Tag: ಮಾನಸ ಸರೋವರ

  • ಕೈಲಾಸ – ಮಾನಸ ಸರೋವರ ಯಾತ್ರೆ ಪುನರಾರಂಭಕ್ಕೆ ಭಾರತ, ಚೀನಾ ನಿರ್ಧಾರ

    ಕೈಲಾಸ – ಮಾನಸ ಸರೋವರ ಯಾತ್ರೆ ಪುನರಾರಂಭಕ್ಕೆ ಭಾರತ, ಚೀನಾ ನಿರ್ಧಾರ

    – ಬೀಜಿಂಗ್‌-ದೆಹಲಿ ನಡುವೆ ನೇರ ವಿಮಾನ ಸಂಪರ್ಕಕ್ಕೆ ತಾತ್ವಿಕ ಒಪ್ಪಿಗೆ

    ನವದೆಹಲಿ: 2025ರ ಬೇಸಿಗೆಯಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು (Kailash Mansarovar Yatra) ಪುನರಾರಂಭಿಸಲು ಭಾರತ-ಚೀನಾ ಒಪ್ಪಿಕೊಂಡಿವೆ. 2020ರ ನಂತರ ನಿಲ್ಲಿಸಲಾಗಿದ್ದ ಈ ಯಾತ್ರೆಯನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಭೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ನೇರ ವಿಮಾನ ಪುನಾರಂಭಿಸಲು ತಾತ್ವಿಕ ಒಪ್ಪಿಗೂ ಸಿಕ್ಕಿದೆ. ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಇದೇ ಜನವರಿ 26-27 ರಂದು ಬೀಜಿಂಗ್‌ಗೆ ಭೇಟಿ ನೀಡಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ, ಉಪ ವಿದೇಶಾಂಗ ಸಚಿವರ ಕಾರ್ಯವಿಧಾನ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿವೆ.

    ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾಡಿಕೊಂಡ ಒಪ್ಪಂದಗಳಿಗೆ ಅನುಗುಣವಾಗಿ ನಡೆದ ಈ ಸಭೆಯಲ್ಲಿ, ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಪುನರ್ನಿರ್ಮಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

    2020ರ ಕೋವಿಡ್‌ ಬಳಿಕ ಟಿಬೆಟ್‌ನ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುವ ಈ ಯಾತ್ರೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಗಲ್ವಾನ್‌ ಘರ್ಷಣೆಯ ಬಳಿಕ ಬೀಜಿಂಗ್ ಮತ್ತು ನವದೆಹಲಿ ನಡುವಿನ ಮುನಿಸು ಮತ್ತೆ ಮುಂದುವರಿದಿತ್ತು. ಇದೀಗ ಚೀನಾ ದ್ವಿಪಕ್ಷೀಯ ಒಪ್ಪಂದಗಳು ಬಲಗೊಂಡ ಬೆಲ್ಲನ್ನೇ ಮಹತ್ವದ ಬೆಳವಣಿಗೆ ಕಂದುಬಂದಿದೆ.

    ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆ ಪುನರಾರಂಭಿಸಲು ಇಂದಿನ ಸಭೆಯು ತಾತ್ವಿಕ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್‌

  • ಹುಬ್ಬಳ್ಳಿಯಲ್ಲಿ ಹೊತ್ತ ಹರಕೆ ತೀರಿಸಲು ‘ರಾಗಾ’ ಕೈಲಾಸ ಯಾತ್ರೆ

    ಹುಬ್ಬಳ್ಳಿಯಲ್ಲಿ ಹೊತ್ತ ಹರಕೆ ತೀರಿಸಲು ‘ರಾಗಾ’ ಕೈಲಾಸ ಯಾತ್ರೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾನಸ ಸರೋವರ ಮತ್ತು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಎಂಬ ಹರಕೆಯನ್ನು ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಂದು ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ತೆರಳಲಿದ್ದಾರೆ.

