಹಲಿಯಲ್ಲಿ ಮಾನ್ಸೂನ್ (Monsoon) ಆರಂಭವಾಗುವ ಬಗ್ಗೆ‌ ಹವಾಮಾನ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ. ಜೂನ್ 3ನೇ ವಾರದಲ್ಲಿ ಮಾನ್ಸೂನ್ ಬಗ್ಗೆ ಅಂದಾಜಿಸಬಹುದು ಎನ್ನಲಾಗಿದೆ.

  • ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

    ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

    ನವದೆಹಲಿ: ನೈಋತ್ಯ ಮುಂಗಾರು ಮಾರುತಗಳು (Southwest Monsoon) ಕಡೆಗೂ ದೇಶವನ್ನು ಪ್ರವೇಶಿಸಿವೆ. ಇಂದು ಮುಂಗಾರು ಮಾರುತಗಳು ಕೇರಳ (Kerala) ತೀರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿದೆ.

    ಹವಾಮಾನ ಇಲಾಖೆ ಅಂದಾಜಿಗಿಂತ ಮೂರು ದಿನ ತಡವಾಗಿ ಮುಂಗಾರು ದೇಶವನ್ನು ಪ್ರವೇಶಿಸಿದೆ. ಪ್ರಸ್ತುತ ಲಕ್ಷದ್ವೀಪ, ಕೇರಳ ಪ್ರಾಂತ್ಯದಲ್ಲಿ ಮುಂಗಾರು ಮಾರುತಗಳು ವಿಸ್ತರಿಸಿವೆ.

    ಮುಂಗಾರು ಪ್ರವೇಶದ ಬೆನ್ನಲ್ಲೇ ಬುಧವಾರದಿಂದ ಕೇರಳದಲ್ಲಿ ವಿಸ್ತಾರವಾಗಿ ಮಳೆ ಆಗುತ್ತಿದೆ. ಮುಂದಿನ 48 ಗಂಟೆಯಲ್ಲಿ ಕೇರಳದ ಇತರೇ ಪ್ರಾಂತ್ಯಗಳು ಸೇರಿ, ಕರ್ನಾಟಕ, ತಮಿಳುನಾಡಿಗೂ ಮುಂಗಾರು ಮಾರುತಗಳು ಹಬ್ಬಲಿವೆ. ಇದನ್ನೂ ಓದಿ: ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

    ಸಾಧಾರಣವಾಗಿ ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್‌ ಮಾರುತಗಳು ಕೇರಳವನ್ನು ಪ್ರವೇಶಿಸುತ್ತವೆ. ಕಳೆದ ವರ್ಷ ಮೇ 29, 2021ರಲ್ಲಿ ಜೂನ್‌ 3, 2020ರಲ್ಲಿ ಜೂನ್‌ 1, 2019ರಲ್ಲಿ ಜೂನ್‌8, 2018ರಲ್ಲಿ ಮೇ 29ಕ್ಕೆ ನೈರುತ್ಯ ಮಾರುತ ದೇಶವನ್ನು ಪ್ರವೇಶಿಸಿದ್ದವು.

  • ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಢಾಕಾ: ಸತತ ಸುರಿಯುತ್ತಿರುವ ಮುಂಗಾರು ಮಳೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ 25 ಮಂದಿ ಸಾವನ್ನಪ್ಪಿದ್ದು, 40 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತೀವ್ರ ಮಳೆಯ ಕಾರಣ ಬಾಂಗ್ಲಾ ದೇಶಾದ್ಯಂತ ಪ್ರೌಢಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಾಲಾ ತರಗತಿ ಕೊಠಡಿಗಳಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ದೇಶದ ಈಶಾನ್ಯ ಭಾಗವು ಬಹುತೇಕ ನೀರಿನಿಂದ ಆವೃತ್ತವಾಗಿದೆ. ವಾರಾಂತ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಅವರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಸೇನಾ ಪಡೆಗಳನ್ನು ರವಾನಿಸಿದೆ. ಇದನ್ನೂ ಓದಿ: ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ

