Tag: ಮಾನಸ ಗಂಗೋತ್ರಿ

  • ಗ್ಯಾಂಗ್‍ರೇಪ್ ಕೇಸ್ ಬೆನ್ನಲ್ಲೇ ಮೈಸೂರು ವಿವಿಯಿಂದ ವಿವಾದಾತ್ಮಕ ಆದೇಶ

    ಗ್ಯಾಂಗ್‍ರೇಪ್ ಕೇಸ್ ಬೆನ್ನಲ್ಲೇ ಮೈಸೂರು ವಿವಿಯಿಂದ ವಿವಾದಾತ್ಮಕ ಆದೇಶ

    ಮೈಸೂರು: ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ ಮೈಸೂರು ವಿವಿ ಹೊರಡಿಸಿರುವ ಆದೇಶ ವಿವಾದಕ್ಕೀಡಾಗಿದೆ.

    ಸಂಜೆ 6:30ರ ನಂತರ ಮಾನಸಗಂಗೋತ್ರಿ ಆವರಣ, ಕುಕ್ಕರಹಳ್ಳಿಕೆರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಹೇರಿ ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.

    ಸಂಜೆ 6:30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು, ಕೂರುವುದನ್ನು ನಿಷೇಧಿಸಲಾಗಿದೆ. ಸುರಕ್ಷತೆ, ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್ 

    ಭದ್ರತಾ ಸಿಬ್ಬಂದಿ ಸಂಜೆ 6 ರಿಂದ 9ರವರೆಗೆ ಗಸ್ತು ತಿರುಗಲೂ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಮೌಖಿಕ ನಿರ್ದೇಶನದ ಮೇರೆಗೆ ಆದೇಶ ಹೊರಡಿಸಿದ್ದೇವೆ ಎಂದು ವಿವಿ ಹೇಳಿದೆ.

    ಈ ಬಗ್ಗೆ, ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್, ಒಂಟಿಯಾಗಿ ಹೆಣ್ಣುಮಕ್ಕಳು ತಿರುಗಬಾರದು ಅಂತ ಎಚ್ಚರಿಕೆ ವಹಿಸಿದ್ದೇವೆ. ಜೊತೆಗೆ, ಪೊಲೀಸ್ ಇಲಾಖೆಯಿಂದ ಮೌಖಿಕವಾಗಿ ಆದೇಶ ಬಂದಿದೆ. ಹಾಗಾಗಿ, ಕ್ರಮ ತೆಗೆದುಕೊಂಡಿದ್ದೇವೆ. ಆದೇಶವನ್ನು ಪುನರ್ ವಿಮರ್ಶೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ

  • ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

    ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

    ಮೈಸೂರು: ಮಾನಸ ಗಂಗೋತ್ರಿಯ  ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಅಶ್ಲೀಲ ವೆಬ್‍ಸೈಟ್‍ಗೆ ಹಾಕಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ವಿರುದ್ಧವೇ ವಿದ್ಯಾರ್ಥಿನಿಯರು ಅನುಮಾನ ವ್ಯಕ್ತಪಡಿಸಿ ಕುಲಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

    ವಿವಿಯ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರು ತಮ್ಮದೇ ವಿಭಾಗದ ಪ್ರಾಧ್ಯಾಪಕ ಎ.ಜಿ.ದೇವಿಪ್ರಸಾದ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ವಿಭಾಗದ ಮುಖ್ಯಸ್ಥರಿಗೆ ಮತ್ತು ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.

    ದೂರಿನಲ್ಲಿ ಏನಿದೆ?
    ಪ್ರಾಧ್ಯಾಪಕ ಎ.ಜಿ.ದೇವಿಪ್ರಸಾದ್ ನಮ್ಮ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ನಿಮ್ಮನ್ನು ಚಾರಿತ್ರ್ಯಹೀನರು ಎಂಬುದನ್ನು ನಾನು ಸಾಬೀತು ಮಾಡುವೆ. ಇದಕ್ಕಾಗಿ ನಾನು ಯಾವುದೇ ಮಟ್ಟ ತಲುಪಲು ಸಿದ್ಧ ಎಂದು ತರಗತಿಯಲ್ಲೇ ನಮಗೆ ಬೆದರಿಕೆ ಹಾಕಿದ್ದರು. ತರಗತಿಯಲ್ಲಿ ನಡೆದ ಆಂತರಿಕ ಪರೀಕ್ಷೆಯಲ್ಲಿ ನಮಗೆ ಅತೀ ಕಡಿಮೆ ಅಂಕಗಳನ್ನು ನೀಡಿ ಸೇಡು ತೀರಿಸಿಕೊಂಡಿದ್ದರು. ತರಗತಿಯಲ್ಲಿ ಲೈಂಗಿಕ ಹಾಸ್ಯಗಳನ್ನು ಮಾಡುತ್ತಿದ್ದರು. ಈ ಹಾಸ್ಯಗಳಿಂದ ನಾವು ಮುಜುಗರಕ್ಕೆ ಒಳಗಾಗಿದ್ದೇವು. ಅಷ್ಟೇ ಅಲ್ಲದೇ ಅವರು ತನ್ನ ಜೊತೆ ಪ್ರಾಜೆಕ್ಟ್ ಮಾಡುವಂತೆ ನಮ್ಮನ್ನು ಬಲವಂತ ಮಾಡುತ್ತಿದ್ದರು. ಈ ಪ್ರಾಜೆಕ್ಟ್ ಗೆ ನಾವು ಒಪ್ಪದಿದ್ದಕ್ಕೆ ನಮ್ಮ ಮೇಲೆ ಈ ರೀತಿಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ಸವಿಸ್ತಾರವಾಗಿ ವಿದ್ಯಾರ್ಥಿನಿಯರು ಪತ್ರದಲ್ಲಿ ದೇವಿಪ್ರಸಾದ್ ವರ್ತನೆಯನ್ನು ಉಲ್ಲೇಖಿಸಿದ್ದಾರೆ.

    ಏನಿದು ಪ್ರಕರಣ?
    ಲೋಕ್ಯಾಟೋ ಎಂಬ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಲಾಗಿತ್ತು. ಇದರಿಂದಾಗಿ ಈ ವೆಬ್‍ಸೈಟ್ ನೋಡುವ ಕಾಮುಕರು ಈ ನಂಬರ್ ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದರು. ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು? ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರು ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗಮನಕ್ಕೆ ಬಂದಿತ್ತು. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿತ್ತು. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

    ಈ ಸುದ್ದಿ ಬೆಳಕಿಗೆ ಬಂದಾಗ ವಿವಿಯ ಒಳಗಡೆ ಇರುವ ವಿದ್ಯಾರ್ಥಿನಿಯರಿಗೆ ಪರಿಚಯ ಇರುವ ವ್ಯಕ್ತಿಗಳೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ಮೂಡಿತ್ತು. ಈ ಶಂಕೆಗೆ ಪೂರಕ ಎಂಬಂತೆ ವಿದ್ಯಾರ್ಥಿನಿಯರು ಈಗ ಪ್ರಾಧ್ಯಾಪಕನ ವಿರುದ್ಧ ದೂರು ನೀಡಿದ್ದು ತನಿಖೆಯಿಂದ ನಿಜಾಂಶ ಪ್ರಕಟವಾಗಲಿದೆ.