    ಆಗಸ್ಟ್ 31ರ ರಾತ್ರಿ ಮಾನಸ ಸರೋವರಕ್ಕೆ ತೆರಳಲಿದ್ದು, ಸೆಪ್ಟೆಂಬರ್ 1ರಂದು ಕ್ಷೇತ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತ್ ವಿಧಾನಸಭಾ ಚುನಾವಣೆ ಸಮಯದಿಂದ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ರೀತಿ ಕರ್ನಾಟಕದಲ್ಲಿಯೂ ಪ್ರಸಿದ್ಧ ಹಲವು ಪುಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.

    ಏನಿದು ಹರಕೆ?
    ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ತ ರಾಹುಲ್ ಗಾಂಧಿ ವಿಶೇಷ ವಿಮಾನದಲ್ಲಿ ನವ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟ್ಟಿದ್ದರು. ಆದ್ರೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಅಂದು ವಿಮಾನ ಹಠಾತ್ತನೇ 8 ಸಾವಿರ ಅಡಿಗೆ ಕುಸಿದಾಗ ಎಲ್ಲವು ಮುಗಿಯಿತು ಅಂತಾ ಅಂದುಕೊಂಡಿದ್ರಂತೆ. ವಿಮಾನ ಸರಿಯಾಗಿ ಲ್ಯಾಂಡ್ ಆದ್ರೆ ಕರ್ನಾಟಕ ಚುನಾವಣೆ ಬಳಿಕ ಕೈಲಾಸ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುತ್ತೇನೆ ಹರಕೆ ಹೊತ್ತಿಕೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡಿದ್ದರು. ಈ ಸಂಬಂಧ ರಾಹುಲ್ ಗಾಂಧಿ ಹರಕೆ ತೀರಿಸಲು ಹೊರಟ್ಟಿದ್ದಾರೆ ಎನ್ನಲಾಗುತ್ತಿದೆ.

    ಕೈಲಾಸ ಪರ್ವತ ಯಾತ್ರೆಗೆ ನೊಂದಣಿ ಮಾಡಿಸಲು ಫೆಬ್ರವರಿ 20ಕ್ಕೆ ಪ್ರಾರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಿದೆ. ಅಲ್ಲದೇ ಜೂನ್ 8ರಂದು ಯಾತ್ರೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತದೆ. ಅಲ್ಲದೇ ಮೌಂಟ್ ಅಬು ಪರ್ವತವನ್ನು ಹಿಂದೂ, ಮುಸ್ಲಿಂ, ಬೊನ್(ಟಿಬೆಟ್‍ನ ಧರ್ಮ) ಹಾಗೂ ಜೈನ್ ನಾಲ್ಕೂ ಧರ್ಮಗಳಲ್ಲಿ ಪವಿತ್ರ ಕ್ಷೇತ್ರ ಎನ್ನುವ ಭಾವನೆಯಿದೆ.

    ಕರ್ನಾಟಕ ಚುನಾವಣೆ ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿ ತಾವು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಅಂತಾ ಹೇಳಿದ್ದರು. ಅಂದು ಬಿಜೆಪಿ ನಾಯಕ ಚಂದ್ರಶೇಖರ್, ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಗಿಮಿಕ್ ಮಾಡ್ತಿದ್ದಾರೆ ಅಂತಾ ಟೀಕಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    ಚಿಕ್ಕಮಗಳೂರು: ಎಸ್.ಪಿ ಅಣ್ಣಾಮಲೈ ಇನ್ನು 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುವುದಿಲ್ಲ.

    ಎಸ್.ಪಿ ಅಣ್ಣಮಲೈ ಅವರನ್ನು ರಾಜ್ಯ ಸರ್ಕಾರ ಮಾನಸ ಸರೋವರದಲ್ಲಿ ಸ್ಪೆಷಲ್ ಇನ್‍ಚಾರ್ಜ್ ಆಫೀಸರ್ ಆಗಿ ನೇಮಿಸಿದ್ದಾರೆ. ಆದ್ದರಿಂದ 21 ದಿನಗಳ ಕಾಲ ಅವರು ಮಾನಸ ಸರೋವರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಈ 21 ದಿನಗಳ ಕಾಲ ಚಿಕ್ಕಮಗಳೂರು ಎಸ್ಪಿಯಾಗಿ ನಕ್ಸಲ್ ನಿಗ್ರಹ ದಳದ ಎಸ್.ಪಿ ಆಗಿದ್ದ ಲಕ್ಷ್ಮಿ ಪ್ರಸಾದ್ ಚಿಕ್ಕಮಗಳೂರು ಎಸ್‍ಪಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

  • ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಬೆಂಗಳೂರು: ಮಾನಸ ಸರೋವರಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ 26 ಮಂದಿಯನ್ನು ರಕ್ಷಿಸುವಲ್ಲಿ ಕರ್ನಾಟಕ ಭವನ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಮೈಸೂರಿನ ತಂಡದಲ್ಲಿದ್ದ ಶ್ರೀಕಾಂತ್ ಶರ್ಮಾ ಜೊತೆಗೆ ಬೆಂಗಳೂರಿನ ಬಸವನಗುಡಿಯ ನಿವಾಸಿಗಳಾದ ಸರಸ್ವತಿ ರೆಡ್ಡಿ, ಕೃಷ್ಣ ವೇಣಿ, ಪದ್ಮಾ, ಶೋಭಾ ದೇವಿ, ಪ್ರಮೀಳಾ ಸೇರಿದಂತೆ 26 ಮಂದಿಯ ತಂಡ ಮೈಸೂರಿಗೆ ಬಂದು ಸೇರಿದೆ. ಚನ್ನಪಟ್ಟಣದ ಮಲ್ಲೇಶ್ ಅವರು ಕೂಡಾ ಮರಳಿದ್ದು, ಕಾಲು ಮುರಿದಿದ್ದರಿಂದ ಚಿಕಿತ್ಸೆ ಪಡಿಯುತ್ತಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಹಂಚಿಕೊಂಡ ಮಲ್ಲೇಶ್, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಮತ್ತೊಂದು ತಂಡ ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಉಳಿದವರಲ್ಲಿ ಕೆಲವರು ಸಿಮೀಕೋಟ್‍ನಿಂದ ನೇಪಾಳದ ಗಂಜ್‍ಗೆ ಬಂದಿದ್ದು, ಕಠ್ಮಂಡು ಮೂಲಕ ನಾಳೆ ಬೆಂಗಳೂರಿಗೆ ಬರಲಿದ್ದಾರೆ. ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳಾದ ವೆಂಕಟೇಶ್, ಈಶ್ವರ್ ಕಟ್ಟಿಮನಿ ಬಳಿ ಯಾತ್ರಿಗಳು ಕಣ್ಣೀರಿಟ್ಟು, ತಾವು ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡಿದ್ದಾರೆ.

  • ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳ ರಕ್ಷಣೆ – ಮೂರ್ನಾಲ್ಕು ದಿನಗಳಲ್ಲಿ ಸ್ಥಳಾಂತರ

    ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳ ರಕ್ಷಣೆ – ಮೂರ್ನಾಲ್ಕು ದಿನಗಳಲ್ಲಿ ಸ್ಥಳಾಂತರ

    ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಕರ್ನಾಟಕದ 290 ಯಾತ್ರಾರ್ಥಿಗಳೂ ಸೇರಿದಂತೆ, ದೇಶದ 1500 ಯಾತ್ರಾರ್ಥಿಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ವಿಪರೀತ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಕಾರ್ಯಾಚರಣೆ ವಿಳಂಬವಾಗಿದ್ದು, ರಸ್ತೆ ಅಪಘಾತದಲ್ಲಿ 5 ಮಂದಿ ಸೇರಿದಂತೆ, ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ಹವಾಮಾನ ಸುಧಾರಿಸಿದ್ರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲರನ್ನೂ ಸ್ಥಳಾಂತರ ಮಾಡಲಾಗುತ್ತದೆ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