    ಕೆಲ ಹಳ್ಳಿಗಳು ಕೆಲ ಗಂಟೆಗಳಲ್ಲೇ ಮುಳುಗಿ ಹೋಗಿದ್ದು, ಶಾಲೆಗಳನ್ನೇ ಆಶ್ರಯತಾಣವಾಗಿ ಮಾಡಿಕೊಳ್ಳಲಾಗಿದೆ. ಕೆಲವರು ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಂಡರೆ, ಇನ್ನೂ ಕೆಲವರು ನೀರಿನ ದಡದಲ್ಲೇ ಪ್ರಾಣ ಉಳಿಸಿಕೊಳ್ಳಲು ತವಕಿಸುತ್ತಿದ್ದಾರೆ.  ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಹಳ್ಳಿ-ಹಳ್ಳಿಗಳನ್ನು ಸುತ್ತುವರಿದಿರುವ ನೀರಿನಿಂದಾಗಿ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಕಾರ್ಯಾಚರಣೆಗೆ ಇಳಿದಿರುವ ಸೇನೆಯು ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುತ್ತಿದೆ. ನಿನ್ನೆ ಒಂದೇ ದಿನ 21 ಮಂದಿ ಮೃತಪಟ್ಟಿದ್ದು, ಈವರೆಗೆ 25 ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    Live Tv

  • ಈ ಬಾರಿ ಮಾನ್ಸೂನ್‍ನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ – IMD

    ಈ ಬಾರಿ ಮಾನ್ಸೂನ್‍ನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ – IMD

    ನವದೆಹಲಿ: ಈ ಬಾರಿ ಮಾನ್ಸೂನ್‍ನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಹೇಳಿದೆ. ತನ್ನ ಮೊದಲ ದೀರ್ಘಾವಧಿಯ ಮುನ್ಸೂಚನೆಯಲ್ಲಿ ಪ್ರಕಟಿಸಿದೆ. ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಯ 99 ಪ್ರತಿಶತದಷ್ಟು ಇರುತ್ತದೆ ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.

    ಉತ್ತರ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯಾದರೆ, ಈಶಾನ್ಯ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳು ಮತ್ತು ದಕ್ಷಿಣ ಪರ್ಯಾಯ ದ್ವೀಪದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ: ಮಾಜಿ ಸ್ಪೀಕರ್ ರಮೇಶ್ ಕುಮಾರ್

    ಕೇರಳದಲ್ಲಿ ಜೂನ್ 1 ರಿಂದ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಇದು ರೈತರಿಗೆ ಅಗತ್ಯವಿರುವ ಸುಮಾರು 70 ಪ್ರತಿಶತದಷ್ಟು ಮಳೆಯನ್ನು ಒದಗಿಸುತ್ತದೆ. ಇದನ್ನೂ ಓದಿ: ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಡಿಕೆಶಿ ಜಂಪ್

  • ಗಿಡದಲ್ಲೇ ಕೊಳೆಯುತ್ತಿದೆ ಕಾಫಿ – ಆತಂಕದಲ್ಲಿ ಬೆಳೆಗಾರರು

    ಗಿಡದಲ್ಲೇ ಕೊಳೆಯುತ್ತಿದೆ ಕಾಫಿ – ಆತಂಕದಲ್ಲಿ ಬೆಳೆಗಾರರು

    ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಏಳೆಂಟು ದಿನಗಳ ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಕಾಫಿ ಬೀಜಗಳು ಗಿಡದಲ್ಲೇ ಕೊಳೆಯುತ್ತಿವೆ.