    ಹಿಲ್ಸಾದಲ್ಲಿ 550 ಮಂದಿ, ಸಿಮಿಕೋಟ್‍ನಲ್ಲಿ 525 ಮಂದಿ, ಟಿಬೆಟ್ ಭಾಗದಲ್ಲಿ 500 ಮಂದಿ ಸೇರಿ ಒಟ್ಟು 1,575 ಮಂದಿ ಭಾರತೀಯ ಪ್ರವಾಸಿಗರು ಸಂಕಷ್ಟದಲ್ಲಿದ್ದರು. ಇತ್ತ ನೇಪಾಳ್‍ಗಂಜ್‍ನಿಂದ 104 ಮಂದಿ ಪ್ರವಾಸಿಗರನ್ನು 7 ಕಮರ್ಷಿಯಲ್ ವಿಮಾನಗಳ ಮೂಲಕ ಸಿಮಿಕೋಟ್‍ಗೆ ಸ್ಥಳಾಂತರಿಸಲಾಗಿದೆ.

    ಸಿಮಿಕೋಟ್‍ನಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ರಸ್ತೆ ಮಾರ್ಗ ಮೂಲಕ ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ. ಸಿಲುಕಿರುವ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಗತ್ಯಬಿದ್ರೆ ನೇಪಾಳ ನೌಕಾ ಸೇನೆ ಹೆಲಿಕಾಪ್ಟರ್‍ಗಳ ಬಳಕೆಗೆ ಬಾರತೀಯ ರಾಯಭಾರ ಕಚೇರಿ ನಿರ್ಧರಿಸಿದೆ. ನೇಪಾಳ್‍ಗಂಜ್‍ಗೆ ರಾಯಭಾರ ಕಚೇರಿ ನಾಲ್ವರು ಸದಸ್ಯರ ತಂಡವನ್ನು ಕಳುಹಿಸಿಕೊಟ್ಟಿದ್ದು ಪರಿಹಾರ ಕಾರ್ಯಕ್ಕೆ ನೆರವಾಗಲಿದೆ.

    ಕನ್ನಡಿಗರೆಲ್ಲರೂ ನೇಪಾಳದ ಸಿಮಿಕೋಟ್‍ನಲ್ಲಿದ್ದು, ರಸ್ತೆ ಮಾರ್ಗವಾಗಿ ಕಠ್ಮಂಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ಕರೆ ತರುವ ಯತ್ನ ನಡೆದಿದೆ. ಸಿಮಿಕೋಟ್‍ನಲ್ಲಿ ಆಹಾರ, ನೀರು ಮತ್ತು ಔಷಧದ ವ್ಯವಸ್ಥೆ ಮಾಡಲಾಗಿದೆ. ಇನ್ನು ಎರಡು ದಿನ ಮಳೆ ಬರುವ ಸಾಧ್ಯತೆ ಇದೆ ಅಂತ ನೇಪಾಳದ ಹಂಗಾಮಿ ರಾಯಭಾರಿ ಭರತಕುಮಾರ್ ರಿಗ್ಮಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಯಾತ್ರಾರ್ಥಿಗಳ ಸಂಪರ್ಕ ಸಂಬಂಧ ಫೋನ್ ನಂಬರ್: +977-98236 72371ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ. ಇನ್ನು, ಯಾತ್ರಾರ್ಥಿಗಳ ಕುಟುಂಬಸ್ಥರು ಇನ್ನೂ ಕೂಡ ಆತಂಕದಲ್ಲಿದ್ದು, ಕುಟುಂಬಸ್ಥರನ್ನು ಸಂಪರ್ಕಿಸಲು ಪರದಾಡುತ್ತಿದ್ದಾರೆ.

  • ಮಾನಸ ಸರೋವರ ಯಾತ್ರೆಯಲ್ಲಿದ್ದ ಕನ್ನಡಿಗರು ಸುರಕ್ಷಿತ!

    ಮಾನಸ ಸರೋವರ ಯಾತ್ರೆಯಲ್ಲಿದ್ದ ಕನ್ನಡಿಗರು ಸುರಕ್ಷಿತ!

    ಬೆಂಗಳೂರು: ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕೈಲಾಸ ಮಾನಸ ಸರೋವರ ಯಾತ್ರೆ ವೇಳೆ ಸಿಲುಕಿದ್ದ 299 ಕನ್ನಡಿಗರು ಸುರಕ್ಷಿತವಾಗಿದ್ದಾರೆ.

    ನೇಪಾಳದ ಸಿಮಿಕೋಟ್ ಮತ್ತು ನೇಪಾಳ್ ಗಂಜ್‍ನಲ್ಲಿರುವ ಕರ್ನಾಟಕದ ಪ್ರವಾಸಿಗರ ಜೊತೆಗೆ ಭಾರತೀಯ ರಾಯಭಾರ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಆದರೆ ಸದ್ಯದ ಹವಾಮಾನ ವೈಪರೀತ್ಯದಿಂದಾಗಿ ಅವರನ್ನು ತಕ್ಷಣಕ್ಕೆ ಕರೆದುಕೊಂಡು ಬರುವುದು ಸಾಧ್ಯವಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.

    ಮಾನಸ ಸರೋವರ ಯಾತ್ರೆಯಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರ ನೆರವನ್ನು ಕೋರಿತ್ತು. ಅಲ್ಲದೇ ದೆಹಲಿಯಲ್ಲಿರುವ ಕರ್ನಾಟಕದ ಸ್ಥಾನಿಕ ನಿರ್ದೇಶಕರಿಗೆ ಅಗತ್ಯ ಪರಿಹಾರ ಕ್ರಮಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದರು.

    ಹಾಸನದಿಂದ ಹೊರಟ್ಟಿದ್ದ 43 ಮಂದಿ ಸುರಕ್ಷಿತವಾಗಿದ್ದಾರೆ. ಮಂಡ್ಯ, ಮೈಸೂರು, ರಾಮನಗರದವರು ಕೂಡಾ ಯಾತ್ರೆಗೆ ಹೋಗಿದ್ದರು. ಇವರಲ್ಲಿ ಕುಮಾರಸ್ವಾಮಿಯವರ ಕ್ಷೇತ್ರವಾದ ಚನ್ನಪಟ್ಟಣ ತಾಲೂಕಿನ ನಾಗವಾರದ ರಂಗಸ್ವಾಮಿ, ಬೇವೂರಿನ ರಾಮಕೃಷ್ಣ, ರಾಂಪುರದ ಮಲ್ಲೇಶ್, ಕೋಟೆಯ ಶಿವರಾಮು 15 ದಿನಗಳ ಹಿಂದೆ ಯಾತ್ರೆ ಹೊರಟ್ಟಿದ್ದರು. ಆದರೆ ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ಯಾತ್ರಾರ್ಥಿಗಳ ಸಂಬಂಧಿಕರು ಯಾವುದೇ ಮಾಹಿತಿಗಾಗಿ ರಾಯಭಾರ ಕಚೇರಿಯ ಅಧಿಕಾರಿ ಪ್ರಣವ್ ಮಹೇಶ್‍ರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. ಅವರ ದೂರವಾಣಿ ಸಂಖ್ಯೆ – 977 985-1107006 ಗೆ ಕರೆಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

  • ಕಿರುತೆರೆಗೆ ಬರ್ತಿದೆ ಮಾನಸ ಸರೋವರ – 38 ವರ್ಷದ ಬಳಿಕ ಮತ್ತೆ ಒಂದಾದ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ

    ಕಿರುತೆರೆಗೆ ಬರ್ತಿದೆ ಮಾನಸ ಸರೋವರ – 38 ವರ್ಷದ ಬಳಿಕ ಮತ್ತೆ ಒಂದಾದ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ

    ಬೆಂಗಳೂರು: ಚಂದನವನದ 80ರ ದಶಕದ ಚೆಂದದ, ಮುದ್ದಾದ ಜೋಡಿ ಮತ್ತೆ ಒಂದಾಗಲಿದೆ. ಅಂದು ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಜೋಡಿ ಈಗ ಕಿರುತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ.

    35 ವರ್ಷದ ಹಿಂದೆ ಚಂದನವನದ ಬೆಳ್ಳಿತೆರೆಯ ಭಾವ ಶಿಲ್ಪಿ, ಎಸ್.ಆರ್.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಾನಸ ಸರೋವರ ಮಗದೊಮ್ಮೆ ಬರಲಿದೆ. ಆದ್ರೆ ಸ್ಮಾಲ್ ಚೈಂಜ್ ಏನು ಅಂದ್ರೆ ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್‍ಗೆ ಮಾನಸ ಸರೋವರ ಹರಿಯಲಿದೆ.