    ಮೂಡಿಗೆರೆ ತಾಲೂಕಿನ ತುರುವೆ ಗ್ರಾಮದ ರಘು ಎಂಬವರ ತೋಟದಲ್ಲಿ ಕಾಫಿ ಬೀಜ ಗಿಡದಲ್ಲೇ ಕೊಳೆಯುತ್ತಿದೆ. ಇದರಿಂದ ಕಾಫಿ ಬೆಳೆಗೆ ಕೊಳೆ ರೋಗದ ಭೀತಿ ಎದುರಾಗಿದೆ. ಏಳೆಂಟು ದಿನಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಕಾಫಿ ಗಿಡದಲ್ಲೇ ಕೊಳೆಯು ಸ್ಥಿತಿ ನಿರ್ಮಾಣವಾಗಿದೆ. ಮಳೆ ಗಾಳಿಗೆ ಸಾಕಷ್ಟು ಕಾಫಿ ನೆಲಕಂಡಿದೆ. ಅಳಿದುಳಿದ ಕಾಫಿ ಈಗ ಒಣಗಲು ಆರಂಭವಾಗಿದೆ. ಕಾಫಿ ಜಿಲ್ಲೆಯ ಪ್ರಮುಖ ಬೆಳೆ. ಕಾಫಿಯಿಂದಲೇ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅದರಲ್ಲಿ ಮಧ್ಯಮದ ವರ್ಗದ ಬೆಳೆಗಾರರೇ ಜಾಸ್ತಿ. ಆದರೆ ಎರಡ್ಮೂರು ವರ್ಷಗಳಿಂದ ಬೆಳೆಗಾರರ ಸ್ಥಿತಿ ಇದೇ ಆಗಿದೆ.

    ಕಳೆದ ಎರಡು ವರ್ಷ ತಿಂಗಳುಗಟ್ಟಲೇ ಮಳೆ ಸುರಿದರು ಈ ರೀತಿ ಜುಲೈ ವೇಳೆಗೆ ಕಾಫಿ ಗಿಡದಲ್ಲೇ ಒಣಗಿದ್ದು ತೀರಾ ವಿರಳ. ಮಳೆ-ಗಾಳಿಗೆ ಉದುರಿತ್ತು. ಆದರೆ ಒಣಗಿರಲಿಲ್ಲ. ಈ ವರ್ಷ ಏಳೆಂಟು ದಿನದ ಮಳೆ ಬಳಿಕ ಗಿಡದಲ್ಲೇ ಒಣಗುತ್ತಿದೆ. ಇದು ಬೆಳೆಗಾರರಿಗೆ ನುಂಗಲಾರಾದ ಬಿಸಿ ತುಪ್ಪವಾಗಿದೆ. ಇದನ್ನೂ ಓದಿ: 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    ಕಾಫಿ ಈಗ ಉದುರಿದರೆ ಅಥವಾ ಒಣಗಿದರೆ ಬೆಳೆಗಾರರ ಕಥೆ ಮುಗಿಯಿತು. ಅದು ಯಾವುದಕ್ಕೂ ಉಪಯೋಗಕ್ಕೆ ಬರಲ್ಲ. ಜಿಲ್ಲೆಯ ಕಾಫಿ ಬೆಳೆಗಾರರ ಬದುಕು ಕಳೆದ ಎರಡ್ಮೂರು ವರ್ಷಗಳಿಂದ ಇದೇ ಆಗಿದೆ. ಕಳೆದೆರಡು ವರ್ಷವೂ ಶೇಕಡ 50ರಷ್ಟು ಕಾಫಿ ಮಣ್ಣು ಪಾಲಾಗಿತ್ತು. ಈಗ ಮಳೆಗಾಲದ ಆರಂಭದಲ್ಲೇ ಕಾಫಿ ಉದುರೋದು, ಗಿಡದಲ್ಲೇ ಕೊಳೆಯುವುದನ್ನ ಕಂಡು ಕಾಫಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಇದನ್ನೂ ಓದಿ: ರೆಡ್ ಟೇಪ್ ಕಿತ್ತಾಕಿದ್ದಕ್ಕೆ ಗೇಟ್ ಲಾಕ್ ಮಾಡಿ ಕೀ ಎತ್ಕೊಂಡು ಹೋದ ಅಧಿಕಾರಿಗಳು

  • ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಇಂದಿನಿಂದ ಆಗಸ್ಟ್ 1 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

    ಇಂದು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ರಾಜ್ಯಾದ್ಯಂತ ಮಾನ್ಸೂನ್ ದುರ್ಬಲವಾಗಿದ್ರೂ ಉತ್ತರ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ 4 ಸೆಂ.ಮೀ ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ 3 ಸೆಂ.ಮೀ ಮಳೆಯಾಗಿದೆ.

    ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಜುಲೈ 28 ರಿಂದ ಆಗಸ್ಟ್ 1ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದು ಸಿ.ಎಸ್.ಪಾಟೀಲ್ ಹೇಳಿದ್ದಾರೆ.

    ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ:
    ರಾಜಧಾನಿಯಲ್ಲಿ ಮುಂದಿನ ಎರಡು ದಿನದವರೆಗೆ ಕೆಲವು ಕಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆ. ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂ. ದಾಖಲಾಗಿದೆ ಎಂದು ತಿಳಿಸಿದ್ದಾರೆ.

  • ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಡಿಸಿ ಖಾತೆಯಲ್ಲಿ 950 ಕೋಟಿ ಮೀಸಲು: ಸಚಿವ ಆರ್.ಅಶೋಕ್

    ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಡಿಸಿ ಖಾತೆಯಲ್ಲಿ 950 ಕೋಟಿ ಮೀಸಲು: ಸಚಿವ ಆರ್.ಅಶೋಕ್

    ಹಾಸನ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 950 ಕೋಟಿ ಹಣ ಪ್ರವಾಹ ನಿರ್ವಹಣೆಗೆಂದೇ ಮೀಸಲಿರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ .

    ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಕುಸಿತಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ಕೆಲ ದಿನದಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 950 ಕೋಟಿ ರೂ ಮೀಸಲಾಗಿಡಲಾಗಿದ್ದು, ಇದನ್ನು ಪ್ರವಾಹ ಪೀಡಿತ ಪ್ರದೇಶದ ಪರಿಹಾರ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ನಿನ್ನೆ 5 ಜಿಲ್ಲೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇಂದು ನಾನು ಗೋಪಾಲಯ್ಯ ಸಕಲೇಶಪುರದ ದೋಣಿಗಾಲ್ ಗೆ ಭೇಟಿ ನೀಡಿದ್ದೇನೆ. ಹೆದ್ದಾರಿ ದುರಸ್ತಿ ಹಾಗೂ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಮುಂದಿನ 25 ದಿನದೊಳಗೆ ಹೆದ್ದಾರಿ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ಇಡೀ ರಾಜ್ಯದಲ್ಲಿ ಮಳೆಯ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಹಾರ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ . ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ 10,000 ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಪೂರ್ಣ ಹಾನಿಯಾದ ಮನೆಗೆ ತಾತ್ಕಾಲಿಕ ದುರಸ್ತಿಗಾಗಿ ಒಂದು ಲಕ್ಷ ರೂ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿದರು .

    ನಾಳೆ ಸಿಎಂ ಯಡಿಯೂರಪ್ಪ ಅವರ ಜೊತೆ ಅತಿವೃಷ್ಟಿ ಹಾನಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದೇವೆ ಎಂದು ಹೇಳಿದ ಅವರು ಅತಿವೃಷ್ಟಿ ಪರಿಹಾರ ತೀವ್ರಗತಿಯಲ್ಲಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಪರಿಹಾರ ಕಾರ್ಯದಲ್ಲಿ ತೊಡಗಬೇಕು ಎಂದು ಸೂಚನೆ ನೀಡಿದ್ದೇನೆ. ಇದನ್ನೂ ಓದಿ: ಉಡುಪಿಯಲ್ಲಿ ರೆಡ್ ಅಲರ್ಟ್- ಆತಂಕದ ನಡುವೆ ಸಮುದ್ರಕ್ಕಿಳಿದ ನಾಡದೋಣಿ ಮೀನುಗಾರರು

    ಎಲ್ಲಾ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ಸೂಚನೆಯಂತೆ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಹಾಸನದಲ್ಲಿ 78 ಮನೆಗಳಿಗೆ ಭಾಗಶಃ ಹಾನಿಯಾಗಿದೆ, ಆರು ಮನೆಗಳು ಸಂಪೂರ್ಣ ಕುಸಿದಿದೆ. ಜಿಲ್ಲೆಯಲ್ಲಿ 50 ಸೇತುವೆ ಕೆರೆ ಕಟ್ಟೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶೇಕಡ 50ರಷ್ಟು ತುಂಬಿರುವ ಡ್ಯಾಂ ಗಳಿಂದ ನೀರು ಹೊರಬಿಡಲು ಸೂಚನೆ ನೀಡಲಾಗಿದ್ದು ಈಗಾಗಲೇ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಶೇಕಡ 50ರಷ್ಟು ತುಂಬಿದೆ ಎಂದು ಅಶೋಕ್ ಮಾಹಿತಿ ನೀಡಿದರು. ಇದನ್ನೂ ಓದಿ: ಮುಂದಿನ 4 ದಿನ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