    ಸ್ಯಾಂಡಲ್‍ವುಡ್ ಮಾಸ್ ಲೀಡರ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಫಸ್ಟ್ ಟೈಮ್ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮದೆಯಾದ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ಧಾರಾವಾಹಿ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

    ಈ ಧಾರಾವಾಹಿಯ ಹೆಸರು `ಮಾನಸ ಸರೋವರ’. ಇಂದು ಬೆಂಗಳೂರಿನ ಕಂಠಿರವ ಸ್ಟೂಡಿಯೋದಲ್ಲಿ ಈ ಧಾರಾಹಿಯ ಮುಹೂರ್ತ ನೆರವೇರಿತು. ದೊಡ್ಮನೆಯ ಮಕ್ಕಳಾದ ಶಿವರಾಜ್‍ಕಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತಕ್ಕೆ ಸಾಕ್ಷಿಯಾದರು. ಸಿರಿಯಲ್ ಕಥೆ ಮಾನಸ ಸರೋವರದ ಮುಂದುವರೆದ ಭಾಗವಾಗಿದೆ. ಪ್ರಣಯ ರಾಜ ಶ್ರೀನಾಥ್, ಪದ್ಮವಸಂತಿ ಹಾಗೂ ರಾಮಕೃಷ್ಣ ನಟರು ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಜೊತೆಯಾಗಿ ಬಣ್ಣಹಚ್ಚುತ್ತಿದ್ದಾರೆ. ಶಿವಣ್ಣರ ದ್ವಿತಿಯ ಪುತ್ರಿ ನಿವೇದಿತಾ ಮಾನಸ ಸರೋವರಕ್ಕೆ ನಿರ್ಮಾಪಕಿಯಾಗಿದ್ದಾರೆ.

  • ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!

    ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!

    ಬೆಂಗಳೂರು: ಉತ್ತರಾಖಂಡ್‍ನ ಬದ್ರಿನಾಥ್, ಕೇದಾರ್‍ನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ತೀರ್ಥ ಯಾತ್ರೆಗೆ ಹೋಗುವ ಯಾತ್ರಿಗಳಿಗೆ ಕರ್ನಾಟಕ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಯಾತ್ರಿಗಳಿಗೆಂದು ನೀಡಲಾಗುವ 20,000 ರೂ. ಸಹಾಯಧನದ ದುರ್ಬಳಕೆ ಆಗದೇ ಇರಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಆಗಸ್ಟ್ 17 ರಂದು ಚಾರ್ ಧಾಮ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿ ಬಗ್ಗೆ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಮಾರ್ಗಸೂಚಿಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಅಂಶವನ್ನು ಸೇರಿಸಲಾಗಿದೆ.

    ಪ್ರತಿ ವರ್ಷ 1000-1500 ರಾಜ್ಯದ ನಿವಾಸಿಗಳು ಸಬ್ಸಿಡಿ ಪಡೆದುಕೊಳುತ್ತಿದ್ದಾರೆ. ಆದರೆ ಈ ವರ್ಷ ಯಾತ್ರಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಬ್ಸಿಡಿಯ ಹಣವನ್ನು ದುರ್ಬಳಕೆಯನ್ನು ತಡೆಗಟ್ಟಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

    2014ರಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಮಧ್ಯಮ ವರ್ಗ ಮತ್ತು ಬಡವರಿಗೆ ಸಹಾಯವಾಗಲೆಂದು ಈ ಸಬ್ಸಿಡಿಯನ್ನು ತಂದಿತ್ತು. ಈ ಹಿಂದೆ ಬಿಜೆಪಿ ಸರ್ಕಾರ ಮಾನಸ ಸರೋವರ ಯಾತ್ರಿಗಳಿಗೆ 30,000 ಸಬ್ಸಿಡಿಯನ್ನು ಘೋಷಿಸಿತ್ತು.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?