  • ಉಡುಪಿಯಲ್ಲಿ ರೆಡ್ ಅಲರ್ಟ್- ಆತಂಕದ ನಡುವೆ ಸಮುದ್ರಕ್ಕಿಳಿದ ನಾಡದೋಣಿ ಮೀನುಗಾರರು

    ಉಡುಪಿಯಲ್ಲಿ ರೆಡ್ ಅಲರ್ಟ್- ಆತಂಕದ ನಡುವೆ ಸಮುದ್ರಕ್ಕಿಳಿದ ನಾಡದೋಣಿ ಮೀನುಗಾರರು

    ಉಡುಪಿ: ಹವಾಮಾನ ಇಲಾಖೆ ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧ ಆಗಿದ್ದು 4 ಮೀಟರ್ ವರೆಗೆ ಅಲೆಗಳು ಏಳಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದೆ. ಆದ್ರೂ ಆತಂಕದ ನಡುವೆಯೇ ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿದಿದ್ದಾರೆ.

    ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ ಎರಡು ದಿನಗಳ ಕಾಲ ಕಡಿಮೆಯಾಗಿದ್ದ ಮಾನ್ಸೂನ್ ನಿರಂತರವಾಗಿ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಅಲ್ಲಲ್ಲಿ ಮಳೆ ಬೀಳುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಉಡುಪಿ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಅರಬ್ಬಿ ಸಮುದ್ರದಲ್ಲಿ 60ರಿಂದ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು ನದಿಯ ನೀರು ಸರಾಗವಾಗಿ ಸಮುದ್ರ ಸೇರಲು ಸಾಧ್ಯವಾಗುತ್ತಿಲ್ಲ.

    ಯಾವುದೇ ಕಾರಣಕ್ಕೂ ನಾಡದೋಣಿ ಮೀನುಗಾರಿಕೆ ಬೋಟ್ ಗಳು ಸಮುದ್ರಕ್ಕೆ ಇಳಿಯಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಇಷ್ಟಾದರೂ ಕೆಲ ಮೀನುಗಾರರು ಆತಂಕದ ವಾತಾವರಣದ ನಡುವೆ ಸಮುದ್ರಕ್ಕಿಳಿದು ಕಸುಬು ಮಾಡಿದ್ದಾರೆ. ಗಾಳಿ ಮಳೆಯ ನಡುವೆ ಮೀನುಗಾರಿಕಾ ವೃತ್ತಿ ಮಾಡುವ ಮೊಗವೀರರು ಆತಂಕವನ್ನು ತಂದುಕೊಳ್ಳಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: ಉಡುಪಿಯ ವಿಶಾಲಾ ಮರ್ಡರ್- ಯುಪಿಯಲ್ಲಿ ತಲೆಮರೆಸಿಕೊಂಡಿರುವ ಕಾಂಟ್ರ್ಯಾಕ್ಟ್ ಕಿಲ್ಲರ್

    ಸಮುದ್ರದ ಪ್ರಕ್ಷುಬ್ಧತೆ ಜಾಸ್ತಿ ಇದ್ದು ಪ್ರವಾಸಿಗರು ಮಲ್ಪೆ ಮರವಂತೆ ಕಾಪು ಪಡುಬಿದ್ರೆಯಲ್ಲಿ ನೀರಿಗಿಳಿಯಬಾರದು ಸೂಚನೆಯನ್ನು ನೀಡಲಾ ಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮಳೆಯ ನಡುವೆ ಬಿಸಿಲಿನ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಇದನ್ನೂ ಓದಿ: ಕ್ಯಾಸಲ್‍ರಾಕ್ ಬಳಿ ರೈಲಿನ ಮೇಲೆ ಕುಸಿದ ಗುಡ್ಡ